ವೈಶಂಪಾಯನ

ದ್ವಂದ್ವ ನಿವಾರಣೆ

ವೈಶಂಪಾಯನ ಪ್ರಾಚೀನ ಭಾರತದ ಎರಡು ಪ್ರಮುಖ ಸಂಸ್ಕೃತ ಮಹಾಕಾವ್ಯಗಳಲ್ಲಿ ಒಂದಾದ ಮಹಾಭಾರತದ ಸಾಂಸ್ಕೃತಿಕ ನಿರೂಪಕನಾಗಿದ್ದನು. ಅವನು ಒಬ್ಬ ಪ್ರಾಚೀನ ಭಾರತೀಯ ಋಷಿಯಾಗಿದ್ದನು ಮತ್ತು ಕೃಷ್ಣ ಯಜುರ್ವೇದದ ಮೂಲ ಶಿಕ್ಷಕನಾಗಿದ್ದನು. ಅಶ್ವಲಾಯನ ಗೃಹ್ಯ ಸೂತ್ರವು ಅವನನ್ನು ಮಹಾಭಾರತಾಚಾರ್ಯನೆಂದು ಉಲ್ಲೇಖಿಸುತ್ತದೆ.