ಕಟ್ರಾ
ಕಟ್ರಾ ಅಥವಾ ಕಟ್ರಾ ವೈಷ್ಣೋ ದೇವಿ ಜಮ್ಮು ಮತ್ತು ಕಾಶ್ಮೀರದ ಉಧಮ್ಪುರ್ ಜಿಲ್ಲೆಯ ಒಂದು ಸಣ್ಣ ಪಟ್ಟಣ ಮತ್ತು ವೈಷ್ಣೋ ದೇವಿ ಪವಿತ್ರ ದೇವಾಲಯ ನೆಲೆಗೊಂಡಿರುವ ತ್ರಿಕೂಟ ಬೆಟ್ಟಗಳ ತಪ್ಪಲಿನಲ್ಲಿ ಸ್ಥಿತವಾಗಿದೆ. ಅದು ಜಮ್ಮು ನಗರದಿಂದ ೪೨ ಕಿ.ಮಿ. ದೂರದಲ್ಲಿ ನೆಲೆಗೊಂಡಿದೆ. ಭಾರತದ ಮುಂಚೂಣಿಯಲ್ಲಿರುವ ತಾಂತ್ರಿಕ ವಿಶ್ವವಿದ್ಯಾಲಯಗಳ ಪೈಕಿ ಒಂದಾದ ಶ್ರೀ ಮಾತಾ ವೈಷ್ಣೋ ದೇವಿ ವಿಶ್ವವಿದ್ಯಾಲಯವೂ ಇಲ್ಲಿ ನೆಲೆಗೊಂಡಿದೆ.