ಸುಖ

ಆತಂಕ ಮತ್ತು ಭಯಮುಕ್ತವಾದ ಮಾನಸಿಕ ಭಾವನೆ

ತತ್ವಶಾಸ್ತ್ರದಲ್ಲಿ, ಸುಖ ಕೇವಲ ಒಂದು ಭಾವನೆಯನ್ನು ಸೂಚಿಸದೆ ಒಳ್ಳೆ ಜೀವನ, ಅಥವಾ ಏಳಿಗೆಯನ್ನು ಸೂಚಿಸುತ್ತದೆ.

ಬಹಳ ಸಂತೋಷವಾಗಿರುವ ಬೌದ್ಧ ಸಂನ್ಯಾಸಿ

ಮನೋವಿಜ್ಞಾನದಲ್ಲಿ, ಸುಖವು ಯೋಗಕ್ಷೇಮದ ಒಂದು ಮಾನಸಿಕ ಅಥವಾ ಭಾವನಾತ್ಮಕ ಸ್ಥಿತಿ ಮತ್ತು ಇದನ್ನು, ಇತರ ಭಾವನೆಗಳ ಪೈಕಿ, ತೃಪ್ತಿಯಿಂದ ತೀವ್ರ ಹರ್ಷದವರೆಗಿನ ಸಕಾರಾತ್ಮಕ ಅಥವಾ ಹಿತಕರ ಭಾವನೆಗಳಿಂದ ವ್ಯಾಖ್ಯಾನಿಸಬಹುದು.[] ಸಂತೋಷದ ಮಾನಸಿಕ ಸ್ಥಿತಿಗಳು ತಮ್ಮ ಒಟ್ಟಾರೆ ಯೋಗಕ್ಷೇಮದ ಬಗ್ಗೆ ಒಬ್ಬ ವ್ಯಕ್ತಿಯ ಅಭಿಪ್ರಾಯಗಳನ್ನು ಪ್ರತಿಬಿಂಬಿಸಬಹುದು. ಸಹಸ್ರಮಾನದ ತಿರುವಿನ ಕಾಲದಿಂದ, ಮಾನವ ಏಳಿಗೆಯ ಪ್ರವೇಶರೀತಿಯು ಮನೋವೈಜ್ಞಾನಿಕ ಮತ್ತು ಅಂತರರಾಷ್ಟ್ರೀಯ ಅಭಿವೃದ್ಧಿ ಮತ್ತು ವೈದ್ಯಕೀಯ ಸಂಶೋಧನೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಆಕರ್ಷಿಸಿದೆ.

ಸುಖ ಒಂದು ಅಸ್ಪಷ್ಟ ಪರಿಕಲ್ಪನೆಯಾಗಿದೆ. ಸಂಬಂಧಿತ ಪರಿಕಲ್ಪನೆಗಳೆಂದರೆ ಯೋಗಕ್ಷೇಮ, ಜೀವನದ ಗುಣಮಟ್ಟ, ಏಳಿಗೆ ಮತ್ತು ಸಂತೃಪ್ತಿ.

ಸಂಪತ್ತು, ಗೌರವ, ಆರೋಗ್ಯ ಅಥವಾ ಸ್ನೇಹಕ್ಕೆ ಭಿನ್ನವಾಗಿ, ತಮ್ಮ ಸ್ವಂತಕ್ಕಾಗಿ ಮಾನವರು ಬಯಸುವ ಏಕೈಕ ವಸ್ತುವೆಂದರೆ ಸುಖ ಎಂದು ಅರಿಸ್ಟಾಟಲ್ ಹೇಳಿದನು. ಮಾನವರು ಕೇವಲ ತಮ್ಮ ಸಲುವಾಗಿ ಅಷ್ಟೇ ಅಲ್ಲದೇ ಸುಖವಾಗಿರುವುದಕ್ಕಾಗಿ ಸಂಪತ್ತು, ಗೌರವ, ಆರೋಗ್ಯವನ್ನು ಅರಸುತ್ತಾರೆ ಎಂದು ಅವನು ಗಮನಿಸಿದನು. ಸುಖಕರ ಜೀವನ ಉತ್ತಮ ಜೀವನವಾಗಿದೆ, ಅಂದರೆ, ಒಬ್ಬ ವ್ಯಕ್ತಿಯು ಯಾವುದರಲ್ಲಿ ಶ್ರೇಷ್ಠ ರೀತಿಯಲ್ಲಿ ಮಾನವ ಸಹಜಗುಣವನ್ನು ಪೂರೈಸಿಕೊಳ್ಳುತ್ತಾನೊ ಅಂತಹ ಜೀವನ. ನಿರ್ದಿಷ್ಟವಾಗಿ, ಉತ್ತಮ ಜೀವನವು ಶ್ರೇಷ್ಠ ವಿವೇಕಯುಕ್ತ ಚಟುವಟಿಕೆಯ ಜೀವನ ಎಂದು ಅರಿಸ್ಟಾಟಲ್ ವಾದಿಸುತ್ತಾನೆ.

ಅದ್ವೈತ ವೇದಾಂತದಲ್ಲಿ, ಜೀವನದ ಅಂತಿಮ ಗುರಿಯೇ ಆನಂದ, ಆತ್ಮ ಮತ್ತು ಬ್ರಹ್ಮನ್ ನಡುವಿನ ಉಭಯತ್ವವನ್ನು ಮೀರಿಸಲಾಗುತ್ತದೆ ಮತ್ತು ಒಬ್ಬರು ತಾವು ಎಲ್ಲದರಲ್ಲಿನ ಸ್ವಯಂ ಎಂದು ಅರಿತುಕೊಳ್ಳುತ್ತಾರೆ ಎಂಬ ಅರ್ಥದಲ್ಲಿ. ಯೋಗ ಸೂತ್ರಗಳ ಲೇಖಕನಾದ ಪತಂಜಲಿಯು ಹರ್ಷದ ಮಾನಸಿಕ ಮತ್ತು ಮೂಲತತ್ವ ವಿಚಾರದ ಮೂಲಗಳ ಮೇಲೆ ಸಾಕಷ್ಟು ವ್ಯಾಪಕವಾಗಿ ಬರೆದನು.

ಅದರ ವಿಶಾಲ ಅರ್ಥದಲ್ಲಿ, ಸುಖವು ಹರ್ಷ, ಖುಷಿ, ಸಂತೃಪ್ತಿ, ಗೆಲುವಿನಂತಹ ಹಿತಕರ ಭಾವನಾತ್ಮಕ ಸ್ಥಿತಿಗಳ ಒಂದು ಕುಟುಂಬಕ್ಕೆ ಗುರುತು ಪಟ್ಟಿಯಾಗಿದೆ. ಉದಾಹರಣೆಗೆ, ಸುಖವು "ಅನಿರೀಕ್ಷಿತ ಸಕಾರಾತ್ಮಕ ಘಟನೆಗಳನ್ನು ಸಂಧಿಸಿದಾಗ", "ಇತರರ ಸ್ವೀಕೃತಿ ಮತ್ತು ಹೊಗಳಿಕೆಯನ್ನು ಸವಿಯುವುದರಿಂದ" ಬರುತ್ತದೆ. ಹೆಚ್ಚು ಸೂಕ್ಷ್ಮವಾಗಿ, ಅದು ಅನುಭವದ ಮತ್ತು ಮೌಲ್ಯಮಾಪಕ ಯೋಗಕ್ಷೇಮವನ್ನು ಸೂಚಿಸುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. "happiness". Wolfram Alpha.


"https://kn.wikipedia.org/w/index.php?title=ಸುಖ&oldid=802852" ಇಂದ ಪಡೆಯಲ್ಪಟ್ಟಿದೆ