ಬಯಲಾಟದಲ್ಲಿ 'ದೊಡ್ಡಾಟ' ಮತ್ತು 'ಸಣ್ಣಾಟ'ಗಳೆಂದು ಸ್ಥೂಲವಾಗಿ ಎರಡು ಭಾಗ ಮಾಡಿಕೊಳ್ಳಬಹುದು. 'ದೊಡ್ಡಾಟ'ವನ್ನು 'ಮೂಡಲಪಾಯ', 'ಆಟ್ಟದಾಟ', 'ಬೈಲ್ಕತೆ' ಎಂದು ಕರೆಯುತ್ತಾರೆ. ಪೌರಾಣಿಕ ಪ್ರಸಂಗಗಳನ್ನು ಹೊಂದಿರುವ ಈ ಆಟ ರಾತ್ರಿಯೆಲ್ಲಾ ನಡೆದು ಸೂರ್ಯೋದಯದ ವೇಳೆಗೆ ಮುಕ್ತಾಯವಾಗುತ್ತದೆ. ದೊಡ್ಡಾಟಕ್ಕೆ ಮಂಟಪ ಕಟ್ಟುವುದೇ ಒಂದು ದೊಡ್ಡ ವ್ಯವ . ಆಟಕ್ಕೆ ಇನ್ನು ಹತ್ತಿಪ್ಪತ್ತು ದಿನ ಇರವಾಗಲೇ ಆಡುವ ಜಾಗವನ್ನು ಆಯ್ಕೆ ಮಾಡಿ ಅಲ್ಲಿ 'ಹಂದರಗಂಬ'ವೊಂದನ್ನು ನಿಲ್ಲಿಸುತ್ತಾರೆ.ಈ ಕಂಬ ಆಟಕ್ಕೆ ಮು ಚನೆಯಿದ್ದಂತೆ ;ಪ್ರದರ್ಶನಕ್ಕೆ ಪ್ರಚಾರವಿದ್ದಂತೆ ಆಟ ಇನ್ನು ಒಂದೆರಡು ದಿನವಿರುವಾಗ ತಂಡದ ಸದಸ್ಯರೆಲ್ಲ ಸೇರಿ 'ಅಟ್ಟ' ಕಟ್ಟಲು ಪ್ರಾರಂಭಿಸುತ್ತಾರೆ. ಸಾಮಾನ್ಯವಾಗಿ ಊರಿನ ಮಧ್ಯ ಭಾಗದಲ್ಲಿ ಜನ ಹೆಚ್ಚಾಗಿ ಸೇರುವಂತಹ ವಿಶಾಲವಾದ ಬಯಲಿನಲ್ಲೋ ಅಥವಾ ದೇವಸ್ಥಾನದ ಮುಂಭಾಗದಲ್ಲೋ ಬಯಲಾಟದ ಅಟ್ಟ ಕಟ್ಟುತ್ತಾರೆ.ಸಣ್ಣ ಗೂಟಗಳನ್ನು ನೆಟ್ಟು ಅದರ ಮೇಲೆ ಹಲಗೆಗಳನ್ನು ಹರಡಿ ಬಿಗಿದು ಎತ್ತರದ ವೇದಿಕ ಸಿದ್ದ ಮಾಡುತ್ತಾರೆ.ಈ ವೇದಿಕೆ ಸುಮಾರು ೩೦*೪೦ಯಷ್ಟಿರುತ್ತದೆ.ಇದಕ್ಕೆ 'ಮಂತು' ಹಾಕುವುದು ಎಂದು ಹೇಳುತ್ತಾರೆ.ವೇದಿಕೆಯ ಮೇಲೆ ಸುಮಾರು ೧೦ ಮೊಳ ಎತ್ತರದ ಚಪ್ಪರ ಹಾಕಿ ಸುತ್ತ ಮೂರು ಕಡೆಯಿಂದಲೂ ತಗಡು , ಸೋಗೆ ಅಥವಾ ಜಮಖಾನ ಮೊದಲಾದವುಗಳಿಂದ ಮುಚ್ಚುತ್ತಾರೆ.ಚಪ್ಪರದಲ್ಲಿ ಹಿಂದಿನ ಒಂದಿಷ್ಟು ಭಾಗವನ್ನು ಬಣ್ಣ ಹಚ್ಚುವುದಕ್ಕೆ, ವೇಶಭೂಶನ ಹಾಕಿಕೊಳ್ಳುವುದಕ್ಕೆ,, ಬಿಟ್ಟುಕೊಂಡಿರುತ್ತಾರೆ ಇದಕ್ಕೆ 'ಚೌಕಿ' ಎನ್ನು ತ್ತಾರೆ.ಮಂಟಪದ ಮುಖಭಾಗಕ್ಕೊಂದು ಹಿಂದಕ್ಕೊಂದು ಪರದೆ ಇರುತ್ತದೆ ರಾತ್ರಿ ಊಟ ಮುಗಿದ ಮೇಲೆ ಸುಮಾರು ೧೦ಗಂಟೆಗೆ ವೇಳೆಗೆ ಬಯಲಾಟ ಆರಾಂಭವಾಗುವುದು ರಂಗದ ಮೇಲೆ ಭಾಗವತರು ಮತ್ತು ಪಕ್ಕವಾದ್ಯ ಹಾಗೂ ಮೇಳದವರು ಬಂದು ನಿಂತುಕೊಂಡು "ರಂಗಪೂಜೆ" ಮಾಡಿ,ಕಾಯಿ ಒಡೆಯುವರು .ನಂತರ ಮುಂದಿನ ಪರದೆ {ಇದನ್ನು ಅಂಕಪರದೆ ಎನ್ನುತ್ತಾರೆ} ಮೇಲೇಳುತ್ತಾದೆ. ಗಣಸ್ತೂತಿಯೊಂದುಗೆ ಆಟ ಆರಂಭವಾಗುತ್ತಾದೆ .ಬಾಲಗಣಪತಿ ಹಾಗೂ ಶಾರದಾ ವೇಷಧಾಧಾರಿಗಳನ್ನು ರಂಗದ ಮೇಲೆ ಕರೆತಂದು ಪೂಜೆಸಿ,ಆರತಿ ಬೆಳಗಿ ಅನುಗ್ರಹ ಬೇಡಿದಂತಹ ಕತೆ ನಡೆಯುತ್ತದೆ .ಪ್ರಮುಖ ಕತೆಗಾರನಾದ ಭಾಗವತನು ಕ್ಯೆಯಲ್ಲಿ ತಾಳ ಹಿಡಿದಿರತ್ತಾನೆ .ಈತನಿಗೆ ದನಿಗೂಡಿಸಲು ,ಅಲಾಪನೆ ಗೈಯಲು ಸಹಾಯಕರಾಗಿ ಒಬ್ಬಿಬ್ಬರು ಮೇಳದವರಿರುತ್ತಾರೆ. ಮೃದಂಗ,ಹಾರ್ಮೋನಿಯಂ ವಾದ್ಯ ಗಾರರು ಜೊತೆಗಿರುತ್ತಾರೆ .ಬಯಲಾಟದಲ್ಲಿ ವಾದ್ಯವಿಷೇವೆಂದರೆ ಮುಖ {ವೀಣೆ}ವೇಣಿ ಈ ವಾದ್ಯವು ವೀರ ಕರುಣ, ಶೃಂಗಾರಾದಿ ರಸಗಳ ಅಭಿವ್ಯಕ್ತಿಗೆ ವಿಶಿಷ್ಟವಾದ ಹಿನ್ನೆಲೆಯನ್ನು ಒದಗಿಸುತ್ತದೆ ಕಥಾ ಸನ್ನಿವೇಶಗಳನ್ನು ಹಾಡುವ ಭಾಗವತರಿಂದ ಪ್ರತಿಯೊಂದು ಪಾತ್ರ ಬಂದಾಗಲೂ ಅದರ ವರ್ಣನೆ ನಡೆಯುತ್ತದೆ ವೇದಿಕೆಯ ಮಧ್ಯ ಭಾಗಕ್ಕೆ ಬರುವ ಪಾತ್ರಧಾರಿಗಳು ಭಾಗವತರ ಹಾಡಿಗೆ ತಕ್ಕಂತೆ ಕುಣಿಯುತ್ತಾರೆ . ಮಧ್ಯೆ ಮಧ್ಯೆ ಕಲಾವಿದರೇ ಹಲಹಲ ,ಬಾಪ್ಪರೇ ಶಹಬಾಸ್, ಹುರ್ ಭಲಾ ಶಭಾಸ್ ಎಂದು ಹೇಳುತ್ತಿರುತ್ತಾರೆ ಪಾತ್ರ ಪ್ರವೇಶದ ಈ ಕುಣಿತದ ನಂತರ ಭಾಗವಂತರು ಹನುಮನಾಯಕನನ್ನು ಮೊದಲು ಕರೆಯುತ್ತಾರೆ .ಇವನಿಗೆ 'ಕೋಡಂಗಿ ','ಸಾರಥಿ ,'ಚಾರಕ'ಎಂಬ ಹೆಸರುಗಳೂ ಇವೆ'.ಇವನ ವೇಷಭೂಷಣ ಪ್ರೇಕ್ಷಕರನ್ನು ನಕ್ಕುನಲಿಯುವಂತೆ ಮಾಡುತ್ತವೆ .ತಲೆಗೆ ಕಟ್ಟಿದ ಬಟ್ಟೆ ,ಅಥವಾ ಬಿದಿರಿನಿಂದ ಮಡಿದ ಕುಲಾವಿ, ಮುಖದಲ್ಲಿ ಅಲ್ಲಲ್ಲಿ ಬಿಳಿಯ ಚುಕ್ಕೆಗಳು, ಕೋರೆಮೀಸೆ, ಇಜಾರ, ಕಾಲಿಗೆ ಗೆಜ್ಜೆ , ಕೈಯಲ್ಲಿ ಕೋಲು. ಇವು ಕೋಡಂಗಿಯ ವೇಷಭೂಷಣಗಳು.


ಭಾಗವತರು ಕೂಗಿದ ತಕ್ಷಣ ಆತ ಒಳಗಿನಿಂದಲೇ ಓರಿ ಎನ್ನುತ್ತಾನೆ . 'ಸಭೆಗೆ ಹೊಸಬರು ಬಂದಿದ್ದಾರೆ; ಅವರನ್ನು ವಿಚಾರಿಸು ಬಾ' ಎಂದ ಭಾಗವತರು ಮಾತಿಗೆ ಒಳಗಿನಿಂದಲೇ 'ಕೋಣ ಈದೈತೆ ಹಗ್ಗ ಹಾಕಿ ಬರ್ತ್ತೀನಿ' ಎಂಬ ಹಾಸ್ಯ ನುಡಿಯಾಡಿ ಪ್ರೇಕ್ಷಕರನ್ನು ನಗಿಸಿ ನಂತರ ಪ್ರವೇಶಿಸುತ್ತಾನೆ.ಬಯಲಾಟದಲ್ಲಿ ಪೌರಾಣಿಕ ಕಥೆಗಳಾದ ರಾಮಾಯಣ, ಮಹಾಭಾರತದಿಂದ ಆರಿಸಿಕೊಂಡ ಪ್ರಸಂಗಗಳೇ ಹೆಚ್ಚು ಕುರುಕ್ಷೇತ್ರ , ಕೃಷ್ಣಸಂಧಾನ ,ಸುಗಂಧ ಪುಷ್ಪಹರಣ,ವಿರಾಟ ಪರ್ವ, ಕರ್ಣಪರ್ವ, ಸುಧನ್ವಾರ್ಜನ , ನ,ತಾರಕಾಸುರ ವಧೆ, ವೀರ ಅಭಿಮನ್ಯು, ಆಶ್ವಮೇಧಯಾಗ, ವಾಲಿ-ಸುಗ್ರೀವ ಕಾಳಗ, ದ್ರೌಪದೀ ವಸ್ತ್ರಾಪಹರಣ, ರತಿಕಲ್ಯಾಣ, ಲವಕುಶರ ಕಾಳಗ, ತಾಮ್ರಧ್ವಜನ ಕಾಳಗ, ಅಹಿರಾವಣ, ಮಹಿರಾವಣ, ಶ್ವೇತ ಚರಿತ್ರೆ, ಭೀಮಾರ್ಜುನರ ಯುದ್ದ, ಕರ್ಣಾರ್ಜುನರ ಕಾಳಗ, ಕಲಾವತಿ ಸ್ವಯಂವರ, ವೃತ್ತಪಾಲಕರಾಜ, ದುರ್ಗಾಸುರನ ಕಾಳಗ, ಭೀಷ್ಮಪರ್ವ, ಸುಭದ್ರಾಕಲ್ಯಾಣ, ಭಕ್ತ ಮಾರ್ಕಂಡೇಯ, ಸತ್ಯ ಹರಿಶ್ಚಂದ್ರ, ಇಂದ್ರಜಿತು ಕಾಳಗ, ಹಿಡಂಬಿ ಕಲ್ಯಾಣ, ಊರ್ವಶಿ, ರಾಮಾಂಜನೇಯ ಯುದ್ದ , ಲಂಕಾದಹನ, ಜಲಂಧರನ ಕಾಳಗ, ಸಾನಂದ ಗಣೇಶ, ಪಾಂಡುವಿಜಯ, ಕರಿಭಂಟನ ಕಾಳಗ, ಚಂದ್ರಹಾಸ, ವಿಕ್ರಮರ್ಜುನ ಕಥೆ, ಕನಕಾಂಗಿ ಕಲ್ಯಾಣ,ನಿಕುಂಭನೀ ಯಾಗ,ಬಾಣಾಸುರನ ಕಾಳಗ, ಸೇತಾಪಹರಣ್, ಮದನಸುಂದರಿ, ಬಾಣಾಸುರನಗ ಕಾಳಗ, ಲಂಕಾದಹನ, ಅಲ್ಲಮಪ್ರಭು, ಪ್ರಮೇಳ, ಕರಿಭ್ಂಟನ ಕಾಳಗ ,ಇತ್ಯಾದಿ ಆಟಗಳನ್ನು ಆಡುತ್ತಾರೆ.

"https://kn.wikipedia.org/w/index.php?title=ದೊಡ್ಡಾಟ&oldid=809365" ಇಂದ ಪಡೆಯಲ್ಪಟ್ಟಿದೆ