ಭಾರತದ ಪ್ರಧಾನ ಮಂತ್ರಿ

ಭಾರತದ ಪ್ರಧಾನ ಮಂತ್ರಿಯವರು ಲೋಕಸಭೆಯಲ್ಲಿ ಬಹುಮತ ಹೊಂದಿರುವ ರಾಜಕೀಯ ಪಕ್ಷದಿಂದ ಅಥವಾ ಪಕ್ಷಗಳ ಮೈತ್ರಿತ್ವದಿಂದ ಆರಿಸಲ್ಪಟ್ಟ ನಾಯಕರು ಪ್ರಧಾನ ಮಂತ್ರಿಗಳಾಗುವರು. ಅವರು ಭಾರತ ಸರ್ಕಾರದ ಕಾರ್ಯಾಂಗದ ಮುಖ್ಯಸ್ಥರು ಮತ್ತು ಶಾಸಕಾಂಗದ ಸದಸ್ಯರಾಗಿರುತ್ತಾರೆ. ಸಾಂವಿಧಾನಿಕವಾಗಿ, ಭಾರತದ ಅಧ್ಯಕ್ಷರ ಪದವಿ ಪ್ರಧಾನ ಮಂತ್ರಿಯ ಪದವಿಗಿಂತ ಮೇಲಿನದ್ದು. ಆದರೆ ಸರ್ಕಾರದ ಚಟುವಟಿಕೆಗಳಲ್ಲಿ ಎಲ್ಲರಿಗಿಂತ ಹೆಚ್ಚು ಪ್ರಭಾವ ಹೊಂದಿರುವ ಪದವಿ ಪ್ರಧಾನ ಮಂತ್ರಿಗಳದ್ದು.

ಭಾರತದ ಪ್ರಧಾನಮಂತ್ರಿ
Bhārat kē Pradhānamantrī
ಅಧಿಕಾರಸ್ಥ
ನರೇಂದ್ರ ಮೋದಿ

ಎಂದಿನಿಂದ-26 ಮೇ 2014 (2014-05-26)
ಪ್ರಧಾನಮಂತ್ರಿ ಕಚೇರಿ
Styleಗೌರವಾನ್ವಿತ (ಔಪಚಾರಿಕ)
ಘನವೆತ್ತ (ರಾಜತಾಂತ್ರಿಕ ಪತ್ರವ್ಯವಹಾರದಲ್ಲಿ)
ಸ್ಥಿತಿಸರ್ಕಾರದ ಮುಖ್ಯಸ್ಥ
ಸಂಕ್ಷಿಪ್ತ ನಾಮಪಿಎಂ
ಸದಸ್ಯ
ಜವಾಬ್ದಾರ
ಅಧೀಕೃತ ಕಛೇರಿ೭, ಲೋಕಕಲ್ಯಾಣ ಮಾರ್ಗ, ನವದೆಹಲಿ, ದಿಲ್ಲಿ, ಭಾರತ
Seatಪ್ರಧಾನಮಂತ್ರಿ ಕಚೇರಿ, ಸೆಕ್ರೆಟರಿಯಟ್ ಕಟ್ಟಡ, ದಕ್ಷಿಣ ಭಾಗ, ನವದೆಹಲಿ, ಭಾರತ
ನೇಮಕಾಧಿಕಾರಿಭಾರತದ ರಾಷ್ಟ್ರಪತಿ
ಸಮಾವೇಶದ ಮೂಲಕ, ಲೋಕಸಭೆಯಲ್ಲಿ ವಿಶ್ವಾಸವನ್ನು ವಹಿಸುವ ನೇಮಕಾತಿ ಸಾಮರ್ಥ್ಯದ ಆಧಾರದ ಮೇಲೆ.
ಅಧಿಕಾರಾವಧಿAt the pleasure of the president
ಶೀಘ್ರದಲ್ಲೇ ಕರಗದ ಹೊರತು ಲೋಕಸಭಾ ಅವಧಿ 5 ವರ್ಷಗಳು
ಇಷ್ಟೇ ಅವಧಿ ಇಂದು ಮಿತಿಗೊಳಿಸಿಲ್ಲ.
ಕಾಯಿದೆಯ ಪ್ರಕಾರಭಾರತದ ಸಂವಿಧಾನ
Precursorಕಾರ್ಯಕಾರಿ ಮಂಡಳಿಯ ಉಪಾಧ್ಯಕ್ಷ
ಪ್ರಾರಂಭಿಕ ಅಧಿಕಾರಿಜವಾಹರಲಾಲ್ ನೆಹರು (1947–64)
ಹುದ್ದೆಯ ಸ್ಥಾಪನೆ15 ಆಗಸ್ಟ್ 1947; 28138 ದಿನ ಗಳ ಹಿಂದೆ (1947-೦೮-15)
ಉಪಾಧಿಕಾರಿಖಾಲಿ, ಭಾರತದ ಉಪ ಪ್ರಧಾನಿ
ವೇತನ20 ಲಕ್ಷ (ಯುಎಸ್$೪೪,೪೦೦) (ವಾರ್ಷಿಕ, ಒಳಗೊಂಡು ೯,೬೦,೦೦೦ (ಯುಎಸ್$೨೧,೩೧೨) ಪ್ರಧಾನಮಂತ್ರಿಯ ಸಂಬಳ)
ಅಧೀಕೃತ ಜಾಲತಾಣpmindia.gov.in

ಭಾರತದ ಪ್ರಸಕ್ತ ಪ್ರಧಾನ ಮಂತ್ರಿ ನರೇಂದ್ರ ಮೋದಿ. ಈ ವರೆಗೆ ಒಟ್ಟು ೧೨ ವ್ಯಕ್ತಿಗಳು ಭಾರತ ಪ್ರಧಾನ ಮಂತ್ರಿ ಸ್ಥಾನಕ್ಕೆ ಚುನಾಯಿಸಲ್ಪಟ್ಟಿದ್ದಾರೆ. ಇವರಲ್ಲಿ ಜವಾಹರಲಾಲ್ ನೆಹರು ಒಟ್ಟು ನಾಲ್ಕು ಅವಧಿಗಳಲ್ಲಿ ಪ್ರಧಾನ ಮಂತ್ರಿ ಗಳಾಗಿದ್ದರು. ಇಂದಿರಾ ಗಾಂಧಿ ಮೂರು ಅವಧಿಗಳ ಕಾಲ ಈ ಸ್ಥಾನದಲ್ಲಿದ್ದರೆ, ಅಟಲ್ ಬಿಹಾರಿ ವಾಜಪೇಯಿ ಎರಡು ಅವಧಿಗಳಲ್ಲಿ ಈ ಸ್ಥಾನ ವಹಿಸಿದ್ದಾರೆ. ಗುಲ್ಜಾರಿ ಲಾಲ್ ನಂದಾ ಎರಡು ಬಾರಿ ಹಂಗಾಮಿ ಪ್ರಧಾನಿಯಾಗಿ ಕೆಲಸ ನಿರ್ವಹಿಸಿದ್ದರು. ಡಾ.ಮನಮೋಹನ್ ಸಿಂಗ್ ಮೇ ೨೨, ೨೦೦೪ ಮೇ ೨೬, ೨೦೧೧ ಕಾಂಗ್ರೆಸ್ ಪಕ್ಷ(ಐ)ವರೆಗೆ ೨ ಅವಧಿಗೆ ಪ್ರಧಾನ ಮಂತ್ರಿಯಾಗಿದ್ದರು.

ಪ್ರಧಾನ ಮಂತ್ರಿಯವರ ಭತ್ಯೆ ಮತ್ತು ವೇತನ- ವಸತಿ

ಬದಲಾಯಿಸಿ
  • ಭಾರತದ ಪ್ರಧಾನಿಯ ಅಧಿಕೃತ ನಿವಾಸ ನಂ.೭, ರೇಸ್ ಕೋರ್ಸ್ ರಸ್ತೆ, ನವದೆಹಲಿ. ಅದು 5 ನಿವಾಸಗಳ ಬೃಹತ್ ವಸತಿ ಸೌಕರ್ಯ ಹೊಂದಿದೆ. ಕಚೇರಿಯು ರೈಸೀನಾ ಹಿಲ್ಸ್ ನಲ್ಲಿರುವ ಸೌತ್ ಬ್ಲಾಕ್ ನಲ್ಲಿದೆ.
  • 2014 ರಿಂದ: ಪ್ರಧಾನ ಮಂತ್ರಿಯಾಗಿ ನಿಯೋಜಿತವಾಗಿರುವ ನರೇಂದ್ರ ಮೋದಿ ಅವರು ತಿಂಗಳಿಗೆ 1.6 ಲಕ್ಷ ರೂ. ಮೂಲ ವೇತನ:(ವರ್ಷಕ್ಕೆ 19.2 ಲಕ್ಷ ರೂಪಾಯಿ) 50,000. ಉಳಿದದ್ದಷ್ಟೂ ಇತರೆ ಭತ್ಯೆಗಳ ಲೆಕ್ಕದಲ್ಲಿ ಬರುತ್ತದೆ. ಇದರ ಜತೆಗೆ ಖಾಸಗಿ ಸಿಬ್ಬಂದಿ, ವಿಶೇಷ ವಿಮಾನ ಮತ್ತಿತರ ಸವಲತ್ತುಗಳೂ ಇರುತ್ತವೆ.[]

ಈವರೆಗಿನ ಪ್ರಧಾನಿಗಳ ಪಟ್ಟಿ

ಬದಲಾಯಿಸಿ
Key: ಕಾಂಗ್ರೆಸ್ ಪಕ್ಷ ಜನತಾ ಪಕ್ಷ ಜನತಾ ದಳ ಭಾರತೀಯ ಜನತಾ ಪಕ್ಷ
ಅನುಕ್ರಮ ಹೆಸರು ಪ್ರಮಾಣ ವಚನ ಸ್ವೀಕಾರ ಅವಧಿ ಮುಗಿದದ್ದು ಪಕ್ಷ
01 ಜವಾಹರಲಾಲ್ ನೆಹರು ಆಗಸ್ಟ್ ೧೫, ೧೯೪೭ ಮೇ ೨೭, ೧೯೬೪ ಕಾಂಗ್ರೆಸ್ ಪಕ್ಷ
* ಗುಲ್ಜಾರಿ ಲಾಲ್ ನಂದಾ ಮೇ ೨೭, ೧೯೬೪ ಜೂನ್ ೯, ೧೯೬೪ ಕಾಂಗ್ರೆಸ್ ಪಕ್ಷ
02 ಲಾಲ್ ಬಹಾದುರ್ ಶಾಸ್ತ್ರಿ ಜೂನ್ ೯, ೧೯೬೪ ಜನವರಿ ೧೧, ೧೯೬೬ ಕಾಂಗ್ರೆಸ್ ಪಕ್ಷ
* ಗುಲ್ಜಾರಿ ಲಾಲ್ ನಂದಾ ಜನವರಿ ೧೧, ೧೯೬೬ ಜನವರಿ ೨೪, ೧೯೬೬ ಕಾಂಗ್ರೆಸ್ ಪಕ್ಷ
03 ಇಂದಿರಾ ಗಾಂಧಿ ಜನವರಿ ೨೪, ೧೯೬೬ ಮಾರ್ಚ್ ೨೪, ೧೯೭೭ ಕಾಂಗ್ರೆಸ್ ಪಕ್ಷ
04 ಮೊರಾರ್ಜಿ ದೇಸಾಯಿ ಮಾರ್ಚ್ ೨೪, ೧೯೭೭ ಜುಲೈ ೨೮, ೧೯೭೯ ಜನತಾ ಪಕ್ಷ
05 ಚೌಧುರಿ ಚರಣ್ ಸಿಂಗ್ ಜುಲೈ ೨೮, ೧೯೭೯ ಜನವರಿ ೧೪, ೧೯೮೦ ಜನತಾ ಪಕ್ಷ
** ಇಂದಿರಾ ಗಾಂಧಿ ಜನವರಿ ೧೪, ೧೯೮೦ ಅಕ್ಟೋಬರ್ ೩೧, ೧೯೮೪ ಕಾಂಗ್ರೆಸ್ ಪಕ್ಷ
06 ರಾಜೀವ್ ಗಾಂಧಿ ಅಕ್ಟೋಬರ್ ೩೧, ೧೯೮೪ ಡಿಸೆಂಬರ್ ೨, ೧೯೮೯ ಕಾಂಗ್ರೆಸ್ ಪಕ್ಷ (ಐ)
07 ವಿಶ್ವನಾಥ್ ಪ್ರತಾಪ್ ಸಿಂಗ್ ಡಿಸೆಂಬರ್ ೨, ೧೯೮೯ ನವಂಬರ್ ೧೦, ೧೯೯೦ ಜನತಾ ದಳ
08 ಚಂದ್ರಶೇಖರ್ ನವಂಬರ್ ೧೦, ೧೯೯೦ ಜೂನ್ ೨೧, ೧೯೯೧ ಜನತಾ ದಳ
09 ಪಿ.ವಿ.ನರಸಿಂಹರಾವ್ ಜೂನ್ ೨೧, ೧೯೯೧ ಮೇ ೧೬, ೧೯೯೬ ಕಾಂಗ್ರೆಸ್ ಪಕ್ಷ (ಐ)
10 ಅಟಲ್ ಬಿಹಾರಿ ವಾಜಪೇಯಿ ಮೇ ೧೬, ೧೯೯೬ ಜೂನ್ ೧, ೧೯೯೬ ಭಾರತೀಯ ಜನತಾ ಪಕ್ಷ
11 ಹೆಚ್ ಡಿ ದೇವೇಗೌಡ ಜೂನ್ ೧, ೧೯೯೬ ಏಪ್ರಿಲ್ ೨೧, ೧೯೯೭ ಜನತಾ ದಳ
12 ಇಂದ್ರ ಕುಮಾರ್ ಗುಜ್ರಾಲ್ ಏಪ್ರಿಲ್ ೨೧, ೧೯೯೭ ಮಾರ್ಚ್ ೧೯, ೧೯೯೮ ಜನತಾ ದಳ
** ಅಟಲ್ ಬಿಹಾರಿ ವಾಜಪೇಯಿ ಮಾರ್ಚ್ ೧೯, ೧೯೯೮ ಮೇ ೨೨, ೨೦೦೪ ಭಾರತೀಯ ಜನತಾ ಪಕ್ಷ
13 ಡಾ. ಮನಮೋಹನ್ ಸಿಂಗ್ ಮೇ ೨೨, ೨೦೦೪ ಮೇ ೨೬, ೨೦೧೪ ಕಾಂಗ್ರೆಸ್ ಪಕ್ಷ
14 ನರೇಂದ್ರ ಮೋದಿ ಮೇ ೨೬, ೨೦೧೪ ಭಾರತೀಯ ಜನತಾ ಪಕ್ಷ

ಉಲ್ಲೇಖಗಳು

ಬದಲಾಯಿಸಿ

ಬಾಹ್ಯ ಸಂಪರ್ಕ

ಬದಲಾಯಿಸಿ