ಋಷಿ ಎಂಬುವುದು ಭಾರತದ ಪುರಾಣಗಳಲ್ಲಿ ಹೆಚ್ಚಾಗಿ ಕಾಣಸಿಗುವ ಪದ. ತಪಸ್ಸಿನ ಫಲದಿಂದ ಜ್ಞಾನ ಪಡೆದ, ವೇದ ಪಠಣ ಮಾಡಿದ ಸಾಧಕರನ್ನು ಋಷಿ ಎನ್ನುತ್ತಾರೆ. ತಪಸ್ವಿ, ಋಷಿ, ಮುನಿ ಎಲ್ಲಾ ಪರ್ಯಾಯ ಪದಗಳು. ರಾಜರ್ಷಿ(ರಾಜ+ಋಷಿ), ಮಹರ್ಷಿ(ಮಹಾ + ಋಷಿ),ಬ್ರಹ್ಮರ್ಷಿ(ಬ್ರಹ್ಮ+ಋಷಿ) ಇವೆಲ್ಲಾ ಋಷಿಗಳಲ್ಲೇ ಬೇರೆ ಬೇರೆ ಸ್ತರದ ಜ್ಞಾನಿಗಳನ್ನು ಸೂಚಿಸುತ್ತವೆ.ಪುರಾಣಗಳಲ್ಲಿ ಋಷಿಗಳನ್ನು ಈ ಹೆಸರಿನೊಂದಿಗೆ ಸೇರಿಸಿ ಉಲ್ಲೇಖಿಸುತ್ತಾರೆ.

ಸಪ್ತರ್ಷಿಗಳು

ಬದಲಾಯಿಸಿ
  • ಕಶ್ಯಪ, ಅತ್ರಿ, ಭರದ್ವಾಜ, ವಿಶ್ವಾಮಿತ್ರ, ಗೌತಮ, ಜಮದಗ್ನಿ, ವಸಿಷ್ಠ - ಮಹಾಭಾರತದ ಶಲ್ಯಪರ್ವದಲ್ಲಿ ಇರುವಂತೆ.
  • ಮರೀಚಿ, ಅತ್ರಿ, ಆಂಗೀರಸ, ಪುಲಸ್ತ್ಯ, ಪುಲಹ, ಕ್ರತು, ವಸಿಷ್ಠ - ಮಹಾಭಾರತದ ಶಾಂತಿಪರ್ವದಲ್ಲಿ ಇರುವಂತೆ.

ಇವರು ಕಲ್ಪಭೇದದಿಂದ ಭಿನ್ನ ಭಿನ್ನರಾಗಿರುತ್ತಾರೆ.

ಇದನ್ನೂ ನೋಡಿ

ಬದಲಾಯಿಸಿ
"https://kn.wikipedia.org/w/index.php?title=ಋಷಿ&oldid=715718" ಇಂದ ಪಡೆಯಲ್ಪಟ್ಟಿದೆ