ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ

ಪೀಠಿಕೆ

ಬದಲಾಯಿಸಿ

ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ

 • ಶ್ರೀ ಮಧ್ವಾಚಾರ್ಯರು ಬರೆದ ಮಹಾಭಾರತ ತಾತ್ಪರ್ಯ ನಿರ್ಣಯ ಅಥವಾ ಶ್ರೀಮನ್ಮಹಾಭಾರತಮ್ ಗ್ರಂಥದಲ್ಲಿ ಬರುವ ದ್ವೈತ ಸಿದ್ಧಾಂತ

ಮಧ್ವರ ಶ್ರೀಮನ್ಮಹಾಭಾರತಮ್ ಭಗವದ್ಗೀತೆಯ ತಾತ್ಪರ್ಯದಲ್ಲಿ ಕೆಲವನ್ನು ಮಾತ್ರಾ ಆರಿಸಿಕೊಂಡಿದೆ] ಮಹಾಭಾರತದಲ್ಲಿ ವ್ಯಾಸ ಶುಕ ಸಂವಾದ

 • ಶ್ರೀ ಮಧ್ವಾಚಾರ್ಯರು ತಮ್ಮ ದ್ವೈತ ದರ್ಶನ ದಲ್ಲಿ ಯಾವುದೇ ಅನುಮಾನ ಬಂದಲ್ಲಿ , ಅದರ ಪರಿಹಾರಕ್ಕೆ, ಶ್ರೀಮನ್ಮಹಾಭಾರತಮ್ ಅಥವಾ ಮಹಾಭಾರತ ತಾತ್ಪರ್ಯ ನಿರ್ಣಯವನ್ನು ನೋಡಬೇಕೆಂದು ತಿಳಿಸಿದ್ದಾರೆ. ಅದರಲ್ಲಿ ತಮ್ಮ ದರ್ಶನವನ್ನು ಸ್ಪಷ್ಟ ವಾಗಿ ತಿಳಿಸಿರುವುದಾಗಿ ಹೇಳಿದ್ದಾರೆ.

ಸಾಂಖ್ಯವಾದ

ಬದಲಾಯಿಸಿ

ಸಾಂಖ್ಯವಾದ ಮಾಧ್ವಮತನುಸಾರ↓

 • [ಮಹಾಭಾರತದಲ್ಲಿ ವ್ಯಾಸ ಶುಕ ಸಂವಾದ - ಸಾಂಖ್ಯವಾದ ಮಾಧ್ವಮತನುಸಾರ]
 • ಶ್ರೀಹರಿ

---↓---

 • ಮಹತ್ ತತ್ವ [ಬ್ರಹ್ಮ]

---↓---

 • ಅಹಂಕಾರ ತತ್ವ ಕ್ಕೆ

ಮೂರು ವಿಧ : ನಿಯಾಮಕರು -> →→→→ಶೇಷ -ರುದ್ರರು ---↓---

 1. ಸಾತ್ವಿಕ ಅಹಂಕಾರ - ದೇವ ದೇಹಗಳು - ಮನಸ್ತತ್ವ
 2. ರಾಜಸ ಅಹಂಕಾರ - ಹತ್ತು ಇಂದ್ರಿಯಗಳು
 3. ತಾಮಸ ಅಹಂಕಾರ - [ಗಣಪತಿ] ಆಕಾಶ

ತತ್ವ ಮತ್ತು ದೇವತೆಗಳು

ಬದಲಾಯಿಸಿ

 • (ಹತ್ತು ಇಂದ್ರಿಯಗಳು-೫ ಜ್ಞಾನೇಂದ್ರಿಯಗಳು- ೫ ಪಂಚಪ್ರಾಣಗಳು = ೧೦+ ಕೆಳಗಿನ ೧೫ ತತ್ವಗಳು ? ವಿವರಕ್ಕೆ ಸಮುಚ್ಚಯ ಪದಗಳು -ಪಂಚ ನೋಡಿ -ಮೇಲೆ- ೫ ಪಂಚಪ್ರಾಣಗಳನ್ನು ಇಂದ್ರಿಯಗಳ ಜೊತೆ ಸೇರಿಸಿದೆಯೇ?)
 • ತನ್ಮಾತ್ರೆಗಳು ಮತ್ತು ದೇವತೆಗಳು
 1. ಬುದ್ಧಿ ತತ್ವ-ಭಾರತಿ, ಸರಸ್ವತಿಯ ಪುತ್ರರು [ಅಮರರು]
 2. ಶಬ್ದ ಸ್ಪರ್ಶಕ್ಕೆ -ಸೌಪರ್ಣಿ
 3. ರೂಪ ರಸಕ್ಕೆ - ವಾರುಣಿ.
 4. ಗಂಧಕ್ಕೆ - ಪಾರ್ವತಿ
 • ಇಂದ್ರಿಯ ದೇವತೆಗಳು :
 1. ಕಣ್ಣು - ಸೂರ್ಯ. ೨.ಕಿವಿ - ದಿಗ್ದೇವತೆಗಳು
 2. ಮೂಗು -ಅಶ್ವಿನೀದ್ವಯರು
 3. ನಾಲಿಗೆ - ವರುಣ.
 4. ಚರ್ಮ-ಅಹಂಕಾರಿಕ ಪ್ರಾಣ. ೬.ವಾಕ್ - ವಹ್ನಿ. ೭.ಪಾಣಿ-ದಕ್ಷ. ೮. ಪಾದ - ಜಯಂತ. ೯. ಪಾಯು -ಮಿತ್ರ.
 5. ಉಪಸ್ಥೇ - ಮನು.
 • ಪಂಚ ಭೂತಗಳು-ದೇವತೆಗಳು
 1. ಆಕಾಶ - ಗಣಪತಿ.
 2. ೨.ವಾಯು - ಮರುತ್ತು.
 3. ತೇಜ - ಅಗ್ನಿ
 4. ಅಪ್ - ವರುಣ,
 5. ಪೃಥ್ವಿ - ಶನೈಶ್ವರ-ಧರೆ

ಇಪ್ಪತ್ತೈದು ಮುಖ್ಯ ತತ್ವಗಳು

ಬದಲಾಯಿಸಿ

ಗುಣ ಮತ್ತು ದೇವತೆಗಳು

 1. ಇಚ್ಛಾ - ಶ್ರೀದೇವಿ , ಭಾರತಿ.:
 2. ದ್ವೇಷ - ಕಲಿ ;
 3. ದುಃಖ -ದ್ವಾಪರ ;
 4. ಸುಖ - ಮುಖ್ಯ ಪ್ರಾಣ ;
 5. ಧೈರ್ಯ -ಸರಸ್ವತಿ ಭಾರತಿಯರು ;
 6. ಚೇತನೆ - ಶ್ರೀದೇವಿ ;
 7. ದೇಹ - ತತ್ತಜ್ಜೀವರು [ಇವು ಏಳು ವಿಕಾರಗಳು] [ಭಾರತಿ ಮುಖ್ಯ ಪ್ರಾಣನ ಪತ್ನಿ]
 • ಒಟ್ಟು ೩೨ ತತ್ವಗಳು ; ಇವು ಕ್ಷೇತ್ರ: -ಶ್ರೀಹರಿ - ಕ್ಷೇತ್ರಜ್ಞ .

+. ಭಾರತಿ : ಮುಖ್ಯ ಪ್ರಾಣನ ಪತ್ನಿ

 • ಬುದ್ಧಿ : ಸರಸ್ವತಿ, ಮಹತ್ : ಬ್ರಹ್ಮ ದೇವ, ಅವ್ಯಕ್ತ : ಮಹಾಲಕ್ಷ್ಮಿ;
 • ಶ್ರೀಹರಿಯು ಸರ್ವೋತ್ತಮನೆಂದು ಅರಿಯದವರಿಗೆ ಮೋಕ್ಷವಿಲ್ಲ.
 • ವಿಷ್ಣು -ಮಾಯೆ; ಸೃಷ್ಟಿ ವಿಚಾರ.; ಆಂಗಿರಸರು, ಆದಿತ್ಯರು, ವಿಶ್ವೇ ದೇವತೆಗಳು, ಪಿತೃಗಳು. ಮರುತ್ತುಗಳು , ಸಾರಸ್ವತರು. -ಇವುಗಳ ವಿವರಣೆ ಇದೆ.
 • ಚರ್ವಾಕ, ಬೌದ್ಧ , ಸಾಂಖ್ಯ, ವೈಶೇಶಿಕ, ಮಾಧ್ಯಮಿಕ, ಪಾಶುಪತ, ಮತ ಖಂಡನೆ, ಮತ್ತು ತತ್ವ ವಿಚಾರ; ಇತರೆಲ್ಲ ಪಂಥದವರನ್ನು ಪಾಷಂಡಿಗಳೆಂದು ಖಂಡನೆ ಮಾಡಿದ್ದಾರೆ.

ಶ್ರೀಮನ್ಮಹಾಭಾರತಮ್ ನಲ್ಲಿ ಇತರ ವಿಚಾರಗಳು

ಬದಲಾಯಿಸಿ

 • ಮಹಾಭಾರತದ ಶಾಂತಿಪರ್ವ ದಲ್ಲಿ ಬರುವ ಮಧ್ವ ಮತ :

ಸೃಷ್ಟಿ ವಿಚಾರ

ಬದಲಾಯಿಸಿ

 • ಶ್ರೀಶನು ಪದ್ಮದಲ್ಲಿ ಬ್ರಹ್ಮನನ್ನು ಸೃಜಿಸಿದನು. ಅವನು ಮಹತತ್ವಕ್ಕೆ ಅಭಿಮಾನಿ ಎನಿಸಿದನು. ಅದರಿಂದ ಅಹಂಕಾರ ತತ್ವ ; ಅದರಲ್ಲಿ ಮೂರು ವಿಧ.
 1. ವೈಕೃತಾಹಂಕಾರ ದಿಂದ ದೇವತಾ ದೇಹಗಳು, ಮನಸ್ತತ್ವಗಳು ;
 2. ರಾಜಸಾಹಂಕಾರದಿಂದ ಇಂದ್ರಿಯಗಳು ;
 3. ತಾಮಸಾಹಂಕಾರದಿಂದ ಶಬ್ದ ಗುಣವಾದ ಆಕಾಶ ಬಂದವು;
 • ಅದರಿಂದ ಶಬ್ದ ಸ್ಪರ್ಶ ಯುತ ವಾಯು ತತ್ವ, -
 • ಅದರಿಂದ ರೂಪ ಸ್ಪರ್ಶಯುತ ಅಗ್ನಿ ತತ್ವ, -
 • ಅದರಿಂದ ಶಬ್ದ ಸ್ಪರ್ಶರೂಪ ರಸ ಯುತ ಜಲ ತತ್ವ ; -
 • ಅದರಿಂದ ಶಬ್ದ ಸ್ಪರ್ಶ ರೂಪ ರಸ ಗಂಧಯುತ ಭೂ ತತ್ವ ಬಂದಿತು.
 • ಶ್ರೀ ಲಕ್ಷ್ಮೀಶನ ದೆಸೆಯಿಂದ ಸೃಷ್ಟನಾದ ಮುಖ್ಯಪ್ರಾಣನು ಸರ್ವಪ್ರಾಣಿ ಚೇಷ್ಟಕನಾಗಿರುವನು. ಅವನೇ ಸೂತ್ರ - ಭಾರತೀ ದೇವಿಯ ಪತಿ; ಶ್ರೀ ಹರಿಯ ಅಧೀನ ; ಮುಖ್ಯ ಪ್ರಾಣನು ವಿಜ್ಞಾನಾತ್ಮಕನಾಗಿ ಸಹಸ್ರಾರದಲ್ಲಿ ಬೆಳಗುತ್ತಿರುವನು.

ಜೀವ-ನ ವಿಚಾರ

ಬದಲಾಯಿಸಿ

 • ಜೀವನು ನಿತ್ಯನು. ಆದರೂ ದೇಹ ನಾಶ, ದುಃಖ ಪ್ರಾಪ್ತಿ, ಅಪೂರ್ಣತೆಗಳೆಂಬ ತ್ರಿವಿಧ ನಾಶಗಳಿವೆ. ಮುಖ್ಯ ಪ್ರಾಣನು ಅಸ್ವತಂತ್ರ; ಜೀವನನ್ನು ಅವನ ಕರ್ಮಲಬ್ಧವಾದ ಶರೀರದಲ್ಲಿ ನೇಮಿಸುವನು. ಮತ್ತು ಶರೀರದಿಂದ ಬಿಡಿಸುವನು. ಮುಖ್ಯ ಪ್ರಾಣನಿಗೂ ಪ್ರೇರಕನಾದ ಶ್ರೀಹರಿಯು ಆತ್ಮಾ - ಅಂತರಾತ್ಮಾ ಎಂಬ ರೂಪಗಳಿಂದ ಶರೀರ ವ್ಯಾಪಾರವನ್ನು ನಡೆಸುತ್ತಿರುವನು. ಜೀವನಿಂದ ಕೂಡಿ ದೇಹದಲ್ಲಿದ್ದರೂ ಯಾವ ಲೇಪವೂ ಇಲ್ಲ.

ಜೀವರು ಸ್ವಭಾವದಿಂದಲೇ ತ್ರಿವಿಧರಾಗಿರುವರು.

 • ತಾಮಸರು ಶ್ರೀಹರಿ ತದ್ ಭಕ್ತರನ್ನು ದ್ವೇಷಿಸಿ ತತ್ಫಲವಾದ ಅಂಧಃತಮಸ್ಸನ್ನು ಹೊಂದಿ, ನಿತ್ಯ ದುಃಖಿಗಳಾ ಗುವರು.
 • ರಾಜಸರು ಮಿಶ್ರಜ್ಞಾನದಿಂದ ನಿರಯ ಭೂ ಸ್ವರ್ಗ ಗಳಲ್ಲಿ ತಿರುಗುತ್ತಿರುವರು.
 • ಸಾತ್ವಿಕರು ಶ್ರೀಹರಿ ತದ್ಭಕ್ತರಲ್ಲಿ ತತ್ತದ್ಯೋಗ್ಯ ಭಕ್ತಿಯನ್ನುಮಾಡಿ , ಶ್ರವಣ ಮನನ, ಧ್ಯಾನಗಳಿಂದ ಅಪರೋಕ್ಷ ಜ್ಞಾನವನ್ನು ಪಡೆದು ನಿತ್ಯ ಸುಖಿಗಳಾಗಿರುವರು.
 • || ಸಾತ್ವಿಕರು ತಾಮಸರಾಗುವುದಿಲ್ಲ; ತಾಮಸರು ಸಾತ್ವಿಕರಾಗುವುದಿಲ್ಲ. ಸ್ವಭಾವವು ಅನಿವಾರ್ಯವೂ ಅಪ್ರತಿಹತವೂ ಆಗಿದೆ. ||
 • ಶ್ರೀಹರಿ ನಾಮ ಜಪದಿಂದ ಸರ್ವ ಪಾಪಗಳೂ ನಾಶವಾಗಿ ---ಮೋಕ್ಷ ಸಾಧನ ವಾಗುವುದು.
 • ಶ್ರೀಹರಿಯ ವೈಕುಂಠ, ಅನಂತಾಸನ, ಶ್ವೇತದ್ವೀಪಗಳೆಂಬ ಮುಕ್ತ ಸ್ಥಾನಗಳು ಅತ್ಯಂತೋಪಾದೇಯಗಳಾಗಿವೆ.
 • ಆ ಲಕ್ಷ್ಮೀರಮಣನನ್ನ ತಿಳಿ. ಆ ಪರಬ್ರಹ್ಮನನ್ನು ಚಕ್ಷುರಾದೀಂದ್ರಿಯಗಳಿಂದ ತಿಳಿಯಲಾಗದು. ಅವನನ್ನು ಪರಮಾಕ್ಷರನೆಂಬರು. ಕಾಷ್ಠಗಳನ್ನು ಮಥಿಸಿ ಅಗ್ನಿಯನ್ನು ಕಾಣುವಂತೆ ಶಾಸ್ತ್ರ ವಿಚಾರದಿಂದ ಮಾತ್ರಾ ಶ್ರೀ ಹರಿಯನ್ನು ತಿಳಿಯಲು ಬರುವುದು.
 • ಶ್ರೀ ಸಮೀರಾನುಗ್ರಹೀತ ಜೀವನು ಜ್ಞಾನ ಭಕ್ತಿ ವೈರಾಗ್ಯ ಭರಿತನಾಗಿ, ತನ್ನ ಅಂತರ್ಯಾಮಿಯನ್ನು ಕಂಡಾಗ ಅವನ ಲಿಂಗ ಶರೀರವು ಪತಿತವಾಗುವುದು[?](ಪತನವಾಗುವುದು.?). ಅವನ ಭೌತಿಕೇಂದ್ರಿಯಗಳು ಭೂತಗಳಲ್ಲಿ ಸೇರಿ ಹೋಗುವುವು. ಆಗ ಅವನ

ಸ್ವರೂಪಾನಂದವಾಗುವುದು.

ಇತರ ಮತ ಖಂಡನೆ

ಬದಲಾಯಿಸಿ

ಶಾಂತಿ ಪರ್ವ

 • ಪಂಚ ಶಿಖನು ಜಯದೇವನಿಗೆ ನಿರೂಪಿಸಿದ್ದು : ಜಗತ್ತು ಮಿಥ್ಯೆ -ದೇವರೇ ನಾನು ಎಂಬುವ ಮಾಯಾವಾದಿಗಳೂ ಬೌದ್ಧರಂತೆಯೇ ಎಂದು ತಿಳಿ. ಅಸತ್ತೆಂದು ಅವರೆಂದರೆ ಸದಸದ್ವಿಲಕ್ಷಣ ಎಂದು ಇವರೆಂಬರು. ಸಂವೃತ್ತಿ ಎಂದು ಅವರೆಂದುದನ್ನು ಮಾಯೆ ಎಂದು ಇವರೆಂಬರು. ಶೂನ್ಯ ಎಂದು ಅವರೆಂದುದನ್ನು ಅಖಂಡ ಬ್ರಹ್ಮ ನೆಂದು ಇವರೆಂಬರು. ಅಂದ ಮೇಲೆ ಮಾಯಾವಾದಿಗಳು ಪ್ರಚ್ಛನ್ನ ಬೌದ್ಧರೇ ಸರಿ. ಜಗತ್ತು ಪ್ರತ್ಯಕ್ಷ ಸಿದ್ಧವೆಂಬ ಚರ್ವಾಕರಿಗೂ ಹೇಯರಾಗಿರುವರು.
 • ಪರಬ್ರಹ್ಮನಿಗೇ ಅಜ್ಞಾನವನ್ನು ಹೊರಿಸುವ ಮಾಯಾವಾದಿಗಳು ಬೌದ್ಧರಿಗೂ ಹೇಯರು . ಆದುದರಿಂದ ಮಾಯಾವಾದಿ ಮತವು ಬಲು ದೋಷ ದುಷ್ಟವಾಗಿ ಪರಿವರ್ಜನೀಯವಾಗಿದೆ.
 • ಶ್ರೀಹರಿಯು ಸರ್ವೋತ್ತಮನೆಂದು ಅರಿಯದವರಿಗೆ ಮೋಕ್ಷವಿಲ್ಲ. ;

ತತ್ವ ಮತ್ತು ಅಧಿದೇವತೆ

 • ಬುದ್ಧಿ -ಸರಸ್ವತಿ ; ಮಹತ್ - ಬ್ರಹ್ಮ ದೇವ ; ಅವ್ಯಕ್ತ - ಮಹಾಲಕ್ಷ್ಮಿ ;

ಇತರ ಮತ ಖಂಡನೆ

 • ಚರ್ವಾಕ, ಬೌದ್ಧ, ಸಾಂಖ್ಯ, ವೈಶೇಷಿಕ , ಮಾಧ್ಯಮಿಕ, ಪಾಶುಪತ, ಮತ ಖಂಡನೆ [ತತ್ವ ವಿಚಾರ] ;
 • ಇತರ ಎಲ್ಲಾ ಪಾಷಂಡಿಗಳ ಖಂಡನೆ.
 • ಎಲ್ಲಾ ಶಾಸ್ತ್ರಗಳಿಗೂ ಶ್ರೀನಾರಾಯಣನೇ ಮೊದಲ ಉಪದೇಶಕನು. ಅವನು ಬ್ರಹ್ಮಾದಿ ಲೋಕ ಗುರುಗಳಿಗೂ ಗುರುವಾಗಿರುವನು.

ಮನುಜ ಬುದ್ಧಿಗತ ದೋಷದಿಂದ ತತ್ತದ್ದೇವಾರಾಧಕರು ತಂತಮ್ಮ ಆರಾಧಿತ ದೇವತೆಗಳೇ ಸರ್ವೋತ್ತಮರೆಂದು ದುಷ್ಟ ಹಟದಿಂದ ಪಾಶುಪತ, ಗಾಣಪತ್ಯ, ಶೈವ ಸೌರ ಶಾಕ್ತಾದಿ ಆಗಮಗಳನ್ನು ಕಲ್ಪಿಸಿರುವರು. ಅವು ಅಸಚ್ಛಾತ್ರವಾದುದರಿಂದ ಪ್ರಮಾಣವಲ್ಲ. ಪಂಚರಾತ್ರಾಗಮವು ಮಾತ್ರಾ ವೇದಾರಣ್ಯಕವೆನಿಸಿ ಪರಮ ಪ್ರಮಾಣವೆನಿಸಿದೆ. ವೇದಾಂತ ಸೂತ್ರಗಳನ್ನು ವೇದವ್ಯಾಸ ರೂಪದಿಂದಲೂ, ಸಾಂಖ್ಯಶಾಸ್ತ್ರವನ್ನು ಕಪಿಲ ರೂಪದಿಂದಲೂ, ಪಂಚರಾತ್ರಾಗಮವನ್ನು ಮಹಿದಾಸ ರೂಪದಿಂದಲೂ ಶ್ರೀಶನೇ (ಶ್ರೀಹರಿ) ರಚಿಸಿರುವನು.


 • ಮೋಕ್ಷವೆಂದರೆ ಜೀವರು ಸಂಸಾರ ಬಂಧನದಿಂದ ಬಿಡಿಸಲ್ಪಟ್ಟು ತಂತಮ್ಮ ಯೋಗ್ಯತೆಗೆ ತಕ್ಕ ಸ್ವರೂಪವನ್ನು ಹೊಂದಿ, ವೈಕುಂಠಾದಿ ಲೋಕಗಳಲ್ಲಿ ಶ್ರೀಹರಿಗುರುಭಕ್ತರಾಗಿ ಇರುವುದು. ಇಂತು ಮುಕ್ತರಾದವರಿಗೆ ಮತ್ತೆ ಜನನ ಮರಣಗಳಿಲ್ಲ.
 • ವಿದ್ಯೆ ಎಂದರೆ :- ಶ್ರೀ ಹರಿಯು ಸರ್ವೋತ್ತಮನು; ಶ್ರೀ ವಾಯು ಜೀವೋತ್ತಮನು; ಜಗತ್ತು ನಿತ್ಯವಾಗಿದೆ; ಜೀವ ಜಡ ಬೇಧ, ಜೀವೇಶ ಬೇಧ, ಜೀವ ಜೀವ ಬೇಧ, ಜಡೇಶ ಬೇಧ, ಜಡ ಜಡ ಬೇಧವೆಂಬ ಪಂಚ ಬೇಧಗಳು ಪರಮಾರ್ಥಿಕವಾಗಿದೆ. ಜೀವರಲ್ಲಿ ತಾರತಮ್ಯವಿದೆ. ಅದು ಮುಕ್ತಿಯಲ್ಲೂ ಇರುವುದು. ಜೀವರು ಸದಾ ಅಸ್ವತಂತ್ರರು. ಸಕಲವೂ ಸದಾ ಶ್ರೀಹರಿಯ ಅಧೀನದಲ್ಲಿರುವುದು. ಶ್ರೀಹರಿ ಪ್ರಸಾದದಿಂದ ಮೋಕ್ಷವು. ಮೋಕ್ಷಕ್ಕೆ ಮುಖ್ಯಕಾರಣವು ಜ್ಞಾನ ಪೂರ್ವಕ ಭಕ್ತಿ.
 • ಇಷ್ಟು ತತ್ವಗಳನ್ನು ತಿಳಸುವ ಗುರುವೇ ನಿಜವಾದ ಗುರುವು. ಇದಕ್ಕೆ ಅನ್ಯಥಾ ಆಗಿರುವುದೆಲ್ಲವೂ ತಮೋ ದ್ವಾರ ಪ್ರವೇಶ ಸೋಪಾನವಾಗಿದೆ.

ಪಾರ್ವತಿ ಶಿವ ಸಂವಾದ ;

ಬದಲಾಯಿಸಿ

 • ಶಿವನು ಹೇಳಿದ್ದು :- ೨೪ ತತ್ವಗಳಿಗೆ ನಿಯಾಮಕರಾಗಿರುವ ವಿರಂಚಿ, ಸರಸ್ವತಿ, ರುದ್ರ [ನಾನು /ಶಿವ] ಮುಂತಾದ ಎಲ್ಲಾ ದೇವತೆಗಳೂ, ಸದಾ ಸಂಸಾರಾವಸ್ಥೆ ಮತ್ತು ಮುಕ್ತಾವಸ್ಥೆಯಲ್ಲಿಯೂ, ಶ್ರೀ ರಮಣನ ಅಧೀನರಾಗಿರುವೆವು. ಇಂತು ತಿಳಿದು ನನ್ನನ್ನು ಶ್ರೀಹರಿ ಭಕ್ತನೆಂದು ತಿಳಿದು ಕೆಲವರು ಯಥಾರ್ಥ ಜ್ಞಾನಿಗಳು ಸೇವಿಸುವರು . ಶ್ರೀವಿಷ್ಣು ಮಾಯಾ ವಶರಾಗಿ ಕೆಲವರು [ದಾನವರು] ನನ್ನನ್ನೇ [ರುದ್ರ ನನ್ನು ] ಸರ್ವೋತ್ತಮನೆಂದು ತಿಳಿದು ಅಂತೆಯೇ ಉಪಾಸಿಸಿ, ಅನ್ಯಥಾ ಜ್ಞಾನದಿಂದ ಅಂಧಂತಮವನ್ನು ಹೊಂದುವರು. ಅದು ಅವರಿಗೆ ಸ್ವರೂಪ ಯೋಗ್ಯತಾ ಸಮವೆಂದು ತಿಳಿದು, ಶ್ರೀಹರಿ ಸಂಕಲ್ಪಾನುಸಾರವಾಗಿ, ನಾನೂ (ಶಿವ /ಮಧ್ವ ರು ?) ಕೂಡಾ ಅವರಿಗೆ ಅಂತಹ ಅನ್ಯಥಾ ಜ್ಞಾನವನ್ನೇ ಉಪದೇಶಿಸುವೆನು, (ಶಿವನು ಪಾರ್ವತಿಗೇ ಹೇಳಿದ್ದು.)

ಅದ್ವೈತ ವಾದಿಗಳ ಖಂಡನೆ

ಬದಲಾಯಿಸಿ

 • ಸ್ವರ್ಗಆರೋಹಣ ಪರ್ವ :ಅದ್ವೈತ ಪ್ರವರ್ತಕರ ಜನ್ಮ ವಿಚಾರ
 • ದುರ್ಯೋಧನಾದಿಗಳು,ರಾಕ್ಷಸರಾದವರು. [ವಧೆಯಾದನಂತರ], ವೀರಸ್ವರ್ಗದ ದಿವ್ಯ ಭೋಗಗಳನ್ನು ನಾಲ್ಕು ಸಾವಿರದ ಮೂರನೂರುವರುಷಗಳವರೆಗೂ ಅನುಭವಿಸಿ, ಪುಣ್ಯ ಕ್ಷಯವಾಗಲು, ಭೂಮಿಯಲ್ಲಿ ವಿಪ್ರಾದಿ ಯೋನಿಗಳಲ್ಲಿ ಹುಟ್ಟಿ, ಜೀವನೇ ಬ್ರಹ್ಮನು, ; ಜಗತ್ತು ಮಿಥ್ಯೆ; ಇತ್ಯಾದಿ ದುಷ್ಟಮತವನ್ನು ಹಬ್ಬಿಸಿ ತತ್ಪಲವಾಗಿ ಪ್ರಳಯವಾದಾಗ ಅಂಧಂತಮಸ್ಸನ್ನು ಹೊಂದುವರು. [ ಮಧ್ವರ ಕಾಲ; ಜನನ ಕ್ರಿ.ಶ. ೧೧೯೭ ಆಯು ೮೦ ವರ್ಷ = ಮರಣ ೧೨೭೭; ಕಲಿ ಗತ ಕ್ರಿ.ಶ.೧೧೯೯ ಕ್ಕೆ ವರ್ಷ, ಮಧ್ವರ ಪ್ರಕಾರ ಕಲಿ ಗತ ೪೩೦೦ ವರ್ಷ. ಈ ವರ್ಷದ ನಂತರ ಅದ್ವೈತ ಪ್ರಚಾರ; ಕಲಿಯುಗ ಆರಂಭ, ೨೦೧೦ ಮಾರ್ಚಿ ೧೬ಕ್ಕೆ; ೫೧೧೧ ವರ್ಷ; ಕಲಿ ಆದಿ ಕ್ರಿಪೂ. ೩೧೦೧; ಶಂಕರರ ಕಾಲ ಕ್ರಿಶ. ೭೮೮ [ಕಲಿಗತ ಕ್ರಿ ಪೂ.೩೧೦೧ +ಕ್ರಿ ಶ ೭೮೮= ಕಲಿ ಆದಿ ೩೮೮೯ ಕ್ಕೆ ಶ್ರೀಶಂಕರರ ಜನನ ಮತ್ತು ಅದ್ವೈತ ಪ್ರಚಾರ. ಮಧ್ವರು ತಾವು ಹುಟ್ಟುವವರೆಗೂ ಕೌರವರು ವೀರ ಸ್ವರ್ಗದಲ್ಲಿದ್ದರೆಂದು ಹೇಳಿದಂತೆ ಆಗಿದೆ. ತಮ್ಮ ನಂತರ ಹುಟ್ಟಿದವರು ಅದ್ವೈತ ಬೋಧನೆ ಮಾಡಿದರು ಎಂದು ಹೇಳಿದಂತೆ ಆಯಿತು. ಲೆಕ್ಕ ತಪ್ಪಿದಂತೆ ಕಾಣುತ್ತದೆ. ಮೇಲೆ ಎಡದಲ್ಲಿ - 'ಚರ್ಚೆ' ನೋಡಿ

ಗೌತಮ ಬುದ್ಧನ ಜನನ

ಬದಲಾಯಿಸಿ

[ಮಧ್ವಮಹಾಭಾರತ ಮಹಾ ಪ್ರಸ್ಥಾನ ನಂತರ ಶ್ರೀಮನ್ಮಹಾಭಾರತಮ್ ಉಪಸಂಹಾರ ]

 • ಭೂಮಿಯಲ್ಲಿ ಹುಟ್ಟಿದ,ತ್ರಿಪುರಾಸುರರೇ ಮುಂತಾದ ತಾಮಸರು, ತತ್ವ ವಿದ್ಯೆಯನ್ನು ಸ್ವೀಕರಿಸಿ ಜ್ಞಾನವನ್ನು ಹೊಂದಿದರು. ಅಸುರ ಸಂಪ್ರದಾಯವು ನಷ್ಟವಾಗಿ ಯಥಾರ್ಥ ಜ್ಞಾನವೇ ಉಳಿದದ್ದರಿಂದ ದೈತ್ಯರೂ ಕೂಡಾ ತತ್ವ ಜ್ಞಾನವನ್ನು ಸಂಪಾದಿಸಿದರು. ಸುರರು ಇದನ್ನು ಸಹಿಸದೆ ನೀರಜಾಕ್ಷನನ್ನು ಸ್ತುತಿಸಿದರು. ಶ್ರೀಶನು ಅವರಿಗೆ ಸುಜನರಿಗೆ ಜ್ಞಾನವನ್ನೂ, ಅಯೋಗ್ಯರಿಗೆ ಅನ್ಯಥಾ ಜ್ಞಾನವನ್ನೂ ಕೊಡುವೆನು, ಅಸುರರು ಹೊಂದಿರುವ ಜ್ಞಾನವನ್ನು ಅವರಿಂದ ದೂರೀಕರಿಸುವೆನು. ಎಂದು ಅಭಯವನ್ನಿತ್ತು ಕಳಿಸಿದನು. ತ್ರಿಪುರಾಸುರರಲ್ಲಿ ಪ್ರಥಮನಾದ ವಿರೂಪಾಕ್ಷನು ಭೂಮಿಯಲ್ಲಿ ಶುದ್ಧೋನನನಾಗಿ ಜನಿಸಿದನು. ಇವನ ಪತ್ನಿ ಮಾಯೆ [ಗಯಾ] ಪಡೆದ ಕೂಸನ್ನು ದೂರ ಮಾಡಿ, ಅಲ್ಲಿ ಶಿಶು ರೂಪವಾಗಿ ಶ್ರೀಹರಿಯೇ ಅವತರಿಸಿದನು. ಆ ಕೂಸನ್ನು ತಮ್ಮದೆಂದು ತಿಳಿದು ಅವರು ಜಾತಕರ್ಮವನ್ನು ಮಾಡಲು ಹೊರಟಾಗ, ಶಿಶು ಅಪಹಸಿಸಿ ನಕ್ಕಿತು. ಏಕೆ ನಗುವೆ ? ನೀನಾರೆಂದು ಕೇಳಿದಾಗ, ಶಿಶುವು ನಾನು ಬುದ್ಧನು ಎಂದು ಹೇಳಿ ಅವರಿಗೆ ಬುದ್ಧ ದರ್ಶನವನ್ನು ಉಪದೇಶಿಸಿತು. ಅದನ್ನು ಅವರು ನಂಬಲಿಲ್ಲ.
 • ಶ್ರೀಶನೇ ಆಗ ದೇವತೆಗಳನ್ನು ನೆನೆದನು. ಅವರು ಶಿಶುವಿನ ಮೇಲೆ ಆಯುಧಗಳನ್ನು ಎಸೆದರು. ಅವನ್ನು ಶ್ರೀಶನು ನುಂಗಿ ಸುದರ್ಶನವನ್ನು ಕೈಯಲ್ಲಿ ಹಿಡಿದನು. ಆ ಚಕ್ರದ ಮೇಲೆ ಕುಳಿತನು. ಆಗ ಶ್ರೀಶನ ಆಟವು ಸಫಲವಾಗಿ ದೈತ್ಯರು ವಿಷ್ಣುವಿಗಿಂತಲೂ ಬುದ್ಧನೇ ಅಧಿಕನೆಂದು ತಿಳಿದು ಬೌದ್ಧಧರ್ಮವನ್ನು ಅನುಸರಿಸಿದರು. . ಜಗತ್ತು ಕ್ಷಣಿಕ; ಎಲ್ಲವೂ ಶೂನ್ಯ ಎಂದು ಧ್ಯಾನಿಸಿ ಅಂಧಂತಮಸ್ಸನ್ನು ಹೊಂದಿದರು. ದೇವತೆಗಳು ಸಂತಸಗೊಂಡರು. ನಿಜವಾದ ಅರ್ಥವನ್ನು ಶ್ರೀಶನು ದೇವತೆಗಳಿಗೆ ಮಾತ್ರಾ ತಿಳಿಸಿದನು : ೧] ಜಗತ್ತು ಕ್ಷಣದಲ್ಲೂ ಸ್ಥಿರ ರೂಪ ಹೊಂದಿದೆ. ೨] ಶೂ ಎಂದರೆ ವಿಷ್ಣು, ನೀಯತೆ ನಡೆಯುವುದು ಶೂನ್ಯ . ೩] ಅ ಎಂಬ ಪರಮಾತ್ಮ - ಶ್ರೀಶನಿಂದ ಸಂಹಾರವಾಗುವುದು. [ ಅಸತ್ ಅಥವಾ ಅ ವಾಸುದೇವನಿಂದ ಭವತಿ ಹುಟ್ಟುತ್ತದೆ ]
 • (ಟಿಪ್ಪಣಿ : ಎಂದರೆ ಶ್ರೀಶನು ಸುಳ್ಳು ಹೇಳಿಲ್ಲ . ಆದರೆ ದೈತ್ಯರು ತಪ್ಪು ತಿಳಿದು ಅಂಧತಮವನ್ನು ಸೇರಿದರು ಎಂದು ಭಾವ.)

ಜಿನ (ಮಹಾವೀರ)

ಬದಲಾಯಿಸಿ

ಶ್ರೀಮನ್ಮಹಾಭಾರತಮ್ ಉಪಸಂಹಾರ

 • ಜಿನ ನೆಂಬುವವನು ಬೌದ್ಧಮತದಂತೆ ಮತ ಪ್ರವರ್ತಕನಾದನು. ಆಗ ದುಷ್ಟಜೀವರೆಲ್ಲರೂ ಬೌದ್ಧ ಜೈನ ಮತವನ್ನು ಹೊಂದಿದರು.ದೇವತೆಗಳಿಗೆ ಸಂತಸವಾಯಿತು. ಮಾನವೋ(ಓ)ತ್ತಮರು ಸತ್ ಸಂಪ್ರದಾಯವನ್ನು ಹಿಡಿದು ಅತ್ಯುತ್ತಮ ಗತಿಯನ್ನು ಹೊಂದಿದರು.
 • ಅದ್ವೈತಿಗಳು

ಅದನ್ನು ನೋಡಿ ಸಹಿಸದೆ ಮಣಿ ಮದಾದಿ ದೈತ್ಯರು - ಶಿವನನ್ನು ಕುರಿತು ತಪವನ್ನು ಮಾಡಿ ಅದ್ಭುತ ಶಕ್ತಿಯನ್ನು ಪಡೆದರು. ಅವರು ಜೀವೇಶ್ವರ ಐಕ್ಯವನ್ನೂ ಜೀವ ಜೀವೈಕ್ಯವನ್ನೂ ಹೇಳುವ ಮೂಲಕ ಶಾಸ್ತ್ರವನ್ನು ರಚಿಸಿದರು. ಆ ಶಾಸ್ತ್ರವನ್ನು ತರ್ಕಾಭಾಸಗಳಿಂದ ಉಪಪಾದಿಸಿದರು

 • (ಟಿಪ್ಪಣಿ : ಮಣಿ ಮದ ಆದಿಗಳು (ಮುಂತಾದವರು -ದ್ವಾಪರದಲ್ಲಿದ್ದ ರಾಕ್ಷಸರು ಯಾ ದೈತ್ಯರು .ಅವರನ್ನು ಭೀಮನು ಕೊಂದಿದ್ದಾನೆ. )

.

ಶ್ರೀ ಮಧ್ವಾಚಾರ್ಯರ ಅವತಾರ

ಬದಲಾಯಿಸಿ

 • ಆ ಕ್ರೋಧ ಮದಾದಿ ದೈತ್ಯರನ್ನು ಅವರಿಗೆ ಯೋಗ್ಯವಾದ ಅಂಧಂತಮಸ್ಸಿನಲ್ಲಿ ಕೆಡಹಿ ಸುಜನರಿಗೆ ಸುಜ್ಞಾನವನ್ನು ಕೊಡಲೆಂದು ಶ್ರೀ ಹರಿಯ ಆಜ್ಞೆಯನ್ನು ಹೊಂದಿದ ಶ್ರೀ ಭೀಮಸೇನನೇ ಶ್ರೀ ಮಧ್ವಾಚಾರ್ಯನಾಗಿ ಜನಿಸಿ ; ಅವರು ಸಚ್ಛಾಸ್ತ್ರಗಳನ್ನು ರಚಿಸಿ, ದುಷ್ಟ ಮತಗಳನ್ನು ನಾಶಗೊಳಿಸಿದರು. ಆಮೇಲೆ ದುರ್ಗಾ ದೇವಿಯೂ ಪಯಸ್ವನೀ ತೀರದಲ್ಲಿ ಬ್ರಾಹ್ಮಣ ಗೃಹದಲ್ಲಿ ಅವತರಿಸಿ ಅಸುರ ಸಮೂಹವನ್ನು ನಾಶ ಗೊಳಿಸಿದಳು. [ ೨೧ ಭಾಷ್ಯಗಳ ಖಂಡನ ; ೩೭ ಗ್ರಂಥಗಳಿಂದ ಸಚ್ಛಾಸ್ತ್ರ ಮಂಡನ -ಮಧ್ವ ರಿಂದ ]

ಕಲ್ಕಿ ಅವತಾರ

ಬದಲಾಯಿಸಿ

 • ಮುಂದೆ ಭಗವಂತನು ಕಂಬಲವೆಂಬ ಗ್ರಾಮದಲ್ಲಿ ವಿಷ್ಣು ಶಯನನೆಂಬ ಮುನಿಯ ಮನೆಯಲ್ಲಿ ಅವತರಿಸುವನು. ಕಲಿಯನ್ನು ನಿರಾಕರಿಸಿರುವುದರಿಂದ ಕಲ್ಕಿ ಎನಿಸಿ ಒಂದೇದಿನದಲ್ಲಿ ಎಲ್ಲೆಡೆ ವ್ಯಾಪ್ತನಾಗಿ ಎಲ್ಲಾ ದುರ್ಜನರನ್ನೂ ನಾಶಪಡಿಸುವನು. ಮಹಾಭಾರತದಂತೆ ಸದರ್ಥ ನಿರ್ಣಾಯಕವಾದ ಗ್ರಂಥವಿನ್ನೊಂದಿಲ್ಲ. ಬ್ರಹ್ಮ ಸೂತ್ರಗಳೂ, ದುರ್ವಾದಿಗಳಿಂದ ರಚಿತವಾದ ಭಾಷ್ಯಗಳಿಂದ ವೇದವ್ಯಾಸ ದೇವರಿಗೆ ಅಭಿಪ್ರೇತವಾದ ಅರ್ಥವು ದುರ್ಬೋಧ ವಾಗಿದೆ. ಆ ಸೂತ್ರಗಳಿಗೆ ಮಣಿಮದಾದಿ ದುರ್ಜನರು ಮಾಡಿದ ಭಾಷ್ಯಾಭಾಸಗಳಿಂದ ಸುಜನರು ಕೂಡಾ - ಶ್ರೀಹರಿಯ ಕಲ್ಯಾಣ ಗುಣಗಳ ಜ್ಞಾನವಾಗದಂತೆ ಆದಾಗ

ಶ್ರೀ ಆನಂದತೀರ್ಥ - ಮಧ್ವ- ಎಂದು ಖ್ಯಾತನಾದೆನು. ಆ ಭಾಷ್ಯಗಳನ್ನು ಖಂಡಿಸಿ ವೇದವ್ಯಾಸಾಭಿಪ್ರೇತಾರ್ಥವನ್ನು ಶಿಷ್ಯನಾಗಿ ತಿಳಿದು ಸಚ್ಛಾಸ್ತ್ರವನ್ನು ರಚಿಸಿರುವೆನು.

 • ಮುಖ್ಯವಾಯುದೇವರ ತೃತೀಯಾವತಾರ (ಮುಖ್ಯ ಪ್ರಾಣ)
 • ಶ್ರೀ ವೇದವ್ಯಾಸರ ಆಜ್ಞೆಯಂತೆ ಸದ್ಭಾಷ್ಯವನ್ನು ಬ್ರಹ್ಮಸೂತ್ರಗಳ ಸರಿಯಾದ ಅರ್ಥವನ್ನು ತಿಳಿಸಲು ರಚಿಸಿದೆನು. ಮತ್ತು ದಶೋಪನಿಷತ್ತುಗಳಿಗೆ ಭಾಷ್ಯವನ್ನು

ರಚಿಸಿದೆನು. ಸುಜನರು ದಿವ್ಯ ಜ್ಞಾನವನ್ನು ಹೊಂದಿ ಸ್ವಯೋಗ್ಯ ಮುಕ್ತಿಯನ್ನು ಪಡೆದು ರಮಿಸಲು ನಾನು ಮಧ್ವನೆಂದು ಅವತರಿಸಿರುವೆನು.

 • ಮುಖ್ಯವಾಯುದೇವರ ತೃತೀಯಾವತಾರವೇ ಮಧ್ವನು. ಆತನು ಶ್ರೀ ಭೂ ದುರ್ಗಾ ದೇವಿಯರ ಪ್ರಿಯ ಪುತ್ರನು. ಶ್ರೀ ಮಧ್ವನೇ ಹೃದಯ ಗುಹ ಗತವಾದ ಶ್ರೀ ನಾರಾಯಣನ ಮಹಿಮೆಯನ್ನು ರುದ್ರಾದಿಗಳಿಗೆ ತಿಳಿಸಿಕೊಟ್ಟನು.
 • ಅಂತಹ ಮಧ್ವನಾದ ನನ್ನಿಂದ ರಚಿತವಾದ ಶ್ರೀ ಮಹಾಭಾರತ ತಾತ್ಪರ್ಯ ನಿರ್ಣಯವೇ ಪರಮ ಪ್ರಮಾಣವು.
 • ಶ್ರೀ ಕೇಶವನ ಪ್ರೀತಿಗಾಗಿ ಈ ದಿವ್ಯ ಗ್ರಂಥವನ್ನು ರಚಿಸಿ ಸುಜನ ತತಿಯನ್ನು ರಕ್ಷಿಸಿದನು.
 • ಶ್ರೀ ಮಧ್ವೇಶಾಯ ನಮಃ || ಓಂ ಯಃ ಸರ್ವಗುಣ ಸಂಪೂರ್ಣಃ ಸರ್ವ ದೋಷ ವಿವರ್ಜಿತಃ ಪ್ರೀಯತಾಂ ಪ್ರೀತ ಏವಾಲಂ ವಿಷ್ಣುರ‍್ಮೇ ಪರಮ ಸುಹೃತ್ ||

ಓಂ ತತ್ ಸತ್.

ಭಗವದ್ಗೀತೆ ಮತ್ತು ಮಧ್ವಮತ

ಬದಲಾಯಿಸಿ

ಶ್ರೀಮನ್ಮಹಾಭಾರತಮ್ ನಲ್ಲಿ ಭಗವದ್ಗೀತೆ ಮತ್ತು ಮಧ್ವಮತ

 • ಶ್ರೀ ನಾರಾಯನ ದ್ವೇಷಿಗಳನ್ನು ನಿಗ್ರಹಿಸಲು ನಡೆಯುವ ಯುದ್ಧವನ್ನು

ಧರ್ಮವೆಂದೇ ತಿಳಿಯಬೇಕು. ನಾಶ ರಹಿತನೂ ಸರ್ವೋತ್ತಮನೂ ಆದ ನಾರಾಯಣನನ್ನು ಜೀವನೆಂದು ತಿಳಿದವರಷ್ಟು ಬುದ್ಧಿಹೀನರಿನ್ನಿಲ್ಲ.-ಇಂತಹ ತಾಮಸರು ಮೂಢರಾಗಿ ನನ್ನ (ಭಗವಂತನ) ಜ್ಞಾನವನ್ನು ಪಡೆಯಲಾರದೆ ದುಃಖಮಯ ತಮಸ್ಸಿನಲ್ಲಿ ಬೀಳುವರು.

 • ಕ್ಷೇತ್ರ ಕ್ಷೇತ್ರಜ್ಞ ಯೋಗ :
 • ಮಹಾಭೂತಗಳು ಐದು ; ಅಹಂಕಾರ, ಬುದ್ಧಿ, ಅವ್ಯಕ್ತ, ಮಹತ್ತು, ಹತ್ತು ಇಂದ್ರಿಯಗಳು, ಮನಸ್ಸು, ಶಬ್ದಾದಿಗಳು ಐದು, ಒಟ್ಟು ಇಪ್ಪತ್ತೈದು ತತ್ವಗಳು. ಇಚ್ಛೆ, ದ್ವೇಷ, ಸುಖ, ದುಃಖ, ದೇಹ, ಮನೋವ್ಯಾಪ್ತಿ, ಧೈರ್ಯ, ಇವುಗಳ ವಿಕಾರಗಳು, ಒಟ್ಟು ೩೨ ತತ್ವಗಳು.
 • ಅಭಿಮಾನಿ ದೇವತೆಗಳು ; ೧] ಆಕಾಶಕ್ಕೆ -ವಿಘ್ನೇಶ, ೨]ವಾಯುವಿಗೆ ಮರೀಚಿ [ಮುಖ್ಯ ವಾಯು ಪುತ್ರ], ೩] ಅಗ್ನಿಗೆ ವಹ್ನಿ, ೪] ? ೫] ಜಲಕ್ಕೆ ವರಣ, ೬] ಭೂಮಿಗೆ ಧರಾ ಶನಿ, ೭] ಅಹಂಕಾರಕ್ಕೆ ರುದ್ರ, ೮]ಮಹತತ್ವಕ್ಕೆ ಬ್ರಹ್ಮ, ೯] ಉಮೆ, ಸರಸ್ವತಿ, ೧೦] ಅವ್ಯಕ್ತಕ್ಕೆ ಶ್ರೀದೇವಿ, ೧೧]ಮನಸ್ಸಿಗೆ ಸ್ಕಂದ ದೇವರು, ಅನಿರುದ್ಧ, ೧೨] ಕರ್ಣಕ್ಕೆ ಚಂದ್ರ, ೧೩] ಚರ್ಮಕ್ಕೆ ವಾಯುಸುತ ಪ್ರಾಣ, ೧೪] ಕಣ್ಣಿಗೆ ರವಿ, ೧೫] ನಾಲಿಗೆಗೆ ವರುಣ ೧೬] ಮೂಗಿಗೆ ಅಶ್ವಿನೀದ್ವಯರು. ೧೭]ವಾಕ್ಕಿಗೆ ಅಗ್ನಿ, ೧೮] ಕೈಗಳಿಗೆ ವಾಯು ಪುತ್ರರು ಮರುತರು, ದಕ್ಷ, ೧೯] ಪಾದಗಳಿಗೆ ಇಂದ್ರ ಪುತ್ರರಾದ ಶಂಭು ಯಜ್ಞರು, ೨೦] ಗುದಕ್ಕೆ ಯಮ. ೨೧]ಉಪಸ್ಥಕ್ಕೆ ರುದ್ರ ಮನುಗಳು, ೨೨]ಶಬ್ದಕ್ಕೆ ಬೃಹಸ್ಪತಿ, ಪ್ರಾಣರು ೨೩] ಸ್ಪರ್ಶಕ್ಕೆ ಅಪಾನ, ೨೪] ರೂಪಕ್ಕೆ ವ್ಯಾನ, ೨೫] ರಸಕ್ಕೆ ಉದಾನ, ೨೬] ಗಂಧಕ್ಕೆ ಸಮಾನ, ೨೭] ಇಚ್ಛೆಗೆ ಶ್ರೀದೇವಿ, ಭಾರತಿಯರು, ೨೮] ದ್ವೇಷಕ್ಕೆ ಕಲಿ, ೨೯]ದುಃಖಕ್ಕೆ ದ್ವಾಪರ, ೩೦] ಸುಖಕ್ಕೆ ಮುಖ್ಯ ಪ್ರಾಣ, ೩೧] ಧೈರ್ಯಕ್ಕೆ ಸರಸ್ವತಿ, ಭಾರತಿಯರು, ೩೨] ಚೇತನಕ್ಕೆ ಚೇತನೆಗೆ ಶ್ರೀದೇವಿ , [೪,-೩೩] ದೇಹಕ್ಕೆ ಇತರೆ ಜೀವ ಚೆತನರು ಅಭಿಮಾನಿಗಳು. {ಒಟ್ಟು ೩೨ ತತ್ವ-ಅಭಿಮಾನಿಗಳು]
 • [ಗೀತೆ.ಅ೧೩-೩೦,೩೧,೩೨];
 • ಜಗತ್ತಿನಲ್ಲಿ ಹುಟ್ಟುವ ಜೀವ ಜಾತವೆಲ್ಲವೂ ಚಿತ್ ಪ್ರಕೃತಿ ಮತ್ತು ಶ್ರೀ ಹರಿಎಂದು ತಿಳಿ. [ಅವನು]ಜನನ ಮರಣಾದಿ ದೋಷ ಸಹಿತ ಜೀವ ಸಹಿತ ಶರೀರಗಳಲ್ಲಿದ್ದರೂ ಸರ್ವ ದೋಷ ರಹಿತನು, ಸರ್ವತ್ರ ವ್ಯಾಪ್ತನು, ಚೇತನಾಚೇತನ ಜಗದ್ವಿಲಕ್ಷಣನು, - ಎಂದು ತಿಳಿದವನು ಶ್ರೀಹರಿಯ ಪ್ರಸಾದ ಪಾತ್ರನಾಗುವನು. ಶ್ರೀಹರಿಯು ರಮಾದೇವಿಯ ದ್ವಾರಾ ಜಗಜನ್ಮಾದಿ ಕ್ರಿಯೆಯ ಸ್ವತಂತ್ರ ಕರ್ತನು.
 • ಜೀವರು ಅಸ್ವತಂತ್ರ ಕರ್ತರು. ಶ್ರೀಹರಿಗೆ ಕರ್ಮಲೇಪ ವಿಲ್ಲವೆಂದು ತಿಳಿದವನು ಮುಕ್ತನಾಗುವನು ಶ್ರೀಶನೇ ಜೀವನ ಅನಾದಿ ಯೋಗ್ಯತೆಯನ್ನನುಸರಿಸಿ, ಪುಣ್ಯ ಪಾಪಾದಿ ಕಾರ್ಯಗಳನ್ನು ಮಾಡಿಸುವನು. ಅವನಿಗೆ ವೈಷಮ್ಯವಿಲ್ಲ, ಮತ್ತು ಅವನು ನಿಷ್ಕರುಣನಲ್ಲ..
 • ಸರ್ವಜೀವರೂ ಪರಸ್ಪರ ಭಿನ್ನರು. ವಿಷ್ಣವಿನ ಅಧೀನರು; ಅವನ [ವಿಷ್ಣವಿನ] ದೇಹವು ಜಡವಲ್ಲ; ಅವನಿಂದ ಅದು ಭಿನ್ನವಲ್ಲ. ಜ್ಞಾನಾನಂದಾದಿ ಗುಣಗಳೇದೇಹವಾಗಿರುವ ಸ್ವಾಮಿಗೆ ಯಾವ ದೋಷದ ಸೋಂಕೂ ಇಲ್ಲ. ಅವನು ಜಗತ್ತನ್ನು ಬೆಳಗುವ ಸೂರ್ಯನಂತೆ ಕ್ಷೇತ್ರದಲ್ಲಿದ್ದು ಕ್ಷೇತ್ರಜ್ಞನೆನಿಸಿ ಸರ್ವೇಂದ್ರಿಯ ವ್ಯಾಪಾರವನ್ನೂ ನಡೆಸಿ ಜ್ಞಾನವನ್ನೀಯುತ್ತಿರುವನು.
 • [ಗೀತೆ,ಅ೧೪,೩-೪]:
 • ಚಿತ್‌ಪ್ರಕೃತಿಯಾದ ಮಹಾಲಕ್ಷ್ಮಿಯು ನನ್ನ [ವಿಷ್ಣುವಿನ] ಸತಿ. ಅವಳನ್ನು ಮಹದ್ ಬ್ರಹ್ಮ ವೆಂಬರು. ಸೃಷ್ಟಿಯ ಕಾಲವು ಬಂದಾಗ ನಾನು ಅವಳಲ್ಲಿ ಇಪ್ಪತ್ನಾಲ್ಕು ತತ್ವಾಂಶಯುತ ರಾದ ಜೀವರನ್ನು ನನ್ನ ಉದರದಿಂದ ತೆಗೆದು ಇಡುವೆನು. ಆಗ ಅವಳಿಂದ ಜೀವರಿಗೆ ದೇಹಯೋಗ ರೂಪವಾದ ಜನ್ಮವು ಸಂಭವಿಸುವುದು. ದೇವ ದಾನವ ಮಾನವ ತಿರ‍್ಯಗಾದಿ ಯೋನಿಗಳಲ್ಲಿ ಹುಟ್ಟುವ ಎಲ್ಲಾ ಜೀವರಿಗೂ ಲಕ್ಷ್ಮಿ ದೇವಿಯು ಜನನ ಪ್ರದಳಾದ ತಾಯಿ. ನಾನು ಬೀಜ ಪ್ರದನಾದ ತಂದೆ.

ಪುರುಷೋತ್ತಮ ಯೋಗ :

 • ಕ್ಷರ ಅಕ್ಷರ ಎಂಬ ಎರಡು ಬಗೆಯ ಚೇತನರು ಇರುವರು. ಅವರೆಲ್ಲ ಅಸ್ವತಂತ್ರರು. ಕ್ಷರ ಎಂದರೆ ನಾಶಹೊಂದುವ ದೇಹವುಳ್ಳ ಚತುರ್ಮುಖಾದಿ ಜೀವರು. ಅಕ್ಷರ ಎಂದರೆ ನಾಶ ರಹಿತಳೂ, ನಿರ್ವಿಕಾರಳೂ, ವ್ಯಾಪ್ತಳೂ ಆದ ಮಹಾಲಕ್ಷ್ಮಿಯು. ಅವಳು ಅಕ್ಷರ ಪುರುಷಳು. ಕ್ಷರಾಕ್ಷರಗಳನ್ನಾಳುವ ಪುರುಷೋತ್ತಮನು ಉತ್ತಮ ಪುರುಷನು -ಶ್ರೀ ಹರಿ. ಇವನು [ಶ್ರೀಹರಿ] -ವೈಶ್ವಾನರನಾಗಿ ಜೀವರಿಗೆ ಜ್ಞಾನ ಅಜ್ಞಾನ ನೀಡುವನು.

ದೇವಾಸುರ ಸಂಪದ್ವಿಭಾಗ ಯೋಗ :

ಬದಲಾಯಿಸಿ

 • ಅಸುರರು ವಿಹಿತ ಕರ್ಮಗಳನ್ನು ಮಾಡರು. ಅವರು ಈ ಜಗತ್ತನ್ನು ಅಸತ್ಯವೆಂಬರು. ಅವರಿಗೆ ಆಚಾರವಿಲ್ಲ; ಶೌಚವಿಲ್ಲ; ಸತ್ಯವಂತೂ ಬಲುದೂರ . ಜಗತ್ಕಾರಣನಾದ ಭಗವಂತ ಇಲ್ಲವೆಂಬರು. ಇದ್ದರೂ ಅವನು ನಿರ್ಗುಣ ನೆಂಬರು. ಇತ್ಯಾದಿ ಮಿಥ್ಯಾ ಜ್ಞಾನದಿಂದ ಕೆಟ್ಟ ಬುದ್ಧಿಯುಳ್ಳ ಅಸುರರು ಘೋರ ಕರ್ಮ ನಿರತರಾಗಿರುವರು. ಅವರು ಕಲ್ಯಾದಿ ಯುಗಗಳಲ್ಲಿ ಪ್ರಬಲರಾಗಿ ಜಗನ್ನಾಶವನ್ನು ಸಾಧಿಸುವರು. ದೇವ ಬ್ರಾಹ್ಮಣ ಸುಜನರನ್ನು ದ್ವೇಷಿಸುವರು. - ಕೊನೆಗೆ ಎಷ್ಟು ಜನ್ಮಗಳಾದರೂ ನನ್ನ [ಹರಿಯ] ಜ್ಞಾನವಿಲ್ಲದೆ ಅಂಧ ತಮಸ್ಸನ್ನು ಹೊಂದಿ ದುಃಖ ಭಾಜನರಾಗುವರು.

ಓಂ ತತ್ ಸತ್

ಬದಲಾಯಿಸಿ

 • ಓಂ ತತ್ ಸತ್ ಎಂದು ಶ್ರೀಹರಿಯ ಮೂರು ನಾಮಗಳು. ಓಂ ಎಂದರೆ ಗುಣ ಪೂರ್ಣ ಜಗದಾಶ್ರಯ. ತತ್ ಎಂದರೆ ವ್ಯಾಪ್ತ - ವೇದ ವೇದ್ಯ . ಸತ್ ಎಂದರೆ ನಿರ್ದೋಷ, ಕಲ್ಯಾಣ ಗುಣ ಪೂರ್ಣ.
 • ಸಂನ್ಯಾಸ ಯೋಗ : ಮುಕ್ತರಿಗೆ ವಿಧಿ ನಿಷೇಧಗಳಿಲ್ಲ.
 • ಕರ್ಮವೆಂದರೆ ಹಸ್ತಾದಿ ಚೇಷ್ಟೆ.
 • ಕರ್ತಾ ಎಂದರೆ ಜೀವನು ಮತ್ತು ಶ್ರೀಹರಿ.
 • ಕರಣ ಎಂದರೆ ಇಂದ್ರಿಯ - ಸ್ರುಕ್ ಸ್ರುವಾದಿಗಳು. ಮತ್ತು ದೇಹ, ದೇಶ, ಅದೃಷ್ಟಗಳು.
 • ಜೀವನನ್ನು ಬ್ರಹ್ಮನೆಂದು ತಿಳಿಯುವುದೂ -ತಾಮಸ ಜ್ಞಾನವು..
 • ಜೀವವನ್ನು ಬ್ರಹ್ಮ ವೆಂದು ತಿಳಿಯುವುದೂ, ಜೀವವನ್ನು ಜಗವೆಂದು ತಿಳಿಯುವುದೂ, ಯುಕ್ತಿ ಶೂನ್ಯವಾದರೂ ಸದಸದ್ವಿಲಕ್ಷಣತ್ವಾದಿ ಅಸತ್ಯಾರ್ಥ ಕಲ್ಪನಾಯುತ ವಾದುದೂ, ಬಹಳ ಅಲ್ಪವಾಗಿ ತಿಳಿಯುವುದೂ, ಶ್ರೀಶನನ್ನು ಜಗವೆಂದು ತಿಳಿಯುವುದೂ - ತಾಮಸ ಜ್ಞಾನವು.

[೧] [೨]ಭಾರತೀಯ ದರ್ಶನಶಾಸ್ತ್ರ ಅಥವಾ ಭಾರತೀಯ ತತ್ತ್ವಶಾಸ್ತ್ರ
ಚಾರ್ವಾಕ ದರ್ಶನ ಜೈನ ದರ್ಶನ ಬೌದ್ಧ ದರ್ಶನ ಸಾಂಖ್ಯ ದರ್ಶನ
ರಾಜಯೋಗ ನ್ಯಾಯ ವೈಶೇಷಿಕ ದರ್ಶನ ಮೀಮಾಂಸ ದರ್ಶನ
ಆದಿ ಶಂಕರರು ಮತ್ತು ಅದ್ವೈತ ಅದ್ವೈತ- ಜ್ಞಾನ-ಕರ್ಮ ವಿವಾದ ವಿಶಿಷ್ಟಾದ್ವೈತ ದರ್ಶನ ದ್ವೈತ ದರ್ಶನ
ಮಾಧ್ವ ಸಿದ್ಧಾಂತ ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ಭಾರತೀಯ ತತ್ವಶಾಸ್ತ್ರ ಸಮೀಕ್ಷೆ ಭಗವದ್ಗೀತಾ ತಾತ್ಪರ್ಯ
ಕರ್ಮ ಸಿದ್ಧಾಂತ ವೀರಶೈವ ತತ್ತ್ವ ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರು - ಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು
ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ ಮೋಕ್ಷ ಗೀತೆ ಬ್ರಹ್ಮಸೂತ್ರ

ಚಾರ್ವಾಕ ದರ್ಶನ ;ಜೈನ ಧರ್ಮ- ಜೈನ ದರ್ಶನ ;ಬೌದ್ಧ ಧರ್ಮ ;ಸಾಂಖ್ಯ-ಸಾಂಖ್ಯ ದರ್ಶನ ;(ಯೋಗ)->ರಾಜಯೋಗ ;ನ್ಯಾಯ ದರ್ಶನ ;ವೈಶೇಷಿಕ ದರ್ಶನ;;ಮೀಮಾಂಸ ದರ್ಶನ - ;ವೇದಾಂತ ದರ್ಶನ / ಉತ್ತರ ಮೀಮಾಂಸಾ ;ಅದ್ವೈತ ;ಆದಿ ಶಂಕರರು ಮತ್ತು ಅದ್ವೈತ ;ವಿಶಿಷ್ಟಾದ್ವೈತ ದರ್ಶನ ;ದ್ವೈತ ದರ್ಶನ - ಮಾಧ್ವ ಸಿದ್ಧಾಂತ ;ಪಂಚ ಕೋಶ--ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ;ವೀರಶೈವ;ಬಸವಣ್ಣ;ಭಾರತೀಯ ತತ್ವಶಾಸ್ತ್ರ ಸಮೀಕ್ಷೆ;ಭಗವದ್ಗೀತಾ ತಾತ್ಪರ್ಯ ;ಕರ್ಮ ಸಿದ್ಧಾಂತ ;.ಭಾರತೀಯ ತತ್ವಶಾಸ್ತ್ರ ಸಮೀಕ್ಷೆವೇದಗಳು--ಕರ್ಮ ಸಿದ್ಧಾಂತ--ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರುಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು-ಅಸ್ತಿತ್ವ-ಸತ್ಯವೇ-ಮಿಥ್ಯವೇ -ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ-ಭಾರತೀಯ ತತ್ತ್ವಶಾಸ್ತ್ರದಲ್ಲಿ ಮೋಕ್ಷ

ಉಲ್ಲೇಖ

ಬದಲಾಯಿಸಿ
 1. ಭಾರತೀಯ ತತ್ವ ಶಾಸ್ತ್ರ ಪರಿಚಯ :- ಎಂ. ಪ್ರಭಾಕರ ಜೋಷಿ & ಪ್ರೊ.ಎಂ.ಎ.ಹೆಗಡೆ. (ಕಾಪಿ ರೈಟಿನಿಂದ ಮುಕ್ತವಾಗಿದೆ)
 2. ಮಹಾಭಾರತ ತಾತ್ಪರ್ಯ ನಿರ್ಣಯ ಅಥವಾ ಶ್ರೀಮನ್ಮಹಾಭಾರತಮ್ (ಮಧ್ವರ ಶ್ರೀಮನ್ಮಹಾಭಾರತ) ವಿದ್ವಾನ್ ಘೂಳೀ ಕೃಷ್ಣಮೂರ್ತಾಚಾರ್ಯ ರ ಕನ್ನಡ ಅನುವಾದ; ಪ್ರಕಾಶಕರು : ಶ್ರೀಮದಾನಂದತೀರ್ಥ ವಿದ್ಯಾಪೀಠ, ಶ್ಯಾನುಭೋಗ ನಾರಾಯಣಪ್ಪ ರಸ್ತೆ, ದೊಡ್ಡಬೊಮ್ಮಸಂದ್ರ, ವಿದ್ಯಾರಣ್ಯ ಪುರ, ಅಂಚೆ: ಬೆಂಗಳೂರು ೫೬೦೦೯೭.