ಮಲ್ಲಿಕಾರ್ಜುನ ಮನ್ಸೂರ್

ಒಬ್ಬ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ.

ಮಲ್ಲಿಕಾರ್ಜುನ ಭೀಮರಾಯಪ್ಪ ಮನ್ಸೂರ್ (೧೯೧೧–೧೯೯೨) ಒಬ್ಬ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ. ಇವರು ಜೈಪುರ-ಅತ್ರೋಲಿ ಘರಾನಾದ 'ಖಯಾಲಿ' ಶೈಲಿಯ ಸಂಗಿತಗಾರರಾಗಿದ್ದರು.[೧] ಇವರಿಗೆ ೩ ಪದ್ಮ ಪ್ರಶಸಿಗಳನ್ನು ನೀಡಿ ಭಾರತ ಸರ್ಕಾರ ಗೌರವಿಸಿದೆ: ೧೯೭೦ರಲ್ಲಿ ಪದ್ಮಶ್ರೀ, ೧೯೭೬ರಲ್ಲಿ ಪದ್ಮ ಭೂಷಣ, ಮತ್ತು ೧೯೯೨ರಲ್ಲಿ ಪದ್ಮವಿಭೂಷಣ.[೨]

Mallikarjun Mansur
ಹಿನ್ನೆಲೆ ಮಾಹಿತಿ
ಅಡ್ಡಹೆಸರುಮಲ್ಲಿಕಾರ್ಜುನ ಮನ್ಸೂರ್
ಜನನಡಿಸೆಂಬರ್ ೩೧, ೧೯೧೦
ಮೂಲಸ್ಥಳಮನ್ಸೂರ್, ಧಾರವಾಡ, ಕರ್ನಾಟಕ
ಸಂಗೀತ ಶೈಲಿಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ
ವೃತ್ತಿಗಾಯಕ
ಸಕ್ರಿಯ ವರ್ಷಗಳು೧೯೨೮(?) - ೧೯೯೨

ಮಲ್ಲಿಕಾರ್ಜುನ ಮನ್ಸೂರ್' ಕನ್ನಡ ನಾಡು ಕಂಡ ಶ್ರೇಷ್ಠ ಸಂಗೀತ ಪ್ರತಿಭೆ. ಇವರು ಹಾಡಿದ್ದು ಹಿಂದೂಸ್ತಾನಿ ಖಯಾಲ್ ಸಂಗೀತ ಶೈಲಿಯ ಜೈಪುರಿ-ಅತ್ರೊಲಿ ಘರಾಣೆಯಯಲ್ಲಿ. ನೀಲಕಂಠ ಬುವಾ ಮತ್ತು ಪ್ರಖ್ಯಾತ ಸಂಗೀತಕಾರ ಅಲ್ಲಾದಿಯಾ ಖಾನ್ ಅವರ ಪುತ್ರರಾದ ಮಂಜಿ ಖಾನ್ ಹಾಗೂ ಬುರಜಿ ಖಾನ್ ಇವರ ಸಂಗೀತ ಗುರುಗಳಲ್ಲಿ ಪ್ರಮುಖರಾಗಿದ್ದಾರೆ. ಸುಮಾರು ೬೦ ವರುಷಗಳಿಗಿಂತ ಹೆಚ್ಚು ಕಾಲ ದೇಶ-ವಿದೇಶಗಳಲ್ಲಿ ಸಂಗೀತ ಸುಧೆಯನ್ನು ಹರಿಸಿದ ಮಹಾನ್ ಸಂಗೀತಗಾರ ಮಲ್ಲಿಕಾರ್ಜುನ ಮನ್ಸೂರ್. ಬಾಲ್ಯದಲ್ಲಿ ನಾಟಕಗಳಲ್ಲಿ ಪಾತ್ರ ಮಾಡಿ, ಪ್ರಹ್ಲಾದ, ಧ್ರುವ, ನಾರದ ಮೊದಲಾದ ಪಾತ್ರಗಳ ಅಭಿನಯಕ್ಕಾಗಿ ಅಪಾರ ಜನಪ್ರಿಯತೆ ಗಳಿಸಿದರೂ, ಸಂಗೀತದ ಒಲವು ಅವರನ್ನು ಸಂಗೀತದ ಸಾಧನೆಗೆ ಕರೆದೊಯ್ಯಿತು. ಬಡ ಕುಟುಂಬದಿಂದ ಬಂದ ಮಲ್ಲಿಕಾರ್ಜುನ ಮನ್ಸೂರ್, ಸರಳ ಜೀವನ, ವಿನಯತೆ ಮತ್ತು ನೇರನುಡಿಗಾಗಿ ಪ್ರಸಿದ್ಧರು. ಸಂಗೀತವೇ ನನ್ನ ಜೀವನ, ನನ್ನ ಕಾಯಕ ಮತ್ತು ಪೂಜೆ ಎಂದು ಹೇಳಿ, ಬಾಳಿದವರು ಮಲ್ಲಿಕಾರ್ಜುನ ಮನ್ಸೂರ್. ಮಹಾತ್ಮ ಗಾಂಧೀಜಿ ಮತ್ತು ಧಾರವಾಡಮುರುಘಾ ಮಠಮೃತ್ಯುಂಜಯ ಮಹಾಸ್ವಾಮಿಗಳವರಿಂದ ಪ್ರಭಾವಿತರಾದ ಇವರು, ವಚನ ಸಂಗೀತಕ್ಕಾಗಿ ನೀಡಿದ ಕೊಡುಗೆ ಅಪಾರ.

ಇವರು ತಮ್ಮ ಜೀವನ ಚಿತ್ರವನ್ನು "ನನ್ನ ರಸಯಾತ್ರೆ" ಎಂಬ ಹೆಸರಿನ ಪುಸ್ತಕದಲ್ಲಿ ದಾಖಲಿಸಿದ್ದಾರೆ. ದೇಶದ ಪ್ರತಿಷ್ಠತ ಪ್ರಶಸ್ತಿ ಕಾಳಿದಾಸ ಸಮ್ಮಾನ್ ಪಡೆದ ಪ್ರಥಮ ಕನ್ನಡಿಗ ಸಂಗೀತಗಾರರು ಇವರು. ಕರ್ನಾಟಕ ವಿಶ್ವವಿದ್ಯಾಲಯವು ಇವರಿಗೆ ಗೌರವ ಡಾಕ್ಟರೇಟ್ ನೀಡಿದೆ.ಭಾರತ ಸರಕಾರ ಇವರಿಗೆ ಪದ್ಮವಿಭೂಷಣಪ್ರಶಸ್ತಿಯನ್ನಿತ್ತು ಗೌರವಿಸಿದೆ. ಪ್ರಚಾರ, ರಾಜಕೀಯದಿಂದ ದೂರ ಉಳಿದ ಮಲ್ಲಿಕಾರ್ಜುನ ಮನ್ಸೂರ್ ಪ್ರಶಸ್ತಿಗಳು,ಸನ್ಮಾನಗಳಿಗಾಗಿ ಹಾತೊರಯಲಿಲ್ಲ. ಇವರ ಸುಪುತ್ರ ರಾಜಶೇಖರ ಮನ್ಸೂರ್ ತಂದೆಯಂತೆ ಪ್ರಸಿದ್ಧ ಸಂಗೀತಕಾರರಾಗಿದ್ದಾರೆ.

ವೃತ್ತಿಜೀವನ ಬದಲಾಯಿಸಿ

 
Mallikarjun Mansur

ಮನ್ಸೂರ್ ಅವರು ದೊಡ್ಡ ಪ್ರಮಾಣದ ಅಪರೂಪದ (ಅಪ್ರಚಲಿತ) ರಾಗಗಳಾದ ಶುದ್ಧ ನಾಟ, ಅಸಾ ಜೋಜಿಯ, ಹೇಮ್ ನಾಟ್ , ಲಚಚಾಕ್, ಖಾತ್, ಶಿವಮತ್ ಭೈರವ್, ಬಿಹಾರಿ, ಸಂಪೂರ್ಣ ಮಾಲ್ಕೌಂಸ್, ಲಾಜವಂತಿ, ಅಡಂಬರಿ ಕೇದಾರ್, ಏಕ್ ನಿಶಾದ್ ಬಿಹಾಗ್ಡಾ ಮತ್ತು ಬಹಾದುರಿ ತೋಡಿ ಗಳನ್ನು ಜನಪ್ರಿಯಗೊಳಿಸಿದರು. ಹಾಡಿನ ಭಾವನಾತ್ಮಕ ವಿಷಯವನ್ನು ಅವರು ಕಳೆದುಕೊಳ್ಳದೇ ನಿರಂತರ, ಮಧುರ ಮತ್ತು ಮೀಟರ್ನಲ್ಲಿ ಹಾಡುತ್ತಿದ್ದರು ಅವರ ಧ್ವನಿ ಮತ್ತು ಶೈಲಿ ಮಂಜಿ ಖಾನ್ ಮತ್ತು ನಾರಾಯಣರಾವ್ ವ್ಯಾಸ್ನಂತೆ ಹೋಲುತ್ತಿತ್ತು, ಆದರೆ ಕ್ರಮೇಣ ಅವರು ತಮ್ಮ ಸ್ವಂತ ಶೈಲಿಯ ಚಿತ್ರಣವನ್ನು ಅಭಿವೃದ್ಧಿಪಡಿಸಿದರು.

ಅವರು ಅವರ ಮಾಸ್ಟರ್ಸ್ ವಾಯ್ಸ್ ಜೊತೆಗೆ ಸಂಗೀತ ನಿರ್ದೇಶಕರಾಗಿದ್ದರು ಮತ್ತು ಆಲ್ ಇಂಡಿಯಾ ಆಕಾಶವಾಣಿ ಕೇಂದ್ರ ಧಾರವಾಡದಲ್ಲಿ ಸಂಗೀತ ಸಲಹೆಗಾರಾಗಿದ್ದರು.

ಬಾಹ್ಯ ಸಂಪರ್ಕಗಳು ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. http://www.deccanherald.com/content/88639/five-decades-uncompromised-music.html
  2. "Padma Awards". Ministry of Communications and Information Technology (India). Retrieved 2009-04-08.

+