ಕಣಗಿನಹಾಳ
ಭಾರತ ದೇಶದ ಗ್ರಾಮಗಳು
ಕಣಗಿನಹಾಳ ಕರ್ನಾಟಕದ ಗದಗ ಜಿಲ್ಲೆ ಯ ಗದಗ ತಾಲೂಕಿನ ಒಂದು ಹಳ್ಳಿ.. ಕಣಗಿನಹಾಳ ಗ್ರಾಮದಲ್ಲಿ ಸನ್ 1905 ಇಸವಿಯಲ್ಲಿ ಏಷ್ಯಾ ಖಂಡದಲ್ಲೇ ಪ್ರಪ್ರಥಮ ಸಹಕಾರಿ ಸಂಘ ಸ್ತಾಪನೆಯಾಯಿತು. ಶ್ರೀ ಸಿದ್ದನಗೌಡ ಸಣ್ಣ ರಾಮನಗೌಡ ಪಾಟೀಲ್ (1843-1933) ಇವರ ನೇತೃತ್ವದಲ್ಲಿ ಸನ್ 1905 ಇಸವಿಯ ಜುಲೈ 08ನೇ ತಾರೀಖಿನಂದು ಕಣಗಿನಹಾಳ ಕೃಷಿ ಸಹಕಾರಿ ಸಂಘ ಸ್ಥಾಪನೆಯಾಯಿತು. ಸ್ಥಾಪನೆಯಾದಾಗ ಜಮಾ ಆದ ಎರಡು ಸಾವಿರ ರೂಪಾಯಿಗಳನ್ನು ಗ್ರಾಮದಲ್ಲಿ ರೈಲ್ವೆ ನಿಲ್ದಾಣವನ್ನು ನಿರ್ಮಿಸಲು ಹಾಗೂ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಒದಗಿಸಲು ಬಳಸಲಾಯಿತು. ಕಣಗಿನಹಾಳ ಗ್ರಾಮವು ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದ್ದು ಜಿಲ್ಲಾ ಕೇಂದ್ರವಾದ ಗದಗದಿಂದ 10 ಕಿಲೋ ಮೀಟರ್ ದೂರದಲ್ಲಿದೆ.
ಕಣಗಿನಹಾಳ | |
ರಾಜ್ಯ - ಜಿಲ್ಲೆ |
ಕರ್ನಾಟಕ - ಗದಗ |
ನಿರ್ದೇಶಾಂಕಗಳು | |
ವಿಸ್ತಾರ | km² |
ಸಮಯ ವಲಯ | IST (UTC+5:30) |
ಜನಸಂಖ್ಯೆ - ಸಾಂದ್ರತೆ |
- /ಚದರ ಕಿ.ಮಿ. |
ಕೋಡ್‍ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- 582102 - + - ಕೆ ಎ 26 |