ಅಷ್ಟಾಂಗ ಯೋಗ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಪತಂಜಲಿಯಿಂದ ಪ್ರವೃತ್ತವಾದ ಯೋಗಪದ್ಧತಿ. ಯೋಗವೆಂದರೆ ಚಿತ್ತವೃತ್ತಿನಿರೋಧವೆಂದು ವಿವರಿಸಿ ಯೋಗಸೂತ್ರ ಇದಕ್ಕೆ ಸಾಧನರೂಪವಾಗಿ ಯಮ, ನಿಯಮ , ಆಸನ , ಪ್ರಾಣಾಯಾಮ , ಪ್ರತ್ಯಾಹಾರ , ಧ್ಯಾನ , ಧಾರಣ , ಸಮಾಧಿ ಎಂಬ ಎಂಟು ಅಂಗಗಳನ್ನು ಎರಡನೆಯ ಅಧ್ಯಾಯವಾದ ಸಾಧನಪಾದದಲ್ಲಿ ಹೇಳಿದೆ. ಅಂಗವೆಂದರೆ ಅಶುದ್ಧವಾದ ಚಿತ್ತಕಲ್ಮಷಗಳು ಹೋಗಿ ವಿವೇಕ ಖ್ಯಾತಿ ಉಂಟಾಗುವುದಕ್ಕೆ ನೆರವಾಗುವ ಸಾಧನವೆಂದೂ ಅದರಿಂದ ಚಿತ್ತದಲ್ಲಿ ಸಾತ್ತ್ವಿಕ ಪರಿಣಾಮರೂಪವಾದ, ನಿರ್ಮಲರೂಪವಾದ ಪ್ರಕಾಶ (ಜ್ಞಾನದೀಪ್ತಿ) ಒದಗುವುದೆಂದೂ ಯೋಗಸೂತ್ರ ಭಾಷ್ಯಕಾರರಾದ ವ್ಯಾಸರು ವಿವರಿಸಿದ್ದಾರೆ. ನಿಷಿದ್ಧಕಾರ್ಯಗಳ ತ್ಯಾಗಯಮ ವೆನಿಸಿಕೊಳ್ಳುತ್ತದೆ. ಅಹಿಂಸಾ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ ಇವು ಯಮ; ಈ ಅಂಗದಲ್ಲಿ ಸೇರಿಬರುತ್ತವೆ. ವಿಹಿತ ಕಾರ್ಯಗಳ ಆಚರಣೆ ನಿಯಮ. ಶೌಚ, ಸಂತೋಷ, ತಪಸ್ಸು, ಸ್ವಾಧ್ಯಾಯ,ಈಶ್ವರಪ್ರಣಿಧಾನ-ಇವು ನಿಯಮಗಳು. ಆಸನವೆಂದರೆ ನಿಯಮಗಳ ಅಭ್ಯಾಸಕ್ಕೆ ಅನುಕೂಲವಾದ ಸ್ಥಿರವೂ ಸುಖವೂ ಆದ ಭಂಗಿ. ಆಸನಗಳಲ್ಲಿ ಸಿದ್ಧಾಸನ, ಪದ್ಮಾಸನ, ಸ್ವಸ್ತಿಕಾಸನ ಮೊದಲಾದ ವೈವಿಧ್ಯವುಂಟು. ಆಸನಸಿದ್ಧಿಯಾದ ಅನಂತರ ಶ್ವಾಸ-ಪ್ರಶ್ವಾಸಗಳ ಗಮನಾಗಮನಗಳನ್ನು ತಡೆಯುವುದನ್ನು (ಶ್ವಾಸಪ್ರಶ್ವಾಸಯೋರ್ಗತಿವಿಚ್ಛೇದಃ) ಪ್ರಾಣಾಯಾಮವೆಂದು ನಿರ್ದೇಶಿಸಿದ್ದಾರೆ. ಪ್ರಾಣಾಯಾಮದಿಂದ ಶುದ್ಧವಾದ ಚಿತ್ತವನ್ನು ಒಂದೆಡೆ ನಿಲ್ಲಿಸುವುದು ಧಾರಣ. ಪಂಚೇಂದ್ರಿಯಗಳು ತಂತಮ್ಮ ವಿಷಯಗಳ ಕಡೆ ಒಲಿಯದಂತೆ ತಡೆಹಿಡಿದು, ಧಾರಣದಲ್ಲಿರುವ ಚಿತ್ತದಲ್ಲಿಯೇ ನಿಲ್ಲುವಂತೆ ಮಾಡುವುದು ಪ್ರತ್ಯಾಹಾರ. ಮುಂದಿನ ಯೋಗಾಂಗ ಧ್ಯಾನ. ಆ ಧಾರಣೆಯ ಸ್ಥಳದಲ್ಲಿ ಏಕತಾನತೆಯನ್ನು ಅವಲಂಬಿಸಿ ಚಿತ್ತವನ್ನು ಸ್ಥಿರವಾಗಿ ನಿಲ್ಲಿಸುವುದೇ ಧ್ಯಾನ.ಧ್ಯಾನ ಧ್ಯಾನವಸ್ತುವಿನ ಸ್ವರೂಪವನ್ನೇ ಪಡೆದು ಚಿತ್ತದ ಸ್ವರೂಪವನ್ನು ಕಳೆದುಕೊಳ್ಳುವುದು ಸಮಾಧಿ (ತದೇವಾರ್ಥ ಮಾತ್ರ ನಿರ್ಭಾಸಂ ಸ್ವರೂಪಶೂನ್ಯಮಿವ ಸಮಾಧಿಃ). ತಾನು ಧ್ಯಾನಿಸುತ್ತಿದ್ದೇನೆ ಎನ್ನುವುದೂ ಸಮಾಧಿಯಲ್ಲಿ ಮರೆತುಹೋಗುತ್ತದೆ. ಯೋಗ