ಧ್ಯಾನ, ವ್ಯಕ್ತಿಯ ಮನಸ್ಸಿನ ತರಬೇತಿ ಅಥವಾ ಅರಿವಿನ ಒಂದು ಕ್ರಮವನ್ನು ಉಂಟುಮಾಡುವ ಆಚರಣೆಯಾಗಿದೆ. ಧ್ಯಾನ ಎಂಬ ಪದವು ವಿವಿಧ ವಿಶಾಲ ಆಚರಣೆಗಳನ್ನು ಸೂಚಿಸುತ್ತದೆ. ಅದು ಕೆಲವು ತಂತ್ರಗಳನ್ನು ಒಳಗೊಂಡಿದೆ. ಅವು ವಿಶ್ರಾಂತಿ, ಆಂತರಿಕ ಶಕ್ತಿ ಅಥವಾ ಜೀವ ಶಕ್ತಿ ನಿರ್ಮಿಸುವ ತಂತ್ರಗಳಾಗಿವೆ. ಮತ್ತು ಸಹಾನುಭೂತಿ ಅಭಿವೃದ್ಧಿ, ಪ್ರೀತಿ, ತಾಳ್ಮೆ, ಉದಾರತೆ ಮತ್ತು ಕ್ಷಮೆ ಇವುಗಳೂ ವಿಕಾಸವಾಗುತ್ತವೆ. ಧ್ಯಾನವು ಮನಸ್ಸಿನ ಏಕಾಗ್ರತೆಯಿಂದ ಮಾತ್ರ ಸಾಧ್ಯ.

ಪತಂಜಲಿ ಮಹರ್ಷಿಗಳು ಯೋಗಸೂತ್ರಗಳನ್ನು ಬರೆದಿದ್ದಾರೆ. ಇದರ ಅನುಷ್ಠಾನವನ್ನು ರಾಜಯೋಗವೆಂದು ಕರೆಯುತ್ತಾರೆ. ಇದಕ್ಕೆ ಅಷ್ಟಾಂಗ ಯೋಗವೆಂತಲೂ ಹೆಸರು. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ -ಇವುಗಳನ್ನು ಅಷ್ಟಾಂಗಗಳೆಂದು ಕರೆಯುತ್ತಾರೆ.

ಪತಂಜಲಿ ಮಹರ್ಷಿಗಳು

तत्र प्रत्ययैकतानता ध्यानम् । (ಯೋಗಶಾಸ್ತ್ರ ೩/೨)

ತೈಲಧಾರೆಯಂತೆ ಅವಿಚ್ಛಿನ್ನವಾಗಿ ಧ್ಯೇಯವಸ್ತುವಿನಲ್ಲಿ ಚಿತ್ತವನ್ನು ನೆಲೆಗೊಳಿಸಿ ನಿಲ್ಲಿಸಿದರೆ ಅದನ್ನು "ಧ್ಯಾನ" ಎನ್ನಲಾಗುತ್ತದೆ. ಬೇರೆ ಬೇರೆ ಸ್ಥಳಗಳಲ್ಲಿ ಚಿತ್ತವನ್ನು ನಿಲ್ಲಿಸಿದರೆ ಅದನ್ನು ಧಾರಣಾ ಎನ್ನಲಾಗುತ್ತದೆ. ಆದರೆ ಧ್ಯಾನದಲ್ಲಿ ಅವಿಚ್ಛಿನ್ನವಾಗಿ ಚಿತ್ತವನ್ನು ಒಂದೇ ಸ್ಥಳದಲ್ಲಿ ನಿಲ್ಲಿಸಬೇಕು.

ಉಲ್ಲೇಖಗಳು

ಬದಲಾಯಿಸಿ

[] [] []

  1. https://www.yogajournal.com/yoga-101
  2. https://www.medicinenet.com/yoga/article.htm
  3. https://www.artofliving.org/in-en/yoga
"https://kn.wikipedia.org/w/index.php?title=ಧ್ಯಾನ&oldid=1164029" ಇಂದ ಪಡೆಯಲ್ಪಟ್ಟಿದೆ