ಹರಿವಂಶ
ಹರಿವಂಶ ಸಂಸ್ಕೃತ ಸಾಹಿತ್ಯದ ಒಂದು ಪ್ರಮುಖ ಕೃತಿ, ಮತ್ತು ಬಹುತೇಕ ಅನುಷ್ಟುಭ್ ಛಂದಸ್ಸಿನಲ್ಲಿ ೧೬,೩೭೪ ಶ್ಲೋಕಗಳನ್ನು ಹೊಂದಿದೆ. ಈ ಪಠ್ಯವನ್ನು ಹರಿವಂಶ ಪುರಾಣವೆಂದೂ ಕರೆಯಲಾಗುತ್ತದೆ. ಈ ಪಠ್ಯವು ಮಹಾಭಾರತಕ್ಕೆ ಖಿಲ (ಅನುಬಂಧ) ಎಂದು ನಂಬಲಾಗಿದೆ ಮತ್ತು ಸಾಂಪ್ರದಾಯಿಕವಾಗಿ ವೇದವ್ಯಾಸರಿಗೆ ಆರೋಪಿಸಲಾಗಿದೆ.