ಹರಿ

ಹಿಂದೂ ಧರ್ಮದಲ್ಲಿ ಒಬ್ಬ ಮುಖ್ಯ ದೇವತೆ ಮತ್ತು ವಿಷ್ಣುವಿನ ಒಂದು ಅವತಾರ.

ಹರಿ ಅಂದರೆ ಎಲ್ಲ ಪಾಪಗಳನ್ನು ಕ್ಷಮಿಸುವವನು. ಇವನು ಹಿಂದೂ ಧರ್ಮದಲ್ಲಿ ಒಬ್ಬ ಮುಖ್ಯ ದೇವತೆ ಮತ್ತು ವಿಷ್ಣುವಿನ ಒಂದು ಅವತಾರ.

ಹರಿ ವಿಷ್ಣುವಿನ ವಿಗ್ರಹ

"ಹರಿ" ಮತ್ತು "ವಿಷ್ಣು" ಪದಗಳನ್ನು ಹಲವುವೇಳೆ ಒಂದರ ಬದಲಾಗಿ ಇನ್ನೊಂದನ್ನು ಬಳಸಲಾಗುತ್ತದೆ. ತಮಿಳಿನಂಥ ಸಂಪ್ರದಾಯಗಳಲ್ಲಿ ಹರಿಯನ್ನು ಕೆಲವೊಮ್ಮೆ ಕಪ್ಪು ಬಣ್ಣ ಹೊಂದಿರುವಂತೆ ಚಿತ್ರಿಸಲಾಗುತ್ತದೆ.

ಹರಿಯನ್ನು ಸಾಮಾನ್ಯವಾಗಿ ತೆಳು ನೀಲಿ ಜೀವಿಯಾಗಿ ಚಿತ್ರಿಸಲಾಗುತ್ತದೆ, ಮತ್ತು ವಿಷ್ಣುವಿನ ಅವತಾರಗಳಾದ ರಾಮ ಮತ್ತು ಕೃಷ್ಣರನ್ನು ಹೋಲುತ್ತಾನೆ. ಅವನು ಕೆಳಗಿನ ಎಡಗೈಯಲ್ಲಿ ಪದ್ಮವನ್ನು, ಕೆಳಗಿನ ಬಲಗೈಯಲ್ಲಿ ಕೌಮೋದಕಿ ಗದೆಯನ್ನು, ಮೇಲಿನ ಎಡಗೈಯಲ್ಲಿ ಪಾಂಚಜನ್ಯ ಶಂಖವನ್ನು, ಮತ್ತು ಮೇಲಿನ ಬಲಗೈಯಲ್ಲಿ ಹಿಂದೂ ಧರ್ಮದ ಪ್ರಕಾರ ಅತ್ಯಂತ ಶಕ್ತಿಶಾಲಿ ಅಸ್ತ್ರವಾದ ಸುದರ್ಶನ ಚಕ್ರವನ್ನು ಹೊಂದಿದ್ದಾನೆ. ಜೊತೆಗೆ ಶಾರಂಗವೆಂಬ ಬಿಲ್ಲನ್ನೂ ಹೊಂದಿದ್ದಾನೆ, ಇದೇ ಕಾರಣದಿಂದ ಅವನನ್ನು ಭಗವದ್ಗೀತೆಯಲ್ಲಿ ಕೆಲವೊಮ್ಮೆ ಶಾರಂಗಪಾಣಿ ಎಂದು ಕರೆಯಲಾಗುತ್ತದೆ. ಓಂ ನಮಃ ಶಿವಾಯ, ಓಂ ನಮೋ ಭಗವತೆ ವಾಸುದೇವಾಯ, ಓಂ ನಮೋ ನಾರಾಯಣಾಯದಂತಹ ಮಂತ್ರಗಳಲ್ಲಿ ಎಲ್ಲಕ್ಕಿಂತ ಮೊದಲು ಓಂ ಅಕ್ಷರ ಬರುತ್ತದೆ. ಆದರೆ ಹರಿ ಶಬ್ದ ಮಾತ್ರ ಓಂ ಗಿಂತ ಮೊದಲು ಬರುತ್ತದೆ, ಉದಾಹರಣೆಗೆ ಹರಿಃ ಓಂ, ಹರಿಃ ಓಂ ತತ್ ಸತ್. ಹರಿಯು ಭೂಮಿ ಮತ್ತು ಸೂರ್ಯನ ನಡುವಿನ ದೂರವನ್ನು ಕಂಡುಹಿಡಿದ ಒಬ್ಬ ಜ್ಯೋತಿಷಿ ಎಂದು ನಂಬಲಾಗಿದೆ.

ವೈಷ್ಣವ ಸಂಪ್ರದಾಯವು ವಿಷ್ಣುವಿನ ೧೦೮ ದಿವ್ಯ ಕ್ಷೇತ್ರಗಳನ್ನು ಹೊಂದಿದೆ. "ಹರಿ" ಶಬ್ದವನ್ನು ನಂತರದ ಸಂಸ್ಕೃತ ಮತ್ತು ಪ್ರಾಕೃತ ಸಾಹಿತ್ಯ, ಹಿಂದೂ, ಬೌದ್ಧ, ಜೈನ, ಸಿಖ್ ಧರ್ಮಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಮಹಾಭಾರತವಿಷ್ಣು ಸಹಸ್ರನಾಮದಲ್ಲಿ ಅದು ವಿಷ್ಣುವಿನ ೬೫೦ನೇ ಹೆಸರಾಗಿ ಗೋಚರವಾಗುತ್ತದೆ ಮತ್ತು ಹಾಗಾಗಿ ವೈಷ್ಣವ ಪಂಥದಲ್ಲಿ ಪ್ರಾಮುಖ್ಯತೆಗೆ ಏರಿದೆ.

ಹರಿ ಶಬ್ದದ ಅರ್ಥ ಹಸಿರು ಅಥವಾ ಹಳದಿ ಎಂದು.

"https://kn.wikipedia.org/w/index.php?title=ಹರಿ&oldid=1214448" ಇಂದ ಪಡೆಯಲ್ಪಟ್ಟಿದೆ