ವೈಶೇಷಿಕ ದರ್ಶನ-ಒಂದು ವೈಜ್ಞಾನಿಕ ಮುನ್ನೋಟ: ಪ್ರಾಚೀನ ಭಾರತದ ವೈಜ್ಞಾನಿಕ ಮತ್ತು ತಾತ್ವಿಕ ಸಂಪ್ರದಾಯಗಳಲ್ಲಿ ವೈಶೇಷಿಕವೆಂಬುದು ಕೂಡ ಒಂದಾಗಿದೆ.ವೈಶೇಷಿಕ ಸೂತ್ರಗಳನ್ನು ಋಷಿ ಕಾಣಡರವರು ಸೃಷ್ಟಿಸಿದ್ದಾರೆ.ಇದು ಭೌತಿಕ ಶಾಸ್ತ್ರದ ಒಂದು ಗ್ರಂಥವಾಗಿದೆ.ಈ ಸೂತ್ರಗಳು ಪ್ರಕೃತಿಯಲ್ಲಿನ ವಸ್ತುಪ್ರಪಂಚದ ಬಗ್ಗೆ,ಅದರ ಸಂಯೋಜನೆಯ ಬಗ್ಗೆ ವಿವರಿಸಿದವು; ಮತ್ತು ವಸ್ತುಗಳಲ್ಲಿ ಇರುವ ಅಣು ಎಂಬ ಪದಾರ್ಥದ ಬಗ್ಗೆ ಮೊದಲ ಬಾರಿ ಪರಿಕಲ್ಪನೆ ಮಾಡಿದವು, ವಸ್ತುವಿನ ಪ್ರಪಂಚಕ್ಕೆ ಅಣು ಮೂಲಭೂತ ಕಾರಣವೆಂಬುದನ್ನು ತೀರ್ಮಾನಿಸಿದವು.ಮನಸ್ಸು-ಮೆದಳುನಿಂದ ಸಂಭಾವ್ಯವಾಗುವ ವಾಸ್ತವಿಕ ಸತ್ಯಕ್ಕೆ ಒಂದು ಸೈದ್ಧಾಂತಿಕ ಸ್ವರೂಪವನ್ನು ರಚಿಸಿದರು.ಸಮಯವನ್ನು ಮತ್ತು ಅದರ ಚರ್ಯೆಗಳನ್ನು ತಿಳಿದುಕೊಳ್ಳಲು ಬೇಕಾದ ಭೂತ-ಭವಿಷ್ಯ-ವರ್ತಮಾನ ಎಂಬ ಕಾಲ ವಿಂಗಡನೆಯಲ್ಲಿ ವೀಕ್ಷಕರ ಪ್ರಾಧಾನ್ಯತೆಯ ಬಗ್ಗೆ ಈ ಸೂತ್ರಗಳಲ್ಲಿ ಜ್ಞಾನ ಲಭ್ಯವಾಗಿದೆ. ವಿಶ್ವದ ಕೋಣೆ-ಕೋಣೆಯಲ್ಲಿರುವ ಪದಾರ್ಥಗಳ ಬಗ್ಗೆ ಮತ್ತು ಕಾಲಚಕ್ರ-ವಿಶ್ವದ ಮೇಲೆ ಅದರ ಪ್ರಭಾವದ ಕುರಿತು ಮಾಹಿತಿ,ಆ ವಸ್ತುಗಳ ಅವಲೋಕನೆಯ ಮೂಲಕ ಈ ಸೂತ್ರಗಳಲ್ಲಿ ದೊರೆಯುತ್ತದೆ.ಈ ಬ್ರಹ್ಮಾಂಡವು ಅಂತ್ಯ ಸ್ಥಿತಿಯನ್ನು ತಲುಪಿದಾಗ,ಅದರ ಪದಾರ್ಥವೆಲ್ಲವು,ಅಂದರೆ ಅಣುಗಳೆಲ್ಲವೂ, ಸಹ ನಾಶ ಆಗುವುದಿಲ್ಲ,ಅವು ಒಂದು ನಿಶ್ಚಲ ಮತ್ತು ನಿಶ್ಚೀಷ್ಟ ಸ್ಥಾನಕ್ಕೆ ಬರುತ್ತದೆ,ಹೀಗೆ ಅದು ಒಂದು ಅಗೋಚರ ವಸ್ತು ಆಗುತ್ತದೆ, ಎಂಬುದನ್ನು ಈ ಸೂತ್ರಗಳಲ್ಲಿ ವಿಚಾರಿಸಿದರು.ಮಾನವನು, ತಾನು ಈ ವಿಶ್ವದ ಕುರಿತು, ತುಲನೆ ಮತ್ತು ವ್ಯತ್ಯಾಸ ಮಾಡುವುದರಿಂದ ಸಂಗ್ರಹಿಸಬಹುದಾದ ಎಲ್ಲಾ ಸಮಾಚಾರವನ್ನು,ಹೀಗೆ ತಯಾರಾಗಿದ್ದ ಮಾಹಿತಿಯನ್ನು ಪರಿಕಲ್ಪಿಸಬಹುದಾದ ಮತ್ತು ವ್ಯಾಖ್ಯಾನಿಸಬಹುದಾದ ಜ್ಞಾನವನ್ನು ಶೋಧಕ ಮಾಡುವುದರ ಸಾಧಕಗಳನ್ನು ವೈಶೇಷಿಕ ಸೂತ್ರಗಳೆಂದು ಕರೆಯಲಾಗಿದೆ. ಮನಸ್ಸಿನ ಮತ್ತು ಇಂದ್ರಿಯಗಳ ಮೂಲಕ ಪ್ರಕೃತಿಯ ವಿವಿಧ ಘಟಕಗಳ ಬಗ್ಗೆ ತಿಳಿದುಕೊಳ್ಳುವುದಕ್ಕೆ ವೀಕ್ಷಕನು ಈ ವಿಶ್ವದಲ್ಲಿ ಕೇಂದ್ರ ಪಾತ್ರ ವಹಿಸುತ್ತಾನೆ.ನೈಸರ್ಗಿಕ ಚಟುವಟಿಕೆಗಳನ್ನು ಒಂದು ತಾರ್ಕಿಕ,ವೈಜ್ಞಾನಿಕ ಮತ್ತು ತಾತ್ವಿಕ ರೂಪದಲ್ಲಿ, ಮತ್ತು ಅಕಾಶದ ನಿಗೂಢತೆಯನ್ನು ಸಂಕ್ಷಿಪ್ತವಾಗಿ ಒಂದು ಸೈದ್ಧಾಂತಿಕ ನೆಲಮಟ್ಟಿನಲ್ಲಿ ಚರ್ಚಿಸಿದವು,ಇದರಿಂದ ಇದು ಒಂದು ದರ್ಶನವಾಗಿದೆ.ದೃಷ್ಟಿ-ಸೃಷ್ಟಿಯ ನಡುವಿನ ಆಂತರಂಗಿಕ ಸಂಬಂಧವನ್ನು ಈ ಸೂತ್ರಗಳಲ್ಲಿ ಒತ್ತಾಯಿಸಲಾಗಿದೆ.ಏಕಕಾಲದಲ್ಲಿ ಮನಸ್ಸನ್ನು ಮತ್ತು ಬಾಹ್ಯ ಭೌತಿಕ ಪ್ರಪಂಚವನ್ನು ಒಂದು ವೈಜ್ಞಾನಿಕ ದೃಷ್ಟಿಯಿಂದ ವಿವರಿಸುವುದು ಈ ಕೃತಿಯ ಪ್ರತ್ಯೇಕತೆಯಾಗಿದೆ.ಪ್ರಕೃತಿ ಒಳಗೆ ಇರುವ ಪದಾರ್ಥಗಳನ್ನು ಅದರ ಅಸ್ತಿತ್ವದ ಮೂಲಕ, ಅದರ ಚಲನದ ಮೂಲಕ, ಋಷಿ ಕಾನಡರವರು ಆ ವಸ್ತುವಿನ ಲಕ್ಷಣದ ಪ್ರಕಾರ,ಕೆಲವು ಗುಣಗಳನ್ನು,ರೂಪ,ರಸ,ಗಂಧ,ಸ್ಪರ್ಶ ಮುಂತಾದವುಗಳಂತಹ ಆ ಗುಣಗಳು ಪದಾರ್ಥದ ಮೇಲೆ ತೋರಿಸುವ ಪರಿಣಾಮವನ್ನು, ಪಟ್ಟಿ ಮಾಡಿದರು ಮತ್ತು ಆ ವಸ್ತುವಿನ ನಿರ್ದಿಷ್ಟ ವರ್ತನೆಗೆ ಸೂಚಕಗಳನ್ನು ನೀಡಿದರು. ಮತ್ತು ಈ ಗುಣಗಳನ್ನು ಅರ್ಥಮಾಡಿಕೊಳ್ಳಲು ೯ ದ್ರವ್ಯಗಳೆಂಬ ಪದಾರ್ಥಗಳ ಪರಿಕಲ್ಪನೆಯ ಅವಶ್ಯಕತೆ ಇದೆ ಎಂದು ಈ ಸೂತ್ರಗಳು ತಿಳಿಸುತ್ತದೆ.ಈ ೯ ದ್ರವ್ಯಗಳಲ್ಲಿ ಮೂಖ್ಯವಾದ ಆಕಾಶಕ್ಕೆ ಸಹ ಒಂದು ಗುಣ ಮತ್ತು ಅದರ ಚಲನಕ್ಕೆ ಬೇಕಾದ ಉಗಮದ ಬಗೆಗಿನ ವಿಚಾರ, ಮತ್ತು ಈ ಆಕಾಶಕ್ಕೆ ಒಂದು ಖಚಿತವಾದ,ಸ್ವಾತಂತ್ರ್ಯವಾದ ಇರುವಿಕೆ ಇದೆ ಎಂಬ ಸಂಗತಿ ಇಲ್ಲಿ ಪ್ರತಿಬಿಂಬಿಸುತ್ತದೆ.ಪ್ರತಿಯೊಂದು ದ್ರವ್ಯಕ್ಕೂ ಸಹ ಒಂದು ಲಿಂಗ,ಅಂದರೆ ವಿಶ್ವದ ಗುಣಗಳನ್ನು ತಾದಾತ್ಮ್ಯಗೊಳಿಸಲು ಒಂದು ಗುರುತು,ಇದೆ.ಈ ಲಿಂಗಗಳಿಗೆ ಅಥವಾ ಗುರುತುಗಳಿಗೆ, ಕೆಲವು ಅನನ್ಯವಾದ ಗಣಗಳಿರುತ್ತೆ ಎಂದು ಋಷಿ ಕಾನಡರವರು ಹೇಳಿದ್ದಾರೆ.ಈ ೯ ದ್ರವ್ಯಗಳ ವಿವರಣೆ ಹೀಗೆ ಇದೆ, ಅವು ಪೃಥ್ವಿ, ಆಪಸ್ಸ್, ತೇಜಸ್ಸ್, ವಾಯು,ಆಕಾಶ,ಕಾಲ,ದಿಕ್ಕು,ಆತ್ಮ ಮತ್ತು ಮನಸ್ಸು. ಹೀಗೆ ಇಡೀ ಸೃಷ್ಟಿಯ ಗುಣಲಕ್ಷಣಗಳು ಸಂಶೋಧಿಸಲು ಒಂದು ಚೌಕಟ್ಟನ್ನು ಕಾಣಡರವರು ನಿರ್ಮಿಸಿದರು.ಈ ತರಹದ ವಿಂಗಡನೆಯಿಂದ, ಪ್ರಕೃತಿಯನ್ನು ಒಂದು ಪ್ರಾಯೋಗಿಕ ಮತ್ತು ಭೌತವಾದ ದೃಷ್ಟಿಯಿಂದ ಮಾತ್ರ ನೋಡುವುದಲ್ಲದೆ,ಒಂದು ರೂಪಕ,ತಾರ್ಕಿಕ,ಅನುಭವಪೂರ್ವಕ ಮತ್ತು ತುಲನಾತ್ಮಕ ದೃಷ್ಟಿಕೋನದಿಂದ ನೋಡುವುದಕ್ಕೆ ಅವಕಾಶ ನೀಡುತ್ತದೆ.ಈ ದ್ರವ್ಯಗಳಲ್ಲಿ ಮೊದಲ ೪ ದ್ರವ್ಯಗಳು ಅಶಾಶ್ವತವಾಗಿರುತ್ತದೆ, ಮನಸ್ಸು ಶಾಶ್ವತವಾಗಿರುವುದೂ ನಿರಾಕಾರವಾಗಿರುತ್ತದೆ,ಉಳಿದ ೪ ದ್ರವ್ಯಗಳು ಶಾಶ್ವತವಾಗಿರುತ್ತದೆ ಮತ್ತು ಚಲಿಸಲು ಅಸಮರ್ಥವಾಗಿರುತ್ತದೆ. ಮಾನವನ ಮನಸ್ಸು, ಒಂದು ವಸ್ತು ಇನ್ನೊಂದು ವಸ್ತುವಿನ ಸಂಬಂಧಿತವಾಗಿ ಚಲಿಸಿದರೆ ಮಾತ್ರ ಆಕಾಶವನ್ನು ಗುರಿತಿಸುತ್ತದೆ ಎಂಬ ಸತ್ಯವನ್ನು, ಇಂಥಹ ದ್ರವ್ಯಗಳ ಮೂಲಕ ವರ್ಗೀಕರಣ ಮಾಡುವುದರಿಂದ ಋಷಿ ಕಾನಡರವರು ತಿಳಿಸಿದ್ದಾರೆ.ಒಂದು ಅಣು ಇನ್ನೊಂದು ಅಣುವಿನ ಜೊತೆ ಸೇರಿದಾಗ ಉಂಟಾಗುವ ರಾಸಾಯನಿಕ ಚರ್ಯೆಗಳ ಬಗ್ಗೆ, ಮತ್ತು ಹೀಗೆ ಸೇರಿದ ಅಣುಗಳ ರೂಪ,ಭೌತಿಕ ಗುಣಲಕ್ಷಣಗಳು,ವಿವಿಧ ಸಂಯೋಜನೆಯ ಮಾಧರಿಗಳನ್ನು ಸೂಕ್ತಗಳ ಮೂಲಕ ತಿಳಿಸಲಾಗಿದೆ.ಹೀಗೆ,೨ ಅಣುಗಳ ಸಂಯೋಜನೆಯನ್ನು ದ್ವಯಾನುಕ,೩ ಅಣುಗಳ ಸಂಯೋಜನೆಯನ್ನು ತ್ರಯಾನುಕ,ಇತ್ಯಾದಿ ಹೆಸರುಗಳಿಂದ ಕರೆಯಲಾಗಿದೆ.ಈ ಮೂಲಕ ವಿಶ್ವದ ಅಖಂಡವು ಅದರ ಭಾಗಗಳ ಜೊತೆ ಹೇಗೆ ಸಂವಹನ ಮಾಡುವುದೆಂದು ಪರಿಣಾಮಾತ್ಮಕವಾಗಿ ವಿವರಿಸಿದರು.ಒಂದು ಪದಾರ್ಥ ಉಷ್ಣ ಪ್ರಯೋಗ ಮಾಡಿದನಂತರ ಗುಣಾತ್ಮಕವಾಗಿ ಬದಲಾಗುತ್ತದೆ,ಮತ್ತು ಪರಮಾಣುಗಳಾಗಿ ವಿಘತಿಸುವುದಕ್ಕೆ ಸಹ ಅವಕಾಶವಿರುತ್ತದೆ, ಹೀಗೆ ಒಂದು ಪದಾರ್ಥವು ಬೇರೆಯದಾಗಿ ರೂಪಗೊಂಡಿದ್ದನಂತರ ಅದರ ಮೂಲ ಗುಣಗಳು ಸಹ ಬದಲಾಗುತ್ತದೆ ಎಂದು ವೈಶೇಷಿಕ ಸೂತ್ರಗಳು ಪ್ರತಿಪಾದಿಸುತ್ತವೆ. ೧೫ನೇ ಶತಮಾನದ ಶಂಕರ ಮಿಶ್ರ ಎಂಬ ವಿದ್ವಾಂಸರು ಈ ಸೂತ್ರಗಳಿಗೆ ಒಂದು ವ್ಯಾಖ್ಯಾನವನ್ನು ಬರೆದರು.ಮತ್ತು ೪ನೇ ಶತಮಾನದ ಪ್ರಾಶಷ್ತಪಾದ ಎಂಬ ತಾತ್ವಿಕ-ವಿಜ್ಞಾನಿ 'ಪ್ರಾಶಷ್ತಪಾದ ಭಾಷ್ಯ ಎಂಬ ಕ್ರುತಿಯನ್ನು ಋಷಿ ಕಾಣಡರವರ ವೈಶೇಷಿಕ ಸೂತ್ರಗಳಿಗೆ ವ್ಯಾಖ್ಯಾನವಾಗಿ ರಚಿಸಿದರು.

"https://kn.wikipedia.org/w/index.php?title=ವೈಶೇಷಿಕ&oldid=1171087" ಇಂದ ಪಡೆಯಲ್ಪಟ್ಟಿದೆ