ತಾಲ್ಲೂಕು

(ತಾಲೂಕು ಇಂದ ಪುನರ್ನಿರ್ದೇಶಿತ)

ಆಡಳಿತಾತ್ಮಕವಾಗಿ ಒಂದು ರಾಜ್ಯವನ್ನು ವಿಭಜಿಸುವಾಗ, ಜಿಲ್ಲೆಗಳಾಗಿಯು, ನಂತರ ಪ್ರತಿ ಜಿಲ್ಲೆಯನ್ನು ತಾಲ್ಲೂಕು ಗಳಾಗಿ ತಾಲ್ಲೂಕುಗಳನ್ನು ಹೋಬಳಿಗಳಾಗಿ ಪುನರ್ವಿಂಗಡಿಸಲಾಗುತ್ತದೆ.

ಆಡಳಿತಾತ್ಮಕ ಹಾಗು ಆರ್ಥಿಕವಾಗಿ ತಾಲ್ಲೂಕುಗಳಿಗೆ, ಒಂದು ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಪ್ರತಿ ತಾಲ್ಲೂಕಿಗೆ, ಒಬ್ಬ ತಹಶೀಲ್ದಾರ ನೇಮಿಸಲಾಗುತ್ತದೆ. ಇವರಿಗೆ ತಾಲ್ಲೂಕು ಮಟ್ಟದಲ್ಲಿ, ಜಿಲ್ಲಾಧಿಕಾರಿ ಅಧಿಕಾರವಿರುತ್ತದೆ.

ಪ್ರತಿ ತಾಲೂಕು ಮಟ್ಟದಲ್ಲಿ ತಾಲೂಕು ಕಚೇರಿ ತಾಲೂಕು ಕಚೇರಿ ಸಂಕಿರ್ಣ ಇದ್ದು ತಾಲೂಕು ಮಟ್ಟದ ಎಲ್ಲಾ ಕಚೇರಿಗಳು ಕಾರ್ಯ ನಿರ್ವಹಿಸುತ್ತವೆ.

ಭಾರತದ, ಕರ್ನಾಟಕ, ಮಹಾರಾಷ್ಟ್ರ, ಕೇರಳ, ತಮಿಳು ನಾಡು ಹಾಗು ಆಂಧ್ರ ಪ್ರದೇಶಗಳಲ್ಲಿ ಜಿಲ್ಲೆ-ತಾಲ್ಲೂಕು ವಿಭಜನೆ, ಸಾಮಾನ್ಯವಾಗಿ ಕಂಡು ಬರುತ್ತದೆ.

ಇವನ್ನು ನೋಡಿ

ಬದಲಾಯಿಸಿ

ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಚತ್ತೀಸ್ಗಡ, ಗೋವ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಶ್ಮೀರ, ಝಾರ್ಕಂಡ್, ಕರ್ನಾಟಕ, ಕೇರಳ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮೆಘಾಲಯ, ಮಿಝೋರಂ, ನಾಗಲ್ಯಂಡ್, ಒರಿಸ್ಸ, ಪಂಜಾಬ್, ರಾಜಸ್ಥಾನ, ಸಿಕ್ಕಿಂ, ತಮಿಳುನಾಡು, ತ್ರಿಪುರ, ಉತ್ತರಾಂಚಲ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ.

ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆ

ಬದಲಾಯಿಸಿ

ರಾಜ್ಯಚುನಾವಣಾ ಆಯೋಗದ ಪ್ರಕಟಣೆಯ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಯ ವೇಳಾಪಟ್ಟಿಯಂತೆ. ೨೦೧೬,ಫೆಬ್ರವರಿ ೧೩ ಮತ್ತು ೨೦ ರಂದು ಒಟ್ಟು ಎರಡು ಹಂತದಲ್ಲಿ ಚುನಾವಣೆಗಳು ನಡೆದಿದೆ. ಫೆಬ್ರವರಿ ೨೩ ರಂದು ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ರಾಜ್ಯದ (೨೬) ಜಿಲ್ಲಾ ಪಂಚಾಯಿತಿಗಳ ಒಟ್ಟು (೯೨೨) ಕ್ಷೇತ್ರಗಳಿಗೆ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆಯೆಂದು ನಿರ್ಧರವಾಗಿತ್ತು. ನಂತರ ವಿಸ್ತರಿಸಿ ೩೦ ಜಿಲ್ಲೆಗಳಿಗೂ, ೧೭೫ ತಾಲೂಕು ಪಂಚಾಯಿತಿಗಳ ೩೮೮೪(೩,೮೭೦) ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿ ಚುನಾವಣೆ ನಡೆಯಿತು. ಮೊದಲ ಹಂತದಲ್ಲಿ ೧೫ ಮತ್ತು ಎರಡನೇ ಹಂತದಲ್ಲಿ ೧೫ ಜಿಲ್ಲೆಗಳಲ್ಲಿ ಮತದಾನವು ನಡೆಯಿತು. (ವಿಜಯಪುರ, ಬೀದರ್, ರಾಯಚೂರುಮತ್ತು ಕಲಬುರಗಿ ಜಿಲ್ಲಾ ಪಂಚಾಯಿತಿಗಳ ಚುನಾವಣೆಗೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಆದ್ದರಿಂದ, ಈ ೪ ಜಿಲ್ಲಾ ಪಂಚಾಯಿತಿ ಹೊರತುಪಡಿಸಿ ಉಳಿದ ೨೬ ಜಿಲ್ಲಾ ಪಂಚಾಯಿತಿಗಳಿಗೆ ಮಾತ್ರಾ ಚುನಾವಣೆ ನಡೆಯಬೇಕಾಗಿತ್ತು.ಆದರೆ ಅದು ಕೊನೆ ಗಳಿಗೆಯಲ್ಲಿ ತೆರವು ಆಯಿತು) ೩೦ ಜಿಲ್ಲೆಗಳ ಒಟ್ಟು ೧,೦೮೦ ಕ್ಷೇತ್ರಗಳ ಮತ್ತು ೧೭೫ ತಾಲೂಕು ಪಂಚಾಯಿತಿಗಳ ೩೮೮೪ ಕ್ಷೇತ್ರಗಳಿಗೆ ಚುನಾವಣೆ ಚುನಾವಣೆಗ ಘೋಷಣೆ ಆಯಿತು.