ಡೆಕ್ಕನ್ ಹೆರಾಲ್ಡ್
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಡೆಕ್ಕನ್ ಹೆರಾಲ್ಡ್ ಕರ್ನಾಟಕ ರಾಜ್ಯದಲ್ಲಿ ವಿತರಣೆಯಾಗುವ ಪ್ರಮುಖ ಇಂಗ್ಲೀಷ್ ಭಾಷೆಯ ದಿನಪತ್ರಿಕೆ ಆಗಿದೆ. ಇದು ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್ ನವರಿಂದ ಮುದ್ರಣ ಗೊಳ್ಳುತ್ತದೆ ಮತ್ತು ದೆಹಲಿ, ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಮಂಗಳೂರು ಮತ್ತು ಗುಲ್ಬರ್ಗ ರಲ್ಲಿ ಆವೃತ್ತಿಗಳನ್ನು ಹೊಂದಿದೆ. [ಸೂಕ್ತ ಉಲ್ಲೇಖನ ಬೇಕು]
ಡೆಕ್ಕನ್‍ಹೆರಾಲ್ಡ್ ಮೊದಲ ಸಂಚಿಕೆ ಪ್ರಕಟವಾದದ್ದು ೧೯೪೮ರ ಜೂನ್ರಂ ೧೭ದು. ಇಂಥದೊಂದು ಬೆಳವಣಿಗೆಗೆ ನಾಂದಿ ಹಾಡಿದ್ದು 'ನೆಟ್ಕಲ್ಲಪ್ಪ' ಕುಟುಂಬದವರು. ಉದ್ಯಮಿ ಕೆ. ಎನ್. ಗುರುಸ್ವಾಮಿ ಅವರು ತಮ್ಮ ಮಿತ್ರರೊಡಗೂಡಿ ಆರಂಭಿಸಿದ ದಿ ಪ್ರಿಂಟರ್ಸ್ ಮೈಸೂರು ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಈ ದಿನಪತ್ರಿಕೆಯನ್ನು ಆರಂಭಿಸಿತು. ಡೆಕ್ಕನ್ ಹೆರಾಲ್ಡ್ನ ಸ್ಥಾಪಕ ಸಂಪಾದಕ ಪ್ರಸಿದ್ಧ ಪತ್ರಕರ್ತ ಪೋಥನ್ ಜೋಸೆಫ್. ಇದರ ಸಹೋದರಿ ಪ್ರಕಾಶನ ಗಳಾಗಿ ಪ್ರಜಾವಾಣಿ ದಿನಪತ್ರಿಕೆ, ಸಾಪ್ತಾಹಿಕ ಪತ್ರಿಕೆ ಸುಧಾ ಮತ್ತು ಕನ್ನಡ ಮಾಸಿಕ ಪತ್ರಿಕೆ ಮಯೂರ, ಪ್ರಕಟವಾಗುತ್ತಿವೆ. ಡೆಕ್ಕನ್ ಹೆರಾಲ್ಡ್ ಮುಖ್ಯ ಕಛೇರಿ ಎಂ. ಜಿ. ರಸ್ತೆ, ಬೆಂಗಳೂರು ಇಲ್ಲಿ ಇದೆ.
ಭಾರತೀಯ ರೀಡರ್ಶಿಪ್ ಸರ್ವೆ ಪ್ರಕಾರ ೨೦೧೧ ರ ಮೊದಲ ತ್ರೈಮಾಸಿಕದಲ್ಲಿ (Q1), ಕಾಲ, ಡೆಕ್ಕನ್ ಹೆರಾಲ್ಡ್ ೪,೨೩,೦೦೦ ಸರಾಸರಿ ದೈನಂದಿನ ಓದುಗರನ್ನು ಹೊಂದಿದೆ ೨೦೦೯ ಮೊದಲಾರ್ಧದಲ್ಲಿ ಎಬಿಸಿ ಪ್ರಮಾಣಿತ ಅಂಕಿಅಂಶಗಳು ಇದರ ಪ್ರಸಾರವನ್ನು ಕೊಂಡು ಓದುವ ಓದುಗರ ಸಂಖ್ಯೆ ೨,೧೪,೭೯೭ ಎಂದಿದೆ.
ದಶಂಬರ ೨೦೧೧ ರಲ್ಲಿ ದೆಹಲಿ ಆವೃತ್ತಿಯನ್ನು ಪ್ರಾರಂಭಿಸಿದಾಗ ಪತ್ರಿಕೆಯ ಹೊಸ ಶಕೆ ಶುರುವಾಯಿತು . ಆದರೆ ಅವರೇ ಒಪ್ಪಿಕೊಂಡಂತೆ ೧೫ ಸುದ್ದಿ ಪತ್ರಿಕೆಗಳು ಇರುವ ದೆಹಲಿ ಮಾರುಕಟ್ಟೆಯಲ್ಲಿ ಸ್ಪರ್ಧಿಸುವುದು ತುಂಬಾ ಕಷ್ಟಕರ ವಿಷಯವಾಗಿದೆ . ಡೆಕ್ಕನ್ ಹೆರಾಲ್ಡ್ ಅನೇಕ ವರ್ಷಗಳ ಹಿಂದೆ ಹೈದರಾಬಾದ್‍ನಿಂದ ಪ್ರಕಟವಾಗುತ್ತಿತ್ತು ಆದರೆ ನಶಿಸುತ್ತಿರುವ ಪ್ರಸಾರ ಅಂಕಿಅಂಶಗಳ ಕಾರಣದಿಂದ ನಿಲ್ಲಿಸಲಾಗಿತ್ತು.
ಉಲ್ಲೇಖಗಳು
ಬದಲಾಯಿಸಿಬಾಹ್ಯ ಕೊಂಡಿಗಳು
ಬದಲಾಯಿಸಿ- DeccanHerald.com
- DeccanHerald ಇ ಪತ್ರಿಕೆ Archived 2006-12-06 ವೇಬ್ಯಾಕ್ ಮೆಷಿನ್ ನಲ್ಲಿ.
ಈ ಲೇಖನ about mass media in India ಒಂದು ಚುಟುಕು. ನೀವು ಇದನ್ನು ವಿಸ್ತರಿಸುವುದರ ಮೂಲಕ ವಿಕಿಪೀಡಿಯಾಗೆ ಸಹಾಯ ಮಾಡಬಹುದು. |