ಹಿಂದೂ ಧರ್ಮದಲ್ಲಿ, ಸಾಧುವು ಒಬ್ಬ ಧಾರ್ಮಿಕ ತಪಸ್ವಿ ಅಥವಾ ಪವಿತ್ರ ವ್ಯಕ್ತಿ. ಸಾಧುಗಳಲ್ಲಿ ಬಹುಪಾಲು ಯೋಗಿಗಳಾದರೂ, ಎಲ್ಲ ಯೋಗಿಗಳು ಸಾಧುಗಳಲ್ಲ. ಸಾಧುವು ಧ್ಯಾನ ಹಾಗೂ ಬ್ರಹ್ಮದ ಚಿಂತನೆಯ ಮೂಲಕ ಕೇವಲ ನಾಲ್ಕನೇ ಹಾಗೂ ಕೊನೆಯ ಆಶ್ರಮವಾದ ಮೋಕ್ಷವನ್ನು ಸಾಧಿಸುವುದಕ್ಕೆ ಸಮರ್ಪಿತವಾಗಿರುತ್ತಾನೆ.