ಅಪರಿಗ್ರಹ ಅಸ್ವಾಮ್ಯತೆ ಅಥವಾ ದುರಾಸೆಯಲ್ಲದರ ಪರಿಕಲ್ಪನೆ ಮತ್ತು ಇದು ಒಂದು ಜೈನ ಪರಿಕಲ್ಪನೆ ಮತ್ತು ರಾಜಯೋಗ ಅಥವಾ ಅಷ್ಟಾಂಗ ಯೋಗ ಸಂಪ್ರದಾಯಗಳ ಭಾಗ ಕೂಡ. ಈ ಪದದ ಸಾಮಾನ್ಯ ಅರ್ಥ ಸಮಯ ಹಾಗು ಅವಧಿಯೊಂದಿಗೆ ಬದಲಾಗುವ ಸ್ವತ್ತುಗಳನ್ನು ಅಗತ್ಯವಿದ್ದಷ್ಟಕ್ಕೆ ಅಥವಾ ಪ್ರಮುಖವಾದವುಗಳಿಗೆ ಮಿತಿಗೊಳಿಸುವುದು, ಆದರೆ ಸಾಧುಗಳು ಯಾವುದೇ ಸ್ವತ್ತುಗಳನ್ನು ಹೊಂದಿರುವುದಿಲ್ಲ. ಅಹಿಂಸೆ, ಆಸ್ತೇಯ, ಬ್ರಹ್ಮಚರ್ಯ ಮತ್ತು ಸತ್ಯಗಳೊಂದಿಗೆ ಅದು ಜೈನ ಧರ್ಮದ ಐದು ತತ್ವಗಳ ಪೈಕಿ ಒಂದು.