ನವ ದೆಹಲಿ

ದೆಹಲಿಯ ಜಿಲ್ಲೆ,ಭಾರತದ ರಾಜಧಾನಿ

ನವ ದೆಹಲಿ (ಹಿಂದಿ:नई दिल्ली, ಪಂಜಾಬಿ:ਨਵੀਂ ਦਿੱਲੀ, ಉರ್ದು: نئی دلی) ಭಾರತದ ರಾಜಧಾನಿ. ನಗರದ ಅಡಿಪಾಯ ೧೯೧೧ ರ ದೆಹಲಿ ದರ್ಬಾರ್ ಸಮಯದಲ್ಲಿ ಜಾರ್ಜ್ V, ಭಾರತದ ಚಕ್ರವರ್ತಿ ರವರು ನೆರವೇರಿಸಿದರು. ಇದನ್ನು ಬ್ರಿಟಿಷ್ ವಾಸ್ತುಶಿಲ್ಪಿ ಸರ್ ಎಡ್ವಿನ್ ಲುಟ್ಯೆನ್ಸ್ ಮತ್ತು ಸರ್ ಹರ್ಬರ್ಟ್ ಬೇಕರ್ ವಿನ್ಯಾಸಗೊಳಿಸಿದರು. ಹೊಸ ರಾಜಧಾನಿಯು ೧೩ನೇ ಫೆಬ್ರವರಿ ೧೯೩೧ ರಂದು ಭಾರತದ ವೈಸ್ರಾಯ್ ಮತ್ತು ಲಾರ್ಡ್ ಇರ್ವಿನ್ ಗವರ್ನರ್ ಜನರಲ್ ರವರು ಉದ್ಘಾಟಿಸಿದರು.

ನವ ದೆಹಲಿ

ನವ ದೆಹಲಿ

नई दिल्ली
capd
ಸರ್ಕಾರ
 • ಮುಖ್ಯ ಮಂತ್ರಿಶೀಲಾ ದೀಕ್ಷಿತ್
ಜನಸಂಖ್ಯೆ
 (೨೦೦೧)
 • ಒಟ್ಟು೩೦೨,೩೬೩
ಜಾಲತಾಣwww.ndmc.gov.in

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರಮುಖ ಸ್ಮಾರ್ಟ್ ನಗರಗಳ ಅಭಿಯಾನದ ಅಡಿಯಲ್ಲಿ ನವ ದೆಹಲಿಯು 'ಸ್ಮಾರ್ಟ್ ಸಿಟಿ' ಎಂದು ನೂರರಲ್ಲಿ ಒಂದು ನಗರವಾಗಿ ಆಯ್ಕೆಯಾಗಿದೆ.