ಕರ್ಜಗಿ
ಕರ್ಜಗಿ ಹಾವೇರಿ ಜಿಲ್ಲೆಗೆ ಸೇರಿದ ಹಾವೇರಿ ತಾಲ್ಲೂಕಿನ ಆಡಳಿತ ಕೇಂದ್ರ ಪಟ್ಟಣಕ್ಕೆ ಈಶಾನ್ಯದಲ್ಲಿ 11.7 ಕಿಮೀ ದೂರದಲ್ಲಿ ವರದಾ ನದಿಯ ತೀರದಲ್ಲಿರುವ ಒಂದು ಊರು. 1905ರವರೆಗೆ ಈ ಊರು ಒಂದು ತಾಲ್ಲೂಕಾಗಿದ್ದು ಕರ್ಜಗಿ ಅದರ ಆಡಳಿತ ಕೇಂದ್ರವಾಗಿತ್ತು. ಮುಂದೆ ತಾಲ್ಲೂಕು ಕೇಂದ್ರ ಹಾವೇರಿಗೆ ವರ್ಗಾಯಿಸಲಾಯಿತು.
ಕರ್ಜಗಿ | |
---|---|
ಗ್ರಾಮ | |
ದೇಶ | ಭಾರತ |
ಕರ್ನಾಟಕ | ಕರ್ನಾಟಕ |
ಜಿಲ್ಲೆ | ಹಾವೇರಿ |
ತಾಲೂಕು | ಹಾವೇರಿ |
Population (2001) | |
• Total | ೭,೫೦೮ |
ಭಾಷೆಗಳು | |
• ಅಧಿಕೃತ | ಕನ್ನಡ |
Time zone | UTC+5:30 (IST) |
ವಿಸ್ತೀರ್ಣ ಮತ್ತು ಜನಸಂಖ್ಯೆ
ಬದಲಾಯಿಸಿವಿಸ್ತೀರ್ಣ 28.38 ಚ.ಕಿಮೀ ಇತ್ತು. ಜನಸಂಖ್ಯೆ 7508 (2001). ಓದಿಗೆ ಶಾಲಾ ಸೌಲಭ್ಯವಿದೆ. ಊರು ಇತ್ತೀಚೆಗೆ ಇತರೆ ನಾಗರಿಕ ಸೌಲಭ್ಯಗಳನ್ನು ಹೊಂದಿದೆ.
ಸಾಮಾಜಿಕ
ಬದಲಾಯಿಸಿಇಲ್ಲಿ 32 ದೇವಾಲಯಗಳಿವೆ. ಇವುಗಳಲ್ಲಿ ಬ್ರಹ್ಮದೇವರು, ಮೌನೇಶ್ವರ, ವೀರ ಭದ್ರ ಹಾಗೂ ಪಾಂಡುರಂಗ ದೇವಾಲಯಗಳು ಮುಖ್ಯವಾದವು. ಕಾರ ಹುಣ್ಣಿಮೆಯಂದು ಬ್ರಹ್ಮದೇವರ ಜಾತ್ರೆ ಜರುಗುತ್ತದೆ. ಮೌನೇಶ್ವರ ಜಾತ್ರೆ, ವೀರಭದ್ರ ದೇವರ ಜಾತ್ರೆ, ಪಾಂಡುರಂಗನ ಜಾತ್ರೆ, ಚಮನಶಾವಲಿ ಉರಸುಗಳು ಇತರ ಉತ್ಸವಗಳು. ರೈಲ್ವೆ ನಿಲ್ದಾಣದಿಂದ ಊರಿಗೆ ಬರುವ ಮಾರ್ಗದಲ್ಲಿ ಶ್ರೀ ರಾಘವೇಂದ್ರಯತಿಗಳ ಮಠವಿದೆ.
ಹವಾಮಾನ
ಬದಲಾಯಿಸಿಇಲ್ಲಿಯ ಹವಾಮಾನ ಸಮ್ಮಿಶ್ರವಾಗಿದ್ದು ಮಳೆ ಸಾಧಾರಣವಾಗಿದೆ.
ವ್ಯವಸಾಯ ಮತ್ತು ಕಸುಬು
ಬದಲಾಯಿಸಿಹತ್ತಿ, ಜೋಳ, ಸೇಂಗ, ಅಕ್ಕಡಿಕಾಳುಗಳು ಇಲ್ಲಿಯ ಮುಖ್ಯ ಬೆಳೆಗಳು. ಈ ಊರಿಗೆ ಹತ್ತಿರದಲ್ಲಿರುವ ಕರಡಿಗುಡ್ಡದಲ್ಲಿ ಮನೆಕಟ್ಟುವ ಕಲ್ಲುಗಳೂ ಉರುವಲು ಕಟ್ಟಿಗೆಯೂ ದೊರೆಯುತ್ತವೆ. ಬಡಿಗತನ, ಕಮ್ಮಾರಿಕೆ, ನೇಕಾರಿಕೆ ಇಲ್ಲಿಯ ಮುಖ್ಯವಾದ ಕಸಬುಗಳು. ದೋತರ ಮತ್ತು ಸೀರೆಗಳ ನೇಯ್ಗೆ ಮುಖ್ಯವಾದದ್ದು. ಇಲ್ಲಿ ಹತ್ತಿ ಹಿಂಜುವ ಗಿರಣಿಗಳಿವೆ. ಹತ್ತಿ, ಅರಳೆ ಮತ್ತು ಹತ್ತಿಕಾಳುಗಳ ವ್ಯಾಪಾರ ನಡೆಯುತ್ತದೆ