ಪ್ರಜಾವಾಣಿ (ದಿನಪತ್ರಿಕೆ)
ಪ್ರಕಟಣೆ: ಬೆಂಗಳೂರು,ಹುಬ್ಬಳ್ಳಿ-ಧಾರವಾಡ,ಮಂಗಳೂರು,ಕಲಬುರ್ಗಿ,ದಾವಣಗೆರೆ,ಮೈಸೂರು,ಹೊಸಪೇಟೆ
ಈಗಿನ ಸಂಪಾದಕರು: ಕೆ. ಎನ್. ಶಾಂತಕುಮಾರ್
ಜಾಲತಾಣ:
ಇವನ್ನೂ ನೋಡಿ ವರ್ಗ:ಕನ್ನಡ ಪತ್ರಿಕೆಗಳು

ಟೆಂಪ್ಲೇಟು:Newspapers_in_India

ಪ್ರಜಾವಾಣಿ ಕರ್ನಾಟಕದ ಪ್ರಮುಖ ದಿನಪತ್ರಿಕೆ. ಕರ್ನಾಟಕದ ದಕ್ಷಿಣ ಜಿಲ್ಲೆಗಳಲ್ಲಿ ಈ ಪತ್ರಿಕೆ ಬಹಳವಾಗಿ ಜನಪ್ರಿಯ. 'ಪದ ಸಂಪದ', 'ಚಿನಕುರಳಿ' ಮುಂತಾದ ಜನಪ್ರಿಯ ಅಂಕಣ/ವ್ಯಂಗ್ಯಚಿತ್ರಗಳು ಈ ಪತ್ರಿಕೆಯನ್ನು ವಿಶಿಷ್ಟಗೊಳಿಸಿದವು. ಪ್ರಜಾವಾಣಿಯಲ್ಲಿ ಪ್ರಚಲಿತ ರಾಜಕೀಯ, ಆರ್ಥಿಕ ವಿಷಯಗಳನ್ನು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸಲಾಗುತ್ತದೆ.

ಇತಿಹಾಸಸಂಪಾದಿಸಿ

ಸ್ವಾತಂತ್ರ್ಯಾನಂತರ ಪ್ರಾರಂಭವಾದ ಕನ್ನಡ ದಿನಪತ್ರಿಕೆಗಳಲ್ಲಿ ಪ್ರಜಾವಾಣಿ ಪ್ರಮುಖವಾದುದು.೧೯೪೮ರಲ್ಲಿ ಇಂಗ್ಲಿಷ್ ದಿನಪತ್ರಿಕೆ "ಡೆಕ್ಕನ್ ಹೆರಾಲ್ಡ್"ನೊಂದಿಗೆ, ಶ್ರೀ ಕೆ.ಎನ್. ಗುರುಸ್ವಾಮಿಯವರ ಮಾಲೀಕತ್ವದ ದಿ ಪ್ರಿಂಟರ್ಸ್ ಮೈಸೂರು ಲಿ. ಪ್ರಜಾವಾಣಿಯನ್ನು ಪ್ರಾರಂಭಿಸಿತು. ಬಿ.ಪುಟ್ಟಸ್ವಾಮಯ್ಯನವರ ಸಂಪಾದಕತ್ವದಲ್ಲಿ ಮೊದಲಾಗಿ ಪ್ರಸಕ್ತ ಕೆ.ಎನ್. ಶಾಂತ ಕುಮಾರ್ ರವರೆಗೆ ಪ್ರಜಾವಾಣಿ ಅವಿರತವಾಗಿ ಸಾಗಿದೆ.

ಸಂಪಾದಕರುಸಂಪಾದಿಸಿ

  1. ಬಿ.ಪುಟ್ಟಸ್ವಾಮಯ್ಯನವರು
  2. ಖಾದ್ರಿ ಶಾಮಣ್ಣ
  3. ಟಿಯೆಸ್ಸಾರ್
  4. ಎಂ.ಬಿ.ಸಿಂಗ್
  5. ಕೆ.ಎನ್. ಹರಿಕುಮಾರ್
  6. ಕೆ.ಎನ್. ಶಾಂತ ಕುಮಾರ್
  7. ಕೆ.ಎನ್.ತಿಲಕ್ ಕುಮಾರ್.
  8. ಕೆ.ಎನ್.ಶಾಂತ ಕುಮಾರ್

ಸಹ ಸಂಪಾದಕರುಸಂಪಾದಿಸಿ

  1. ಪಿ.ರಾಮಣ್ಣ
  2. ಬಿ.ಎಂ.ಕೃಷ್ಣಸ್ವಾಮಿ
  3. ಜಿ.ಎನ್.ರಂಗನಾಥರಾವ್,
  4. ಕೆ. ಶ್ರೀಧರ ಆಚಾರ್
  5. ರಾಜಾ ಶೈಲೇಶ್ಚಂದ್ರ ಗುಪ್ತ
  6. ಆರ್. ಪಿ. ಜಗದೀಶ
  7. ಪದ್ಮರಾಜ ದಂಡಾವತಿ


ಸಹಾಯಕ ಸಂಪಾದಕರುಸಂಪಾದಿಸಿ

  1. ಮಾಗಡಿ ಗೋಪಾಲಕಣ್ಣನ್
  2. ಶ್ರೀಧರ ಕೃಷ್ಣಮುರ್ತಿ
  3. ಜಿ.ಎಸ್. ಸದಾಶಿವ
  4. ಡಿ.ವಿ. ರಾಜಶೇಖರ
  5. ಲಕ್ಷ್ಮಣ ಕೊಡಸೆ
  6. ಶಿವಾಜಿ ಗಣೇಷನ್
  7. ಇ.ವಿ.ಸತ್ಯನಾರಾಯಣ ಮೊದಲಾದವರು.

ಸಾಪ್ತಾಹಿಕ ಪುರವಣಿ ಉಸ್ತುವಾರಿಸಂಪಾದಿಸಿ

  1. ಬಿ.ವಿ.ವೈಕುಂಠರಾಜು
  2. ಜಿ.ಎನ್.ರಂಗನಾಥ ರಾವ್
  3. ಡಿ.ವಿ. ರಾಜಶೇಖರ
  4. ಗಂಗಾಧರ ಮೊದಲಿಯಾರ್
  5. ಪ್ರೇಮಕುಮಾರ್ ಹರಿಯಬ್ಬೆ
  6. ಲಕ್ಷ್ಮಣ ಕೊಡಸೆ
  7. ರಘುನಾಥ ಚ.ಹ

ದಿನವೂ ಒಂದು ಪುರವಣಿ ಇರುವ ಕನ್ನಡದ ಪ್ರಮುಖ ಪತ್ರಿಕೆ ಪ್ರಜಾವಾಣಿ. ಭಾನುವಾರದ ಸಾಪ್ತಾಹಿಕ ಪುರವಣಿ ಸಾಹಿತ್ಯ- ಸಂಸ್ಕ್ರತಿಯ ವೇದಿಕೆ. ಕಥೆ, ಕವನ, ವಿಮರ್ಶೆ, ಹೊಸ ಪುಸ್ತಕ, ಪರಿಚಯ, ಮಕ್ಕಳ ಪುಟ ಜನಪ್ರಿಯವಾಗಿವೆ. ಸೋಮವಾರಕ್ಕೆ ಮೆಟ್ರೊ ಇದೆ. ಮಂಗಳವಾರ ಕ್ರೀಡೆ ಮತ್ತು ಶಿಕ್ಷಣ ಪುರವಣಿ, ಬುಧವಾರಕ್ಕೆ ವಾಣಿಜ್ಯ ಪುರವಣಿ, ಗುರುವಾರಕ್ಕೆ ಕರ್ನಾಟಕ ದರ್ಶನ, ಶುಕ್ರವಾರಕ್ಕೆ ಸಿನಿಮಾ ಕಿರುತೆರೆ, ಶನಿವಾರಕ್ಕೆ ಭೂಮಿಕಾ ಮತ್ತು ಆರೋಗ್ಯ ಪುಟಗಳಿವೆ.

ಹೊರಗಿನ ಸಂಪರ್ಕಗಳುಸಂಪಾದಿಸಿ