ಭಾಷಾ ವಿಜ್ಞಾನ

(ಭಾಷಾಶಾಸ್ತ್ರ ಇಂದ ಪುನರ್ನಿರ್ದೇಶಿತ)

ಭಾಷೆ ಎನ್ನುವುದು ಮನುಕುಲಕ್ಕೆ ಮಾತ್ರ ಸೀಮಿತವಾದದ್ದು. ಭೂಮಿಯ ಮೇಲಿನ ಪ್ರತಿಯೊಂದು ಪ್ರಾಣಿ, ಪಕ್ಷಿಯು ಶಬ್ದೋತ್ಪಾದನೆ ಮಾಡುತ್ತದೆ. ಇದನ್ನು ಸಂವಹನ ಎಂದೂ ಕರೆಯಬಹುದು. ಉದಾಹರಣೆಗೆ ನಾಯಿ ಬೊಗಳುತ್ತದೆ, ಹುಲಿ ಘರ್ಜಿಸುತ್ತದೆ, ಆನೆ ಘೀಳಿಡುತ್ತದೆ. ಇಲ್ಲಿ ಶಬ್ದೋತ್ಪಾದನೆ ಆಗುತ್ತದೆ. ಆದರೆ ಇದನ್ನು ಭಾಷೆ ಎನ್ನಲಾಗುವುದಿಲ್ಲ. ಏಕೆಂದರೆ, ಒಂದು ವರ್ಗಕ್ಕೆ ಸೇರಿದ ಎಲ್ಲಾ ಪ್ರಾಣಿಗಳ ಶಬ್ದೋತ್ಪಾದನೆ ಒಂದೇ ತರವಾಗಿರುತ್ತದೆ. ಉದಾಹರಣೆಗೆ, ನಾಯಿ ಬೊಗಳುವಾಗ ಅದು ತನ್ನ ಯಜಮಾನನನ್ನು ಕಂಡರೂ ಅಥವಾ ಕಳ್ಳರನ್ನು ಕಂಡರೂ ಬೊಗಳಿಕೆಯಲ್ಲಿ ವ್ಯತ್ಯಾಸವಿರುವುದಿಲ್ಲ. ಆದರೆ ಮನುಷ್ಯ ಉತ್ಪಾದಿಸುವ ಪ್ರತಿಯೊಂದು ಶಬ್ದಕ್ಕೂ ಅರ್ಥವಿದೆ. ಹೀಗೆ ಉತ್ಪಾದಿಸಲ್ಪಡುವ ಶಬ್ದವೇ ಒಂದು ಭಾಷೆ ಎನ್ನಬಹುದು. ಭಾಷೆಯು ಪದಗಳಿಂದ ಕೂಡಿರುತ್ತದೆ. ಪದಗಳು ಶಬ್ದಗಳಿಂದ ಕೂಡಿರುತ್ತದೆ. ಶಬ್ದಗಳನ್ನು ಸಂಕೇತಗಳಿಂದ, ಸೂಚನೆಗಳಿಂದ ಗುರುತಿಸಬಹುದು. ಇಂತಹ ಕ್ರಿಯೆಯನ್ನು ಭಾಷಾ ವಿಜ್ಞಾನ ಸಂಶೋಧನೆಯಲ್ಲಿ ಕೈಗೊಂಡ ಪ್ರಕ್ರಿಯೆ ಎನ್ನಬಹುದು. ಭಾಷಾ ವಿಜ್ಞಾನದ ಚಿನ್ಹೆಗಳು ಮತ್ತು ಸೂಚನೆಗಳನ್ನು ಪ್ರೈಮರಿ ವೋಕಲ್ ಸಿಂಬಲ್ಸ್ (ಬಾಯಿಂದ ಉಚ್ಛರಿಸಿದ) ಎನ್ನುತ್ತೇವೆ. ಇವು ಮನುಷ್ಯನ (ವೋಕಲ್ ಆರ್ಗನ್ಸ್ ) ಬಾಯಿಯಿಂದ ಉತ್ಪತ್ತಿಯಾಗುತ್ತದೆ. ಈ ಸಂದರ್ಭದಲ್ಲಿ ಒಂದು ಭಾಷೆ ಎನ್ನುವುದು ಪ್ರಾಥಮಿಕವಾಗಿ ಮಾತನಾಡುವುದು ಮತ್ತು ಬರೆಯುವುದು ಅನಂತರದ್ದು ಎಂದು ಅರ್ಥಮಾಡಿಕೊಳ್ಳಬೇಕಾಗಿದೆ. ಇದಕ್ಕೆ ಈ ಕೆಳಗಿನ ಕಾರಣಗಳು ಸ್ಪಷ್ಟೀಕರಣ ನೀಡುತ್ತವೆ. ಪ್ರತಿಯೊಂದು ಸಾಮಾನ್ಯ ಮಗು ಯಾವುದಾದರೂ ಒಂದು ಭಾಷೆಯನ್ನು ಮಾತನಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ನಂತರದ ದಿನಗಳಲ್ಲಿ ಆ ಮಗು ಆ ಭಾಷೆಯನ್ನು ಬರೆಯಲು ಕಲಿಯಬಹುದು ಅಥವಾ ಕಲಿಯದೇ ಇರಬಹುದು. ಜಗತ್ತಿನಲ್ಲಿ ಎಷ್ಟೋ ಭಾಷೆಗಳಿಗೆ ಲಿಪಿಯೇ ಇರುವುದಿಲ್ಲ. ಅವು ಬಾಯಿಂದ ಬಾಯಿಗೆ ಹರಡುತ್ತಲೇ ಬಳಕೆಯಾಗುತ್ತದೆ. ಉದಾಹರಣೆಗೆ ತುಳು ಭಾಷೆ, ಕೊಂಕಣಿ ಭಾಷೆ ಇತ್ಯಾದಿ. ಪ್ರಪಂಚದ ಎಲ್ಲಾ ರಾಷ್ಟ್ರಗಳಲ್ಲಿ ವಾಸಿಸುವ ಜನ ತಮ್ಮ ಪ್ರದೇಶಕ್ಕನುಗುಣವಾಗಿ ತಮ್ಮ ಪೂರ್ವಿಕರು ಆಡಿಕೊಂಡು ಬಂದ ಒಂದೊಂದು ಭಾಷೆ ಇದೆ. ಈ ಎಲ್ಲಾ ಭಾಷೆಗಳ ಮೂಲ ಶಬ್ದೋತ್ಪಾದನೆಯೇ ಆದರೂ, ಸ್ವರಗಳ, ಅಕ್ಷರಗಳ ಹಾಗೂ ಶಬ್ದಗಳ ವ್ಯತ್ಯಾಸದಿಂದಾಗಿ ಅನೇಕ ಭಾಷೆಗಳಾಗಿ ಮಾರ್ಪಟ್ಟಿವೆ. ಭಾಷೆಯ ವೈಜ್ಞಾನಿಕ ಅಧ್ಯಯನವೇ ಭಾಷಾ ಶಾಸ್ತ್ರ. ಇದರಲ್ಲಿ ಅಧ್ಯಯನಕ್ಕೆ ಸಂಬಂಧಪಟ್ಟಂತೆ, ಭಾಷೆಯ ರೀತಿ, ಭಾಷೆಯ ಅರ್ಥ ಮತ್ತು ಭಾಷೆಯ ಸಂದರ್ಭಗಳೆಂಬ ಮೂರು ಅಂಶಗಳಿವೆ. ಕ್ರಿ.ಪೂ.೫೦೦ ರಲ್ಲಿ ಪಾಣಿನಿಯು ಸಂಸ್ಕ್ರುತದಲ್ಲಿ ರಚಿಸಿದ 'ಅಷ್ಟಾಧ್ಯಾಯ' ಎಂಬ ಕೃತಿಯು ಭಾಷಾ ವಿವರಣೆಯ ಬಗ್ಗೆ ಮಾಡಿದ ಪ್ರಥಮ ಪ್ರಯತ್ನ ಎನ್ನಬಹುದು. ಭಾಷೆಯು ಶಬ್ದ ಮತ್ತು ಅರ್ಥಗಳ ನಡುವಿನ ಆಟ ಎಂದು ಅರ್ಥಮಾಡಿಕೊಳ್ಳಬಹುದು. ಭಾಷಾ ದ್ವನಿಯನ್ನು ಅಧ್ಯಯನ ಮಾಡುವ ವಿಧಾನಕ್ಕೆ " ಸ್ವರಶಾಸ್ತ್ರ " ಅಥವಾ ಭಾಷಾ ದ್ವನಿ ಶಾಸ್ತ್ರ ಎನ್ನುತ್ತೇವೆ. ಇದು ಉಚ್ಛರಿಸಲ್ಪಡುವ ಮತ್ತು ಉಚ್ಛರಿಸಲಾಗದ ಶಬ್ದಗಳು ಮತ್ತು ಅವುಗಳು ಹೇಗೆ ಉತ್ಪತ್ತಿಯಾಗುತ್ತವೆ ಮತ್ತು ಹೇಗೆ ಗ್ರಹಿಸಲ್ಪಡುತ್ತವೆ ಎಂಬುದನ್ನು ಒಳಗೊಂಡಿರುತ್ತದೆ. ಇನ್ನೊಂದು ಅರ್ಥದಲ್ಲಿ, ಭಾಷಾಧ್ಯಯನದ ಅರ್ಥವು, ಒಂದು ಭಾಷೆಯು ತಾರ್ಕಿಕ ಮತ್ತು ನಿಜ ಪ್ರಪಂಚದಲ್ಲಿ ಹೇಗೆ ಅರ್ಥವನ್ನು ತಿಳಿಸುತ್ತದೆ ಮತ್ತು ಹೇಗೆ ಸಂಧಿಗ್ದಾರ್ಥವನ್ನು ಪರಿಹರಿಸುತ್ತದೆ ಎಂಬುದಾಗಿದೆ. ಪದ ಮತ್ತು ವಿಷಯದಿಂದ ಹೇಗೆ ಅರ್ಥ ಬರುತ್ತವೆಂಬುದನ್ನು "ಸೆಮ್ಯಾಂಟಿಕ್ಸ್ ಎಂದು ಮತ್ತು ಸಂದರ್ಭದಿಂದ ಹೇಗೆ ಅರ್ಥ ಬರುತ್ತದೆ ಎನ್ನುವುದನ್ನು " ಪ್ರಾಗ್ಮ್ಯಾಟಿಕ್ಸ್ " ಎಂದೂ ಕರೆಯಲ್ಪಡುವ ಅಂಶಗಳನ್ನು ಒಳಗೊಂಡಿರುತ್ತದೆ. ಒಂದು ಭಾಷೆಯನ್ನು ಅಧ್ಯಯನ ಮಾಡಲು ಅದರದೇ ಆದಂತಹ ನಿಯಮಗಳಿವೆ. ಅದನ್ನು ವ್ಯಾಕರಣ (ಗ್ರಾಮರ್) ಎನ್ನುತ್ತೇವೆ. ಇದು ಒಂದು ಭಾಷೆಯನ್ನಾಡುವ ಸಮುದಾಯದ ಜನರಿಗೆ ಸಂಬಂಧಿಸಿದ್ದು . ವ್ಯಾಕರಣವು ಶಬ್ದ ಮತ್ತು ಅರ್ಥದಿಂದ ಪ್ರಭಾವಿತವಾಗುತ್ತದೆ ಮತ್ತು ಮಾರ್ಫಾಲಜಿ (ಪದಗಳ ರಚನೆ ಮತ್ತು ಸಂಯೋಜನೆ), ಸಿಂಟ್ಯಾಕ್ಸ್ (ಪದ ಪುಂಜಗಳ ರಚನೆ ಮತ್ತು ಸಂಯೋಜನೆ) ಹಾಗೂ ಫೊನಾಲಜಿ (ಶಬ್ದ ಪದ್ದತಿ) ಇವುಗಳನ್ನು ಒಳಗೊಂಡಿರುತ್ತದೆ. ಭಾಷಾ ಸಮೂಹಗಳ ಮತ್ತು ದೊಡ್ಡ ವಾಕ್ಯಗಳ ಮುಖಾಂತರ ಒಂದು ಪಠ್ಯವನ್ನು ಭಷಾ ಗುಣಲಕ್ಷಣಗಳಾಗಿ ಮತ್ತು ವಿಶೇಷ ರೀತಿಯ ಲಿಖಿತ ಮತ್ತು ಅಲಿಖಿತ ಸಂಭಾಷಣೆಗಳಾಗಬಹುದಾದ ಸಾಧ್ಯತೆಯನ್ನು ವಿಶ್ಲೇಷಿಸಬಹುದು.

ಸಾಮಾಜಿಕ ಭಾಷಾ ಮತ್ತು ಆಡುನುಡಿಯ ಒಡಲೇ ಸಾಂಸ್ಕ್ರುತಿಕ ಸಂಭಾಷಣೆಗಳಾಗಿರುತ್ತವೆ. ಅವು ಭಾಷಾ ಏರಿಳಿತಗಳು ಮತ್ತು ಸಾಮಾಜಿಕ ರಚನೆಗಳ ಸಂಬಂಧಗಳ ಕಡೆ ನೋಡುತ್ತವೆ. ಅವು ಪಠ್ಯ ಮತ್ತು ಸಂಭಾಷಣೆಗಳನ್ನೊಳಗೊಂಡ ಸಂಭಾಷಣೆಗಳ ವಿಶ್ಲೇಷಣೆಗಳಾಗಿರುತ್ತದೆ. ಇತಿಹಾಸ ಮತ್ತು ವಿಕಸಿತ ಭಾಷಾ ಶಾಸ್ತ್ರದ ಮುಖಾಂತರ ಭಾಷೆಯ ಮೇಲಿನ ಸಂಶೋಧನೆ ಹೇಗೆ ಭಾಷೆಗಳು ಬದಲಾಗುತ್ತವೆ, ಭಾಷೆಗಳ ಉಗಮ ಮತ್ತು ಬೆಳವಣಿಗೆ ಮುಂದುವರಿದ ಕಾಲ ಘಟ್ಟದಲ್ಲಿ ಹೇಗೆ ಬದಲಾಗುತ್ತವೆ ಎಂಬುದನ್ನು ತಿಳಿಸುತ್ತದೆ.

೨೦ ನೇ ಶತಮಾನದಲ್ಲಿ, ಫರ್ಡಿನಂಡ್ ಡಿ ಸಸ್ಯೂರ್ ಎಂಬುವವನು ಭಾಷೆ ಸ್ಟ್ರಕ್ಚರಲ್ ಲಿಂಗ್ವಿಸ್ಟಿಕ್ಸ್ ನ ರಚನೆಯಲ್ಲಿ ಲಾಂಗ್ಯೂ ಮತ್ತು ಪೆರೋಲ್ ಗಳ ನಡುವಿನ ವ್ಯತ್ಯಾಸವನ್ನು ಬರೆದಿದ್ದಾನೆ. ಅವನ ಪ್ರಕಾರ, ಪೆರೋಲ್ ಎನ್ನುವುದು ನಿರ್ದಿಷ್ಟ ಮಾತು, ಉಚ್ಛಾರಣೆ, ಹಾಗೆಯೇ ಇದು ಭಾಷೆಯನ್ನು ಒಳಗೊಂಡ ಕಲ್ಪನೆಗಳ ತತ್ವ ಮತ್ತು ರೀತಿಗೆ ಸಂಬಂಧಿಸಿದ ನಿಯಮಗಳ ಅಮೂರ್ತ ಚಮತ್ಕಾರವಾಗಿದೆ. ಶಾಸ್ತ್ರೀಯ, ಭಾರತೀಯ ತತ್ವಶಾಸ್ತ್ರ ಭಾಷೆಯಲ್ಲಿ, ಪತಂಜಲಿಯು ಶಬ್ದದ ರಚನೆಯಲ್ಲಿ " ಸ್ಪೋಟ " ಮತ್ತು " ದ್ವನಿ " ಇವುಗಳ ನಡುವಿನ ವ್ಯತ್ಯಾಸವನ್ನು ಗುರುತಿಸಿದ್ದಾನೆ. ಅದರ ನಿಜವಾದ ಅರ್ಥ " ಉಚ್ಛರಿಸಿದ ಪದ ".

ಕಾತ್ಯಾಯನನೆಂಬ ಇನ್ನೊಬ್ಬ ಭಾರತೀಯ ತತ್ವಜ್ಞಾನಿಯು ಶಬ್ದ ಮತ್ತು ಅರ್ಥಗಳ ನಡುವಿನ ವ್ಯತ್ಯಾಸವನ್ನು ಗುರುತಿಸಿದ್ದಾನೆ. ಆಧುನಿಕ ಯುಗದಲ್ಲಿ ನಾಮ್ ಚಾಂಸ್ಕಿ ಯು " ನೋಶನ್ಸ್ ಆಫ್ ಕಾಂಪಿಟೆನ್ಸ್ " ಅಂಡ್ ಪರ್ ಫಾರ್ಮೆನ್ಸ್ (ಶಕ್ತಿಯುತ ಕಲ್ಪನೆಗಳು ಮತ್ತು ಕಾರ್ಯ) ಇವುಗಳ ನಡುವಿನ ವ್ಯತ್ಯಾಸವನ್ನು ಗುರುತಿಸಿದ್ದಾನೆ. ಇಲ್ಲಿ ಕಾಂಪಿಟೆನ್ಸ್ (ಕ್ಷಮತೆ) ಯು ಭಾಷೆಯಲ್ಲಿ ಪಡೆದ ಸಾಮರ್ಥ್ಯ ಹಾಗೂ ಕಾರ್ಯ ನಿರ್ವಹಣೆ ಹಾಗೆಯೇ ಕಾರ್ಯ ನಿರ್ವಹಣೆಯು ಬಳಸಿದ ನಿರ್ದಿಷ್ಠ ವಿಧಾನ. ಸಂಪ್ರದಾಯವಾಗಿ ಮಾತು ಅಥವಾ ಶಬ್ದವು ಭಾಷೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಜಾಕ್ವೆಸ್ ಡೆರಿಡಾ ತನ್ನ ೧೯೬೭ ರ " ಆಫ್ ಗ್ರಮಟೋಲಜಿ " ಎಂಬ ಪುಸ್ತಕದಲ್ಲಿ ಮಾತು ಮತ್ತು ಬರವಣಿಗೆಗಳ ಸಂಬಂಧದ ಬಗ್ಗೆ ತಿಳಿಸಿದ್ದಾನೆ ಹಾಗೂ ಲಿಖಿತ ಚಿನ್ಹೆಗಳು ಹೇಗೆ ತಂತಾನೆ ಪ್ರಮುಖವಾಗುತ್ತವೆ ಎಂಬುದರ ಮೇಲೆ ಬೆಳಕು ಚೆಲ್ಲಿದ್ದಾನೆ.

ಚಾಮ್ಸ್ಕಿಯಾ ಸಾಂಪ್ರದಾಯಿಕ ಭಾಷಾ ಅಧ್ಯಯನವು, ಆತನ ಥಿಯರಿ ಆಫ್ ಜನರೇಟಿವ್ ಲಿಂಗ್ವಿಸ್ಟಿಕ್ಸ್ ನಲ್ಲಿ ಸೂಚಿಸಿದಂತೆ, ಮನಶಾಸ್ತ್ರೀಯ ಭಾಷಾ ವಿಜ್ಞಾನ (ಸೈಕೋಲಿಂಗ್ವಿಸ್ಟೈಕ್ಸ್) ನರಸಂಬಂಧಿ ಭಾಷಾ ವಿಜ್ಞಾನ (ನ್ಯೂರೂಲಿಂಗ್ವಿಸ್ಟಿಕ್ಸ್) ಮತ್ತು ಭಾಷಾ ಪ್ರಭುತ್ವ (ಲ್ಯಾಂಗ್ವೇಜ್ ಅಕ್ವಿಶಿಷನ್) ಕ್ಷೇತ್ರಗಳಲ್ಲಿ ಸಂಶೋಧನೆಯ ಅಗತ್ಯವನ್ನು ಮನಗಾಣಿಸಲು ಪ್ರಯತ್ನಿಸುತ್ತದೆ. ಅಂದರೆ ಸೈಕೋಲಿಂಗ್ವಿಸ್ಟಿಕ್ಸ್ ಅಥವಾ ನರಸಂಬಂಧದ ಭಾಷಾ ವಿಜ್ಞಾನದಲ್ಲಿ ಮಾನವನ ಮನಸ್ಸಿನಲ್ಲಿ ಭಾಷೆಯ ಕ್ರಿಯೆ ಮತ್ತು ಪ್ರಾತಿನಿಧ್ಯ ಅಥವಾ ಮಂಡನೆಯ ಸ್ವರೂಪವನ್ನು ಅಧ್ಯಯನ ಮಾಡುವ ಅಗತ್ಯದ ಪ್ರತಿಪಾದನೆಯನ್ನು ಕುರಿತು ಹೇಳಿದರೆ, ನರಸಂಬಂಧಿತ ಭಾಷಾ ವಿಜ್ಞಾನದಲ್ಲಿ ಮಾನವನ ಮೆದುಳಿನಲ್ಲಿ ಭಾಷೆಯೊಂದರ ಸಂಸ್ಕ್ರರಣ ಪ್ರಕ್ರಿಯೆಯ ಬಗ್ಗೆ ಹಾಗೂ ಭಾಷೆಯೊಂದರ ಮೇಲೆ ಮಕ್ಕಳು ಮತ್ತು ವಯಸ್ಕರು ಹೇಗೆ ಕಲಿಕೆಯಲ್ಲಿ ಪ್ರಭುತ್ವ ಸಾಧಿಸುತ್ತಾರೆ ಎಂಬ ತನಿಖೆಯ ಅಗತ್ಯವನ್ನು ಕುರಿತು ಹೇಳುತ್ತಾರೆ. ೭೦ ಮತ್ತು ೮೦ ರ ದಶಕಗಳಲ್ಲಿ " ಕಾಗ್ನಿಟಿವ್ ಲಿಂಗ್ವಿಸ್ಟಿಕ್ಸ್ (ಕಾಗ್ನಿಟಿವ್ ಭಾಷಾ ವಿಜ್ಞಾನ) ದಂತಹ ಕ್ಷೇತ್ರದಲ್ಲಿ ಸಂಶೋಧನಾತ್ಮಕ ಬೆಳವಣಿಗೆಗಳು ಕಂಡು ಬಂದು ಜಾರ್ಜ್ ಲ್ಯಾಕಾಫ್ ರಂತಹ ಚಿಂತಕರಿಂದ ಸಂಶೋಧನಾತ್ಮಕ ಪ್ರಗತಿಯು ಏರುಗತಿ ಪಡೆದು, ಭಾಷೆಯೆಂದರೆ ಹಳೆಯ ವ್ಯಾಕರಣ ನಿಯಮಗಳು ಎಂಬುದರ ಬದಲಾಗಿ, ಭಾಷೆಯೊಂದು ವೈಚಾರಿಕ ಆಕೃತಿಯೆಂದ ಸೈದ್ದಾಂತಿಕ ತಿಳಿವು ಮುಂಚೂಣಿಗೆ ಬಂದ ಕಾಲಾವಧಿ ಅದು.

ಭಾಷೆಯು ಸಾಮಾಜಿಕ, ಐತಿಹಾಸಿದ ಮತ್ತು ರಾಜಕೀಯ ಅಂಶಗಳಿಂದ ಪ್ರಭಾವಿತವಾಗುತ್ತದೆ ಮತ್ತು ಭಾಷಾ ವಿಜ್ಞಾನವನ್ನು ಚಿನ್ಹೆಗಳ ಅಧ್ಯಯನಕ್ಕೆ ಅಳವಡಿಸಿಕೊಳ್ಳಲೂ ಬಹುದು. ಉದಾಹರಣೆಗೆ, ಚಿನ್ಹೆ ಮತ್ತು ವಸ್ತುಗಳ ಸಾಮಾನ್ಯ ಅಧ್ಯಯನವು ಭಾಷೆಯೊಳಗೂ ಮತ್ತು ಭಾಷೆಯ ಹೊರಗೂ ಇರಬಹುದು. ಸಾಹಿತ್ಯ ವಿಮರ್ಶಕರು ಸಾಹಿತ್ಯದಲ್ಲಿ ಭಾಷೆಯ ಉಪಯೋಗವನ್ನು ಅಧ್ಯಯನ ಮಾಡುತ್ತಾರೆ. ತರ್ಜಿಮೆಯು ಒಂದು ಭಾಷೆಯ ಪಠ್ಯವನ್ನು ಇನ್ನೊಂದು ಭಾಷೆಗೆ ವರ್ಗಾಯಿಸುವುದಾಗಿದೆ. ರೂಢಿಭಾಷಾ ಶಾಸ್ತ್ರಜ್ಞನರು ತತ್ಸಂಬಂಧಿ ಸಾಧನೆಗಳ ಉಪಯೋಗದ ಮುಖಾಂತರ ದ್ವನಿಶಾಸ್ತ್ರದ ಮಟ್ಟದಲ್ಲಿ ಸಂಪರ್ಕ ಭಾಷೆಯ ಅಸಹಜತೆಗಳನ್ನು ನಿವಾರಿಸಲು ಪ್ರಯತ್ನಿಸುತ್ತಾರೆ. ಭಾಷೆಗೆ ಸಂಬಂಧಿಸಿದ ಕಾಗದ ಪತ್ರಗಳು ಮಾನವ ಶಾಸ್ತ್ರೀಯ ಪ್ರಶ್ನೆ ಮತ್ತು ಭಾಷಾ ವಿಜ್ಞಾನದ ಪ್ರಶ್ನೆಯನ್ನೊಳಗೊಂಡು ಭಾಷೆ ಮತ್ತು ಆ ಭಾಷೆಯ ವ್ಯಾಕರಣವನ್ನು ಕುರಿತು ಅಭ್ಯಸಿಸುವುದು. ಶಬ್ದಕೋಶ ರಚನಾಕಾರರು ಭೂಪಟದಲ್ಲಿ ಬಳಸುವ ಶಬ್ದಗಳನ್ನು , ಶಬ್ದಕೋಶಗಳನ್ನು ವಿಶ್ವಕೋಶವನ್ನು ಬರೆಯಲು ಬಳಸುವ ಶಬ್ದಗಳನ್ನು ಮತ್ತು ಪ್ರಕಾಶನಕ್ಕೆ ಸರಬರಾಜು ಮಾಡುವ ಶೈಕ್ಷಣಿಕ ವಿಚಾರಗಳನ್ನು ತಿದ್ದುಪಡಿ ಮಾಡಲು ಭಾಷೆಯಲ್ಲಿ ಬಳಸುತ್ತಾರೆ. ಇಂತಹ ಅತ್ಯಾಧುನಿಕ ತಂತ್ರಜ್ಞಾನ ಕಾಲದಲ್ಲಿ ಭಾಷಾ ವಿಜ್ಞಾನಿಗಳು, ತರ್ಜಿಮೆದಾರರು ಮತ್ತು ಭೂಪಟ ರಚನಾಕಾರರು ಹೊಸ ತಂತ್ರಾಂಶಗಳನ್ನು ಸೃಷ್ಟಿಸಿ, ಗಣಕಯಂತ್ರದ ಭಾಷೆಯ ಮೂಲಕ ಕಾರ್ಯ ನಿರ್ವಹಿಸಲು ಅನುವು ಮಾಡಿಕೊಡುತ್ತಾರೆ. ಅವರು ಅನೇಕ ವೆಬ್ ಸೈಟ್ ಗಳನ್ನು ಸೃಷ್ಟಿಸಿ, ಮೊಬೈಲ್ ಮತ್ತು ಡೆಸ್ಕ್ ಟಾಪ್ ಗಳ ಮೇಲೆ ಕಾರ್ಯ ನಿರ್ವಹಿಸುತ್ತಾರೆ ಹಾಗಾಗಿ ಯಂತ್ರಾಧಾರಿತ ತರ್ಜಿಮೆಗಳನ್ನು ಅನೇಕ ಸಾಮಾಜಿಕ ಕರ್ತವ್ಯಗಳನ್ನು ನಿರ್ವಹಿಸಲಾಗುತ್ತದೆ. ಒಂದು ಭಾಷೆಯ ಜ್ಞಾನವನ್ನು ದ್ವಿತೀಯ ಅಥವಾ ವಿದೇಶಿ ಭಾಷೆಯನ್ನು ಕಲಿಸಲು ಬಳಸಬಹುದು. ಭಾಷೆಗಳನ್ನು ಪರೀಕ್ಷಿಸಲು ಮತ್ತು ಕೃತಕತೆಯನ್ನು ತರಲು, ಭಾಷಾ ಸಮುದಾಯಗಳು ಒಂದು ಸಾರ್ವತ್ರಿಕ ಕಲ್ಪನಾ ಭಾಷೆಯನ್ನು ತರಲು ಇತ್ತೀಚಿನ ವರ್ಷಗಳಲ್ಲಿ ಭಾಷಾ ವಿಜ್ಞಾನಿಗಳು ಸಂಶೋಧನಾ ಪ್ರಯೋಗಗಳನ್ನು ನಡೆಸುತ್ತಿರುವಂತೆ ಅನಿಸುತ್ತದೆ. ಕೆಲವು ಭಾಷಾ ಶಾಸ್ತ್ರದ ವಿಷಯಗಳ ಮೇಲೆ ಶೈಕ್ಷಣಿಕ ಹೊಸ ಯೋಜನೆಗಳನ್ನು ಜಾರಿಗೆ ತರಲು ನೀತಿ ನಿರೂಪಕರು ಸರ್ಕಾರದೊಂದಿಗೆ ಕೆಲಸ ಮಾಡುತ್ತಾರೆ. ಇಂದು ವಿಜ್ಞಾನ ಯುಗವನ್ನು ದಾಟಿ ತಾಂತ್ರಿಕ ಯುಗಕ್ಕೆ ಬಂದಿದ್ದೇವೆ. ಪ್ರಪಂಚದ ಅನೇಕ ಭಾಷೆಗಳು ಪ್ರಾಪಂಚೀಕರಣದಿಂದಾಗಿ (ಗ್ಲೋಬಲೈಜೇಶನ್) ಒಂದು ಭಾಷೆಯ ಪದಗಳು ಇನ್ನೊಂದು ಭಾಷೆಗೆ ಎರವಲಾಗಿ ಸೇರಿಕೊಳ್ಳುತ್ತಿವೆ. ಕೆಲವು ಪದಗಳು ಮತ್ತೊಂದು ಭಾಷೆಗೆ ತರ್ಜೆಮೆಯಾಗಲಾರದ ಸ್ಥಿತಿಯಲ್ಲಿದೆ. ಉದಾಹರಣೆಗೆ ಮೊಬೈಲ್, ಸಿಮ್, ವರ್ಲ್ಡ್ ವೈಡ್ ವೆಬ್, ಪೇಪರ್ ಪ್ರೆಸೆಂಟೇಶನ್, ಟೈಯರ್ ಇತ್ಯಾದಿ. ಭಾಷಾ ವಿಜ್ಞಾನದ ಸಂಶೋಧನೆಗಳು ಒಂದು ಹಂತಕ್ಕೆ ಸರಿ ಎನಿಸಿದರೂ, ಇನ್ನೂ ಸಂಶೋಧನೆಗಳು ಆಗುತ್ತಲೇ ಇವೆ.

ಬಗೆಗಳು ಹಾಗೂ ವಿಭಾಗಗಳು

ಬದಲಾಯಿಸಿ

ಭಾಷಾ ವಿಜ್ಞಾನದಲ್ಲಿ ಎರಡು ಬಗೆಗಳಿವೆ:

  1. ಸೈದ್ದಾಂತಿಕ ಭಾಷಾ ವಿಜ್ಞಾನ -
  2. ವ್ಯಾವಹಾರಿಕ ಭಾಷಾ ವಿಜ್ಞಾನ

ಸೈದ್ದಾಂತಿಕ ಭಾಷಾ ವಿಜ್ಞಾನದಲ್ಲಿ ಭಾಷೆಯ ವ್ಯಾಕರಣ ಹಾಗೂ ಶಬ್ದಾರ್ಥ ವಿಜ್ಞಾನಗಳ ಅಧ್ಯಯನ ಮಾಡಲಾಗುತ್ತದೆ.

  • ವ್ಯಾಕರಣದಲ್ಲಿ ಪದಗಳ ರಚನೆ ಹಾಗು ಪದಗಳನ್ನು ವಾಕ್ಯಗಳಾಗಿ ಕೂಡಿಸುವ ರೀತಿ ಹಾಗು ನಿಯಮಗಳನ್ನು ಪರಿಶೀಲಿಸಲಾಗುತ್ತದೆ.
  • ಶಬ್ದಾರ್ಥ ಅಧ್ಯಯನದಲ್ಲಿಯೂ ಎರಡು ಬಗೆಯಿವೆ. ಸ್ವಾಯತ್ತ ಭಾಷಾ ವಿಜ್ಞಾನವು ಭಾಷೆಯ ಮೂಲ ಸ್ವರೂಪದ ಅಧ್ಯಯನ ನಡೆಸಿದರೆ, ಪ್ರಾಸಂಗಿಕ ಭಾಷಾ ವಿಜ್ಞಾನವು ತತ್ತ್ವಶಾಸ್ತ್ರ ಹಾಗು ಸಮಾಜ ವಿಜ್ಞಾನ ಮುಂತಾದ ವಿಷಯಗಳೊಡನೆ, ಭಾಷೆಯ ಸಾಮಾಜಿಕ ಕ್ರಿಯೆಯ ಅಧ್ಯಯನ ನಡೆಸುತ್ತದೆ.

ಪ್ರಾಕೃತಿಕ ಭಾಷೆಗಳ ಬಗೆಗಿನ ವೈಜ್ಞಾನಿಕ ಅಧ್ಯಯನವನ್ನು ಭಾಷಾ ವಿಜ್ಞಾನವೆನ್ನುತ್ತಾರೆ. ಭಾಷಾ ವಿಜ್ಞಾನವು ಹಲವಾರು ಉಪಕ್ಷೇತ್ರಗಳನ್ನು ಒಳಗೊಳ್ಳುತ್ತದೆ. ಭಾಷಾ ಸ್ವರೂಪದ ಅಧ್ಯಯನ (ವ್ಯಾಕರಣ) ಮತ್ತು ಶಬ್ದಾರ್ಥದ (ಶಬ್ದಾರ್ಥ ವಿಜ್ಞಾನ ಮತ್ತು ವ್ಯಾವಹಾರಿಕ ಭಾಷಾವಿಜ್ಞಾನ) ಅಧ್ಯಯನದ ನಡುವಣ ವಿಭಜನ ಒಂದು ಪ್ರಮುಖ ಪ್ರಕೃತ ವಿಭಜನ. ಇದರ ಅಧ್ಯಯನ ಮಾಡುವವರನ್ನು ಭಾಷಾ ವಿಜ್ಞಾನಿಯೆನ್ನುತ್ತಾರೆ.

ಅಭಿದಾನ

ಬದಲಾಯಿಸಿ

೧೭೧೬ರಲ್ಲಿ ಚಾಲ್ತಿಯಲ್ಲಿದ್ದ್ದ ಭಾಷಾ ವಿಜ್ಞಾನ ಎಂಬ ಪದವು ೨೦ನೇ ಶತಮಾನದಲ್ಲಿ ಬಳಸಲ್ಪಡುವ ಅರ್ಥಕ್ಕಿಂತ ವಿಭಿನ್ನವಾದ ವ್ಯಾಖ್ಯೆಯನ್ನು ಹೊಂದಿತ್ತು. ಅದು ಸಾಮಾನ್ಯವಾಗಿ ಒಂದು ಭಾಷೆಯನ್ನು ಕುರಿತಾದ ವೈಜ್ಞಾನಿಕ ಅಧ್ಯಯನವಾಗಿದ್ದು, ಐತಿಹಾಸಿಕ ಬದಲಾವಣೆಗಳನ್ನು ಕುರಿತು ಅಭ್ಯಸಿಸುತ್ತಿತ್ತು. ಫರ್ಡಿನೆಂಡ್ ಡೀ ಸಸ್ಸ್ಯೂರ್ ನು " ಭಾಷೆಯ ನಿರ್ಧಿಷ್ಟ ಸಮಯದ" ಅಧ್ಯಯನಕ್ಕೆ ಒತ್ತು ಕೊಟ್ಟನಾದರೂ ನಂತರದ ದಿನಗಳಲ್ಲಿ ಆತ ಭಾಷಾವಿಜ್ಞಾನವನ್ನು ಒಂದು ಭಾಷೆಯ ವ್ಯಾಕರಣ, ಇತಿಹಾಸ ಮತ್ತು ಪರಂಪರೆಯ ಅಧ್ಯಯನಕ್ಕೆ ವಿಸ್ತರಿಸಿದನು. ವಿಶೇಷವಾಗಿ ಈ ಅಧ್ಯಯನಗಳು ಯು. ಎಸ್. ಎ.(USA) ನಲ್ಲಿ ಕೆಂದ್ರಿಕೃತವಾಗಿದ್ದವು. ೧೬೪೧ ರಿಂದ "ಭಾಷಾಶಾಸ್ತ್ರಜ್ಞರು" ಭಾಷೆಯನ್ನು ಅಭ್ಯಸಿಸುವವನು ಎಂದು ಬಳಕೆಯಲ್ಲಿದ್ದರೂ, "LINGUIST" ಎಂಬ ಪದವು ೧೮೪೭ ರಲ್ಲಿ ಅಧಿಕೃತವಾಗಿ ಸೇರ್ಪಡೆಗೊಂಡಿತು. ಈಗ "LINGUISTICS" ಎಂಬ ಪದವು ಭಾಷೆಯನ್ನು ಅಭ್ಯಸಿಸಲು ಬಳಸುವ ಅಧಿಕೃತ ಪದವಾಗಿದೆ. ಈಗ LINGUIST ಎಂಬ ಪದವು ಭಾಷೆಯನ್ನು ಅಭ್ಯಸಿಸುವ, ಸಂಶೊಧಿಸುವ ಕಾರ್ಯದಲ್ಲಿ ತೊಡಗಿರುವವರ ವಿಧಾನಗಳನ್ನು ಬಳಸಿಕೊಂಡು ವಿಶ್ಲೇಷಿಸುವವನನ್ನು ಕುರಿತು ಬಳಸಲ್ಪಡುತ್ತದೆ.

ವೈವಿಧ್ಯತೆ ಮತ್ತು ಸಾರ್ವತ್ರಿಕತೆ

ಬದಲಾಯಿಸಿ

ಭಾಷೆಯನ್ನು ಅಭ್ಯಸಿಸುವಲ್ಲಿ ಪ್ರಮುಖವಾಗಿ ೨ ಸಿದ್ಧಾಂತಗಳಿದ್ದು,೧. ವಿವಿಧ ಸಮಾಜದ ಸ್ಥರಗಳಲ್ಲಿ ಉದ್ಭವಿಸಿರುವ ವಿವಿಧ ಭಾಷಾವೈವಿಧ್ಯತೆಗಳನ್ನು ಅಭ್ಯಸಿಸುವುದಾಗಿದೆ ಮತ್ತು ೨. ಅಸ್ಥಿತ್ವದಲ್ಲಿರುವ ಎಲ್ಲಾ ಭಾಷೆಗಳ ಸಾಮಾನ್ಯ ಸಂಗತಿಗಳ ಕುರಿತಾದ ಅಂಶಗಳೆಡೆಗೆ ಒತ್ತು ನೀಡುತ್ತದೆ. ಅದ್ದರಿಂದ ವೈವಿಧ್ಯತಾ ಭಾಷಾ ಸಿದ್ದಾಂತವು ಒಂದು ನಿರ್ಧಿಷ್ಟ ರಾಷ್ಟೀಯ ಗಡಿಯಲ್ಲಿ ಹೊಂದಿಕೊಂಡಂತೆ, ಅಲ್ಲಿ ಕಂಡುಬರುವ ನಿರ್ಧಿಷ್ಟ ಭಾಷೆಗಳಾದ ಫ್ರೆಂಚ್ ಅಥವಾ ಆಂಗ್ಲ ಭಾಷೆಗಳಂತಹವುಗಳ ವಿವಿಧ ಉಪಯೋಗತೆಯ ಕುರಿತು ಸಣ್ಣ ಉಪಭಾಷೆಗಳ ಹಾಗೂ ಪ್ರಾದೇಶಿಕ ವಿಭಿನ್ನತೆಯ ಕುರಿತು ವಿವರಿಸುತ್ತದೆ. ವೈವಿಧ್ಯತಾ ಸಿದ್ಧಾಂತವು ಒಂದು ನಿರ್ಧಿಷ್ಟ ಭಾಷೆಯ ನೆಲೆಗಟ್ಟಿನಲ್ಲಿ ಪ್ರಭಾವಿಸಲ್ಪಡುವ ಸಾಂಸ್ಕೃತಿಕ

ಹಂತವನ್ನು ಕುರಿತು ವಿಷ್ಲೇಶಿಸುತ್ತದೆ. ಈ ಹಂತದಲ್ಲಿ ಸ್ಥಳೀಯದಲ್ಲದ ಅಥವಾ ಒಂದು ಸಮುದಾಯದ ಹೊರಗಿನವರು, ಮುಖ್ಯ ಭಾಷೆಯನ್ನು ನುಡಿಗಟ್ಟುಗಳು ಮತ್ತು ಪದಗಳನ್ನು ಬಳಸಲು ಪ್ರಾರಂಭಿಸಿದಾಗ, ಕೆಲವೊಮ್ಮೆ ಸಾಮಾನ್ಯ ಅರ್ಥಗಳ ಹೊರತಾದ ಮತ್ತೊಂದು ಅರ್ಥಗಳಿಗೆ ಎಡೆಮಾಡಿಕೊಡುತ್ತವೆ. ಈ ನಿಟ್ಟಿನಲ್ಲಿ, ಈ ಸಂಧಿಗ್ಧತೆಯಲ್ಲಿ, ಒಬ್ಬನ ಸ್ಥಳಕ್ಕೆ ಅಥವಾ ಸ್ವಂತ ಭಾಷಾ ಲಕ್ಷಣಗಳು, ಆತನು ಉಪಯೋಗಿಸುತ್ತಿರುವ ಸಮುದಾಯದ ಮುಖ್ಯ ಭಾಷೆಯಿಂದ ಪ್ರಭಾವಿತಗೊಳ್ಳುತ್ತದೆ. ಹೀಗೆ ಪ್ರಭಾವಿತಗೊಂಡ ಭಾಷೆಯು ಮುಂದೆ ' ಕ್ರೆಯೋಲ್' ಆಗಿ ರೂಪಗೊಳ್ಳುತ್ತದೆ. ಕ್ರೆಯೋಲ್ (ಸಂಮಿಶ್ರಿತ) ಭಾಷೆಗಳು ಪೋಷಕ ಅಥವಾ ಸ್ಥಳೀಯ ಭಾಷೆಗಳೊಂದಿಗಿನ ಒಡನಾಟದಿಂದ, ನಂತರದ ದಿನಗಳಲ್ಲಿ ಆ ಭಾಷೆಯ ಉಪಭಾಷೆಗಳಾಗಿ ಸೇರುತ್ತದೆ. ಆ ಕ್ರೆಯೋಲ್ ಗಳನ್ನು ಮಾತನಾಡುವವರ ಜನರ ಸಂಖ್ಯೆಯಿಂದ ಇದು ಪ್ರಭಾವಿಸಲ್ಪಡುತ್ತದೆ. ಉದಾಹರಣೆಗೆ: ಒಬ್ಬ ಚೈನೀ ಭಾಷೆಯ ಸ್ಥಳಿಕನು ಇಂಗ್ಲೀಷ್ ಮಾತನಾಡಲು ಪ್ರಾರಂಭಿಸಿದಾಗ, ಆರಂಭದಲ್ಲಿ ಆತನು, ಮುರುಕು ಪದಗಳ, ವ್ಯಾಕರಣ ದೋಷದಿಂದ ಕೂಡಿದ, ಮತ್ತು ಅಷ್ಟು ಗಮನಾರ್ಹವೆನಿಸಿದ ಕೂಡಿದಭಾಷೆಯನ್ನು ಪ್ರಯೋಗಿಸುತ್ತಾನೆ. ಒಂದು ಹಂತದಲ್ಲಿ, ಆ ಚೈನೀ ನಿವಾಸಿಯು ಭಾಷೆಯ ಎಲ್ಲಾ ಸಾಮರ್ಥ್ಯಗಳನ್ನು ಗಳಿಸಿಕೊಂಡು ಮಾತನಾಡಲು ಆರಂಭಿಸಿದ ನಂತರ, ಅದನ್ನು ಕಲಿಯುವ ಮುಂದಿನ ಪೀಳಿಗೆಯು ಒಂದು ವಿಶಿಷ್ಟ ಇಂಗ್ಲೀಷಿನ ಪ್ರಕಾರವಾಗಿ ಕಲಿಯುತ್ತದೆ. ಅದೇ "ಚೈನೀಸ್ ಇಂಗ್ಲೀಷ್" ಆಗುತ್ತದೆ. ಇದೇ 'ಕ್ರೆಯೋಲ್'.(ಚೈನೀಸ್ ಇಂಗ್ಲೀಷ್ ಕ್ರೆಯೋಲ್ ಆಗಿ, ಇಂಗ್ಲೀಷ್ ನ ಒಂದು ಪ್ರಕಾರವಾಗಿ, ಯಾವುದೇ ಗತದ ಹಿನ್ನೆಲೆ ಇರದೆ, ಅಮೇರಿಕನ್ ಇಂಗ್ಲೀಷ್, ಬ್ರಿಟೀಷ್ ಇಂಗ್ಲೀಷ್, ಪ್ರಕಾರದ ಉಪಭಾಷೆಗಳಿಗಿಂತ ಭಿನ್ನವಾಗಿ ನಿಲ್ಲುತ್ತದೆ).ಈ ಪ್ರಕ್ರಿಯೆಯು ಜಾಗತಿಕ ಭಾಷೆಗಳಾದಂತಹ ಇಂಗ್ಲೀಷ್, ಫ್ರೆಂಚ್, ಸ್ಪ್ಯಾನಿಷ್ ಗಳ ಉಪಭಾಷೆ ಮತ್ತು ಭಾಷಾ ವ್ಯತ್ಯಾಸಗಳನ್ನು ರಚಿಸುವಲ್ಲಿ, ಪ್ರಮುಖ ಪಾತ್ರ ವಹಿಸುತ್ತದೆ. ಈ ಪ್ರಕ್ರಿಯೆಯು ಪ್ರತೀ ಭಾಷೆಯ ವಿಕಾಸ ಮತ್ತು ಬೆಳವಣಿಗೆಯಲ್ಲಿ ತನ್ನ ಮೂಲವನ್ನು ಕಂಡುಕೊಂಡಿದೆ. ಈ ವವೈವಿಧ್ಯತೆಯ ಅಂಶಗಳು, ಕಾಲಾನುಕ್ರಮದಲ್ಲಿ ಭಾಷೆ ಅಭಿವೃದ್ಧಿ ಹೊಂದಿದ ರೀತಿ ಮತ್ತು ಭಾಷೆಯ ವಿಭಿನ್ನ ಉಪಯೋಗಗಳನ್ನು ಅರಿಯಲು ಅಭ್ಯಸಿಸಲಾಗುತ್ತದೆ. ಈ ನಿಟ್ಟಿನಲ್ಲಿ ಡೇವಿಡ್ ಕ್ರಿಸ್ಟಾಲ್ ಭಾಷ ಬಳಕೆಯ ವಿವರಣೆ ಮತ್ತು ಅಂತರಜಾಲದಲ್ಲಿ ಭಾಷಾ ಬಳಕೆಯ ಬದಲಾವಣೆಗಳನ್ನು ಕುರಿತು ಮಾಡಿರುವ ಸಂಶೋಧನೆಗಳು ಮಹತ್ವವಾಗಿವೆ. ಈ ಅಧ್ಯಯನಗಳನ್ನು ಅವರು ನೂತನವಾಗಿ ಅನ್ವೇಷಿಸಿರುವ "ಅಂತರಜಾಲ ಭಾಷಾವಿಜ಼್ನ್ನಾನ" ಎಂದು ಕರೆದಿದ್ದಾರೆ.

ಪದಕೋಶವು ಭಾಷಿಗನ ಮನಸ್ಸಿನಲ್ಲಿರುವ ಸಂಗ್ರಹವಾಗಿರುವ ಪದಗಳ ಪಟ್ಟಿ. ಪದಕೋಶವು ಪದಗಳನ್ನು ಮತ್ತು ಸ್ವತಂತ್ರವಾಗಿ ಕಾರ್ಯನಿರ್ವಹಿಸಲಾರದ ಪ್ರತ್ಯಯಗಳಂತಹ ಬದ್ಧ ಆಕೃತಿಮಗಳನ್ನೂ[ಟಿಪ್ಪಣಿ ೧] ಒಳಗೊಂಡಿರುತ್ತದೆ. ಕೆಲವು ವಿಶ್ಲೇಷಣೆಗಳಲ್ಲಿ ಸಂಯುಕ್ತ ಪದಗಳು ಮತ್ತು ಕೆಲವು ವರ್ಗದ ನುಡಿಗಟ್ಟುಗಳು ಮತ್ತು ಕೆಲವೊಂದು ಜೋಡಣೆಗಳೂ ಸಹ ಪದಕೋಶದ ಭಾಗವೆಂದು ಪರಿಗಣಿತವಾಗಿವೆ. ನಿಘಂಟುಗಳು ನಿರ್ದಿಷ್ಟ ಭಾಷೆಯ ಪದಕೋಶವನ್ನು ಆಕಾರಾದಿ ಅನುಕ್ರಮದಲ್ಲಿ ಜೋಡಿಸುವ ಪ್ರಯತ್ನವನ್ನು ಪ್ರತಿನಿಧಿಸುತ್ತವೆ. ಸಾಮಾನ್ಯವಾಗಿ ಇವುಗಳಲ್ಲಿ ಬದ್ಧ ಆಕೃತಿಮಗಳು ಇರುವುದಿಲ್ಲ. ನಿಘಂಟು ಶಾಸ್ತ್ರವು ಶಬ್ದಾರ್ಥಶಾಸ್ತ್ರಕ್ಕೆ ಹತ್ತಿರವಾಗಿ ಸಂಬಂಧಿಸಿದ್ದು ಪದಗಳನ್ನು ಒಂದು ವಿಶ್ವಕೋಶ ಅಥವಾ ಒಂದು ನಿಘಂಟುವಾಗಿ ರಚಿಸುವ ವಿಜ್ಞಾನವಾಗಿದೆ. ಹೊಸ ಪದಗಳನ್ನು (ಪದಕೋಶದಲ್ಲಿ) ಸೇರಿಸುವುದು ಅಥವಾ ಸೃಷ್ಟಿಸುವುದನ್ನು ಠಂಕಿಸುವುದು ಎಂದು ಕರೆಯಲಾಗಿದೆ ಮತ್ತು ಹೊಸ ಪದಗಳನ್ನು ನವಪದಗಳು ಎನ್ನಲಾಗಿದೆ.

ಭಾಷಿಗನ ಭಾಷೆಯ ಶಕ್ತಿಯು ಅವನ ಪದ ಸಂಗ್ರಹದ ಗಾತ್ರವನ್ನು ಅವಲಂಬಿಸಿದೆ ಎಂದು ಕೆಲವೊಮ್ಮೆ ನಂಬಲಾಗಿದೆ. ಆದರೆ ಇದನ್ನು ಕೆಲವು ಸಲ ಭಾಷಾಶಾಸ್ತ್ರಜ್ಞರು ಮಿಥ್ ಅಥವಾ ಹುಸಿ ಎಂದು ಪರಿಗಣಿಸಿದ್ದಾರೆ. ಹಲವು ಭಾಷಾಶಾಸ್ತ್ರಜ್ಞರು ಭಾಷೆಯನ್ನು ಬಳಸುವ ಶಕ್ತಿಯು ಮೂಲಭೂತವಾಗಿ ವ್ಯಾಕರಣದ ಕ್ಷೇತ್ರದಲ್ಲಿದೆ ಎಂದು ಭಾವಿಸಿದ್ದಾರೆ ಮತ್ತು ಇದರ ಸಂಬಂಧ ಶಬ್ದಕೋಶದ ಬೆಳವಣಿಗೆಯಲ್ಲಿ ಅಲ್ಲದೆ ಸಾಮರ್ಥ್ಯದೊಂದಿಗೆ ಇದೆ. ತೀರ ಸಣ್ಣ ಪದಕೋಶಕ್ಕೂ ಸಹ ಸೈದ್ಧಾಂತಿಕವಾಗಿ ಅನಂತ ವಾಕ್ಯಗಳನ್ನು ಉಂಟುಮಾಡುವ ಶಕ್ತಿ ಇದೆ.

ಒಂದು ನಿರ್ದಿಷ್ಟ ಪರಿಸರದಲ್ಲಿ ಮಾತನಾಡುವ ರೀತಿಗೆ ಸಂಕಥನ ಎನ್ನಲಾಗಿದೆ ಮತ್ತು ಇದು ನಿರ್ದಿಷ್ಟ ವಿಷಯದ ಮೇಲೆ ಇರುತ್ತದೆ. ಈ ರೀತಿಯಲ್ಲಿ ನಿರ್ದಿಷ್ಟ ಕೆಲಸಕ್ಕೆ ಬಳಸಿದಾಗ ನಿರ್ದಿಷ್ಟ ಸಂಕಥನ ಭಾಷೆಯ ಬಗೆಯಾಗುತ್ತದೆ ಮತ್ತು ಇದನ್ನು ರಿಜಿಸ್ಟರು ಎಂದು ಕರೆಯಲಾಗುತ್ತದೆ.[] ನಿರ್ದಿಷ್ಟ ಜನ ಸಮುದಾಯದ ಆ ಕ್ಷೇತ್ರದಲ್ಲಿನ ಪ್ರಾವೀಣ್ಯತೆಯ ಹಿನ್ನೆಲೆಯಲ್ಲಿ ಹೊಸ ಪದಗಳು ಬಳಕೆಗೆ ಬಂದು ಪದಕೋಶದ ಭಾಗವಾಗ ಬಹುದು. ರಿಜಿಸ್ಟರುಗಳು ಮತ್ತು ಸಂಕಥನಗಳು ಪದಕೋಶಗಳ ಬಳಕೆಯ ಮೂಲಕ ಬೇರ್ಪಸಿಕೊಳ್ಳತ್ತವೆ ಮತ್ತು ಕೆಲವೊಮ್ಮೆ ಶೈಲಿಯೂ ಇದಕ್ಕೆ ಕೊಡುಗೆ ಕೊಡಬಹುದು. ಉದಾಹರಣೆಗೆ ವೈದ್ಯ ಸೋದರರು ವೈದಕೀಯ ಕ್ಷೇತ್ರಕ್ಕೆ ವಿಶಿಷ್ಟವಾದ ಕೆಲವು ವೈದ್ಯಕೀಯ ಪದಗಳನ್ನು ಸಂವಹನದಲ್ಲಿ ಬಳಸ ಬಹುದು. ಇದನ್ನು ಕೆಲವೊಮ್ಮೆ “ವೈದ್ಯಕೀಯ ಸಂಕಥನ” ಎಂದು ಕರೆಯಲಾಗುತ್ತದೆ. ಹೀಗೆ “ಕಾನೂನಿನ ಸಂಕಥನ” ಮುಂತಾದ ಹಲವು ಸಂಕಥನಗಳು ಇರುತ್ತವೆ.

ಉಪಭಾಷೆ

ಬದಲಾಯಿಸಿ

ಉಪಭಾಷೆಯು ಭಾಷಿಗರ ಗುಂಪಿನೊಳಗೆ ನಿರ್ದಿಷ್ಟ ಗುಂಪಿನ ಲಕ್ಷಣವಾದ ಒಂದು ಬಗೆಯ ಭಾಷೆ.[] ಒಂದು ಉಪಭಾಷೆಯನ್ನು ಮಾತನಾಡುವ ಜನರು ಸಾಮಾನ್ಯವಾಗಿ ಒಂದು ಸಾಮಾಜಿಕ ಗುರುತುಸಿವಿಕೆಯಿಂದ ಬಂಧಿತರಾಗಿರುತ್ತಾರೆ. ಇದು ಉಪಭಾಷೆಯನ್ನು ರಿಜಿಸ್ಟರು ಅಥವಾ ಸಂಕಥನದಿಂದ ಭಿನ್ನವಾಗಿಸುತ್ತದೆ. ಸಾಂಸ್ಕೃತಿಕ ಗುರುತಿಸಿಕೊಳ್ಳುವಿಕೆ ಸಂಕಥನದಲ್ಲಿ ಯಾವಾಗಲೂ ಪಾತ್ರವಹಿಸುವುದಿಲ್ಲ. ಉಪಭಾಷೆಗಳು ತಮ್ಮದೇ ವ್ಯಾಕರಣ ಮತ್ತು ದ್ವನಿನಿಯಮಗಳು, ಭಾಷಿಕ ವೈಲಕ್ಷಣಗಳು ಹಾಗೂ ಶೈಲಿಯ ಅಂಶಗಳನ್ನು ಹೊಂದಿರುವ ಭಾಷಿಕ ಬಗೆಗಳು ಮತ್ತು ಅವು ಒಂದು ಭಾಷೆಯಾಗಿ ಅಧಿಕೃತವಾಗಿ ಮನ್ನಣೆ ಪಡೆದಿರುವುದಿಲ್ಲ. ಉಪಭಾಷೆಗಳು ಕೆಲವೊಮ್ಮೆ ರಾಜಕೀಯ ಮತ್ತು ಸಾಮಾಜಿಕ ಕಾರಣಗಳಿಗೆ ಭಾಷೆಯ ಸ್ಥಾನಮಾನ ಪಡೆಯುತ್ತವೆ. ಉಪಭಾಷೆಗಳ ನಡುವಿನ ವ್ಯತ್ಯಾಸವು (ಹಾಗೆಯೇ ಭಾಷೆಗಳ ನಡುವಿನ ವ್ಯತ್ಯಾಸವೂ ಸಹ) ಯಾವಾಗಲೂ ಪದಕೋಶದ ಬಳಕೆಯ ಮೇಲಿರದೆ ವ್ಯಾಕರಣ ನಿಯಮ, ವಾಕ್ಯರಚನೆಯ ನಿಯಮ ಮತ್ತು ಶೈಲಿಯ ನಿಯಮಗಳ ಮೇಲೆ ಆಧಾರ ಪಟ್ಟಿರುತ್ತದೆ. ಜನಪ್ರಿಯ ಹೇಳಿಕೆ “ಭಾಷೆಯು ಸೈನ್ಯ ಮತ್ತು ನೌಕಾಪಡೆ ಇರುವ ಉಪಭಾಷೆ”ಯನ್ನು ಒಂದು ವ್ಯಾಖ್ಯಾನವಾಗಿ ಮಾಕ್ಸ್ ವೇಯಿನ್ರೆಯಿಚ್‌ ರೂಪಿಸದ ಎಂದು ಹೇಳಲಾಗಿದೆ.

ಸಾರ್ವತ್ರಿಕ ವ್ಯಾಕರಣವು ಎಲ್ಲಾ ಉಪಭಾಷೆಗಳ ಮತ್ತು ಬಾಷೆಗಳ ಸಾಮಾನ್ಯವಾದ ಔಪಚಾರಿಕ ರಚನೆಗಳು ಮತ್ತು ವೈಲಕ್ಷಣಗಳನ್ನು ಗಣೆನೆಗೆ ತೆಗೆದುಕೊಳ್ಳುತ್ತದೆ ಮತ್ತು ಇದು ಮಗುವಿನ ಮನಸ್ಸಿನಲ್ಲಿ ಪಡಿಯಚ್ಚಾಗಿ ಮೊದಲೇ ಇರುತ್ತದೆ. ಈ ಚಿಂತನೆಯು ಉತ್ಪಾದನಾತ್ಮಕ ವ್ಯಾಕರಣ ಸಿದ್ಧಾಂತದ ಮೇಲೆ ಆಧಾರ ಪಟ್ಟಿದೆ. ಇದೊಂದು ಔಪಚಾರಿಕ ಭಾಷಾಶಾಸ್ತ್ರದ ಶಾಖೆ ಮತ್ತು ಇದರ ಪ್ರತಿಪಾದಕರಲ್ಲಿ ನೊಮ್ ಚೋಮ್‌ಸ್ಕಿ ಮತ್ತು ಅವರ ಸಿದ್ಧಾಂತಗಳು ಮತ್ತು ಚಿಂತನೆಗಳ ಹಿಂಬಾಲಕರು ಸೇರಿದ್ದಾರೆ.

         ”ವ್ಯಕ್ತಿಗಳಾಗಿ ನಮಗೆ ನಮ್ಮ ಉಪಭಾಷೆಯ ಬಗೆಗೆ ಮಮತೆ ಇರಬಹುದು. ಇದು ವಾಸ್ತವದಲ್ಲಿ ನಮ್ಮ ಉಪಭಾಷೆ ಇತರ ಉಪಭಾಷೆಗಳಿಗಿಂತ ಮೇಲು ಎಂದು ಯೋಚಿಸುವಂತೆ ಮಾಡಬಾರದು. ಉಪಭಾಷೆಗಳಲ್ಲಿ ಒಳ್ಳೆಯದು ಅಥವಾ ಕೆಟ್ಟದು, ಚೆನ್ನಾಗಿದೆ ಅಥವಾ ಚೆನ್ನಾಗಿಲ್ಲ, ಸರಿ ಅಥವಾ ತಪ್ಪು ಎಂದಿಲ್ಲ- ಅವು ಒಂದಕ್ಕಿಂತ ಒಂದು ಭಿನ್ನ ಮತ್ತು ಬೇರೆ ಬೇರೆ ಜನಾಂಗ, ಧರ್ಮ ಮತ್ತು ಲಿಂಗಗಳನ್ನು ಸಹಿಸಿಕೊಂಡಂತೆ ಬೇರೆ ಬೇರೆ ಉಪಭಾಷೆಗಳನ್ನು ಸಹಿಸಿಕೊಳ್ಳುವುದು ನಾಗರೀಕ ಸಮಾಜದ ಲಕ್ಷಣ.”[]

ರಚನೆಗಳು

ಬದಲಾಯಿಸಿ

ಭಾಷಿಕ ರಚನೆಗಳು ಅರ್ಥ ಮತ್ತು ರೂಪದ ಜೋಡಿ. ಯಾವುದೇ ನಿರ್ದಿಷ್ಟ ಅರ್ಥ ಮತ್ತು ರೂಪದ ಜೋಡಿಯು ಸಸೂರನ ಚಿಹ್ನೆಯಾಗುತ್ತದೆ. ಉದಾಹರಣೆಗೆ ಜಗತ್ತಿನಾದ್ಯಂತ “ಬೆಕ್ಕು” ಪದದ ಅರ್ಥವು ಹಲವು ನಮೂನೆಯ ಧ್ವನಿಗಳಿಂದ (ಮೌಖಿಕ ಭಾಷೆಗಳಲ್ಲಿ), ಕೈಗಳು ಮತ್ತು ಮುಖದ ಚಲನೆಯಿಂದ (ಸಂಜ್ಞಾ ಭಾಷೆಗಳಲ್ಲಿ) ಮತ್ತು ಬರೆದ ಚಿಹ್ನೆಗಳಿಂದ ಪ್ರತಿನಿಧಿಸಲ್ಪಟ್ಟಿದೆ.

ರಚನೆಯ ಬಗೆಗೆ ಅಧ್ಯಯನ ಮಾಡುವ ಭಾಷಾಶಾಸ್ತ್ರಜ್ಞರು ಸ್ಥಳೀಯ ಭಾಷಿಕರಿಗೆ ತಿಳಿದ (ಯಾವಾಗಲೂ ಪ್ರಜ್ಞಾಪೂರ್ವಕವಾಗಿ ಅಲ್ಲ) ಭಾಷೆಯ ಬಳಕೆಯ ನಿಯಮಗಳನ್ನು ಅರಿಯಲು ಪ್ರಯತ್ನಿಸುತ್ತಾರೆ. ಎಲ್ಲಾ ಭಾಷಿಕ ರಚನೆಗಳನ್ನೂ ಅದರ ಘಟಕಗಳಾಗಿ ವಿಭಜಿಸ ಬಹುದು ಮತ್ತು ಅವನ್ನು ಬಹು ಹಂತದ ವಿಶ್ಲೇಷಣೆಯ ಮೇಲೆ, (ಅರೆ) ಪ್ರಜ್ಞಾಪೂರ್ವಕ ನಿಯಮಗಳ ಪ್ರಕಾರ ಮತ್ತೆ ಜೋಡಿಸ ಬಹುದು. ಉದಾಹರಣೆಗೆ ಇಂಗ್ಲೀಶ್‌ನ “tenth” ಪದದ ರಚನೆಯನ್ನು ಎರಡು ಭಿನ್ನ ಹಂತಗಳ ವಿಶ್ಲೇಷಣೆಗಳನ್ನು ಪರಿಗಣಿಸಿ. ಪದದ ಒಳ ರಚನೆಯ ಹಂತದಲ್ಲಿ (ಇದನ್ನು ಆಕೃತಿಮ ವಿಜ್ಞಾನ ಎಂದು ಕರೆಯಲಾಗಿದೆ) “tenth” ಪದವು ಒಂದು ಭಾಷಿಕ ರೂಪ ಸೂಚಿಸುವ ಸಂಖ್ಯೆ (ten) ಮತ್ತು ಇನ್ನೊಂದು ರೂಪ ಕ್ರಮಸೂಚಕ (th) ಸೂಚಿಸುವುದನ್ನು ಒಳಗೊಂಡಿದೆ. ಇವೆರಡೂ ರೂಪಗಳನ್ನು ಸೇರಿಸುವ ನಿಯಮಾವಳಿಯು ಕ್ರಮಸೂಚಕ “th”ವು ಸಂಖ್ಯೆ “ten”ನ ನಂತರ ಬರುತ್ತದೆ ಎಂದು ಹೇಳುತ್ತದೆ. ಧ್ವನಿ ರಚನೆ ಹಂತದಲ್ಲಿ (ಇದನ್ನು ಫೋನಾಲಜಿ ಅಥವಾ ಧ್ವನಿವ್ಯತ್ಯಾಸ ಶಾಸ್ತ್ರ ಎಂದು ಕರೆಯ ಬಹುದು) ರಾಚನಿಕ ವಿಶ್ಲೇಷಣೆಯು “tenth”ನಲ್ಲಿನ “n”ನ ಉಚ್ಛಾರಣೆಯು “ten”ನಲ್ಲಿನ “n”ನ ಉಚ್ಚಾರಣೆಗಿಂತ ಭಿನ್ನವಾಗಿದೆ ಎಂದು ತೋರಿಸುತ್ತದೆ. ಬಹಳಷ್ಟು ಇಂಗ್ಲೀಶ್ ಬಾಷಿಕರು “tenth”ನ ಪದಗಳ ಚೂರುಗಳನ್ನು ಜೋಡಿಸುವ ನಿಯಮದ ಬಗೆಗೆ ಪ್ರಜ್ಞಾಪೂರ್ವಕವಾಗಿ ಅರಿತಿದ್ದರೂ ಧ್ವನಿ ರಚನೆಯನ್ನು ನಿಯಂತ್ರಿಸುವ ನಿಯಮದ ಬಗೆಗೆ ಕಡಿಮೆ ಅರಿತಿರುತ್ತಾರೆ. ಭಾಷಾಶಾಸ್ತ್ರಜ್ಞರು ಸ್ಥಳೀಯ ಭಾಷಿಗರ ಭಾಷೆಯ ಬಳಕೆಯನ್ನು ನಿಯಂತ್ರಿಸುವ ಇಂತಹ ರಚನೆಗಳನ್ನು ಗುರುತಿಸುತ್ತಾರೆ ಮತ್ತು ನಿಯಮಗಳನ್ನು ವಿಶ್ಲೇಷಿಸುತ್ತಾರೆ.

ಭಾಷಾ ವಿಜ್ಞಾನವು ಭಾಷಿಕ ರಚನೆಯ ನಿರ್ದಿಷ್ಟ ಭಾಗದ ಬಗೆಗೆ ಅಧ್ಯಯನ ಮಾಡುವ ಅನೇಕ ಉಪಶಾಖೆಗಳು ಇವೆ. ನೋಮ್ ಚೋಮ್‌ಸ್ಕಿ ಪ್ರತಿಪಾದಿಸಿದಂತೆ ಇವುಗಳನ್ನು ವಿಶದಪಡಿಸುವ ಸಿದ್ಧಾಂತವನ್ನು ಉತ್ಪಾದನಾತ್ಮಕ ಸಿದ್ಧಾಂತ ಅಥವಾ ಸಾರ್ವತ್ರಿಕ ವ್ಯಾಕರಣ ಎಂದು ಕರೆಯಲಾಗಿದೆ. ಉಪಶಾಖೆಗಳು ವ್ಯಾಪ್ತಿಯು ಮೂಲಭೂತವಾಗಿ ರೂಪದ ಮೇಲೆ ಕೇಂದ್ರೀಕರಿಸುವುದರಿಂದ ಹಿಡಿದು ಮೂಲಭೂತವಾಗಿ ಅರ್ಥದ ಮೇಲೆ ಕೇಂದ್ರೀಕೃತವಾದವುಗಳ ವರೆಗೆ ಇದೆ. ಅವು ಎಲ್ಲಾ ಹಂತಗಳ ಭಾಷೆಯ ವಿಶ್ಲೇಷಣೆಯಲ್ಲಿ ತೊಡಗುತ್ತವೆ ಮತ್ತು ಈ ಹರಹು ಒಂದು ಧ್ವನಿಯಿಂದ ಹಿಡಿದು, ಪದಗಳು, ನುಡಿಗಟ್ಟುಗಳಿಂದ ಸಾಂಸ್ಕೃತಿಕ ಸಂಕಥನದ ವರೆಗೂ ಇದೆ.

ರಚನೆಯನ್ನು ಕೇಂದ್ರವಾಗಿಸಿಕೊಂಡ ಭಾಷೆಯ ಅಧ್ಯನದ ಉಪಶಾಖೆಗಳು:

  • ಧ್ವನಿಶಾಸ್ತ್ರ- ನುಡಿಯ ಧ್ವನಿ ಉತ್ಪಾದನೆಯ ಭೌತಿಕ ಲಕ್ಷಣಗಳು ಮತ್ತು ಗ್ರಹಿಕೆಯ ಅಧ್ಯಯನ
  • ಧ್ವನಿವ್ಯತ್ಯಾಸ ಶಾಸ್ತ್ರ- ಅಥವಾ ಫೋನಾಲಜಿ ಧ್ವನಿಗಳನ್ನು ಭಾಷಿಗನ ಮನಸ್ಸಿನಲ್ಲಿನ ಅರ್ಥ ವ್ಯತ್ಯಾಸವನ್ನು ಸೂಚಿಸುವ ಅಮೂರ್ತ ಅಂಶಗಳಾಗಿ ಅಧ್ಯಯನ.
  • ಆಕೃತಿಮ ವಿಜ್ಞಾನ- ಆಕೃತಿಮಗಳ ಅಥವಾ ಪದಗಳ ಒಳ ರಚನೆ ಮತ್ತು ಅವು ಹೇಗೆ ಮಾರ್ಪಾಟಾಗುತ್ತವೆ ಎಂಬುದರ ಅಧ್ಯಯನ.
  • ವಾಕ್ಯವಿಜ್ಞಾನ- ಪದಗಳು ವ್ಯಾಕರಣದ ನುಡಿಗಟ್ಟುಗಳಾಗಿ ಮತ್ತು ವಾಕ್ಯಗಳಾಗಿ ಹೇಗೆ ಸೇರಿಸಲ್ಪಡುತ್ತವೆ ಎಂಬುದರ ಅಧ್ಯಯನ.
  • ಶಬ್ದಾರ್ಥಶಾಸ್ತ್ರ- ಪದಗಳ ಅರ್ಥ ಮತ್ತು ನಿಶ್ಚಿತ ಪದಗಳ ಜೋಡಣೆ ಹಾಗೂ ಇವು ಹೇಗೆ ಅರ್ಥ ಪಡೆದುಕೊಳ್ಳುವ ವಾಕ್ಯಗಳಾಗುತ್ತವೆ ಎಂಬುದರ ಅಧ್ಯಯನ.
  • ವ್ಯವಹಾರಿಕ ಶಾಸ್ತ್ರ- ಮಾತುಗಳನ್ನು ಹೇಗೆ ಸಂವಹನ ಕ್ರಿಯೆಯಲ್ಲಿ ಬಳಸಲಾಗುತ್ತದೆ ಎಂಬ ಮತ್ತು ಅರ್ಥ ಸಂವಹನೆಯಲ್ಲಿ ಸಂದರ್ಭ ಮತ್ತು ಭಾಷೇತರ ಜ್ಞಾನದ ಪಾತ್ರಗಳ ಅಧ್ಯಯನ.
  • ಸಂಕಥನ ವಿಶ್ಲೇಷಣೆ- ಪಠ್ಯಗಳಲ್ಲಿ[ಟಿಪ್ಪಣಿ ೨] (ಮಾತನಾಡಿದ, ಬರೆದ ಅಥವಾ ಸಹಿಹಾಕಿದ) ಭಾಷೆಯ ಬಳಕೆಯ ವಿಶ್ಲೇಷಣೆ
  • ಶೈಲಿಶಾಸ್ತ್ರ- ಸಂಕಥನವನ್ನು ಅದರ ಸಂದರ್ಭದಲ್ಲಿಡುವ ಭಾಷಿಕ ಅಂಶಗಳ (ಭಾಷಣಕಲೆ, ಕಥನಶೈಲಿ, ಒತ್ತಡ) ಅಧ್ಯಯನ.
  • ಸಂಕೇತಶಾಸ್ತ್ರ- ಚಿಹ್ನೆ ಅಥವಾ ಸಂಕೇತಗಳು, ಚಿಹ್ನಾ ಪ್ರಕ್ರಿಯೆ, ಸೂಚನೆ, ನಿಯೋಜನೆ, ಹೋಲಿಕೆ, ಸಿದ್ಧ ಶಬ್ದಾನುಕರಣೆ, ರೂಪಕ, ಪ್ರತಿಮಾ-ವಿಧಾನ, ಅರ್ಥ ಸೂಚನೆ ಮತ್ತು ಸಂವಹನಗಳ ಅಧ್ಯಯನ.

ಸಾಪೇಕ್ಷತೆ

ಬದಲಾಯಿಸಿ

“ಸಫೀರ್-ವೂರ್ಫ ಪ್ರಮೇಯ”ದ ಮೂಲಕ ಜನಪ್ರಿಯವಾಗಿ ರೂಪಿತವಾದ ನಿಲುವಿನ ಪ್ರಕಾರ ಸಾಪೇಕ್ಷಿತಾವಾದಿಗಳು ನಿರ್ದಿಷ್ಟ ಭಾಷೆಯ ರಚನೆಯು ಗ್ರಹಿಕೆಯ ರೀತಿಯ ಮೂಲಕ ಅವನ ಅಥವಾ ಅವಳ ಪ್ರಾಪಂಚಿಕ ದೃಷ್ಟಿಕೋನವನ್ನು ರೂಪಿಸುತ್ತದೆ ಎಂದು ನಂಬುತ್ತಾರೆ. ಸಾರ್ವತ್ರಿಕವಾದಿಗಳು ಮಾನವನ ಗ್ರಹಿಕೆಯಲ್ಲಿ ಮತ್ತು ಮಾನವನ ಭಾಷೆಯ ಬಗೆಗಿನ ಶಕ್ತಿಯಲ್ಲಿ ಸಾಮಾನ್ಯವಾದವು ಇವೆ ಎಂದು ನಂಬುತ್ತಾರೆ ಸಾಪೇಕ್ಷವಾದಿಘಳು ಇದು ಭಾಷೆಯಿಂದ ಭಾಷೆಗೆ -ಮತ್ತು ವ್ಯಕ್ತಿಯಿಂದ ವ್ಯಕ್ತಿಗೆ ಬೇರೆಯಾಗುತ್ತದೆ ಎಂದು ನಂಬುತ್ತಾರೆ. ಸಫೀರ್-ವೂರ್ಫ್ ಪ್ರಮೇಯವು ಅಮೆರಿಕದ ಭಾಷಾಶಾಸ್ತ್ರಜ್ಞರಾದ ಎಡ್ವರ್ಡ್ ಸಫೀರ್ ಮತ್ತು ಬೆಂಜಮಿನ್ ಲೀ ವೂರ್ಫ್‌ ಬರೆವಣಿಗೆಗಳು ವ್ಯಕ್ತಪಡಿಸಿದ ಚಿಂತನೆಗಳ ನಿರೂಪಣೆ ಆದರೆ ಈ ಹೆಸರು ಕೊಟ್ಟವನು ಸಫೀರ್ ಶಿಷ್ಯ ಹ್ಯಾರಿ ಹೊಯ್‌ಜರ್. ೨೦ನೆಯಶತಮಾನದ ಜರ್ಮನ್‌ ಭಾಷಾಶಾಸ್ತ್ರಜ್ಞ ಲಿಯೊ ವೇಯಿಸ್ಗರ್ಬರ್ ಸಹ ವ್ಯಾಪಕವಾಗಿ ಸಾಪೇಕ್ಷಿಕ ಸಿದ್ಧಾಂತದ ಬಗ್ಗೆ ಬರೆದ. ಸಾಪೇಕ್ಷವಾದಿಗಳು ಗ್ರಹಿಕೆಯ ಹಂತ ಮತ್ತು ಶಬ್ದಾರ್ಥ ಕ್ಷೇತ್ರಗಳಲ್ಲಿ ಭೇದಮಾಡ ಬೇಕೆಂದು ವಾದಿಸುತ್ತಾರೆ. ೧೯೮೦ರ ದಶಕದಲ್ಲಿ ಗ್ರಹಿಕಾ ಭಾಷಾಶಾಸ್ತ್ರದ ಉದಯವು ಭಾಷಿಕ ಸಾಪೇಕ್ಷಿಕತೆಯಲ್ಲಿ ಆಸಕ್ತಿಯನ್ನು ಹೆಚ್ಚಿಸಿತು. ಜಾರ್ಜ್ ಲಕೊಫ್‌ನಂತಹ ಚಿಂತಕರು ಭಾಷೆಗಳು ಭಿನ್ನ ಸಾಂಸ್ಕೃತಿಕ ರೂಪಕಗಳನ್ನು ಪ್ರತಿಬಿಂಬಿಸುತ್ತವೆ ಎಂದಿದ್ದಾರೆ. ಫ್ರೆಂಚ್ ಭಾಷಾ ತತ್ತ್ವಶಾಸ್ತ್ರಜ್ಞ ಜಾಕಸ್ ಡೆರಿಡ ಬರೆವಣಿಗಳು, ವಿಶೇಷವಾಗಿ ಅವನ ಡಿಕಂಸ್ಟ್ರಕ್ಶನ್ ಅಥವಾ ಅಪರಚನೆ ಭಾಷೆಯ ಸಾಪೇಕ್ಷಿಕ ಚಳುವಳಿಗೆ ನಿಕಟವಾಗಿ ಸಂಬಂಧಿಸಿತ್ತು[] ಮತ್ತು ಅವನು ತೀರಿಕೊಂಡಾಗ ಮಾಧ್ಯಮವು ಅವನ ಸಾಪೇಕ್ಷಿಕ ಸಿದ್ಧಾಂತವನ್ನು ತೀವ್ರವಾಗಿ ವಿಮರ್ಶಿಸಿತ್ತು.[]

ಶೈಲಿಶಾಸ್ತ್ರವು ಪಠ್ಯಗಳ ಅವುಗಳ ಭಾಷಿಕ ಅಂಶ ಮತ್ತು ವಿಶಿಷ್ಟ ಉಚ್ಛಾರಣೆಯ ಶೈಲಿಯ ಅಧ್ಯಯನ ಮತ್ತು ವಿಶ್ಲೇಷಣೆ. ಶೈಲಿ ಶಾಸ್ತ್ರದ ವಿಶ್ಲೇಷಣೆಯು ಭಾಷಿಕ ಸಮುದಾಯದ ನಿರ್ದಿಷ್ಟ ಉಪಭಾಷೆಯ ವಿವರಣೆ ಮತ್ತು ನುಡಿ ಸಮುದಾಯಗಳ ರಿಜಿಸ್ಟರುಗಳ ವಿಶ್ಲೇಷಣೆಯನ್ನು ಒಳಗೊಂಡಿದೆ. ಶೈಲಿಯ ವೈಲಕ್ಷಣಗಳಲ್ಲಿ ಭಾಷಣಕಲೆ,[] ಕಥನಶೈಲಿ, ಒತ್ತಡ, ವಿಡಂಬನೆ, ವ್ಯಂಗ್ಯ, ಸಂವಾದ ಮತ್ತು ಇತರ ದ್ವನಿ ವ್ಯತ್ಯಾಸದ ರೂಪಗಳು ಇವೆ. ಶೈಲಿಯ ವಿಶ್ಲೇಷಣೆಯು ಭಾಷೆಯ ಅಧಿಕೃತ ಸಾಹಿತ್ಯ ಕೃತಿಗಳನ್ನು, ಜನಪ್ರಿಯ ಕಲ್ಪಿತಸಾಹಿತ್ಯ, ಸುದ್ಧಿ, ಜಾಹಿರಾತುಗಳು ಮತ್ತು ಜನಪ್ರಿಯ ಸಂಸ್ಕೃತಿಯಲ್ಲಿರುವ ಇತರ ಸಂವಹನಗಳನ್ನು ಸಹ ಒಳಗೊಳ್ಳ ಬಹುದು. ಸಾಮಾನ್ಯವಾಗಿ ಭಾಷಿಗನಿಂದ ಭಾಷಿಗನಿಗೆ ಮತ್ತು ಸಮುದಾಯದಿಂದ ಸಮುದಾಯಕ್ಕೆ ಆಗುವ ಬದಲಾವಣೆಗಳನ್ನು ಸಂವಹನದಲ್ಲಿನ ವ್ಯತ್ಯಾಸವೆಂದು ಭಾವಿಸಲಾಗುತ್ತದೆ. ಸರಳವಾಗಿ ಹೇಳುವುದಾದರೆ ಶೈಲಿಶಾಸ್ತ್ರವು ಪಠ್ಯದ ವಿಶ್ಲೇಷಣೆ.

ಅಧ್ಯಯನದ ವಿಧಾನಗಳು

ಬದಲಾಯಿಸಿ

ಭಾಷಾವಿದ್ಯೆಯ ಹಂಬಲಿಕೆಯಲ್ಲಿ ಒಂದು ಪ್ರಮುಖವಾದ ಚಚೇ೯ ಏನೆಂದರೆ ಭಾಷೆ ಹೇಗೆ ವಿವರಿಸಬೇಕು ಮತ್ತು ಅತೈ೯ಸಬೇಕು ಎಂಬುದು. ಕೆಲವು ಭಾಷಾವಿದ್ಯೆಯೂ ಮುಖ್ಯವಾಗಿ "ಭಾಷೆ" ಅನ್ನೋ ಶಬ್ದವನ್ನು ಪೊವ೯ಸಿದ್ದಾಂತಕ್ಕೆ ನಿದೇ೯ಶಿಸಿದೆ. ಮನುಷ್ಯನ ಮೆದುಳಿನ ಸಹಜವಾದ ಅಳತೆಯ ಪ್ರಮಾಣ ಜನರನ್ನು ಭಾಷಾಶಾಸ್ತ್ರ ನಡತೆಯನ್ನು ವಹಿಸಿಕೊಳ್ಳುವಂತೆ ಮಾಡುತ್ತದೆ ಇದು ಕ್ರಮಬದ್ದ ಮಾಗ೯ದ ಒಂದು ಭಾಗ. ಈ ಸವೇ೯ಸಾಮಾನ್ಯ ವ್ಯಾಕರಣ ಮಕ್ಕಳು ಭಾಷೆಯನ್ನು ಕಲಿಯುವಾಗ ಮಾಗ೯ದಶ೯ನ ಮಾಡುತ್ತದೆ ಎಂದು ಒಪ್ಪಿಕೊಂಡಿದೆ ಮತ್ತು ಯಾವುದೇ ಭಾಷೆಯಲ್ಲಿ ವಾಕ್ಯಗಳು ವ್ಯಾಕರಣ ಬದ್ದವಾಗಿ ಇರಬೇಕು ಎಂದು ನಿಬ೯ಂದಿಸುತ್ತದೆ. ಪ್ರಪೊನೆನ್ಟ್ಸ್ ಗಳ ದೃಷ್ಟಿಯಲ್ಲಿ ಭಾಷಾವಿದ್ಯೆಯ ಶಾಲೆಗಳು ಯಾವುದು ಪ್ರಬಲವೊ ಅದು ನಾಮ್ ಚಾಮ್ಸ್ಕಿ ಯ ಜನನದ ಸಿದ್ದಾಂತದ ಮೇಲೆ ನಿಂತಿರುತ್ತದೆ,ಆ ಭಾಷೆ ನಿದಿ೯ಷ್ಟವಾಗಿ ಸಂಪಕ೯ಕ್ಕೆ ವಿಕಸಿತವಾಗಿರುತ್ತದೆ ಎಂದು ಅವಶ್ಯಕವಿರದೆ ಪರಿಗಣಿಸುತ್ತದೆ ಅದಕ್ಕೆ ಬದಲಾಗಿ ಹಂತ ಹಂತವಾದ ಮನುಷ್ಯನ ಆಲೋಚನೆಗಳ ಜೋತೆ ಇದು ಮಾಡುವುದಕ್ಕೆ ಹೆಚ್ಚನ್ನು ಹೊಂದಿರುತ್ತದೆ ಎಂದು ಅವರು ಒಪ್ಪಿಕೊಂಡಿದ್ದಾರೆ. ಮತ್ತೊಂದು ಭಾಷಾಶಾಸ್ತ್ರಗ್ನರ ತಂಡ ತಾರತಮ್ಯದ ಮೂಲಕ "ಭಾಷೆ" ಅನ್ನೋ ಶಬ್ದವನ್ನು ಸಮೂಹ ವ್ಯವಸ್ಠೆಗೆ ಹೋಂದಿಸುತ್ತದೆ ಅದು ಸಹಕಾರ ಚಟುವಟಿಕೆಗಳಿಗೆ ಸಹಾಯ ಮಾಡುತ್ತದೆ ಮತ್ತು ಸಹಕಾರ ಜಾಲಬಂದವನ್ನು ವಿಶಾಲ ಮಾಡುವಂತೆ ಅಬಿವೃದ್ದಿ ಹೊಂದಿತ್ತು. ಇಂತಹ ವ್ಯಾಕರಣ ಕಾಯ೯ಸಂಬಂದದ ಅಭಿಪ್ರಾಯ ಭಾಷೆಯನ್ನು ಒಂದು ಉಪಕರಣದಂತೆ ನೋಡುತ್ತಾರೆ. ಅದು ಬಯಲಿಗೆ ಬರುವಂತೆ ಮತ್ತು ಸಂಪಕ೯ದ ಅವಶ್ಯಕತೆಗಳು ಅದರ ಬಳಕೆಯನ್ನು ಹೋಂದಿರುತ್ತದೆ ಮತ್ತು ಸಂಪ್ರದಾಯ ವಿಕಸನ ಪ್ರಕ್ರಿಯೆಗಳ ಪಾತ್ರ ಆಗಾಗ್ಗೆ ಜೀವಶಾಸ್ತ್ರಕ್ಕೆ ಸಂಬಂದಿಸಿದ ವಿಕಸನಗಳ ಮೇಲೆ ಒತ್ತಿಹೇಳಿದೆ.

ವೈಧಾನಿಕತೆ

ಬದಲಾಯಿಸಿ

ಭಾಷಾಶಾಸ್ತ್ರ ಪ್ರಧಾನವಾಗಿ ವಿವರಣಾತ್ಮಕ ಭಾಷಾಶಾಸ್ತ್ರಗ್ನರು ವ್ಯಕ್ತಿನಿಷ್ಟ ತೀಪ೯ನ್ನು ಮಾಡದೆ ನಿದಿ೯ಷ್ಟ ಲಕ್ಷಣದ ಮೇಲೆ ಅತವ ಒಳ್ಳೆದು ಅತವ ಕೆಟ್ಟದ್ದು ಎನ್ನುವ ಪದ್ದತಿಯ ಮೇಲೆ ಭಾಷೆಯ ಲಕ್ಷಣಗಳನ್ನು ವಣಿ೯ಸುತ್ತಾರೆ ಮತ್ತು ವಿಕಸನಗೊಳಿಸುತ್ತಾರೆ. ಇದು ಬೇರೆ ವಿಜ್ಞಾನಗಳಲ್ಲಿ ಇದು ಆಚರಣೆಗೆ ಸದೃಶ, ಪ್ರಾಣಿಶಾಸ್ತ್ರಜ್ಞರು ಪ್ರಾಣಿ ಸಾಮ್ರಾಜ್ಯದ ಮೇಲೆ ಅಧ್ಯಯನ ಮಾಡುತ್ತಾರೆ. ಒಂದು ನಿದಿ೯ಷ್ಟ ಪ್ರಾಣಿ ಬೇರೆ ಪ್ರಾಣಿಗಳಿಗಿಂತ ಹೆಚ್ಚು ಅತವ ಕಡಿಮೆ ವಿಕಾರಗೊಂಡಿದೆ ಎಂಬುದರ ಮೇಲೆ ವಸ್ತುನಿಷ್ಟ ನಿಣ೯ಯ ಮಾಡದೆ ಅದ್ಯಯನ ಮಾಡುತ್ತಾರೆ. ನಿರ್ದೇಶಾತ್ಮಕ (prescriptive) ವಿಧಾನದಲ್ಲಿ ನಿದಿ೯ಷ್ಟವಾದ ಭಾಷಾಬಳಕೆಯ ಪದ್ದತಿಯನ್ನು ಬೇರೆಯ ಪದ್ಧತಿಯ ಬದಲು ಪ್ರೋತ್ಸಾಹಿಸುವ ಪ್ರಯತ್ನ ಇರುತ್ತದೆ. ಹಲವು ಬಾರಿ ನಿದಿ೯ಷ್ಟ ನಾಡಭಾಷೆಯ ವಿಶ್ವಾಸ ಅತವ ಆಕ್ರೋಲೆಕ್ಟ್. ಇದು ಭಾಷೆಶಾಸ್ತ್ರದ ಪ್ರಮಾಣವನ್ನು ಸ್ತಿರಗೊಳಿಸುವ ಗುರಿಯನ್ನು ಹೊಂದಿರಬಹುದು, ಇದು ವಿಸ್ತಾರವದ ಭೋಗೊಳಿಕ ಪ್ರದೇಶಗಳ ಮೇರೆದಾಟ ಸಂಪಕ೯ಕ್ಕೆ ಸಹಾಯ ಮಾಡಬಹುದು, ಇದೂ ಕೂಡ,ಹೇಗಿದ್ದರೂ ಒಂದು ಭಾಷೆ ಮಾತನಾಡುವವರ ಅತವ ಆಡನುಡಿ ಮಾತನಾಡುವವರ ಮೇಲೆ ಪ್ರಭಾವ ಬೀರುವ ಪ್ರಯತ್ನ (ಭಾಷಾಶಾಸ್ತ್ರ ಸಾಮ್ರಾಜ್ಯಶಾಹಿ ನೋಡಿ) ವಿಪರೀತವಾದ ಪ್ರಿಸ್ಕ್ರಿಪ್ಟಿವಿಸಮ್ ನ ಭಾಷಾಂತರ ಪೂವ೯ ಪರಿಶೀಲಕರ ಮದ್ಯೆ ಕಂಡುಕೊಳ್ಳಬಹುದು, ಅವರು ಸುದ್ದಿ ಮತ್ತು ವಿನ್ಯಾಸವನ್ನು ನಿಮೂ೯ಲನೆ ಮಾಡಲು ಪ್ರಯತ್ನಿಸುತ್ತಾರೆ, ಅವರು ಇದು ಸಮಾಜಕ್ಕೆ ಹಾನಿಕಾರಕ ಎಂದು ತಿಳಿದುಕೊಂಡಿರುತ್ತಾರೆ. ವಿದಿ, ಹೇಗಿದ್ದರೂ, ಭಾಷೆಯನ್ನು ಕಲಿಸುವಲ್ಲಿ ಇದನ್ನು ಅಭ್ಯಾಸ ಮಾಡಿಸಲಾಗುತ್ತಿತ್ತು,ಅಲ್ಲಿ ನಿಶ್ಚಯವಾದ ಅತ್ಯವಶ್ಯಕ ವ್ಯಾಕರಣ ಬದ್ದವಾದ ನಿಯಮಗಳು ಮತ್ತು ಅದಕ್ಕೆ ಸಂಬಂದಿಸಿದ ಶಬ್ದಗಳು ದ್ವಿತೀಯ ಭಾಷೆ ಮಾತನಾಡುವವರಿಗೆ ಪರಿಚಯಿಸಲು ಬಯಸುತ್ತವೆ, ಅವರು ಭಾಷೆಯನ್ನು ಒಳಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ.

ಸಂಶೋಧನೆಯ ವಲಯಗಳು

ಬದಲಾಯಿಸಿ

ಐತಿಹಾಸಿಕ ಭಾಷಾಶಾಸ್ತ್ರ

ಬದಲಾಯಿಸಿ

ಐತಿಹಾಸಿಕ ಭಾಷಾಶಾಸ್ತ್ರಜ್ಞರು ನಿರ್ದಿಷ್ಟ ಭಾಷೆಗಳ ಇತಿಹಾಸ ಹಾಗೂ ಭಾಷೆ ಬದಲಾವಣೆಯ ಸಾಮಾನ್ಯ ಗುಣಲಕ್ಷಣಗಳ ಬಗ್ಗೆ ಕುರಿತು ಅಭ್ಯಸಿಸುತ್ತಾರೆ. ಸಿಂಕ್ರೋನಿಕ್(ಸಮಯದಲ್ಲಿ ಹಿಂದಿನ ಹಂತಗಳನ್ನು ಪರಿಗಣಿಸದೆ ಒಂದು ನಿರ್ದಷ್ಟ ಕ್ಷಣದಲ್ಲಿ ಒಂದಕ್ಕಿಂತ ಹೆಚ್ಚಿ ಭಾಷೆಗಳಲ್ಲಿ ತುಲನಾತ್ಮಕ ಅದ್ಯಯನ ಮಾಡುವುದು) ಭಾಷಾಶಾಸ್ತ್ರದಿಂದ ವ್ಯತ್ಯಾಸಪಡಿಬಹುದಾದಂತಹ ಭಾಷೆಯ ಬದಲಾವಣೆಯ ಅದ್ಯಯನವನ್ನು ಡಯಾಕ್ರೋನಿಕ್(ಒಂದು ನಿರ್ದಿಷ್ಟ ಭಾಷೆ ಕಾಲಾಂತರದಲ್ಲಿ ಹೇಗೆ ಬದಲಾಗಿದೆ ಎಂದು ಅದ್ಯಯನ ಮಾಡುವುದು) ಭಾಷಾಶಾಸ್ತ್ರ ಎಂದು ಕರೆಯತ್ತಾರೆ. ಐತಿಹಾಸಿಕ ಭಾಷಾಶಾಸ್ತ್ರವು ಭಾಷಾಶಾಸ್ತ್ರಗಳಲ್ಲಿ ಹೊರಹೊಮ್ಮಿದ ವಲಯಗಳಲ್ಲಿ ಮೊದಲ ಉಪ-ನಿಯಮವಾಗಿತ್ತು. ಇದು ೧೯ನೇ ಶತಮಾನದ ಭಾಷಾಧ್ಯನದ ಅತ್ಯಂತ ವ್ಯಾಪಕವಾದಂತಹ ಅಭ್ಯಾಸರೊಪಕವಾಗಿತ್ತು. ಆದರೆ, ೨೦ನೇ ಶತಮಾನದ ಆರಂಭದಲ್ಲಿ ಸೌಸ್ಸುರ್ ಬರುವುದರೊಂದಗೆ ಸಿಂಕ್ರೋನಿಕ್ ದೃಷ್ಟಿಕೋನಗಳಲ್ಲಿ ಒಂದು ಸಣ್ಣ ಬದಲಾವಣೆ ಕಂಡಿತು, ಮತ್ತು, ಪಾಶ್ಚಿಮಾತ್ಯ ಭಾಷಾಶಾಸ್ತ್ರದಲ್ಲಿ ನೋಮ್ ಚಾಮ್ಸ್ಕಿನ ಕೃತಿಯೊಂದಿಗೆ ಈ ಶತಮಾನ ಹಚ್ಚು ಪ್ರಮುಋ ಆಯಿತು.

ಸಾಮಾಜಿಕ ಭಾಷಾಶಾಸ್ತ್ರ

ಬದಲಾಯಿಸಿ

ಸಾಮಾಜಿಕ ಭಾಷಾಶಾಸ್ತ್ರವು ಭಾಷೆ ಸಾಮಾಜಿಕ ಹೇಗೆ ಆಕಾರಗೊಂಡಿದೆ ಎಂಬುದರ ಬಗ್ಗೆ ಕುರಿತು ಅದ್ಯಯನ ಮಾಡುವಂತಹ ಅಧ್ಯಯನವಾಗಿದೆ. ಈ ಉಫ-ಶಿಸ್ತು ಸಿಂಕ್ರೊನಿಕ್ ಭಾಷೆಯ ವಿಧಾನದ ಮೇಲೆ ಕೇಂದ್ರೀಕರಿಸುತ್ತದೆ, ಮತ್ತು ಒಂದು ಭಾಷೆ ಸಾಮಾನ್ಯವಾಗಿ ಹೇಗೆ ಅಥವಾ ಒಂದು ನಿರ್ದಷ್ಟ ಹಂತದಲ್ಲಿ ಭಾಷೆ ಹೇಗೆ ಆಕಾರಗೊಂಡಿದೆ ಎಂಬುದರ ಮೇಲೆ ಕೇಂದ್ರೀಕರಿಸುತ್ತದೆ. ಉಪಭಾಷೆ, ರೆಜಿಸ್ಟರ್, ಈಡಿಯೋಲೆಕ್ಟ್ಸ್, ಭಾಷೆಯ ಶೈಲಿ ಹಾಗೇಯೆ ಪ್ರವಚನದ ವಿಶ್ಲೇಷಣೆಯ ಮೂಲಕ ಭಾಷೆಯ ವ್ಯತ್ಯಾಸದ ಅಧ್ಯಯನ ಮತ್ತು ವಿಭಿನ್ನ ಭಾಷೆಯ ಅಧ್ಯಯನ ಮೂಲಕ ನಿಭಾಯಿಸಬಹುದು ಮತ್ತು ಕಾಣಬಹುದು. ಸಾಮಾಜಿಕ ಭಾಷಾಶಾಸ್ತ್ರ ಭಾಷೆಯಲ್ಲಿ ಶೈಲಿ ಮತ್ತು ಪ್ರವಚನಗಳ ಬಗ್ಗೆ ಅಧ್ಯಯನ ಮಾಡುತ್ತದೆ. ಭಾಷೆ ಮತ್ತು ಸಮಾಜ ಎಂಬಂತಹ ಆಟದ ಸೈದ್ದಾಂತಿಕ ಅಂಶಗಳನ್ನು ಸಹ ಇದು ಅಧ್ಯಯನ ಮಾಡುತ್ತದೆ.

ಅಭಿವೃದ್ಧಿ ಭಾಷಾಶಾಸ್ತ್ರ

ಬದಲಾಯಿಸಿ

ಅಭಿವೃದ್ದಿ ಭಾಷಾಶಾಸ್ತ್ರವು ವ್ಯಕ್ತಿಗಳಲ್ಲಿನ ಭಾಷಾ ಸಾಮರ್ಥ್ಯದ ಮತ್ತು ವಿಶೇಷವಾಗಿ ಬಾಲ್ಯದಲ್ಲಿ ಭಾಷೆ ಸಾಧೀನ ಅಭಿವೃದ್ದಿ ಬಗ್ಗೆ ಅಧ್ಯಯನ ಮಾಡುವಂತಹ ಅಧ್ಯಯನವಾಗಿದೆ. ಬೆಳೆವಣಿಗೆಯ ಭಾಷೆಶಾಸ್ತ್ರ ಕೆಲವೊಂದು ಪ್ರಶ್ನೆಗಳಲ್ಲಿ ನೋಡುವ ಪ್ರಶ್ನಗಳೆಂದರೆ: ೧)ಹೇಗೆ ಮಕ್ಕಳು ಭಾಷೆಯನ್ನು ಸಾಧೀನಪಡಿಸಿಕೊಳ್ಳುತ್ತಾರೆ? ೨)ಒಬ್ಬ ವಯಸ್ಕ ಹೇಗೆ ಎರಡನೇಯ ಭಾಷೆಯನ್ನು ಸಾಧೀನಪಡಿಸಿಕೊಳ್ಳುತ್ತಾನೆ ೩)ಭಾಷೆಯ ಸ್ವಾಧೀನದ ಪ್ರಕ್ರಿಯೆ ಎಂದರೇನು?

ನ್ಯೂರೋಲಿಂಗ್ವಿಸ್ಟಿಕ್ಸ್

ಬದಲಾಯಿಸಿ

ವ್ಯಾಕರಣ ಮತ್ತು ಸಂವಹನವನ್ನು ಆಧಾರಗೊಳಿಸುವಂತಹ ಮನುಷ್ಯನ ಮೆದುಳಿನಲ್ಲಿನ ರಚನೆಯ ಬಗ್ಗೆ ಅಧ್ಯಯನ ಮಾಡುವಂತಹ ಅಧ್ಯಯನವಾಗಿದೆ. ಸಂಶೋದಕರನ್ನು ವಿವಿಧ ಪ್ಯಯೋಗಾತ್ಮಕ ಕಲಾಕೌಶಲ್ಯ (ತಂತ್ರಗಳಲ್ಲಿ)ಗಳಲ್ಲಿ ಹಾಗೆಯೇ ವ್ಯಾಪಕವಾಗಿ ಬದಲಾಗುವ ಸೈದ್ದಾಂತಿಕ ದೃಷ್ಟಿಕೋನಗಳ ಜೋತೆಗೆ, ಹಿನ್ನಲೆಯಲ್ಲಿ ವಿವಿಧ ಕ್ಷೇತ್ರಗಳಿಗೆ(ಕ್ಷೇತ್ರಗಳಲ್ಲಿ) ಎಳೆಯಲಾಗುತ್ತದೆ. ನ್ಯೋರೋಲಿಂಗ್ವಿಸ್ಟಿಕ್ಸ್ ನಲ್ಲಿ ಹೆಚ್ಚಿನಕೆಲಸವನ್ನು ಮಾನಸಿಕ ಮತ್ತು ಸೈದ್ದಾಂತಿಕ ಭಾಷಾಶಾಸ್ತ್ರಗಳ ಮಾದರಿಯ ಮೂಲಕ ಮಾಹಿತಿ ನೀಡಲ್ಪಟ್ಟಿದೆ. ನ್ಯೋರೋಲಿಂಗ್ವಿಸ್ಟಿಕ್ಸ್ ಯನ್ನು ಮನಷ್ಯನ ಮೆದುಳು ಪ್ರಕ್ರಿಯೆಯನ್ನು ಹೇಗೆ ಕಾರ್ಯಗತಗೊಳಿಸಲು ಸಾಧ್ಯ ಎಂಬುದರ ಮೇಲೆ ಕೇಂದ್ರಿಕರಿಸಲಾಗಿದೆ. ಆ ಸೈದ್ದಾಂತಿಕ ಮೆದುಳಿನ ಪ್ರಸ್ತಾವದ ಭಾಷೆಯನ್ನು ಉತ್ಪಾದಿಸುವುದರಲ್ಲಿ ಮತ್ತು ಗ್ರಹಿಸುವುದರಲ್ಲಿ ಅತ್ಯವಶ್ಯಕವಾಗಿದೆ. ನ್ಯೋರೋಲಿಂಗ್ವಿಸ್ಟಿಕ್ಸ್ ಮಾನವನ ಶಾರೀರಕ ಕಾರ್ಯವಿಧಾನಗಳ ಬಗ್ಗೆ ಕುರಿತು ಅಧ್ಯಯನ ಮಾಡುತ್ತದೆ. ಮತ್ತು ಭಾಷೆಗೆ ಸಂಬಂದಿಸಿದಂತೆ ಮಾಹಿತಿಯನ್ನು ಮಾನವನ ಮದುಳು ಪ್ರಕ್ರಿಯೇಗೊಳಿಸುತ್ತದೆ ಎಂಬುದರ ಬಗ್ಗೆ ಸಹ ಅಧ್ಯಯನ ಮಾಡುತ್ತದೆ. ಇದು ಭಾಷೆ, ಸೈಕೋಲಿಂಗ್ವಿಸ್ಟಿಕ್ಸ್ ಮೆದುಳಿನ ಚಿತ್ರಣ, ಕಂಪ್ಯೂಟರ್ ಮಾಡ್ಲಿಂಗ್, ಎಲೆಕ್ಟ್ರೋಫಿಸಿಯಾಲಜಿ, ಮತ್ತು, ಅಫಾಸಿಯೋಲಜಿಯ ಬಗ್ಗೆ ಮೌಲ್ಯಮಾಪನ ಮಾಡುತ್ತದೆ.

ಅನ್ವಯಿಕ ಭಾಷಾಶಾಸ್ತ್ರ

ಬದಲಾಯಿಸಿ

ಭಾಷಾಶಾಸ್ತ್ರಜ್ಙರು ಹೆಚ್ಚಾಗಿ ಭಾಷೆಗಳೊಳಗೆ ಮತ್ತು ಎಲ್ಲಾ ಭಾಷೆಗಳೊರಡಲೋ ಅಂದರೆ ಭಿನ್ನತೆಗಳನ್ನು ಮತ್ತು ಸಾರ್ವತ್ಯಿಕತೆಗಳನ್ನು ಹುಡುಕುವುದರ ಮತ್ತು ವರ್ಣಿಸುವುದರ ಜೊತೆಗೆ ಸಂಭಂದಿಸಲಾಗಿದೆ. ಅನ್ವಯಿಕ ಭಾಷಾಶಾಸ್ತ್ರಜ್ಙರು ಆ ಸಂಶೋಧನೆಗಳ ಫಲಿತಾಂಶಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಇತರ ಪ್ರದೇಶಗಳಲ್ಲಿ ಅವರನ್ನು "ಅನ್ವಯಿಸುತ್ತದೆ". ಭಾಷಾ ಸಂಶೋಧನೆ ಸಾಮಾನ್ಯವಾಗಿ ಕೆಲವೊಂದು ವಲಯಗಳಿಗೇ ಅನ್ವಯಿಸಲಾಗಿದೆ. ಆ ವಲಯಗಳೆಂದರೆ ಭಾಷೆಶಿಕ್ಷಣ, ನಿಘಂಟುರಚನೆ, ಅನುವಾದ, ಭಾಷಾಯೋಜನೆ, ಇತ್ಯಾದಿ. ಈ ವಲಯಗಳು ಸರ್ಕಾರದ ಮಟ್ಟದ ನೀತಿ ಮತ್ತು ಸ್ಲಾಭಾವಿಕ ಭಾಷೆ ಸಂಸ್ಕರಣೆ ಪ್ರದೇಶಗಳಿಗೆ ಒಳಗೊಂಡಿದೆ ಮತ್ತು ಅನ್ವಯಿಸಲಾಗಿದೆ. "ಅನ್ವಯಿಕ ಶಾಸ್ತ್ರ" ತಪ್ಪಾಗಿದ್ದೋ ಇಲ್ಲವೋ ಎಂದು ವಾದಿಸಲಾಗಿದೆ. ಅನ್ವಯಿಕ ಭಾಷಾಶಾಸ್ತ್ರಜ್ಙರು ವಾಸ್ತವವಾಗಿ ನೈಜ್ಯಜಗತ್ತಿನ ಭಾಷಾ ಸಮಸ್ಯಗಳಿಗೆ ಸಂಬಂಸಿದಂತೆ ಮತ್ತು ಎಂಜಿನಿಯರಿಂಗ್ ಪರಿಹಾರೋಪಾಯವನ್ನು ಮಾಡುವಂತಹ ಜ್ಙಾನದ ಮೇಲೆ ಗಮನ ಇಡುತ್ತದೆ. ಇದು ಅಸ್ತಿತ್ವದಲ್ಲಿರುವ ತಾಂತ್ರಿಕ ಜ್ಙಾನವನ್ನು ಭಾಷಾಶಾಸ್ತ್ರಜ್ಙರಿಂದ ಅನ್ವಯಿಸುವುದಿಲ್ಲ. ಇದಲ್ಲದೆ ಅವರು ಸಾಮಾನ್ಯವಾಗಿ ಬಹುಮೂಲೆಗಳಿಂದ ಅನ್ವಯಿಸುತ್ತಾರೆ. ಆ ಬಹು ಮೂಲೆಗಳೆಂದರೆ ಸಮಾಜಶಾಸ್ತ್ರ (ಉದಾಹರಣೆಗೆ, ಸಂಭಾಷಣೆ ವಿಶ್ಲೇಷಣೆ) ಮತ್ತು ಮಾನವಶಾಸ್ತ್ರ (ನಿರ್ಮಿಸಿದ್ದಂತಹ ಅನ್ಲಯಿಕ ಭಾಷಾಶಾಸ್ತ್ರ ಅಡಿಯಲ್ಲಿ ಹಿಡಿಸುತ್ತದೆ).

ಇಂದು, ಕಂಪ್ಯೂಟರ್ ಗಳು ವ್ಯಾಪಾಕವಾಗಿ ಅನ್ವಯಿಕ ಭಾಷಾಶಾಸ್ತ್ರದ ಅನೇಕ ಕ್ಷೇತ್ರಗಳಲ್ಲಿ ಬಳಸುತ್ತಾರೆ. ದ್ವನಿ ಸಮನ್ವಯ(ಸ್ಪೀಚ್ ಸಿನ್ಥೀಸಿಸ್) ಮತ್ತು ದ್ವನಿ ಅಂಗಿಕಾರಕ(ಸ್ಪೀಚ್ ರೆಕಗ್ನಿಷನ್) ಕಂಪ್ಯೂಟರ್ ಗಳಿಗೆ ದ್ವನಿ ಇಂಟರ್ ಫೇಸ್ಗಳನ್ನು ಒದಗಿಸುವುದಕ್ಕೆ ಫೊನೆಟಿಕ್ ಮತ್ತು ಫೊನಿಮಿಕ್ ಗಳನ್ನು ಬಳಸ್ಸುತ್ತಾರೆ. ಯಂತ್ರಭಾಷಾಂತರ, ಕಂಪ್ಯೂಟರ್ ನೆರವಿನಿಂದ ಅನುವಾದ, ಸ್ವಾಭಾವಿಕ ಭಾಷೆ ಸಂಸ್ಕರಣೆಯಲ್ಲಿನ ಅಪ್ಲಿಕೇಶನ್ ಆಫ್ ಕಂಪ್ಯೂಟೇಶನಲ್ ಲಿಂಗ್ವಿಸ್ಟಿಕ್ಸ್ ಗಳು ಅನ್ವಯಿಕ ಭಾಷಾಶಾಸ್ತ್ರಗಳು ಪ್ರದೇಶಗಳಾಗಿವೆ. ಆ ಅಪ್ಲಿಕೇಶನ್ ಆಫ್ ಕಂಪ್ಯೂಟೇಶನಲ್ಗಳ ಪ್ರಭಾವದಿಂದ ಕಂಪ್ಯೂಟರ್ ನಿರ್ಬಂಧಗಳು ವಾಕ್ಯರಚನೆಯ ಮತ್ತು ಲಾಕ್ಷಣಿಕ ಸಿದ್ದಾಂತಗಳ ಮಾದರಿಯ ರಚನೆ, ವಾಕ್ಯರಚನೆ, ಮತ್ತು ಸೆಮ್ಯಾಂಟಿಕ್ಸ್ ಸಿದ್ದಾಂತಗಳ ಮೇಲೆ ಪ್ರಭಾವ ಬೀರಿದೆ.

ಭಾಷಾಧ್ಯಯದ ವಿಶ್ಲೇಷಣೆ ಅನ್ವಯಿಕ ಭಾಷಾಶಾಸ್ತ್ರದ ಒಂದು ಉಪ ಶಿಸ್ತುಆಗಿದೆ. ತಮ್ಮ ಹಕ್ಕುಗಳನ್ನು ಸಾಬೀತಾಪಡಿಸಲು ಅತ್ಯವಶ್ಯಕವಾದ ದಾಖಲೆಗಳನ್ನು ಹೊಂದಿಲ್ಲದೆ ಇರುವವರು ಮತ್ತು ರಕ್ಷಣೆಯನ್ನು ಹುಡುಕುತ್ತಾ ಇರುವಂತಹ ಜನರ ರಾಷ್ಟೀಯತೆ ಹಕ್ಕುಗಳನ್ನು ಪರಿಶೀಲಿಸಲು ಈವೊಂದು ಉಪಶಿಸ್ತಿನ ಕ್ರಮವನ್ನು ಹಲವಾರು ಸರ್ಕಾರಗಳಿಂದ ಬಳಸುತ್ತಾರೆ. ವಲಯ ಇಲಾಖೆಯಲ್ಲಿ ಉದ್ಯೋಗಿ ಸಿಬ್ಬಂದಿಗಳಿಂದ ಇದು ಮುಖಾಮುಖಿ ಸಂದರ್ಶದ ರಚನೆಯನ್ನು ತಗೆದುಕೊಳ್ಳುತ್ತದೆ. ರಾಷ್ಟ್ರವನ್ನು ಅವಲಂಬಿಸಿ ಈ ಸಂದರ್ಶನವನ್ನು ಒಂದು ವಿವರಣೆಯ ಮೂಲಕ ಅಸಿಲಮ್ ಸ್ಪೀಕರ್ ನ ಸ್ಥಳೀಯ ಭಾಷೆ ಅಥವಾ ಇಂಗ್ಲೀಷ್ ನಂತಹ ಅಂತಾರಾಷ್ರೀಯ ಸಂಪರ್ಕ ಮಾದ್ಯಮಗಳೆರಡರಲ್ಲಿಯೂ ನಡೆಸಲಾಗುತ್ತದೆ.ಆಸ್ಟ್ರೇಲಿಯಾ ಮಾಜಿ ವಿಧಾನವನ್ನು ಬಳಸುತ್ತದೆ, ಜರ್ಮನಿ ನಂತರದ ಕೆಲಸ ಮಾಡುತ್ತದೆ, ನೆದರ್ಲ್ಯಾಂಡ್ಸ್ ಅವಲಂಭಿತ ವಿಧಾನ ಮತ್ತು ಒಳಗೊಂಡಿರುವ ಭಾಷೆಗಳೆರಡನ್ನೂ ಸಹ ಒಳಗೊಂಡಿರುವ ಭಾಷೆಗಳೆರಡನ್ನೂ ಸಹ ಬಳಸುತ್ತದೆ. ಖಾಸಗಿ ಗುತ್ತಿಗೆದಾರರಿಂದಲೂ ಅಥವಾ ಸರ್ಕಾರದ ಇಲಾಖೆ(ವಿಭಾಗ) ಒಳಗೆ ಇಂದಿಲೂ ಮಾಡಲ್ಪಡುವಂತಹ ಭಾಷೆಯ ವಿಶ್ಲೇಷಣೆಯನ್ನು ಸಂದರ್ಶನತ ಟೇಪ್ ದ್ವನಿಮುದ್ರಣಗಳು ಒಳಗೊಳ್ಳುತ್ತದೆ. ಅಸಿಲಮ್ ಸ್ಪೀಕರ್ನ ಭಾಷಾಶಾಸ್ತ್ರದ ವೈಶಿಷ್ಟ್ಯಕರಿಂದ ಬಳಸಲ್ಪಡುತ್ತವೆ. ಭಾಷಾಶಾಸ್ತ್ರ ವಿಶ್ಲೇಷಣೆಯ ವರದಿಪಡಿಸಿದಂತಹ ವಿಶ್ಲೇಷಣೆಗಳು ಅಸಿಲಮ್ ಸ್ಪೀಕರ್ ನಿರಾಶ್ರಿತರ ಸ್ಥಾನಮಾನಗಳ ಬಗ್ಗೆ ಒಂದು ನಿರ್ಣಯವಾದ ಪಾತ್ರವನ್ನು ವಹಿಸುತ್ತವೆ.

ಭಾಷಾಶಾಸ್ತ್ರಗಳ ವಿಶಾಲವಾದ ವಿಭಾಗಗಳೊಳಗೆ, ವಿವಿಧ ಉದಯೋನ್ನುಖ ಉಪ-ನಿಯಮಗಳು ಹೆಚ್ಚು ವಿವರವಾದ ವಿವರಣೆ ಮತ್ತು ಭಾಷೆಯ ವಿಶ್ಲೇಷಣೆಯ ಮೇಲೆ ಗಮನ ಹರಿಸುತ್ತವೆ. ಈ ವಿವಿಧ ಉದಯೋನ್ಮಖ ಉಪನಿಯಮಗಳು ಶಾಲೆಯ ಚಿಂತನೆಯ ಮತ್ತು ಸೈದ್ಥಾಂತಿಕ ವಿಧಾನ(ದೃಷ್ಟಿಕೋನ) ಆಧಾರದ ಮೇಲೆ ಆಯೋಜಿಸಲಾಗಿದೆ. ಈ ವಿಚಾರಗಳು ಪೂರ್ವ ಊಹಿಸುತ್ತವೆ, ಅಥವಾ, ಬಾಹ್ಯ ಅಂಶಗಳು ಅವುಗಳ ಮೇಲೆ ಪ್ರಭಾವ ಬೀರುತ್ತವೆ.

ಅಂತರ್ ಶಿಸ್ತೀಯ ಅಧ್ಯಯನಗಳು

ಬದಲಾಯಿಸಿ

ಸೀಮಿಯೊಟಿಕ್ಸ್ ಸೈನ್ ಪ್ರಕ್ರಿಯೆ ಮಾಡುವಂತಹ ಅಧ್ಯಯನವಾಗಿದೆ, ಅಥವಾ, ಅಭಿಪ್ಯಾಯಗಳನ್ನು ವ್ಯಕ್ತಪಡಿಸುವಂತಹ ಮತ್ತು ಸಂವಹನ, ಗುರುತುಗಳು, ಗುಂಪಾಗಿರುವ ಚಿಹ್ನೆಗಳ ವ್ಯವಸ್ಧೆ, ಮತ್ತು ವಯಕ್ತಿಕವಾಗಿ ಇರುವ ಎರುಡು ವ್ಯವಸ್ಧೆಗಳ ಬಗ್ಗೆ ಅರ್ಥ ಹೇಗೆ ರಚಿಸಲ್ಪಟ್ಟಿದೆ ಮತ್ತು ತಿಳಿಯಲ್ಪಟ್ಟಿದೆ ಎಂಬುದರ ಅಧ್ಯಯನವನ್ನು ಒಳಗೊಂಡಂತೆ ಮಾಡುವ ಅಧ್ಯಯನ ವಾಗಿದೆ. ಸೀಮಿಯೊಟಿಸಿಯನ್ಸ್ ಚಿಹ್ನೆಗಳ ಬಳಕೆಯ ಅಧ್ಯಯನ ಮಾಡುವಾಗ ಎಲ್ಲಾ ರೀತಿಯ ಸಾಂಸ್ಕ್ರತಿಕ ಸಂಕೇತಗಳನ್ನು ರಕ್ಷಣೆ ಮಾಡುವುದಕ್ಕೆ ಸೈನ್ ನ ಅರ್ಥವನ್ನು ವಿಸ್ತರಿಸುವುದನ್ನು ಹೊರತುಪಡಿಸಿ ಭಾಷೆಶಾಸ್ತ್ರದ ಸಂವಹನ ಮಾಡಲು ಅವುಗಳ ಅಗ್ಗಾಗ್ಗೆ ನಿರ್ಬಂದ ವಿಧಿಸುವುದಿಲ್ಲ. ಅದಾಗ್ಯೊ ಸೀಮಿಯೊಟಿಕ್ಸ್ ನೀತಿಶಿಕ್ಷಣವು ಬಹಳಹತ್ತಿರವಾಗಿ ಭಾಷಾಶಾಸ್ತ್ರಕ್ಕೆ ಸಂಬಂದಗೊಂಡಿದೆ. ಸಂಬಂದಿತ ಭಾಷಾಶಾಸ್ತ್ರಗಳೆಂದರೆ, ಸಾಹಿತ್ಯಿಕ ಅಧ್ಯಯನಗಳು, ಪ್ರವಚನ ವಿಶ್ಲೇಷಣೆ, ಪಠ್ಯ ಭಾಷಾಶಾಸ್ತ್ರ ಮತ್ತು ಭಾಷಾ ತತ್ವಶಾಸ್ತ್ರಗಳಾಗಿವೆ. ಭಾಷಾ ತತ್ವಶಾಸ್ತ್ರ ಮಾದರಿಯ ಒಳಗೆ, ಸೀಮಿಯೊಟಿಕ್ಸ್ ಭಾಷೆ ಮತ್ತು ಸಂಸ್ಕ್ರತಿಯ ನಡುವಿನ ಸಂಭಂದವನ್ನು ಮಾಡುವ ಅಧಯನವಾಗಿದೆ. ಐತಿಹಾಸಿಕವಾಗಿ ೨೦ನೇ ಶತಮಾನದ ಕೊನೆಯವರೆಗೂ ಚಿಹ್ನೆಗಳ ಅಧ್ಯಯನದ ಮೇಲೆ ಪ್ರಭಾವಗೊಂಡವು. ಆದರೆ, ನಂತರ, ಆಧುನಿಕ ನಂತರದ ಮತ್ತು ರಚನಾತ್ಮಕ ಚಿಂತನೆ, ಭಾಷಾತತ್ವಜ್ಙಾನಿಗಳು. ಜಾಕ್ವೆಸ್ ಡೆರ್ರಿಡಾ, ಮಿಖಾಯಿಲ್ ಭಕ್ತಿನ್ ಫೌಕಾಲ್ಟ್, ಹಾಗೂ ಇತರೆಯವರೂ ಸೇರಿದಂತೆ, ೨೦ನೇ ಶತಮಾನದ ಕೊನೆಯಲ್ಲಿ ಮತ್ತು ೨೧ನೇ ಶತಮಾನತ ಆರಂಭದಲ್ಲಿ ಶಿಸ್ತಿನ ಮೇಲೆ ಗಣನೀಯವಾದ ಪ್ರಭಾವನ್ನುಹೊಂದಿದ್ದಾರೆ. ಈ ಸಿದ್ದಾಂತಗಳು ಭಾಷಾ ವ್ಯತ್ಯಾಸ ಪಾತ್ರವನ್ನು ಮತ್ತು ವಿಷಯದ ಬಳಕೆಯ ಮೇಲೆ ಹೆಚ್ಚು ಒತ್ತು ನೀಡುತ್ತವೇ. ಈ ಸಿದ್ದಾಂತಗಳ ಬಾಹ್ಯ ಅಂಶಗಳು ಪರಸ್ವರ ವರ್ತಿಸುವ ಔಪಚಾರಿಕ ಅಂಶಗಳ ಮೇಲೆ ಪ್ರಭಾವ ಬಿರುವುದಕ್ಕಿಂತ ಅಂದರೆ ಸಾಮಾಜಿಕ ಮತ್ತು ಸಾಂಸ್ಕ್ರತಿಕ ಅಂಶಗಳ ಮೇಲೆ ಪ್ರಭಾವಗೊಂಡಿವೆ.

ಲಾಂಗ್ವೇಜ್ ಡಾಕ್ಯೋಮೆಂಟೆಷನ್

ಬದಲಾಯಿಸಿ

ಭಾಷಾ ಶಿಸ್ತು ಆರಂಭದಿಂದಲೂ, ಭಾಷಾಶಾಸ್ತ್ರಜ್ಙರು ಈ ಹಿಂದೆಯೇ ವಿವರಿಸುವುದರೊಂದಿಗೆ ಮತ್ತು ವಿಶ್ಲೇಷಸುವುದರೊಂದಿಗೆ ಕಾಳಜಿವಹಿಸಲ್ಪಟ್ಟಿದ್ದಾರೆ. ೧೯೦೦ರ ಆರಂಭದಲ್ಲಿ ಫ್ರಾಂಜ್ ಬೋವಾಸ್ ರೊಂದಿಗೆ ಆರಂಭಗೊಂಡು, ಲಾಂಗ್ವಿಜ್ ಡಾಕ್ಯೋಮೆಂಟೆಷನ್ ಔಪಚಾರಿಕ ರಚನಾತ್ಮಕ ಭಾಷಾಶಾಸ್ತ್ರಗಳ ಏರಿಕೆ (ಏಳಿಗೆ) ಆಗುವವರೆ ೨೦ನೇ ಶತಮಾನದ ಮಧ್ಯ ಭಾಗದಲ್ಲಿ ಅಮೇರಿಕನ್ ಲಿಂಗ್ವಿಸ್ಟಿಕ್ಸ್ ನ ಮುಖ್ಯ ಕೇಂದ್ರಬಿಂದುವಾಯಿತು. ಇದು ಡಾಕ್ಯೋಮೆಂಟೆಷನ್ನ ಮೇಲೆ ಗಮನ ಹರಿಸುತ್ತದೆ. ಇದು ಭಾಗಶಃ ಸ್ಥಳೀಯರ ತೀರ್ವ್ರಗತಿಯಲ್ಲಿ ಕಣ್ಮರೆಯಾಗುತ್ತಿರುವ ಭಾಷೆಗಳನ್ನು ದಾಖಲಿಸಲು ಒಂದು ಆಸಕ್ತಿಯಿಂದ ಪ್ರೇರಣೆಯಾಗಲ್ಟಟ್ಟತ್ತು. ಭಾಷೆಯ ವಿವರಣೆಗೆ(ನೀಡಲು), ಬೂಯಸಿಯನ್ ವಿಧಾನದ ಜನಾಂಗೀಯ ಅಯಾಮ ಶಿಸ್ತಿನ ನಿಯಮಗಳ ಬೆಳವಣಿಗೆ ಆಗುವುದರಲ್ಲಿ ಮಹತ್ವವಾದ ಪಾತ್ರವನ್ನುವಹಿಸಿತು. ಅಂತಹ ಶಿಸ್ತಿನ ನಿಯಮಗಳೆಂದರೆ ಸಾಮಾಜಿಕ ಭಾಷಾಶಾಸ್ತ್ರಗಳು, ಮಾನವಶಾಸ್ತ್ರೀಯ ಭಾಷಾಶಾಸ್ತ್ಲಗಳು, ಭಾಷಾಶಾಸ್ತ್ರದ ಮಾನವಶಾಸ್ತ್ರಗಳು, ಇವುಗಳು ಭಾಷಿ, ಸಂಸ್ಕ್ರತಿ ಮತ್ತು ಸಮಾಜದ ನಡುವಿನ ಸಂಬಂದಗಳನ್ನು ಸಂಶೋಧನೆ ಮಾಡುತ್ತವೆ.ಭಾಷಾ ವಿವರಣೆ ಮತ್ತು ದಾಖಲೆಗಳ ಮೇಲಿನ ಓತ್ತು ಸಹ ವೇಗವಾಗಿ ಭಾಷಾಶಾಸ್ತ್ರದಲ್ಲಿ ಹಲವು ವಿಶ್ವ ವಿದ್ಯಾನಿಲಯ ಕಾರ್ಯಕ್ರಮಗಳಲ್ಲಿ ಪ್ರಾಥಮಿಕ ಗಮನ ಆಗುತ್ತಿದೆ ಸ್ಥಳೀಯ ಭಾಷೆಗಳ ಸಾಯುವ ದಸ್ತಾವೇಜರ ಜೋತೆಗೆ ಉತ್ತರ ಅಮೇರಿಕಾದ ಹೊರಗೆ ಪ್ಯಾಮುಖತೆಗಳಿಸಿದೆ. ಭಾಷಾವಿವರಣೆ ಸಾಕಷ್ಟು ನಿಖರವಾದ ಗ್ರಾಮರ್ ರೆಫರೆನ್ಸ್ಗಳನ್ನು ಬರೆಯಲು ಮತ್ತು ಭಾಷಾತಜ್ಙರನ್ನು ಸಜ್ಜುಗೊಳಿಸಲು ತೀವ್ರವಾದ ಕಾರ್ಯದವಾದದ ಪ್ರಯತ್ನವಾಗಿದೆ. ಗ್ರಾಮರ್ ರೆಫರೆನ್ಸ್ಗಳನು ಬರೆಯಲು ಮತ್ತು ಸಜ್ಜುಗೊಳಿಸಲು ತೀವ್ರವಾದ ಕಾರ್ಯದವಾದದ ಪ್ರಯತ್ನವಾಗಿದೆ. ಗ್ರಾಮರ್ ರೆಫರೆನ್ಸ್ಗಳನು ಬರೆಯಲು ಮತ್ತು ಸಜ್ಜುಗೊಳಿಸಲು ಆಸಕ್ಕಿಯಲ್ಲಿ ಇದು ಹೆಚ್ಚಿನ ವರ್ಷಗಳನ್ನು ತಗೆದುಕೊಳುತ್ತದೆ. ಪ್ರಶ್ನೆಯ ಭಾಷೆಯಲ್ಲಿ, ಹೆಚ್ಚಿನ ಸಂಶೋಧನೆಗಳಿಗಾಗಿ ಮತ್ತು ಒಂದು ಸುಲಭವಾದ ರೂಪವನ್ನು ಸಂಗ್ರಹಿಸಲು ಬಳಸಬಹುದಾದ ದ್ವನಿ ಮತ್ತು ವಿಡಿಯೋ ಎರಡನ್ನೊ, ಗ್ರಂಥಗಳನ್ನು ಮತ್ತು ರೆರ್ಕಾಂಡಿಗಳನ್ನು ಒಳಗೊಂಡಂತೆ ಗಣನೀಯ ಕಾರ್ಪಸ್ಸನ್ನು ಸಂಗ್ರಹಿಸಲು ದಾಖಲೆಯ ಕಾರ್ಯವನ್ನು(ದಿ ಟಾಸ್ಕ್ ಆಫ್ ಡಾಕ್ಯೊಮೆಂಟ್ಸ್ಗೆ) ಒಬ್ಬ ಭಾಷಾತಜ್ಜನ ಅವಶ್ಯಕತೆ ಇರುತ್ತದೆ.

ಭಾಷಾಂತರ

ಬದಲಾಯಿಸಿ

ಭಾಷಾಂತರ ಉಪ ಕ್ಷೇತ್ರ ಡಿಜಿಟಲ್ನಿಂದ ಮಾತನಾಡುವ ಮತ್ತು ಮುದ್ರಕ್ಕೆ ಬರೆದಿರುವಂತಹ ಮತ್ತು ಮಾತನಾಡಿದಂತಹ ಗ್ರಂಥಗಳ ಅನುವಾದವನ್ನು ಒಳಗೊಂಡಿರುತ್ತವೆ. ಒಂದು ಭಾಷೆಯಿಂದ ಮತೋಂದು ಭಾಷೆಯ ಅರ್ಥವನ್ನು ಪರಿವರ್ತಿಸಲು ಮತ್ತು ಅಕ್ಷರಶಃ ಅರ್ಥವನ್ನು ಅನುವಾದ ಮಾಡಲು ಈ ಭಾಷಾಂತರ(ಅನುವಾದವನ್ನು) ಬಳಸುತ್ತಾರೆ. ಅನುವಾದಕರು ಹೆಚ್ಚಾಗಿ ಸಂಘಟನೆಗಳಿಂದ ಉದ್ಯೋಗವನ್ನು ಕೊಡಲ್ಪಟ್ಟಿದ್ದಾರೆ. ಅಂತಹ ಸಂಘಟಣೆಗಳೆಂದರೆ ಪ್ರಯಾಣ ಸಂಸ್ಥೆಗಳು ಹಾಗೇಯೆ ಸರ್ಕಾರಿ ಕಛೇರಿಗಳು. ಇಬ್ಪರು ಪರಸ್ವರ ಭಾಷೆಗಳನ್ನು ತಿಳಿಯದೆ ಇರುವಂತಹ ಮಾತನಾಡುವವರು ಭಾಷೆಯನ್ನು ಅರ್ಥಮಾಡಿಕೊಳ್ಳಲು ಮತ್ತು ಸಂವಹನವನ್ನು ಅರ್ಥಮಾಡಿಕೊಳ್ಳಲು ಈ ಸಂಘಟನೆಗಳು ಸಹಾಯ ಮಾಡುತ್ತವೆ ಮತ್ತು ಸುಲಭವಾಗಿಸುತ್ತವೆ.ಅನುವಾದಕರು ಎಣಿಕೆಯ ಭಾಷಾಶಾಸ್ತ್ರದ ಸೆಟ್ಅಪ್ ನ ಒಳಗೆ ಅಂದರೆ ಗೂಗಲ್ ಅನುವಾದದ ಒಳಗೆ ಕೆಲಸ ನಿರ್ವಹಿಸಲು ಕೂಡ ಹೇಳಲ್ಪಡುತ್ತಾರೆ. ಉದಾಹರಣೆಗೆ, ಕೂಡುವಂತಹ ೨/೩ ಕ್ಕಿಂತ ಹೆಚ್ಚಿನ ಭಾಷೆಗಳ ನಡುವೆ ಪದಗಳನ್ನು ಮತ್ತು ನುಡಿಗಟ್ಟುಗಳನ್ನು ಅನುವಾದ ಮಾಡಲು ಸ್ವಯಂಚಾಲಿಕ ಅಂದರೆ ಯಾವುದು ಪ್ರೊಗ್ರಾಮ್ ಫೆಸಲಿಟಿ ಎಂದರೆ ಯಾವುದು ಎಂದು ಕೆಳಲಾಗುತ್ತದೆ. ಒಂದು ಭಾಷೆಯಿಂದ ಮತ್ತೋಂದು ಭಾಷೆ ವಿಭಿನ್ನ ಪ್ರೇಕ್ಷಕರನ್ನು ತಲುಪಿಸುವುದರ ಉದ್ದೇಶಕ್ಕಾಗಿ ಬರೆಯುವಂತಹ ಕೃತಿಗಳನು ಪರಿವರ್ತಿಸುವಂತಹ ಮನೆಗಳಿಂದ ಭಾಷಾಂತರ(ಅನುವಾದ) ನಡೆಸಲಾಗುತ್ತದೆ. ಅಕಾಡಮಿಕ್ ಅನುವಾದಕರು, ಪರಿಣಿತರು, ಅರೆ ಪರಿಣಿತರು, ಇತರೆ ಶಿಸ್ತಿನವಲಯಗಳ ಅಂದರೆ ತಂತ್ರಜ್ಜಾನ, ವಿಜ್ಜಾನ, ಕಾನೂನು, ಅರ್ಥಶಾಸ್ತ್ರ, ಇತ್ಯಾದಿಗಳು.

ವಿಕಸನೀಯ ಭಾಷಾಶಾಸ್ತ್ರ

ಬದಲಾಯಿಸಿ

ವಿಕಸನೀಯ ಭಾಷಾಶಾಸ್ತ್ರವು ಮಾನವ ವಿಕಾಸದ ಮೂಲಕ ಭಾಷೆಯ ಬೋದನ ಅತ್ಯವಶ್ಯಕತೆಯ ಅಂತರಶಾಸ್ತ್ರಿಯ ಅಧ್ಯಯನವಾಗಿದೆ. ಇದು ವಿವಿಧ ಭಾಷೆಗಳ ಸಾಂಸ್ಕ್ರತಿಕ ವಿಕಸನಕ್ಕೆ ವಿಕಸನದ ಸಿದ್ದಾಂತದ ಒಂದು ಅಪ್ಲಕೇಶನ್ ಸಹ ಆಗಿದೆ. ಇದೀ ಪ್ರಾಚೀನ ಸಾಮುದಾಯಗಳ ಚಳುವಳಿಗಳ ಮೂಲಕ ಜಗತ್ತಿನಾದ್ಯಂತ ವಿವಿಧ ಭಾಷೆಗಳ ಪ್ರಸರಣದ ಅಧ್ಯಯನ ಕೂಡ ಆಗಿದೆ.

ಟಿಪ್ಪಣಿಗಳು

ಬದಲಾಯಿಸಿ
  1. ಭಾಷಾವಿಜ್ಞಾನದ ಮೂಲತತ್ತ್ವಗಳು,ಡಾ.ಎಂ.ಚಿದಾನಂದಮೂರ್ತಿ, ಪ್ರಕಾಶನ ಡಿ.ವಿ.ಕೆ. ಮೂರ್ತಿ, 1993. ಪುಟ 130-131
  2. ಭಾಷಾಶಾಸ್ತ್ರದಲ್ಲಿ ಟೆಕ್ಸ್ಟ್ ಅಥವಾ ಪಠ್ಯವೆಂದರೆ ಕೇವಲ ಬರೆದದ್ದಷ್ಟೇ ಅಲ್ಲ, ಈ ಅರ್ಥವನ್ನು ಹಿಗ್ಗಿಸಲಾಗಿದೆ.

ಉಲ್ಲೇಖಗಳು

ಬದಲಾಯಿಸಿ
  1. Helen Leckie-Tarry, Language and Context: a Functional Linguistic Theory of Register, Continuum International Publishing Group, 1995, p6. ISBN 1-85567-272-3
  2. Oxford English dictionary.
  3. Trudgill, P. (1994). Dialects. Ebooks Online Routledge. Florence, KY.
  4. Jacques Derrida (Author) and Alan Bass (translator) (1978). Writing and Difference. University of Chicago Press. ISBN 9780226143293.
  5. "Relative Thinking." The Guardian. November 2004.
  6. IA Richards (1965). The Philosophy of Rhetoric. Oxford University Press (New York).