ಭಾರತದ ಸಂಸತ್ತು
ಭಾರತದ ಸಂಸತ್ತು ಭಾರತದ ಗಣರಾಜ್ಯದ ಒಕ್ಕೂಟ ಸರ್ಕಾರದ ಎರಡು ಶಾಸನಸಭೆಗಳುಳ್ಳ (ಉಭಯ ಸದನಿಕ) ಸರ್ವೋಚ್ಚ ವಿಧಾಯಕ ಘಟಕವಾಗಿದೆ. ಭಾರತದ ರಾಷ್ಟ್ರಪತಿಯವರ ಕಚೇರಿ, "ರಾಜ್ಯಸಭಾ" ಎಂದು ಕರೆಯಲ್ಪಡುವ ರಾಜ್ಯಗಳ ಪರಿಷತ್ತು ಆಗಿರುವ ಒಂದು ಮೇಲ್ಮನೆ, ಮತ್ತು "ಲೋಕಸಭಾ" ಎಂದು ಕರೆಯಲ್ಪಡುವ ಪ್ರಜಾಪ್ರತಿನಿಧಿಗಳ ಸಭೆಯಾಗಿರುವ ಒಂದು ಕೆಳಮನೆಯನ್ನು ಇದು ಒಳಗೊಂಡಿದೆ. ನವದೆಹಲಿಯಲ್ಲಿನ ಸಂಸದ್ ಭವನದಲ್ಲಿರುವ (ಇದನ್ನು ಸಾಮಾನ್ಯವಾಗಿ ಸಂಸದ್ ಮಾರ್ಗ ಎಂದು ಕರೆಯಲಾಗುತ್ತದೆ) ಪ್ರತ್ಯೇಕ ಶಾಸನಸಭೆಗಳಲ್ಲಿ ಎರಡೂ ಸದನಗಳು ಸಭೆ ಸೇರುತ್ತವೆ. ಎರಡು ಸದನಗಳ ಪೈಕಿ ಯಾವುದಾದರೂ ಒಂದಕ್ಕೆ ಸೇರಿದ ಸದಸ್ಯರನ್ನು ಸಂಸತ್ ಸದಸ್ಯ ಅಥವಾ MP ಎಂಬುದಾಗಿ ಸಾಮಾನ್ಯವಾಗಿ ಉಲ್ಲೇಖಿಸಲಾಗುತ್ತದೆ. ಲೋಕಸಭೆಯ MPಗಳು ನೇರ ಚುನಾವಣೆಯಿಂದ ಚುನಾಯಿಸಲ್ಪಡುತ್ತಾರೆ ಮತ್ತು ರಾಜ್ಯಸಭೆಯ MPಗಳು ದಾಮಾಷಾ ಪ್ರಾತಿನಿಧ್ಯ ಪದ್ಧತಿಯ ಚುನಾವಣೆಗೆ ಅನುಸಾರವಾಗಿ ರಾಜ್ಯ ಶಾಸನಸಭೆಗಳ ಸದಸ್ಯರಿಂದ ಚುನಾಯಿಸಲ್ಪಡುತ್ತಾರೆ. 802 MPಗಳನ್ನು ಸಂಸತ್ತು ಒಳಗೊಂಡಿದ್ದು, ಇವರು ಪ್ರಪಂಚದಲ್ಲಿನ ಅತಿದೊಡ್ಡ ಪ್ರಜಾಸತ್ತೀಯ ಮತದಾರ ಸಮುದಾಯಕ್ಕೆ ಮತ್ತು ರಾಷ್ಟ್ರದ-ಉದ್ದಗಲಕ್ಕೂ ಇರುವ ಪ್ರಪಂಚದಲ್ಲಿನ ಅತಿದೊಡ್ಡ ಪ್ರಜಾಸತ್ತೀಯ ಮತದಾರ ಸಮುದಾಯಕ್ಕೆ (2009ರಲ್ಲಿದ್ದುದು 714 ದಶಲಕ್ಷ ಅರ್ಹ ಮತದಾರರು) ಸೇವೆ ಸಲ್ಲಿಸುತ್ತಾರೆ.[೧][೨]
ಭಾರತದ ಸಂಸತ್ತು | |
---|---|
Type | |
Type | Bicameral |
Houses | Rajya Sabha Lok Sabha |
Leadership | |
Mohammad Hamid Ansari (I) since 11 August 2007 | |
Seats | 790 245 Members of RS 545 Members of LS |
Elections | |
House of the People last election | Indian general election, 2009 |
Council of States last election | Indian general election, 2009 |
Meeting place | |
Sansad, ನವ ದೆಹಲಿ, India | |
Website | |
Rajya Sabha Website Lok SabhaWebsite |
ಪ್ರಜಾಪ್ರತಿನಿಧಿಗಳ ಸಭೆಯ 552 ಸದಸ್ಯರ ಪೈಕಿ 530 ಸದಸ್ಯರು ರಾಜ್ಯಗಳಲ್ಲಿನ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಾರೆ, ಮತ್ತು ಸಂಸತ್ತಿನಿಂದ ಅವಕಾಶ ನೀಡಲ್ಪಟ್ಟ ರೀತಿಯಲ್ಲಿ ಕಾನೂನಿನ ಅನುಸಾರದ ಅಥವಾ ಉಪ-ನಿಬಂಧನೆಯ ಅನುಸಾರದ ವಿಧಾನದಲ್ಲಿ ಆರಿಸಲ್ಪಡುವ 20 ಸದಸ್ಯರು ಕೇಂದ್ರಾಡಳಿತ ಪ್ರದೇಶಗಳನ್ನು ಪ್ರತಿನಿಧಿಸುತ್ತಾರೆ. ಮುಂದಿನ ಸಾರ್ವತ್ರಿಕ ಚುನಾವಣೆಯು ನಡೆಸಲ್ಪಡುವವರೆಗಿನ 5 ವರ್ಷ ಅವಧಿಯವರೆಗೆ ಈ ಸದಸ್ಯರು ಸೇವೆ ಸಲ್ಲಿಸುತ್ತಾರೆ. 2 ಸದಸ್ಯರು ರಾಷ್ಟ್ರಪತಿಯಿಂದ ಆರಿಸಲ್ಪಡುತ್ತಾರೆ. ಸದನದ ಸ್ಥಾನಗಳು ಜನಸಂಖ್ಯೆಯ ಆಧಾರದ ಮೇಲೆ ರಾಜ್ಯಗಳ ನಡುವೆ ಹಂಚಲ್ಪಡುತ್ತವೆ; ಅಂದರೆ, ಆ ಸಂಖ್ಯೆ ಮತ್ತು ರಾಜ್ಯದ ಜನಸಂಖ್ಯೆಯ ನಡುವಿನ ಅನುಪಾತವು, ಇದುವರೆಗೆ ಕಾರ್ಯಸಾಧ್ಯವಾಗಿರುವಂತೆ, ಎಲ್ಲಾ ರಾಜ್ಯಗಳಿಗೂ ಒಂದೇ ಆಗಿರುತ್ತದೆ.
ರಾಜ್ಯಗಳ ಪರಿಷತ್ತಿನ 250 ಸದಸ್ಯರು ಕಾಲವ್ಯತ್ಯಯಗೊಳಿಸಲ್ಪಟ್ಟ ಆರು-ವರ್ಷದ ಒಂದು ಅವಧಿಗೆ ಸೇವೆ ಸಲ್ಲಿಸುತ್ತಾರೆ. ಈ ಸದಸ್ಯರ ಪೈಕಿ 12 ಮಂದಿಯನ್ನು ರಾಷ್ಟ್ರಪತಿಗಳು ನಾಮಕರಣ ಮಾಡುತ್ತಾರೆ. ಅಷ್ಟೇ ಅಲ್ಲ, ಸಾಹಿತ್ಯ, ವಿಜ್ಞಾನ, ಕಲೆ ಮತ್ತು ಸಮಾಜಸೇವೆಯಂಥ ವಿಷಯಗಳಿಗೆ ಸಂಬಂಧಿಸಿದಂತೆ ವಿಶೇಷ ಜ್ಞಾನ ಅಥವಾ ಪ್ರಾಯೋಗಿಕ ಅನುಭವವನ್ನು ಹೊಂದಿರುವ ವ್ಯಕ್ತಿಗಳು ಹೀಗೆ ನಾಮಕರಣಗೊಂಡ ವ್ಯಕ್ತಿಗಳಲ್ಲಿ ಸೇರಿರುತ್ತಾರೆ. ಉಳಿದ 238 ಸದಸ್ಯರು ರಾಜ್ಯಗಳ ಪ್ರತಿನಿಧಿಗಳಾಗಿದ್ದು, ರಾಜ್ಯದ ಶಾಸನಸಭೆಯ ಚುನಾಯಿಸಲ್ಪಟ್ಟ ಸದಸ್ಯರಿಂದ ಅವರು ಚುನಾಯಿಸಲ್ಪಡುತ್ತಾರೆ; ವರ್ಗಾಯಿಸಬಹುದಾದ ಏಕೈಕ ಮತದ ಮೂಲಕ, ದಾಮಾಷಾ ಪ್ರಾತಿನಿಧ್ಯ ಪದ್ಧತಿಯ ಪ್ರಾತಿನಿಧ್ಯದ ವ್ಯವಸ್ಥೆಗೆ ಅನುಸಾರವಾಗಿ ಈ ಚುನಾಯಿಸುವಿಕೆ ನಡೆಯುತ್ತದೆ. ಪ್ರತಿ ಎರಡು ವರ್ಷಗಳಿಗೊಮ್ಮೆ, ಸರಿಸುಮಾರಾಗಿ ಪರಿಷತ್ತಿನ ಮೂರನೇ ಒಂದು ಭಾಗವು ಒಮ್ಮೆಗೆ ಚುನಾಯಿಸಲ್ಪಡುತ್ತದೆ.
ಭಾರತದ ಸಂಸತ್ತು
ಬದಲಾಯಿಸಿಕಾರ್ಯವೈಖರಿ, ಅಧಿಕಾರ ಮತ್ತು ಉದ್ದೇಶ
ಬದಲಾಯಿಸಿಭಾರತ ಗಣರಾಜ್ಯದ ರಾಷ್ಟ್ರಪತಿಗಳು ಮತ್ತು ಎರಡೂ ಶಾಸನಸಭೆಗಳನ್ನು ಸಂಸತ್ತು ಒಳಗೊಂಡಿರುತ್ತದೆ. ವಿಧಾಯಕದ ಪ್ರಕ್ರಿಯೆಯಲ್ಲಿ ಸದನ ಮತ್ತು ಪರಿಷತ್ತು ಸಮಾನ ಪಾಲುದಾರರಾಗಿರುತ್ತವೆ; ಆದಾಗ್ಯೂ, ಸಂವಿಧಾನವು ಪ್ರಜಾಪ್ರತಿನಿಧಿಗಳ ಸಭೆಗೆ ಒಂದಷ್ಟು ಅನನ್ಯ ಅಧಿಕಾರಗಳನ್ನು ನೀಡುತ್ತದೆ. ಆದಾಯ-ಸಂಗ್ರಹಿಸುವ ಅಥವಾ "ಹಣ"ದ ಮಸೂದೆಗಳು ಪ್ರಜಾಪ್ರತಿನಿಧಿಗಳ ಸಭೆಯಲ್ಲಿ ಜನ್ಮತಾಳಬೇಕಾಗುತ್ತವೆ. ರಾಜ್ಯಗಳ ಪರಿಷತ್ತು ಈ ಮಸೂದೆಗಳ ಕುರಿತಾಗಿ ಹದಿನಾಲ್ಕು ದಿನಗಳ ಒಂದು ಅವಧಿಯೊಳಗಾಗಿ ಸದನಕ್ಕೆ ಕೇವಲ ಶಿಫಾರಸುಗಳು, ಸಲಹೆಗಳನ್ನಷ್ಟೇ ಮಾಡಬಹುದಾಗಿರುತ್ತದೆ- ಈ ಕಾಲಾವಧಿಯ ನಂತರದಲ್ಲಿ ಮಸೂದೆಯು ಎರಡೂ ಶಾಸನಸಭೆಗಳಿಂದ ಅನುಮೋದಿಸಲ್ಪಟ್ಟಿದೆ ಎಂದು ಭಾವಿಸಲಾಗುತ್ತದೆ.
ಸದನಗಳು
ಬದಲಾಯಿಸಿಲೋಕಸಭೆ
ಬದಲಾಯಿಸಿಲೋಕಸಭಾ (ಹಿಂದಿಯಲ್ಲಿ) ಅಥವಾ ಲೋಕಸಭೆಯು "ಪ್ರಜಾಪ್ರತಿನಿಧಿಗಳ ಸದನ" ಅಥವಾ ಕೆಳಮನೆ ಎಂದೂ ಕರೆಯಲ್ಪಡುತ್ತದೆ. ಬಹುಮಟ್ಟಿಗೆ ಇದರ ಎಲ್ಲಾ ಸದಸ್ಯರೂ ಭಾರತದ ನಾಗರಿಕರಿಂದ ನೇರವಾಗಿ ಚುನಾಯಿಸಲ್ಪಟ್ಟವರಾಗಿರುತ್ತಾರೆ. ಲಿಂಗ, ಜಾತಿ, ಧರ್ಮ ಅಥವಾ ವರ್ಣಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ, 18 ವರ್ಷಗಳಷ್ಟು ವಯಸ್ಸನ್ನು ದಾಟಿದ, ಅನ್ಯಥಾ ಅನರ್ಹಗೊಂಡಿರದ ಪ್ರತಿಯೊಬ್ಬ ನಾಗರಿಕನೂ ಮತ ಚಲಾಯಿಸಲು ಅರ್ಹನಾಗಿರುತ್ತಾನೆ.
ಭಾರತದ ಸಂವಿಧಾನದಲ್ಲಿ ರೂಪಿಸಲ್ಪಟ್ಟಿರುವಂತೆ ಲೋಕಸಭೆಯು 552 ಸಂಖ್ಯೆಯವರೆಗೆ ಸದಸ್ಯರನ್ನು ಹೊಂದಲು ಸಾಧ್ಯವಿದೆ. ಇದು ಐದು ವರ್ಷಗಳ ಒಂದು ಅವಧಿಯನ್ನು ಹೊಂದಿರುತ್ತದೆ.ಲೋಕಸಭೆಯಲ್ಲಿನ ಸದಸ್ಯತ್ವ ಪಡೆಯುವುದಕ್ಕೆ ಸಂಬಂಧಿಸಿದಂತೆ ಅರ್ಹತೆಯನ್ನು ಪಡೆಯಲು ವ್ಯಕ್ತಿಯೋರ್ವನು ಭಾರತದ ಓರ್ವ ನಾಗರಿಕನಾಗಿರಬೇಕು ಮತ್ತು 25 ವರ್ಷಗಳು ಅಥವಾ ಅದಕ್ಕಿಂತ ಹೆಚ್ಚಿನ ವಯೋಮಾನದವನಾಗಿರಬೇಕು. ಅವನು ಮಾನಸಿಕವಾಗಿ ಸದೃಢನಾಗಿರಬೇಕು, ದಿವಾಳಿಯಾಗಿರಬಾರದು ಮತ್ತು ಅವನ/ಅವಳ ವಿರುದ್ಧ ಅಪರಾಧ ಸಂಬಂಧದ ಯಾವುದೇ ಕಾಯಿದೆ-ಕ್ರಮಗಳು ಜರುಗಿರಬಾರದು. ರಾಜ್ಯಗಳಲ್ಲಿನ ಏಕ ಸದಸ್ಯ ಜಿಲ್ಲೆಗಳಿಂದ 530 ಸಂಖ್ಯೆಯವರೆಗಿನ ಸದಸ್ಯರು, ಕೇಂದ್ರಾಡಳಿತ ಪ್ರದೇಶಗಳಿಂದ 20 ಸಂಖ್ಯೆಯವರೆಗಿನ ಸದಸ್ಯರು ಚುನಾಯಿಸಲ್ಪಡಬಹುದು; ಆಂಗ್ಲ-ಭಾರತೀಯ ಸಮುದಾಯವು ಸಮರ್ಥವಾಗಿ ಪ್ರತಿನಿಧಿಸಲ್ಪಟ್ಟಿಲ್ಲ ಎಂಬ ಭಾವನೆಯು ಒಂದು ವೇಳೆ ಭಾರತದ ರಾಷ್ಟ್ರಪತಿಗೆ ಬಂದಲ್ಲಿ, ಸದರಿ ಸಮುದಾಯಕ್ಕೆ ಸೇರಿದ ಎರಡಕ್ಕಿಂತ ಹೆಚ್ಚಿಲ್ಲದ ಸದಸ್ಯರನ್ನು ರಾಷ್ಟ್ರಪತಿಯವರು ನಾಮಕರಣ ಮಾಡುತ್ತಾರೆ. ಲೋಕಸಭೆಯು 545 ಸದಸ್ಯರನ್ನು ಹೊಂದಿದ್ದು, ಕೆಲವೊಂದು ಸ್ಥಾನಗಳನ್ನು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ವರ್ಗಗಳ ಪ್ರತಿನಿಧಿಗಳಿಗಾಗಿ ಮೀಸಲಿಡಲಾಗಿರುತ್ತದೆ.
ರಾಜ್ಯಸಭೆ
ಬದಲಾಯಿಸಿರಾಜ್ಯ ಸಭಾ ಅಥವಾ ರಾಜ್ಯಸಭೆಯನ್ನು "ರಾಜ್ಯಗಳ ಪರಿಷತ್ತು" ಅಥವಾ ಮೇಲ್ಮನೆ ಎಂಬುದಾಗಿಯೂ ಕರೆಯಲಾಗುತ್ತದೆ. ಇದರ ಸದಸ್ಯರು ರಾಜ್ಯಗಳ ವಿಧಾಯಕ ಘಟಕಗಳ ಸದಸ್ಯರಿಂದ ಪರೋಕ್ಷವಾಗಿ ಚುನಾಯಿಸಲ್ಪಡುತ್ತಾರೆ.
ರಾಜ್ಯಸಭೆಯು ಒಟ್ಟಾರೆಯಾಗಿ 250 ಸದಸ್ಯರನ್ನು ಹೊಂದಿದೆ. ಇದರ ಚುನಾವಣೆಗಳು ನಿಗದಿಪಡಿಸಲ್ಪಟ್ಟಿರುತ್ತವೆ ಮತ್ತು ಈ ಶಾಸನಸಭೆಯನ್ನು ವಿಸರ್ಜಿಸಲಾಗುವುದಿಲ್ಲ. ಇದರ ಪ್ರತಿಯೊಬ್ಬ ಸದಸ್ಯನೂ 6 ವರ್ಷಗಳವರೆಗಿನ ಒಂದು ಕಾರ್ಯಾವಧಿಯನ್ನು ಹೊಂದಿರುತ್ತಾನೆ ಮತ್ತು ಪ್ರತಿ 2 ವರ್ಷಗಳ ನಂತರ, ಒಟ್ಟು ಸ್ಥಾನಗಳ ಮೂರನೇ ಒಂದು ಭಾಗಕ್ಕಾಗಿ ಚುನಾವಣೆಗಳನ್ನು ನಡೆಸಲಾಗುತ್ತದೆ.
- ರಾಜ್ಯದ ಶಾಸನಸಭೆಯ ಚುನಾಯಿತ ಸದಸ್ಯರಿಂದ ರಾಜ್ಯಗಳ ಪ್ರತಿನಿಧಿಗಳು ಚುನಾಯಿಸಲ್ಪಡುತ್ತಾರೆ; ವರ್ಗಾಯಿಸಬಹುದಾದ ಏಕ ಮತದ ಮೂಲಕ, ದಾಮಾಷಾ ಪ್ರಾತಿನಿಧ್ಯ ಪದ್ಧತಿಯ ಪ್ರಾತಿನಿಧ್ಯದ ವ್ಯವಸ್ಥೆಗೆ ಅನುಸಾರವಾಗಿ ಈ ಪ್ರಕ್ರಿಯೆ ನಡೆಯುತ್ತದೆ.
- ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ಆ ಪ್ರದೇಶಕ್ಕೆ ಸಂಬಂಧಿಸಿದಂತಿರುವ ಚುನಾಯಕ ಸಮುದಾಯವೊಂದರ ಸದಸ್ಯರಿಂದ ಪರೋಕ್ಷವಾಗಿ ಚುನಾಯಿಸಲ್ಪಡುತ್ತಾರೆ; ದಾಮಾಷಾ ಪ್ರಾತಿನಿಧ್ಯ ಪದ್ಧತಿಯ ಪ್ರಾತಿನಿಧ್ಯದ ವ್ಯವಸ್ಥೆಗೆ ಅನುಸಾರವಾಗಿ ಈ ಪ್ರಕ್ರಿಯೆಯು ನಡೆಯುತ್ತದೆ.
ದೇಶದ ಒಕ್ಕೂಟ ಸ್ವರೂಪವನ್ನು ಕಾಯ್ದುಕೊಂಡು ಹೋಗಲು ಅನುವಾಗುವಂತೆ ರಾಜ್ಯಗಳ ಪರಿಷತ್ತನ್ನು ವಿನ್ಯಾಸಗೊಳಿಸಲಾಗಿರುತ್ತದೆ. ರಾಜ್ಯವೊಂದರಿಂದ ಬರುವ ಸದಸ್ಯರ ಸಂಖ್ಯೆಯು ಆ ರಾಜ್ಯದ ಜನಸಂಖ್ಯೆಯ ಮೇಲೆ ಅವಲಂಬಿತವಾಗಿರುತ್ತದೆ (ಉದಾಹರಣೆಗೆ ಉತ್ತರ ಪ್ರದೇಶದಿಂದ 31 ಸದಸ್ಯರು ಮತ್ತು ನಾಗಾಲ್ಯಾಂಡ್‌ನಿಂದ ಓರ್ವ ಸದಸ್ಯ).
ವ್ಯಕ್ತಿಯೋರ್ವನು ರಾಜ್ಯಸಭೆಯ ಓರ್ವ ಸದಸ್ಯನಾಗಬೇಕೆಂದರೆ ಅವನಿಗೆ ಕನಿಷ್ಟ ಪಕ್ಷ 30 ವರ್ಷ ವಯಸ್ಸಾಗಿರಬೇಕಾಗುತ್ತದೆ.
ಸಂಸದೀಯ ಕಾರ್ಯವಿಧಾನಗಳು ಮತ್ತು ಸಮಿತಿಗಳು
ಬದಲಾಯಿಸಿಕಾನೂನು ರೂಪಿಸುವ ಸಂಸದೀಯ ಕಾರ್ಯವಿಧಾನಗಳು
ಬದಲಾಯಿಸಿಭಾರತದಲ್ಲಿನ ಕಾನೂನು ರೂಪಿಸುವ ಸಂಸದೀಯ ಕಾರ್ಯವಿಧಾನಗಳು ಯುನೈಟೆಡ್ ಕಿಂಗ್‌ಡಂನ ಸಂಸತ್‌ನ್ನೇ ಮಾದರಿಯನ್ನಾಗಿ ಇಟ್ಟುಕೊಂಡಿರುವುದರಿಂದ, ಅದು ಅನುಸರಿಸುವ ಕಾರ್ಯವಿಧಾನಗಳನ್ನೇ ಅವು ಅತೀವವಾಗಿ ಹೋಲುತ್ತವೆ.
ಸಂಸದೀಯ ಸಮಿತಿಗಳು
ಬದಲಾಯಿಸಿಸಂಸದೀಯ ವ್ಯವಸ್ಥೆಯಲ್ಲಿ ಸಂಸದೀಯ ಸಮಿತಿಗಳು ಒಂದು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಸಂಸತ್ತು, ಕಾರ್ಯಾಂಗ ಮತ್ತು ಜನಸಾಮಾನ್ಯರ ನಡುವಿನ ಒಂದು ಸ್ಪಂದನಶೀಲ ಕೊಂಡಿಯಾಗಿ ಅವು ಕಾರ್ಯನಿರ್ವಹಿಸುತ್ತವೆ.
ಎರಡು ಅಂಶಗಳ ಕಾರಣದಿಂದಾಗಿ ಸಮಿತಿಗಳಿಗೆ ಸಂಬಂಧಿಸಿದ ಅಗತ್ಯವು ಹುಟ್ಟಿಕೊಳ್ಳುತ್ತದೆ; ಕಾರ್ಯಾಂಗದ ಕ್ರಮಗಳ ಕುರಿತಾಗಿ ಶಾಸಕಾಂಗವು ವಹಿಸಬೇಕಾದ ಜಾಗರೂಕತೆಗೆ ಸಂಬಂಧಿಸಿದ ಅಗತ್ಯವು ಮೊದಲನೆಯದಾದರೆ, ಇತ್ತೀಚಿನ ದಿನಗಳಲ್ಲಿ ಆಧುನಿಕ ಶಾಸಕಾಂಗವು ಭಾರೀ ಪ್ರಮಾಣ ಕೆಲಸದಿಂದಾಗಿ ಮಿತಿಮೀರಿದ-ಹೊರೆಯನ್ನು ಹೊಂದಿದ್ದು, ಅವುಗಳ ವಿಲೇವಾರಿಗೆ ಸಂಬಂಧಿಸಿದಂತೆ ಕೇವಲ ಸೀಮಿತ ಅವಧಿಯನ್ನು ಹೊಂದಿರುವುದರಿಂದ ಅದು ಎರಡನೆಯ ಕಾರಣವಾಗಿ ಹೊರಹೊಮ್ಮುತ್ತದೆ. ಇದರಿಂದಾಗಿ, ಪ್ರತಿಯೊಂದು ವಿಷಯವೂ ಸದನದ ಸಭಾಂಗಣದಲ್ಲಿಯೇ ಅಮೂಲಾಗ್ರವಾಗಿ ಮತ್ತು ವ್ಯವಸ್ಥಿತವಾಗಿ ಪರಿಶೀಲಿಸಲ್ಪಡಬೇಕು ಮತ್ತು ಪರಿಗಣಿಸಲ್ಪಡಬೇಕು ಎಂಬುದು ಅಸಾಧ್ಯವಾಗಿ ಪರಿಣಮಿಸುತ್ತದೆ. ಒಂದು ವೇಳೆ ಸುಸಂಬದ್ಧ ಎಚ್ಚರಿಕೆಯೊಂದಿಗೆ ಕೆಲಸವು ನಿರ್ವಹಿಸಲ್ಪಡಬೇಕು ಎಂಬುದೇ ಆಗಿದ್ದಲ್ಲಿ, ಇಡೀ ಸದನವು ವಿಶ್ವಾಸವನ್ನಿಟ್ಟಿರುವ ಸಂಸ್ಥೆಯೊಂದಕ್ಕೆ ಒಂದಷ್ಟು ಸಂಸದೀಯ ಹೊಣೆಗಾರಿಕೆಯನ್ನು ಸ್ವಾಭಾವಿಕವಾಗಿ ವಹಿಸಬೇಕಾಗಿ ಬರುತ್ತದೆ. ಆದ್ದರಿಂದ, ಸದನದ ನಿರ್ದಿಷ್ಟ ಕಾರ್ಯಚಟುವಟಿಕೆಗಳನ್ನು ಸಮಿತಿಗಳಿಗೆ ವಹಿಸುವ ಕ್ರಮವು ಒಂದು ಸಾಮಾನ್ಯ ಪರಿಪಾಠವಾಗಿಹೋಗಿದೆ. ಸಮಿತಿಯೊಂದು ತನಗೆ ಶಿಫಾರಸು ಮಾಡಿರುವ ಅಥವಾ ವಹಿಸಿಕೊಟ್ಟಿರುವ ವಿಷಯವೊಂದರ ಕುರಿತಾಗಿ ಪರಿಣಿತ ಸಲಹೆ ಅಥವಾ ತಜ್ಞ ವರದಿಯನ್ನು ಒದಗಿಸುವುದರಿಂದಾಗಿ, ಒಟ್ಟಾರೆಯಾಗಿ ಇದೊಂದು ಹೆಚ್ಚು ಅವಶ್ಯಕ ಕ್ರಮವಾಗಿ ಹೊರಹೊಮ್ಮಿದೆ.
ಸಮಿತಿಯೊಂದರಲ್ಲಿ ವಿಷಯವು ಸುದೀರ್ಘವಾಗಿ ಸಮಾಲೋಚಿಸಲ್ಪಡುತ್ತದೆ, ಅಭಿಪ್ರಾಯಗಳು ಮುಕ್ತವಾಗಿ ವ್ಯಕ್ತಪಡಿಸಲ್ಪಡುತ್ತವೆ, ವಿಷಯವು ವ್ಯಾಪಕವಾಗಿ ಪರಿಗಣಿಸಲ್ಪಡುತ್ತದೆ ಮತ್ತು ಈ ಪರಿಪಾಠವು ಒಂದು ವ್ಯವಹಾರದ-ರೀತಿಯ ವಿಧಾನದಲ್ಲಿ ಹಾಗೂ ಶಾಂತವಾದ ವಾತಾವರಣವೊಂದರಲ್ಲಿ ನಿರ್ವಹಿಸಲ್ಪಡುತ್ತದೆ. ಸಲಹೆಗಳನ್ನು ಒಳಗೊಂಡಿರುವ ಜ್ಞಾಪಕ ಪತ್ರಗಳು ಸ್ವೀಕರಿಸಲ್ಪಟ್ಟಾಗ, ಸಮರ್ಥವಾದ ಅಧ್ಯಯನಗಳು ನಡೆಸಲ್ಪಟ್ಟಾಗ, ಮತ್ತು ತೀರ್ಮಾನಗಳನ್ನು ತಳೆಯುವಲ್ಲಿ ಸಮಿತಿಗಳಿಗೆ ನೆರವಾಗುವಂಥ ಮೌಖಿಕ ಸಾಕ್ಷ್ಯವನ್ನು ಪಡೆದಾಗ, ಬಹುತೇಕ ಸಮಿತಿಗಳಲ್ಲಿ ಸಾರ್ವಜನಿಕರು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸಂಬಂಧ ಹೊಂದಿರುತ್ತಾರೆ.
ಸಂಸದೀಯ ಸಮಿತಿಗಳಲ್ಲಿ ಎರಡು ವಿಧಗಳಿವೆ. ಅವುಗಳೆಂದರೆ: ತಾತ್ಕಾಲಿಕ ಸಮಿತಿಗಳು ಮತ್ತು ಸ್ಥಾಯೀ ಸಮಿತಿಗಳು.
ಸ್ಥಾಯೀ ಸಮಿತಿಗಳು
ಬದಲಾಯಿಸಿಸಂಸತ್ತಿನ ಪ್ರತೀ ಸದನವೂ ವ್ಯವಹಾರ ಸಲಹಾ ಸಮಿತಿ, ಮನವಿಗಳ ಮೇಲಿನ ಸಮಿತಿ, ಸವಲತ್ತುಗಳ ಸಮಿತಿ ಮತ್ತು ನಿಯಮಗಳ ಸಮಿತಿ ಇತ್ಯಾದಿಯಂಥ ಸ್ಥಾಯೀ ಸಮಿತಿಗಳನ್ನು ಹೊಂದಿರುತ್ತದೆ.
ಸ್ಥಾಯೀ ಸಮಿತಿಗಳು ಕಾಯಮ್ಮಾದ ಮತ್ತು ನಿಯತವಾದ ಸಮಿತಿಗಳಾಗಿದ್ದು, ಸಂಸತ್ತಿನ ಒಂದು ಕಾಯಿದೆಯ ನಿಬಂಧನೆಗಳಿಗೆ ಅನುಸಾರವಾಗಿ ಅಥವಾ ಸಂಸತ್ತಿನಲ್ಲಿನ ಸಂಸದೀಯ ಕಾರ್ಯವಿಧಾನದ ನಿಯಮಗಳು ಮತ್ತು ವ್ಯವಹಾರದ ನಿಭಾವಣೆಯ ಅನುಸಾರವಾಗಿ ಅವನ್ನು ಕಾಲಾನುಕಾಲಕ್ಕೆ ರೂಪಿಸಲಾಗುತ್ತದೆ. ಈ ಸಮಿತಿಗಳ ಕೆಲಸವು ನಿರಂತರತೆಯ ಸ್ವರೂಪವನ್ನು ಹೊಂದಿರುತ್ತದೆ. ಹಣಕಾಸಿನ ಸಮಿತಿಗಳು, DRSCಗಳು ಮತ್ತು ಇತರ ಕೆಲವೊಂದು ಸಮಿತಿಗಳು ಸ್ಥಾಯೀ ಸಮಿತಿಗಳ ವರ್ಗದ ಅಡಿಯಲ್ಲಿ ಬರುತ್ತವೆ.
ಇವು ಅಧೀನದ ಅಥವಾ ಗೌಣವಾದ ಕಾನೂನು ರಚನೆಯ ಕುರಿತಾದ ಸಮಿತಿಗಳು, ಸರ್ಕಾರ ಭರವಸೆಗಳ ಕುರಿತಾದ ಸಮಿತಿ, ಅಂದಾಜುಗಳ ಮೇಲಿನ ಸಮಿತಿ, ಸಾರ್ವಜನಿಕ ಲೆಕ್ಕಪತ್ರಗಳ ಕುರಿತಾದ ಸಮಿತಿ ಮತ್ತು ಸಾರ್ವಜನಿಕ ಉದ್ಯಮಗಳ ಕುರಿತಾದ ಸಮಿತಿ ಹಾಗೂ ಇಲಾಖೀಯವಾಗಿ ಸಂಬಂಧಿಸಿದ ಸ್ಥಾಯೀ ಸಮಿತಿಗಳು (DRSCಗಳು) ಆಗಿರುತ್ತವೆ.
ತಾತ್ಕಾಲಿಕ ಸಮಿತಿಗಳು
ಬದಲಾಯಿಸಿಒಂದು ನಿರ್ದಿಷ್ಟ ಉದ್ದೇಶಕ್ಕೆ ಸಂಬಂಧಿಸಿದಂತೆ ತಾತ್ಕಾಲಿಕ ಸಮಿತಿಗಳು ನೇಮಿಸಲ್ಪಡುತ್ತವೆ. ಯಾವ ಕಾರ್ಯಭಾರಕ್ಕಾಗಿ ಅವು ನಿಯೋಜಿಸಲ್ಪಟ್ಟಿವೆಯೋ ಅದನ್ನು ಸಂಪೂರ್ಣಗೊಳಿಸಿ, ವರದಿಯೊಂದನ್ನು ಸಲ್ಲಿಸಿದ ನಂತರ ಅವುಗಳ ಚಟುವಟಿಕೆಯು ಸ್ಥಗಿತಗೊಳ್ಳುತ್ತದೆ. ಪ್ರಧಾನ ತಾತ್ಕಾಲಿಕ ಸಮಿತಿಗಳು, ಮಸೂದೆಗಳ ಮೇಲಿನ ಆಯ್ದ ಮತ್ತು ಜಂಟಿ ಸಮಿತಿಗಳಾಗಿರುತ್ತವೆ. ರೇಲ್ವೆ ಅಧಿವೇಶನ ಸಮಿತಿ, ಕರಡು ಪಂಚವಾರ್ಷಿಕ ಯೋಜನೆಗಳ ಸಮಿತಿಗಳು ಮತ್ತು ಹಿಂದಿ ಸಮಾನ ಪರಿಮಾಣಗಳ ಸಮಿತಿಯಂಥ ಇತರ ಸಮಿತಿಗಳು ನಿರ್ದಿಷ್ಟ ಉದ್ದೇಶಗಳಿಗಾಗಿ ನೇಮಿಸಲ್ಪಟ್ಟಂಥವುಗಳಾಗಿದ್ದವು.
ಸಂಸತ್ತಿನ ಸದನ ಸಂಕೀರ್ಣ ಇತ್ಯಾದಿಗಳಲ್ಲಿನ ಆಹಾರ ನಿರ್ವಹಣೆಯ ಕುರಿತಾದ ಜಂಟಿ ಸಮಿತಿಯೂ ಸಹ ತಾತ್ಕಾಲಿಕ ಸಮಿತಿಗಳ ವರ್ಗದ ಅಡಿಯಲ್ಲಿ ಬರುತ್ತದೆ.
ಉಲ್ಲೇಖಗಳು
ಬದಲಾಯಿಸಿ- ↑ Post Store (2009-06-08). "The Washington Post, June 8, 2009". Washingtonpost.com. Retrieved 2010-08-17.
- ↑ Ian Traynor in Brussels (2009-06-07). "The Guardian, Monday 8 June 2009". London: Guardian. Retrieved 2010-08-17.