ಭಾರತೀಯ - ಭಾರತ ದೇಶದ ನಾಗರಿಕರನ್ನು ಭಾರತೀಯರೆನ್ನುವರು. ಹಾಗೆಯೇ, ಭಾರತ ದೇಶದ ವ್ಯಾಪ್ತಿಗೊಳಪಡುವ ಸ್ಥಳಗಳನ್ನು ಭಾರತೀಯ ಸ್ಥಳಗಳು ಎನ್ನುವರು. ಭಾರತ ಸರಕಾರದ ಅಧೀನದಲ್ಲಿರುವ ಪಡೆಗಳಿಗೆ, ಸಂಘ ಸಂಸ್ಥೆಗಳಿಗೆ, ಕೂಡ ಭಾರತೀಯ ಎನ್ನುವರು. ಉದಾ: ಭಾರತೀಯ ನೌಕಾಪಡೆ, ಭಾರತೀಯ ಸೈನ್ಯ, ಭಾರತೀಯ ವಾಯುಸೇನೆ

ಭಾರತದ ಅಧಿಕೃತ ಭಾಷೆಗಳಿಗೆ, ಭಾರತೀಯ ಭಾಷೆಗಳು ಎನ್ನುವರು.

ಭಾರತದಲ್ಲೇ ಹುಟ್ಟಿದವರು ಸಹಜವಾಗಿಯೇ ಭಾರತೀಯ ಎಂದೆನಿಸಿಕೊಳ್ಳುವರು. ಹೊರದೇಶದಿಂದ ವಲಸೆ ಬಂದವರು, ಭಾರತದ ನಾಗರಿಕತೆಯನ್ನು ಅಧಿಕೃತವಾಗಿ ಪಡೆದ ನಂತರ ಭಾರತೀಯ ಎಂದೆನಿಸಿಕೊಳ್ಳುವರು.

ಕನ್ನಡದಲ್ಲಿ ಈ ಪದಕ್ಕೆ ಲಿಂಗಭೇದವಿಲ್ಲ. ಪುಲ್ಲಿಂಗ(ಗಂಡು), ಸ್ತ್ರೀಲಿಂಗ(ಹೆಣ್ಣು) ಎರಡಕ್ಕೂ ಈ ಪದ ಅನ್ವಯವಾಗುತ್ತದೆ.

ಇವನ್ನೂ ನೋಡಿ

ಬದಲಾಯಿಸಿ
"https://kn.wikipedia.org/w/index.php?title=ಭಾರತೀಯ&oldid=1038150" ಇಂದ ಪಡೆಯಲ್ಪಟ್ಟಿದೆ