ಈ ಲೇಖನ ಹಿಂದೂ ಧರ್ಮದ ಪುರಾತನ ಸಾಹಿತ್ಯ ಪ್ರಕಾರದ ಬಗ್ಗೆ ಅನೇಕ ಧರ್ಮಗಳಲ್ಲಿ ಮತ್ತು ಸಂಸ್ಕೃತಿಗಳಲ್ಲಿನ ದಂತಕಥೆಗಳ ಸಮೂಹದ ಬಗ್ಗೆ ಲೇಖನವು ಪುರಾಣ ಎಂಬ ಪುಟದಲ್ಲಿ ಇದೆ.

ಪುರಾಣಗಳು ಪುರಾತನ ಹಿಂದೂ ಧರ್ಮದ ಒಂದು ಸಾಹಿತ್ಯ ಪ್ರಕಾರ, ಇವು ವೇದಗಳಲ್ಲಿ ವರ್ಣಿಸಲಾದ ರಹಸ್ಯ,ಅರ್ಥಗಳನ್ನು ವಿವರವಾಗಿ ಬೋಧಿಸುವ ಗ್ರಂಥಗಳು. ಪುರಾಣಗಳಲ್ಲಿ ಮಹಾ ಪುರಾಣವೆಂದೂ, ಉಪ ಪುರಾಣವೆಂದೂ ಎರಡು ಭೇದಗಳಿವೆ. ಪುರಾಣಗಳನ್ನು ಅನೇಕ ಮಂದಿ ಮಹರ್ಷಿಗಳು ಬೇರೆ ಬೇರೆ ಕಾಲಗಳಲ್ಲಿ ರಚಿಸಿದರು. ಮಹಾಭಾರತ ಮತ್ತು ರಾಮಾಯಣಗಳು ಐತಿಹಾಸಿಕ ಮಹಾಕಾವ್ಯಗಳು, ಹಾಗಾಗಿ ಇವು ಪುರಾಣಗಳಲ್ಲಿ ಸೇರಿಲ್ಲ.

ಭಾಗವತ ಪುರಾಣದ ಒಂದು ದೃಶ್ಯ

ಮಹಾಪುರಾಣಗಳು

ಬದಲಾಯಿಸಿ
  • ಮಹಾಪುರಾಣಗಳು ೧೮. ಮಹಾಪುರಾಣಗಳು ಮತ್ತು ಅವುಗಳ ಗ್ರಂಥ ಪರಿಮಾಣ (೩೨ ಅಕ್ಷರಗಳುಳ್ಳ ಒಂದು ಅನುಷ್ಟುಪ್ ಶ್ಲೋಕಕ್ಕೆ ಗ್ರಂಥವೆಂದು ಹೆಸರು.)
  • ೧೮ ಮಹಾಪುರಾಣಗಳು ಹೀಗಿವೆ:-
ಮದ್ವಯಂ ಭದ್ವಯಂ ಚೈವ ಬ್ರತ್ರಯಂ ವಚತುಷ್ಟಯಂ|
ಅ ನಾ ಪ ಲಿಂ ಗ ಕೂ ಸ್ಕಾನಿ ಪುರಾಣಾನಿ ಪ್ರಚಕ್ಷತೇ||
ಮಕಾರಾದಿಯಾಗಿ ಎರಡು 1) ಮತ್ಸ್ಯ ಮತ್ತು 2) ಮಾರ್ಕಂಡೇಯ ಭಕಾರಾದಿಯಾಗಿ ಎರಡು- 3) ಭವಿಷ್ಯ ಮತ್ತು 4) ಭಾಗವತ; ಬ್ರಕಾರಾದಿಯಾಗಿ ಮೂರು- 5) ಬ್ರಹ್ಮಾಂಡ, 6) ಬ್ರಹ್ಮವೈವರ್ತ, ಮತ್ತು 7) ಬ್ರಾಹ್ಮ; ವಕಾರಾದಿಯಾಗಿ ನಾಲ್ಕು- 8) ವಾಮನ, 9) ವರಾಹ, 10) ವಿಷ್ಣು ಮತ್ತು 11) ವಾಯು; 13) ಅಗ್ನಿ, 13) ನಾರದ, 14) ಪದ್ಮ, 15) ಲಿಂಗ, 16) ಗರುಡ, 17) ಕೂರ್ಮ, 18) ಸ್ಕಂದ.
ಸಾಂಪ್ರದಾಯಿಕ ಗಣನೆಯ ಮೇರೆಗೆ ಬ್ರಾಹ್ಮ, ವೈಷ್ಣವ, ವಾಯವ್ಯ, ಭಾಗವತ, ನಾರದೀಯ, ಮಾರ್ಕಂಡೇಯ, ಆಗ್ನೇಯ, ಭವಿಷ್ಯ, ಬ್ರಹ್ಮವೈವರ್ತ, ಮತ್ಸ್ಯ, ವರಾಹ, ಲೈಂಗ, ಸ್ಕಾಂದ, ವಾಮನ, ಕೌರ್ಮ, ಗಾರುಡ ಮತ್ತು ಬ್ರಹ್ಮಾಂಡಗಳೆಂಬುವೇ 18 ಮಹಾಪುರಾಣಗಳು. ಈ ಪಟ್ಟಿಯಲ್ಲಿ ವಾಯವ್ಯಕ್ಕೆ ಬದಲಾಗಿ ದೇವೀಭಾಗವತವನ್ನೂ ಸೇರಿಸಿದ ಪಾಠಾಂತರಗಳಿವೆ. ಆದರಿವು ವಾಸ್ತವಿಕವಾಗಿ ಉಪಪುರಾಣಗಳು. ಹರಿವಂಶವನ್ನೂ ಅಷ್ಟಾದಶಪುರಾಣಗಳ ಜೊತೆಗೆ ಸೇರಿಸುವವರಿದ್ದಾರೆ. ಅದು ಅಷ್ಟೇನೂ ಉಚಿತವಲ್ಲ.[]

ಪುರಾಣಗಳ ಪಟ್ಟಿ

ಬದಲಾಯಿಸಿ
ಕ್ರಮ ಸಂಖ್ಯೆ ಪುರಾಣದ ಹೆಸರು ಶ್ಲೋಕಗಳ ಸಂಖ್ಯೆ
೦೧ ಮತ್ಸ್ಯ ಪುರಾಣ ೧೪೦೦೦
೦೨ ಮಾರ್ಕಂಡೇಯ ಪುರಾಣ ೯೦೦೦
೦೩ ಭಾಗವತ ಪುರಾಣ ೧೮೦೦೦
೦೪ ಭವಿಷ್ಯ ಪುರಾಣ ೧೪೫೦೦
೦೫ ಬ್ರಹ್ಮ ಪುರಾಣ ೧೦೦೦೦
೦೬ ಬ್ರಹ್ಮಾಂಡ ಪುರಾಣ ೧೨೦೦೦
೦೭ ಬ್ರಹ್ಮವೈವರ್ತ ಪುರಾಣ ೧೮೦೦೦
೦೮ ವಿಷ್ಣು ಪುರಾಣ ೨೩೦೦೦
೦೯ ವರಾಹ ಪುರಾಣ ೨೪೦೦೦
೧೦ ವಾಮನ ಪುರಾಣ ೧೦೦೦೦
೧೧ ವಾಯು ಪುರಾಣ ೨೪೦೦೦
೧೨ ಅಗ್ನಿ ಪುರಾಣ ೧೦೫೦೦
೧೩ ನಾರದ ಪುರಾಣ ೨೫೦೦೦
೧೪ ಪದ್ಮ ಪುರಾಣ ೫೫೦೦೦
೧೫ ಲಿಂಗ ಪುರಾಣ ೧೧೦೦೦
೧೬ ಗರುಡ ಪುರಾಣ ೧೯೦೦೦
೧೭ ಕೂರ್ಮ ಪುರಾಣ ೧೭೦೦೦
೧೮ ಸ್ಕಂದ ಪುರಾಣ ೮೦೧೦೦

ಹೆಚ್ಚಿನ ಓದಿಗೆ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ