ತಿರುಪತಿ
ತಿರುಪತಿ ಹಿಂದೂ ಧರ್ಮದ ಪವಿತ್ರ ಕ್ಷೇತ್ರಗಳಲ್ಲೊಂದು. ಈ ಕ್ಷೇತ್ರವನ್ನು ಭೂವೈಕುಂಠ ಎಂದು ಕರೆಯಲಾಗುತ್ತದೆ. ತಿರುಪತಿಯು ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿದೆ. ಇಲ್ಲಿರುವ ವೆಂಕಟೇಶ್ವರ ದೇವಾಲಯವು ಜಗತ್ತಿನಲ್ಲಿಯೇ ಅತಿ ಹೆಚ್ಚು ಆದಾಯವಿರುವ ದೇವಾಲಯವೆಂದು ಪರಿಗಣಿಸಲಾಗಿದೆ. ಇದು ೧೦೮ ವೈಷ್ಣವ ದಿವ್ಯದೇಶಗಳಲ್ಲಿ ಒಂದು. ಬೆಂಗಳೂರಿನಿಂದ ತಿರುಪತಿಗೆ ಸುಮಾರು ೨೫೦ ಕಿ,ಮೀ, ದೂರವಿದೆ. ಬಸ್ಸು , ರೈಲು ಮತ್ತು ವಿಮಾನ ಮಾರ್ಗದಿಂದ ಹೋಗ ಬಹುದು.
ನೋಡಿ: ತಿರುಮಲ ವೆಂಕಟೇಶ್ವರ ದೇವಾಲಯ