ಸಂತೋಷಕುಮಾರ ಮೆಹೆಂದಳೆ

ಕನ್ನಡದ ಕಾದಂಬರಿಕಾರ, ಅಂಕಣಗಾರ, ಕಥೆಗಾರ ಸಂತೋಷ್ ಕುಮಾರ ಮೆಹೆಂದಳೆ.

ಸಣ್ಣ ಕಥೆಗಳು, ಕಾದಂಬರಿಗಳು, ಸಾಮಾಜಿಕ ಮತ್ತು ವೈಜ್ಞಾನಿಕ ಲೇಖನಗಳು, ಪರಿಸರ ಸಂಬಂಧಿ ಚಿತ್ರ ಲೇಖನಗಳು, ಅಂಕಣ ಬರಹಗಳು, ಪತ್ತೆದಾರಿ ಮತ್ತು ವೈಜ್ಞಾನಿಕ ಕಥಾ ಸಾಹಿತ್ಯ, ಪ್ರವಾಸಿ ಕಥನಗಳು, ಸೈನ್ಸ್ ಫಿಕ್ಷನ್, ಛಾಯಾಗ್ರಹಣ ಹೀಗೆ ಎಲ್ಲ‌ ಸಾಹಿತ್ಯದ ಪ್ರಕಾರದಲ್ಲೂ ಬರೆಯುತ್ತಿದ್ದಾರೆ.

"ತರಂಗ, ಕರ್ಮವೀರ ಸುಧಾ ಪ್ರಜಾವಾಣಿ, ವಿಜಯವಾಣಿ, ಸಂಯುಕ್ತ ಕರ್ನಾಟಕ, ಉದಯವಾಣಿ, ವಿಜಯ ಕರ್ನಾಟಕ, ಓ ಮನಸೇ, ತುಷಾರ, ಮಯೂರ, ಕನ್ನಡ ಪ್ರಭ, ಕಸ್ತೂರಿ, ಉತ್ಥಾನ ಮತ್ತು ಪ್ರತಿ ವರ್ಷದ ಎಲ್ಲಾ ಪತ್ರಿಕೆಗಳ ವಿಶೇಷಾಂಕಗಳಿಗೆ ಬರೆಯುವುದರ ಜೊತೆಗೆ ಅಕಾಡೆಮಿ ಹಾಗು ಸಾಹಿತ್ಯ ಪರಿಷತ್ತು ಪ್ರಕಟಿಸುವ ಸಂಪಾದನಾ ಕೃತಿಗಳಲ್ಲಿ ಲೇಖನ ಮತ್ತು ವೈಜ್ಞಾನಿಕ ಕಥೆಗಳು, ಕಥೆಗಳು ಪ್ರಕಟವಾಗಿವೆ.

ಕಥಾಯಾನ – ರಾಜ್ಯ ಮಟ್ಟದ ಸಾಹಿತ್ಯ ಕಾರ್ಯಾಗಾರ ನಿರ್ವಹಿಸಿದ್ದು ಆರು ರಾಜ್ಯ ಮಟ್ಟದ ಕಾರ್ಯಕ್ರಮ ನಿರ್ದೇಶಕರಾಗಿ ಸಂಘಟಿಸಿದ್ದಾರೆ. ಕೆಲವು ಸಾಹಿತ್ಯ ಕಮ್ಮಟಗಳಿಗೆ ಸಂಪನ್ಮೂಲ‌ ವ್ಯಕ್ತಿಯಾಗಿ ಸೇವೆ.

ಮೂಲತ: ಉತ್ತರ ಕನ್ನಡ ಜಿಲ್ಲೆಯ ತೇರಗಾಂವ್ ಗ್ರಾಮ.

ಪ್ರಸ್ತುತ ಕೈಗಾ ಅಣುವಿದ್ಯುತ್ ಸ್ಥಾವರ. ಉ.ಕ. ಜಿಲ್ಲೆಯಲ್ಲಿ ಕೇಂದ್ರ ಸರಕಾರಿ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ವಿದ್ಯಾಭ್ಯಾಸ:

"ಯಂತ್ರ ನಕ್ಷಾ ವಿನ್ಯಾಸ " ವಿಭಾಗದಲ್ಲಿ - ತಾಂತ್ರಿಕ ತರಬೇತಿ, "ಅರ್ಥ ಶಾಸ್ತ್ರ" ದಲ್ಲಿ ಸ್ನಾತಕೋತ್ತರ ಪದವಿ, "ಮಾನವ ಸಂಪನ್ಮೂಲ ನಿರ್ವಹಣೆ " ವಿಭಾಗದಲ್ಲಿ ಸ್ನಾತಕೊತ್ತರ ಡಿಪ್ಲೋಮ, "ಪತ್ರಿಕೋದ್ಯಮ" ದಲ್ಲಿ ಸ್ನಾತಕೋತ್ತರ ಡಿಪ್ಲೋಮ.

ಪ್ರಮುಖ ಪ್ರಕಟಣೆಗಳು

ಡಿಸೆಂಬರ್ – 31 (ಕರ್ಮವೀರ ಧಾರಾವಾಹಿ ಪ್ರಕಟಿತ)

ದಿಬ್ಬದ ಬಂಗಲೆ (ಕರ್ಮವೀರ ಪ್ರಕಟಿತ)

ಎರಡನೆಯ ಹೆಜ್ಜೆ (ಕರ್ಮವೀರ ಪ್ರಕಟಿತ)

ಸೂರ್ಯ ಗರ್ಭ (ತರಂಗ ಪ್ರಕಟಿತ )

ಮಹಾ ಯುದ್ಧ (ತರಂಗ ಪ್ರಕಟಿತ)

ನಾನು ಅಘೋರಿಯಲ್ಲ(ದ್ವಿತೀಯ ಮುದ್ರಣ – ತರಂಗ ಪ್ರಕಟಿತ)

ಕಾಶ್ಮೀರದಲ್ಲೊಂದು ಸಂಜೆ.(ಕಾದಂಬರಿ )

ತಡವಾಗಿ ಬಿದ್ದ ಮಳೆ (ಪ್ರಕಟಿತ ಕಥಾ ಸಂಕಲನ – ಎರಡು ಮುದ್ರಣ)

ಕೆಂಪು ಚಕ್ರಗಳು (ಎರಡು ಮುದ್ರಣ -ಕರ್ಮವೀರ ಪ್ರಕಟಿತ)

ಕದಂಬರು (ಇತಿಹಾಸ )

ಕೆಂಪು ತೀರ (ತರಂಗ ಪ್ರಕಟಿತ - ಪತ್ತೇದಾರಿ )

ಸುಪಾರಿ-ಗಂಡಸರಿಗಾಗಿ (ಕಾದಂಬರಿ )

ಹಸಿವು ಗೆದ್ದ ಹುಡುಗಿ (ಹೋರಾಟ – ಇರೋಮ ಶರ್ಮಿಳಾ ಚಾನು)

ಪ್ರಮೀಳೆಯರ ನಾಡಿನಲ್ಲಿ (ಸಾಹಿತ್ಯ ಅಕಾಡೆಮಿಗಾಗಿ ಮಣಿಪುರ ಕಥಾನಕ)

ಯಾವ ಪ್ರೀತಿಯೂ ಅನೈತಿಕವಲ್ಲ (ಆರು ಮುದ್ರಣ)

ಅವನು ಶಾಪಗ್ರಸ್ಥ ಗಂಧರ್ವ (ಮೂರು ಮುದ್ರಣ)

ಕಾಶ್ಮೀರವೆಂಬ ಖಾಲಿ ಕಣಿವೆ( ಸಂಯುಕ್ತ ಕರ್ನಾಟಕ – ಅಂಕಣ ಸಂಕಲನ)

ಅಘೋರಿಗಳ ಲೋಕದಲ್ಲಿ (ನಾಲ್ಕು ಮುದ್ರಣ)

ಎಂಟೆಬೆ (ಮೂರು ಮುದ್ರಣ – ಕರ್ಮವೀರ ಪ್ರಕಟಿತ)

ಮಹಾ ಪತನ (ಮಂಗಳ ಪ್ರಕಟಿತ ದುರ್ಯೋಧನ ಕುರಿತ ಕಾದಂಬರಿ – ಮೂರು ಮುದ್ರಣ )

ಬೆನಾಲಿಮ್ (ಎರಡು ಮುದ್ರಣ)

ಅಬೊಟ್ಟಾಬಾದ್ (ಎರಡು ಮುದ್ರಣ)

ಪರಮಾಣು ಮತ್ತು ವಿದ್ಯುತ್ -ಪರಮಾಣು ಅಣುವಿದ್ಯುತ್ ಶಕ್ತಿ ಕಾರ್ಯಾಚರಣೆಯ ಮೇಲೆ ಕನ್ನಡದ ಮೊದಲ ಪುಸ್ತಕ ಎನ್ನುವ ಹೆಗ್ಗಳಿಕೆ.

ವಿಜ್ಞಾನ ವಿಸ್ಮಯ - ನಿಯತಕಾಲಿಕೆಗಳಲ್ಲಿ ಪ್ರಕಟಿತ ವೈಜ್ಞಾನಿಕ ಲೇಖನ ಸಂಗ್ರಹ

ಮೂರನೆಯ ಕಣ್ಣು - ಜನಪ್ರಿಯ ವಿಜ್ಞಾನ ಸಾಹಿತ್ಯ.

ಪ್ರಶಸ್ತಿ ಮತ್ತು ಪುರಸ್ಕಾರಗಳು :

ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ.  ಸಣ್ಣ ಕಥೆ " ವೃಣಗಳು " ಗಾಗಿ

ಮುಂಬಯಿ ಕನ್ನಡ ಸಂಘ.  ಸಣ್ಣ ಕಥಾ ವಿಭಾಗದಲ್ಲಿ ಪ್ರಶಸ್ತಿ – ಕಥೆ "ಸುಳಿ"

ಅಕ್ಷಯ ಕನ್ನಡ ಸಂಘ. ಸಣ್ಣ ಕಥಾ ವಿಭಾಗದಲ್ಲಿ ಪ್ರಶಸ್ತಿ – ಕಥೆ"ಫಲವತ್ತಾದ ಭೂಮಿಯ ಪಾತ್ರ"

ಮಾಧ್ಯಮ ಅಕಾಡೆಮಿ ಪ್ರಶಸ್ತಿ. ಅತ್ತ್ಯುತ್ತಮ ಗ್ರಾಮೀಣ ವರದಿಗಾಗಿ

ಕರ್ನಾಟಕ ಕಲಾವಿದರು ಮತ್ತು ಲೇಖಕರ ಒಕ್ಕೂಟ. ಬೆಂಗಳೂರು ಸನ್ಮಾನ

ಡಾ. ಶಿವರಾಮ್ ಕಾರಂತ ಪ್ರಶಸ್ತಿ – 2010 ( ವಿಜ್ಞಾನ ಮತ್ತು ಪರಿಸರ ಸಾಹಿತ್ಯ ಬರಹಗಳಿಗಾಗಿ)

ಕರ್ನಾಟಕ ಭೂಷಣ – 2013 ( ಸಮಗ್ರ ಸಾಹಿತ್ಯಕ್ಕಾಗಿ )

ಹಳಿಯಾಳ ಹಬ್ಬ - ಹಳಿಯಾಳದಲ್ಲಿ ವಿಶೇಷ ಸನ್ಮಾನ – 2013 ( ಸಮಗ್ರ ಸಾಹಿತ್ಯಕ್ಕಾಗಿ )

ನಾನು ಅಘೋರಿಯಲ್ಲ - ಅತ್ಯುತ್ತಮ ಜನಪ್ರಿಯ ಕಾದಂಬರಿ ಪ್ರಶಸ್ತಿ.

ದೀಪಾವಳಿ ವಿಶೇಷಾಂಕ ಗೌರವ ಸಂಪಾದಕನಾಗಿ – ಕರಾವಳಿ ಮುಂಜಾವು    

2004 ಮತ್ತು 2005 ರಲ್ಲಿ ಕ್ರಮವಾಗಿ ಪಾಂಡಿಚೇರಿ ಮತ್ತು ಮೈಸೂರಿನಲ್ಲಿ ನಡೆದ 5 ಮತ್ತು 6ನೇ ವೈಜ್ಞಾನಿಕ ಸಾಹಿತ್ಯ ರಾಷ್ಟ್ರೀಯ ಸಮ್ಮೇಳನದಲ್ಲಿ "ಮುಖ್ಯವಾಹಿನಿ ಸಾಹಿತ್ಯದಲ್ಲಿ ಕನ್ನಡ ವೈಜ್ಞಾನಿಕ ಸಾಹಿತ್ಯದ ಮಹತ್ವ" ಎನ್ನುವ ವಿಷಯದ ಮೇಲೆ ಪ್ರಬಂಧ ಮಂಡನೆ.

ದೆಹಲಿಯ "ನ್ಯಾಶನಲ್ ಬುಕ್ಸ್ ಟ್ರಸ್ಟ್" (ಎನ್.ಬಿ.ಟಿ) ಪ್ರಕಟಿಸಿರುವ ಭಾರತದ ಎಲ್ಲಾ  ಭಾಷೆಯ ವೈಜ್ಞಾನಿಕ ಅತ್ಯುತ್ತಮ ಕಥೆಗಳು ಮಾಲಿಕೆಯಲ್ಲಿ "ರೋಬಾಟ್ರಿಕ್ಸ್" ಪ್ರಕಟ.

ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಟೆಲಿಕಾನ್ಫರೆನ್ಸ್ ಮೂಲಕ ಮೈಸೂರಿನಿಂದ ಮುಂಬಯಿ, ದೆಹಲಿ, ಚೈನ್ನೈನ ವಿಜ್ಞಾನ ಲೇಖಕರೊಂದಿಗೆ ಸಮಾವೇಶ ನಡೆಸಿ ದಾಖಲೆ (11,12 ನವಂಬರ್ 2005 ಮೈಸೂರು ಸಿಸ್ಟ್ ಕೇಂದ್ರದಿಂದ)

ಕ.ಸಾ.ಪ. ಅತ್ಯುತ್ತಮ ಕಾದಂಬರಿ ಪ್ರಶಸ್ತಿ - ಎಂಟೆಬೆಗಾಗಿ.

ಹತ್ತಕ್ಕೂ ಹೆಚ್ಚು ರಾಜ್ಯ ಮಟ್ಟದ, ದೀಪಾವಳಿ ವಿಶೇಷಾಂಕದ ಕಥಾ ಸ್ಪರ್ಧೆಗಳಲ್ಲಿ ಪ್ರಶಸ್ತಿ.

ನರಸಮ್ಮ ಕೃಷ್ಣಮೂರ್ತಿ ಕಥಾ ಪ್ರಶಸ್ತಿ.

ಡಾ. ಪಾಟೀಲ್ ಸ್ಮರಣಾರ್ಥ ಕಥಾ ಪ್ರಶಸ್ತಿ – ಸಿಂಧನೂರು

ಸಂಗೊಳ್ಳಿ ರಾಯಣ್ಣ – ರಾಜ್ಯ ಪ್ರಶಸ್ತಿ