ನವಿಲು
ನವಿಲು ಫಾಸಿನಿಡೆ ಕುಟುಂಬಕ್ಕೆ ಸೇರಿದ ಒಂದು ಹಕ್ಕಿ[೧]. ಇದು ಭಾರತದ ರಾಷ್ಟ್ರೀಯ ಪಕ್ಷಿ (National Bird)[೨] . ಹಾವೇರಿ ಜಿಲ್ಲೆಯ ಬಂಕಾಪುರದಲ್ಲಿ ನವಿಧಾಮವಿದೆ
ನವಿಲುಗಳಲ್ಲಿ ಮೂರು ವಿಧಸಂಪಾದಿಸಿ
- ಭಾರತೀಯ ನವಿಲು, Pavo cristatus
- ಹಸಿರು ನವಿಲು, Pavo muticus
- ಕಾಂಗೋ ನವಿಲು, Afropavo congolensis.[೩] :
- ನವಿಲುಗಳು ಭಾರತದ ಮತ್ತು ಆಗ್ನೇಯ ಏಷಿಯಾದ ಕಾಡುಗಳಲ್ಲಿ ಕಂಡು ಬರುತ್ತವೆ. ಗಂಡುಗಳಿಗೆ ಬಾಲದ ಗರಿಗಳು ಹೊಳೆಯುವ ಬಣ್ಣದಿಂದ ಕೂಡಿದ್ದು, ನೋಡಲು ಆಕರ್ಷಕ ವಾಗಿರುತ್ತವೆ.
ಲಕ್ಷಣಗಳುಸಂಪಾದಿಸಿ
- ಗಂಡು ನವಿಲು ಕಾಮನ ಬಿಲ್ಲಿನ ಬಣ್ಣಗಳಂತೆ ಆಕರ್ಷಕವಾದ ಗರಿಗಳನ್ನು ಹೊಂದಿರುತ್ತದೆ. ಅವುಗಳಲ್ಲಿ ಮುಖ್ಯವಾಗಿ ನೀಲಿ ಹಸಿರು ಮಿಶ್ರಿತ ಅಥವಾ ಹೊಳಪಿನ ಹಸಿರು ಬಣ್ಣದ ಗರಿ ಗಳನ್ನು ಹೊಂದಿರುತ್ತದೆ. ಉದ್ದನೆಯ ಗರಿಗಳ ಗುಚ್ಛವು ಹೃದಯದ ಆಕಾರದಲ್ಲಿ ಕೊನೆಗೊಂಡಿರುತ್ತದೆ. ಅಲ್ಲದೆ ಅದರ ಮಧ್ಯದಲ್ಲಿ ಕಣ್ಣಿನ ಚಿತ್ರವಿದೆ
- ಇಲ್ಲವೇ ಮಿಲನದ ಸಮಯದಲ್ಲಿ ಬೇರೆ ಹೆಣ್ಣುಗಳನ್ನು ಗದರಿಸಿ ಓಡಿಸಲೂ ಬಳಸುತ್ತದೆ. ಭಾರತೀಯ ನವಿಲು ಮುಖ್ಯವಾಗಿ ಹೊಳಪಿನ ನೀಲಿ ಬಣ್ಣದ ಗರಿಗಳನ್ನು ಹೊಂದಿರುತ್ತದೆ. ಅಲ್ಲದೆ ಗರಿಗಳು ತುದಿಯಲ್ಲಿ ಡೊಂಕಾಗಿರುವ ತಂತಿಯಾಕಾರದಲ್ಲಿರುತ್ತವೆ. ಹೆಣ್ಣು ನವಿಲು ಹಸಿರು ಬಣ್ಣದ ಕುತ್ತಿಗೆ ಹಾಗೂ ಮಸುಕು ಕಂದು ಬಣ್ಣದ ಚಿಕ್ಕ ಗರಿಗಳ ಗುಚ್ಛವನ್ನು ಹೊಂದಿರುತ್ತದೆ.
- ನೋಡಲು ಹಸಿರು ನವಿಲು ಭಾರತೀಯ ನವಿಲಿಗಿಂತ ಬೇರೆಯಾಗಿರುತ್ತದೆ. ಗಂಡು ಹಸಿರು ನವಿಲು ಹಸಿರು ಮತ್ತು ಬಂಗಾರದ ಬಣ್ಣಗಳಿರುವ ಗರಿಗಳನ್ನು ಹೊಂದಿದ್ದು, ನೆಟ್ಟಗಿರುವ ಮುಕುಟವನ್ನು ಹೊಂದಿರುತ್ತದೆ. ಅಲ್ಲದೆ ಸಣ್ಣ ಗರಿಗಳನ್ನು ಹೊರತು ಪಡಿಸಿದರೆ ಹೆಣ್ಣು ನವಿಲು ಗಂಡು ನವಿಲಂತೆಯೇ ಇರುತ್ತದೆ. ಮತ್ತು ಹೆಣ್ಣು ನವಿಲಿನ ಗರಿಗಳ ಬಣ್ಣದ ತೀಕ್ಷ್ಣತೆ ಗಂಡು ನವಿಲಿಗಿಂತಾ ಕಡಿಮೆ ಇರುತ್ತದೆ. ಆದರೆ ಗಂಡು ಮರಿ ನವಿಲು ಮತ್ತು ಬೆಳೆದ ಹೆಣ್ಣು ನವಿಲು ಒಂದೇ ತೆರನಾಗಿ ಕಾಣುತ್ತವೆ.
- ಕಾಂಗೋ ನವಿಲು ಗಾಢವಾದ ನೀಲಿ, ಅದಿರಿನ ಹಸಿರು ಮತ್ತು ಸ್ವಲ್ಪ ನೇರಳೆ ಬಣ್ಣಗಳ ಮಿಶ್ರಣವಿರುವ ಗರಿಗಳ ಗುಚ್ಛವನ್ನು ಹೊಂದಿರುತ್ತದೆ. ಕೆಂಬಣ್ಣದ ಕತ್ತು, ಬೂದು ಬಣ್ಣದ ಕಾಲು ೧೪ ಸಣ್ಣ ಕಪ್ಪು ಗರಿಗಳ ಗುಚ್ಛವನ್ನೂ ಹೊಂದಿರುತ್ತದೆ. ಅಲ್ಲದೆ ನೇರವಾದ ಬಿಳಿಯ ಕೂದಲಿನಂತಹಾ ಮುಕುಟವನ್ನು ಹೊಂದಿರುತ್ತದೆ. ಹೆಣ್ಣು ನವಿಲು ಸಾಧಾರಣವಾಗಿ ಕಂದು ಬಣ್ಣವಿದ್ದು, ಕಪ್ಪಾದ ಹೊಟ್ಟೆಯನ್ನು ಹೊಂದಿರುತ್ತದೆ. ಅದಿರು ಹಸಿರಿನ ಬೆನ್ನು ಮತ್ತು ಸಣ್ಣ ಬಾದಾಮಿಯಾಕಾರದ ಕಂದು ಮುಕುಟವನ್ನು ಹೊಂದಿರುತ್ತದೆ. ಬೇರೆ ನವಿಲುಗಳಿಗಿಂತ ಕಾಂಗೋ ನವಿಲುಗಳು ತುಂಬಾ ಆಕರ್ಷಣೀಯವಾಗಿರುತ್ತವೆ.
ಆವಾಸಸಂಪಾದಿಸಿ
ಹೆಚ್ಚಾಗಿ ಪರ್ಣಪಾತಿ ಕಾಡುಗಳು, ಕುರುಚಲು ಕಾಡು, ಮೈದಾನ ಪ್ರದೇಶಗಳಲ್ಲಿ ಕಂಡು ಬರುತ್ತವೆ. ನೆಲ ಹಾಗೂ ಮರಗಳಲ್ಲಿ ವಾಸಿಸುತ್ತವೆ. ನೆಲಮಟ್ಟದ ಪೊದೆಗಳಲ್ಲಿ ಗೂಡು ಕಟ್ಟುತ್ತವೆ.
ಸಂತಾನೋತ್ಪತ್ತಿಸಂಪಾದಿಸಿ
ಜನವರಿಯಿಂದ ಆಕ್ಟೋಬರ್ ನಡುವೆ. ೪ರಿಂದ ೭ ಕೆನೆಬಣ್ಣದ ಮೊಟ್ಟೆ ಗಳನ್ನಿಡುತ್ತವೆ. ಸುಮಾರು ೨೯ ದಿನ ಕಾವುಕೊಟ್ಟು ಮರಿ ಮಾಡುತ್ತವೆ . [೪] .
ಚಿತ್ರಶಾಲೆಸಂಪಾದಿಸಿ
ಹೆಚ್ಚಿನ ಓದಿಗೆ ನೋಡಿಸಂಪಾದಿಸಿ
ಉಲ್ಲೇಖಸಂಪಾದಿಸಿ
- ↑ http://www.indiajungletours.com/indian-peacock. html
- ↑ http://www. indif.com/ india/ national_ symbols/national_bird.asp
- ↑ http:// bioexp edition.com/peacock/