ಇಂದೋರ್
This article has multiple issues. Please help improve it or discuss these issues on the talk page. (Learn how and when to remove these template messages)
No issues specified. Please specify issues, or remove this template. |
ಇಂದೋರ್ (ಹಿಂದಿ: इंदौर/,ಮರಾಠಿ :इंदूर ಉರ್ದು:اندر)ವು ಭಾರತದ ರಾಜ್ಯವಾದ ಮಧ್ಯಪ್ರದೇಶದ ಎರಡನೇ ದೊಡ್ಡ ನಗರ ಮತ್ತು ವಾಣಿಜ್ಯ ರಾಜಧಾನಿಯಾಗಿದೆ. ಇದು ಹೋಳ್ಕರರ ನಗರ ಎಂದು ಪ್ರಸಿದ್ಧವಾಗಿದೆ. ಈ ನಗರವನ್ನು ಭಾರತದ ವೀರ ರಾಣಿ ಅಹಲ್ಯಾಬಾಯಿ ಹೋಳ್ಕರ ನಿರ್ಮಿಸಿದಳು. ಹಿಂದೆ ಪ್ರಮುಖ ವ್ಯಾಪಾರಿ ಕೇಂದ್ರವಾಗಿದ್ದ ಇಂದೋರ್, ಪಿತಾಂಪುರ್, ಮೊವ್, ದೇವಸ್ ಮತ್ತು ಧಾರ್ ನಂತಹ ಉಪನಗರಗಳೊಂದಿಗೆ ಸುದೃಡ ಕೈಗಾರಿಕಾ ಪ್ರದೇಶವಾಗಿ ಬೆಳೆದಿದೆ. ಉದಾರೀಕರಣದ ಸಂದರ್ಭದಲ್ಲಿ ಇಂದೋರ್ ಖಾಸಗಿಕರಣದ ಆರಂಭಿಕ ಕ್ರಾಂತಿಯ ಮುಂಚೂಣಿಯಲ್ಲಿತ್ತು. ದೇಶದ ಮೊದಲ ಖಾಸಗಿ ದೂರವಾಣಿ ಜಾಲ ಸೇರಿದಂತೆ ಹಲವು ನೂತನ ಕೈಗಾರಿಕೆಗಳ ಉಗಮ ಸ್ಥಾನ ಇದಾಗಿತ್ತು. ಅಂತಹ ಕೈಗಾರಿಕಾ ಭರದ ಚಟುವಟಿಕೆಯ ನಡುವೆಯೂ, ನಗರವು ತನ್ನ ಹಿಂದಿನ ವೈಭವಗಳೊಂದಿಗೆ ಸಂಬಂಧ ಉಳಿಸಿಕೊಂಡಿದೆ. ಇಂದೋರ್ ಜನರ ಜೀವನ ಶೈಲಿಯು ಮುಂಬಯಿ ಜನರ ಜೀವನ ಶೈಲಿಯನ್ನು ಹೋಲುವುದರಿಂದ ಇದನ್ನು 'ಮಿನಿ ಮುಂಬಯಿ' ಎಂದು ಕರೆಯುತ್ತಾರೆ.[೩]
ಇಂದೋರ್
Indore इंदौर / इंदूर The City of The Holkars
| |
---|---|
Government | |
• Member of Parliament | Mrs. Sumitra Mahajan (BJP) |
Population (೨೦೦೯) | |
• City | ೧೯೧೬೯೧೮ |
• Metro | ೧೯೧೧೫೧೩ |
Website | www.indore.nic.in |
ಶಬ್ದವುತ್ಪತ್ತಿ ಶಾಸ್ತ್ರ
ಬದಲಾಯಿಸಿಇಂದೋರ್ ಹೆಸರಿನ ಉಗಮ ಮತ್ತು ಶಬ್ದವುತ್ಪತ್ತಿಯ ಬಗ್ಗೆ ಹಲವು ಸಿದ್ಧಾಂತಗಳು ವಿವರಿಸುತ್ತದೆ. ಹಿಂದೆ ಇಂದೋರನ್ನು ವಿವಿಧ ಹೆಸರುಗಳಲ್ಲಿ ಕರೆಯುತ್ತಿದ್ದರು.ಈ ನಗರದಲ್ಲಿ ಇಂದ್ರೇಶ್ವರ ದೇವಸ್ಥಾನವಿರುವುದರಿಂದ ಇದನ್ನು ಇಂದ್ರೇಶ್ವರ ಎಂದು ಮೊದಲು ಕರೆದಿರಬಹುದು. ಇದಕ್ಕೂ ಮೊದಲು ಈ ನಗರವನ್ನು ಅಹಲ್ಯಾನಗರಿ (ರಾಣಿ ಅಹಲ್ಯಾಬಾಯಿ ಹೋಳ್ಕರರ ನಗರ) ಎಂದು ಕರೆಯುತ್ತಿದ್ದರು.
- ೧೬೦೭ರಿಂದ ೧೭೯೪ವರೆಗೆ ಅಹಲ್ಯಾನಗರಿ
- ೧೮೦೦ರಿಂದ ೧೯೫೦ವರೆಗೆ ಇಂಧುರ್
- ೧೯೫೮ರಿಂದ ಇಲ್ಲಿಯವರೆಗೆ ಇಂದೋರ್
೧೭೪೧ರಲ್ಲಿ ವೆದ್ ಮನುಜ್ ಕಟ್ಟಿದ ಇಂದ್ರೇಶ್ವರ ದೇವಸ್ಥಾನದಿಂದ ಈಗಿನ ಇಂದೋರ್ ಎಂಬ ಹೆಸರು ಹುಟ್ಟಿಕೊಂಡಿದೆ.[೪]
ಇತಿಹಾಸ
ಬದಲಾಯಿಸಿಇಂದೋರಿನ ಸ್ಥಾಪಕರ ಪೂರ್ವಿಕರು ರಾಜಪೂತನದ ಗಡಿಯಲ್ಲಿರುವ ನರ್ಮದಾ ನದಿಯ ದಡದಲ್ಲಿ ಹರಡಿಕೊಂಡಿರುವ ಪ್ರದೇಶದಲ್ಲಿ ಜಮೀನುದಾರರಾಗಿದ್ದರು. ಮೊಘಲರ ಕಾಲದಲ್ಲಿ ಈ ಕುಟುಂಬಗಳ ಮೂಲಸ್ಥಾಪಕರು ಚೌಧರಿ ಎಂಬ ಗೌರವ ಪದವಿ ಪಡೆದುಕೊಂಡರು. ಹೀಗಾಗಿ ಅವರಿಗೆ ಭೂಮಿಯ ಮೇಲೆ ಹಕ್ಕು ಸಾಧಿಸಲು ಸಾಧ್ಯವಾಯಿತು. ಕಳೆದ ೧೮ನೇ ಶತಮಾನದಲ್ಲಿ ಮಾಲ್ವಾ ಮನೆತನದ ಅಧಿಕಾರವು ಪೆಷ್ವಾ ವಂಶಕ್ಕೆ ಬಂದಿತು. ನಂತರ ಚೌಧರಿಗಳು ತಾವು ಬಳಸುವ ಆಡುಭಾಷೆಯಿಂದಾಗಿ "ಮಂಡ್ಲೊಯಿ"ಗಳಾದರು (ಮಂಡಲಗಳಿಂದ ಜನ್ಮ ಪಡೆದ). ಕ್ರಮೇಣ ಕುಟುಂಬದ ಆಧಾರದ ಮೇಲೆ ಹೋಳ್ಕರರ ರಾವ್ ರಾಜಾ ಎಂಬ ಆಸ್ಥಾನ ಗೌರವ ಪಡೆದರು.[೫] ಹೋಳ್ಕರರು ಮತ್ತೆ ಅಧಿಕಾರಕ್ಕೆ ಬಂದ ನಂತರವೂ ಕುಟುಂಬ ತನ್ನ ಆನೆ, ನಿಶಾನ್ (ಲಾಂಛನ), ಡಂಕಾ ಮತ್ತು ಗಾದಿ(ಗದ್ದುಗೆ)ಯನ್ನು ಹೊಂದುವ ರಾಜಾಧಿಕಾರ ಉಳಿಸಿಕೊಂಡಿತು. ಅಲ್ಲದೇ ಹೋಳ್ಕರ ರಾಜರಿಗಿಂತ ಮೊದಲು ದಸರಾ ಪೂಜೆ (ಶಾಮಿ ಪೂಜನ್ )(ಶಮಿ ಅಥವಾ ಬನ್ನಿ ಪೂಜೆ) ಮಾಡುವ ಅಧಿಕಾರವನ್ನು ಸಹ ಉಳಿಸಿಕೊಂಡಿತು. ಮೊಘಲ್ ಆಳ್ವಿಕೆಯಲ್ಲಿ, ಈ ಕುಟುಂಬವು ಅತ್ಯಂತ ಹೆಚ್ಚಿನ ಅಧಿಕಾರ ಅನುಭವಿಸಿತು. ಅಲ್ಲದೇ ಈ ಕುಟುಂಬಕ್ಕೆ; ರಾಜರಾಗಿದ್ದ ಔರಂಗಜೇಬ್, ಅಲಮ್ಗಿರ್, ಮತ್ತು ಫಾರುಕ್‌ಷಾಯರ್ ಸಮರ್ಥನೀಯ ಸನದ್‌ಗಳನ್ನು ನೀಡುತ್ತಿದ್ದರು. ಇದು ಈ ಕುಟುಂಬದ 'ಜಾಗಿರ್' ಹಕ್ಕುಗಳನ್ನು ಖಚಿತಪಡಿಸುತ್ತಿತ್ತು. ರಾವ್ ನಂದಲಾಲ್ ಚೌಧರಿ ಜಮೀನ್ದಾರ್‌ರು ದೆಹಲಿಯ ರಾಜನ ಆಸ್ಥಾನಕ್ಕೆ ಭೇಟಿ ನೀಡಿದಾಗ, ಅವರಿಗೆ ರಾಜನ ಆಸ್ಥಾನದಲ್ಲಿ ಎರಡು ಆಭರಣಖಚಿತ ಖಡ್ಗಗಳು (ಈಗ ಕುಟುಂಬದ ಹೆಸರಿನಲ್ಲಿ ರಾಯಲ್ ಬ್ರಿಟಿಷ್ ವಸ್ತುಸಂಗ್ರಹಾಲಯ ಪ್ರದರ್ಶಿಸಲಾಗುತ್ತಿದೆ) ಮತ್ತು ಸಮರ್ಥನೀಯ ಸನದ್‌ಗಳನ್ನು ನೀಡುವುದರೊಂದಿಗೆ ವಿಶೇಷ ಸ್ಥಾನಮಾನ ನೀಡಲಾಗಿತ್ತು. ಜೈಪುರದ ರಾಜಾ ಸವೈ ಜೈ ಸಿಂಗ್ ರಾವ್ ನಂದಲಾಲ್ ಚೌಧರಿ ಜಮೀನ್ದಾರ್‌ರ ಗೆಳೆಯನಾಗಿದ್ದು, ಆತ ಭಾರತದ ಎಲ್ಲಾ ದರ್ಬಾರ್‌ಗಳಲ್ಲಿ ವಿಶೇಷ ಸ್ಥಾನಮಾನ ಒದಗಿಸುವ "ಚಿನ್ನದ ಲಂಗರ್" ಅನ್ನು ಕೊಡುಗೆಯಾಗಿ ನೀಡಿದನು. ಪೆಷ್ವೆಗಳು ಮತ್ತು ಹೋಳ್ಕರರ ವಂಶಸ್ಥರ ಆಳ್ವಿಕೆಯಿಂದಾಗಿ ಈ ಪ್ರದೇಶದಲ್ಲಿ ಮಾಲ್ವಾದ ಈ ಕುಟುಂಬದ ಬಗೆಗಿನ ಗೌರವಾರ್ಹತೆ ಮತ್ತು ಅದರ ಪ್ರಭಾವ ಹೆಚ್ಚಾಗಿತ್ತು. ಇಂದೋರ್‌ನ ಸ್ಥಾಪಕ ರಾವ್ ನಂದಲಾಲ್ ಚೌಧರಿ ಪ್ರಮುಖ ಜಮೀನುದಾರನಾಗಿದ್ದು, ೨೦೦೦ ಸೈನಿಕರ ಸೈನ್ಯಪಡೆ ಹೊಂದಿದ್ದನು. ೧೭೧೩ರಲ್ಲಿ ಇವರನ್ನು ನಿಜಾಮ್ ಡೆಕ್ಕನ್ ಪ್ರಸ್ಥಭೂಮಿ ಪ್ರದೇಶದ ನಿಯಂತ್ರಕರಾಗಿ ನೇಮಿಸಿದನು. ಇದು ಮರಾಠರ ಮತ್ತು ಮೊಘಲ್‌ರ ನಡುವಿನ ಸಂಘರ್ಷವನ್ನು ಇನ್ನಷ್ಟು ಹೆಚ್ಚಿಸಿತು. ಸರಸ್ವತಿ ನದಿ ದಡದ ಹತ್ತಿರವಿರುವ ಇಂದ್ರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದಾಗ, ನಂದ್‌ಲಾಲ್‌ಸಿಂಗ್ ಎಲ್ಲಾ ಕಡೆಯಿಂದಲೂ ನದಿಯಿಂದ ಸುತ್ತುವರಿದ ಇದು ಅತ್ಯಂತ ಸುರಕ್ಷಿತ ಸ್ಥಳವೆಂದು ನಿರ್ಧರಿಸಿದನು. ಮೊಘಲ್‌ರ ಕಿರುಕುಳದಿಂದ ತನ್ನ ಜನರನ್ನು ರಕ್ಷಿಸಲು, ಆ ಪ್ರದೇಶಕ್ಕೆ ತನ್ನ ಜನರನ್ನು ಸ್ಥಳಾಂತರಿಸಿ, ಸುತ್ತಲೂ ಶ್ರೀ ಸಂಸ್ಥಾನ್ ಬಡಾ ರವಾಲ ಎಂಬ ಕೋಟೆ ಕಟ್ಟಿದನು. ಆ ನಗರಕ್ಕೆ ಇಂದ್ರಪುರ (ಇಂದ್ರೇಶ್ವರ ದೇವರ ಹೆಸರಾದ) ಎಂದು ಹೆಸರಿಟ್ಟನು. ಅದು ಕ್ರಮೇಣವಾಗಿ ಇಂದೋರ್ ಆಯಿತು. ಕ್ರಿ.ಶ ೧೭೩೩ರಲ್ಲಿ ಬಾಜಿ ರಾವ್ ಪೆಷ್ವಾ ಮಾಲ್ವಾಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡನು. ಅವನ ನಿಬಂಧನೆಗಳನ್ನು ಸರಿಯಾಗಿ ಪೂರೈಸಲು, ಸಹಿ ಹಾಕಿದ ನಾಲ್ವರಲ್ಲಿ ಮಲ್ಹಾರ್ ರಾವ್ ಹೋಳ್ಕರನು ಒಬ್ಬ.[೬] ಪೆಷ್ವೆಗಳ ವಿಜಯದ ನಂತರ, ಅವರು ಮಲ್ಹಾರ್ ರಾವ್ ಹೋಳ್ಕರನನ್ನು “ಸುಭೆದಾರ್” ಆಗಿ ನೇಮಕಮಾಡಿದರು. ಇದರಿಂದಾಗಿ ಮಾಲ್ವಾದಲ್ಲಿ ಹೋಳ್ಕರರು ಅಧಿಕಾರಕ್ಕೆ ಬಂದರು.[೭][೮][೯][೧೦][೧೧][೧೨][೧೩][೧೪][೧೫] ಹಾಗಾಗಿ, ಹೋಳ್ಕರ ರಾಜವಂಶ ಪಾರಂಪರೆಯ ಪ್ರಾಂತ್ಯವಾಗಿದ್ದ ಇಂದೋರ್‌ನ್ನು ಮರಾಠಾ ಮಹಾರಾಜರು ಆಳಿದರು. ಸುಮಾರು ೧೭೨೪ರಲ್ಲಿ ಈ ವಂಶದ ಸ್ಥಾಪಕ ಮಲ್ಹಾರ್ ರಾವ್ ಹೋಳ್ಕರನಿಗೆ (೧೬೯೪-೧೭೬೬) ಮಾಲ್ವಾ ಮರಾಠಾ ಸೇನೆಯ ನಿಯಂತ್ರಣವನ್ನ ನೀಡಲಾಯಿತು. ಅಲ್ಲದೇ ೧೭೩೩ರಲ್ಲಿ ಆ ಪ್ರದೇಶದ ಮರಾಠಾ ಪ್ರಾಂತಾಧಿಕಾರಿಯಂತೆ ಕಾರ್ಯನಿರ್ವಹಿಸಲು ನೇಮಿಸಲಾಯಿತು. ಅವನ ಅಧಿಕಾರದ ಕೊನೆಯಲ್ಲಿ, ಹೋಳ್ಕರ ರಾಜ್ಯಯು ಸ್ವತಂತ್ರ ನಿರ್ವಹಣೆಯ ರಾಜ್ಯವಾಗಿತ್ತು. ಹಕ್ಕು ಇರಲಿ ಇಲ್ಲದಿರಲಿ ಅಧಿಕಾರ ಚಲಾಯಿಸುವ ಸ್ವಯಂ ರಾಜ್ಯವೆನಿಸಿತ್ತು ಈ ಹೋಳ್ಕರ್ ಸಂಸ್ಥಾನ. ಮಲ್ಹಾರ್ ರಾವ್ ಹೋಳ್ಕರ ನಂತರ ಆತನ ಪುತ್ರಿ ಅಹಲ್ಯಾಬಾಯಿ ಹೋಳ್ಕರ ೧೭೬೭ಯಿಂದ ೧೭೯೫ವರೆಗೆ ರಾಜ್ಯವನ್ನು ಆಳಿದಳು. ಆಕೆಯ ಆಡಳಿತದ ಸಾಮ್ರಾಜ್ಯವು ಮಹೇಶ್ವರದಲ್ಲಿರುವ ಅರಮನೆ ಕೋಟೆಯಿಂದ ನರ್ಮದಾ ನದಿಯ ಪಕ್ಕದಲ್ಲಿರುವ ದಕ್ಷಿಣ ಭಾಗದವರೆಗಿನ ವಿಸ್ತರಿಸಿತ್ತು. ಭಾರತದಾದ್ಯಂತ ಹಿಂದೂ ದೇವಸ್ಥಾನಗಳ ನಿರ್ಮಾಣಕ್ಕೆ ಧನ ಸಹಾಯ ಮಾಡಿದ ಅಹಲ್ಯಾಬಾಯಿ ಹೋಳ್ಕರ ವಾಸ್ತುಕಲಾ ಪೋಷಕಳಾಗಿದ್ದಳು. ೧೮೧೮ರಲ್ಲಿ ಮೂರನೇ ಆಂಗ್ಲೊ-ಮರಾಠಾ ಯುದ್ಧದಲ್ಲಿ ಬ್ರಿಟಿಷ್ ವಿರುದ್ಧ ಹೋಳ್ಕರರು ಸೋತರು. ಅವರ ರಾಜಧಾನಿಯು ಬ್ರಿಟಿಷ್ ರಾಜ್ ನ ಒಂದು ಭಾಗವಾಯಿತು. ಮಹಿದ್‌ಪುರ್ ಕಾಳಗದಲ್ಲಿ ಸೋತಿದ್ದರಿಂದ, ಮಂದ್ಸೌರ್ ಒಪ್ಪಂದಕ್ಕೆ ಹೋಳ್ಕರರು ಸಹಿ ಹಾಕಬೇಕಾಯಿತು. ಅದರಂತೆ ಮೊವ್‌ನ ಸೇನಾವಸತಿ ಪ್ರದೇಶವನ್ನು ಬ್ರಿಟಿಷ್‌ರಿಗೆ ಹಸ್ತಾಂತರಿಸಬೇಕಾಯಿತು. ಹೋಳ್ಕರ ರಾಜ್ಯದ ರಾಜಧಾನಿಯನ್ನು ಮಹೇಶ್ವರದಿಂದ ಇಂದೋರ್‌ಗೆ ವರ್ಗಾಯಿಸುವಂತೆ ಒಪ್ಪಂದದಲ್ಲಿ ತಿಳಿಸಲಾಗಿತ್ತು. ೨೦ನೇ ಶತಮಾನದ ಪ್ರಾರಂಭದ ವೇಳೆ, ಭಾರತದಲ್ಲಿ ಸೆಣಬಿನ ಗಿರಣಿ ಸ್ಥಾಪಿಸಿದ ಮೊದಲ ಭಾರತೀಯನಾದ ಸೇಥ್ ಹುಕುಂಚಂದ್ ಜೈನ್‌ರ ಮನೆ ಇಂದೋರ್‌ನಲ್ಲಿತ್ತು. ಅವರನ್ನು ಭಾರತೀಯ ಉದ್ಯಮದ ಮೂಲಪ್ರವರ್ತಕರು ಎಂದು ಪರಿಗಣಿಸಲಾಗಿದ್ದು, ಅವರು ಇಂದೋರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವು ಸಂಸ್ಥೆ ಮತ್ತು ಉದ್ಯಮಗಳನ್ನು ಸ್ಥಾಪಿಸಿದರು. ೧೯೪೭ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದೊರೆತ ನಂತರ, ನೆರೆಹೊರೆಯ ಹಲವು ರಾಜ್ಯಗಳೊಂದಿಗೆ ಇಂದೋರ್ ಭಾರತೀಯ ರಾಜ್ಯವಾದ ಮಧ್ಯ ಭಾರತ್‌ದ ಒಂದು ಭಾಗವಾಯಿತು. ಇಂದೋರ್‌ನ್ನು ಹೊಸದಾಗಿ ರಚನೆಗೊಂಡ ರಾಜ್ಯದ ಬೇಸಿಗೆ ರಾಜಧಾನಿಯಾಗಿ ಪರಿವರ್ತಿಸಲಾಯಿತು. ಕಳೆದ ೧೯೫೬ರ ನವೆಂಬರ್ ೧ರಂದು ಮಧ್ಯ ಭಾರತದ ರಾಜ್ಯವಾದ ಮಧ್ಯಪ್ರದೇಶದೊಂದಿಗೆ ವಿಲೀನಗೊಂಡು, ಭೋಪಾಲ್‌ನ್ನು ಅದರ ರಾಜಧಾನಿಯಾಗಿ ಮಾಡಲಾಯಿತು. ನಗರ ಅರಮನೆಯಲ್ಲಿ ಮಾಲ್ವಾ ಪ್ರದೇಶದ ಆಡಳಿತ ವಹಿಸಿಕೊಂಡಿದ್ದ ಹೋಳ್ಕರರು ನೋಡಿಕೊಳ್ಳುತ್ತಿದ್ದರು (೧೭೨೮ರ ಮೇ ೨೬ರಿಂದ ೧೯೪೮ರ ಏಪ್ರಿಲ್ ೨೦ರವರೆಗೆ). ಕಳೆದ ೧೯೮೪ರ ಗಲಭೆಯಲ್ಲಿ ರಾಜ್‌ಬಡಾ(ವಾಡಾ) ವನ್ನು ಸುಟ್ಟುಹಾಕಲಾಯಿತು. ಇದಾದ ನಂತರ ಅದನ್ನು ಉದ್ಯಾನವಾಗಿ ಮಾಡಲಾಯಿತು. ೨೦೦೬ರಲ್ಲಿ ಇಂದೋರ್‌ನ ಸದ್ಯ ಇರುವ ಮಹಾರಾಣಿ H.H. ಉಷಾದೇವಿ ಹೋಳ್ಕರ ವಾಡಾವನ್ನು ಹಿಂದಿನ ಭವ್ಯತೆಯೊಂದಿಗೆ ಪುನರ್ನಿರ್ಮಿಸಲು ನಿರ್ಧರಿಸಿದರು. ಈ ಸವಾಲಿನ ಯೋಜನೆಯ ವಿನ್ಯಾಸಕ್ಕಾಗಿ H.H. ಉಷಾದೇವಿ ಹೋಳ್ಕರರು, ವಾಸ್ತುವಿನ್ಯಾಸಕರಾದ ಹಿಮಾಂಶು ದುಡ್ವಾಕರ್ ಮತ್ತು ಶ್ರೇಯಾ ಭಾರ್ಗವರನ್ನು ಆಮಂತ್ರಿಸಿದರು. ಅದೂ ಅಲ್ಲದೇ ೨೦೦೭ರಲ್ಲಿ ರಾಜ್‌ವಾಡಾದ ಪುನರ್ನಿರ್ಮಾಣ ಕಾರ್ಯಪೂರ್ಣಗೊಂಡು, ಇತಿಹಾಸದಲ್ಲಿ ಮತ್ತೆ ಸ್ಥಾನಪಡೆದುಕೊಂಡಿತು. ಸುಮಾರು ೨೫೦ ವರ್ಷಗಳ ಹಿಂದೆ ರಾಜ್‌ವಾಡ ನಿರ್ಮಿಸಲು ಬಳಸಿದ ಶೈಲಿ, ವಸ್ತುಗಳು ಮತ್ತು ವಿಧಾನವನ್ನು, ಅದರ ಪುನರ್ನಿರ್ಮಾಣ ಕಾರ್ಯದಲ್ಲಿ ಕರಾರುವಕ್ಕಾಗಿ ಬಳಸಿಕೊಳ್ಳಲಾಗಿದೆ. ಹೀಗೆ ಇದು ಭಾರತದಲ್ಲಿ ಪುನರ್ನಿರ್ಮಿಸಿದ ಏಕೈಕ ಐತಿಹಾಸಿಕ ಕಟ್ಟಡವಾಗಿದೆ.
ಭೌಗೋಳಿಕತೆ
ಬದಲಾಯಿಸಿಇಂದೋರ್ ಭಾರತದ ಮಧ್ಯ ಭಾಗದಲ್ಲಿರುವ ಮಧ್ಯಪ್ರದೇಶ ರಾಜ್ಯದ ಪಶ್ಚಿಮ ಭಾಗದಲ್ಲಿದೆ. ಇಂದೋರ್ ಸರಾಸರಿ ೧ ಮೀಟರ್‌ನಷ್ಟು ಸಮುದ್ರ ಮಟ್ಟಕ್ಕಿಂತ ಎತ್ತರದಲ್ಲಿದೆ. ಇದರ ದಕ್ಷಿಣದಲ್ಲಿ ಯಾದ್ರಿ ಶ್ರೇಣಿಯೊಂದಿಗೆ, ಎತ್ತರದ ಸಮಾನಂತರ ಮೇಲ್ಮೈ ಭೂಮಿಯನ್ನು ಹೊಂದಿದೆ. ಇಂದೋರ್ ಒಂದು ಕಡೆಯಲ್ಲಿ ದೇವಸ್‌ನಿಂದ ಇನ್ನೊಂದು ಕಡೆಯಲ್ಲಿ ಮೊವ್‌ವರೆಗೆ, ಒಟ್ಟು ೬೫ ಕಿಮೀನಷ್ಟು ಗರಿಷ್ಠ ವಿಸ್ತಾರದ ಹರವು ಹೊಂದಿದೆ.
ಹವಾಗುಣ
ಬದಲಾಯಿಸಿIndore | ||||||||||||||||||||||||||||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
Climate chart (explanation) | ||||||||||||||||||||||||||||||||||||||||||||||||||||||||||||
| ||||||||||||||||||||||||||||||||||||||||||||||||||||||||||||
|
ಇಂದೋರ್ ಉಷ್ಣವಲಯದ ತೇವ ಮತ್ತು ಒಣ ಹವಾಮಾನ ಮತ್ತು ತೇವವಾದ ಉಪೋಷ್ಣವಲಯದ ಹವಾಮಾನದ ನಡುವಿನ ಸಾಮಾನ್ಯ ಹವಾಗುಣ ಹೊಂದಿದೆ. ಇಂದೋರ್‌ನಲ್ಲಿ ಬೇಸಿಗೆ,ಮಳೆಗಾಲ ಮತ್ತು ಚಳಿಗಾಲ ಹೀಗೆ ಮೂರು ವಿಭಿನ್ನ ಪ್ರಮುಖ ಸಾಮಾನ್ಯ ಕಾಲಮಾನಗಳಿವೆ. ಮಾರ್ಚ್‌ನ ಮಧ್ಯ ಭಾಗದಲ್ಲಿ ಬೇಸಿಗೆ ಪ್ರಾರಂಭವಾಗುವುದು. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ವಿಪರೀತ ಬಿಸಿಲಿನ ಹವಾಮಾನವಿರುತ್ತದೆ. ೧೯೯೪ರಲ್ಲಿ ೪೮ °Cಯಷ್ಟು ಅತಿ ಹೆಚ್ಚಿನ ಪ್ರಮಾಣದ ಉಷ್ಣತೆ ದಾಖಲಾಗಿದೆ. ಸರಾಸರಿ ಬೇಸಿಗೆ ಉಷ್ಣತೆಯು ೪೨-೪೪.cರಷ್ಟು (೧೦೦.೪ °F) ಇರುವುದು. ಆದರೆ ತೇವಾಂಶ ಬಹಳ ಕಡಿಮೆ ಇರುವುದು. ಇಂದೋರ್ ಮಾಲ್ವಾ ಪ್ರಸ್ಥಭೂಮಿಯ ದಕ್ಷಿಣ ತುದಿಯಲ್ಲಿರುವುದರಿಂದ, ಸಂಜೆ ತಂಗಾಳಿ (ಶಬ್-ಈ-ಮಾಲ್ವಾ ಎಂದು ಕರೆಯುವ) ಬೀಸಿ, ರಾತ್ರಿಯ ವೇಳೆ ವಾತಾವರಣ ತಣ್ಣಗಾಗುವಂತೆ ಮಾಡುವುದು. ಜೂನ್‌ನ ಕೊನೆಯ ಭಾಗದಲ್ಲಿ ಮಳೆಗಾಲವು ಪ್ರಾರಂಭವಾಗುವುದು. ಆ ಸಮಯದಲ್ಲಿ ಸರಾಸರಿ ಉಷ್ಣತೆಯು 26 °C (79 °F)ರಷ್ಟಿರುತ್ತದೆ. ಆಗ ಎಡಬಿಡದೆ ಧಾರಾಕಾರ ಮಳೆ ಸುರಿಯುವ, ಹೆಚ್ಚಿನ ಪ್ರಮಾಣದ ತೇವಾಂಶವಿರುತ್ತದೆ. ಇಲ್ಲಿ ೩೬ ಇಂಚುಗಳಷ್ಟು ಸರಾಸರಿ ಮಳೆಯಾಗುತ್ತದೆ. ನವೆಂಬರ್‌ನ ಮಧ್ಯಭಾಗದಲ್ಲಿ ಚಳಿಗಾಲ ಪ್ರಾರಂಭವಾಗುವುದು. ಆ ಸಮಯದಲ್ಲಿ ಒಣ ಹವೆಯಿದ್ದು, ಹವಾಮಾನವು ಹಿತಕರ ಮತ್ತು ಬಿಸಿಲಿನಿಂದ ಕೂಡಿರುತ್ತದೆ. ಸರಾಸರಿ ಉಷ್ಣತೆಯು 4–15 °C (39–59 °F), ಅದರೆ ಕೆಲವು ರಾತ್ರಿಗಳಲ್ಲಿ ಹಿಮ ಬೀಳುವುದು. ಬೇಸಿಗೆಯಲ್ಲಿ ಕೆಲವೊಮ್ಮೆ ಅತಿ ಹೆಚ್ಚಿನ ಉಷ್ಣತೆ 48–50 °C (118–122 °F)ರಷ್ಟಿದ್ದು, ಚಳಿಗಾಲದಲ್ಲಿ ಕಡಿಮೆಯೆಂದರೆ 2 °C (36 °F)ರಷ್ಟಿರುವುದು. ಇಂದೋರ್‌ನಲ್ಲಿ ಆಗ್ನೇಯ ಮಾರುತದಿಂದಾಗಿ ಜುಲೈ-ಸಪ್ಟೆಂಬರ್‌ನಲ್ಲಿ 35 to 38 inches (890 to 970 millimetres)ರಷ್ಟು ಮಧ್ಯಮ ಪ್ರಮಾಣದ ಮಳೆಯಾಗುವುದು.[೧೬]
ಸಾರಿಗೆ
ಬದಲಾಯಿಸಿನಗರವು ರೈಲು, ರಸ್ತೆ ಸಾರಿಗೆ ಮತ್ತು ವಾಯುಯಾನ ಸೇವೆಗಳ ಮೂಲಕ ಸಂಪರ್ಕಿಸಲ್ಪಟ್ಟಿದೆ. ಇಂದೋರ್ ಬಹು ಕಾಲದಿಂದಲೂ ರೈಲು ಮತ್ತು ರಸ್ತೆ ಸಾರಿಗೆ ವ್ಯವಸ್ಥೆಯ ಸುಸಜ್ಜಿತ ತಾಣವಾಗಿದೆ. ಸರ್ವಾಟೆ ಬಸ್ ನಿಲ್ದಾಣ, ಗಂಗ್ವಾಲ ಬಸ್ ನಿಲ್ದಾಣ, ನವ್ಲಕಾ ಬಸ್ ನಿಲ್ದಾಣ ಮತ್ತು ಜಿನ್ಸಿ ಬಸ್ ನಿಲ್ದಾಣದಂತಹ ಪ್ರಮುಖ ನಿಲ್ದಾಣಗಳನ್ನು ಹೊಂದಿದೆ.
ರೈಲುಮಾರ್ಗ
ಬದಲಾಯಿಸಿನಗರ ರೈಲ್ವೆ ವಿಭಾಗವು ರತ್ಲಾಮ್ ವಿಭಾಗದ ಪಶ್ಚಿಮ ರೈಲ್ವೇಸ್‌ನ ವ್ಯಾಪ್ತಿಗೆ ಬರುವುದು. ಇಂದೋರ್ ಪ್ರಮುಖವಾಗಿ ಇಂದೋರ್ ಜಂಕ್ಷನ್ BG ಅನ್ನು ಹೊಂದಿದ್ದು, ದೇಶದ ಉಳಿದ ಭಾಗಗಳಿಗೆ ಸಂಪರ್ಕಿಸುವ ಬ್ರಾಡ್ ಗೇಜ್ ಮಾರ್ಗದಲ್ಲಿ ಕೊನೆಯ ನಿಲ್ದಾಣಗಳನ್ನು ಹೊಂದಿದೆ. ಉತ್ತರ ಇಂದೋರ್‌ಗೆ ರೈಲ್ವೆ ಸಂಪರ್ಕ ಉತ್ತಮಗೊಳಿಸಲು ಇಂದೋರ್ ಜಂಕ್ಷನ್ BG ಅನ್ನು ಈ ಮೊದಲೇ ನಿರ್ಮಿಸಿದ್ದರು. ಕಳೆದ ೨೦೦೯ರ ರೈಲ್ವೆ ಮುಂಗಡಪತ್ರದಲ್ಲಿ ಭಾರತದ ಇತರ ೩೦೦ ನಿಲ್ದಾಣಗಳೊಂದಿಗೆ ಇಂದೋರ್‌ನ ಪ್ರಮುಖ ರೈಲ್ವೆ ನಿಲ್ದಾಣವನ್ನು ಆಧುನಿಕ ರೈಲ್ವೆ ನಿಲ್ದಾಣವಾಗಿ ಪರಿವರ್ತಿಸಲು ಪಟ್ಟಿ ಮಾಡಲಾಗಿದೆ. ಇಂದೋರ್ , ಮೀಟರ್ ಗೇಜ್ ಮತ್ತು ಬ್ರಾಡ್ ಗೇಜ್ ರೈಲ್ವೇಸ್ ಹೀಗೆ ಎರಡೂ ತೆರನಾದ ಸಂಪರ್ಕ ಹೊಂದಿರುವ ಭಾರತದ ಹಲವು ನಗರಗಳಲ್ಲಿ ಒಂದಾಗಿದೆ. ಇಂದೋರ್‌ನಿಂದ ದೇಶದ ಹೆಚ್ಚಿನ ಭಾಗಗಳಿಗೆ ನಿರಂತರ ರೈಲು ಸೇವೆಗಳಿವೆ. ಹತ್ತಿರದ ರಾತ್ಲಾಮ್ ಜಂಕ್ಷನ್, ಉಜ್ಜಯಿನಿ ಜಂಕ್ಷನ್, ಖಂಡ್ವಾ, ಮತ್ತು ಭೋಪಾಲ್ ಜಂಕ್ಷನ್ ನಿಲ್ದಾಣಗಳಿಂದಲೂ ಸಹ ರೈಲುಗಳ ಸೌಲಭ್ಯ ದೊರೆಯುತ್ತವೆ. ಈ ಸ್ಥಳಗಳನ್ನು ರೈಲು ಅಥವಾ ರಸ್ತೆಯ ಮೂಲಕ ೨-೫ ಗಂಟೆಗಳಲ್ಲಿ ತಲುಪಬಹುದು. ಇಂದೋರ್‌ನ ರಾತ್ಲಾಮ್ ಮತ್ತು ಅಕೋಲಾ ನಡುವಿನ ಮಾರ್ಗವು ಭಾರತದ ಅತಿ ಉದ್ದದ ಮೀಟರ್ ಗೇಜ್ ಮಾರ್ಗವಾಗಿದೆ. ಈ ಮೀಟರ್ ಗೇಜ್ ವಲಯವನ್ನು ಭಾರತೀಯ ರೈಲ್ವೇಸ್ ,ಉದ್ದೇಶಿತ ಯುನಿಗೇಜು ನಿರ್ಮಾಣ ಯೋಜನೆಯಡಿ ಪ್ರಮಾಣಿತ ಬ್ರಾಡ್ ಗೇಜ್ ಆಗಿ ಪರಿವರ್ತಿಸಲು ಯೋಜನೆ ರೂಪಿಸಿದೆ.
ರಸ್ತೆ ಮಾರ್ಗಗಳು
ಬದಲಾಯಿಸಿರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಮೂಲಕ ಇಂದೋರ್ ಭಾರತದ ಇತರ ಭಾಗಗಳಿಗೆ ಉತ್ತಮ ಸಂಪರ್ಕ ಹೊಂದಿದೆ. ಇಂದೋರ್‌ನ್ನು ಹಾದು ಹೋಗುವ ಕೆಲವು ಪ್ರಮುಖ ಹೆದ್ದಾರಿಗಳಿದ್ದು, ಇದು ದೇಶದ ವಿವಿಧ ಭಾಗಗಳನ್ನು ಸಂಪರ್ಕಿಸುತ್ತವೆ. ಈ ನಗರದ ಮೂಲಕ ಹಾದು ಹೋಗುವ ಪ್ರಮುಖ ಹೆದ್ದಾರಿಗಳೆಂದರೆ:
- ರಾಷ್ಟ್ರೀಯ ಹೆದ್ದಾರಿ ಸಂ. 3 (NH೩ - ಆಗ್ರಾ ಬಾಂಬೆ)
- ರಾಷ್ಟ್ರೀಯ ಹೆದ್ದಾರಿ ಸಂ. 59 (NH ೫೯ - ಇಂದೋರ್ ಅಹಮದಾಬಾದ್)
- ರಾಷ್ಟ್ರೀಯ ಹೆದ್ದಾರಿ ಸಂ. 59A (ಇಂದೋರ್ - ಬೆಟುಲ್)
- ರಾಜ್ಯ ಹೆದ್ದಾರಿ ಸಂ. ೧೭ (ಭೋಪಾಲ್ಗೆ ಸಂಪರ್ಕಿಸುವ)
- ರಾಜ್ಯ ಹೆದ್ದಾರಿ ಸಂ. ೨೭ (ಇಂದೋರ್ಯಿಂದ ಖಂಡ್ವಾಗೆ)
- ರಾಜ್ಯ ಹೆದ್ದಾರಿ ಸಂ. ೩೪ (ಇಂದೋರ್ಯಿಂದ ಜಾನ್ಸಿಗೆ)
ಇಂದೋರ್‌ನ್ನು ಭಾರತದ ಕೇಂದ್ರ ಮತ್ತು ಪಶ್ಚಿಮ ಭಾಗದ ಪ್ರಮುಖ ನಗರಗಳಿಗೆ ಸಂಪರ್ಕಿಸಲು ಮಹಾರಾಷ್ಟ್ರ, ಗುಜರಾತ್ ಮತ್ತು ರಾಜಸ್ಥಾನ್ ಸರಕಾರಿ ಸಂಸ್ಥೆಗಳು ಸೇರಿದಂತೆ ಖಾಸಗಿ ನಿರ್ವಾಹಕರು ದಿನಂಪ್ರತಿ ಬಸ್ ಸೇವೆಯನ್ನು ಒದಗಿಸುತ್ತಿದ್ದಾರೆ.
ಸ್ಥಳೀಯ ಸಾರಿಗೆ
ಬದಲಾಯಿಸಿನಗರದ ಸ್ಥಳೀಯ ಸಾರಿಗೆ ಸೌಲಭ್ಯಕ್ಕಾಗಿ, ನಿತ್ಯಪ್ರಯಾಣಿಸುವವರಿಗೆ ಬಸ್ ಗಳಲ್ಲಿ ಗರಿಷ್ಠ ೮ ಆಯ್ಕೆಗಳಿದ್ದು, ಆಟೋ-ರಿಕ್ಷಾ, ಟ್ಯಾಕ್ಸಿ ಮತ್ತು ವ್ಯಾನ್‌ಗಳ ಸೌಲಭ್ಯವನ್ನೂ ಹೊಂದಿದೆ. ಖಾಸಗಿ ನಿರ್ವಾಹಕರು ನಗರ(ಸಿಟಿ) ಬಸ್, ಮ್ಯಾಜಿಕ್, ವ್ಯಾನ್, ಆಟೋ ರಿಕ್ಷಾ, ನಗರ ಸೇವಾ ಬಸ್, ಮೆಟ್ರೊ ಟ್ಯಾಕ್ಸಿ, ಸ್ಟಾರ್ ಕ್ಯಾಬ್ ಸರ್ವಿಸ್ ಮತ್ತಿತರ ಸ್ಥಳೀಯ ನಗರ ಸಂಚಾರಿ ಬಸ್ ಗಳನ್ನು ನಡೆಸುತ್ತಿದ್ದಾರೆ. ಕಳೆದ ೨೦೦೪ರಲ್ಲಿ ಇಂದೋರ್‌ನ I.C.T.S.C.L ಹೊಸದಾಗಿ ಬಸ್ ಸೇವೆ ಪ್ರಾರಂಭಿಸಿತು. ಸಿಟಿ ಬಸ್ ಎಂಬ ಹೆಸರಿನ ಬಸ್ ಗಳು ಇಂದು ೧೩೦ ಬಸ್ ನಿಲ್ದಾಣಗಳು ೩೦ ಮಾರ್ಗಗಳಲ್ಲಿ ಸೇವೆ ಒದಗಿಸುತ್ತಿದೆ. ಈ ನೂತನ ಸೇವೆಯಲ್ಲಿ ೧೨೫ ಜನರಲ್ ಲೋ ಫ್ಲೋರ್, ೧೨೦ ನ್ಯೂ ಸೆಮಿ-ಲೋ ಫ್ಲೋರ್ ಮತ್ತು ೫೦ AC ವಿಶೇಷ ನಗರ ಸಾರಿಗೆ ಬಸ್ ಗಳು ಕಾರ್ಯನಿರತವಾಗಿವೆ. ಈ ಸೇವೆಗಳು ತಮ್ಮ ಮಾರ್ಗಕ್ಕೆ ಸಂಬಂಧಿಸಿದಂತೆ ಬಣ್ಣದ ಕೋಡ್ ಅನ್ನು ಹೊಂದಿರುತ್ತವೆ. ಇವುಗಳಲ್ಲಿ ಕೆಲವು ಬಸ್ ಗಳು ಅಗತ್ಯ ಸಮಯದಲ್ಲಿ ಬಸ್ ಎಲ್ಲಿದೆ ಎಂಬುದನ್ನು ಪತ್ತೆಹಚ್ಚಲು ಬಳಸುವ GPS ಮತ್ತು IVR (ಸುಮಾರು ೨೦೦) ಆಧುನೀಕೃತ ಸೇವೆಗಳನ್ನು ಒಳಗೊಂಡಿವೆ. ಬಸ್ ಗಳಿಗೆ ಸಂಬಂಧಿಸಿದ ಮಾಹಿತಿಯು ಬಸ್ ನಿಲ್ದಾಣಗಳಲ್ಲಿ ಸ್ಥಾಪಿಸಿದ LED ಪರದೆಗಳ ಮೇಲೆ ಪ್ರದರ್ಶಿಸಲ್ಪಡುವುದು. ನಗರದಲ್ಲಿ ಮೆಟ್ರೊ ಟ್ಯಾಕ್ಸಿ ಮತ್ತು ಸ್ಟಾರ್ ಟ್ಯಾಕ್ಸಿ ಎಂಬ ಎರಡು ಕಂಪನಿಗಳು ಸಾರಿಗೆ ಸೇವೆಯನ್ನು ಒದಗಿಸುತ್ತಿವೆ.
ವಿಮಾನ ನಿಲ್ದಾಣ
ಬದಲಾಯಿಸಿಇಂದೋರ್ದಲ್ಲಿ ದೇವಿ ಅಹಲ್ಯಾಬಾಯಿ ಹೋಳ್ಕರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ವು ವಾಯುಯಾನ ಸೌಲಭ್ಯ ಒದಗಿಸುವುದು. ಇಂದೋರ್ ವಿಮಾನ ನಿಲ್ದಾಣವು ನಗರದ ಕೇಂದ್ರ ಭಾಗದಿಂದ ಸುಮಾರು ೫ ಕಿಮೀ ದೂರದಲ್ಲಿದೆ. ಅದು ಪ್ರಸ್ತುತ ಇಲ್ಲಿನ ದೇಶಿಯ ಸೇವೆಗಳನ್ನು ನಿರ್ಬಂಧಿಸಿದೆ. ಈ ಅಂತರರಾಷ್ಟ್ರೀಯ ನಿಲ್ದಾಣವು ಈಗ ನಿರ್ಮಾಣದ ಹಂತದಲ್ಲಿದ್ದು, ನಿಯಂತ್ರಣ ಕೊಠಡಿ, ಗೋಪುರ ಮತ್ತು ಕಟ್ಟಡದ ಕಾಮಗಾರಿ ೨೦೧೦ರ ಫೆಬ್ರವರಿಯಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ.
ಜನಸಾಂದ್ರತೆ ಸಂಖ್ಯೆ
ಬದಲಾಯಿಸಿ೨೦೦೧ರಲ್ಲಿ ಇಂದೋರ್‌ನ ಒಟ್ಟು ಜನಸಂಖ್ಯೆ ೧, ೫೧೬, ೯೧೮ರಷ್ಟಿದೆ.[೧೭] ಒಟ್ಟು ಜನಸಂಖ್ಯೆಯಲ್ಲಿ ೫೩% ಪುರುಷರು ಮತ್ತು ೪೭% ಮಹಿಳೆಯರಿದ್ದಾರೆ. ೨೦೦೧ ಜನಗಣತಿಯ ಪ್ರಕಾರ, ಇಂದೋರ್ ಸರಾಸರಿ ಸಾಕ್ಷರತೆ ಪ್ರಮಾಣವು ೭೫%ರಷ್ಟು ಆಗಿದ್ದು, ಇದು ೫೯.೫%ರಷ್ಟಿರುವ ರಾಷ್ಟ್ರೀಯ ಸರಾಸರಿ ಸಾಕ್ಷರತೆ ಪ್ರಮಾಣಕ್ಕಿಂತ ಹೆಚ್ಚಾಗಿದೆ. ಪುರುಷರ ಸಾಕ್ಷರತೆ ಪ್ರಮಾಣವು ೭೫%ರಷ್ಟಿದ್ದು, ಮಹಿಳೆಯರದ್ದು ೬೪%ರಷ್ಟಿತ್ತು. ಇತ್ತೀಚಿನ, ಅಂದರೆ ೨೦೦೯ರ ಅಂಕಿಅಂಶಗಳ ಪ್ರಕಾರ ಸರಾಸರಿ ಸಾಕ್ಷರತೆ ದರವು ೮೯%ರಷ್ಟಿದೆ. ಅದರಲ್ಲಿ ಪುರುಷರ ಸಾಕ್ಷರತೆ ದರವು ೯೫% ಮತ್ತು ಮಹಿಳೆಯರದ್ದು ೮೪%ರಷ್ಟಿದೆ[೧೭]. ಜನಸಂಖ್ಯೆಯ ೧೮%ದಷ್ಟು ೬ ವರ್ಷಗಳ ಒಳಗಿನವರಾಗಿದ್ದಾರೆ. ೨೦೦೧ರ ಜನಗಣತಿ ಪ್ರಕಾರ ಜನಸಂಖ್ಯೆಯ ಸರಾಸರಿ ವಾರ್ಷಿಕ ಏರಿಕೆ ದರವು ಸುಮಾರು ೨.೮೫%ರಷ್ಟಿದೆ. ಇಂದೋರ್‌ನಲ್ಲಿ ಹಿಂದಿಯು ಪ್ರಮುಖ ಮಾತನಾಡುವ ಭಾಷೆಯಾಗಿದೆ. ಇಂದೋರ್‌ನಲ್ಲಿ ಮರಾಠರು (ಹೋಳ್ಕರರು) ಆಳ್ವಿಕೆ ನಡೆಸಿದ್ದರಿಂದ, ಹೆಚ್ಚಿನವರು ಮರಾಠಿಯನ್ನು ಮಾತನಾಡುವರಲ್ಲದೇ ಅದನ್ನು ಅರ್ಥ ಮಾಡಿಕೊಳ್ಳಬಲ್ಲರು. ಮಾಲ್ವಿಯು ಇಂದೋರ್ ಮತ್ತು ಅದರ ಸುತ್ತಮುತ್ತಲ ಪ್ರದೇಶದಲ್ಲಿ ಮಾತನಾಡುವ ಸ್ಥಳೀಯ ಆಡುಭಾಷೆಯಾಗಿದೆ.
ಆರ್ಥಿಕತೆ
ಬದಲಾಯಿಸಿಇತರ ದೊಡ್ಡ ನಗರಗಳಲ್ಲಿರುವಂತೆ, ಇಂದೋರ್ ಸಹ ಹಲವು ಶಾಪಿಂಗ್ ಮಾಲ್, ಮೂವೀ ಸಿನೆಮಾಸ್, ರೆಸ್ಟಾರೆಂಟ್ ಮತ್ತು ಹೋಟೆಲ್‌ಗಳನ್ನು ಹೊಂದಿದೆ. ದೀಪಾವಳಿ ಮತ್ತು ಹೊಸ ವರ್ಷದ ಸಂದರ್ಭದಲ್ಲಿನ ವಿಶೇಷ ಹೆಚ್ಚಳ ಹೊರತುಪಡಿಸಿ, ಉಳಿದೆಲ್ಲಾ ಸಮಯದಲ್ಲಿ ವ್ಯಾಪಾರ-ವಹಿವಾಟು ಸಮಾನವಾಗಿರುವುದು. ಬಟ್ಟೆ, ಔಷಧ ಮತ್ತು ಶೈಕ್ಷಣಿಕ ಸೇವಾ ಸೌಲಭ್ಯಗಳು ಇಂದೋರ್‌ನ ಪ್ರಮುಖ ವ್ಯಾಪಾರೀ ಸರಕುಗಳೆನ್ನಬಹುದು. ಇಂದೋರ್‌ನ ಕೈಗಾರಿಕಾ ಪ್ರದೇಶಗಳಾದ ಪಿತಾಂಪುರ್, ಸನ್ವೆರ್, ಮೊವ್‌ನಲ್ಲಿ ಸುಮಾರು ೨೦೦೦ಕ್ಕೂ ಹೆಚ್ಚಿನ ಕಾರ್ಖಾನೆಗಳನ್ನು ನಗರದಲ್ಲಿ ಒಳಗೊಂಡಿದೆ[ಸೂಕ್ತ ಉಲ್ಲೇಖನ ಬೇಕು]. ಪಿತಾಂಪುರ್ ನಗರವು ಭಾರತದ ಡೆಟ್ರಾಯ್ಟ್ ಎಂದು ಪ್ರಸಿದ್ಧವಾಗಿದೆ.[೧೮][೧೯](ಡೆಟ್ರಾಯ್ಟ್ ಯುನೈಟೆಡ್ ಸ್ಟೇಟ್ಸ್ ನ ಡೆಟ್ರೊಯಿಟ್ ನದಿ ತೀರದ ಸರೋವರಗಳ ಬಂದರು ತಾಣ)
ಶಿಕ್ಷಣ
ಬದಲಾಯಿಸಿಇಂದೋರ್ ಪ್ರಸಿದ್ಧ ಶೈಕ್ಷಣಿಕ ಸಂಸ್ಥೆಗಳನ್ನು ಹೊಂದಿದ್ದು, ಮಧ್ಯ ಭಾರತದ ಶೈಕ್ಷಣಿಕ ಕೇಂದ್ರಸ್ಥಾನವಾಗಿ ಕಾರ್ಯನಿರ್ವಹಿಸುತ್ತಿದೆ. ಇಂದೋರ್‌ನ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ ವ್ಯವಸ್ಥೆಯು ಅತ್ಯುತ್ತಮವಾಗಿದೆ. ಇಂದೋರ್‌ನಲ್ಲಿರುವ ಹೆಚ್ಚಿನ ಶಾಲೆಗಳು ಸೆಂಟ್ರಲ್ ಬೋರ್ಡ್ ಆಫ್ ಸೆಕಂಡರಿ ಎಜ್ಯುಕೇಷನ್ (CBSE) ಮಂಡಳಿ ಹಾಗೆಯೇ ICSE ಮಂಡಳಿ ಅಥವಾ NIOS ಮಂಡಳಿಯ ಸದಸ್ಯತ್ವ ಹೊಂದಿರುತ್ತವೆ. ಇಂದೋರ್ ಉನ್ನತ ಶಿಕ್ಷಣಕ್ಕಾಗಿ ವಿಧ್ಯಾರ್ಥಿಗಳನ್ನು ತಯಾರಿಗೊಳಿಸುವ ಕೇಂದ್ರವಾಗಿ ಬೆಳೆದಿದೆ. ಇಂದೋರ್ ವಿಶ್ವವಿದ್ಯಾಲಯವಾಗಿದ್ದ ಈಗಿನ ದೇವಿ ಅಹಲ್ಯಾ ವಿಶ್ವವಿದ್ಯಾಲಯವು (DAVV) ಇಂದೋರ್‌ನ ಪ್ರಮುಖ ಮತ್ತು ಹಳೆಯ ವಿಶ್ವವಿದ್ಯಾಲಯವಾಗಿದೆ. ಇಂದೋರ್ ಇಂಡಿಯನ್ ಇನ್‌ಸ್ಟಿಟ್ಯುಟ್ ಆಫ್ ಮ್ಯಾನೇಜ್‌ಮೆಂಟ್ ಇಂದೋರ್ ಮತ್ತು ಇಂಡಿಯನ್ ಇನ್‌ಸ್ಟಿಟ್ಯುಟ್ ಆಫ್ ಟೆಕ್ನಾಲಜಿ ಇಂದೋರ್ ಎರಡನ್ನು ಹೊಂದಿರುವ ಭಾರತದ ಏಕೈಕ ನಗರವಾಗಿದೆ.
ಮಾಧ್ಯಮ
ಬದಲಾಯಿಸಿಇಂದೋರ್ನಲ್ಲಿರುವ ಸ್ಥಳೀಯ ಮಾಧ್ಯಮವು ಪ್ರಬಲವಾಗಿದ್ದು, ಅಭ್ಯುದಯ ಕಾಣುತ್ತಿವೆ. ಇಂದೋರ್ ಬಹಳ ಸಮಯದಿಂದ ರಾಜ್ಯದ ಪತ್ರಿಕೋದ್ಯಮದ ವೇದಿಕೆಯಾಗಿದೆ. ಇಂದೋರ್‌ನಲ್ಲಿ ರಂಗಮಂದಿರ, ದಿನಪತ್ರಿಕೆ, ನಿಯತಕಾಲಿಕೆಗಳು, ಮತ್ತು ಸ್ಥಳೀಯ ರೇಡಿಯೊ ಮತ್ತು ದೂರದರ್ಶನ ಕೇಂದ್ರಗಳಿವೆ.
ಕಲೆ ಮತ್ತು ರಂಗಮಂದಿರ
ಬದಲಾಯಿಸಿನಗರದ ರವೀಂದ್ರ ನಾಟ್ಯ ಗೃಹವು ಕಲಾ ಪ್ರದರ್ಶನಕ್ಕೆ ಪ್ರಮುಖ, ಹೆಸರುವಾಸಿ ರಂಗಮಂದಿರವಾಗಿದೆ. ಜಗತ್ತಿನ ಹಲವಾರು ಕಲಾವಿದರು ನಿರಂತರವಾಗಿ ಇಲ್ಲಿ ಕಾರ್ಯಕ್ರಮ ನೀಡುತ್ತಿರುತ್ತಾರೆ. ಅಭಿವ್ಯಕ್ತಿ ಸೆಂಟರ್ ಆಫ್ ಫೈನ್ ಆರ್ಟ್ಸ್ ಆಂಡ್ ಪರ್ಫಾರ್ಮಿಂಗ್ ಆರ್ಟ್ಸ್, ಡಿಯೊಲಲಿಕರ್ ಕಲಾ ವಿಥಿಕಾವು(ವೇದಿಕೆ) ಸಹ ಅಂತಹ ಕಲೆ ಮತ್ತು ರಂಗಮಂದಿರದ ಕೇಂದ್ರವಾಗಿದೆ.[೨೦]
ವಿದ್ಯುನ್ಮಾನ ಮಾಧ್ಯಮ
ಬದಲಾಯಿಸಿರೇಡಿಯೋ ಉದ್ಯಮ ಕೂಡ ಹಲವಾರು ಖಾಸಗಿ ಮತ್ತು ಸರ್ಕಾರಿ ಒಡೆತನದ ಎಫ್ಎಂ ಚಾನೆಲ್‌ಗಳ ಪ್ರವೇಶದಿಂದಾಗಿ ವಿಸ್ತಾರಗೊಂಡಿದೆ. ನಗರದಲ್ಲಿ ಪ್ರಸಾರವಾಗುತ್ತಿರುವ ಎಫ್ಎಂ ರೇಡಿಯೋ ಚಾನೆಲ್‌ಗಳಲ್ಲಿ ಎಐಆರ್, ವಿವಿಧ್ ಭಾರತಿ, ಎಫ್ಎಂ (೧೦೨.೮ MHz), ಏರ್ ರೈನ್ ಬೋ ಎಫ್ಎಂ (೧೦೧.೯ MHz), ರೇಡಿಯೋ ಮಿರ್ಚಿ ಎಫ್ಎಂ (೯೮.೩ MHz), ರೇಡಿಯೋ ಸಿಟಿ ಎಫ್ಎಂ (೯೧.೧ MHz), ಬಿಗ್ ಎಫ್ಎಂ (೯೨.೭ MHz), ರೆಡ್ ಎಫ್ಎಂ(೯೩.೫ MHz) ಮತ್ತು ಏರ್ ಜ್ಞಾನ ವಾಣಿ (೧೦೭.೬ MHz) ಪ್ರಮುಖವಾದವು. ರಾಜ್ಯ ಒಡೆತನದ ದೂರದರ್ಶನವು ಎರಡು ಪ್ರಾದೇಶಿಕ ಚ್ಯಾನೆಲ್‌ಗಳನ್ನು ಪ್ರಸಾರ ಮಾಡುವುದು. ಇದಲ್ಲದೆ ಕೆಲವು ಸ್ಥಳೀಯ ಪ್ರಸಾರ ಕೇಂದ್ರಗಳು ಅಸ್ತಿತ್ವದಲ್ಲಿವೆ.
ಮುದ್ರಣ ಮಾಧ್ಯಮ
ಬದಲಾಯಿಸಿಸುಮಾರು ೧೯ ಹಿಂದಿ ದಿನಪತ್ರಿಕೆಗಳು, ಎರಡು ಇಂಗ್ಲೀಷ್ ದಿನಪತ್ರಿಕೆಗಳು, ೨೬ ವಾರ ಪತ್ರಿಕೆಗಳು ಮತ್ತು ಮಾಸಿಕಗಳು, ೩ ತ್ರೈಮಾಸಿಕಗಳು, ೧ ಪಾಕ್ಷಿಕ ನಿಯತಕಾಲಿಕೆ ಮತ್ತು ಒಂದು ವಾರ್ಷಿಕ ಪತ್ರಿಕೆ ಇಂದೋರ್‌ನಿಂದ ಪ್ರಕಟಗೊಳ್ಳುವವು.[೨೧] ನಯಿ ದುನಿಯಾ , ದೈನಿಕ್ ಭಾಸ್ಕರ್ , ದೈನಿಕ್ ಜಾಗರಣ್ , ಪತ್ರಿಕಾ , ಅಗ್ನಿಬಾನ್ , ಮತ್ತು ಪ್ರಭಾತ್‌ಕಿರಣ್ ಇತ್ಯಾದಿ ಇಂದೋರ್‌ನಲ್ಲಿ ಪ್ರಕಟಗೊಳ್ಳುವ ಪ್ರಮುಖ ಹಿಂದಿ ದಿನಪತ್ರಿಕೆಗಳಾಗಿವೆ. ದಿ ಟೈಮ್ಸ್ ಆಫ್ ಇಂಡಿಯಾ , ಹಿಂದುಸ್ತಾನ್ ಟೈಮ್ಸ್ , ದಿ ಹಿಂದೂ , ಫ್ರೀ ಪ್ರೆಸ್ , ಬ್ಯುಸಿನೆಸ್ ಸ್ಟ್ಯಾಂಡರ್ಡ್ ಮತ್ತು ದಿ ಇಕನಾಮಿಕ್ಸ್ ಟೈಮ್ಸ್ ಪ್ರಮುಖ ಇಂಗ್ಲೀಷ್ ಪತ್ರಿಕೆಗಳಾಗಿವೆ.
ಸಂಪರ್ಕ-ಸಂವಹನ ಸೇವೆಗಳು
ಬದಲಾಯಿಸಿಇಂದೋರ್ ದೊಡ್ಡ ಪ್ರಮಾಣದ ಆಪ್ಟಿಕಲ್ ಫೈಬರ್ ಜಾಲದಿಂದ ಆವರಿಸಲ್ಪಟ್ಚಿದೆ. ನಗರದಲ್ಲಿರುವ ಮೂರು ಸ್ಥಿರ ದೂರವಾಣಿ ಲೈನುಗಳ ಸಂಪರ್ಕ ನಿರ್ವಾಹಕರು: BSNL, ರಿಲಯನ್ಸ್ ಮತ್ತು ಏರ್‌ಟೆಲ್. ನಗರದಲ್ಲಿ ಒಟ್ಟು ಆರು ಮೊಬೈಲ್ ಪೋನ್ ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳಲ್ಲಿ BSNL, ರಿಲಯನ್ಸ್, ವೊಡಾಫೋನ್, ಐಡಿಯಾ, ಏರ್‌ಟೆಲ್, ಟಾಟಾ ಡೊಕೊಮೊ ಕಂಪನಿಗಳು GSM ಸೇವೆಯನ್ನು ಒದಗಿಸುತ್ತಿದ್ದು; BSNL, ವರ್ಜಿನ್ ಮೊಬೈಲ್, ಟಾಟಾ ಇಂಡಿಕಾಮ್ ಮತ್ತು ರಿಲಯನ್ಸ್ ಗಳು CDMA ಸೇವೆಯನ್ನು ಒದಗಿಸುತ್ತಿವೆ.
ಕ್ರೀಡೆ
ಬದಲಾಯಿಸಿಇಂದೋರ್ ನೆಹರು ಕ್ರೀಡಾಂಗಣ ಮತ್ತು ಉಷಾ ರಾಜೆ ಕ್ರಿಕೆಟ್ ಕ್ರೀಡಾಂಗಣ ಎಂದು ಎರಡು ಕ್ರಿಕೆಟ್ ಕ್ರೀಡಾಂಗಣಗಳನ್ನು ಹೊಂದಿದೆ. ಅಲ್ಲಿ ಹುಲ್ಲುಹಾಸಿನ ಟೆನ್ನಿಸ್ ಮತ್ತು ಟೇಬಲ್ ಟೆನ್ನಿಸ್‌ಗಾಗಿ ಹಲವು ಸ್ಪೋರ್ಟ್ಸ್ ಕ್ಲಬ್‌ಗಳಿವೆ. ಇಂದೋರ್ ಹಲವು ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಸಂಘಟಿಸಿದೆ. ಉಷಾ ರಾಜೆ ಕ್ರೀಡಾಂಗಣವು ಮಧ್ಯಪ್ರದೇಶದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿದೆ. ಇದು ಸುಮಾರು ೪೫,೦೦೦ ಪ್ರೇಕ್ಷಕರು ಕುಳಿತುಕೊಳ್ಳುವ ಆಸನದ ಸಾಮರ್ಥ್ಯ ಹೊಂದಿದೆ. ಇಲ್ಲಿ ಹಲವು ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಹಗಲು-ರಾತ್ರಿ ಕ್ರಿಕೆಟ್ ಪಂದ್ಯಗಳು ನಡೆದಿವೆ. ಉಷಾ ರಾಜೆ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಎರಡು ಅಂತರರಾಷ್ಟ್ರೀಯ ಏಕದಿನ ಪಂದ್ಯಗಳು ನಡೆದಿವೆ. ಇಂದೋರ್ ಬಾಸ್ಕೆಟ್‌ಬಾಲ್ ಆಟಕ್ಕೆ ಪ್ರಖ್ಯಾತವಾಗಿದೆ. ಕಳೆದ ೩-೪ ದಶಕಗಳಿಂದ ಈ ಆಟವು ಜನಪ್ರಿಯವಾಗುತ್ತಿದೆ. ಇದು ಭಾರತದ ಮೊದಲ ರಾಷ್ಟ್ರೀಯ ಬಾಸ್ಕೆಟ್‌ಬಾಲ್ ಅಕಾಡಮಿಯನ್ನು ಹೊಂದಿದ್ದು, ವಿಶ್ವ ದರ್ಜೆಯ ಒಳಾಂಗಣ ಬಾಸ್ಕೆಟ್‌ಬಾಲ್ ಕ್ರೀಡಾಂಗಣ ಇಲ್ಲಿದೆ. ಇಂದೋರ್ ಹಲವು ರಾಷ್ಟ್ರೀಯ ಬಾಸ್ಕೆಟ್‌ಬಾಲ್ ಚ್ಯಾಂಪಿಯನ್‌ಶಿಪ್‌ಗಳನ್ನು ಯಶಸ್ವಿಯಾಗಿ ಸಂಘಟಿಸಿದೆ. C. K. ನಾಯ್ಡು, ಜೇಮ್‌ಶೇಡ್ ನಸರ್ವಾಂಜಿ ಭಾಯ, ಮುಸ್ತಾಕ್ ಅಲಿ, ಹಿರಲಾಲ್ ಗಾಯಕ್ವಾಡ್, ನರೇಂದ್ರ ಹಿರ್ವಾನಿ, ಅಮೇ ಖುರೇಷಿಯಾ ಮತ್ತು ಸಂಜಯ್ ಜಗ್ದಾಲೆ ಸೇರಿದಂತೆ ಹಲವು ಗಮನಾರ್ಹ ಕ್ರಿಕೆಟಿಗರು ಇಂದೋರ್‌ನಿಂದ ಬಂದಿದ್ದಾರೆ. ದಿವಂಗತ ಡಾ. ಶರ್ಮಾ (ಬಾಸ್ಕೆಟ್‌ಬಾಲ್) ಮತ್ತು ಮಾನಸ್ ಮಿಶ್ರಾ (ಪವರ್‌ಲಿಫ್ಟಿಂಗ್), ಕಿಶನ್ ಚಂದ್, ಶಂಕರ್ ಲಕ್ಷ್ಮಣ ಮತ್ತು ಸಲೀಮ್ ಶೆರ್ವಾನಿಯವರು (ಹಾಕಿ) ಇಂದೋರ್‌ನ ಇತರ ಖ್ಯಾತ ಕ್ರೀಡಾಪಟುಗಳಾಗಿದ್ದಾರೆ.
ಸಂಸ್ಕೃತಿ
ಬದಲಾಯಿಸಿಇಂದೋರ್ ವಿವಿಧ-ವಿಭಿನ್ನ ಸಂಸ್ಕೃತಿಗಳಿಂದ ಕೂಡಿದ ನಗರವಾಗಿದೆ. ಇಂದೋರ್ ನಗರವು ಹಲವು ವರ್ಷಗಳಿಂದ ಎಲ್ಲಾ ಜಾತಿ, ಮತ ಮತ್ತು ಧರ್ಮ, ವರ್ಣದ ಜನರನ್ನು ಸ್ವಾಗತಿಸುತ್ತಿದೆ ಮಧ್ಯಪ್ರದೇಶದ ಹೃದಯ ಭಾಗದಲ್ಲಿರುವ ಇಂದೋರ್‌ಗೆ ದೇಶದ ಮೂಲೆ ಮೂಲೆಗಳಿಂದ ಜನರು ವಲಸೆಬಂದು, ತಮ್ಮ ಜೀವನೋಪಾಯ, ಶಿಕ್ಷಣಕ್ಕಾಗಿ ಅಥವಾ ಇಲ್ಲಿನ ಪ್ರಶಾಂತ ಸಂಸ್ಕೃತಿಯ ಪರಿಸರದಿಂದಾಗಿ, ಇಲ್ಲಿಯೇ ನೆಲೆಯೂರಿದ್ದಾರೆ. ಇಲ್ಲಿರುವ ಜನರು ಜಾತಿ ಅಥವಾ ಪ್ರದೇಶ ಮತ್ತು ಧರ್ಮದ ಭೇದವಿಲ್ಲದೆ ಎಲ್ಲರೊಂದಿಗೆ ಬೆರೆತು, ಸುಖದ ಜೀವನ ನಡೆಸುತ್ತಿದ್ದಾರೆ.
ಆಹಾರ
ಬದಲಾಯಿಸಿಇಂದೋರ್ನ ಪಾಕಶಾಸ್ತ್ರ ಪದ್ಧತಿಯು ಹೆಸರುವಾಸಿಯಾಗಿದ್ದು, ನಮ್ಕೀನ್‌ಗಳು,(ಉಪ್ಪು ಕರಿದ ತಿಂಡಿಗಳು) ಪೋಹಾ ಮತ್ತು ಜಲೆಬಿ, ಚಾಟ್ಸ್ (ಉಪಹಾರಗಳು), ಕಚೊರಿಗಳು ಮತ್ತು ಸಮೋಸಾಗಳ ಬಗೆಬಗೆಯ ತಿನಿಸುಗಳಿಗೆ ಪ್ರಸಿದ್ಧವಾಗಿದೆ. ಅಲ್ಲಿನ ವಿವಿಧ ರೆಸ್ಟಾರೆಂಟ್‌ಗಳಲ್ಲಿ ವಿವಿಧ ಪ್ರಕಾರದ ಅಡುಗೆ ಪದ್ಧತಿಗಳ ತಿನಿಸುಗಳು ದೊರೆಯುವವು. ಅಲ್ಲದೇ ಇಂದೋರ್ ಮತ್ತು ಮಾಲ್ವಾ ಪ್ರದೇಶದ ರುಚಿ ತಿನಿಸುಗಳಾದ ದಾಲ್-ಬಫ್ಲಾ, ನಿಹಾರಿ ಗೋಷ್ಟ್ ಮತ್ತು ಬಫಾ-ಗೋಷ್ಟ್‌ನಂತಹ ನವೀನ ತಿನಿಸುಗಳು ಮಾತ್ರವಲ್ಲದೆ ಬೆಂಗಾಲಿ, ಮುಸ್ಲಿಮ್, ರಾಜಸ್ಥಾನಿ ಮಾದರಿಯ ಲಘು ಮತ್ತು ಸಿಹಿತಿನಿಸುಗಳು ದೊರೆಯುವುದು. ದೈನಿಕ್ ಭಾಸ್ಕರ್ ಸಂಘಟಿಸಿದ ಸುಮಾರು ೩೦,೦೦೦ ಜನರನ್ನೊಳಗೊಂಡ ಅತಿ ದೊಡ್ಡ ಚಹಾ ಕೂಟದ ದಾಖಲೆಯನ್ನು ಇಂದೋರ್ ಹೊಂದಿದೆ.[೨೨]
ಪ್ರಮುಖ ಹಬ್ಬಗಳು
ಬದಲಾಯಿಸಿಎಲ್ಲಾ ರಾಷ್ಟ್ರೀಯ ಹಬ್ಬಗಳಲ್ಲದೆ ಹೋಳಿ, ಬೈಸಾಕಿ, ರಕ್ಷಾಬಂಧನ, ನವರಾತ್ರಿ, ದಸರಾ, ಗಣೇಶೋತ್ಸವ, ದೀಪಾವಳಿ, ರಮ್ಜಾನ್, ಗುಡಿ ಪಾಡ್ವಾ, ಭೌಬೀಜ್, ಈದ್ ನಂತಹ ಎಲ್ಲಾ ಹಬ್ಬಗಳು; ನಾಗರಪಂಚಮಿ, ಅಹಲ್ಯಾ ಉತ್ಸವವನ್ನು ಅದೇ ಸಂಭ್ರಮದೊಂದಿಗೆ ಆಚರಿಸುವರು.
ಸರಕಾರ ಮತ್ತು ರಾಜಕಾರಣ
ಬದಲಾಯಿಸಿಒಟ್ಟು ಸಂಸತ್ ಸ್ಥಾನಗಳ ಸಂಖ್ಯೆ: ೧
- ಸಂಸತ್ ಸದಸ್ಯೆ : ಸುಮಿತ್ರಾ ಮಹಾಜನ್
- ನಗರದ ಮಹಾಪೌರ: ಕೃಷ್ಣ ಮುರಾರಿ ಮೊಘೆ
- ಶಾಸಕ: ಅಶ್ವಿನ್ ಜೋಷಿ, ಸುದರ್ಶನ ಗುಪ್ತ, ರಮೇಶ್ ಮೆಂಡೊಲಾ, ಮಾಲಿನಿ ಗೌಡ್, ಮಹೇಂದ್ರ ಹರ್ಡಿಯಾ, ಜೀತು ಜೀರಾಟಿ.
- ಪ್ರಧಾನ ಪೋಲಿಸ್ ವರಿಷ್ಟ ಇನ್ಸ್ಪೆಕ್ಟರ್ ಜನರಲ್(ಇಂದೋರ್ ವಲಯ): ಸಂಜಯ ರಾಣಾ IPS
- DIG/SSP ಇಂದೋರ್: D. ಶ್ರೀನಿವಾಸ್ ರಾವ್ IPS
- ಜಿಲ್ಲಾಧಿಕಾರಿ: ರಾಕೇಶ್ ಶ್ರೀವಾತ್ಸವ್ - IAS ಐಎಎಸ್
- ಪೋಲಿಸ್ ವ್ಯವಸ್ಥಾಪಕ (ಪೂರ್ವ ಇಂದೋರ್): ಮಕ್ರಂದ್ ದೆವುಸ್ಕರ್- IPS
- ಪೋಲಿಸ್ ವ್ಯವಸ್ಥಾಪಕ (ಪಶ್ಚಿಮ ಇಂದೋರ್): D. ಶ್ರೀನಿವಾಸ ವರ್ಮ IPS
- ಇಂದೋರ್ ಅಭಿವೃದ್ಧಿ ಪ್ರಾಧಿಕಾರ (I.D.A) ಅಧ್ಯಕ್ಷರು: ಮಧು ವರ್ಮ
ಪ್ರಸಿದ್ಧ ಸ್ಥಳಗಳು
ಬದಲಾಯಿಸಿ- ರಾಜ್‌ವಾಡಾ - ಹೋಳ್ಕರ ಕಾಲದಲ್ಲಿ ಕಟ್ಟಿದ ಏಳು ಅಂತಸ್ತಿನ ಅರಮನೆ. ವಾಸ್ತುವಿನ್ಯಾಸಕರಾದ ಹಿಮಾಂಶು ದುಡ್ವಾಕರ್ ಮತ್ತು ಶ್ರೇಯಾ ಭಾರ್ಗವರವರು ಇತ್ತೀಚೆಗೆ ಪ್ರಮುಖ ವಾಡಾವನ್ನು (ರಾಜನ ನಿವಾಸ) ಅದರ ಮೂಲ ವೈಭವದ ಮಾದರಿಯಲ್ಲಿಯೇ ಪುನರ್ ನಿರ್ಮಿಸಿದರು. ಇದಕ್ಕೆ ಮಹಾರಾಣಿ ಉಷಾದೇವಿ ಹೋಳ್ಕರ ಆರ್ಥಿಕ ನೆರವು ನೀಡಿದರು.
- ಲಾಲ್ ಬಾಗ್ ಅರಮನೆ - ವಿಶಾಲವಾದ ಸುಂದರ ಅರಮನೆಯು200 acres (0.81 km2) ಈ ಜಾಗೆಯಲ್ಲಿ ವಿಸ್ತರಿಸಿದೆ. ಈಗ ಇದು ವಸ್ತುಸಂಗ್ರಹಾಲಯವಾಗಿದೆ. ಅಲ್ಲದೇ ಇಲ್ಲಿ ಹೋಳ್ಕರ ಕಾಲದ ಹಸ್ತಕಲಾಕೃತಿಗಳನ್ನು ಕಾಣಬಹುದಾಗಿದೆ.
- ಸೀತಾಲಮಾತಾ ಜಲಪಾತ - ಇದು ಮನ್ಪುರ ಹತ್ತಿರದ ಸುಂದರ ಸ್ಥಳವಾಗಿದೆ ಮತ್ತು ಇಂದೋರ್‌ನಿಂದ 65 km (40 mi)ನಷ್ಟು ದೂರವಿದೆ. AB ರಸ್ತೆಯಿಂದ ಸುಮಾರು 5 km (3 mi)ನಷ್ಟು ಕ್ರಮಿಸಬೇಕಾಗುತ್ತದೆ.
- ಕ್ರಿಸ್ಟಲ್ ದೇವಸ್ಥಾನ - ಇದು ಶತಮಾನದ ಹಿಂದೆ ಸೇಟ್ ಹುಕುಂಚಂದ್ ನಿರ್ಮಿಸಿದ ದಿಗಂಬರ್ ಜೈನ್ ದೇವಸ್ಥಾನವಾಗಿದೆ. ಇದು ಅತ್ಯಂತ ಸುಂದರವಾದ ಗಾಜಿನ ಕುಸರಿಕಲೆಯಿಂದ ಕೂಡಿದೆ.
- ಕೃಷ್ಣಾಪುರ ಛಾತ್ರಿ - ಇದು ಹೆಚ್ಚು ಮಾಲಿನ್ಯದ ಖಾನ್ ನದಿಯ ದಡದಲ್ಲಿದೆ. ಇದು ರಾಜ್‌ವಾಡಾದಿಂದ ಸ್ವಲ್ಪ ದೂರದಲ್ಲಿದೆ.
- ದೇವ್ಲಾಲಿಕರ್ ಕಲಾ ವಿಥಿಕಾ - ಇದು ಪ್ರಸಿದ್ಧ ಕಲಾಮಂದಿರವಾಗಿದೆ. ಇದಕ್ಕೆ ಅವಿಸ್ಮರ್ಣೀಯ ಚಿತ್ರಕಾರ ವಿಷ್ಣು ದೇವ್ಲಾಲಿಕರ್ ಹೆಸರನ್ನು ಇಡಲಾಗಿದೆ.
- ಪಾಟಲ್ ಪಾನಿ - ಮೊವ್ ಸಮೀಪವಿರುವ ಸುಂದರ ಜಲಪಾತ. ಪಾಟಲ್ ಪಾನಿಯಲ್ಲಿ ಚಿಕ್ಕ ರೈಲ್ವೆ ನಿಲ್ದಾಣವಿದೆ - ಖಂಡ್ವಾ ಕಡೆಗೆ ಮೀಟರ್-ಗೇಜು ಪಟ್ಟಿಯಲ್ಲಿ ಪ್ರಯಾಣಿಸುವಾಗ ಮೊವ್ ನಂತರ ಸಿಗುವ ಮೊದಲ ರೈಲ್ವೆ ನಿಲ್ದಾಣ.
- ಜನಪಾಯೊ ದೇವಸ್ಥಾನ - ಇದು ಮೊವ್‌ದಿಂದ 16 km (10 mi)ರಷ್ಟು ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ 3 (ಭಾರತ) ರಸ್ತೆಯ ಪಕ್ಕದಲ್ಲಿದೆ. ದೇವಸ್ಥಾನವು ಕುಟಿ ಎಂಬ ಗ್ರಾಮದ ಬೆಟ್ಟದ ತುದಿಯಲ್ಲಿದೆ. ಪುರಾಣಗಳ ಪ್ರಕಾರ, ಇದು ಜಮದಗ್ನಿ ಋಷಿ ನೆಲೆಸಿರುವ ಸ್ಥಳವಾಗಿದ್ದು, ಪರುಶುರಾಮನ ತಂದೆಯಾದ ಈತ ಇಲ್ಲಿ ಆಶ್ರಮ ಕಟ್ಟಿದ್ದಾನೆ ಎಂದು ಹೇಳಲಾಗಿದೆ. ದೀಪಾವಳಿಯ ನಂತರದ ಮೊದಲ ಪೂರ್ಣಿಮೆಯಾದ ಕಾರ್ತಿಕ ದಿನದಂದು ಇಲ್ಲಿ ನಡೆಯುವ ಮೇಳಾ (ಜಾತ್ರೆ) ಪ್ರಸಿದ್ಧವಾಗಿದೆ.
- ಬಡಾ ಗಣಪತಿ ದೇವಸ್ಥಾನ
- ಖಜ್ರಾನಾದ ಗಣೇಶ ದೇವಸ್ಥಾನ - ಗಣೇಶನ ದೇವಸ್ಥಾನ
- ರಣಜಿತ್ ಹನುಮಾನ್ ದೇವಸ್ಥಾನ
- ಅನ್ನಪೂರ್ಣ ದೇವಸ್ಥಾನ - ಇದು ಅತ್ಯಂತ ಸುಂದರ ಹಿಂದೂ ದೇವಸ್ಥಾನವಾಗಿದ್ದು, ಪ್ರಧಾನ ದೇವತೆ ಅನ್ನಪೂರ್ಣ ಇಲ್ಲಿದ್ದಾಳೆ. ಈ ದೇವಸ್ಥಾನವು ನಗರದ ಪಶ್ಚಿಮ ಭಾಗದಲ್ಲಿದೆ.
- ಕಜ್ಲಿಗಡ್ - ಖಂಡ್ವಾ ರಸ್ತೆಯಲ್ಲಿ ಖಂಡ್ವಾ ಕಡೆಗೆ ಸುಮಾರು 20 km (12 mi)ರಷ್ಟು ದೂರದಲ್ಲಿದೆ. ಇದು ಪುರಾತನ ಹಾಳುಬಿದ್ದ ಚಿಕ್ಕ ಕೋಟೆಯಾಗಿದ್ದು, ಇದರ ಬಳಿ ಸುಂದರ ಕಣಿವೆ ಮತ್ತು ಚಿಕ್ಕ ಜಲಪಾತ ಇದೆ. ಈ ಸ್ಥಳಕ್ಕೆ ಮಳೆಗಾಲ ಮತ್ತು ಅದರ ನಂತರದ ಸಮಯದಲ್ಲಿ ಭೇಟಿ ನೀಡುವುದು ಉತ್ತಮ. ಒಂದು ದಿನದ ವಿಹಾರಕ್ಕೆ ಈ ಸ್ಥಳವು ಸೂಕ್ತವಾಗಿದ್ದರೂ ಸಹ, ಇಂದೋರ್‌ನಲ್ಲಿರುವ ಹಲವರಿಗೆ ಇದರ ಬಗ್ಗೆ ತಿಳಿದಿಲ್ಲ.[ಸೂಕ್ತ ಉಲ್ಲೇಖನ ಬೇಕು]
- ತಿಂಚಾ ಜಲಪಾತಗಳು - ಇದು ಕಜ್ಲಿಗಡ್‌ನ ಹತ್ತಿರದಲ್ಲಿದೆ. ಇದು ಸಿಮ್ರೊಲ್ ಹತ್ತಿರದ ಸುಂದರ ಜಲಪಾತವಾಗಿದೆ. ಇದು ಉಸಿರು ಬಿಗಿಹಿಡಿಯುವಂತಹ ಮತ್ತು ನಿಬ್ಬೆರಗಾಗಿಸುವ ಸೌಂದರ್ಯ ಹೊಂದಿದ್ದು, ಮಳೆಗಾಲ ಮತ್ತು ನಂತರದ ಸಮಯದಲ್ಲಿ ನೋಡಲೇ ಬೇಕಾದ ಸ್ಥಳವಾಗಿದೆ.
- ಪ್ರಾಣಿ ಸಂಗ್ರಹಾಲಯ - ಇಂದೋರ್‌ನಲ್ಲಿರುವ ಪ್ರಾಣಿಸಂಗ್ರಹಾಲಯವು ಪ್ರಾಣಿಗಳ ಅನನ್ಯ ಸಾಕಾಣಿಕೆ, ರಕ್ಷಣೆಗೆ ಮತ್ತು ವಿವಿಧ ಪ್ರಾಣಿಗಳಿಗೆ ಪ್ರಖ್ಯಾತವಾಗಿದೆ.
- ಟ್ರೇಜರ್ ಐಲ್ಯಾಂಡ್ - ಇದು ಮಧ್ಯಪ್ರದೇಶದ ಮೊದಲ ಶಾಪಿಂಗ್ ಮಾಲ್ ಆಗಿದೆ. ಇದು ಬಹುಮಹಡಿ ಭವ್ಯ ಕಟ್ಟಡ ಹೊಂದಿದ್ದು, ಇದರಲ್ಲಿ ಹಲವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಬ್ರ್ಯಾಂಡ್‌ಗಳ ಮಳಿಗೆ ಮತ್ತು ಶೋರೂಮ್‌ಗಳನ್ನು ಹೊಂದಿದೆ. ಅಲ್ಲದೆ ಹಲವು ಉಪಾಹಾರ ಗೃಹಗಳು, ಬಾರ್ ಮತ್ತು ಮಲ್ಟೀಪ್ಲೆಕ್ಸ್ ಅನ್ನು (PVR ಸಿನಿಮಾಸ್) ಹೊಂದಿದೆ.
'"ಸೆಂಟ್ರಲ್ ಮಾಲ್" Bold text- ಇದು RNT ಮಾರ್ಗದಲ್ಲಿರುವ ಅತ್ಯಂತ ದೊಡ್ಡ ಭವ್ಯ ಮಾರಾಟದ (Retail) ಕೇಂದ್ರಸ್ಥಾನವಾಗಿದೆ. ಅಲ್ಲದೆ ಇದು INOX ಮಲ್ಟೀಪ್ಲೆಕ್ಸ್, ಪಬ್, ಮಕ್ಕಳಿಗಾಗಿ ವಿನೋದ ಮತ್ತು ಆಟದ ವಲಯ, ವಿಶಾಲ ವಾಹನನಿಲುಗಡೆ ಸ್ಥಳ ಮತ್ತು ಎಲ್ಲಾ ಅಂತರರಾಷ್ಟ್ರೀಯ ಬ್ರ್ಯಾಂಡ್ ಮಳಿಗೆಗಳನ್ನು ಹೊಂದಿದೆ.
ಕೆಲ ತುಣುಕುಗಳು
ಬದಲಾಯಿಸಿ- ಇಂದೋರ್‌ನಲ್ಲಿರುವ ಲಾಲ್‌ಬಾಗ್ ಅರಮನೆ ದ್ವಾರವು ಲಂಡನ್‌ನಲ್ಲಿರುವ ಬಂಕಿಂಗ್‌ಹ್ಯಾಮ್ ಅರಮನೆಯ ದ್ವಾರಗಳ ಪ್ರತಿಕೃತಿಯಾಗಿದೆ. ಅದನ್ನು ಇಂಗ್ಲೆಂಡ್‌ನಲ್ಲಿ ಸಿದ್ದಪಡಿಸಿ, ನಂತರ ಇಂದೋರ್‌ಗೆ ತರಲಾಯಿತು.
- ಇಂದೋರ್‌ನಲ್ಲಿ "ವಿಜಯ್ ಬಲ್ಲಾ" ಎನ್ನುವ ಕಾಂಕ್ರಿಟ್‌ನಿಂದ ನಿರ್ಮಿಸಿದ ದೊಡ್ಡ ಕ್ರಿಕೆಟ್ ಬ್ಯಾಟ್ ಇದ್ದು, ಅದರಲ್ಲಿ ೧೯೭೧ರಲ್ಲಿ ನಡೆದ ಕ್ರಿಕೆಟ್ ಸರಣಿಯಲ್ಲಿ ಗ್ಯಾರಿ ಸೋಬರ್ಸ್' ನಾಯಕತ್ವದ ವೆಸ್ಟ್ ಇಂಡೀಸ್ ತಂಡದ ವಿರುದ್ದ ಗೆದ್ದ ಭಾರತ ತಂಡದ ಆಟಗಾರರ ಹೆಸರನ್ನು ಬರೆಯಲಾಗಿದೆ.
- ಬಡಾ ಗಣಪತಿಪ್ರದೇಶದಲ್ಲಿರುವ 40 feet (12 m) ದೊಡ್ಡ ಮೂರ್ತಿಯು ವಿಶ್ವದ ಅತಿ ದೊಡ್ಡ ಗಣೇಶನ ವಿಗ್ರಹವಾಗಿದೆ.
- ರಾಜಾ ರಾಮಣ್ಣ ಸೆಂಟರ್ ಫಾರ್ ಅಡ್ವಾನ್ಸ್‌ಡ್ ಟೆಕ್ನಾಲಜಿ (ಮೊದಲು CAT ಎಂದು ಹೆಸರಾಗಿದ್ದ) ಸಂಸ್ಥೆಯು ಭಾರತ ಸರಕಾರದ ಅಣುಶಕ್ತಿ ಇಲಾಖೆಯಡಿಯಲ್ಲಿ ಕೆಲಸಮಾಡುವ ಲೇಸರ್ ಮತ್ತು ವೇಗವರ್ಧಕ ತಂತ್ರಜ್ಞಾನದ ಬಗ್ಗೆ ಸಂಶೋಧನೆ ನಡೆಸುವ ಭಾರತದ ಪ್ರಮುಖ ಸಂಶೋಧನಾ ಕೇಂದ್ರವಾಗಿದೆ.
- ಪ್ರಖ್ಯಾತ ರೇಡಿಯೊ ಮಿರ್ಚಿ ೯೮.೩ (ನಂತರ ೯೮.೪) FM ಮೊದಲ ಬಾರಿಗೆ ಇಂದೋರ್‌ನಲ್ಲಿ ಪ್ರಾರಂಭವಾಗಿ, ನಂತರ ಭಾರತದ ೪ ಮೆಟ್ರೊ ನಗರಗಳು ಸೇರಿದಂತೆ ಉಳಿದ ಹತ್ತು ನಗರಗಳಿಗೆ ವ್ಯಾಪಿಸಿತು.
- ೧೯೯೦ ದಶಕದ ಪ್ರಾರಂಭದವರೆಗೂ, ಇಂದೋರ್‌ನಲ್ಲಿ ಬಾಲಿವುಡ್ ಚಲನಚಿತ್ರಗಳು ಗುರುವಾರ ಬಿಡುಗಡೆಯಾಗುತ್ತಿದ್ದರೆ, ದೇಶದ ಉಳಿದ ಭಾಗಗಳಲ್ಲಿ ಶುಕ್ರವಾರ ಬಿಡುಗಡೆಯಾಗುತ್ತಿದ್ದವು.
- ಏರ್‌ಟೆಲ್ ಕಂಪನಿಯು ಟಚ್‌ಟೆಲ್ ಎಂಬ ಹೆಸರಿನ ಖಾಸಗಿ ಸ್ಥಿರ ದೂರವಾಣಿ ಸೇವೆಯನ್ನು ಭಾರತದಲ್ಲಿ ಮೊದಲ ಬಾರಿಗೆ ಇಂದೋರ್‌ನಲ್ಲಿ ಬಿಡುಗಡೆ ಮಾಡಿತು.
- ಬಾಂಬೆ ನಂತರ, ಇಂದೋರ್ ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಹತ್ತಿ ಗಿರಣಿಗಳನ್ನು ಹೊಂದಿದೆ. ಹಾಗಾಗಿ ಇದನ್ನು ಮಿನಿ-ಬಾಂಬೆ ಎಂದು ಕರೆಯುತ್ತಾರೆ.
- ೨೦೦೭ರಲ್ಲಿ ವಾಸ್ತುವಿನ್ಯಾಸಕರಾದ ಹಿಮಾಂಶು ದುಡ್ವಾಕರ್ ಮತ್ತು ಶ್ರೇಯಾ ಭಾರ್ಗವರವರು ೨೫೦ ವರ್ಷಗಳ ಹಿಂದೆ ಇಂದೋರ್‌ನ ರಾಜ್‌ವಾಡ ನಿರ್ಮಿಸಲು ಬಳಸಿದ ಶೈಲಿ, ವಸ್ತುಗಳು ಮತ್ತು ವಿಧಾನವನ್ನು, ಅದರ ಪುನರ್ನಿರ್ಮಾಣ ಕಾರ್ಯದಲ್ಲಿ ಕರಾರುವಕ್ಕಾಗಿ ಬಳಸಿಕೊಳ್ಳಲಾಗಿದೆ. ಹೀಗೆ ಇದು ಭಾರತದಲ್ಲಿ ಪುನರ್ನಿರ್ಮಿಸಿದ ಏಕೈಕ ಐತಿಹಾಸಿಕ ಕಟ್ಟಡವಾಗಿದೆ.
- IIM ಮತ್ತು IIT ಎರಡನ್ನು ಹೊಂದಿರು ಭಾರತದ ಏಕಮಾತ್ರ ನಗರ
- ಇಂದೋರ್‌ನ್ನು "ಮಿನಿ ಬಾಂಬೆ" ಎಂದು ಕರೆಯುತ್ತಾರೆ
ಚಿತ್ರಸಂಪುಟ
ಬದಲಾಯಿಸಿ-
ಇಂದೋರ್‌ನ ರಾಜ್‌ವಾಡ ಅರಮನೆ
-
ಕೃಷ್ಣಾಪುರ ಛತ್ರಿ
-
ಕೃಷ್ಣಾಪುರ ಛತ್ರಿಯಲ್ಲಿ ಶಿಲ್ಪಾಕೃತಿಗಳು
-
ಕೃಷ್ಣಾಪುರ ಛತ್ರಿಯ ಒಳನೋಟ
-
ಕೃಷ್ಣಾಪುರ ಛತ್ರಿ ಅಲಂಕಾರಿಕ ಕೆತ್ತನೆಗಳು
-
ಕೃಷ್ಣಾಪುರ ಛತ್ರಿಯಲ್ಲಿರುವ ಕಲಾಕೃತಿಗಳಿಂದ ಕೂಡಿದ ಕಂಬಗಳು
-
ಕೃಷ್ಣಾಪುರ ಛತ್ರಿಯಲ್ಲಿರುವ ಜಟಿಲವಾದ ಶಿಲ್ಪಾಕೃತಿಗಳು
-
ಬಡಾ ಗಣಪತಿ-ಅತಿ ದೊಡ್ಡ ಗಣೇಶನ ವಿಗ್ರಹ
-
ವಿಜಯ್ ಬಲ್ಲಾ
-
ಮಧ್ಯಪ್ರದೇಶದಲ್ಲಿ ಮೊದಲ ಟ್ರಿಸರಿ ಐಲ್ಯಾಂಡ್ ಮಾಲ್
ಇವನ್ನೂ ಗಮನಿಸಿ
ಬದಲಾಯಿಸಿಆಕರಗಳು
ಬದಲಾಯಿಸಿThis article includes a list of references, but its sources remain unclear because it has insufficient inline citations. (September 2009) |
- ↑ Indore Population. Census of India. Retrieved ೧೬ August ೨೦೦೯.
- ↑ [೧] World Gazetteer. Retrieved ೨೧ September ೨೦೦೯
- ↑ "MP elections: Citizens of Bhopal want an Indore". CNN IBN. 2009-11-23. Archived from the original on 2009-07-31. Retrieved ೨೦೦೯-೦೯-೧೩.
{{cite news}}
: Check date values in:|accessdate=
(help) - ↑ "Now, Indore to become Indur". Online Edition of The Times of India, dated 2006-12-18. Retrieved 2009-09-21.
- ↑ ಮೇಜರ್ ಜನರಲ್ ಸರ್ ಜಾನ್ ಮಾಲ್ಕೊಲ್ಮ್, ಸೆಂಟ್ರಲ್ ಇಂಡಿಯಾ, ಭಾಗ I , ಪುಟಗಳು ೬೮-೭೦
- ↑ ಮೇಜರ್ ಜನರಲ್ ಸರ್ ಜಾನ್ ಮಾಲ್ಕೊಲ್ಮ್, ಮೆಮೊರಿಸ್ ಆಫ್ ಸೆಂಟ್ರಲ್ ಇಂಡಿಯಾ, ಸಂ. I. ಪುಟಗಳು ೯೪-೯೫
- ↑ ಮೇಜರ್ ಜನರಲ್ ಸರ್ ಜಾನ್ ಮಾಲ್ಕೊಲ್ಮ್, ಮೆಮೊರಿಸ್ ಆಫ್ ಮಾಲ್ವಾ (೧೯೧೨)
- ↑ ಪ್ಯಾಟ್ರಿಕ್ ಗೆಡ್ಡಸ್, ಎ ರಿಪೋರ್ಟ್ ಟು ದಿ ದರ್ಬಾರ್ ಆಫ್ ಇಂದೋರ್ ನ ಭಾಗ ೧ ಇಂದೋರ್:ಹಿಸ್ಟೊರಿಕ್ ಡೆವಲಪ್‌ಮೆಂಟ್" (೧೯೧೮)ನಲ್ಲಿ "ಸಿಟಿ ಡೆವಲಪ್‌ಮೆಂಟ್".
- ↑ ಸುಖ ಸಂಪತ್ತಿ ರಾಯ್ ಭಂಡಾರಿ, ಹಿಸ್ಟರಿ ಆಫ್ ಇಂಡಿಯನ್ ಸ್ಟೇಟ್ಸ್, ರಾಜ್ಯ ಮಂಡಲ್ ಬುಕ್ ಪಬ್ಲಿಷಿಂಗ್ ಹೌಸ್ (೧೯೨೭)
- ↑ "ಮಾಲ್ವಾ ಇನ್ ಟ್ರಾನ್ಸಿಷನ್ ಎ ಸೆಂಚುರಿ ಆಫ್ ಅನಾರ್ಕಿ", ದಿ ಪಸ್ಟ್ ಫೇಸ್ ೧೬೯೮-೧೭೬೫ ಬೈ ರಘುಬಿರ್ ಸಿಂಗ್ ಆಫ್ ಸಿತಮೌ. ವರ್ಷ ೧೯೩೬.
- ↑ "ದಿ ಇಂದೋರ್ ಸ್ಟೇಟ್ ಗೆಜಿಟಿಯರ್". ಸಂಪುಟ ೧-ಮಹಾರಾಜ ಹೋಳ್ಕರರ ಸರಕಾರದ ಅಧಿಕಾರದಡಿಯಲ್ಲಿ ಮುದ್ರಿಸಲಾಗಿದೆ. ಸುಪರಿಂಟೆಂಡೆಂಟ್ ಹೋಳ್ಕರ ಸರಕಾರಿ ಮುದ್ರಣಾಲಯ, ಇಂದೋರ್ ೧೯೩೧.
- ↑ ಮೇಜರ್ ಜನರಲ್ ಸರ್ ಜಾನ್ ಮಾಲ್ಕೊಲ್ಮ್‌ರವರು ಬರೆದ "ಮೆಮೊರಿಸ್ ಆಫ್ ಸೆಂಟ್ರಲ್ ಇಂಡಿಯಾ", ಸಂಪುಟ I. ವರ್ಷ ೧೮೨೩.
- ↑ "ಇಂದೋರ್ ಹೋಳ್ಕರ ಸ್ಟೇಟ್ ಗೆಜಿಟಿಯರ್". ಸಂ.೨೩, ೧೮೭೫.
- ↑ "ಮಾಲ್ವಾ ಸಾಹಿತ್ಯ". ೫ನೇ ವರ್ಷದ ಸಂಚಿಕೆ ಸಂ.೧. ವರ್ಷ ೧೮೫೫.ಇಂದೋರ್
- ↑ ಸರ್ದಾರ್ M.V.ಕೈಬ್‌ರವರ "ದಿ ಮಂಡ್ಲಿಕ್ ಪೇಪರ್ಸ್ ಆಂಡ್ ದಿ ಫ್ಯಾಮಿಲಿ". ೧೯೪೬.
- ↑ ಮಳೆ ಬೀಳುವ ಪ್ರಮಾಣದ ನಕ್ಷೆ - ಎಲಿವೇಷನ್ = 545ಮೀ
- ↑ ೧೭.೦ ೧೭.೧ ಸ್ಟ್ಯಾಟಿಕ್ಸ್ ಆಫ್ ಇಂದೋರ್ Archived 2012-05-13 ವೇಬ್ಯಾಕ್ ಮೆಷಿನ್ ನಲ್ಲಿ.. ಇಂದೋರ್‌ನ ಜಿಲ್ಲಾ ಆಡಳಿತ. ೧೬ ಆಗಷ್ಟ್ ೨೦೦೯ರಂದು ಪರಿಷ್ಕರಿಸಲಾಗಿದೆ.
- ↑ Tiwary, Santosh (1998 -04-01). "Pithampur small enterprises tell a tale of untapped potential". Indian Express. Archived from the original on 2012-01-21. Retrieved ೨೦೦೯-೦೯-೦೧.
{{cite news}}
: Check date values in:|accessdate=
and|date=
(help) - ↑ Trivedi, Shashikant (2004-07-09). "Pithampur units face bleak future". Business Standard. Retrieved ೨೦೦೯-೦೯-೦೧.
{{cite news}}
: Check date values in:|accessdate=
(help) - ↑ "Abhivyakti,". Archived from the original on 2009-05-26. Retrieved 2010-02-23.
- ↑ ಇಂಡಿಯನ್ ಜರ್ನಲ್ ಆಪ್ ಸೈಯನ್ಸ್ ಕಮ್ಯುನಿಕೇಶನ್ (ಸಂಪುಟ ೨/ ಸಂಖ್ಯೆ ೧/ ಜನವರಿ – ಜೂನ್ ೨೦೦೩) http://www.iscos.org/vol೩/rp೧.htm
- ↑ "A record tea party at Indore". Sify. 2008-02-25. Retrieved ೨೦೦೯-೦೯-೧೩.
{{cite news}}
: Check date values in:|accessdate=
(help)
ಹೊರಗಿನ ಕೊಂಡಿಗಳು
ಬದಲಾಯಿಸಿ- ಭಾರತದ ಸರಕಾರದ ಮಾಹಿತಿ ವೆಬ್‌ಸೈಟ್‌ನಲ್ಲಿ ನಗರದ ಪೋರ್ಟಲ್ Archived 2019-07-24 ವೇಬ್ಯಾಕ್ ಮೆಷಿನ್ ನಲ್ಲಿ.
- ಇಂದೋರ್ ಪುರಸಭೆ ವೆಬ್‌ಸೈಟ್ Archived 2018-05-09 ವೇಬ್ಯಾಕ್ ಮೆಷಿನ್ ನಲ್ಲಿ.
- ಇಂದೋರ್ ಪೋಲಿಸ್ ಅಧಿಕೃತ ವೆಬ್‌ಸೈಟ್ Archived 2018-08-27 ವೇಬ್ಯಾಕ್ ಮೆಷಿನ್ ನಲ್ಲಿ.
- ಇಂದೋರ್‌ನ ಉಪಗ್ರಹ ನಕ್ಷೆ
- ಇಂದೋರ್ ಸಮುದಾಯ Archived 2009-11-16 ವೇಬ್ಯಾಕ್ ಮೆಷಿನ್ ನಲ್ಲಿ. ದೊಂದಿಗೆ ಇಂದೋರ್360: ಇಂದೋರ್ ನಗರ ಪೋರ್ಟಲ್