ಭಾರತೀಯ ನೌಕಾಪಡೆ (ಆಂಗ್ಲ:Indian Navy) ಇದು ಭಾರತೀಯ ರಕ್ಷಣಾ ಪಡೆಗಳ ನೌಕಾ ಅಂಗ. ಇದು ಜಗತ್ತಿನ ಐದನೇಯ ಅತಿ ದೊಡ್ಡ ನೌಕಾಪಾಡೆಯಾಗಿದ್ದು, ಇದರಲ್ಲಿ ಸುಮಾರು ೫೫,೦೦೦ ಜನರು ಕಾರ್ಯನಿರತರಾಗಿದ್ದಾರೆ. ಇವರಲ್ಲಿ ಸುಮಾರು ೫,೦೦೦ ಜನ ನೌಕಾ ವಾಯುಪಡೆಗೆ ಸೇರಿದ್ದು ಮತ್ತು ಸುಮಾರು ೨೦೦೦ ಜನ ನೌಕಾ ಕಮಾಂಡೋಗಳಾಗಿದ್ದಾರೆ. ಭಾರತೀಯ ನೌಕಾಪಡೆ ೧೫೫ ನೌಕೆಗಳನ್ನು ಹೊಂದಿದ್ದು, ಐ.ಎನ್.ಎಸ್.ವಿರಾಟ್ ಎಂಬ ವಾಯು ಯುದ್ಧ ನೌಕೆಯನ್ನು ಹೊಂದಿದೆ. ಸಂಪೂರ್ಣ ಏಷ್ಯಾ ಖಂಡದಲ್ಲಿರುವ ಎರಡು ವಾಯು ಯುದ್ಧ ನೌಕೆಗಳಲ್ಲಿ ಇದು ಒಂದು.

ಭಾರತೀಯ ನೌಕಾಪಡೆ
भारतीय नौसेना
Bhāratīya Nau Senā
ಸಕ್ರಿಯ 1830–Present
ದೇಶ  ಭಾರತ
Type Navy
ಗಾತ್ರ 79,023 active personnel[]
295 ships & 251 aircraft
Part of Indian Armed Forces,(Ministry of Defence, ಭಾರತ ಸರ್ಕಾರ)
Headquarters ನವ ದೆಹಲಿ
ಧ್ಯೇಯವಾಕ್ಯ शं नो वरुणः (Sanskrit)
IAST: Shaṃ No Varuna
(May the Lord of the Water be auspicious unto us)
ಸೇನಾ ಪ್ರಯಾಣಗೀತ Jai Bharati
Fleet 2 aircraft carriers
1 amphibious transport dock
8 landing ship tanks
11 destroyers
14 frigates
24 corvettes
6 mine countermeasure vessels
15 submarines
28 patrol vessels
4 replenishment oilers
ಕದನಗಳು
Website indiannavy.nic.in
ದಂಡನಾಯಕರು
Chief of Naval Staff (CNS) Admiral Sunil Lanba, AVSM, SM, ADC[]
Vice Chief of Naval Staff Vice Admiral Karambir Singh, AVSM[]
ಗಮನಾರ್ಹ
ದಂಡನಾಯಕರು
Admiral S. M. Nanda
ಲಾಂಛನಗಳು
Naval Ensign
Naval Jack
Aircraft flown
Fighter Mikoyan MiG-29K
Patrol Boeing P-8 Poseidon Ilyushin Il-38, Tupolev Tu-142
Reconnaissance IAI Heron, IAI Searcher Mk II
Trainer BAE Hawk, HAL HJT-16
ಭಾರತೀಯ ನೌಕಾಪಡೆಯ ಸಬ್ಮರೀನ್ ಸಿಂಧುರಕ್ಷಕ್

ನೌಕಾಪಡೆಯ ಮುಖ್ಯಸ್ಥರು

ಬದಲಾಯಿಸಿ
  • 31-05-2016:
  • ಮುಖ್ಯಸ್ಥರಾಗಿದ್ದ ಅಡ್ಮಿರಲ್‌ ಆರ್‌.ಕೆ. ಧೋವನ್‌ ಅವರ ನಿವೃತ್ತಿ.
  • ವೈಸ್ ಅಡ್ಮಿರಲ್‌ ಸುನಿಲ್‌ ಲಂಬಾ ಅವರು ನೌಕಾಪಡೆ ಸಿಬ್ಬಂದಿ ಮುಖ್ಯಸ್ಥರಾಗಿ 31/05/2016 ಮಂಗಳವಾರ ಅಧಿಕಾರ ಸ್ವೀಕರಿಸಿದರು. ಈ ವೇಳೆ ಗೌರವ ವಂದನೆ ಹಾಗೂ ಪ್ರತಿಜ್ಞಾ ವಿಧಿ ಸ್ವೀಕರಿಸಿದರು, ಅಧಿಕಾರ ಸ್ವೀಕರಿಸಿದ ಲಂಬಾ ಅರು ಮೇ 31, 2019ರವರೆಗೆ ಕಾರ್ಯನಿರ್ವಹಿಸಲಿದ್ದಾರೆ.
  • 58 ವರ್ಷದ ಲಂಬಾ ಅವರು ಪಶ್ಚಿಮ ನೌಕಾದಳದ ಫ್ಲ್ಯಾಗ್ ಆಫೀಸರ್ ಆಗಿ ಕಾರ್ಯ ನಿರ್ವಹಿಸಿದ್ದು, 1978ರಲ್ಲಿ ಭಾರತೀಯ ನೌಕಾಪಡೆಯ ಕಾರ್ಯನಿರ್ವಾಹಕ ಶಾಖೆಗೆ ನೇಮಕಗೊಂಡಿದ್ದರು. ಅವರು, ನೌಕಾಯಾನ ಹಾಗೂ ನಿರ್ದೇಶನ ತಜ್ಞ.
 
Admiral RK Dhowan, the outgoing CNS handovers the traditional telescope of the CNS to Admiral Lanba as he takes charge as the chief at Naval Headquarters, New Delhi on May 31, 2016

[]

ನೌಕಾಪಡೆಗೆ ‘ಅರಿಹಂತ್‌’ ಸೇರ್ಪಡೆ

ಬದಲಾಯಿಸಿ
  • 19 Oct, 2016;
  • ಅರಿಹಂತ-ಪ್ರಥಮವರ್ಗದ ಜಲಾಂತರ್ಗಾಮಿ
  • ದೇಶೀಯವಾಗಿ ನಿರ್ಮಿಸಲಾದ ಮೊದಲ ಅಣ್ವಸ್ತ್ರ ಜಲಾಂತರ್ಗಾಮಿ ‘ಐಎನ್‌ಎಸ್‌ ಅರಿಹಂತ್‌’ ರಹಸ್ಯವಾಗಿ ತನ್ನ ಕಾರ್ಯಾಚರಣೆ ಆರಂಭಿಸಿದೆ. ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಿರುವ ಈ ಜಲಾಂತರ್ಗಾಮಿ ಅಣ್ವಸ್ತ್ರಗಳನ್ನು ಸಿಡಿಸುವ ಸಾಮರ್ಥ್ಯ ಹೊಂದಿದೆ. ಆಗಸ್ಟ್‌ 25ರಂದು ವಿಶಾಖಪಟ್ಟಣದಲ್ಲಿ ಈ ಜಲಾಂತರ್ಗಾಮಿಯನ್ನು ನೌಕಾಪಡೆಗೆ ಸೇರ್ಪಡೆ ಮಾಡಲಾಗಿದೆ ಎಂದು ವರದಿಯಾಗಿದೆ. ಆದರೆ, ಈ ಜಲಾಂತರ್ಗಾಮಿಯನ್ನು ನೌಕಾಪಡೆಗೆ ಸೇರಿಸಿರುವ ಕುರಿತು ಯಾವುದೇ ಮಾಹಿತಿಯನ್ನು ಸರ್ಕಾರ ಬಹಿರಂಗಪಡಿಸಿಲ್ಲ. ರಕ್ಷಣಾ ಸಚಿವಾಲಯ ಮತ್ತು ನೌಕಾಪಡೆ ಈ ಕುರಿತ ವರದಿಗಳನ್ನು ದೃಢಪಡಿಸಿಲ್ಲ ಅಥವಾ ತಳ್ಳಿ ಹಾಕಿಲ್ಲ. ‘ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗುವುದು’ ಎಂದು ವೈಸ್‌ ಆಡ್ಮಿರಲ್‌ ಜಿ.ಎಸ್‌. ಪಬ್ಬಿ ತಿಳಿಸಿದ್ದಾರೆ. ‘ಐಎನ್‌ಎಸ್‌ ಅರಿಹಂತ್‌’ ಸೇರ್ಪಡೆಯಿಂದ ಭೂಮಿ, ಆಕಾಶ ಮತ್ತು ಸಮುದ್ರದಿಂದ ಅಣ್ವಸ್ತ್ರ ದಾಳಿ ನಡೆಸುವ ಸಾಮರ್ಥ್ಯವನ್ನು ಭಾರತ ಹೊಂದಿದಂತಾಗಿದೆ.
  • ಮಾಜಿ ರಾಷ್ಟ್ರಪತಿ ದಿವಂಗತ ಎಪಿಜೆ ಅಬ್ದುಲ್‌ ಕಲಾಂ ಅವರ ಹೆಸರು ಇರಿಸಲಾಗಿರುವ ‘ಕೆ’ ಸರಣಿಯ ಕ್ಷಿಪಣಿಗಳನ್ನು ಈ ಜಲಾಂತರ್ಗಾಮಿ ಹೊಂದಿದೆ. ‘ಕೆ–15’ ಕ್ಷಿಪಣಿಗಳು 750 ಕಿಲೋ ಮೀಟರ್‌ ಮತ್ತು ‘ಕೆ–4’ ಕ್ಷಿಪಣಿಗಳು 3,500 ಕಿಲೋ ಮೀಟರ್‌ ದೂರವರೆಗೆ ಸಾಗಬಲ್ಲವು. ‘ಕೆ–5’ ಕ್ಷಿಪಣಿಗಳು ಇನ್ನೂ ಹೆಚ್ಚಿನ ಸಾಮರ್ಥ್ಯ ಹೊಂದಿವೆ. ಆದರೆ, ಈ ವಿವಿಧ ಮಾದರಿಯ ಕ್ಷಿಪಣಿಗಳನ್ನು ಅಳವಡಿಸಿರುವುದನ್ನು ನೌಕಾಪಡೆ ದೃಢಪಡಿಸಿಲ್ಲ. 2013ರ ಜನವರಿಯಲ್ಲಿ  ಈ ಕ್ಷಿಪಣಿಗಳ ಸಾಮರ್ಥ್ಯದ ಬಗ್ಗೆ ನೀರಿನ ಒಳಗೆ ಪರೀಕ್ಷೆ ಕೈಗೊಳ್ಳಲಾಗಿತ್ತು. ಜಲಾಂತರ್ಗಾಮಿಯಿಂದ ಕನಿಷ್ಠ ಮೂರು ಬಾರಿ ಕ್ಷಿಪಣಿಗಳನ್ನು ಸಿಡಿಸುವ ಪರೀಕ್ಷೆ ಕೈಗೊಳ್ಳುವುದು ಕಡ್ಡಾಯವಾಗಿದೆ. ಕಳೆದ ವರ್ಷ ಪರಿಸರ ಖಾತೆ ಹೊಂದಿದ್ದ ಪ್ರಕಾಶ್‌ ಜಾವಡೇಕರ್‌ ಅವರು ನಿಕೋಬಾರ್‌ನ ತಿಲಾಂಚಂಗ್‌ ದ್ವೀಪದಲ್ಲಿ ನೀರಿನ ಒಳಗೆ ಕ್ಷಿಪಣಿಗಳನ್ನು ಸಿಡಿಸುವ ಪರೀಕ್ಷೆಗೆ ನೌಕಾಪಡೆಗೆ ಅನುಮತಿ ನೀಡಿದ್ದರು. ಈ ಪರೀಕ್ಷೆ ಬಳಿಕ ಸರ್ಕಾರ ಮೌನವಹಿಸಿತ್ತು. ಆದರೆ, ಜಲಾಂತರ್ಗಾಮಿಯ ಖಂಡಾಂತರ ಕ್ಷಿಪಣಿಗಳ ಕಡ್ಡಾಯ ಪ್ರಯೋಗ ಇನ್ನೂ ಪೂರ್ಣಗೊಳ್ಳದ ಕಾರಣ ‘ಅರಿಹಂತ್‌’ ಇನ್ನೂ ಕಾರ್ಯಾಚರಣೆಗೆ ನಿಯೋಜಿಸಲು ಸಿದ್ಧವಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಅಣು ಸಾಮರ್ಥ್ಯದ ಎರಡನೇ ಜಲಾಂತರ್ಗಾಮಿ ‘ಐಎನ್‌ಎಸ್‌ ಅರಿಧಾನ್‌’ ಇನ್ನೂ ನಿರ್ಮಾಣ ಹಂತದಲ್ಲಿದೆ. ಅಮೆರಿಕ, ಬ್ರಿಟನ್‌, ರಷ್ಯಾ, ಫ್ರಾನ್ಸ್‌ ಮತ್ತು ಚೀನಾ ಮಾತ್ರ ಅಣು ಸಾಮರ್ಥ್ಯದ ಜಲಾಂತರ್ಗಾಮಿಗಳನ್ನು ಹೊಂದಿವೆ.

ಮುಖ್ಯಸ್ಥರ ನೇಮಕ

ಬದಲಾಯಿಸಿ
  • 31 ಮೇ 2016 ರಂದು ನಿವೃತ್ತಿ ಹೊಂದಿದ ಅಡ್ಮಿರಲ್ ರಾಬಿನ್ ಕೆ. ಅವರಿಂದ ಕೇಂದ್ರ ಸರಕಾರದ ನೌಕಾ ಸಿಬ್ಬಂದಿ ಮುಖ್ಯಸ್ಥರಾಗಿ ಅದೇ ದಿನ ಸುನಿಲ್ ಲಾನ್ಬಾ ಅಧಿಕಾರ ವಹಿಸಿಕೊಂಡಿದ್ದಾರೆ,(Admiral Sunil Lanba, AVSM, SM).

ನೌಕಾಪಡೆಯ ಸಾಮರ್ಥ್ಯ

ಬದಲಾಯಿಸಿ
  • ಮೂರು ಕಡೆ ಸಾಗರ ಆವರಿಸಿರುವ ಭಾರತದ ರಕ್ಷಣೆಗೆ ಕನಿಷ್ಠ ಮೂರು ವಿಮಾನವಾಹಕ ನೌಕೆಗಳು ಬೇಕು. ಆದರೆ ಭಾರತ ಈಗ ‘ವಿಕ್ರಮಾದಿತ್ಯ’ ಒಂದನ್ನೇ ನೆಚ್ಚಿದೆ. ಈ ನೌಕೆಗೂ ಅಗತ್ಯ ಸಂಖ್ಯೆಯಲ್ಲಿ ಬೆಂಗಾವಲು ಸಬ್‌ಮರೀನ್‌ಗಳು ಮತ್ತು ಆಗಸದಿಂದಲೇ ಸಬ್‌ಮರೀನ್‌ಗಳನ್ನು ಗುರುತಿಸಿ ನಾಶಪಡಿಸಬಲ್ಲ ಹೆಲಿಕಾಪ್ಟರ್‌ಗಳ ಬೆಂಬಲ ಇಲ್ಲ.
  • ಭಾರತದ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ ‘ಐಎನ್‌ಎಸ್‌ ವಿಕ್ರಾಂತ್’ 2013ರಲ್ಲಿ ಸಾಗರಕ್ಕಿಳಿದಿದೆ. ಆದರೆ ಇನ್ನೂ ಅದರ ಪರೀಕ್ಷೆಗಳು ಮುಗಿದಿಲ್ಲ. ಇದು 2020ರ ವೇಳೆಗೆ ಸೇವೆಗೆ ಲಭ್ಯವಾಗಬಹುದು. ಕೊಚಿನ್‌ನಲ್ಲಿ ನಿರ್ಮಾಣವಾಗುತ್ತಿರುವ ಭಾರತದ ಮತ್ತೊಂದು ವಿಮಾನ ವಾಹಕ ನೌಕೆ 2023ರ ವೇಳೆಗೆ ನೌಕಾಪಡೆ ಸೇವೆಗೆ ಲಭ್ಯವಾಗುವ ನಿರೀಕ್ಷೆ ಇದೆ. ರಕ್ಷಣಾ ಸಮತೋಲನದಲ್ಲಿ ಚೀನಾಗೆ ಸಮಾನ ನೆಲೆಯಲ್ಲಿ ನಿಲ್ಲಲು ಮತ್ತು ಹಿಂದೂ ಮಹಾಸಾಗರದಲ್ಲಿ ಪಾರಮ್ಯ ಮೆರೆಯುವ ಕನಸು ನನಸು ಮಾಡಿಕೊಳ್ಳಲು ನಮ್ಮ ನೌಕಾದಳದ ತ್ವರಿತ ಸುಧಾರಣೆ ಅತ್ಯಗತ್ಯ.

ಮುಂದಿನ ಯೋಜನೆ

ಬದಲಾಯಿಸಿ
  • ಭಾರತ ದೇಶವು ಪ್ರಸ್ತುತ ಎದುರಿಸುತ್ತಿರುವ ಸವಾಲುಗಳು ಮತ್ತು ಭವಿಷ್ಯದ ಬೆಳವಣಿಗೆಗಳನ್ನು ಅಂದಾಜಿಸಿ ನಮ್ಮ ದೇಶದ ನೌಕಾದಳದ ಸಾಮರ್ಥ್ಯ ಹೀಗಿರಬೇಕು ಎಂದು ಕೆಲ ವಿಶ್ಲೇಷಕರು ಲೆಕ್ಕಾಚಾರ ಹಾಕಿದ್ದಾರೆ. ಈ ಲೆಕ್ಕಾಚಾರದಂತೆ ಒಟ್ಟು 3 ವಿಮಾನವಾಹಕ ನೌಕೆಗಳು, 4 ನ್ಯೂಕ್ಲಿಯರ್ ಸಬ್‌ಮರೀನ್‌ಗಳು, 16 ಸಾಂಪ್ರದಾಯಿಕ ಸಬ್‌ಮರೀನ್‌ಗಳು, 32 (ದಾಳಿ) ಸಮರನೌಕೆಗಳು, ಸೈನಿಕರನ್ನು ದೂರ ದೇಶಗಳ ತೀರಕ್ಕೆ ಕ್ಷಿಪ್ರಗತಿಯಲ್ಲಿ ಸಾಗಿಸಬಲ್ಲ 4 ಸಾಗಣೆ (ಆಂಫೀಬಿಯಸ್) ನೌಕೆಗಳು, 4 ತೈಲ ಸಾಗಣೆ ಟ್ಯಾಂಕರ್‌ಗಳು, 12 ಕ್ಷಿಪಣಿ ಉಡಾವಣಾ ನೌಕೆಗಳು, 12 ಮೈನ್‌ (ಸಾಗರದಾಳದ ಬಾಂಬ್) ನಾಶಕ ನೌಕೆಗಳು, 12 ಗಸ್ತು ನೌಕೆಗಳು, 20 ವೇಗವಾಗಿ ಸಂಚರಿಸಬಲ್ಲ ದಾಳಿ ನೌಕೆಗಳು, 12 ಗಸ್ತು ವಿಮಾನಗಳು, ತಲಾ 12ರಿಂದ 24 ಯುದ್ಧ ವಿಮಾನಗಳಿರುವ ನಾಲ್ಕು ವೈಮಾನಿಕ ಯುದ್ಧ ತಂಡಗಳು, 24 ಮಲ್ಟಿರೋಲ್ ಮತ್ತು 36 ಲಘು ಹೆಲಿಕಾಪ್ಟರ್‌ಗಳು ನೌಕಾದಳದಲ್ಲಿ ಇರಬೇಕಂತೆ.

ಸ್ವತಂತ್ರ ನಿರ್ಮಾಣದ ಸಾಧನೆ

ಬದಲಾಯಿಸಿ
  • ಇದೇ ಮೊದಲ ಬಾರಿಗೆ ಭಾರತೀಯ ನೌಕಾಪಡೆ ಗ್ರಾಹಕನಿಂದ ಉತ್ಪಾದಕ ಸ್ಥಾನಕ್ಕೆ ಭಡ್ತಿ ಪಡೆದಿದೆ. ಹಲವು ಸ್ವದೇಶಿ ನಿರ್ಮಿತ ಯುದ್ಧನೌಕೆ ಮತ್ತು ಸಬ್‌ಮರೀನ್‌ಗಳನ್ನು ಈಗಾಗಲೇ ಸೇವೆಗೆ ನಿಯೋಜಿಸಲಾಗಿದೆ. ಕೊಚ್ಚಿ, ವಿಶಾಖಪಟ್ಟಣ, ಮುಂಬೈ ಸೇರಿದಂತೆ ವಿವಿಧೆಡೆ ಯುದ್ಧನೌಕೆಗಳನ್ನು ಕಟ್ಟುವ ಕೆಲಸ ಭರದಿಂದ ಸಾಗಿದೆ. ಕಳೆದ ಕೆಲ ವರ್ಷಗಳಲ್ಲಿ ಸೇವೆಗೆ ನಿಯೋಜನೆಗೊಂಡ ಯುದ್ಧನೌಕೆಗಳ ಪೈಕಿ ‘ಗೈಡೆಡ್‌ ಮಿಸೈಲ್ ಡೆಸ್ಟ್ರಾಯರ್’ (ಕ್ಷಿಪಣಿ ನಾಶಕ ನೌಕೆ) ಐಎನ್‌ಎಸ್ ಮರ್ಮಗೋವಾ, ವಿಮಾನ ವಾಹಕ ನೌಕೆ ಐಎನ್‌ಎಸ್‌ ವಿಕ್ರಮಾದಿತ್ಯ ಮತ್ತು ಸಬ್‌ಮರೀನ್ ನಾಶಕ ನೌಕೆ ಐಎನ್‌ಎಸ್‌ ಕರ್ಮೊತ್ರಾ ಉಲ್ಲೇಖನೀಯ. ಯುದ್ಧ ವಿಮಾನಗಳನ್ನು ಸಾಗಿಸುವ ವಿಕ್ರಮಾದಿತ್ಯದಿಂದ ಭಾರತಕ್ಕೆ ವೈರಿ ನೆಲದಲ್ಲಿಯೇ ಯುದ್ಧ ಮಾಡುವ ಮತ್ತು ಆಗಸದಲ್ಲಿಯೇ ಯುದ್ಧ ವಿಮಾನಗಳಿಗೆ ಇಂಧನ ತುಂಬಿಸಿ ಅವುಗಳ ರೀಚ್ (ತಲುಪುವಿಕೆ) ಹೆಚ್ಚಿಸುವ ಸಾಮರ್ಥ್ಯ ಬಂದಿದೆ. ಟಾರ್ಪೆಡೊ (ನೀರಿನಾಳದ ಕ್ಷಿಪಣಿಗಳು) ಮತ್ತು ಸಬ್‌ಮರೀನ್‌ಗಳ ದಾಳಿಯನ್ನು ಕರ್ಮೋತ್ರಾ ನಿರ್ವಹಿಸಬಲ್ಲದು.
  • ವಿಶಾಖಪಟ್ಟಣ ನೌಕಾನೆಲೆಯಲ್ಲಿ ನಿರ್ಮಾಣವಾದ ಭಾರತದ ಮೊದಲ (ಸ್ವದೇಶಿ ನಿರ್ಮಿತ) ಅಣ್ವಸ್ತ್ರ ಚಾಲಿತ ಸಬ್‌ಮರೀನ್ ಐಎನ್ಎಸ್ ಅರಿಹಂತ್ ಸದ್ದಿಲ್ಲದೆ ಸೇವೆಗೆ ನಿಯೋಜನೆಗೊಂಡಿದೆ. ರಕ್ಷಣಾ ಇಲಾಖೆ ಈ ವಿಚಾರವನ್ನು ಅಧಿಕೃತವಾಗಿ ಒಪ್ಪಿಕೊಳ್ಳುತ್ತಲೂ ಇಲ್ಲ– ನಿರಾಕರಿಸುತ್ತಲೂ ಇಲ್ಲ. ಐಎನ್‌ಎಸ್‌ ಅರಿಹಂತ್‌ನ ಸಾಮರ್ಥ್ಯ, ಸಾಗರ ಪರೀಕ್ಷೆಗಳ ಮಾಹಿತಿ ಹೊರ ಜಗತ್ತಿಗೆ ಅಪರಿಚಿತ. ಆದರೆ ಇದು ಭಾರತೀಯ ನೌಕಾಪಡೆಯ ಮಹತ್ವಾಕಾಂಕ್ಷಿ ಕನಸೊಂದು ನನಸಾದ ಸಾಧನೆ ಎನ್ನುವುದು ಮಾತ್ರ ನಿರ್ವಿವಾದ. ‘ಐಎನ್‌ಎಸ್‌ ಅರಿಹಂತ್‌’ ಸೇವೆಗೆ ನಿಯೋಜನೆಗೊಳ್ಳುವ ಮೂಲಕ ನಮ್ಮ ದೇಶಕ್ಕೆ ನೀರಿನಾಳದಿಂದಲೂ ಖಂಡಾಂತರ ಕ್ಷಿಪಣಿ ಉಡಾವಣೆ ಮಾಡುವ ಸಾಮರ್ಥ್ಯ ಬಂದಿದೆ. ಈ ಸಾಧನೆಯೊಂದಿಗೆ ಅಣ್ವಸ್ತ್ರ ಚಾಲಿತ ಸಬ್‌ಮರೀನ್ ವಿನ್ಯಾಸಗೊಳಿಸಬಲ್ಲ ಸಾಮರ್ಥ್ಯ ಹೊಂದಿರುವ ವಿಶ್ವದ 6 ಪ್ರಮುಖ ರಾಷ್ಟ್ರಗಳ ಸಾಲಿಗೆ ಭಾರತವೂ ಸೇರ್ಪಡೆಯಾಗಿದೆ.
  • ನಮ್ಮ ದೇಶ ‘ಮೊದಲು ಅಣ್ವಸ್ತ್ರ ಬಳಸುವುದಿಲ್ಲ’ ಎಂಬ ವ್ರತ ಪಾಲಿಸುತ್ತಿದೆ. ಇಂಥ ದೇಶಗಳಿಗೆ ಸಮುದ್ರದಾಳದಿಂದ ಅಣ್ವಸ್ತ್ರ ಸಿಡಿತಲೆ ಹೊತ್ತ ಕ್ಷಿಪಣಿಗಳನ್ನು ಉಡಾಯಿಸುವ ಸಾಮರ್ಥ್ಯ ಇರುವ ಸಬ್‌ಮರೀನ್‌ಗಳನ್ನು ಹೊಂದುವುದು ಸೇನಾ ಕಾರ್ಯಪದ್ಧತಿ (ಮಿಲಿಟರಿ ಸ್ಟ್ರಾಟಜಿ) ದೃಷ್ಟಿಯಿಂದ ಅತ್ಯಗತ್ಯ. ಅರಿಹಂತ್‌ನಿಂದಾಗಿ ನೆಲದಿಂದ, ಬಾನಿನಿಂದ, ಸಮುದ್ರದ ಮೇಲಿನಿಂದ ಮತ್ತು ಸಾಗರದಾಳದಿಂದಲೂ ಅಣ್ವಸ್ತ್ರ ಪ್ರಯೋಗಿಸುವ ಸಾಮರ್ಥ್ಯ ಸಿಕ್ಕಂತೆ ಆಗಿದೆ.

ನೌಕಾಪಡೆಗಳಲ್ಲಿ ಭಾರತದ ಸ್ಥಾನ

ಬದಲಾಯಿಸಿ
  • ನೌಕಾಪಡೆಗಳ ಬಲಾಬಲ 2017:
ವಿವರ ಭಾರತ ಚೀನಾ ಪಾಕಿಸ್ಥಾನ ಅಮೇರಿಕಾ
ಕರಾವಳಿ 7,516 ಕಿ.ಮೀ 14,500 ಕಿ.ಮೀ 1046ಕಿ.ಮೀ 19,924ಕಿ.ಮೀ
ಸಿಬ್ಬಂದಿ 67,109 2.55 ಲಕ್ಷ 30,700 3.23 ಲಕ್ಷ
ಒಟ್ಟು ಯುದ್ಧನೌಕೆಗಳು 257 492 63 430
ಒಟ್ಟು ನೌಕಾದಳದ ವಿಮಾನಗಳು 251 710 101 3700
ವಿಮಾನ ವಾಹಕ ನೌಕೆಗಳು 2 2 - 19
ಸಬ್ ಮೆರೀನ್ಗಳು 15 68 5 75

[]

ಹೆಚ್ಚಿನ ಓದು

ಬದಲಾಯಿಸಿ

ಬಾಹ್ಯ ಸಂಪರ್ಕಗಳು

ಬದಲಾಯಿಸಿ

ಉಲ್ಲೇಖ

ಬದಲಾಯಿಸಿ
  1. ಉಲ್ಲೇಖ ದೋಷ: Invalid <ref> tag; no text was provided for refs named pib
  2. Swami, Praveen (17 April 2014). "Admiral R.K. Dhowan appointed new Navy chief". The Hindu. Chennai, India.
  3. Vice Chief of Naval Staff (VCNS) : About Indian Navy : Indian Navy Archived 5 November 2014 ವೇಬ್ಯಾಕ್ ಮೆಷಿನ್ ನಲ್ಲಿ.
  4. kannadaprabha.[೧][permanent dead link] staff/276573.html
  5. "ನೀಲಿ ಕಡಲ ಆಳುವಾಸೆ;ಡಿ.ಎಂ.ಘನಶ್ಯಾಮ;14 May, 2017". Archived from the original on 2017-05-16. Retrieved 2017-05-14.