ಪಾಂಚಜನ್ಯ ಹಿಂದೂ ದೇವತೆ ವಿಷ್ಣುವಿನ ಶಂಖ. ವಾಲ್ಮೀಕಿ ರಾಮಾಯಣದ ಪ್ರಕಾರ, ಪುರುಷೋತ್ತಮನು ವಿಶ್ವಕರ್ಮನಿಂದ ನಿರ್ಮಿತ ಚಕ್ರವಾನ್ ಪರ್ವತದ ಮೇಲೆ ಪಾಂಚಜನನೆಂಬ ದಾನವನನ್ನು ಕೊಂದು ಅವನಿಂದ ಪಾಂಚಜನ್ಯವೆಂಬ ಶಂಖವನ್ನು ತೆಗೆದುಕೊಂಡನು.

ಮೇಲಿನ ಎಡಗೈಯಲ್ಲಿ ವಿಷ್ಣು ಪಾಂಚಜನ್ಯವನ್ನು ಹಿಡಿದಿದ್ದಾನೆ

ಹರಿವಂಶದ ಪ್ರಕಾರ, ಕೃಷ್ಣನು ಪಾಂಚಜನ್ಯವೆಂಬ ಶಂಖವನ್ನು ಹೊಂದಿದ್ದಾನೆ ಎಂದು ವಿವರಿಸಲಾಗಿದೆ. ಇದು ಅವನ ನಾಲ್ಕು ಲಕ್ಷಣಗಳಲ್ಲಿ ಒಂದು, ಕೌಮೋದಕಿ ಗದೆ, ಸುದರ್ಶನ ಚಕ್ರ ಆಯುಧ ಮತ್ತು ಪದ್ಮ ಹೂವು ಅವನ ಇತರ ಲಕ್ಷಣಗಳು. ಈ ಶಂಖವನ್ನು ಕುರುಕ್ಷೇತ್ರ ಯುದ್ಧದ ಅವಧಿಯಲ್ಲಿ ಬಳಸಲಾಯಿತು. ಶಂಖಾಸುರನು ಪ್ರಭಾಸ ಸಾಗರದ ಅತಿ ಆಳದಲ್ಲಿ ಒಂದು ಬೃಹತ್ ಶಂಖದಲ್ಲಿ ವಾಸಿಸುತ್ತಿದ್ದ ಒಬ್ಬ ದುಷ್ಟ ಸಮುದ್ರ ರಾಕ್ಷಸನಾಗಿದ್ದನು ಅಥವಾ ಶಂಖದ ರೂಪದಲ್ಲಿದ್ದ ರಾಕ್ಷಸನಾಗಿದ್ದನು. ಅವನು ಕೃಷ್ಣ, ಬಲರಾಮ ಮತ್ತು ಸುದಾಮರ ಗುರುಗಳಾದ ಸಾಂದೀಪನಿಯವರ ಮಗನನ್ನು ಅಪಹರಿಸಿ ಶಂಖದಲ್ಲಿ ಸೆರೆಯಿಟ್ಟನು. ತಮ್ಮ ಅಧ್ಯಯನವನ್ನು ಮುಗಿಸಿದ ಮೇಲೆ, ಕೃಷ್ಣ, ಬಲರಾಮ ಮತ್ತು ಸುದಾಮರು ಅವರಿಗೆ ಇಷ್ಟವಾದ ಶಿಕ್ಷಣದ ದಕ್ಷಿಣೆಯನ್ನು ಕೇಳಲು ತಮ್ಮ ಗುರುಗಳ ಮನವೊಲಿಸಿದರು. ದಕ್ಷಿಣೆಯಾಗಿ, ಸಾಂದೀಪನಿಯವರು ತಮ್ಮ ಮಗನನ್ನು ಹಿಂದಿರುಗಿಸುವಂತೆ ಕೇಳಿದರು. ಅಪಹರಣದ ಬಗ್ಗೆ ಕೇಳಿದ ಕೃಷ್ಣನು ಕೋಪಗೊಂಡು ಸಾಂದೀಪನಿಯವರ ಮಗನನ್ನು ಕಾಪಾಡಲು ಸಮುದ್ರಕ್ಕೆ ಹಾರಿದನು. ಕೃಷ್ಣನು ಶಂಖಾಸುರನನ್ನು ಕೊಲ್ಲಲು ಯಶಸ್ವಿಯಾದನು ಮತ್ತು ಶಂಖವನ್ನು ತನಗಾಗಿ ತೆಗೆದುಕೊಂಡನು. ನಂತರ ಅವನು ಶಂಖಕ್ಕೆ ದಾನವನ ಹೆಸರಿಟ್ಟನು. ಕೃಷ್ಣನು ಈ ಶಂಖವನ್ನು ಊದಿದಾಗ ಅದು ಅವನ ಮುಂದಿನ ಎದುರಾಳಿಯ ಸಾವನ್ನು ಮುನ್ಸೂಚಿಸುತ್ತದೆ.

ಮೂಲತಃ, ಅತಿ ಪ್ರಧಾನ ದೇವರಾದ ವಿಷ್ಣುವು ನಾಲ್ಕು ಬಾಹುಗಳನ್ನು ಹೊಂದಿದ್ದಾನೆ ಮತ್ತು ಒಂದು ಕೈಯಲ್ಲಿ ಪಾಂಚಜನ್ಯ ಶಂಖವನ್ನು ಹಿಡಿದಿದ್ದಾನೆ ಎಂದು ಹೇಳಲಾಗಿದೆ ಮತ್ತು ಇತರ ಶಾಸ್ತ್ರಗಳಂತೆ, ಇದರ ಒಂದು ಪ್ರತಿ ಸ್ವರ್ಗದಿಂದ (ವೈಕುಂಠ ಧಾಮ) ಭೂಮಿಯ ಮೇಲೆ ಕೃಷ್ಣನಿಗೆ ವರ್ಗಾವಣೆಯಾಗಿದೆ.