ಅಘ ಇಲ್ಲಿ ಪುನರ್ನಿರ್ದೇಶಿಸುತ್ತದೆ. ದುಃಖ ಲೇಖನಕ್ಕಾಗಿ ಇಲ್ಲಿ ನೋಡಿ

ಪ್ರಪಂಚದ ಅನೇಕ ಧರ್ಮಗಳಲ್ಲಿ ನೀತಿಗಳ ಉಲ್ಲಂಘನೆಯೇ ಪಾಪ. ಹಿಂದೂ ಧರ್ಮದಲ್ಲಿ ಈ ಕೆಳಗಿನವನ್ನು ಅರಿಷಡ್ವರ್ಗಗಳೆಂದು ಹೇಳುವರು. ಮನುಷ್ಯ ನಲ್ಲಿರುವ ಪ್ರಕೃತಿ ಸಹಜ ಗುಣಗಳು. ಅವು ಪಾಪ ಕರ್ಮಗಳಿಗೆ ಕಾರಣ ವಾಗುತ್ತವೆ. ಕಾಮ ಎಂದರೆ ಬಯಕೆ; ಇದು ಒಳ್ಳೆಯದಿದ್ದರೆ, ಧರ್ಮಸಮ್ಮತವಾದರೆ ತಪ್ಪಲ್ಲ. ಹಾಗೆಯೇ ಕ್ರೋಧ- ನ್ಯಾಯಕ್ಕಾಗಿ ಕ್ರೋಧ ತಪ್ಪಲ್ಲ. ಲೋಭ -ಜಿಪುಣತನ- ಅನಗತ್ಯ ವೆಚ್ಚ ಮಾಡದಿರುವುದು ತಪ್ಪು ಎನ್ನಲಾಗದು. ಹೀಗೆ ಮೋಹ- ಅತಿ ಪ್ರೇಮ - ಇದು ಪತ್ನ್ನೀಪುತ್ರಮೇಲೆ ಅಥವಾ ಬಂಧುಗಳ ಮೇಲೆ, ಭೂಮಿ-ಕಾಣಿಯ ಮೇಲೆ ಇದ್ದು ಬೇರೆಯವರಿಗೆ ತೊಂದರೆ ಕೊಡದಿದ್ದರೆ ಪಾಪವಿಲ್ಲ. ಇತ್ಯಾದಿ..

  • ಪಾಪ ಮತ್ತು ಪುಣ್ಯಗಳ ವಿವರಣೆ ಬಗ್ಗೆ ಒಂದು ಸುಭಾಷಿತವಿದೆ :

ಶ್ಲೋಕಾರ್ಧೇನ ಪ್ರವಕ್ಷಾಮಿ,
ಯದುಕ್ತಂ ಗ್ರಂಥಕೋಟಿಭಿಃ |
ಪರೋಪಕಾರಃ ಪುಣ್ಯಾಯ,
ಪಾಪಾಯ ಪರಪೀಡನಂ ||

  • ಯಾರೋ ಒಬ್ಬ ಶಿಷ್ಯನು ವ್ಯಾಸರನ್ನು ಕುರಿತು, ೧೮ ಪುರಾಣಗಳನ್ನೂ, ಶ್ರುತಿ ಸ್ಮೃತಿಗಳನ್ನೆಲ್ಲಾ ಓದಿ ಧರ್ಮ ಸೂಕ್ಷ್ಮವನ್ನು ತಿಳಿಯುವುದು ಅಸಾಧ್ಯವೆಂದಾಗ, (ಒಂದೇ) ಅರ್ಧ ಶ್ಲೋಕದಲ್ಲಿ ಅವುಗಳೆಲ್ಲದರ ಸಾರಾಂಶವನ್ನೂ, ಧರ್ಮದ ಸಾರವನ್ನೂ ತಿಳಿಸುತ್ತೇನೆಂದು ಈ ಶ್ಲೋಕವನ್ನು ಹೇಳಿದರೆಂದು ಪ್ರತೀತಿ.

ಅರ್ಧ ಶ್ಲೋಕದಲ್ಲಿ ಕೋಟಿ ಗ್ರಂಥದಲ್ಲಿ ಹೇಳಿದುದನ್ನು ಹೇಳುತ್ತೇನೆ;

  • 'ಪರೋಪಕಾರವೇ ಪುಣ್ಯ,, ಪರ ಪೀಡನೆಯೇ ಪಾಪ.
  • ಪಂಚ ಮಹಾ ಪಾತಕಗಳ (ಪಾಪಗಳ) ವಿವರ ಈ ರೀತಿ ಇದೆ ( ಪ್ರಮುಖ ಪಾಪಗಳೆಂದು ಭಾವಿಸಲಾಗುತ್ತದೆ:)
  • ೧. ಬ್ರಹ್ಮ ಹತ್ಯ, ೨. ಸುರಾಪಾನ, ೩. ಸ್ವರ್ಣಸ್ತೇಯ, ೪.ಗುರುತಲ್ಪ ಗಮನ, ೫. ತತಸಂಯೋಗಿ (೫ ಅವರ ಸಹವಾಸ ಮಾಡುವವನು, ಈ ನಾಲ್ಕು ಪಾಪಿಗಳ ಸಹವಾಸ ಮಾಡುವವನು)
  • ಬಸವಣ್ಣನವರ ವಚನ  : ಅಯ್ಯಾ ಎಂದರೆ ಸ್ವರ್ಗ ; ಎಲಓ (ಎಲವೋ) ಎಂದರೆ ನರಕ. ಬೇರೆಯವರ ಮನ ನೋಯಿಸಿದರೆ ಪಾಪ.

ಭಗವದ್ಗೀತೆ

ಬದಲಾಯಿಸಿ

ಅರ್ಜುನ:
ಅಥಕೇನ ಪ್ರಯುಕ್ತೊಯಂ ಪಾಪಮಚರತಿ ಪೂರುಷಃ
ಅನಿಶ್ಚನ್ನಪಿ ವಾರ್ಷ್ಣೇಯ ಬಲಾದಿವ ನಿಯೋಜಿತಃ||
ಭಗವಾನುವಾಚ:
ಕಾಮ ಏಷ ಕ್ರೋಧ ಏಷ ರಜೋಗುಣ ಸಮುಧ್ಬವಃ|
ಮಹಾಸನೋ ಮಹಾ ಪಾಪ್ಮಾ ವಿದ್ತೇನಮಿಹ ವೈರಿಣಂ||೩\೨೩||

[] []


ಉಲ್ಲೇಖ

ಬದಲಾಯಿಸಿ
  1. ಶಂಕರರ ಗೀತಾ ಭಾಷ್ಯ - ಕರ್ಮಯೋಗ
  2. ಬಸವಣ್ನನವರ ವಚನಗಳು
"https://kn.wikipedia.org/w/index.php?title=ಪಾಪ&oldid=1251270" ಇಂದ ಪಡೆಯಲ್ಪಟ್ಟಿದೆ