ಅರ್ಥ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು:

  • ಒಂದು ಸಂಸ್ಕೃತ ಪದವಾದ ಅರ್ಥ
  • ಒಬ್ಬ ಪ್ರೇಷಕನು ಸ್ವೀಕರಿಸುವವನೊಂದಿಗಿನ ಸಂವಹನದಲ್ಲಿ ತಿಳಿಸಲು ಉದ್ದೇಶಿಸುವ ಅಥವಾ ತಿಳಿಸುವ ಮಾಹಿತಿಯಾದ ಅರ್ಥ
  • ಸಂಪತ್ತಿನ ನಿರ್ವಹಣೆಯ ವಿಜ್ಞಾನವಾದ ಹಣಕಾಸು


ಭಾಷಾಶಾಸ್ತ್ರದಲ್ಲಿ, ಅರ್ಥ ಎಂದರೆ ಒಬ್ಬ ಪ್ರೇಷಕನು ಸ್ವೀಕರಿಸುವವನೊಂದಿಗಿನ ಸಂವಹನದಲ್ಲಿ ತಿಳಿಸಲು ಉದ್ದೇಶಿಸುವ ಅಥವಾ ತಿಳಿಸುವ ಮಾಹಿತಿ ಅಥವಾ ಪರಿಕಲ್ಪನೆಗಳು.

ದ್ವಂದ್ವಾರ್ಥತೆ ಎಂದರೆ ಏನನ್ನು ತಿಳಿಸಲಾಗುತ್ತಿದೆ ಎಂಬುದರ ಬಗ್ಗೆ ಗೊಂದಲ, ಏಕೆಂದರೆ ಪ್ರಸಕ್ತ ಸಂದರ್ಭವು ಅರ್ಥದ ಭಿನ್ನ ವ್ಯಾಖ್ಯಾನಗಳಿಗೆ ಕಾರಣವಾಗಬಹುದು. ಅನೇಕ ಭಾಷೆಗಳಲ್ಲಿ ಅನೇಕ ಶಬ್ದಗಳು ಬಹು ವ್ಯಾಖ್ಯಾನಗಳನ್ನು ಹೊಂದಿರಬಹುದು. ದ್ವಂದ್ವಾರ್ಥತೆಯು ಮಾಹಿತಿ ವಿನಿಮಯದ ವಿಷಯದಲ್ಲಿ ಗುರುತಿನ ನಿಯಮದ ಛಿದ್ರದ ಪರಿಣಾಮವಾಗಿದೆ. ವಿಶೇಷವಾಗಿ ಪ್ರೇಷಕನು ಭೌತಿಕವಾಗಿ ಅನುಪಸ್ಥಿತನಿರಬಹುದು, ಮತ್ತು ಸಂದರ್ಭಗಳು ಸ್ಪಷ್ಟವಾಗಿ ಭಿನ್ನವಿಭಿನ್ನವಾಗಿರಬಹುದು. ಉದಾಹರಣೆಗೆ ಸ್ವೀಕರಿಸುವವನು ಓದುಗನಾದಾಗ ಮತ್ತು ಪ್ರೇಷಕನು ಬರಹಗಾರನಾಗಿದ್ದಾಗ.

ವ್ಯಾವಹಾರಿಕ ಭಾಷಾಶಾಸ್ತ್ರವು ಸಂದರ್ಭವು ಅರ್ಥದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುವುದರ ಅಧ್ಯಯನ. ವ್ಯಾವಹಾರಿಕ ಭಾಷಾಶಾಸ್ತ್ರಕ್ಕೆ ಮುಖ್ಯವಾದ ಸಂದರ್ಭದ ಎರಡು ಪ್ರಾಥಮಿಕ ರೂಪಗಳೆಂದರೆ ಭಾಷಾ ಸಂದರ್ಭ ಮತ್ತು ಪರಿಸ್ಥಿತಿಯ ಸಂದರ್ಭ. ಭಾಷಾ ಸಂದರ್ಭವೆಂದರೆ ಉದ್ದೇಶ ಮತ್ತು ಊಹೆಗಳ ಮೇಲೆ ಅವಲಂಬಿಸದೆ ಅರ್ಥವನ್ನು ಹೇಗೆ ತಿಳಿದುಕೊಳ್ಳಲಾಗುತ್ತದೆ ಎಂಬುವುದು. ಅನ್ವಯಿಕ ವ್ಯಾವಹಾರಿಕ ಭಾಷಾಶಾಸ್ತ್ರದಲ್ಲಿ, ಉದಾಹರಣೆಗೆ, ಇಂದ್ರಿಯ ಪ್ರಚೋದನೆಯನ್ನು ಭಾಷೆ ಅಥವಾ ಸನ್ನೆಗಳಲ್ಲಿ ಸುಲಭವಾಗಿ ವ್ಯಕ್ತಗೊಳಿಸಲಾಗುವುದಿಲ್ಲವಾದರೂ, ಅರ್ಥವು ಇಂದ್ರಿಯಾನುಭವಗಳ ಮೂಲಕ ರೂಪಗೊಳ್ಳುತ್ತದೆ. ಅರ್ಥವು ಭಾಷೆ ಮತ್ತು ವಿಶ್ವಕ್ಕೆ ಸಂಬಂಧಿಸಿದಂತೆ ಏನಾದರೂ ಸಾಂದರ್ಭಿಕವಾದುದು, ಮತ್ತು ಇತರ ಅರ್ಥಗಳು ಮತ್ತು ವಿಶ್ವದ ಬಗ್ಗೆ ಏನಾದರೂ ಸಕ್ರಿಯವಾದುದು ಕೂಡ.

ಶಬ್ದಾರ್ಥಶಾಸ್ತ್ರವು ಸನ್ನೆಗಳು ಮತ್ತು ಭಾಷೆಗಳ ಮೂಲಕ ಅರ್ಥವನ್ನು ಹೇಗೆ ತಿಳಿಸಲಾಗುತ್ತದೆ ಎಂಬುದರ ಅಧ್ಯಯನ. ಉದಾಹರಣೆಗಳೆಂದರೆ ಮುಖಭಾವಗಳು, ಆಂಗಿಕ ಅಭಿವ್ಯಕ್ತಿ, ಮತ್ತು ಧ್ವನಿಗಳು ಅರ್ಥದ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂದು, ಮತ್ತು ಶಬ್ದಗಳು, ಪದಗುಚ್ಛಗಳು, ವಾಕ್ಯಗಳು, ಮತ್ತು ವಿರಾಮ ಚಿಹ್ನೆಗಳು ಹೇಗೆ ಅರ್ಥಕ್ಕೆ ಸಂಬಂಧಿಸಿವೆ ಎಂದು ತಿಳಿದುಕೊಳ್ಳುವುದು. ಶಬ್ದಾರ್ಥಶಾಸ್ತ್ರ ವಿವಿಧ ಉಪಗುಂಪುಗಳನ್ನು ಭಾಷಾಶಾಸ್ತ್ರ, ತರ್ಕಶಾಸ್ತ್ರ ಮತ್ತು ಕಂಪ್ಯೂಟಿಂಗ್ ಕ್ಷೇತ್ರಗಳಲ್ಲಿ ಅಧ್ಯಯನಿಸಲಾಗುತ್ತದೆ.

ಬಳಸಲಾದ ನಿರ್ದಿಷ್ಟ ಶಬ್ದಗಳು ಓದುಗ ಅಥವಾ ಕೇಳುಗನಿಗೆ ತಿಳಿದಿರದಿದ್ದರೂ ಭಾಷೆಗಳು ನಿರ್ದಿಷ್ಟ ಮಾಹಿತಿಯನ್ನು ತಿಳಿಯಪಡಿಸಲು ಅನುಮತಿಸುತ್ತವೆ. ಜನರು ಶಬ್ದಗಳನ್ನು ಅರ್ಥಗಳೊಂದಿಗೆ ಸಂಬಂಧಿಸುತ್ತಾರೆ ಮತ್ತು ಪರಿಕಲ್ಪನೆಗಳನ್ನು ಸೂಚಿಸಲು ಶಬ್ದಗಳನ್ನು ಬಳಸುತ್ತಾರೆ. ಒಬ್ಬ ವ್ಯಕ್ತಿಯ ಉದ್ದೇಶಗಳು ಏನನ್ನು ತಿಳಿಸಲಾಗುತ್ತಿದೆ ಎಂಬುದರ ಮೇಲೆ ಪ್ರಭಾವ ಬೀರುತ್ತವೆ.

"https://kn.wikipedia.org/w/index.php?title=ಅರ್ಥ&oldid=1244024" ಇಂದ ಪಡೆಯಲ್ಪಟ್ಟಿದೆ