ಸುದರ್ಶನ ಚಕ್ರವು ಹಿಂದೂ ದೇವತೆ ವಿಷ್ಣುವಿನಿಂದ ಬಳಸಲ್ಪಡುವ ೧೦೮ ದಂತುರೀಕೃತ ಅಂಚುಗಳಿರುವ ಒಂದು ತಿರುಗುವ, ಬಿಲ್ಲೆಯಂತಹ ಆಯುಧ. ಸುದರ್ಶನ ಚಕ್ರವನ್ನು ಸಾಮಾನ್ಯವಾಗಿ ವಿಷ್ಣುವಿನ ನಾಲ್ಕು ಕೈಗಳಲ್ಲಿ ಬಲ ಹಿಂಗೈ ಮೇಲೆ ಚಿತ್ರಿಸಲಾಗುತ್ತದೆ; ಅವನು ಶಂಖ, ಗದೆ ಮತ್ತು ಪದ್ಮವನ್ನೂ ಧರಿಸುತ್ತಾನೆ. ಸುದರ್ಶನ ಚಕ್ರವನ್ನು ಒಂದು ಆಯುಧಪುರುಷನಾಗಿಯೂ (ಮಾನವ ರೂಪ) ಚಿತ್ರಿಸಬಹುದು. ಪುರಾಣಗಳ ಪ್ರಕಾರ, ಸುದರ್ಶನ ಚಕ್ರವು ವೈರಿಯನ್ನು ಕೊಲ್ಲುವ ಕೊನೆಯ ಮಾರ್ಗ. ಸುದರ್ಶನ ಚಕ್ರ ಹಿಡಿದಿರುವ ರೂಪ ಇಡೀ ಬ್ರಹ್ಮಾಂಡವು ವಿಷ್ಣುವಿನದ್ದು ಎಂದು ಸೂಚಿಸುತ್ತದೆ.

  1. ವ್ಯುತ್ಪತ್ತಿ
WLA brooklynmuseum Standing Figure of Vishnu gilt bronze.jpg

ಸುದರ್ಶನ ಪದವು ಸಂಸ್ಕ್ರತದ ಸು ಎಂದರೆ "ಒಳ್ಳೆಯ/ದೈವೀಯ" ಮತ್ತು ದರ್ಶನ ಎಂದರೆ ‍‍‍‍‌"ದ್ರಷ್ಟಿ" ಎಂಬ ಪದಗಳಿಂದ ಕೂಡಿದೆ. ಆದ್ದರಿಂದ ಈ ಪದವು ದಿವ್ಯ ದ್ರಷ್ಟಿ ಎಂಬ ಅರ್ಥವನ್ನು ಕೊಡುತ್ತದೆ. ಕೆಟ್ಟ ಶಕ್ತಿಯನ್ನು ಓಡಿಸಲು ಇದನ್ನು ಸಾಮಾನ್ಯವಾಗಿ ಹೋಮಗಳು ಮಾಡುವಾಗ ಪೂಜಿಸುತ್ತಾರೆ.