ರಾಮಚಂದ್ರ ಭಾವೆಯವರು ಕನ್ನಡದ ಜನಪ್ರಿಯ ಕತೆಗಾರರು. ಇವರ ಕತೆಗಳು ನಾಡಿನ ಪ್ರಮುಖ ಪತ್ರಿಕೆಗಳಾದ ಪ್ರಜಾವಾಣಿ,ಸುಧಾ,ತರಂಗ,ಲಂಕೇಶ್ ಪತ್ರಿಕೆ ಮೊದಲಾದ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ಇವರ ಮೊದಲ ಕಥೆ 'ಗಿಳಿಯು ಪಂಜರದೊಳಗಿಲ್ಲ'. ಇದಕ್ಕೆ ತ್ರಿವೇಣಿ ಪ್ರಶಸ್ತಿ ಬಂದಿದೆ.

ಇವರ ಕಥಾಸಂಕಲನಗಳು:ಮಿಡಿನಾಗರ,ತಲೆಗಳು,ಮಹಾಭಾರತದ ಉಪಕಥೆಗಳು,ಕುರುಕೇತ‍ಷತ್ರ ಮಹಾಯುಧಕ‍ಧಕಕ‍ಕೆ ಯಾರು ಕಾರಣ?, ಕಾದಂಬರಿಗಳು:ಸುಮನ,ಅಜ್ಞಾತ,ಅಂಧಪರ್ವ,ದೇವಯಾನಿ,ಅಶ್ವಮೇಧ,ಪರಿಧಿ,ಅನಾವರಣ,ನಿಕ್ಷೇಪ,ಭಾಗ್ಯಲಕ್ಶ್ಮಿ,ವಿಶಾಮ‍ವಮಿತ್ರ,ಗಮ್ಯ,ಅನಕ‍ವೀಷಣೆ,ಸಂಭವಾಮಿ ಯುಗೇ ಯುಗೇ, ರಾಮಚಂದ್ರ ಭಾವೆಯವರು ಮೂಲತಃ ಸೊರಬದವರು.ಇವರು ಬರೆದ 'ಭಾಗವತದ ಕಥೆಗಳು' ಎಂಬ ಪುಸ್ತಕವು ಅತ್ಯಂತ ಜನಪ್ರಿಯತೆಯನ್ನು ಹೊಂದಿದೆ.ಈ ಪುಸ್ತಕವನ್ನು 'ವಿಕ್ರಮ್ ಪ್ರಕಾಶನ'ದವರು ಪ್ರಕಟಿಸಿದ್ದಾರೆ. ಅಂಚೆ ಇಲಾಖೆಯಲ್ಲಿ ನೌಕರಿನಿಮಿತ್ತ ಗದಗನಲ್ಲಿ ವಾಸ. ಈಗ ನಿವ್ರತ್ತಿಯ ನಂತರ ಮಹಾರಾಷ್ಟ್ರದ ರತ್ನಾಗಿರಿಯಲ್ಲಿ ವಾಸ.

    ಇದುವರೆಗೆ ಪ್ರಕಟವಾದ ಕಥೆಗಳು ೨೫೦.