ಕೌಮೋದಕಿ
ಕೌಮೋದಕಿಯು ಹಿಂದೂ ದೇವನಾದ ವಿಷ್ಣುವಿನ ಗದೆ. ವಿಷ್ಣುವನ್ನು ಹಲವುವೇಳೆ ತನ್ನ ನಾಲ್ಕು ಕೈಗಳ ಪೈಕಿ ಒಂದರಲ್ಲಿ ಕೌಮೋದಕಿಯನ್ನು ಹಿಡಿದಿರುವಂತೆ ಚಿತ್ರಿಸಲಾಗುತ್ತದೆ; ಇತರ ಲಕ್ಷಣಗಳೆಂದರೆ ಚಕ್ರ, ಶಂಖ ಮತ್ತು ಪದ್ಮ. ಗದೆಯು ವಿಷ್ಣುವಿನ ಕೆಲವು ಅವತಾರಗಳ ಮೂರ್ತಿಶಿಲ್ಪಗಳಲ್ಲಿ ಕೂಡ ಕಂಡುಬರುತ್ತದೆ. "ಕೌಮೋದಕಿ" ಎಂಬ ಹೆಸರು ಮೊದಲ ಬಾರಿ ಹಿಂದೂ ಮಹಾಕಾವ್ಯವಾದ ಮಹಾಭಾರತದಲ್ಲಿ ಕಂಡುಬರುತ್ತದೆ. ಅದರಲ್ಲಿ ಇದನ್ನು ವಿಷ್ಣುವಿನ ಅವತಾರನದ ಕೃಷ್ಣನೊಂದಿಗೆ ಸಂಬಂಧಿಸಲಾಗುತ್ತದೆ. ಕ್ರಿ.ಪೂ. ಸನ್ ೨೦೦ರಿಂದ ವಿಷ್ಣುವಿನ ಚಿತ್ರಗಳಲ್ಲಿ ಗದೆಯನ್ನು ಚಿತ್ರಿಸಲಾಗಿದೆ. ಆರಂಭದಲ್ಲಿ ಅನಲಂಕೃತವಾಗಿದ್ದ ಕೌಮೋದಕಿಯ ಗಾತ್ರ ಮತ್ತು ಆಕಾರಗಳು ಚಿತ್ರಣಗಳಲ್ಲಿ ಬದಲಾಗುತ್ತವೆ. ವಿಷ್ಣುವಿನ ಗದೆಯ ಚಿತ್ರಣಗಳಲ್ಲಿ ಕೊರೆದ ಕೊಳವೆಗಳು ಮತ್ತು ವಿಭಾಗಗಳಂತಹ ಹೆಚ್ಚು ವಿಸ್ತಾರವಾದ ವಿನ್ಯಾಸ ವೈಶಿಷ್ಟ್ಯಗಳನ್ನು ಸೇರಿಸಲಾಯಿತು.