ಅರ್ಥ (ಭಾಷಾಶಾಸ್ತ್ರ)

ಭಾಷಾಶಾಸ್ತ್ರದಲ್ಲಿ, ಅರ್ಥ ಎಂದರೆ ಒಬ್ಬ ಪ್ರೇಷಕನು ಸ್ವೀಕರಿಸುವವನೊಂದಿಗಿನ ಸಂವಹನದಲ್ಲಿ ತಿಳಿಸಲು ಉದ್ದೇಶಿಸುವ ಅಥವಾ ತಿಳಿಸುವ ಮಾಹಿತಿ ಅಥವಾ ಪರಿಕಲ್ಪನೆಗಳು.[]

ದ್ವಂದ್ವಾರ್ಥತೆ ಎಂದರೆ ಏನನ್ನು ತಿಳಿಸಲಾಗುತ್ತಿದೆ ಎಂಬುದರ ಬಗ್ಗೆ ಗೊಂದಲ, ಏಕೆಂದರೆ ಪ್ರಸಕ್ತ ಸಂದರ್ಭವು ಅರ್ಥದ ಭಿನ್ನ ವ್ಯಾಖ್ಯಾನಗಳಿಗೆ ಕಾರಣವಾಗಬಹುದು. ಅನೇಕ ಭಾಷೆಗಳಲ್ಲಿ ಅನೇಕ ಶಬ್ದಗಳು ಬಹು ವ್ಯಾಖ್ಯಾನಗಳನ್ನು ಹೊಂದಿರಬಹುದು. ದ್ವಂದ್ವಾರ್ಥತೆಯು ಮಾಹಿತಿ ವಿನಿಮಯದ ವಿಷಯದಲ್ಲಿ ಗುರುತಿನ ನಿಯಮದ ಛಿದ್ರದ ಪರಿಣಾಮವಾಗಿದೆ. ವಿಶೇಷವಾಗಿ ಪ್ರೇಕ್ಷಕನು ಭೌತಿಕವಾಗಿ ಅನುಪಸ್ಥಿತನಿರಬಹುದು, ಮತ್ತು ಸಂದರ್ಭಗಳು ಸ್ಪಷ್ಟವಾಗಿ ಭಿನ್ನವಿಭಿನ್ನವಾಗಿರಬಹುದು. ಉದಾಹರಣೆಗೆ ಸ್ವೀಕರಿಸುವವನು ಓದುಗನಾದಾಗ ಮತ್ತು ಪ್ರೇಷಕನು ಬರಹಗಾರನಾಗಿದ್ದಾಗ.

ವ್ಯಾವಹಾರಿಕ ಭಾಷಾಶಾಸ್ತ್ರವು ಸಂದರ್ಭವು ಅರ್ಥದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುವುದರ ಅಧ್ಯಯನ. ವ್ಯಾವಹಾರಿಕ ಭಾಷಾಶಾಸ್ತ್ರಕ್ಕೆ ಮುಖ್ಯವಾದ ಸಂದರ್ಭದ ಎರಡು ಪ್ರಾಥಮಿಕ ರೂಪಗಳೆಂದರೆ ಭಾಷಾ ಸಂದರ್ಭ ಮತ್ತು ಪರಿಸ್ಥಿತಿಯ ಸಂದರ್ಭ. ಭಾಷಾ ಸಂದರ್ಭವೆಂದರೆ ಉದ್ದೇಶ ಮತ್ತು ಊಹೆಗಳ ಮೇಲೆ ಅವಲಂಬಿಸದೆ ಅರ್ಥವನ್ನು ಹೇಗೆ ತಿಳಿದುಕೊಳ್ಳಲಾಗುತ್ತದೆ ಎಂಬುವುದು. ಅನ್ವಯಿಕ ವ್ಯಾವಹಾರಿಕ ಭಾಷಾಶಾಸ್ತ್ರದಲ್ಲಿ, ಉದಾಹರಣೆಗೆ, ಇಂದ್ರಿಯ ಪ್ರಚೋದನೆಯನ್ನು ಭಾಷೆ ಅಥವಾ ಸನ್ನೆಗಳಲ್ಲಿ ಸುಲಭವಾಗಿ ವ್ಯಕ್ತಗೊಳಿಸಲಾಗುವುದಿಲ್ಲವಾದರೂ, ಅರ್ಥವು ಇಂದ್ರಿಯಾನುಭವಗಳ ಮೂಲಕ ರೂಪಗೊಳ್ಳುತ್ತದೆ. ಅರ್ಥವು ಭಾಷೆ ಮತ್ತು ವಿಶ್ವಕ್ಕೆ ಸಂಬಂಧಿಸಿದಂತೆ ಏನಾದರೂ ಸಾಂದರ್ಭಿಕವಾದುದು, ಮತ್ತು ಇತರ ಅರ್ಥಗಳು ಮತ್ತು ವಿಶ್ವದ ಬಗ್ಗೆ ಏನಾದರೂ ಸಕ್ರಿಯವಾದುದು ಕೂಡ.

ಶಬ್ದಾರ್ಥಶಾಸ್ತ್ರವು ಸನ್ನೆಗಳು ಮತ್ತು ಭಾಷೆಗಳ ಮೂಲಕ ಅರ್ಥವನ್ನು ಹೇಗೆ ತಿಳಿಸಲಾಗುತ್ತದೆ ಎಂಬುದರ ಅಧ್ಯಯನ. ಉದಾಹರಣೆಗಳೆಂದರೆ ಮುಖಭಾವಗಳು, ಆಂಗಿಕ ಅಭಿವ್ಯಕ್ತಿ, ಮತ್ತು ಧ್ವನಿಗಳು ಅರ್ಥದ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂದು, ಮತ್ತು ಶಬ್ದಗಳು, ಪದಗುಚ್ಛಗಳು, ವಾಕ್ಯಗಳು, ಮತ್ತು ವಿರಾಮ ಚಿಹ್ನೆಗಳು ಹೇಗೆ ಅರ್ಥಕ್ಕೆ ಸಂಬಂಧಿಸಿವೆ ಎಂದು ತಿಳಿದುಕೊಳ್ಳುವುದು. ಶಬ್ದಾರ್ಥಶಾಸ್ತ್ರ ವಿವಿಧ ಉಪಗುಂಪುಗಳನ್ನು ಭಾಷಾಶಾಸ್ತ್ರ, ತರ್ಕಶಾಸ್ತ್ರ ಮತ್ತು ಕಂಪ್ಯೂಟಿಂಗ್ ಕ್ಷೇತ್ರಗಳಲ್ಲಿ ಅಧ್ಯಯನಿಸಲಾಗುತ್ತದೆ.

ಬಳಸಲಾದ ನಿರ್ದಿಷ್ಟ ಶಬ್ದಗಳು ಓದುಗ ಅಥವಾ ಕೇಳುಗನಿಗೆ ತಿಳಿದಿರದಿದ್ದರೂ ಭಾಷೆಗಳು ನಿರ್ದಿಷ್ಟ ಮಾಹಿತಿಯನ್ನು ತಿಳಿಯಪಡಿಸಲು ಅನುಮತಿಸುತ್ತವೆ. ಜನರು ಶಬ್ದಗಳನ್ನು ಅರ್ಥಗಳೊಂದಿಗೆ ಸಂಬಂಧಿಸುತ್ತಾರೆ ಮತ್ತು ಪರಿಕಲ್ಪನೆಗಳನ್ನು ಸೂಚಿಸಲು ಶಬ್ದಗಳನ್ನು ಬಳಸುತ್ತಾರೆ. ಒಬ್ಬ ವ್ಯಕ್ತಿಯ ಉದ್ದೇಶಗಳು ಏನನ್ನು ತಿಳಿಸಲಾಗುತ್ತಿದೆ ಎಂಬುದರ ಮೇಲೆ ಪ್ರಭಾವ ಬೀರುತ್ತವೆ.

ಭಾಷೆಯಲ್ಲಿ ನಡೆಯುವ ಅರ್ಥ ಮತ್ತು ಧ್ವನಿ ಬದಲಾವಣೆಯಿಂದ ರೂಢಿಯಲ್ಲಿರುವ, ನಿತ್ಯ ಬಳಸುತ್ತಿರುವ ಅನೇಕ ಶಬ್ದಗಳು ಹೊಸ- ಹೊಸ ರೂಪ ಪಡೆದುಕೊಂಡು ಬಳಕೆಗೊಳ್ಳಬಹುದು, ಇಲ್ಲವೇ ಶಬ್ದಗಳಲ್ಲಿ ಕೆಲವು ವಿಕಾಸ, ಸಂಕೋಚ, ಉತ್ತಮ, ಹೀನ ಹಾಗೂ ಅನ್ಯ ಅರ್ಥದಲ್ಲಿ ವ್ಯತ್ಯಾಸವನ್ನು ಹೊಂದುವುದರ ಮೂಲಕ ಕನ್ನಡ ಭಾಷೆಯ ಶಬ್ದಗಳು ಕಾಲಕ್ರಮದಲ್ಲಿ ಬದಲಾಗುತ್ತಾ ಬಂದುದನ್ನು ಗುರುತಿಸುವೆವು. ಕನ್ನಡ ಭಾಷೆಯಲ್ಲಿ ಧ್ವನಿ ವ್ಯತ್ಯಾಸ ಹೊಂದಿದ ಕೆಲವು ಶಬ್ದಗಳನ್ನು ಉದಾಹರಿಸಬಹುದು.

ಉದಾ: ಮಲೈ > ಮಲೆ, ಎಷ್ಟು > ಏಟು, ಪಾಲು > ಹಾಲು, ಅಸಗ > ಅಗಸ, ಗರ್ದೆ > ಗದ್ದೆ, ಚಮ್ಮಟಿಗೆ > ಚಾಟಿ, ಚಂದ್ರ > ಚಂದಿರ, ಮಯಣ > ಮೇಣ, ಕಳ್ತೆ > ಕತ್ತೆ, ಶ್ರೇಣಿ > ಏಣಿ, ಸ್ನೇಹ > ನೇಹ, ಸ್ತಂಭ > ಕಂಬ, ಸ್ಥೂಲ > ತೊಲ, ಪಲ್ಲಿ > ಹಲ್ಲಿ, ಪಾವು > ಹಾವು, ಖಡ್ಗ > ಖಡುಗ, ಭಕ್ತಿ > ಭಕುತಿ, ಯುಕ್ತಿ > ಯುಕುತಿ, ಹರ್ಷ > ಹರುಷ, ಬ್ರಹ್ಮ > ಬರಮ, ಹಸಿರು > ಹಸುರು.

ಈ ಮೇಲಿನ ಶಬ್ದಗಳು ಉಚ್ಛಾರಗೊಳ್ಳುವಾಗ ಮಿತವ್ಯಯಾಸಕ್ತಿ, ಸೌಲಭ್ಯಾಕಾಂಕ್ಷೆ ಹಾಗೂ ಸಹಜ ಉಚ್ಚಾರಣಾ ಕಾರಣಗಳಿಂದಾಗಿ ಧ್ವನಿ ವ್ಯತ್ಯಾಸ ಹೊಂದಿರುವುದನ್ನು ಲಕ್ಷಿಸಿದೆವು. ಇಲ್ಲಿ ಶಬ್ದಗಳಲ್ಲಾದ ಧ್ವನಿವ್ಯತ್ಯಾಸ ಪ್ರಕ್ರಿಯೆಯು ಅರ್ಥವ್ಯತ್ಯಾಸಕ್ಕೆ ಎಡೆಮಾಡಿಕೊಡದೆ, ರೂಪವ್ಯತ್ಯಾಸಕ್ಕೆ ಮಾತ್ರ ಎಡೆಮಾಡಿಕೊಟ್ಟಿರುವುದನ್ನು ಗುರುತಿಸುವೆವು.

ಹಳಗನ್ನಡ ಸಂದರ್ಭದಲ್ಲಿ ಬಳಕೆಯಲ್ಲಿದ್ದ ‘ರ’ (ಹಳಗನ್ನಡ ‘ರ’) ಧ್ವನಿಯ ಸ್ಥಾನದಲ್ಲಿ ಮುಂದೆ ‘ರ’ ಧ್ವನಿಯು, ‘ವಿ’ ಸ್ಥಾನದಲ್ಲಿ ‘ಳ’ವು ನಡುಗನ್ನಡ ಕಾಲದಲ್ಲಿ ಉಚ್ಚಾರಗೊಳ್ಳತೊಡಗಿದ್ದನ್ನು ಗುರುತಿಸುವೆವು. ‘ ರ ಳ ’ (ಹಳಗನ್ನಡದಲ್ಲಿ)ಗಳು ಪ್ರಯೋಗಗೊಂಡ ಶಬ್ದಗಳ ಅರ್ಥಕ್ಕೂ ಅವುಗಳಿಗೆ ಪ್ರತಿಯಾಗಿ ಅನಂತರದಲ್ಲಿ ಉಚ್ಚಾರಣೆಗೊಂಡು ಬಳಕೆಗೊಳ್ಳುತ್ತ ಬಂದ ‘ರ ಳ’ ಯುಕ್ತ ಶಬ್ದಗಳು ಹೊಂದಿದ ಅರ್ಥಕ್ಕೂ ವ್ಯತ್ಯಾಸವಿರುವುದನ್ನು ಕಾಣುವೆವು. ಇದಕ್ಕೆ ಇಲ್ಲಿ ಕೆಲ ಯದಾಹರಣೆಗಳನ್ನು ನೋಡಬಹುದು.

ಉದಾ: ಅಳೆ(ಹಗ)- ಕಲ್ಲು, ಅರೆ- ಅರೆ

ಬಾಳೆ(ಹಗ)- ಬಾಳೆ ಹಣ್ಣು, ಬಾಳೆ- ಮೀನು

ಮುಂದೆ ಬರಬರುತ್ತಾ ನಡುಗನ್ನಡ ಸಂಧರ್ಭದಲ್ಲಿ ‘ರ ಳ’ (ಹಗ) ಅಕ್ಷರಗಳ ಬಳಕೆಯು ನಿಂತು ಹೋದುದನ್ನು ಗುರುತಿಸುವೆವು.

ಉಲ್ಲೇಖಗಳು

ಬದಲಾಯಿಸಿ
  1. Nick Sanchez. "Communication Process". New Jersey Institute of Technology. Retrieved January 14, 2012.