ಹಿಂದೂ ಧರ್ಮದ ಸಾಹಿತ್ಯವು ಸಂಸ್ಕೃತ ಗ್ರಂಥಗಳಲ್ಲಿರುವ ಸಂಸ್ಕೃತ ಸಾಹಿತ್ಯ, ಮತ್ತು ಪುರಾಣಗಳಲ್ಲಿರುವಂತೆ ಹಿಂದೂಗಳಿಗೆ ಸಂಬಂಧಿಸಿದ ಸಾಂಪ್ರದಾಯಿಕ ಹೇಳಿಕೆಗಳುಳ್ಳ ಬೃಹತ್ ಸಂಗ್ರಹವಾಗಿದೆ, ಇದು ಭಾರತೀಯ ಸಂಸ್ಕೃತಿಯ ಉಪವರ್ಗವೂ ಆಗಿದೆ

ಮೂಲಗಳು

ಬದಲಾಯಿಸಿ

ನಾಲ್ಕು ವೇದಗಳು, ಮುಖ್ಯವಾಗಿ ಋಗ್ವೇದದ ಶ್ಲೋಕಗಳು, ಅನೇಕ ವಸ್ತುವಿಷಯದ ಪ್ರಸ್ತಾಪವನ್ನು ಹೊಂದಿದೆ. (ಋಗ್ವೇದದ ದೇವತೆಗಳು, ಋಗ್ವೇದದ ನದಿಗಳು)

ಶ್ರೇಷ್ಠ ಸಂಸ್ಕೃತದ ಕಾಲದಲ್ಲಿ, ಅನೇಕ ಮೂಲವಸ್ತುಗಳು ಸಂಸ್ಕೃತ ಗ್ರಂಥಗಳು, ರಾಮಾಯಣ ಮತ್ತು ಮಹಾಭಾರತದ ರೂಪದಲ್ಲಿ ಸಂರಕ್ಷಿಸಲ್ಪಟ್ಟಿದೆ. ನಿಖರವಾಗಿ ದೇವತಾಶಾಸ್ತ್ರವನ್ನು ಹೊರತುಪಡಿಸಿ, ಅಗಾಧ ಪ್ರಮಾಣದ ಗ್ರಂಥಗಳು, ಪುರಾತನ ಭಾರತೀಯ ಸಮಾಜ, ಶಾಸ್ತ್ರದರ್ಶನ, ಸಂಸ್ಕೃತಿ, ಧರ್ಮ ಮತ್ತು ಜೀವನದ ಕಲೆಗಳ ಬಗೆಗೆ ಅತಿಯಾದ ಮಾಹಿತಿಯನ್ನು ಒದಗಿಸಿಕೊಟ್ಟಿದೆ

ಪುರಾಣಗಳು ಗ್ರಂಥಗಳಲ್ಲಿರುವುದಕ್ಕಿಂತ ಪುರಾತನ ಕಥೆಗಳನ್ನು ತಿಳಿಸುತ್ತವೆ (ಸಂಸ್ಕೃತದಲ್ಲಿ ಪುರಾಣ ಎಂದರೆ ಪುರಾತನ ಎಂದರ್ಥ) ಆದರೆ ಸುಮಾರು ಪೌರಾಣಿಕ ಪಠ್ಯಗಳು, ಗ್ರಂಥಗಳನ್ನು ಸುಮಾರು ಮೊದಲ ಮಧ್ಯ ಯುಗದ ಮುಂದಿನ ತಾರೀಖಿನಲ್ಲಿ ನಮೂದಿಸಲ್ಪಟ್ಟಿದೆ,

ಗ್ರಂಥಗಳು ಬೇರೆ ಬೇರೆ ಯುಗಗಳಲ್ಲಿ (ಪರ್ವಗಳು) ಅಥವಾ ಕಾಲಮಾನದಲ್ಲಿ ತಮಗೆ ತಾವೇ ಜೋಡಿಸಲ್ಪಟ್ಟಿದೆ ವಾಲ್ಮೀಕಿಯಿಂದ ಬರೆಯಲ್ಪಟ್ಟ ರಾಮಾಯಣವು, ತ್ರೇತಾಯುಗದ ರಾಮದೇವರ ಕಾಲ ಮತ್ತು ಜೀವನಚರಿತ್ರೆಯನ್ನು ವರ್ಣಿಸುತ್ತದೆ(ಭಗವಂತ ವಿಷ್ಣುವಿನ ಏಳನೇ ಅವತಾರ), ಮಹಾಭಾರತವು ದ್ವಾಪರಯುಗದಲ್ಲಿ ನಡೆದ ಪಾಂಡವರ ಕಾಲ ಮತ್ತು ಜೀವನ ಚರಿತ್ರೆಯನ್ನು ವರ್ಣಿಸುತ್ತದೆ, ಇದು ಕೃಷ್ಣ ಪರಮಾತ್ಮನ ಕಾಲದೊಂದಿಗೆ ಸೇರಿಕೊಂಡಿದೆ (ಭಗವಂತ ವಿಷ್ಣುವಿನ ಎಂಟನೇ ಅವತಾರ) ಪರಿಪೂರ್ಣವಾಗಿ 4 ಯುಗಗಳಿವೆ. ಅವು ಸತ್ಯ ಯುಗ (ಅಥವಾ ಕೃತ ಯುಗ), ತ್ರೇತಾ ಯುಗ, ದ್ವಾಪರ ಯುಗ ಮತ್ತು ಕೊನೆಯದಾಗಿ ಕಲಿಯುಗ.

ಪುರಾಣಗಳಲ್ಲಿ ಭಾಗವತ ಪುರಾಣವು ಬಹುಶಃ ಅತಿಹೆಚ್ಚು ಓದುಗರನ್ನು ಹೊಂದಿದ ಮತ್ತು ಪ್ರಸಿದ್ಧವಾದ ಪುರಾಣವಾಗಿದೆ. ಇದು ಭೂಮಿಯ ಮೇಲೆ ಭಗವಂತ ವಿಷ್ಣುವಿನ ಅವತಾರದ ಅನುಕ್ರಮವನ್ನು ತಿಳಿಸುವ ಕಥೆಯಾಗಿದೆ.

ವೇದಗಳಿಗೆ ಸಂಬಂಧಿಸಿದ ಪೌರಾಣಿಕ ಕಥೆಗಳು

ಬದಲಾಯಿಸಿ

ಶ್ರೇಷ್ಠವಾದ ಹಿಂದೂಧರ್ಮದಿಂದ ಹೊರತೆಗೆಯಲ್ಪಟ್ಟ ಧರ್ಮಶಾಸ್ತ್ರದ ಬೇರುಗಳು, ಪುರಾತನ ವೇದ ಧರ್ಮ ಕಾಲಗಳಿಂದ. ವೇದಗಳ ನಾಗರೀಕತೆಯ ಕಾಲದಿಂದ ಬಂದಿವೆ.

ಪುರಾತನ ವೈದಿಕ ಪುರಾಣಗಳು ರಚಿಸಿದ ಪಾತ್ರಗಳು, ಧರ್ಮಶಾಸ್ತ್ರ, ತತ್ವಶಾಸ್ತ್ರ ಮತ್ತು ಕಥೆಗಳು, ಹಿಂದು ನಂಬಿಕೆಗಳೊಂದಿಗೆ ಅಳಿಸಲಾಗದಂತೆ ತಳುಕುಹಾಕಿಕೊಂಡಿವೆ. ವೇದಗಳು ನಾಲ್ಕು ಎಂದು ಹೇಳಲ್ಪಟ್ಟಿದೆ, ಅವು ಯಾವುವೆಂದರೆ ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ. ಇವುಗಳಲ್ಲಿ ಕೆಲವು ಪಠ್ಯಗಳು ಪೌರಾಣಿಕ ಮೂಲಮಾದರಿಯನ್ನು ತಿಳಿಸುತ್ತವೆ ಮತ್ತು ಯಂತ್ರಗಳು, ಸುಮಾರು ಆಧುನಿಕ ಕಾಲದ ವೈಜ್ಞಾನಿಕ ಸಿದ್ಧಾಂತಕ್ಕೆ ಸಮಾನವಾಗಿ ಇತ್ತೆಂದು ತಿಳಿಸುತ್ತದೆ.

ಮಹಾ ಕಾವ್ಯಗಳು

ಬದಲಾಯಿಸಿ
 
ರಾಮಾಯಣದ ಒಂದು ದೃಶ್ಯ, ರಾಕ್ಷಸ-ರಾಜ ರಾವಣನ ಸಂಹಾರಕ್ಕೆಂದು ಹೊರಟ ರಾಮನು ಹನುಮಂತನ ಭುಜದ (ಬಲ) ಮೇಲೆ ಕುಳಿತಿರುವುದು.

ಎರಡು ಹಿಂದೂ ಧರ್ಮ ಗ್ರಂಥಗಳು, ರಾಮಾಯಣ ಮತ್ತು ಮಹಾಭಾರತ , ಇವು ವಿಷ್ಣುವಿನ ಎರಡು ಮುಖ್ಯವಾದ ಅವತಾರಗಳ (ರಾಮ ಮತ್ತು ಕೃಷ್ಣ) ಕುರಿತು ತಿಳಿಸುತ್ತದೆ. ಈ ಎರಡೂ ಕೃತಿಗಳು ಇತಿಹಾಸ ದ ಕಥೆಗಳೆಂದು ಕರೆಯಲ್ಪಟ್ಟಿವೆ. ಮಹಾಭಾರತ ಮತ್ತು ರಾಮಾಯಣ ಗ್ರಂಥಗಳು ಹಿಂದೂಗಳಿಗೆ ಧಾರ್ಮಿಕ ಪವಿತ್ರ ಗ್ರಂಥವಾಗಿ ಮತ್ತು ತತ್ವಶಾಸ್ತ್ರ, ನೈತಿಕತೆಯ ಶ್ರೀಮಂತ ಆಧಾರಗ್ರಂಥಗಳಾಗಿ ಪರಿಣಮಿಸಲ್ಪಟ್ಟಿವೆ ಈ ಗ್ರಂಥಗಳು ಅಧ್ಯಾಯಗಳಾಗಿ ವಿಂಗಡಿಸಲ್ಪಟ್ಟಿವೆ ಮತ್ತು ಅನೇಕ ಸಣ್ಣ ಕಥೆಗಳನ್ನು ಮತ್ತು ನೀತಿಯುಕ್ತವಾದ ಸನ್ನಿವೇಶಗಳನ್ನು ಹೊಂದಿವೆ, ಇದರಲ್ಲಿರುವ ಪಾತ್ರಗಳು ಪರಿಪೂರ್ಣ ನೈತಿಕತೆಯ ಹಿಂದು ವಿಧಿ ನಿಯಮದಂತೆ ಮತ್ತು ನಿಯಮ ಸಂಹಿತೆಯಂತೆ ಕಾರ್ಯ ನಿರ್ವಹಿಸುತ್ತವೆ. ಈ ಅಧ್ಯಾಯಗಳಲ್ಲಿ ಅತ್ಯಂತ ಪ್ರಸಿದ್ಧವಾದದ್ದು ಮಹಾಭಾರತದ ಭಗವದ್ಗೀತೆ (ಸಂಸ್ಕೃತ:ಭಗಂತನ ಹಾಡು ),ಇದರಲ್ಲಿ ಭಗವಂತ ಕೃಷ್ಣನು, ನಿರ್ಣಾಯಕ ಯುದ್ಧಕ್ಕೆ ಮೊದಲು ನಾಯಕ ಅರ್ಜುನನಿಗೆ ಕರ್ತವ್ಯ ಮತ್ತು ಧರ್ಮದ ಬಗೆಗೆ ವಿವರಿಸುತ್ತಾನೆ. ಈ ಕಥೆಗಳು ಹಿಂದು ತತ್ವಶಾಸ್ತ್ರದಲ್ಲಿ ಆಳವಾಗಿ ಬೇರೂರಿದೆ ಮತ್ತು ನೀತಿಕಥೆಗಳಾಗಿ, ಹಿಂದೂಗಳ ಭಕ್ತಿಗೆ ಮೂಲಾಧಾರವಾಗಿದೆ. ಮಹಾಭಾರತವು ಜಗತ್ತಿನ ಅತಿದೊಡ್ಡ ಗ್ರಂಥವಾಗಿದ್ದು, (30,000 ಸಾಲುಗಳನ್ನು ) ೧,೦೦,೦೦೦ ಶ್ಲೋಕಗಳನ್ನು ಹೊಂದಿದೆ.

ವಿಶ್ವದ ಮೂಲ

ಬದಲಾಯಿಸಿ

| ಸೃಷ್ಟಿ ಮತ್ತು ಪುರಾಣ

ಹಿಂದೂ ಧರ್ಮವು ವಿಶ್ವದ ಮೂಲಕ್ಕೆ ಸಂಬಂಧಪಟ್ಟಂತೆ ಕೆಲವು ಸಿದ್ಧಾಂತಗಳನ್ನು , ಮತ್ತು ಕೆಲವು ವಿವರಣೆಗಳನ್ನು ವಿಶ್ವದ ಮೂಲವಾಗಿ ಪರಿಚಯಿಸುತ್ತದೆ ಬ್ರಹ್ಮ, ಜಗತ್ತಿನ ಸೃಷ್ಠಿಕರ್ತ ಎನ್ನುವುದು ಅತ್ಯಂತ ಪ್ರಸಿದ್ಧವಾದ ನಂಬಿಕೆ, ಶ್ರೇಷ್ಠ ಆತ್ಮದ ಪ್ರತ್ಯಕ್ಷ ಸೃಷ್ಠಿಕರ್ತ.ಮೊದಲು ಬರಿಯ ಅವ್ಯಕ್ತ ಅಥವಾ ಸಂಧಿಗ್ಧವಿತ್ತು ಈ ಶೂನ್ಯದಲ್ಲಿ, ಸ್ಥಿತಿಕರ್ತ ಭಗವಂತ ವಿಷ್ಣುವು, ಶಿಶುವಿನ ರೂಪದಲ್ಲಿ ಆಲದ ಎಲೆಯ ಮೇಲೆ ಮಲಗಿದ್ದಂತೆ ಕಂಡುಬರುತ್ತಾನೆ. ಸಾವಿರ ದಳಗಳ ಕಮಲವೊಂದು ಅವನ ಹೊಕ್ಕುಳಿನಿಂದ ಉದ್ಭವಿಸುತ್ತದೆ, ಅದರಲ್ಲಿ ಬ್ರಹ್ಮನು ಉದಯಿಸುತ್ತಾನೆ. ಬ್ರಹ್ಮನು ಸಂಪೂರ್ಣವಾದ ಜಗತ್ತನ್ನು ಮತ್ತು ಅವುಗಳಲ್ಲಿರುವುದೆಲ್ಲವನ್ನೂ ಸೃಷ್ಟಿ ಮಾಡುತ್ತಾನೆ. ಅವನು ಈ ರೂಪದಲ್ಲಿ ಬರುತ್ತಿದ್ದಂತೆ ಅವನ ಮನಸ್ಸು ತನ್ನ ಗುರುತಿನ ಬಗ್ಗೆ ಸಂಧಿಗ್ಧಕ್ಕೊಳಗಾಗುತ್ತದೆ.ನಂತರ ಒಂದು ಅಶರೀರವಾಣಿಯಾಗುತ್ತದೆ. ಅದು ಅವನಿಗೆ ತಪಸ್ಸು ಮಾಡಲು ಸೂಚಿಸುತ್ತದೆ. ಅದರಂತೆ ಅವನು ಸಾವಿರಾರು ವರ್ಷ ತಪಸ್ಸು ಮಾಡುತ್ತಾನೆ. ರುದ್ರ ದೇವರು(ಮಹೇಶ್ವರನೆಂದೂ ಕರೆಯಲ್ಪಡುತ್ತಾನೆ), ಇವನು ಲಯಕರ್ತ, ಇವನು ಬ್ರಹ್ಮನ ಮಗನೆಂದು ಕರೆಯಲ್ಪಡುತ್ತಾನೆ. ಈ ಮೂವರೂ ಬ್ರಹ್ಮ-ವಿಷ್ಣು-ಮಹೇಶ್ವರ ಎಂದು ಕರೆಯಲ್ಪಡುತ್ತಾರೆ. ಈ ಮೂರೂ ದೇವತೆಗಳನ್ನು ಅತ್ಯಂತ ಶ್ರೇಷ್ಠರಾದ ಪವಿತ್ರ ಮೂರ್ತಿಗಳೆಂದು ಹಿಂದೂಧರ್ಮದಲ್ಲಿ ಹೇಳಿದೆ.

ಯುದ್ಧಗಳು

ಬದಲಾಯಿಸಿ

ಶಸ್ತ್ರಗಳು

ಬದಲಾಯಿಸಿ
 
ಬಲಗೈಯ ತೋರ್ಬೆರಳಲಿನಲ್ಲಿ ಸುದರ್ಶನ ಚಕ್ರ ಹಿಡಿದಿರುವ ವಿಷ್ಣುವಿನ ವಿಗ್ರಹ.

ಮಾನವ ನ ಸಾಂಪ್ರದಾಯಿಕ ಆಯುಧಗಳಾದ ಕತ್ತಿಗಳು, ಕಠಾರಿಗಳು,ಭರ್ಜಿಗಳು, ಬೆತ್ತಗಳು, ಗುರಾಣಿಗಳು, ಬಿಲ್ಲುಗಳು, ಬಾಣಗಳು ಮತ್ತು ರಾಜದಂಡದ ಹೊರತಾಗಿ ದೇವತೆಗಳು ಉಪಯೋಗಿಸುವ ಶಸ್ತ್ರಗಳು (ಇಂದ್ರನ ವಜ್ರಾಯುಧ ), ಶಾಸ್ತ್ರ ಗ್ರಂಥಗಳಲ್ಲಿ ಹೇಳಿರುವಂತೆ ಯಾವುದೇ ನಾಯಕನು ಬಳಸುವ ದೈವೀ ಅಸ್ತ್ರಗಳು, ಅದಕ್ಕೆ ಸಂಬಂಧಿಸಿದ ಅಭಿಮಾನಿ ದೇವತೆಗಳನ್ನು ಹೊಂದಿರುತ್ತವೆ. ಈ ಆಯುಧಗಳನ್ನು ಅವತಾರ ಪುರುಷರಿಗೆ, ಮಾನವರಿಗೆ ಅಥವಾ ರಾಕ್ಷಸರಿಗೆ ಅವರ ತಪಸ್ಸಿಗೆ ಮೆಚ್ಚಿ ದೇವತೆಗಳು ಕೊಡುವ ವರವಾಗಿದೆ.

ಹಿಂದು ಧರ್ಮಶಾಸ್ತ್ರದಲ್ಲಿ ತಿಳಿಸಿರುವಂತೆ ದೇವತೆಗಳು ಬಳಸುವ ಕೆಲವು ಅಸ್ತ್ರಗಳು, ಅಗ್ನೆಯಾಸ್ತ್ರ, ಬ್ರಹ್ಮಾಸ್ತ್ರ, ಚಕ್ರಂ, ಗರುಡಾಸ್ತ್ರ , ಕೌಮೊದಕಿ, ನಾರಾಯಣಾಸ್ತ್ರ, ಪಾಶುಪತ, ಶಿವ ಧನುಸ್ಸು, ಸುದರ್ಶನ ಚಕ್ರ, ತ್ರಿಶೂಲ, ವೈಷ್ಣವಾಸ್ತ್ರ, ವರುಣಾಸ್ತ್ರ, ಮತ್ತು ವಾಯವ್ಯಸ್ತ್ರ .

ಕೆಲವು ಅಸ್ತ್ರಗಳು ವಿಶೇಷವಾಗಿ ವಿಂಗಡಿಸಲ್ಪಟ್ಟಿವೆ ( ಉದಾಹರಣೆಗೆ, ಶಿವ ಧನುಸ್ಸು ಒಂದು ಬಿಲ್ಲು, ಸುದರ್ಶನ ಚಕ್ರ ಒಂದು ಚಕ್ರ ಮತ್ತು ತ್ರಿಶೂಲ ಒಂದು ಮೂರು ಮೊನೆಗಳುಳ್ಳ ಆಯುಧ), ಆದರೆ ಹಲವು ಅಸ್ತ್ರಗಳು ದೇವತೆಗಳು ವಿಶೇಷವಾಗಿ ವರವಾಗಿ ನೀಡಿದ ಶಸ್ತ್ರಗಳಾಗಿವೆ. ಉದಾಹರಣೆಗೆ ಅಗ್ನೆಯಾಸ್ತ್ರ, ಬ್ರಹ್ಮಾಸ್ತ್ರ (ಸಂಸ್ಕೃತ: ಅಸ್ತ್ರ=ಮಂತ್ರದಿಂದ ವಿರೋಧಿಗಳ ಮೇಲೆ ಪ್ರಯೋಗಿಸುವ ಶಸ್ತ್ರ ) ಮತ್ತು ಇತರ ಅಸ್ತ್ರಗಳು ಒಂದೇ ಬಾರಿ ಉಪಯೋಗಿಸುವ ಆಯುಧಗಳಾಗಿವೆ, ಇದನ್ನು ಬಳಸಲು ಸಂಕೀರ್ಣವಾದ ಜ್ಞಾನದ ಅವಶ್ಯಕತೆಯಿರುತ್ತದೆ, ಕಲೆ, ಸಾಹಿತ್ಯಗಳಲ್ಲಿ ಇದನ್ನು ದೈವೀ ಕೃಪೆಯಿಂದ ಗಳಿಸಿದ ಬಾಣಗಳೆಂದು ಚಿತ್ರಿಸಲಾಗಿದೆ.

ಕೆಲವೊಮ್ಮೆ ಅಸ್ತ್ರವು ಕ್ರಿಯೆಯ ಅಥವಾ ಅದು ಪ್ರಾರ್ಥನೆಯಿಂದುಂಟಾಗುವ ಶಕ್ತಿಯ ಸ್ವರೂಪವನ್ನು ನಿರೂಪಣೆ ಮಾಡುತ್ತದೆ ಮಹಾಭಾರತವು ನಾಗಾಸ್ತ್ರ(ಸಂಸ್ಕೃತ:ನಾಗ =ಹಾವು) ಪ್ರಯೋಗದಿಂದ ಶತ್ರುವಿನ ಮೇಲೆ ಆಕಾಶದಿಂದ ಹಾವುಗಳ ಸುರಿಮಳೆಯಾಗುವ ಸನ್ನಿವೇಶಗಳನ್ನು ವಿವರಿಸುತ್ತದೆ. ಅದೇ ರೀತಿ ಆಗ್ನೇಯಾಸ್ತ್ರ (ಅಗ್ನಿ=ಬೆಂಕಿ)ವನ್ನು ಶತ್ರುವನ್ನು ಸುಡಲು, ವರುಣಾಸ್ತ್ರವನ್ನು (ವರುಣ=ಮಳೆ) ಬೆಂಕಿಯನ್ನು ನಿರ್ಮಿಸಲು ಅಥವಾ ಪ್ರವಾಹವನ್ನು ಉಂಟುಮಾಡಲು ಪ್ರಯೋಗಿಸುತ್ತಿದ್ದರು. ಬ್ರಹ್ಮಾಸ್ತ್ರದಂತಹ ಕೆಲವು ಅಸ್ತ್ರಗಳನ್ನು (ಜಡ) ಒಬ್ಬನೇ ವ್ಯಕ್ತಿಯ ಮೇಲೆ ಪ್ರಯೋಗಿಸಬಹುದು.

ಅಸ್ತ್ರಗಳಲ್ಲದೆ, ಇತರ ದೈವೀ ಅಥವಾ ಪೌರಾಣಿಕ ಅಸ್ತ್ರಗಳಿಗೆ ಸಂಬಂಧಿಸಿದ ಘಟನೆಯೆಂದರೆ, ಕಾಪು (ಕವಚ), ಕಿರೀಟಗಳು ಮತ್ತು ಶಿರಸ್ತ್ರಾಣಗಳು, ಕೋಲು ಮತ್ತು ಆಭರಣಗಳು(ಕುಂಡಲ)

 
ಭಕ್ತಿಯ ಒಂದು ಪುಸ್ತಕದಲ್ಲಿರುವಂತೆ ವಿಷ್ಣುವಿನ ಮತ್ಸ್ಯರೂಪದ ಕೆತ್ತನೆ.

ಹಿಂದೂ ಧರ್ಮಗ್ರಂಥಗಳಲ್ಲಿರುವ ಮಹಾ ಪ್ರಳಯದ ಕಥೆಯೊಂದನ್ನು ಹೇಳಲಾಗಿದೆ, ಶತಪಥ ಬ್ರಾಹ್ಮಣನ ಕಥೆ. ಇದು ಅನೇಕ ಧರ್ಮ ಮತ್ತು ಸಂಸ್ಕೃತಿಗಳಲ್ಲಿ ಕಂಡುಬರುವ ಪ್ರಳಯಕ್ಕೆ ಹೋಲಿಸಬಹುದಾಗಿದೆ. ತಲೆಯ ಮೇಲೆ ತೂಗುತ್ತಿರುವ ಪ್ರಳಯದ ವಿಷಯವನ್ನು ಮನುವಿಗೆ ತಿಳಿಸಲಾಗಿತ್ತು ಮತ್ತು ವಿಷ್ಣುವು ಮತ್ಸ್ಯ ಅವತಾರವನ್ನೆತ್ತಿ ಅವನನ್ನು ರಕ್ಷಿಸಿದನು, ಅವನು ಈ ರೂಪದಲ್ಲಿ ಜಗತ್ತಿನಲ್ಲಿರುವ ದುರ್ಜನರನ್ನು ನಾಶ ಮಾಡಿ ಸಜ್ಜನರನ್ನು, ಪ್ರಾಣಿಗಳು ಮತ್ತು ಸಸ್ಯಗಳನ್ನು ರಕ್ಷಿಸಿದನು.

ಪ್ರಳಯದ ನಂತರ ಭಗವಂತನು ಮನುಸ್ಮೃತಿಯನ್ನು ಬೋಧಿಸಿದನು, ಇದು ವೇದಗಳನ್ನು ಒಳಗೊಂಡಿದೆ, ಜೀವನದ ನೀತಿ ಸಂಹಿತೆಯ ವಿವರಗಳನ್ನು, ಮತ್ತು ವರ್ಣ ಪದ್ಧತಿಯಂತೆ ಸಮಾಜದ ವಿಂಗಡಣೆಯ ವ್ಯವಸ್ಥೆಯ ಬಗ್ಗೆ ವಿವರಿಸುತ್ತದೆ.

ಮಹಾಕಾವ್ಯಗಳ ವ್ಯಕ್ತಿಗಳು

ಬದಲಾಯಿಸಿ

ಹಿಂದು ಧರ್ಮಶಾಸ್ತ್ರವು ಬರಿಯ ದೇವತೆಗಳು ಮತ್ತು ಮನುಷ್ಯರ ಬಗ್ಗೆ ಅಷ್ಟೇ ಅಲ್ಲದೆ, ಸ್ವರ್ಗೀಯ, ಗಾಳಿಯಂತೆ ಹಗುರವಾದ ಮತ್ತು ಇಹಲೋಕದ ಜನರನ್ನೂ ಒಳಗೊಂಡಿದೆ.

ಸಪ್ತರ್ಷಿಗಳು

ಬದಲಾಯಿಸಿ

ಬ್ರಹ್ಮ ದೇವರು, ತಮ್ಮ ಆಲೋಚನೆ ಮಾತ್ರದಿಂದಲೆ ಏಳು ಜನ ಋಷಿಗಳನ್ನು ಅಥವಾ ಸಪ್ತ ಋಷಿ ಗಳನ್ನು ತನ್ನ ಸೃಷ್ಠಿಯಲ್ಲಿ ಸಹಾಯ ಮಾಡಲು ಸೃಷ್ಠಿಸಿದನು. ಸಪ್ತ ಋಷಿಗಳು , ಸಂಸ್ಕೃತದಲ್ಲಿ ಸಪ್ತ ಎಂದರೆ ಏಳು ಮತ್ತು ಋಷಿಗಳೆಂದರೆ ಸಂತರು ಎಂದರ್ಥ. ಅವರು ಭೃಗು , ಭರದ್ವಜ, ಅತ್ರಿ, ಗೌತಮ , ಕಶ್ಯಪ, ವಶಿಷ್ಠ ,ಮತ್ತು ಅಗಸ್ತ್ಯ . ಸಪ್ತರ್ಷಿಗಳ ಇತರ ಅರ್ಥಗಳೆಂದರೆ, ನಕ್ಷತ್ರ ಮಂಡಲ(ಸಪ್ತರ್ಷಿಮಂಡಲ) ದ ತಾರಾಗಣ

ಪಿತೃಗಳು

ಬದಲಾಯಿಸಿ

ಪಿತೃಗಳು ಅಥವಾ ಜನಕರು, ಇವರು ಮೊದಲ ಮಾನವರು ’ಪಿತರ’ ಎಂಬ ಪದವು ಪಿತೃ ಅಥವಾ ಪಿತ (ಹಿಂದಿ ಮತ್ತು ಸಂಸ್ಕೃತದಲ್ಲಿ)ಪದದಿಂದ ಬಂದಿದೆ, ಅರ್ಥಾತ್ ತಂದೆ. ಆದ್ದರಿಂದ ಇದು ಪಿತೃತ್ವ ಮತ್ತು ಮೂಲ ಪುರುಷರಿಗೆ, ಪೂರ್ವಿಕರಿಗೆ ಸಂಬಂಧಿಸಿದ್ದುದಾಗಿದೆ.

ಲೋಕಗಳು

ಬದಲಾಯಿಸಿ
 
ಶಿವ ಪುರಾಣದಲ್ಲಿರುವಂತೆ ಬ್ರಹ್ಮಾಂಡದ ಸಾಗರಗಳು ಮತ್ತು ಅಂಶಗಳ ಸೃಷ್ಟಿ.1828.

ಹಿಂದೂ ಧರ್ಮವು ಹದಿನಾಲ್ಕು ಲೋಕಗಳನ್ನು ವರ್ಣಿಸುತ್ತವೆ(ಗ್ರಹಗಳೆಂದು ಗೊಂದಲಪಡಬಾರದು)- ಏಳು ಊರ್ಧ್ವ ಲೋಕಗಳು(ಸ್ವರ್ಗ) ಮತ್ತು ಏಳು ಅಧೋ ಲೋಕಗಳು (ಪಾತಾಳ) (ಭೂಮಿಯನ್ನು ಮೇಲಿನ ಏಳು ಲೋಕಗಳಲ್ಲಿ ಅತ್ಯಂತ ಕೆಳಗಿನದ್ದೆಂದು ಪರಿಗಣಿಸಲಾಗಿದೆ) ಏಳು ಪಾರಮಾರ್ಥಿಕ ಗಳೇ ಊರ್ಧ್ವ ಲೋಕಗಳು, ಅವುಗಳೆಂದರೆ ಭು , ಭುವಾಸ್ , ಸ್ವರ್ , ಮಹಾಸ್ , ಜನಸ್ , ತಪಸ್ , ಮತ್ತು ಸತ್ಯ (ಬ್ರಹ್ಮನಿಂದ ಆಳಲ್ಪಟ್ಟ ಲೋಕ); ಮತ್ತು ಅಧೋ ಲೋಕಗಳು ("ಏಳು ಪಾತಾಳಲೋಕಗಳು" ಅಥವಾ ಪಾತಾಳ ಗಳು) ಆತಾಳ , ವಿತಾಳ , ಸುತಾಳ , ರಸಾತಾಳ , ತಲತಾಳ , ಮಹಾತಾಳ , ಪಾತಾಳ .[ಸೂಕ್ತ ಉಲ್ಲೇಖನ ಬೇಕು]

ಭೂಮಿಯನ್ನು ಹೊರತುಪಡಿಸಿ ಉಳಿದ ಎಲ್ಲಾ ಲೋಕಗಳನ್ನು ವಾಸ್ತವ್ಯದ ತಾತ್ಕಾಲಿಕ ಸ್ಥಳಗಳನ್ನಾಗಿ ಈ ಕೆಳಗೆ ಸೂಚಿಸಿದಂತೆ ಉಪಯೋಗಿಸಲಾಗಿತ್ತು: ಭೂಮಿಯಮೇಲೆ ಯಾರಾದರೂ ಒಬ್ಬರು ಮರಣಹೊಂದಿದ ನಂತರ, ಮರಣದ ದೇವರು (ಅಧಿಕೃತವಾಗಿ 'ಯಮ ಧರ್ಮ ರಾಜ' - ಯಮ ಎಂದು ಕರೆಯಲ್ಪಡುವ , ನ್ಯಾಯಮೂರ್ಥಿಯ ದೇವರು) ಸತ್ತವರು ಭೂಮಿಯ ಮೇಲೆ ಇರುವಾಗ ಮಾಡಿದ ಒಳ್ಳೆಯ/ಕೆಟ್ಟ ಕಾರ್ಯಗಳನ್ನು ಸರಿದೂಗಿಸಿ ನೋಡುತ್ತಾನೆ ಮತ್ತು ಅದರಿಂದ ಅವರ ಆತ್ಮವು ಸ್ವರ್ಗಕ್ಕೆ ಹೋಗಬೇಕಾ ಅಥವಾ ನರಕಕ್ಕೆ ಹೋಗಬೇಕಾ, ಮತ್ತು ಎಷ್ಟುದಿನಗಳ ಕಾಲ, ಯಾವ ಸಾಮರ್ಥ್ಯದಲ್ಲಿ ಉಳಿಯುತ್ತದೆ ಎಂಬುದನ್ನು ತೀರ್ಮಾನಿಸುತ್ತಾನೆ. ಧರ್ಮಶಾಸ್ತ್ರದ ಕೆಲವು ಭಾಷಾಂತರಗಳ ಹೇಳಿಕೆಯ ಪ್ರಕಾರ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳು ಸಮನಾಗಿದ್ದರೆ, ಅಂತಹವರ ಆತ್ಮವು ಸ್ವರ್ಗದಲ್ಲಾದರೂ ಅಥವಾ ನರಕದಲ್ಲಾದರೂ ಜನಿಸುತ್ತದೆ, ಆದರೆ ಎರಡರಲ್ಲು ಅಲ್ಲ, ಹೀಗಿರುವಾಗ ಮತ್ತೊಂದು ಭೋದನೆಯ ಪ್ರಕಾರ, ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳು ಒಂದನ್ನೊಂದು ಅಳಿಸುವುದಿಲ್ಲ. ಎರಡು ಪ್ರಸಂಗಗಳಲ್ಲೂ, ಆತ್ಮವು ಇದು ಪ್ರವೇಶಿಸುವ ಲೋಕಗಳಿಗೆ ಸೂಕ್ತವಾದ ಶರೀರವನ್ನು ಸ್ವಾದೀನಪಡಿಸಿಕೊಳ್ಳುತ್ತದೆ. ಆ ಲೋಕಗಳಲ್ಲಿನ ಆತ್ಮದ ಸಮಯ ಮುಗಿದ ನಂತರ, ಇದು ಭೂಮಿಗೆ ಮರಳುತ್ತದೆ (ಭೂಮಿಯ ಮೇಲೆ ಮರುಜನಿಸುತ್ತದೆ). ಕೇವಲ ಭೂಮಿಯಿಂದ, ಮತ್ತು ಕೇವಲ ಮಾನವ ಜನ್ಮದ ನಂತರ ಅಷ್ಟೆ ಆತ್ಮವು ಮೋಕ್ಷವನ್ನು ಪಡೆಯುತ್ತದೆ, ಇದು ಜನನ ಮತ್ತು ಮರಣ ಚಕ್ರದ ಬಿಡುಗಡೆಯ ಸ್ಥಿತಿ ಹಾಗೂ ಸಂಪೂರ್ಣ ಮತ್ತು ಶಾಶ್ವತ ಪರಮಾನಂದದ ಸ್ಥಿತಿಯೂ ಹೌದು ಎಂದು ಪರಿಗಣಿಸಲಾಗಿದೆ.[ಸೂಕ್ತ ಉಲ್ಲೇಖನ ಬೇಕು]

ದೇವತೆಗಳು

ಬದಲಾಯಿಸಿ
 
ಶಿವನ ಕುಟುಂಬದ ಸದಸ್ಯರು, ಶಿವ, ಪಾರ್ವತಿ, ಗಣೇಶ ಮತ್ತು ಮುರುಗನ್

ಹಿಂದೂಮತದಲ್ಲಿ ಅನೇಕ ದೇವತೆಗಳಿದ್ದಾರೆ. ಮೇಲಿನ ಸ್ಥಾನದಲ್ಲಿ ಥ್ರಿಮೂರ್ತಿಗಳಿದ್ದಾರೆ: ಶಿವ (ಅಳಿಪ), ವಿಷ್ಣು (ರಕ್ಷಕ), ಮತ್ತು ಬ್ರಹ್ಮ (ಸೃಷ್ಟಿಕರ್ತ), ಮತ್ತು ಅವರ ಪತ್ನಿಯರು (ದೇವತೆಗಳು ಅವರ ಸ್ವಂತ ಹಕ್ಕಿನಲ್ಲಿ): ಶಕ್ತಿ (ಇವರನ್ನು ಪಾರ್ವತಿ, ಅಂಬಿಕ ಎಂದು ಸಹ ಗುರುತಿಸಲಾಗುತ್ತದೆ) ಧೈರ್ಯ ಮತ್ತು ಶಕ್ತಿಯ ದೇವತೆ, ಲಕ್ಷ್ಮಿ ಎಲ್ಲಾ ರೀತಿಯ ಧನದ ದೇವತೆ, ಮತ್ತು ಸರಸ್ವತಿ ವಿಧ್ಯೆಯ ದೇವತೆ. ಥ್ರಿಮೂರ್ತಿಗಳ ಮಕ್ಕಳು ಸಹ ದೇವರುಗಳಾಗಿದ್ದಾರೆ, ಉದಾಹರಣೆಗೆ ಗಣೇಶ ಮತ್ತು ಸ್ಕಂದ ಅಥವಾ ಕಾರ್ತಿಕೇಯ.

ಬ್ರಹ್ಮನನ್ನು ಊರ್ಧ್ವ ದೇವಲೋಕದ (ಸತ್ಯಯುಗ ಎಂದು ಕರೆಯಲ್ಪಡುವ ಪ್ರಪಂಚದ) ಆಡಳಿತಗಾರ ಎಂದು ಪರಿಗಣಿಸಲಾಗಿದೆ, ಆದ್ದರಿಂದ ಒಂದು ಅರ್ಥದಲ್ಲಿ, ಬ್ರಹ್ಮನು, ಶಿವ ಮತ್ತು ವಿಷ್ಣುವಿನ ರೀತಿಯಲ್ಲಿ ಹದಿನಾಲ್ಕು ಪ್ರಪಂಚಗಳ ಆಚೆ ಇಲ್ಲ.

ಕೆಲವು ದೇವತೆಗಳು ವಿಶಿಷ್ಟ ಕಾರ್ಯಗಳು ಅಥವಾ ಅಂಶಗಳೊಂದಿಗೆ ಸಂಬಂಧ ಹೊಂದಿರುತ್ತಾರೆ: ಇಂದ್ರ (ಗುಡುಗು ಮಿಂಚುಗಳ ದೇವರು; ಅವರು ಸ್ವರ್ಗದ ಪ್ರಪಂಚದ ಆಡಳಿತವನ್ನು ಸಹ ಮಾಡುತ್ತಾರೆ), ವರುಣ (ಸಮುದ್ರಗಳ ದೇವರು), ಅಗ್ನಿ (ಬೆಂಕಿಯ ದೇವರು), ಕುಬೇರ (ದೇವರುಗಳ ಕೋಶಾಧಿಕಾರಿ), ಸೂರ್ಯ (ಸೂರ್ಯ ದೇವರು), ವಾಯು (ಗಾಳಿಯ ದೇವರು), ಮತ್ತು ಸೋಮ (ಚಂದ್ರ ದೇವರು).

ದೇವಲೋಕವು ಪ್ರಸಿದ್ಧ ದೇವಲೋಕದ ನರ್ತಕಿಯರನ್ನು ಸಹ ಹೊಂದಿದೆ: ಊರ್ವಶಿ, ಮೇನಕ, ರಂಭ, ಮತ್ತು ತಿಲೋತ್ತಮ (ಎಲ್ಲರೂ ಮಹಿಳೆಯರೆ), ದೇವಲೋಕದ ಆಸ್ಥಾನವನ್ನು ಮನರಂಜಿಸುವುದು ಮತ್ತು ದೇವಲೋಕದ ರಾಜರ ಆಜ್ಞೆಯ ಮೆರೆಗೆ, ಭೂಮಿಯಮೇಲಿನ ಜನರ ಗಮನವನ್ನು ಬೇರೆಡೆಗೆ ಸೆಳೆದು, ಅವರು ಹೆಚ್ಚಿನ ಸತ್ಕಾರ್ಯಗಳಿಂದ ಒಳ್ಳೆಯತನದ ಶೇಖರಣೆಯಿಂದ ದೇವಲೋಕದ ರಾಜರಿಗೆ ಬೀತಿಯನ್ನು ಉಂಟುಮಾಡುವಂತೆ ಆಗುವುದನ್ನು ತಡೆಯುವುದು ಅವರ ಕರ್ತವ್ಯವಾಗಿದೆ.

ಇತರ ಪ್ರಸಿದ್ಧ ದೇವಲೋಕದ ನಿವಾಸಿಗರೆಂದರೆ ಸ್ವರ್ಗೀಯ ಋಷಿಗಳು ಮತ್ತು ದೇವರ ಸಂದೇಶಕಾರ ನಾರದ.

ಯಮ (ಮರಣ ಮತ್ತು ನ್ಯಾಯಾದಿಪತಿಯ ದೇವರು) ಅವರ ಪ್ರಭು ಶಿವನೊಂದಿಗೆ ಕೈಲಾಸದಲ್ಲಿ ವಾಸಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಅವನು ಯಮ ದೂತರು (ಯಮನ ಸಂದೇಶರವಾನೆಗಾರರು) ಎಂದು ಕರೆಯಲ್ಪಡುವ ಗುಪ್ತಚರರ ಗುಂಪಿನೊಂದಿಗೆ ಕೆಳಮಟ್ಟದ ಪ್ರಪಂಚವಾದ ನರಕವನ್ನು ಆಳುತ್ತಾನೆ, ಈ ಯಮದೂತರು ಮರಣ ಹೊಂದಿದವರ ಆತ್ಮವನ್ನು ವಿಮರ್ಶೆಗಾಗಿ ಯಮನ ಹತ್ತಿರಕ್ಕೆ ಕರೆತರುತ್ತಾರೆ. ಚಿತ್ರಗುಪ್ತ ಅಸ್ತಿತ್ವದಲ್ಲಿರುವ ಸ್ವರ್ಗೀಯರಲ್ಲಿ ಒಬ್ಬರಾಗಿದ್ದು ಭೂಮಿಯ ಮೇಲಿನ ಮಾನವರ ಎಲ್ಲಾ ಚಟುವಟಿಕೆಗಳ ಪರಿಣಾಮದ ಲೆಕ್ಕಿಗನಾಗಿ ಕಾರ್ಯನಿರ್ವಹಿಸುತ್ತಾನೆ.

ಅವತಾರಗಳು

ಬದಲಾಯಿಸಿ
 
ವಿಷ್ಣುವಿನ ಹತ್ತು ಅವತಾರಗಳು, (ಎಡಭಾಗದ ಮೇಲಿನ ಮೂಲೆಯಿಂದ ಗಡಿಯಾರ ತಿರುಗುವ ರೀತಿಯಲ್ಲಿ) ಮತ್ಸ್ಯ, ಕೂರ್ಮ, ವರಾಹ, ಕೃಷ್ಣ, ಕಲ್ಕಿ, ಬುದ್ಧ, ಪರಶುರಾಮ, ರಾಮ ಮತ್ತು ನರಸಿಂಹ, (ಮಧ್ಯದಲ್ಲಿ) ಕೃಷ್ಣ

ಅನೇಕ ದೇವರು ದೇಹದಾರಣೆಗಳನ್ನು (ಅವತಾರಗಳನ್ನು) ಹೊಂದಿದ್ದರು ಎಂದು ನಂಬಲಾಗಿದೆ. ಜೀವದ ರಕ್ಷಕನಾಗಿ, ಭೂಮಿಯ ಮೇಲಿನ ಅಕ್ರಮಗಳನ್ನು ಸಕ್ರಮದಲ್ಲಿ ಇಡುವ ಅಗತ್ಯಬಂದಾಗ, ಅವನ್ನು ಸರಿಪಡಿಸಲು ಭೂಮಿಯ ಮೇಲೆ ಪ್ರತ್ಯಕ್ಷವಾಗುವುದು ವಿಷ್ಣು ದೇವರ ಕರ್ತವ್ಯಗಳಲ್ಲಿ ಒಂದಾಗಿದೆ. ಭಾಗವತ ಪುರಾಣ ಮಹಾಕಾವ್ಯವು ವಿಷ್ಣುವಿ'ನ ಹತ್ತು ಪ್ರಮುಖ ಅವತಾರಗಳ ಘಟನಾಕಾಲಕ್ರಮವಾಗಿದೆ (ಒಟ್ಟು ಇಪ್ಪತ್ತಾರು ಅವತಾರಗಳಿವೆ): ಮಥ್ಸ್ಯ (ಮೀನು), ಕೂರ್ಮ (ಆಮೆ), ವರಾಹ (ಕಾಡುಹಂದಿ), ನರಸಿಂಹ (ಸಿಂಹ ಮುಖದ ಮನುಷ್ಯ), ವಾಮನ (ಗುಜ್ಜಾರಿ ಆಕಾರದಲ್ಲಿನ ಯತಿ), ಪರಶುರಾಮ (ಸೈನ್ಯದ ಬ್ರಾಹ್ಮಣ), ರಾಮ, ಕ್ರಿಷ್ಣ, ಗೌತಮ್ ಬುದ್ಧ(ಹಿಂದುಗಳಿಂದ ತಮ್ಮನ್ನು ತಾವು ಬೇರ್ಪಡಿಸಿಕೊಂಡ ನಂತರದ ಬುದ್ದರು), ಕಲ್ಕಿ (ಈ ಯುಗದಲ್ಲಿ ಬರಬಹುದು ಎಂದು ಊಹಿಸಿದ ಬಿಳಿ ಕುದುರೆಮೇಲಿನ ಸೈನಿಕ) ಇವನ ಕಾಣಿಸಿಕೊಳ್ಳುವಿಕೆಯು ಯುಗದ ಕೊನೆಯನ್ನು ಸಹ ಸೂಚಿಸುತ್ತದೆ.

ಇಕ್ಷ್ವಾಕು ವಂಶ

ಬದಲಾಯಿಸಿ

ಭೂಮಿಯ ಮೇಲಿನ ಮೊದಲ ಮಾನವ ಹಾಗೂ ಸೂರ್ಯ ವಂಶದ ಸ್ಥಾಪಕ ಮನುವಿನ ಮಗನೇ ಇಕ್ಷ್ವಾಕು. (ಸೂರ್ಯವಂಶಂ - ಸೂರ್ಯ ವಂಶ )

ಭರತವರ್ಷ

ಬದಲಾಯಿಸಿ

ದುಶ್ಯಂತ ಹಾಗೂ ಶಕುಂತಲೆಯರ ಮಗನಾದ ಭರತನು ಮೊದಲು ವಿಶ್ವವನ್ನು ಆಳಿದ ರಾಜನಾಗಿದ್ದನು. ಪ್ರಪಂಚದ ಎಲ್ಲವನ್ನೂ ಸೇರಿಸಿ ವಿಶ್ವ ಎಂದು ಕರೆಯಲ್ಪಡುವ ಇದನ್ನು ಭರತವರ್ಷ ಅಥವಾ ಭರತನ ಭೂಮಿ ಅಥವಾ ಕಾಪಾಡುವ ಭೂಮಿ ಎಂದು ಕರೆಯಲಾಯಿತು .

ಚಕ್ರವರ್ತಿ ಭರತನು ತನ್ನ ಚಕ್ರಾಧಿಪತ್ಯವನ್ನು ಆಧುನಿಕ ಭಾರತ, ಮತ್ತು ಪಾಕೀಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳ ಹಾಗೂ ಈಗಿನ ಆಫ್ಘಾನಿಸ್ತಾನವಾದ ಪುರಾತನ ಗಾಂಧಾರ ಪ್ರದೇಶಗಳಿಗೆ ವಿಸ್ತರಿಸಿದನು.

ಆತನ ಚಕ್ರಾಧಿಪತ್ಯದ ಭೌಗೋಳಿಕ ಗಡಿರೇಖೆಯನ್ನು ಹೇಳುವಂತಹ ಯಾವುದೇ ಪುರಾವೆ ಇಲ್ಲ.

ಇವನ್ನೂ ನೋಡಿ

ಬದಲಾಯಿಸಿ
  • ಪ್ರೋಟೊ-ಇಂಡೋ-ಇರಾನಿಯನ್ ರಿಲಿಜನ್
  • ವೇದಗಳ ಪುರಾಣ
  • ಬೌದ್ಧೀಯರ ಪುರಾಣ
  • ಅಯ್ಯವಾಝಿ ಪುರಾಣ
  • ಹಿಂದುತ್ವಕ್ಕೆ-ಸಂಬಂಧಿಸಿದ ಲೇಖನಗಳ ಪಟ್ಟಿ
  • ಭಾರತದ ಇತಿಹಾಸ
  • ಹಿಂದೂ ಅಂತಿಮಗತಿಶಾಸ್ತ್ರ
  • ಹಿಂದೂ ಧರ್ಮಗ್ರಂಥ
  • ಹಿಂದೂ ದೇವತೆಗಳ ಪಟ್ಟಿ
  • ಹಿಂದೂ ದೇವತೆಗಳು
  • ಹಿಂದೂ ಮಹಾಕಾವ್ಯಗಳು
  • ನವಗ್ರಹ

ಹೆಚ್ಚಿನ ಓದಿಗಾಗಿ

ಬದಲಾಯಿಸಿ
  1. Anna L. Dallapiccola (2002). Dictionary of Hindu Lore and Legend. ISBN 0-500-51088-1.
  2. Benjamin Walker (1968). Hindu World: An Encyclopedic Survey of Hinduism. London: Allen & Unwin.
  3. Buitenen, J. A. B. van; Dimmitt, Cornelia (1978). Classical Hindu theology: a reader in the Sanskrit Puranas. Philadelphia: Temple University Press. ISBN 0-87722-122-7.{{cite book}}: CS1 maint: multiple names: authors list (link)
  4. Wilkins, W.J. (1882). Hindu theology, Vedic and Purānic. Thacker, Spink & co.
  5. Williams, George (2001). Handbook of Hindu theology. ABC-Clio Inc. ISBN 1-57607-106-5.
  6. Macdonell, Arthur Anthony (1995). Vedic theology. Delhi: Motilal Banarsidass. ISBN 81-208-1113-5.

ಬಾಹ್ಯ ಕೊಂಡಿಗಳು

ಬದಲಾಯಿಸಿ