ವೈಷ್ಣೋ ದೇವಿ
ಮಾತಾ ದೇವಿ ; ಪರ್ವತ ದೇವಿ
ವೈಷ್ಣೋದೇವಿಯ ಪವಿತ್ರ ಗುಹೆಯ ಒಳಗಿನ ದೃಶ್ಯ. ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿ ದೇವಿಯರ ಸ್ವರೂಪವಾದ ಕಲ್ಲುಗಳನ್ನು ಚಿತ್ರದಲ್ಲಿ ಕಾಣಬಹುದು
ಇತರ ಹೆಸರುಗಳುವೈಷ್ಣವಿ, ಮಾತಾ ರಾಣಿ, ಅಂಬೆ, ತ್ರಿಕೂಟೆ, ಶೇರಾವಾಲಿ, ಜ್ಯೋತಾವಾಲಿ, ಪಹಡಾವಾಲಿ, ದುರ್ಗಾ, ಭಗವತಿ, ಜಗದಂಬಾ, ಲಕ್ಷ್ಮಿ, ವಿಷ್ಣುಮಾಯ, ವಿಷ್ಣುಪ್ರಿಯ, ರಮಾ, ಮಾಣಿಕಿ
ಸಂಲಗ್ನತೆಮಹಾದೇವಿ, ದುರ್ಗೆ, ಮಹಾಕಾಳಿ, ಮಹಾಲಕ್ಷ್ಮಿ, Mahasarasvati
ನೆಲೆವೈಷ್ಣೋ ದೇವಿ ದೇವಸ್ಥಾನ, ಜಮ್ಮು ಕಾಶ್ಮೀರದಲ್ಲಿರುವ ಕಠಾರ, ಭಾರತ
ಸಂಗಾತಿಅವಿವಾಹಿತೆ
ವಾಹನಹುಲಿ ಮತ್ತು ಸಿಂಹ
ತಂದೆತಾಯಿಯರು
  • ರಾಜ ರತ್ನಾಕರ (ತಂದೆ)
  • ರಾಣಿ ಸಮೃದ್ಧಿ (ತಾಯಿ)

ವೈಷ್ಣೋ ದೇವಿ ದೇವಿಯನ್ನು ಮಾತಾ ರಾಣಿ, ತ್ರಿಕೂಟ, ಅಂಬೆ ಮತ್ತು ವೈಷ್ಣವಿ ಎಂದೂ ಸಹ ಕರೆಯುತ್ತಾರೆ. ಈಕೆ ಹಿಂದೂ ದೇವತೆ ಲಕ್ಷ್ಮಿಯ ಅವತಾರವಾಗಿದ್ದೆ ಕೆಲವೊಮ್ಮೆ ಕೆಲವು ನಂಬಿಕೆಗಳಲ್ಲಿ ವೈಷ್ಣೋದೇವಿಯನ್ನು ಮಹಾಲಕ್ಷ್ಮಿಯ ರೂಪವೆಂದು ಪರಿಗಣಿಸಲಾಗುತ್ತದೆ. ವೈಷ್ಣೋದೇವಿಯನ್ನು ಮಹಾಕಾಳಿ, ಮಹಾಲಕ್ಷ್ಮಿ ಮತ್ತು ಮಹಾಸರಸ್ವತಿ ದೇವತೆಗಳ ಸಂಯೋಜಿತ ಅವತಾರವಾಗಿಯೂ ಪೂಜಿಸಲಾಗುತ್ತದೆ. ಇದಲ್ಲದೇ ಅವಳನ್ನು ಹರಿ ಅಥವಾ ವಿಷ್ಣುವಿನ ಶಕ್ತಿ ಸ್ವರೂಪಳಾಗಿಯೂ ನೋಡಲಾಗುತ್ತದೆ.

ಮೂಲ ಬದಲಾಯಿಸಿ

ಪುರಾಣ ಬದಲಾಯಿಸಿ

ದೇವಿ ಮಹಾಭಾಗವತ ಪುರಾಣದಲ್ಲಿ ಈ ದೇವಿಯನ್ನು "ವಿಷ್ಣುಪ್ರಿಯಾ" ಎಂದು ಉಲ್ಲೇಖಿಸಲಾಗಿದೆ. [೧]

ವರಾಹ ಪುರಾಣದ ತ್ರಿಶಕ್ತಿ ಮಾಹಾತ್ಮ್ಯದಲ್ಲಿ, ಅವಳು ತ್ರಿಕಾಲ ದೇವತೆಯಿಂದ ಹುಟ್ಟಿದಳು. ತ್ರಿಕಾಲ ದೇವತೆ ತ್ರಿಮೂರ್ತಿಗಳಿಂದ ಹುಟ್ಟಿದ ದೇವತೆ. ಈಗ ತ್ರಿಕೂಟ ಧಾಮ ಕ್ಷೇತ್ರದಲ್ಲಿ ಮುಂಚೆ ಶತಷ್ಣಗ ಪರ್ವತವಿತ್ತು. ಅಲ್ಲಿದ್ದ ಮಹಿಷಾಸುರ ಎಂಬ ಅಸುರನನ್ನು ಈಕೆ ಸಂಹರಿಸಿದಳು ಎಂಬ ನಂಬಿಕೆಯಿದೆ [೨] (ನಿರಾಕರಣೆ: ಈ ಘಟನೆಯು ಪ್ರತ್ಯೇಕ ಕಲ್ಪ - ಮಾನವ ಕಲ್ಪದಲ್ಲಿ ನಡೆದಿದ್ದು ಎನ್ನಲಾಗಿದೆ. ಈಗಿರುವ ಕಲ್ಪದ ಹೆಸರು ಶ್ವೇತ ವರಾಹ ಕಲ್ಪ)

ಲಕ್ಷ್ಮೀನಾರಾಯಣ ಸಂಹಿತೆಯ ಕೃತಯುಗ ಸಂತಾನ ಮತ್ತು ದ್ವಾಪರಯುಗದ ಸಂತಾನವು ಅವಳನ್ನು "ಮಾಣಿಕಿ", ಕಲ್ಕಿಯ ಶಕ್ತಿ ಎಂದು ಕರೆಯುತ್ತದೆ, ಏಕೆಂದರೆ ಅವಳು ಮಾಣಿಕಾ ಪರ್ವತದಲ್ಲಿ (ತ್ರಿಕೂಟ ಪರ್ವತದ ಇನ್ನೊಂದು ಹೆಸರು) ನೆಲೆಸಿದ್ದಾಳೆ. [೩]

ತಂತ್ರ ಬದಲಾಯಿಸಿ

ಬೃಹತ್ ತಂತ್ರಸಾರದ ಪ್ರಕಾರ, ಅವಳನ್ನು "ಹರಿಪ್ರಿಯಾ ತ್ರಿಕೂಟಾ" ಎಂದು ಕರೆಯಲಾಗುತ್ತದೆ. [೪]

 
ವೈಷ್ಣೋದೇವಿ ಭವನದ ಒಂದು ನೋಟ

ತೀರ್ಥಯಾತ್ರೆ ಮಾರ್ಗ ಬದಲಾಯಿಸಿ

ಪ್ರೊಫೆಸರ್ ಮತ್ತು ಲೇಖಕ ಮನೋಹರ್ ಸಜ್ನಾನಿ ಹೀಗೆ ಹೇಳುತ್ತಾರೆ. ಹಿಂದೂ ನಂಬಿಕೆಗಳ ಪ್ರಕಾರ ವೈಷ್ಣೋ ದೇವಿಯ ಮೂಲ ವಾಸಸ್ಥಾನ ಅರ್ಧ ಕುನ್ವಾರಿ. ಇದು ಕತ್ರಾ ಪಟ್ಟಣ ಮತ್ತು ಗುಹೆಯ ನಡುವೆ ಸಿಗುವ ಸ್ಥಳವಾಗಿದೆ. ಮಗು 9 ತಿಂಗಳು ಹೇಗೆ ತಾಯಿಯ ಗರ್ಭದಲ್ಲಿ ಇರುತ್ತೋ ಹಾಗೆಯೇ 9 ತಿಂಗಳು ಈ ಗುಹೆಯಲ್ಲಿ ಧ್ಯಾನ ಮಾಡಿದ್ದಳು. [೫] ವೈಷ್ಣೋದೇವಿಯನ್ನು ಹಿಡಿಯಲು ಭೈರವನಾಥನು ಹಿಂದೆ ಓಡಿಹೋದಾಗ ದೇವಿಯು ಬೆಟ್ಟದ ಗುಹೆಯೊಂದರ ಬಳಿಗೆ ಬಂದಳು. ಆಗ ಅವಳು ಹನುಮಂತನನ್ನು ಕರೆದು "ನಾನು ಈ ಗುಹೆಯಲ್ಲಿ ಒಂಬತ್ತು ತಿಂಗಳು ತಪಸ್ಸು ಮಾಡುತ್ತೇನೆ, ಅಲ್ಲಿಯವರೆಗೆ ನೀನು ಭೈರವನಾಥನನ್ನು ಗುಹೆಯೊಳಗೆ ಪ್ರವೇಶಿಸಲು ಬಿಡಬಾರದು" ಎಂದು ಹೇಳಿದಳು. ಹನುಮಂತನು ತಾಯಿಯ ಆಜ್ಞೆಯನ್ನು ಪಾಲಿಸಿದನು. ಭೈರವನಾಥನನ್ನು ಈ ಗುಹೆಯ ಹೊರಗೇ ಇರಿಸಲಾಗಿತ್ತು ಎಂದು ಸ್ಥಳೀಯ ದಂತಕತೆಗಳು ಹೇಳುತ್ತದೆ. ಇಂದು ಆ ಪವಿತ್ರ ಗುಹೆಯನ್ನು 'ಅರ್ಧ ಕುನ್ವಾರಿ' ಎಂದು ಕರೆಯಲಾಗುತ್ತದೆ. [೬]

ದೇವಾಲಯ ಬದಲಾಯಿಸಿ

 
2008 ರಲ್ಲಿ ವೈಷ್ಣೋದೇವಿ ದೇವಸ್ಥಾನ

ವೈಷ್ಣೋ ದೇವಿ ದೇವಾಲಯವು ವೈಷ್ಣೋ ದೇವಿಗೆ ಸಮರ್ಪಿತವಾದ ಪ್ರಮುಖ ಹಿಂದೂ ದೇವಾಲಯವಾಗಿದ್ದು, ಜಮ್ಮು ಮತ್ತು ಕಾಶ್ಮೀರದ ಭಾರತೀಯ ಕೇಂದ್ರಾಡಳಿತ ಪ್ರದೇಶದ ತ್ರಿಕೂಟ ಪರ್ವತಗಳಲ್ಲಿರುವ ಕತ್ರಾದಲ್ಲಿದೆ . [೭] [೮] [೯] ವೈಷ್ಣೋದೇವಿ ಎಂದು ಪೂಜಿಸಲ್ಪಡುವ ದುರ್ಗೆಗೆ ಸಮರ್ಪಿತವಾಗಿರುವ 108 ಶಕ್ತಿ ಪೀಠಗಳಲ್ಲಿ ಈ ದೇವಾಲಯವೂ ಒಂದಾಗಿದೆ. [೧೦] ಇದು ಭಾರತದ ಅತಿ ಹೆಚ್ಚು ಭೇಟಿ ನೀಡುವ ಯಾತ್ರಾ ಕೇಂದ್ರಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ದೇವಾಲಯಕ್ಕೆ ಭೇಟಿ ನೀಡುತ್ತಾರೆ. [೧೧] [೧೨] ನವರಾತ್ರಿಯಂತಹ ಹಬ್ಬಗಳ ಸಮಯದಲ್ಲಿ, ಪ್ರವಾಸಿಗರ ಸಂಖ್ಯೆ ಒಂದು ಕೋಟಿ ಮೀರುತ್ತದೆ. [೧೩] ವೈಷ್ಣೋದೇವಿ ದೇವಾಲಯವು ಭಾರತದ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ. ಲೇಖಕರಾದ ಮೈಕೆಲ್ ಬಾರ್ನೆಟ್ ಮತ್ತು ಜಾನಿಸ್ ಗ್ರಾಸ್ ಸ್ಟೈನ್ ಹೇಳುವಂತೆ "ಜಮ್ಮುವಿನಲ್ಲಿ ಮಾತಾ ವೈಷ್ಣೋ ದೇವಿ ದೇಗುಲವು ಸುಮಾರು $16 ಶತಕೋಟಿ ವಾರ್ಷಿಕ ಆದಾಯವನ್ನು ಹೊಂದಿದೆ". [೧೪]

ದೇವಾಲಯವು ಎಲ್ಲಾ ಹಿಂದೂಗಳಿಗೆ ಪವಿತ್ರವಾಗಿದೆ. ವಿವೇಕಾನಂದರಂತಹ ಅನೇಕ ಪ್ರಮುಖ ಸಂತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. [೧೫]

ಸಹ ನೋಡಿ ಬದಲಾಯಿಸಿ

  • ಜಗ್ ಜನನಿ ಮಾ ವೈಷ್ಣೋ ದೇವಿ - ಕಹಾನಿ ಮಾತಾ ರಾಣಿ ಕಿ
  • ಮಾತೃಕೆಗಳು
  • ವೈಷ್ಣೋದೇವಿ ದೇವಸ್ಥಾನ, ರೂರ್ಕೆಲಾ
  • ಹರಿಯಲಿ ದೇವಿ / ವೈಷ್ಣೋ ದೇವಿ ದೇವಸ್ಥಾನವು ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿದೆ.
  • ಶ್ರೀ ಮಾತಾ ವೈಷ್ಣೋದೇವಿ ವಿಶ್ವವಿದ್ಯಾಲಯ

ಉಲ್ಲೇಖಗಳು ಬದಲಾಯಿಸಿ

  1. "Dēvī Mahābhāgavata Purāṇa".
  2. Veda Vyasa. The Varaha Purana in English.
  3. www.wisdomlib.org (2021-01-28). "Lakshminarayana Samhita Verse 1.334.53 [Sanskrit text]". www.wisdomlib.org (in ಇಂಗ್ಲಿಷ್). Retrieved 2023-11-16.
  4. "Bṛhat Tantrasāra".
  5. Manohar Sajnani (2001). Encyclopaedia of Tourism Resources in India, Volume 1. Gyan Publishing House. p. 158. ISBN 9788178350172.
  6. Virodai, Yashodhara (5 October 2017). "Story of Mata Vaishnodevi". newstrend.news (in Hindi). Newstrend Network Communication Pvt Ltd. Retrieved 5 June 2021.{{cite web}}: CS1 maint: unrecognized language (link)
  7. Rindani, Kirit (2016). Indian Himalaya: Story of a 100 Visits. Partridge Publishing. p. 47. ISBN 978-1482858860.
  8. S. S. Negi (1998). Discovering the Himalaya, Volume 1. Indus Publishing. p. 429. ISBN 9788173870798.
  9. Kuldip Singh Gulia (2007). Mountains of the God. Gyan Publishing House. p. 15. ISBN 9788182054202.
  10. "Famous Durga temples in India for religiously inclined souls". Times of India. 5 April 2019.
  11. "Vaishno Devi pilgrim footfall in 2019 lowest in 3 years: Shrine Board". Business Standard. 2 January 2020.
  12. "Vaishno Devi likely to receive 8.5 mn pilgrims by Dec 31; highest in 5 yrs". Business Standard. 29 December 2018.
  13. "Vaishno Devi-Bhairav Mandir ropeway service starts from today". The Times of India. Retrieved 2018-12-25.
  14. Michael Barnett; Janice Gross Stein (3 July 2012). Sacred Aid: Faith and Humanitarianism. Oxford University Press. p. 140. ISBN 978-0199916030.
  15. Dipankar Banerjee; D. Suba Chandran (2005). Jammu and Kashmir: Charting a Future. Saṁskṛiti. p. 61. ISBN 9788187374442.

ಬಾಹ್ಯ ಕೊಂಡಿಗಳು ಬದಲಾಯಿಸಿ