ಆಶ್ರಮ (ವ್ಯವಸ್ಥೆ)

ಪೂರ್ವ ಕಾಲದ ಭಾರತ ನಾಡಿನ ಮನುಷ್ಯರ ಹಂತಗಳು

ಹಿಂದೂ ಧರ್ಮದಲ್ಲಿ ಆಶ್ರಮವು ಮನು ಸ್ಮೃತಿ ಮತ್ತು ನಂತರದ ಶಾಸ್ತ್ರೀಯ ಸಂಸ್ಕೃತ ಪಠ್ಯಗಳಲ್ಲಿ ಪ್ರಕಟಗೊಳಿಸಿದಂತೆ ವಯಸ್ಸು ಆಧಾರಿತ ಸಾಮಾಜಿಕ ವ್ಯವಸ್ಥೆಯಲ್ಲಿ ನಾಲ್ಕು ಹಂತಗಳ ಪೈಕಿ ಒಂದು. ಆಶ್ರಮ ವ್ಯವಸ್ಥೆಯ ಅಡಿಯಲ್ಲಿ ಮಾನವ ಜೀವನವನ್ನು ನಾಲ್ಕು ಅವಧಿಗಳಲ್ಲಿ ವಿಭಜಿಸಲಾಗುತ್ತದೆ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸಂನ್ಯಾಸ. ಜೀವನದ ನಾಲ್ಕು ಸತತ ಹಂತಗಳಲ್ಲಿ ಪ್ರತಿ ಹಂತದ ಆದರ್ಶ ಈಡೇರಿಕೆ ಪ್ರತಿಆಶ್ರಮದ ಬಗ್ಗೆ ಹಿಂದೂ ಧರ್ಮದ ಹಳೆಯ ಗ್ರಂಥಗಳಲ್ಲಿ ಚರ್ಚಿಸಲಾಗಿದೆ.ವಯಸ್ಸನ್ನು ಆಧರಿಸಿ ಜೀವನವನ್ನು ನಾಲ್ಕು ಹಂತಗಳಾಗಿ ವಿಂಗಡಿಸಲಾಗಿದೆ.ಬ್ರಹ್ಮಚರ್ಯೆ,ಗೃಹಸ್ಥ,ವನಪ್ರಸ್ಥ ಮತ್ತು ಸನ್ಯಾಸ.ಪ್ರತಿ ಅವಧಿಯ ಗುರಿ ವೈಯಕ್ತಿಕ ಅಭಿವೃಧ್ಧಿಯಾಗಿರುತ್ತದೆ.ಬ್ರಹ್ಮಚರ್ಯ- ಇದು ಜೀವನದ ವಿಧ್ಯಾರ್ಥಿ ಹಂತವನ್ನು ಪ್ರತಿನಿಧಿಸುತ್ತದೆ.ಇಲ್ಲಿ ಮನೋನಿಗ್ರಹ ಮತ್ತು ಗುರುಧರ್ಮದ ಬಗ್ಗೆ ಭೋಧಿಸಲಾಗುತ್ತದೆ. ಗೃಹಸ್ಥ- ಈ ಹಂತವು ಮಕ್ಕಳ ಶಿಕ್ಷಣ ಮತ್ತು ಕುಟುಂಬದ ಮುಖ್ಯ ಕರ್ತವ್ಯಗಳ ಬಗ್ಗೆ ಕೇಂದ್ರಿಕ್ರತ ವಾಗಿದೆ.ವನಪ್ರಸ್ಥ- ಇಲ್ಲಿ ನಿವೃತ್ತಿ ಹಂತ,ಮುಂದಿನ ಪೀಳಿಗೆಗೆ ಜವಾಬ್ದಾರಿಗಳನ್ನು ಹಸ್ತಾಂತರಿಸಲಾಗುತ್ತದೆ.ಈ ಹಂತದಲ್ಲಿ ಕಾಲಕ್ರಮೇಣ ಜಗತ್ತಿನಿಂದ ವಿಮುಖನಾಗುತ್ತಾರೆ. ಸನ್ಯಾಸ- ಈ ಹಂತದಲ್ಲಿ ಎಲ್ಲಾ ಆಸೆಗಳನ್ನು ಬಿಟ್ಟು ಮೋಕ್ಷ,ಶಾಂತಿಯುತವಾದ ಜೀವನ ಮತ್ತು ಆಧ್ಯಾತ್ಮಿಕತೆಯೆಡೆಗೆ ಮನಸ್ಸು ಹೊರಳುತ್ತದೆ. ಜೀವನದ ನಾಲ್ಕು ಆಶ್ರಮಗಳು ಧರ್ಮ,ಅರ್ಥ,ಕಾಮ ಮತ್ತು ಮೋಕ್ಷ ಎಂಬ ವೈಯಕ್ತಿಕ ಮತ್ತು ಸಾಮಾಜಿಕ ಪರಿಸರದ ರೂಪ.ಹಿಂದೂ ಧರ್ಮದ ಗ್ರಂಥಗಳ ಪ್ರಕಾರ ಒಬ್ಬ ಮನುಷ್ಯ ಈ ನಾಲ್ಕು ಹಂತಗಳನ್ನು ಯಶಸ್ವಿಯಾಗಿ ನಿಬಾಯಿಸಿದರೆ ಮಾತ್ರ ಆತನ ಜೀವನ ಸಾರ್ಥಕ. ಅವಧಿಯ ಗುರಿಯಾಗಿತ್ತು.

ಉಲ್ಲೇಖಗಳು

ಬದಲಾಯಿಸಿ