ಮುಖ್ಯ ಮೆನು ತೆರೆ

ಪದ್ಮಶ್ರೀ ಕಲೆಗಳು, ಶಿಕ್ಷಣ, ಕೈಗಾರಿಕೆ, ಸಾಹಿತ್ಯ, ವಿಜ್ಞಾನ, ಸಮಾಜಸೇವೆ ಮತ್ತು ಸಾರ್ವಜನಿಕ ಜೀವನವನ್ನು ಒಳಗೊಂಡಂತೆ ವಿವಿಧ ಕಾರ್ಯಕ್ಷೇತ್ರಗಳಲ್ಲಿ ವಿಶೇಷ ಕೊಡುಗೆಯನ್ನು ಗೌರವಿಸಲು ಸಾಮಾನ್ಯವಾಗಿ ಭಾರತೀಯ ನಾಗರಿಕರಿಗೆ ಭಾರತ ಸರ್ಕಾರ ನೀಡುವ ನಾಲ್ಕನೇ ಅತಿದೊಡ್ಡ ನಾಗರೀಕ ಪ್ರಶಸ್ತಿ.

ಪದ್ಮ ಶ್ರೀ (ಹಾಗೂ ಪದ್ಮಶ್ರೀ)
Padma Shri India IIIe Klasse.jpg
ಪ್ರಶಸ್ತಿಯ ವಿವರ
ಮಾದರಿ ನಾಗರೀಕ
ವರ್ಗ ರಾಷ್ಟ್ರೀಯ
ಪ್ರಾರಂಭವಾದದ್ದು ೧೯೫೪
ಮೊದಲ ಪ್ರಶಸ್ತಿ ೧೯೫೪
ಕಡೆಯ ಪ್ರಶಸ್ತಿ ೨೦೧೩
ಒಟ್ಟು ಪ್ರಶಸ್ತಿಗಳು ೨೫೭೭
ಪ್ರಶಸ್ತಿ ನೀಡುವವರು ಭಾರತ ಸರ್ಕಾರ
ಪ್ರಶಸ್ತಿಯ ಶ್ರೇಣಿ
ಪದ್ಮಭೂಷಣಪದ್ಮ ಶ್ರೀ (ಹಾಗೂ ಪದ್ಮಶ್ರೀ) → none

ಪ್ರಶಸ್ತಿಯ ಬಗ್ಗೆಸಂಪಾದಿಸಿ

  • ಪದ್ಮಶ್ರೀ ನಾಗರಿಕ ಪ್ರಶಸ್ತಿಗಳ ಶ್ರೇಣಿಯಲ್ಲಿ ಭಾರತ ರತ್ನ, ಪದ್ಮ ವಿಭೂಷಣ ಮತ್ತು ಪದ್ಮ ಭೂಷಣಗಳ ನಂತರ ನಾಲ್ಕನೆಯದಾಗಿ ಬರುತ್ತದೆ. ಅದರ ಅಗ್ರಭಾಗದ ಮೇಲೆ, ದೇವನಾಗರಿಯಲ್ಲಿ ಪದ್ಮ ಮತ್ತು ಶ್ರೀ ಶಬ್ದಗಳು ಕಮಲ ಹೂವಿನ ಮೇಲೆ ಮತ್ತು ಕೆಳಗೆ ಕಾಣಿಸುತ್ತವೆ.
  • ದೇಶಕ್ಕೆ ಸಲ್ಲಿಸುವ ಉತ್ಕೃಷ್ಟ ಸೇವೆಗಾಗಿ ಈ ಪ್ರಶಸ್ತಿಯನ್ನು ಕೊಡಮಾಡಲಾಗುತ್ತದೆ. ಪದ್ಮ ಪ್ರಶಸ್ತಿಗಳೂ ೧೯೫೪ ರಲ್ಲಿಯೇ ಸ್ಥಾಪಿಸಲಾಯಿತು. ೧೯೭೮, ೧೯೭೯, ೧೯೯೩ ಹಾಗೂ ೧೯೯೭ರಲ್ಲಿ ಪ್ರಶಸ್ತಿಗಳನ್ನು ವಿವಿಧ ಕಾರಣಗಳಿಂದ ನೀಡಲಾಗಿಲ್ಲ. ಪ್ರಶಸ್ತಿಗಳು ಪ್ರತಿವರ್ಷದಲ್ಲೂ ರಾಷ್ಟ್ರದ ನಾಗರಿಕರ ಸಾಧನೆಗಳಿಗಾಗಿ ಗಣತಂತ್ರ ದಿನದ ಶುಭೋತ್ಸವದ ದಿನದಂದು ರಾಷ್ಟ್ರಪತಿಗಳ ಹಸ್ತದಿಂದ ಸನ್ಮಾನಮಾಡಲಾಗುತ್ತಿದೆ. (Padma) ಪದ್ಮಪ್ರಶಸ್ತಿಗಳ ಕ್ರಮ ಹೀಗಿದೆ :
  1. ಪದ್ಮ ವಿಭೂಷಣ, ಎರಡನೆಯ ಕ್ರಮದಲ್ಲಿದೆ.
  2. ಪದ್ಮಭೂಷಣ, ಮೂರನೆಯ ಕ್ರಮದಲ್ಲಿದೆ.
  3. ಪದ್ಮಶ್ರೀ, ನಾಲ್ಕನೆಯ ಕ್ರಮದಲ್ಲಿದೆ. [೧]

ಇತಿಹಾಸಸಂಪಾದಿಸಿ

ಪದ್ಮಶ್ರೀ ಕಲೆ, ಚಲನಚಿತ್ರ, ಶಿಕ್ಷಣ, ಕೈಗಾರಿಕೆ, ಸಾಹಿತ್ಯ, ವಿಜ್ಞಾನ, ಸಮಾಜಸೇವೆ,ಕ್ರೀಡೆ, ವೈಧ್ಯಕೀಯ ಮತ್ತು ಸಾರ್ವಜನಿಕ ಜೀವನವನ್ನು ಒಳಗೊಂಡಂತೆ ವಿವಿಧ ಕಾರ್ಯಕ್ಷೇತ್ರಗಳಲ್ಲಿ ವಿಶೇಷ ಕೊಡುಗೆಯನ್ನು ಗೌರವಿಸಲು ಸಾಮಾನ್ಯವಾಗಿ ಭಾರತೀಯ ನಾಗರಿಕರಿಗೆ ಭಾರತ ಸರ್ಕಾರ ನೀಡುವ ನಾಲ್ಕನೇ ಅತಿದೊಡ್ಡ ನಾಗರೀಕ ಪ್ರಶಸ್ತಿ. ಆದಾಗ್ಯೂ ಈ ಪ್ರಶಸ್ತಿಯನ್ನು ಭಾರತೀಯರಲ್ಲದ ಆದರೂ ಭಾರತಕ್ಕೆ ಅನೇಕ ವಿಧವಾಗಿ ಸೇವೆಸಲ್ಲಿಸಿದ ಆಯ್ದ ಕೆಲವರಿಗೆ ಕೂಡ ಈ ಪ್ರಶಸ್ತಿಯನ್ನು ನೀಡಲಾಗಿದೆ. ಆಯ್ಕೆ ಪ್ರಕ್ರಿಯೆಗಳ ಬಗ್ಗೆ ಅಲ್ಲಲ್ಲಿ ಕೆಲವು ಅಸಮಾಧಾನಗಳು ಕೇಳಿಬಂದಿದ್ದು, ಅರ್ಹ ಕಲಾವಿದರು ಸಾಕಷ್ಟು ಬಾರಿ ಇದರಿಂದ ವಂಚಿತರಾಗಿದ್ದಾರೆ ಎಂಬ ಮಾತುಗಳೂ ಕೇಳಿಬಂದಿವೆ.[ಸೂಕ್ತ ಉಲ್ಲೇಖನ ಬೇಕು] ಪ್ರಶಸ್ತಿಯನ್ನು ಗಮನಿಸಿದಾಗ, ಪದ್ಮ ಎಂಬ ಪದವು ಸಂಸ್ಕೃತದ ಕಮಲ ಎಂದೂ, ಶ್ರೀ ಪದವು ದೇವನಾಗರಿ ಇಂದ ತೆಗೆದುಕೊಳ್ಳಲ್ಪಟ್ಟಿದ್ದು, ಕಮಲ ಹೂವಿನ ಮೇಲೆ ಮತ್ತು ಕೆಳಗೆ ಕಾಣಿಸುತ್ತವೆ. ಇದರ ರೇಖಾ ವಿನ್ಯಾಸವು ಎರಡೂ ಬದಿಯಿಂದ ಕಂಚಿನ ಬಣ್ಣದ್ದಾಗಿದ್ದು, ಎಲ್ಲ ಉಬ್ಬು ರೇಖೆಗಳು ಬಿಳಿಯ ಚಿನ್ನದ ಬಣ್ಣದ್ದಾಗಿರುತ್ತವೆ. As of 2013, ೨೫೭೭ ಜನ ಈ ಪ್ರಶಸ್ತಿಯನ್ನು ಪಡೆದಿದ್ದಾರೆ.[೨][೩][೪][೫]

ಪುರಸ್ಕೃತರ ಪಟ್ಟಿಸಂಪಾದಿಸಿ

ಉಲ್ಲೇಖಗಳುಸಂಪಾದಿಸಿ

ಬಾಹ್ಯ ಕೊಂಡಿಗಳುಸಂಪಾದಿಸಿ