ಟೆಂಪ್ಲೇಟು:Infobox national military

ಗಣರಾಜ್ಯ ದಿನಾಚರಣೆ
ವೈಮಾನಿಕ ಪ್ರದರ್ಶನ


ಗಣರಾಜ್ಯ ದಿನದ ಮೆರವಣಿಗೆ
ನವ ದೆಹಲಿ, ೨೦೦೪

ಭಾರತ ಸೈನ್ಯದ ಅಂಗಗಳುಸಂಪಾದಿಸಿ

ಭಾರತದ ಸೈನ್ಯದಲ್ಲಿ ಮೂರು ಮುಖ್ಯ ಅ೦ಗಗಳಿವೆ:

ಇವುಗಳೊ೦ದಿಗೆ ಭಾರತೀಯ ಸೈನ್ಯದ ಅ೦ಗಗಳಾಗಿ ಅಥವಾ ಇವುಗಳ ಜೊತೆ ಕೆಲಸ ಮಾಡುವ ಅ೦ಗಗಳು ಸಹ ಸೇರಿವೆ:

 • ಗಡಿ ರಕ್ಷಣಾ ದಳ (ಬಿಎಸ್‍ಎಫ್)
 • ಅಸ್ಸಾಮ್ ರೈಫಲ್ಸ್
 • ರಾಷ್ಟ್ರೀಯ ರೈಫಲ್ಸ್

ಇತ್ತೀಚೆಗೆ (ಸಪ್ಟ೦ಬರ್ ೨೦೦೩ ರಲ್ಲಿ) ಸೇರಿಸಲ್ಪಟ್ಟ ಒಂದು ಅ೦ಗವೆ೦ದರೆ ಅಣುಶಕ್ತಿ ನಿರ್ವಹಣಾ ವಿಭಾಗ.

ಭಾರತೀಯ ಸೇನೆಯ ಅತ್ಯುನ್ನತ ಕಮಾ೦ಡರ್ಸಂಪಾದಿಸಿ

 • ಭಾರತೀಯ ಸೇನೆಯ ಅ೦ತಿಮ ಕಮಾ೦ಡರ್ ಯಾವಾಗಲೂ ಭಾರತದ ಅಧ್ಯಕ್ಷರು - ಪ್ರಸಕ್ತ ಸಮಯದಲ್ಲಿ(೨೦೧೨) ಪ್ರತಿಭಾ ಪಾಟೀಲ್.

ಅಧಿಕಾರ ಸ್ವೀಕಾರ ದಿ. 25-7-2012 (ಜುಲೈ ೨೫, ೨೦೧೨) 2012 ರಲ್ಲಿ ಶ್ರೀ ಪ್ರಣಬ್ ಮುಖರ್ಜಿ ಭಾರತದ ರಾಷ್ಟ್ರಾಧ್ಯಕ್ಷರು.

ಇತರೆಸಂಪಾದಿಸಿ

ಭಾರತೀಯ ಸೇನೆಯ ವತಿಯಿ೦ದ ಕೊಡಲ್ಪಡುವ ಅತ್ಯುಚ್ಚ ಪ್ರಶಸ್ತಿ ಪರಮ ವೀರ ಚಕ್ರ.

ಸಶಸ್ತ್ರ ಪಡೆಗಳ ಮೂರು ಮುಖ್ಯಸ್ಥರುಸಂಪಾದಿಸಿ

 • ೯-೧೧-೨೦೧೬:
 • ಸೇನಾ ಮುಖ್ಯಸ್ಥ ದಲಬಿರ್ ಸಿಂಗ್
 • ನೌಕಾದಳದ ಮುಖ್ಯಸ್ಥ ಸುನಿಲ್ ಲಂಬ ಮತ್ತು
 • ಭಾರತೀಯ ವಾಯುಪಡೆಯ ಉಪ ಮುಖ್ಯ ಬಿಎಸ್ ಧನೊಅ

ಭೂ ಸೇನಾ ಮುಖ್ಯಸ್ಥರಾಗಿ ಬಿಪಿನ್‌ ರಾವತ್‌ ಅಧಿಕಾರ ಸ್ವೀಕಾರಸಂಪಾದಿಸಿ

 • 31 Dec, 2016
 • ಜನರಲ್‌ ಬಿಪಿನ್‌ ರಾವತ್‌ ಅವರು ಸೇನಾ ಪಡೆಯ 27ನೇ ಮುಖ್ಯಸ್ಥರಾಗಿ ಶನಿವಾರ ಅಧಿಕಾರಿ ವಹಿಸಿಕೊಂಡರು. ಸೇನಾ ಪಡೆ ಮುಖ್ಯಸ್ಥ ಜನರಲ್‌ ದಲ್ಬೀರ್‌ ಸಿಂಗ್‌ ಸುಹಾಗ್‌ ಅವರ ಅಧಿಕಾರಾವಧಿ ಡಿಸೆಂಬರ್‌ 31ರಂದು ಕೊನೆಗೊಂಡಿದ್ದು, ಬಿಪಿನ್‌ ರಾವತ್‌ ಅವರು ನೂತನ ಮುಖ್ಯಸ್ಥರಾಗಿ ಅಧಿಕಾರ ವಹಿಸಿದರು. 1978ರಲ್ಲಿ ರಾವತ್‌ ಅವರು ಗೋರ್ಖಾ ರೈಫಲ್ಸ್ ಪಡೆಗೆ ನೇಮಕಗೊಳ್ಳುವ ಮೂಲಕ ಭಾರತೀಯ ಸೇನೆಯಲ್ಲಿ ಕರ್ತವ್ಯ ಪ್ರಾರಂಭಿಸಿದರು.[೧]
 • ವಾಯುಪಡೆಯ ಮುಖ್ಯಸ್ಥರಾಗಿ ಬೀರೇಂದರ್ ಸಿಂಗ್ ಧನೋವಾ ಸಹ ಅಧಿಕಾರ ಸ್ವೀಕರಿಸಿದರು. ಬಿಪಿನ್ ಅವರು ಸೇನೆಯ 27ನೇ ಮುಖ್ಯಸ್ಥರಾಗಿದ್ದರೆ, ಧನೋವಾ ಅವರು ವಾಯುಪಡೆಯ 25ನೇ ಮುಖ್ಯಸ್ಥರಾಗಿದ್ದಾರೆ.[೨]

ಭೂ ಸೇನಾ ಮುಖ್ಯಸ್ಥರಾಗಿ ಮುಕುಂದ್ ನರವಣೆ ಅಧಿಕಾರ ಸ್ವೀಕಾರಸಂಪಾದಿಸಿ

 • 2019 ಡಿಸೆಂಬರ್‌ 31 ರಂದು ಲೆಫ್ಟಿನೆಂಟ್ ಜನರಲ್‌ ಮನೋಜ್‌ ಮುಕುಂದ್ ನರವಣೆ ಅವರು ಭೂಸೇನಾ ಮುಖ್ಯಸ್ಥರಾಗಿ ರಾವತ್‌ ಅವರಿಂದ ಮಂಗಳವಾರ ಅಧಿಕಾರ ವಹಿಸಿಕೊಂಡರು.[೩] [೪]

ಮೂರೂ ಪಡೆಗಳ ಮುಖ್ಯಸ್ಥರ ಹುದ್ದೆ ಸೃಷ್ಠಿ ಮತ್ತು ನೇಮಕಸಂಪಾದಿಸಿ

 • ಭಾರತದ ‘ರಕ್ಷಣಾ ಪಡೆಗಳ ಮುಖ್ಯಸ್ಥ-(ಬಿಪಿನ್ ರಾವತ್)
 • ದಿ. 30-12-2019 ರಂದು ಹೊಸದಾಗಿ ರಚನೆಯಾಗಿರುವ ‘ರಕ್ಷಣಾ ಪಡೆಗಳ ಮುಖ್ಯಸ್ಥ’ (ಸಿಡಿಎಸ್- Chief of Defence Staff,) ಹುದ್ದೆಗೆ ಹಾಲಿ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರನ್ನು ನೇಮಕ ಮಾಡಲಾಗಿದೆ. ಅವರು ಹಾಲಿ ನಿರ್ವಹಿಸುತ್ತಿರುವ ಭೂ ಸೇನಾ ಮುಖ್ಯಸ್ಥ ಸೇವೆಯಿಂದ ನಿವೃತ್ತಿಯಾಗಲು ಒಂದು ದಿನ ಬಾಕಿ ಇರುವಾಗಲೇ ರಾವತ್ ಅವರನ್ನು ನೂತನ ಹುದ್ದೆಗೆ ನೇಮಕಮಾಡಲಾಗಿದೆ. ಸಿಡಿಎಸ್ ಮುಖ್ಯಸ್ಥರ ನಿವೃತ್ತಿ ವಯಸ್ಸು 65 ವರ್ಷ ಎಂದು ದಿ.29-12-2019 ರಂದು ಕೇಂದ್ರ ಸರ್ಕಾರ ಘೋಷಿಸಿತ್ತು. ಅವರು 2019 ಡಿಸೆಂಬರ್‌ 31ರಂದು ೬೨ ನೇ ವಯಸ್ಸಿಗೆ ನಿವೃತ್ತರಾದ ನಂತರವೂ ‘ರಕ್ಷಣಾ ಪಡೆಗಳ ಮುಖ್ಯಸ್ಥ’ರಾಗಿ ಮೂರು ವರ್ಷ ಮುಂದುವರೆಯುವರು. [೫]

ಸಿಡಿಎಸ್ ಕರ್ತವ್ಯಗಳುಸಂಪಾದಿಸಿ

 • 2019 ಡಿಸೆಂಬರ್‌ 31ರಿಂದ ಜಾರಿಗೆ ಬರುವಂತೆ ರಾವತ್‌ ಅವರನ್ನು ಸಿಡಿಎಸ್‌ ಆಗಿ ನೇಮಿಸಲಾಗಿದೆ ಎಂದು ರಕ್ಷಣಾ ಸಚಿವಾಲಯದ ಪ್ರಕಟಣೆ ತಿಳಿಸಿದೆ. ರಾವತ್‌ ಅವರು ಸೇನೆಗೆ 1978ರ ಡಿಸೆಂಬರ್‌ನಲ್ಲಿ ಸೇರ್ಪಡೆಯಾಗಿದ್ದರು. ಸೇನಾ ಮುಖ್ಯಸ್ಥರಾಗಿ 2017ರ ಜನವರಿ 1ರಿಂದ ಅವರು ಕಾರ್ಯನಿರ್ವಹಿಸುತ್ತಿದ್ದರು; ರಾವತ್‌ ಅವರಿಗೆ ಮೂರೂ ಪಡೆಗಳ ಮುಖ್ಯಸ್ಥರು ಹೊಂದಿರುವ ಶ್ರೇಣಿಯೇ ಇರುತ್ತದೆ. ಆದರೆ, ಸಮಾನರಲ್ಲಿ ಪ್ರಥಮರು ಎಂಬುದು ಸಿಡಿಎಸ್‌ ಹುದ್ದೆಯ ಹೆಚ್ಚುಗಾರಿಕೆ..
 • ರ್‍ಯಾಂಕ್‌
 • ಮೂರೂ ಪಡೆಗಳ ಮುಖ್ಯಸ್ಥರಂತೆ ರಕ್ಷಣಾ ಪಡೆಗಳ ಮುಖ್ಯಸ್ಥರೂ ‘ನಾಲ್ಕು ಸ್ಟಾರ್‌’ ಅಧಿಕಾರಿ ಎನಿಸುವರು. ಅದೇ ವೇತನಶ್ರೇಣಿ ಅದೇ. ಆದರೆ ಇವರು ಸಮಾನರಲ್ಲಿ ಮೊದಲಿಗರಾಗಿರುತ್ತಾರೆ. ಸೇನಾ ಪಡೆಯ ಮುಖ್ಯಸ್ಥರು ಆ ಹುದ್ದೆಯಲ್ಲಿ ಮೂರು ವರ್ಷ ಪೂರ್ಣಗೊಳಿಸಿದಾಗ ಅಥವಾ 62 ವರ್ಷ ವಯಸ್ಸಾದಾಗ ನಿವೃತ್ತಿ ಹೊಂದುತ್ತಿದ್ದರು. ಈ ನಿಯಮಕ್ಕೆ ತಿದ್ದುಪಡಿ ಮಾಡಿರುವ ಸರ್ಕಾರವು ಸಿಡಿಎಸ್‌ ನಿವೃತ್ತಿ ವಯಸ್ಸನ್ನು ಮಾತ್ರ 65 ವರ್ಷಕ್ಕೆ ಹೆಚ್ಚಿಸಿದೆ.
 • ‘ಮೂರು ಪಡೆಗಳಲ್ಲಿ ಬರಬಹುದಾದ ಸಮಸ್ಯೆಗಳನ್ನು ನಿವಾರಿಸಿ, ಸಮನ್ವಯ ರೂಪಿಸುವ ಮೂಲಕ ಒಂದು ನಿರ್ಧಾರಕ್ಕೆ ಬರಲು ಸಾಧ್ಯವಾಗುವಂತೆ ಸರ್ಕಾರಕ್ಕೆ ಸಲಹೆ ನೀಡಲು ಸಿಡಿಎಸ್‌ ಅಗತ್ಯ’ ಎಂದು ಸೇನೆಯ ನಿವೃತ್ತ ಅಧಿಕಾರಿಗಳು ಹೇಳುತ್ತಾರೆ. ರಕ್ಷಣಾ ನೀತಿ ರೂಪಿಸುವುದು, ಮೂರೂ ಪಡೆಗಳ ಬಜೆಟ್‌ ರೂಪಿಸುವುದು, ಶಸ್ತ್ರಾಸ್ತ್ರ ಖರೀದಿ, ತರಬೇತಿ, ಸೇನಾ ಕಾರ್ಯಾಚರಣೆಗಳನ್ನು ಯೋಜಿಸುವುದು, ಮೊದಲಾದ ವಿಚಾರಗಳಲ್ಲಿ ಮೂರೂ ಪಡೆಗಳಲ್ಲಿ ಸಮನ್ವಯ ಸಾಧಿಸುವುದಕ್ಕೆ ಇದು ಅನುಕೂಲ ಎಂದು ನಿವೃತ್ತ ಅಧಿಕಾರಿಗಳು ‘ರಕ್ಷಣಾ ಪಡೆಗಳ ಮುಖ್ಯಸ್ಥರು ಹೇಳುತ್ತಾರೆ. [೬]

ಸೇನೆಗೆ ಬಲ ಪೂರಕ ಡ್ರೋನ್ ಒಪ್ಪಂದಸಂಪಾದಿಸಿ

 • 28 Jun, 2017
 • ಮೋದಿ ಮತ್ತು ಡೊನಾಲ್ಡ್ ಟ್ರಂಪ್ -ರಕ್ಷಣಾ ಸಹಕಾರ : ಕಡಲ ಕಣ್ಗಾವಲಿಗೆ ೨೨ - ರೂ.೧೨,೯೦೦ ರಿಂದ ೧೯,೩೫೦ ರ ಪ್ರಿಡೇಟರ್ ಡ್ರೋನ್ಭಾ ಭಾರತಕ್ಕೆ ಕರಾವಳಿ ಕಣ್ಗಾವಲು ಡ್ರೋನ್‌ಗಳ ಮಾರಾಟಕ್ಕೆ ಅಮೆರಿಕ ಒಪ್ಪಿಗೆ ಸೂಚಿಸಿದೆ. ಎರಡೂ ದೇಶಗಳ ಮಧ್ಯೆ ರಕ್ಷಣಾ ಮತ್ತು ಭದ್ರತಾ ಸಹಕಾರ ಏರ್ಪಟ್ಟಿದೆ. [೭]

ಸೇನಾ ಸಲಕರಣೆ ಖರೀದಿಸಂಪಾದಿಸಿ

ರಕ್ಷಣಾ ಸಚಿವಾಲಯವು Rs.3,000 ಕೋಟಿ ಮೊತ್ತದ ಸೇನಾ ಸಲಕರಣೆಗಳಾದ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ಷಿಪಣಿ ಮತ್ತು ಶಸ್ತ್ರಸಜ್ಜಿತ ರಕ್ಷಣಾ ವಾಹನಗಳು ಸೇರಿವೆ. ಭಾರತೀಯ ಭೂ ಸೇನೆಯ ಅರ್ಜುನ ಟ್ಯಾಂಕ್‌ಗಳ ನೆರವಿಗೆಂದು ಅರ್ಮರ್ಡ್ ರಿಕವರಿ ವೆಹಿಕಲ್–ಎಆರ್‌ವಿಗಳನ್ನು (ಶಸ್ತ್ರಸಜ್ಜಿತ ರಕ್ಷಣಾ ವಾಹನ) ಖರೀದಿಸಸುವುದು. ಅರ್ಜುನ ಟ್ಯಾಂಕ್‌ಗಳು ಕೆಟ್ಟು ನಿಂತಾಗ, ದುರ್ಗಮ ಸ್ಥಳದಲ್ಲಿ ಸಿಲುಕಿದಾಗ ಅವನ್ನು ಅಲ್ಲಿಂದ ಹೊರಗೆ ತರುವ ಎಆರ್‌ವಿಗಳನ್ನು ಖರೀದಿಸಲು ಉದ್ದೇಶಿಸಿರುವ ಎಆರ್‌ವಿಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಿಡಿಸಿದೆ. ಈ ವಾಹನಗಳನ್ನು ಭಾರತ್ ಅರ್ಥ ಮೂವರ್ಸ್‌ ಲಿಮಿಟೆಡ್ ತಯಾರಿಸುತ್ತದೆ. ಸಾಮರ್ಥ್ಯ* 20 ಟನ್ ಎಳೆಯುವ ಸಾಮರ್ಥ್ಯ* 8 ಟನ್ ಭಾರ ಎತ್ತುವ ಸಾಮರ್ಥ್ಯ; ಕ್ಷಿಪಣಿಯ ವಿಶೇಷತೆಗಳು;* ಈ ಕ್ಷಿಪಣಿಯ ಗರಿಷ್ಠ ವೇಗ-3,700 ಕಿ.ಮೀ. ಇದು ಜಗತ್ತಿನ ಅತ್ಯಂತ ವೇಗದ ಕ್ಷಿಪಣಿ ಎಂಬ ಹೆಗ್ಗಳಿಕೆ ಹೊಂದಿದೆ; * 290 ಕಿ.ಮೀ. ಈ ಕ್ಷಿಪಣಿಯ ದಾಳಿ ವ್ಯಾಪ್ತಿ ಹೋದಿದೆ;* 200 ಕೆ.ಜಿ. ತೂಕದ ಸಿಡಿತಲೆಗಳನ್ನು ಹೊತ್ತೊಯ್ಯುವುದು.[೮]

ಸೇನೆಗೆ ೨೦೨೦ - ೨೧ ರ ಅಂದಾಜು ಬಜೆಟ್ಸಂಪಾದಿಸಿ

 • ರಕ್ಷಣಾ ಕ್ಷೇತ್ರಕ್ಕೆ ನೀಡುತ್ತಿರುವ ಅನುದಾನದಲ್ಲಿ ಮೂರು ವಿಭಾಗಗಳಿಗೆ ದೊರೆಯುತ್ತಿರುವ ಪ್ರಮಾಣ ಬಹಳ ಕಡಿಮೆ ಇದೆ. ಭೂ ಸೇನೆ, ವಾಯು ಪಡೆಗಳ ಅಭಿವೃದ್ಧಿಗೆ ಮತ್ತು ಬಹು ವಿಸ್ತಾರವಾದ ಸಾಗರ ಗಡಿ ಹೊಂದಿರುವ ಭಾರತದ ನೌಕಾಪಡೆಯ ಬಲವೃದ್ಧಿ ಹೆಚ್ಚು ಅನುದಾನ ಅಗತ್ಯ ಎಂದು ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
 • ದೇಶದ ರಕ್ಷಣಾ ವಲಯಕ್ಕೆ 2020–21ನೇ ಸಾಲಿನ ಬಜೆಟ್‌ನಲ್ಲಿ ರೋ.3.37 ಲಕ್ಷ ಕೋಟಿ ಮೀಸಲಿಟ್ಟಿರುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಶನಿವಾರ ಪ್ರಕಟಿಸಿದರು.ಆಧುನೀಕರಣ, ಶಸ್ತ್ರಾಸ್ತ್ರಗಳ ಖರೀದಿಗಾಗಿ ಈ ಬಜೆಟ್‌ನಲ್ಲಿ ರೂ.1.13 ಲಕ್ಷ ಕೋಟಿ ತೆಗೆದಿರಿಸಲಾಗಿದೆ. ನಿವೃತ್ತಿ ವೇತನಕ್ಕೆ ರೂ.1.33 ಲಕ್ಷ ಕೋಟಿ ತೆಗೆದಿರಿಸಲಾಗಿದೆ; ರಕ್ಷಣಾ ಕ್ಷೇತ್ರಕ್ಕೆ ಒಟ್ಟು ಜಿಡಿಪಿಯ- ಶೇ 1.5ರಷ್ಟಿದೆ. ಆಧುನೀಕರಣಕ್ಕೆ ಜಿಡಿಪಿಯ ಶೇ 2.5ರಷ್ಟು ಮೊತ್ತವನ್ನು ತೆಗೆದಿರಿಸಬೇಕು ಎಂಬುದು ತಜ್ಞರ ಅಭಿಪ್ರಾಯ.[೯]
 • ಭಾರತಕ್ಕಿಂತಲೂ ಚೀನಾ, ಪಾಕಿಸ್ತಾನ ಮುಂದಿವೆ: ಕಳೆದ ವರ್ಷದ 2019-20 ಮಧ್ಯಂತರ ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ರೂ.3 ಲಕ್ಷ ಕೋಟಿ ಅನುದಾನ ನೀಡಿದ್ದರೂ ನೆರೆಯ ಪಾಕಿಸ್ತಾನ ಮತ್ತು ಚೀನಾಗೆ ಹೋಲಿಸಿದರೆ ಅದು ಕಡಿಮೆ. ಭಾರತದ ರಕ್ಷಣಾ ಅನುದಾನ ದೇಶದ ಜಿಡಿಪಿಯ ಶೇ 2ಕ್ಕಿಂತಲೂ ಕಡಿಮೆ ಇದೆ. ಆದರೆ ಪಾಕಿಸ್ತಾನವು ಜಿಡಿಪಿಯ ಶೇ 3.5 ಮತ್ತು ಹೆಚ್ಚು ಆದಾಯವಿರುವ ಚೀನಾವು ಜಿಡಿಪಿಯ ಶೇ 3ರರಷ್ಟನ್ನು ರಕ್ಷಣಾ ಕ್ಷೇತ್ರಕ್ಕೆ ಅನುದಾನ ನೀಡುತ್ತಿವೆ. ಭಾರತದಲ್ಲಿ 1,000 ಮಂದಿಗೆ ಒಬ್ಬನಂತೆ ಯೋಧರಿದ್ದರೆ ಪಾಕಿಸ್ತಾನದಲ್ಲಿ ಸರಾಸರ 4.25 ಜನಕ್ಕೆ ಒಬ್ಬಯೋಧ, ಮತ್ತು ಚೀನಾದಲ್ಲಿ 2.23ರಂತೆ(ಜನಕ್ಕೆ) ಒಬ್ಬ ಯೋಧರಿದ್ದಾರೆ.[೧೦]

ನೋಡಿಸಂಪಾದಿಸಿ

 1. ಭಾರತ ಮತ್ತು ಪಾಕೀಸ್ತಾನಗಳ ಆರ್ಥಿಕ ಬಲ ಮತ್ತು ಸೈನ್ಯ ಬಲ
 2. 2008ರ ಮುಂಬಯಿ ದಾಳಿ
 3. ರಫೆಲ್ ಯುದ್ಧವಿಮಾನ - ಭಾರತ ಮತ್ತು ಫ್ರಾನ್ಸ್ ಒಪ್ಪಂದ
 4. ಭಾರತೀಯ ವಾಯುಸೇನೆ
 5. ಭಾರತೀಯ ವಾಯುಸೇನೆ
 6. ಉರಿಯಲ್ಲಿ ಭಯೋತ್ಪಾದಕರ ದಾಳಿ ೨೦೧೬
 7. ಭಯೋತ್ಪಾದನೆ
 8. ಅರ್ಜುನ ಕದನ ಟ್ಯಾಂಕ್
 9. ರಾಷ್ಟ್ರೀಯ ಭದ್ರತೆ

ರಕ್ಷಣಾ ಸಾಮಗ್ರಿ ರಪ್ತು ಯೋಜನೆಸಂಪಾದಿಸಿ

ಪೂರಕ ಮಾಹಿತಿಸಂಪಾದಿಸಿ

ಆಭಿಪ್ರಾಯಗಳು-ಸಲಹೆಗಳುಸಂಪಾದಿಸಿ

 • ಸೇನೆಯ ಹೊಟ್ಟೆ ಗಟ್ಟಿ ಮಾಡಿ!(8Oct,2016):ಕ್ಯಾ.ಜಿ.ಆರ್ ಗೋಪಿನಾಥ್:[೧]
 • ಶತ್ರು ಪಾಳಯದೊಳಗೇ ನುಗ್ಗುವ ವಿಶೇಷ ಪಡೆ;8 Oct, 2016;[೨]

ಬಾಹ್ಯ ಸ೦ಪರ್ಕಗಳುಸಂಪಾದಿಸಿ

ಉಲ್ಲೇಖಸಂಪಾದಿಸಿ

 1. ಸೇನಾ ಮುಖ್ಯಸ್ಥರಾಗಿ ಬಿಪಿನ್‌ ರಾವತ್‌ ಅಧಿಕಾರ ಸ್ವೀಕಾರ
 2. ವಾಯುಪಡೆ, ಸೇನೆಯ ಹೊಸ ಮುಖ್ಯಸ್ಥರ ಅಧಿಕಾರ ಸ್ವೀಕಾರ;1 Jan, 2017
 3. ಭಾರತ ರಕ್ಷಣಾ ಸಚಿವಾಲಯದ ಪ್ರಕಟಣೆ
 4. ಪ್ರಜಾವಾಣಿ d: 31 ಡಿಸೆಂಬರ್ 2019;ಲೆಫ್ಟಿನೆಂಟ್ ಜನರಲ್‌ ಮನೋಜ್‌ ಮುಕುಂದ್ ನರವಣೆ ಅವರು ಭೂಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕಾರ
 5. ರಕ್ಷಣಾ ಪಡೆಗಳ ಮೊದಲ ಮುಖ್ಯಸ್ಥರಾಗಿ ಬಿಪಿನ್ ರಾವತ್ ನೇಮಕ;d-30 ಡಿಸೆಂಬರ್ 2019
 6. ರಕ್ಷಣಾ ಪಡೆಗಳ ಮೊದಲ ಮುಖ್ಯಸ್ಥರಾಗಿ ಬಿಪಿನ್ ರಾವತ್ ನೇಮಕ;ಏಜೆನ್ಸಿಸ್ Updated: 31 ಡಿಸೆಂಬರ್ 2019,
 7. ಪಿಟಿಐ;ರಕ್ಷಣಾ ಸಹಕಾರ ಹೆಚ್ಚಳಕ್ಕೆ ಇಂಗಿತ: ಕಡಲ ಕಣ್ಗಾವಲು ಹೆಚ್ಚಿಸಲಿರುವ ಪ್ರಿಡೇಟರ್ ಡ್ರೋನ್
 8. Rs.3,000 ಕೋಟಿ ಮೊತ್ತದ ಸೇನಾ ಸಲಕರಣೆ ಖರೀದಿಗೆ ರಕ್ಷಣಾ ಸಚಿವಾಲಯ ಅನುಮೋದನೆ;01 ಡಿಸೆಂಬರ್ 2018,
 9. ಬಜೆಟ್‌ 2020 | ರಕ್ಷಣಾ ವಲಯಕ್ಕೆ ₹3.37 ಲಕ್ಷ ಕೋಟಿ;ಪಿಟಿಐ d: 02 ಫೆಬ್ರವರಿ 2020,
 10. [https://www.prajavani.net/business/budget/union-budget-expectations-from-defence-sector-indian-army-iaf-navvy-701233.htmlಬಜೆಟ್‌ 2020: ರಕ್ಷಣಾ ಕ್ಷೇತ್ರಕ್ಕೆ ಸಾಕಾಗ್ತಿಲ್ಲ ಅನುದಾನ, ದೇಶದ ಭದ್ರತೆಗೇ ಆತಂಕ ಪ್ರಜಾವಾಣಿ ವೆಬ್‌ ಡೆಸ್ಕ್ Updated: 28 ಜನವರಿ 2020,]