ಭಾರತೀಯ ಸಶಸ್ತ್ರ ದಳದ ಅತಿ ದೊಡ್ಡ ವಿಭಾಗವಾಗಿರುವ ಭಾರತೀಯ ಭೂಸೇನೆಯು ನೆಲದ ಮೇಲಿನ ಸೈನಿಕ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತದೆ. ರಾಷ್ಟ್ರೀಯ ಭದ್ರತೆ, ಬಾಹ್ಯ ಆಕ್ರಮಣ ಹಾಗೂ ಅಪಾಯಗಳಿಂದ ಭಾರತದ ರಕ್ಷಣೆ ಹಾಗೂ ತನ್ನ ಸರಹದ್ದಿನ ಒಳಗೆ ಶಾಂತಿ ಹಾಗೂ ಭದ್ರತೆಯನ್ನು ಕಾಪಾಡುವುದು ಇದರ ಪ್ರಾಥಮಿಕ ಗುರಿಯಾಗಿದೆ. ಇಬ್ಬರು ಅಧಿಕಾರಿಗಳಿಗೆ ಪಂಚತಾರಾ ದರ್ಜೆಯಾದ ಫೀಲ್ಡ್ ಮಾರ್ಷಲ್ ದರ್ಜೆಯನ್ನು ಪ್ರದಾನ ಮಾಡಲಾಗಿದೆ, ಇದೊಂದು ಶ್ರೇಷ್ಠ ಗೌರವದ ವಿಧ್ಯುಕ್ತ ಸ್ಥಾನವಾಗಿದೆ.

ಭಾರತೀಯ ಭೂಸೇನೆ

Crest of the Indian Army
ಸ್ಥಾಪಿತ 1 ಏಪ್ರಿಲ್ 1895; 47381 ದಿನ ಗಳ ಹಿಂದೆ (1895-೦೪-01)
ದೇಶ  ಭಾರತ
Type ಸೇನೆ
ಗಾತ್ರ ಹನ್ನೆರಡು ಲಕ್ಷ ಸಕ್ರಿಯ ಸೈನಿಕರು[]
ಸುಮಾರು ಹತ್ತು ಲಕ್ಷ ಮೀಸಲು ಸೈನಿಕರು[]
೧೩೬ ವಿಮಾನಗಳು []
Part of ಭಾರತೀಯ ಸಶಸ್ತ್ರ ಪಡೆ
Headquarters ನವ ದೆಹಲಿ
ಧ್ಯೇಯವಾಕ್ಯ "Service Before Self"
Colors ಹೊಂಬಣ್ಣ, ಕೆಂಪು ಮತ್ತು ಕಪ್ಪು
     
Anniversaries ೧೫ ಜನವರಿ - ಸೇನಾ ದಿನಾಚರಣೆ
Website indianarmy.nic.in
ದಂಡನಾಯಕರು
Chief of the Army Staff (COAS) ಎಂ ಎಂ ನಾರವಾನೆ[]
ಗಮನಾರ್ಹ
ದಂಡನಾಯಕರು
ಫೀಲ್ಡ್ ಮಾರ್ಷಲ್ ಜನರಲ್ ಕೆ ಎಂ ಕಾರ್ಯಪ್ಪ
ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಷಾ
ಲಾಂಛನಗಳು
Flag
Aircraft flown
Helicopter ಹೆಚ್ ಎ ಎಲ್ ರುದ್ರ
Transport ಹೆಚ್ ಎ ಎಲ್ ಧ್ರುವ್, ಹೆಚ್ ಎ ಎಲ್ ಚೇತಕ್,ಹೆಚ್ ಎ ಎಲ್ ಚೀತಾ ಮತ್ತು ಚೀತಾಲ್

ಭೂಸೇನಾ ಮುಖ್ಯಸ್ತರು

ಬದಲಾಯಿಸಿ

11-06-2017 ರಲ್ಲಿ ನೇಮಕ:*ಛೀಫ್ ಜೆನರಲ್ ಬಿಪಿಲ್ ರಾವತ್;

  • ದಿ. 30-12-2019 ರಂದು ಹೊಸದಾಗಿ ರಚನೆಯಾಗಿರುವ ‘ರಕ್ಷಣಾ ಪಡೆಗಳ ಮುಖ್ಯಸ್ಥ’ (ಸಿಡಿಎಸ್- Chief of Defence Staff,) ಹುದ್ದೆಗೆ ಹಾಲಿ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರನ್ನು ನೇಮಕ ಮಾಡಲಾಗಿದೆ. ಅವರು ಹಾಲಿ ನಿರ್ವಹಿಸುತ್ತಿರುವ ಭೂ ಸೇನಾ ಮುಖ್ಯಸ್ಥ ಸೇವೆಯಿಂದ ನಿವೃತ್ತಿಯಾಗಲು ಒಂದು ದಿನ ಬಾಕಿ ಇರುವಾಗಲೇ ರಾವತ್ ಅವರನ್ನು ನೂತನ ಹುದ್ದೆಗೆ ನೇಮಕಮಾಡಲಾಗಿದೆ. ಸಿಡಿಎಸ್ ಮುಖ್ಯಸ್ಥರ ನಿವೃತ್ತಿ ವಯಸ್ಸು 65 ವರ್ಷ ಎಂದು ದಿ.29-12-2019 ರಂದು ಕೇಂದ್ರ ಸರ್ಕಾರ ಘೋಷಿಸಿತ್ತು.[]

ಬಿಪಿನ್‌ ರಾವತ್‌ ನೇಮಕ

ಬದಲಾಯಿಸಿ
  • 18 Dec, 2016
  • ಲೆಫ್ಟಿನೆಂಟ್ ಜನರಲ್‌ ಬಿಪಿನ್‌ ರಾವತ್‌ ಅವರನ್ನು ಸೇನಾ ಪಡೆಯ ನೂತನ ಮುಖ್ಯಸ್ಥರನ್ನಾಗಿ ಕೇಂದ್ರ ಸರ್ಕಾರ ಶನಿವಾರ ನೇಮಕ ಮಾಡಿದೆ. ಮತ್ತು ಏರ್‌ ಚೀಫ್‌ ಮಾರ್ಷಲ್‌ ಬಿ.ಎಸ್‌. ಧನೋವಾ ಅವರನ್ನು ವಾಯು ಪಡೆಯ (ಐಎಎಫ್‌) ಮುಖ್ಯಸ್ಥರನ್ನಾಗಿ ಕೇಂದ್ರ ಸರ್ಕಾರ ಶನಿವಾರ ನೇಮಕ ಮಾಡಿದೆ.
  • ಸೇನಾ ಪಡೆಯ ಉಪ ಮುಖ್ಯಸ್ಥರಾಗಿರುವ ರಾವತ್‌ ಅವರು, ಇಬ್ಬರು ಹಿರಿಯ ಅಧಿಕಾರಿಗಳನ್ನು (ಅತ್ಯಂತ ಹಿರಿಯ ಸೇನಾ ಕಮಾಂಡರ್‌, ಪೂರ್ವ ಕಮಾಂಡ್‌ನ ಮುಖ್ಯಸ್ಥ ಪ್ರವೀಣ್‌ ಬಕ್ಷಿ ಮತ್ತು ದಕ್ಷಿಣ ಕಮಾಂಡ್‌ನ ಮುಖ್ಯಸ್ಥ ಪಿ.ಎಂ. ಹರಿಜ್‌) ಹಿಂದಿಕ್ಕಿ ಭೂ ಸೇನೆಯ ಮುಖ್ಯಸ್ಥರ ಹುದ್ದೆಗೆ ನೇಮಕವಾಗಿದ್ದಾರೆ.
  • ಸೇನಾ ಪಡೆ ಮುಖ್ಯಸ್ಥ ಜನರಲ್‌ ದಲ್ಬೀರ್‌ ಸಿಂಗ್‌ ಸುಹಾಗ್‌ ಅಧಿಕಾರಾವಧಿ ಡಿಸೆಂಬರ್‌ 31ಕ್ಕೆ ಕೊನೆಗೊಳ್ಳಲಿದ್ದು, ರಾವತ್‌ ಅವರು ಸುಹಾಗ್‌ ಸ್ಥಾನವನ್ನು ತುಂಬಲಿದ್ದಾರೆ.[]

ಭೂ ಸೇನಾ ಮುಖ್ಯಸ್ಥರಾಗಿ ಮುಕುಂದ್ ನರವಣೆ ಅಧಿಕಾರ ಸ್ವೀಕಾರ

ಬದಲಾಯಿಸಿ

ಸೈನ್ಯಕ್ಕೆ ಎರಡು ಎಮ್.777 ಹಾವಿಟ್ಜರ್ಗಳ ಸೇರ್ಪಡೇ

ಬದಲಾಯಿಸಿ
  • 2016 ರ ಜೂನ್ 26 ರಂದು, ಭಾರತವು 145 ಎಂ777 ಫಿರಂಗಿಗಳನ್ನು 750 ಮಿಲಿಯನ್ ಡಾಲರ್ಗೆ ಖರೀದಿಸಲಿದೆ ಎಂದು ಘೋಷಿಸಲಾಯಿತು. 2016 ರ ನವೆಂಬರ್ 30 ರಂದು ಭಾರತೀಯ ಸರ್ಕಾರವು ಯು.ಎಸ್.ನಿಂದ 145 ಹೌವಿಟ್ಜರ್ಗಳನ್ನು ಖರೀದಿಸಲು ಒಪ್ಪಂದವನ್ನು ಪೂರ್ಣಗೊಳಿಸಿತು. ಆದರೂ, ಒಪ್ಪಂದವು ಡಿಸೆಂಬರ್ 2016 ರಲ್ಲಿ ಪೂರ್ಣಗೊಂಡಿತು. ಹೀಗೆ ಒಪ್ಪಂದದ ಪ್ರಕಾರ 18 ಮೇ 2017 ರಂದು ಭಾರತೀಯ ಸೇನೆಯು ಎರಡು ಎಮ್.777 ಹಾವಿಟ್ಜರ್ಗಳ ಮೊದಲ ಬ್ಯಾಚ್ ಅನ್ನು ಪಡೆದುಕೊಂಡಿದೆ.[][೧೦]

ಹೊರ ಸಂಪರ್ಕ

ಬದಲಾಯಿಸಿ

ಉಲ್ಲೇಖ

ಬದಲಾಯಿಸಿ
  1. "Press Information Bureau". pib.nic.in.
  2. International Institute for Strategic Studies (3 February 2014). The Military Balance 2014 , pp. 241–246. ಲಂಡನ್: Routledge. ISBN 9781857437225.
  3. "World Air Forces 2015" (PDF). Flightglobal.com. p. 17. Retrieved 20 December 2016.
  4. "Chief of the Army Staff". Official Website of the Indian Army. Retrieved 31 December 2016.
  5. ರಕ್ಷಣಾ ಪಡೆಗಳ ಮೊದಲ ಮುಖ್ಯಸ್ಥರಾಗಿ ಬಿಪಿನ್ ರಾವತ್ ನೇಮಕ;d-30 ಡಿಸೆಂಬರ್ 2019
  6. ಲೆ.ಜ. ರಾವತ್‌ ಸೇನಾ ಪಡೆ, ಧನೋವಾ ವಾಯುಪಡೆ ಮುಖ್ಯಸ್ಥ;;ಪಿಟಿಐ;18 Dec, 2016
  7. ಭಾರತ ರಕ್ಷಣಾ ಸಚಿವಾಲಯದ ಪ್ರಕಟಣೆ
  8. ಪ್ರಜಾವಾಣಿ d: 31 ಡಿಸೆಂಬರ್ 2019;ಲೆಫ್ಟಿನೆಂಟ್ ಜನರಲ್‌ ಮನೋಜ್‌ ಮುಕುಂದ್ ನರವಣೆ ಅವರು ಭೂಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕಾರ
  9. Lal, Neeta (19 December 2016). "India Gets its Guns – 30 years late". Asia Sentinel. Retrieved 21 December 2016.
  10. keen-to-purchase-500-more-howitzer-guns-from-bae-systems/article7987937.ece