ಧಮ್ಮ

ವಿಜಯಲಕ್ಷ್ಮೀ

ಪ್ರದಕ್ಷಿಣಕಾರವಾಗಿ ಮೇಲಿನ ಸಾಲಿನ ಎಡಗಡೆಯಿಂದ: ವಿನ್ಸೆಂಟ್‌ ವಾನ್ ಗಾಗ್‌ ರ ಸ್ವಚಿತ್ರ, ಆಫ್ರಿಕಾದ ಚೋಕ್ವೆ ವಿಗ್ರಹ, ಸಾಂಡ್ರೋ ಬೊಟೊಸೆಲ್ಲಿಯ ವಿನಸ್‌ ನ ಹುಟ್ಟಿನ ಬಗೆಗಿನ ವಿವರಣೆ ಮತ್ತು ಜಪಾನಿನ ಷಿಸಾ ಸಿಂಹ.

ಕಲೆಯ ಬಗ್ಗೆ ಸಂಕ್ಷಿಪ್ತ ವಿವರಣೆ

ಬದಲಾಯಿಸಿ

ಕಲೆ ಎನ್ನುವುದು ಭಾವನೆಗಳು ಅಥವಾ ಅರಿವಿನ ಮೇಲೆ ಪರಿಣಾಮವಾಗುವ ಹಾಗೆ ಬುದ್ದಿ ಪೂರ್ವಕವಾಗಿ ಜೋಡಿಸಲಾದ ಅಂಶಗಳ ರೂಪ. ಕಲೆಯು ಸಂಗೀತ, ಸಾಹಿತ್ಯ, ಸಿನೆಮಾ, ಫೋಟೋಗ್ರಫಿ, ಶಿಲ್ಪಕಲೆ ಮತ್ತು ವರ್ಣಚಿತ್ರಕಲೆ (ಪೇಂಟಿಂಗ್) ಗಳನ್ನೊಳಗೊಂಡಂತೆ ಮನುಷ್ಯನ ಅನೇಕ ಚಟುವಟಿಕೆಗಳನ್ನು, ಕಲ್ಪನಾ ಸೃಷ್ಟಿಗಳನ್ನು ಮತ್ತು ಭಾವನೆಗಳನ್ನು ಅಭಿವ್ಯಕ್ತಿಸುವ ಎಲ್ಲಾ ಪ್ರಕಾರಗಳನ್ನು ಆವರಿಸಿಕೊಂಡಿದೆ. ಕಲೆಯ ಅರ್ಥವನ್ನು ತತ್ವಜ್ಞಾನದ ಶಾಖೆಯಾದ ಸೌಂದರ್ಯ ಮೀಮಾಂಸೆಯಲ್ಲಿ (ಎಸ್ತೆಟಿಕ್ಸ್) ವ್ಯಾಖ್ಯಾನಿಸಲಾಗಿದೆ. ಕಲೆಯ ಬಗೆಗಿನ ವ್ಯಾಖ್ಯಾನ ಮತ್ತು ಅದರ ಯೋಗ್ಯತೆ ನಿರ್ಧರಿಸುವುದು 20ನೇ ಶತಮಾನದಿಂದೀಚೆಗೆ ಬಹಳ ದೊಡ್ದ ಸಮಸ್ಯೆಯಾಗಿದೆ. ರಿಚರ್ಡ್ ವೊಲೆಹಿಮ್ ಮೂರು ಹಾದಿಗಳನ್ನು (ಅಪ್ರೋಚ್‌)ಗುರುತಿಸುತ್ತಾನೆ: ಯಥಾರ್ಥ ವಾದ (ರಿಯಲಿಸ್ಟ್), ಇದರ ಪ್ರಕಾರ ಸೌಂದರ್ಯಸ್ವಾದನೆಯ ಗುಣ ಯಾವುದೇ ಮನುಷ್ಯರ ದೃಷ್ಟಿಗೆ ಹೊರತಾಗಿ ಸ್ವತಂತ್ರವಾಗಿರುತ್ತದೆ. (ಅಬ್ಸಲ್ಯೂಟ್ ಆಗಿರುತ್ತದೆ); ವಾಸ್ತವಿಕತಾ ವಾದ (ಆಬ್ಜೆಕ್ಟಿವಿಸ್ಟ್). ಇದರ ಪ್ರಕಾರ ಕೂಡ ಸೌಂದರ್ಯಸ್ವಾದನೆಯ ಗುಣ ಸ್ವತಂತ್ರವಾಗಿದ್ದರೂ (ಅಬ್ಸಲ್ಯೂಟ್ ಆಗಿದ್ದರೂ), ಮನುಷ್ಯರ ಅನುಭವವಗಳ ಮೇಲೆ ಅವಲಂಬಿತವಾಗಿರುತ್ತದೆ; ಸಾಪೇಕ್ಷತಾ (ರೆಲಟಿವಿಸ್ಟ್) ದೃಷ್ಟಿಕೋನ, ಇದರ ಪ್ರಕಾರ ಸೌಂದರ್ಯಸ್ವಾದನೆ ಗುಣವು ಸ್ವತಂತ್ರವಲ್ಲ (ಅಬ್ಸಲ್ಯೂಟ್ ಅಲ್ಲ), ಆದರೆ ಇದು ಮನುಷ್ಯರ ಅನುಭವಗಳ ಮೇಲೆ ಅವಲಂಬಿತವಾಗಿದೆ ಹಾಗು ಬೇರೆ ಬೇರೆ ಮನುಷ್ಯರಲ್ಲಿ ಇದು ವ್ಯತ್ಯಾಸವಾಗುತ್ತದೆ.[] ಒಂದು ಕಲಾಸೃಷ್ಟಿಯ ವೈಶಿಷ್ಟ್ಯವು ಅದನ್ನು ಸೃಷ್ಟಿಸಿದವನ ಉದ್ದೇಶಗಳನ್ನು ತೋರ್ಪಡಿಸಬೇಕೆಂದು ಇರುವುದಿಲ್ಲ. ಆದರೆ ಕೆಲವೊಂದು ಸಂದರ್ಭದಲ್ಲಿ ಅದರ ಉದ್ಧೇಶಗಳು ಬಾಹ್ಯಕ್ಕೆ ಸುಲಭವಾಗಿ ಗೋಚರವಾಗಬಹುದು. ಮೇಲ್ನೊಟಕ್ಕೆ ಏನನ್ನನಾದರೂ ತುಂಬಲು ಬಳಸುವ ಒಂದು ಕಪ್, ಕೂಡ ಕೆಲವೊಮ್ಮೆ ಕಲೆಯೆಂದು ಪರಿಗಣಿಸಲ್ಪಡಬಹುದು. ಹಾಗೆಯೇ ಚಿತ್ರಕಲೆಯನ್ನು (ಪೇಂಟಿಂಗ್), ಹೆಚ್ಚಿನ ಸಂಖ್ಯೆಯಲ್ಲಿ ತಯಾರಿಸಿದಾಗ ಅದನ್ನು ವೃತ್ತಿ/ಕಸಬು (ಕ್ರಾಫ್ಟ್) ಎಂದು ಪರಿಗಣಿಸಲಾಗುತ್ತದೆ. ಸಾಂಪ್ರದಾಯಿಕವಾಗಿ ಕಲೆ ಎನ್ನುವ ಶಬ್ದವನ್ನು ಯಾವುದಾದರೂ ಕೌಶಲ್ಯ ಅಥವಾ ನೈಪುಣ್ಯಕ್ಕೆ ಬಳಸಲಾಗುತ್ತದೆ. ಈ ಭಾವನೆ ರೋಮ್ಯಾಂಟಿಕ್ ಚಳವಳಿಯ ಕಾಲಘಟ್ಟದಲ್ಲಿ ಬದಲಾಯಿತು. ಈ ಕಾಲದಲ್ಲಿ ಕಲೆಯನ್ನು "ಮನುಷ್ಯರ ಅಲೋಚನೆಯ (ಬೌದ್ಧಿಕ ಸಾಮರ್ಥ್ಯದ) ವಿಶೇಷ ಸಾಮರ್ಥ್ಯವೆಂದು ಪರಿಗಣಿಸಿ, ಇದನ್ನು ಧರ್ಮ ಮತ್ತು ವಿಜ್ಞಾನದೊಂದಿಗೆ ವರ್ಗೀಕರಿಸಲಾಯಿತು".[] ಸಾಮಾನ್ಯವಾಗಿ ಕಲೆಯನ್ನು, ಯೋಚನೆ ಮತ್ತು ಭಾವನೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಮಾಡಲಾಗುತ್ತದೆ (ಸೃಷ್ಟಿಸಲಾಗುತ್ತದೆ). ಕಲೆಯ ಲಕ್ಷಣವನ್ನು ರಿಚರ್ಡ್ ವೊಲೆಹಿಮ್, "ಮನುಷ್ಯ ಸಂಸ್ಕೃತಿಯ ಅತ್ಯಂತ ಹಳೆಯ ಮತ್ತು ಭೇದಿಸಲಾಗದ ರಹಸ್ಯ" ಎಂದು ಬಣ್ಣಿಸಿದ್ದಾನೆ.[] ಕಲೆಯು ಭಾವನೆಗಳನ್ನು ಅಭಿವ್ಯಕ್ತಪಡಿಸುವ ವಾಹಕ ಅಥವಾ ಭಾವನೆ ಅಥವಾ ಯೋಜನೆಗಳನ್ನು ಸಂವಹನ ಮಾಡುವ (ಕಮ್ಯೂನಿಕೇಷನ್) ಮಾಡುವ ಮಾಧ್ಯಮವೆಂದು ವ್ಯಾಖ್ಯಾನಿಸಲಾಗಿದೆ. ಕಲೆಯನ್ನು ಫಾರ್ಮಲ್ ಎಲಿಮೆಂಟ್ಸ್‌‌ಗಳನ್ನು ಒಳಹೊಕ್ಕು ನೋಡುವ ಮತ್ತು ಮೆಚ್ಚುವ ಸಾಧನವೆಂದು ಕೂಡ ಬಣ್ಣಿಸಲಾಗಿದೆ. ಇದಲ್ಲದೆ ಇದನ್ನು ಮಿಮಿಸಿಸ್ ಅಥವಾ ಪ್ರತಿರೂಪ (ರೆಪ್ರೆಸೆಂಟೆಷನ್) ಎಂದು ಕೂಡ ಹೇಳಲಾಗುತ್ತದೆ. ಲಿಯೋ ಟಾಲ್‌ಸ್ಟಾಯ್ ಪ್ರಕಾರ ಕಲೆ, ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನೊಂದಿಗೆ ಸಂವಹನ (ಕಮ್ಯೂನಿಕೇಟ್) ಮಾಡಲು ಬಳಸುವ ಪರೋಕ್ಷ (ಇನ್‌ಡೈರೆಕ್ಟ್) ಮಾಧ್ಯಮ.[] ಬೆನೆಡೆಟ್ಟೊ ಕ್ರೊಸೆ ಮತ್ತು ಆರ್.ಜಿ. ಕಾಲಿಂಗ್‌ವುಡ್, ಐಡಿಯಲಿಸ್ಟ್ ದೃಷ್ಟಿ ಕೋನವನ್ನು ಮಂಡಿಸಿದರು. ಇದರ ಪ್ರಕಾರ ಕಲೆ ಭಾವನೆಗಳನ್ನು ಅಭಿವ್ಯಕ್ತಿಸುತ್ತದೆ. ಹೀಗಾಗಿ ಯಾವುದೇ ಕಲಾಸೃಷ್ಟಿಯು ಕಲೆಯನ್ನು ಸೃಷ್ಟಿಸುವವನ ಚಿಂತನೆಯಲ್ಲಿರುತ್ತದೆ.[][] ಕಲೆಯನ್ನು ಒಂದು ಫಾರ್ಮ್‌(ರೂಪ) ಎನ್ನುವ ತತ್ವದ(ಥಿಯರಿ ಆಫ್ ಆರ್ಟ್ ಆಸ್ ಫಾರ್ಮ್)ಹಿಂದೆ, ಇಮಾನ್ಯುಯಲ್ ಕಾಂಟ್ ರ ಸಿದ್ಧಾಂತವಿದೆ. ಇದನ್ನು 20ನೇ ಶತಮಾನದ ಆದಿಯಲ್ಲಿ ರೋಜರ್ ಫ್ರೈ ಮತ್ತು ಕ್ಲೈವ್ ಬೆಲ್‌ ಅಭಿವೃದ್ಧಿ ಪಡಿಸಿದರು. ಕಲೆ ಮಿಮೆಸಿಸ್ ಅಥವಾ ಪ್ರತಿರೂಪ (ರೆಪ್ರೆಸೆಂಟೆಷನ್) ಎನ್ನುವ ತತ್ವದ ಹಿಂದೆ ಅರಿಸ್ಟಾಟಲ್‌ನ ಸಿದ್ಧಾಂತಗಳ ಬೇರುಗಳಿವೆ.[] ತೀರಾ ಇತ್ತೀಚೆಗೆ, ಮಾರ್ಟಿನ್ ಹೈಡೆಗೆರ್ ರಿಂದ ಪ್ರಭಾವಿತರಾದ ಚಿಂತಕರು ಕಲೆಯನ್ನು ಒಂದು ಸಮುದಾಯವು ಅವರ ಭಾವನೆಗಳನ್ನು ವ್ಯಕ್ತಪಡಿಸುವ ಮತ್ತು ಅರ್ಥೈಸುವ ಸಲುವಾಗಿ ಅಭಿವೃದ್ದಿ ಪಡಿಸುವ ಮಾಧ್ಯಮ ಎಂದು ಅಭಿಪ್ರಾಯಪಟ್ಟಿದ್ದಾರೆ.[]

 
ಮೋಸಾರ್ಬಿಕ್‌ ಬೀಟ್‌ಅಸ್‌‌ರ ಮಿನಿಯೇಚರ್ (ಸೂಕ್ಷ್ಮ ಚಿತ್ರಣ); ಸ್ಪೇನ್‌ 10ನೇ ಶತಮಾನದ ಕೊನೆ.

ಪದದ ವಿವರಣೆ

ಬದಲಾಯಿಸಿ
Works of art worldwide can tell stories or simply express an aesthetic truth or feeling. Panorama of Along the River During the Qingming Festival, an 18th century reproduction of the 12th century original by Zhang Zeduan

ಬ್ರಿಟಾನಿಕಾ ಆನ್‌ಲೈನ್‌ ಕಲೆಯನ್ನು "ಕೌಶಲ್ಯ ಮತ್ತು ಕಲ್ಪನೆಗಳನ್ನು ಬಳಸಿ ಕಲಾತ್ಮಕವಾದ ಕಲಾಕೃತಿ, ಪರಿಸರ ಅಥವಾ ಅನುಭವವನ್ನು ಸೃಷ್ಟಿಸುವುದು ಅಥವಾ ಬೇರೆಯವರೊಂದಿಗೆ ಹಂಚಿಕೊಳ್ಳಬಹುದಾದ ಅನುಭವಗಳು." ಎಂದು ವ್ಯಾಖ್ಯಾನಿಸುತ್ತದೆ. ಈ ವ್ಯಾಖ್ಯಾನದ ಪ್ರಕಾರ, ಕಲಾತ್ಮಕ ವಸ್ತುಗಳು ಮಾನವಕುಲ ಇರುವ ಕಾಲದಿಂದಲೂ ಇದೆ: ಪ್ರಾಚೀನ "ಇತಿಹಾಸ ಪೂರ್ವ (ಪ್ರಿ ಹಿಸ್ಟಾರಿಕ್)" ಕಲೆಯಿಂದ ಹಿಡಿದು ಪ್ರಸ್ತುತ ಸಮಕಾಲೀನ ಕಲೆ(ಕಾಂಟೆಂಪರರಿ ಆರ್ಟ್)ಯವರೆಗೆ ಆವರಿಸಿಕೊಂಡಿದೆ; ಆದರೆ ಕೆಲವು ತತ್ವಗಳು ಈ ಕಲ್ಪನೆ ಯನ್ನು(ಕಾನ್ಟೆಪ್ಟ್) ಆಧುನಿಕ ಪಾಶ್ಚಿಮಾತ್ಯ ಸಮಾಜಕ್ಕೆ ಮಾತ್ರ ಸೀಮಿತಗೊಳಿಸಿದೆ.[] ಆಡೋರ್ನೊ "ಇಟ್‌ ಇಸ್‌‌ ನೌ ಟೇಕನ್‌ ಫಾರ್‌ ಗ್ರಾಂಟೆಡ್‌ ದ್ಯಾಟ್‌ ನಂಥಿಂಗ್‌ ವಿಚ್‌ ಕನ್ಸರ್ನ್‌ ಆರ್ಟ್‌ ಕಾನ್‌ ಬಿ ಟೇಕನ್‌ ಫಾರ್‌ ಗ್ರಾಂಟೆಡ್ ಎನಿ ಮೋರ್‌: ನೀದರ್‌ ಆರ್ಟ್‌ ಇಟ್‌ಸೆಲ್ಫ್, ನಾರ್‌ ಆರ್ಟ್‌ ಇನ್‌ ರಿಲೇಷನ್‌ಶಿಪ್‌ ಟು ದಿ ವೋಲ್‌, ನಾರ್ ಇವನ್‌ ದ ರೈಟ್ ಆಫ್‌ ಆರ್ಟ್‌ ಟು ಎಕ್ಸಿಸ್ಟ್‌" ಎಂದು 1970ರಲ್ಲಿ ಹೇಳಿದನು.[] (ಆಡೋರ್ನೋ ಕಲೆಗೆ ಸಂಭಂದಿಸಿದ ಯಾವುದನ್ನು ನಾವು ಹಗುರವಾಗಿ ಪರಿಗಣಿಸಲು ಆಗುವುದಿಲ್ಲ, ಎನ್ನುವ ಅರ್ಥ ಬರುವ ರೀತಿಯಲ್ಲಿ ಹೀಗೆ ಹೇಳಿದ್ದಾನೆ). ಕಲೆಯ ಮೊದಲ ಮತ್ತು ವಿಶಾಲ ದೃಷ್ಟಿಯ ಅರ್ಥವ್ಯಾಪ್ತಿಯನ್ನು ಕೊಡುವ ವ್ಯಾಖ್ಯಾನವು, "ನೈಪುಣ್ಯ"(ಸ್ಕಿಲ್) ಅಥವಾ "ಕೌಶಲ್ಯ" ಎಂದು ಅನುವಾದಿಸಬಹುದಾದ ಪ್ರಾಚೀನ ಲ್ಯಾಟೀನ್ ಭಾಷೆಯ ಅರ್ಥಕ್ಕೆ ಬಹಳ ಹತ್ತಿರವಾಗಿದೆ. ಕೆಳಗಿನ ಉದಾಹರಣೆಗಳಲ್ಲಿ ಈ ಪದದ ಆರ್ಥವ್ಯಾಪ್ತಿ ಯು ಹೆಚ್ಚಾಗಿದೆ:ಆರ್ಟಿಫ್ಯಾಕ್ಟ್ (ಹಸ್ತಕೃತಿ/ಮಾನವಕೃತ: ಮಾನವನ ಕರಕೌಶಲದಿಂದ ತಯಾರಾದದ್ದು), ಆರ್ಟಿಫಿಷಿಲ್ (ಕೃತಕ), ಆರ್ಟಿಫೈಸ್ (ಕೌಶಲ),ಮೆಡಿಕಲ್ ಆರ್ಟ್ಸ್ ಮತ್ತು ಮಿಲಿಟರಿ ಆರ್ಟ್ಸ್ (ಯುದ್ಧ ಕಲೆ). ಅದಾಗ್ಯೂ, ಈ ಪದವು ದಿನನಿತ್ಯದ ಸಂಭಾಷಣೆಯಲ್ಲಿ ಅನೇಕ ಆರ್ಥವನ್ನು ಹೊಂದಿದೆ, ಎಲ್ಲವು ಆ ಪದಗಳ ಉತ್ಪತ್ತಿಯ (ಎಟಿಮಾಲಜಿ) ಜೊತೆ ಸ್ವಲ್ಪ ಸಂಬಂಧ ಹೊಂದಿರುತ್ತದೆ.

 
ರವಾಂಡ ದೇಶಕ್ಕೆ ಸೇರಿದ 20ನೇ ಶತಮಾನದ ಒಂದು(ಜಾಡಿ) ಬಾಟಲ್. ಕಲಾತ್ಮಕ ಸೃಷ್ಟಿಗಳು ಅವುಗಳ ಅಲಂಕಾರಿಕ ಗುಣಲಕ್ಷಣವಷ್ಟೆ ಅಲ್ಲದೆ ಇನ್ನೂ ಅನೇಕ ಉಪಯೋಗಗಳಿಗೆ ಬಳಕೆಯಾಗಬಹುದು.

ಕಲೆ ಎನ್ನುವ ಪದದ ಎರಡನೆಯ ಮತ್ತು ತೀರಾ ಇಚೀನ ಆರ್ಥದ ಪ್ರಕಾರ ಇದು ಸೃಜನಾತ್ಮಕ ಕಲೆ (ಕ್ರಿಯೇಟಿವ್ ಆರ್ಟ್) ಅಥವಾ ಲಲಿತ ಕಲೆಯ(ಫೈನ್ ಆರ್ಟ್ ) ಸಂಕ್ಷಿಪ್ತ ರೂಪ ಎನ್ನಲಾಗಿದೆ. ಲಲಿತ ಕಲೆಯೆಂದರೆ (ಫೈನ್ ಆರ್ಟ್) ಒಬ್ಬ ಕಲಾವಿದನ ಸೃಜನ ಶೀಲತೆಯನ್ನು (ಕ್ರಿಯೇಟಿವಿಟಿ)ವ್ಯಕ್ತಪಡಿಸಲು ಕಲಾನೈಪುಣ್ಯವನ್ನು ಬಳಸಲಾಗುತ್ತಿದೆ ಅಥವಾ ಸಭಿಕರ(ವೀಕ್ಷಕರು/ವೀಕ್ಷಕರು) ಸೌಂದರ್ಯ ಪ್ರಜ್ಞೆಯನ್ನು ಆಕರ್ಷಿಸುವುದು ಅಥವಾ ಸಭಿಕರ ಗಮನವನ್ನು ಸೂಕ್ಷ್ಮವಾದ ವಿಷಯಗಳ ಕಡೆಗೆ ಸೆಳೆಯುವುದು ಎಂದರ್ಥ.

ಸಾಮಾನ್ಯವಾಗಿ, ಕೌಶಲ್ಯವನ್ನು ಸಾಧಾರಣವಾಗಿ ಅಥವಾ ವ್ಯವಹಾರಿಕವಾಗಿ ಬಳಸಿದರೆ, ಆಗ ಜನ ಅದನ್ನು ಕಲೆಯ ಬದಲು ಕೌಶಲವೆಂದು ಪರಿಗಣಿಸುತ್ತಾರೆ. ಇದೇ ತರಹ, ಈ ಕೌಶಲ್ಯವನ್ನು(ಸ್ಕಿಲ್) ವ್ಯಾಪಾರಕ್ಕೆ ಅಥವಾ ಔದ್ಯೂಗಿಕವಾಗಿ ಬಳಸಿಕೊಂಡರೆ ಆಗ ಅದನ್ನು ಲಲಿತ ಕಲೆ (ಫೈನ್ ಆರ್ಟ್) ಎನ್ನುವ ಬದಲು ಕಮರ್ಷಿಯಲ್ ಆರ್ಟ್ ಎನ್ನಲಾಗುತ್ತದೆ. ಇದೇ ವೇಳೆ, ಕ್ರಾಪ್ಟ್ ಮತ್ತು ಡಿಸೈನ್‌ಗಳನ್ನು(ವಿನ್ಯಾಸ) ಕೆಲವೊಮ್ಮೆ ಅನ್ವಯಿಕ ಕಲೆ(ಅಪ್ಲೈಡ್ ಆರ್ಟ್) ಎಂದು ಕರೆಯಲಾಗುತ್ತದೆ. ಕಲಾರಸಿಕರು ಲಲಿತಕಲೆಗೆ(ಫೈನ್ ಆರ್ಟ್‌)ಮತ್ತು ಅನ್ವಯಿಕ ಕಲೆಗೂ (ಅಪ್ಲೈಡ್‌ ಆರ್ಟ್‌) ನಡುವಿನ ವ್ಯತ್ಯಾಸ ಕಲೆಯ ಮೌಲ್ಯವನ್ನು ನಿರ್ಣಯ ಮಾಡುವ ರೀತಿಯಲ್ಲಿದೆಯೆ ಹೊರತು ಇವರೆಡಕ್ಕೂ ವ್ಯಾಖ್ಯಾನದ ದೃಷ್ಟಿಯಿಂದ ಯಾವುದೇ ಮೂಲಭೂತ ವ್ಯತ್ಯಾಸವಿಲ್ಲ ಎಂದು ವಾದಿಸುತ್ತಾರೆ.[೧೦] ಆದರೆ, ಲಲಿತಕಲೆಗೆ(ಫೈನ್ ಆರ್ಟ್‌) ಕೂಡ ಕ್ರಿಯಾತ್ಮಕ ಮತ್ತು ಸ್ವ-ಅಭಿವ್ಯಕ್ತಿಯ ಮೀರಿದ ಉದ್ದೇಶಗಳಿರುತ್ತದೆ. ಕಲೆಯ ಉದ್ದೇಶ ಯೋಚನೆಗಳನ್ನು ಸಂವಹನ (ಕಮುನಿಕೇಟ್) ಮಾಡುವುದಾಗಿರಬಹುದು. ರಾಜಕೀಯ, ತಾತ್ವಿಕ ಉದ್ಧೇಶಗಳನ್ನು ಈಡೇರಿಸುವಂತಹ ಕಲೆ; ಸೌಂದರ್ಯದ ಪ್ರಜ್ಞೆಯನ್ನು ಉಂಟು ಮಾಡುವುದಾಗಿರಬಹುದು (ಸೌಂದರ್ಯಮೀಮಾಂಸೆ (ಎಸ್ತೆಟಿಕ್ಸ್) ನೋಡಿ); ಗ್ರಹಿಕೆ(ಪರ್ಸೆಪ್ಷನ್) ಗುಣ ಎಕ್ಸ್‌ಪ್ಲೋರ್‌ ಮಾಡಲು; ಮನರಂಜನೆಗಾಗಿ, ಅಥವಾ ಕೆಲವು ತೀವ್ರ ಭಾವನೆಗಳನ್ನು ಕೆರಳಿಸುವ ಸಲುವಾಗಿ ಇರಬಹುದು. ಆದರೆ ಮೇಲ್ನೋಟಕ್ಕೆ ಯಾವುದೇ ಉದ್ದೇಶವೂ ಇಲ್ಲ ಎಂದು ಕೂಡ ತೋರಬಹುದು. ಕಲೆ ಹಲವು ವಿಷಯಗಳನ್ನು ಒಳಗೊಂಡಿರುತ್ತದೆ. ಅದು: ಕಲಾನೈಪುಣ್ಯದ ಅಧ್ಯಯನವಿರಬಹುದು, ಕಲಾನೈಪುಣ್ಯವನ್ನು ಬಳಸುವ ತಂತ್ರವಿರಬಹುದು, ಕಲಾಸೃಷ್ಟಿಯಾಗಿರಬಹುದು ಅಥವಾ ವೀಕ್ಷಕರಿಗೆ/ಶ್ರೋತೃಗಳಿಗೆ ಒಂದು ಕಲಾಸೃಷ್ಟಿ ಉಂಟು ಮಾಡುವ ಅನುಭವವಿರಬಹುದು. ಸೃಜನಾತ್ಮಕ ಕಲೆಗಳು (ಕ್ರಿಯೇಟಿವ್ ಆರ್ಟ್‌) (ಕಲೆ ಒಂದು ಪದ್ಧತಿಯಾಗಿ) ಅನೇಕ ಪದ್ಧತಿಗಳ ಗುಂಪು (ಕಲೆ ); ವೈಯಕ್ತಿಕ ಕ್ರಿಯಾಶಕ್ತಿ ಹೊರಹೊಮ್ಮಿಸಲು ಸೃಷ್ಟಿಸಲಾದ ಕಲಾಸೃಷ್ಟಿಗಳು (ಕಲೆ ಒಂದು ಚಟುವಟಿಕೆಯಾಗಿ), ಅಥವಾ ಒಂದು ಭಾವನೆ, ಕಲ್ಪನೆ, ಸಂಕೇತವನ್ನು ಬಿಂಬಿ ಸಲು ಸೃಷ್ಟಿಸಲಾದ ಕಲಾಕೃತಿಗಳು (ಕಲೆ ಒಂದು ವಸ್ತುವಾಗಿ)- ಇವುಗಳನ್ನು ವೀಕ್ಷಕರು /ಶ್ರೋತೃಗಳು ಗ್ರಹಿಸಿಕೊಂಡು ಅರ್ಥೈಸಿಕೊಳ್ಳುತ್ತಾರೆ (ಕಲೆ ಒಂದು ಆನುಭವವಾಗಿ). ಅಪರಿಮಿತ ಕಲ್ಪನೆಗಳನ್ನು(ಕಾನ್ಸೆಪ್ಟ್) ಅಥವಾ ಯೋಚನೆಗಳನ್ನು(ಐಡಿಯಾ)ಕ್ರಿಯಾತ್ಮಕವಾಗಿ ಪ್ರಕಟ ಪಡಿಸುವ; ಅಥವಾ ಯೋಚನೆಯನ್ನು(ಐಡಿಯಾ) ಇನ್ನೊಬ್ಬ ವ್ಯಕ್ತಿಗೆ ತಿಳಿಸಲು ಉದ್ದೇಶಪೂರ್ವಕವಾಗಿ ಸೃಷ್ಟಿ ಮಾಡುವುದನ್ನು ಕಲಾಕೃತಿ/ಕಲಾಸೃಷ್ಟಿ ಎನ್ನಬಹುದು. ಕಲಾಕೃತಿಯ ಉದ್ದೇಶವು ಕೆಲವೊಮ್ಮೆ ಸುಸ್ಪಷ್ಟವಾಗಿ ಪ್ರಕಟವಾಗಿರಬಹುದು, ಅಥವಾ ಬಳಸಲಾದ ರೂಪ(ಇಮೇಜ್) ಮತ್ತು ವಸ್ತು(ಆಬ್ಜೆಕ್ಟ್)ಗಳಿಂದ ಆರ್ಥೈಸಿಕೊಳ್ಳಬಹುದು. ಕಲೆ ಒಬ್ಬ ವ್ಯಕ್ತಿಯ ಚಿಂತನೆ, ಭಾವನೆ, ನಂಬಿಕೆ ಅಥವಾ ಕಲ್ಪನೆಗಳನ್ನು ಸಂವೇದನಾ ಶಕ್ತಿಯ (ಸೆನ್ಸ್‌) ಮೂಲಕ ಉತ್ತೇಜಿಸುತ್ತದೆ. (ಸ್ಟಿಮ್ಯೂಲೇಟ್ ಮಾಡುತ್ತದೆ). ಕಲೆ ಒಂದು ಕಲ್ಪನೆಯ (ಐಡಿಯಾ) ಅಭಿವ್ಯಕ್ತಿ ಕೂಡ ಇರಬಹುದು. ಹೀಗಾಗಿ ಇದು ವೈವಿಧ್ಯಮಯ ರೂಪಗಳನ್ನು ಪಡೆಯಬಹುದು ಮತ್ತು ಅನೇಕ ಉದ್ದೇಶಗಳನ್ನು ಈಡೇರಿಸಬಹುದು. ಆದಾಗ್ಯೂ, ಹೊಸ ವೈಜ್ಞಾನಿಕ ತತ್ವವನ್ನು ಪಡೆಯುವ ಸಲುವಾಗಿ ವಿಜ್ಞಾನದ ಅರಿವನ್ನು ಬಳಸುವುದರಲ್ಲಿ ಕೂಡ ನೈಪುಣವಿದ್ದು ಸಾಮಾನ್ಯವಾಗಿ ಏನಾದರೂ ಹೊಸದರ "ಸೃಷ್ಟಿ" ಯಾಗುತ್ತದೆಯಾದರೂ, ಇದು ಕೇವಲ ವಿಜ್ಞಾನದ ಪ್ರಕಾರವೆ ಹೊರತು ಇದನ್ನು ಕಲೆಯ ವಿಭಾಗಕ್ಕೆ ಸೇರಿಸಲಾಗುವುದಿಲ್ಲ.

ಇತಿಹಾಸ

ಬದಲಾಯಿಸಿ
 
ವಿಲೆನ್ಡಾರ್ಪ್ ನ ವೀನಸ್, circa 24,000–22,000 BP.

ಶಿಲ್ಪಕೃತಿ ಗುಹಾಚಿತ್ರಗಳು, ಕಲ್ಲಿನ ಮೇಲೆ ಕೆತ್ತಲಾಗಿರುವ ಚಿತ್ರಗಳು ಮತ್ತು ಸುಮಾರು 40,000 ವರ್ಷ ಹಳೆಯದಾದ ಅಪರ್ ಪಾಲಿಯೊಲಿಥಿಕ್ ಕಾಲದ ಪೆಟ್ರೊಗ್ಲಿಫ್ ದೊರೆತಿದೆ. ಅದರೆ ಈ ಕಲೆಗಳ ಬಗ್ಗೆ ನಿಖರವಾಗಿ ವ್ಯಾಖ್ಯಾನ ಮಾಡಲು ಸಾಧ್ಯವಾಗಿಲ್ಲ. ಏಕೆಂದರೆ ನಮಗೆ ಈ ಕಲೆಗಳು ಉದ್ಬವಿಸಿದ ಕಾಲದ ಸಂಸ್ಕೃತಿಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಪ್ರಪಂಚದಲ್ಲಿ ಇದುವರೆಗೆ ಪತ್ತೆಯಾಗಿರುವ ಅತೀ ಪ್ರಾಚೀನವಾದ ಕಲಾಸೃಷ್ಟಿ(ಆರ್ಟ್ ಆಬ್ಜೆಕ್ಟ್) ಎಂದರೆ- 75,000 ವರ್ಷಕ್ಕೂ ಹಳೆಯ ಸೌತ್ ಆಫ್ರಿಕಾದ ಗುಹೆಯಲ್ಲಿ ಪತ್ತೆಯಾದ ಪುಟ್ಟ ಕೊರೆಯಲ್ಪಟ್ಟ ಶಂಬುಕದ ಚಿಪ್ಪು (ಸ್ನೇಲ್ ಶೆಲ್).[೧೧]

 
ಲಾಸ್‌ಕಾಕ್ಸ್‌ ಗುಹೆಗಳಲ್ಲಿರುವ ಕುದುರೆಯ ಗುಹಾಚಿತ್ರ, c. 16,000 BP.

ಕಲೆಯ ಅನೇಕ ಸಂಪ್ರದಾಯಗಳು ತಮ್ಮ ಬೇರುಗಳನ್ನು ಪ್ರಾಚೀನ ನಾಗರೀಕತೆಗಳಲ್ಲಿ ಹೊಂದಿದೆ: ಪ್ರಾಚೀನ ಈಜಿಪ್ಟ್, ಮೆಸೊಪೊಟೇಮಿಯಾ, ಪರ್ಷಿಯ, ಭಾರತ, ಚೀನಾ, ಪ್ರಾಚೀನ ಗ್ರೀಕ್, ರೋಮ್, ಇದರೊಂದಿಗೆ ಇಂಕಾ, ಮಾಯಾ ಮತ್ತು ಒಲೆಮೆಕ್ ಮುಂತಾದ ನಾಗರೀಕತೆಗಳು. ಈ ಪ್ರತಿಯೊಂದು ಪ್ರಾಚೀನ ನಾಗರೀಕತೆಯೂ ತಮ್ಮದೆ ಆದ ವಿಶಿಷ್ಟ ಮತ್ತು ಶೈಲಿಯ ಕಲೆಯನ್ನು ಬೆಳಸಿದವು. ಈ ನಾಗರೀಕತೆಗಳ ಗಾತ್ರ ಮತ್ತು ಕಾಲದ ಅವಧಿಯಿಂದಾಗಿ, ಅವರ ಬಹುತೇಕ ಕಲೆಗಳು ಉಳಿದಿದೆ ಹಾಗೂ ನಂತರದ ನಾಗರೀಕತೆಗಳಿಗೆ ಮತ್ತು ಬೇರೆ ಸಂಸ್ಕೃತಿಗಳ ಮೇಲೆ ಪ್ರಭಾವ ಬೀರಿದೆ. ಕೆಲವೊಂದು ಕಲಾವಿದರೂ ಹೇಗೆ ಕೆಲಸ ಮಾಡುತ್ತಿದ್ದರು ಎನ್ನುವುದರ ಮೊದಲ ದಾಖಲೆಯನ್ನು ಕೂಡ ಒದಗಿಸುತ್ತದೆ. ಉದಾಹರಣೆಗೆ: ಆ ಕಾಲಘಟ್ಟದ ಗ್ರೀಕ್ ಕಲೆಯು ಮನುಷ್ಯನ ಭೌತಿಕ ಆಕೃತಿಗೆ (ಫಾರ್ಮ್‌) ಪ್ರಾಮುಖ್ಯತೆ ಒದಗಿಸಿತು. ಇದಲ್ಲದೆ ದೇಹದಾರ್ಡ್ಯ, ಭಂಗಿ, ಬಿನ್ನಾಣ ಮತ್ತು ದೇಹರಚನೆಯ ದೃಷ್ಟಿಯಿಂದ ಸರಿಯಾದ ಅಳತೆಯಿರುವ ಮನ್ಯುಷರ ರೂಪಗಳನ್ನು ರಚಿಸುವ ವಿಶೇಷ ನೈಪುಣ್ಯದ (ಸ್ಕಿಲ್‌ಗಳ) ಅಭಿವೃದ್ಧಿ ಕೂಡ ಆಯಿತು. ವೆಸ್ಟರ್ನ್ ಮಿಡಲ್‌ ಏಜ್‌ಗೆ (ಪಾಶ್ಚಿಮಾತ್ಯ ಮಧ್ಯಯುಗಕ್ಕೆ) ಸೇರಿದ ಬೈಸಾಂಟೀನ್ ಮತ್ತು ಮಧ್ಯಯುಗದ ಕಲೆಗಳು ಬೈಬಲ್‌ನ ದೃಷ್ಟಾಂತಗಳನ್ನು ಚಿತ್ರಿಸುವತ್ತ ತಮ್ಮ ಗಮನವನ್ನು ಕೇಂದ್ರಿಕರಿಸಿದವು. ಈ ಕಾಲದ ಕಲೆಗಳಲ್ಲಿ ನೋಡಿರದ ದಿವ್ಯಲೋಕದ ಚೆಲುವನ್ನು ಸಂಕೇತಿಸುವ ಸಲುವಾಗಿ ವರ್ಣಚಿತ್ರಗಳ ಹಿನ್ನಲೆಯಲ್ಲಿ ಚಿನ್ನ; ಅಥವಾ ಮೋಸಾಯಿಕ್ ಅಥವಾ ಕಿಟಕಿಗಳ ಮೇಲೆ ಗಾಜುನ್ನು ಬಳಸಲಾಗುತ್ತಿತ್ತು. ಇದು ನಿರ್ದಿಷ್ಟಮಾದರಿ ರೂಪಗಳನ್ನು ಕೂಡ ಕೊಡುತ್ತಿತ್ತು. ಹಾಗಿದ್ದರೂ ಬೈಸಾಂಟೀನ್ ಕಲೆಯಲ್ಲಿ ಒಂದು ರೀತಿಯ ವಾಸ್ತವಿಕತೆ ಚಿತ್ರಿಸುವ ಸಂಪ್ರದಾಯಿಕ ಶೈಲಿ ಜೀವಂತವಾಗಿತ್ತು. ಕ್ಯಾಥೋಲಿಕ್ ಯುರೋಪಿನ ಕಲೆಯಲ್ಲಿ ವಸ್ತಾವಿಕ ದೃಷ್ಟಿಕೋನದ ಕಲೆಯು ಕ್ರಮೇಣವಾಗಿ ಹೆಚ್ಚಾಗುತ್ತಾ ಹೋಯಿತು. ರಿನೇಸಾನ್ಸ್‌ ಅರ್ಟ್‌ (ನವೋದಯ ಕಲೆ) - ಪ್ರಕಾರವು ಪ್ರಾಪಂಚಿಕ ಜಗತ್ತಿನಲ್ಲಿ ಯಥವತ್ತಾದ ಚಿತ್ರಣಕ್ಕೆ, ಅದರಲ್ಲಿ ಮನುಷ್ಯರ ಪಾತ್ರಕ್ಕೆ ಹೆಚ್ಚಿನ ಒತ್ತು ಕೊಟ್ಟಿತ್ತು. ಇದು ಮನುಷ್ಯ ದೇಹದ ಮೂರ್ತ ಸ್ವರೂಪದಲ್ಲಿ(ಕಾರ್ಪೋರಿಯಾಲಿಟಿ) ಕಾಣಬಹುದಾಗಿದೆ. ಇದಲ್ಲದೆ ಮೂರು ಡೈಮೆನೆಷನ್‌ ಪಿಕ್ಚರ್‌ ಸ್ಪೇಸಿನಲ್ಲಿ ರಿಸೆಷನ್‌ ಅನ್ನು ಚಿತ್ರಣ ಮಾಡಬಲ್ಲ ಗ್ರಾಫಿಕಲ್‌ ಪರ್ಸ್‌ಪೆಕ್ಟಿವ್‌ ನ ಕ್ರಮಬದ್ಧವಾದ ವಿಧಾನವನ್ನು ಅಭಿವೃದ್ಧಿ ಮಾಡಲಾಯಿತು.

 
ಅಟೊಮನ್ ಸಾಮ್ರಾಜ್ಯದ ರಾಜನಾದ ಸುಲ್ತಾನ್ ಮಹಮದ್ II ರ ವಿಶಿಷ್ಟ ಶೈಲಿಯ ಹಸ್ತಾಕ್ಷರ. ಇದನ್ನು ಅರೇಬಿಕ್‌ ಕಾಲಿಗ್ರಫಿಯಲ್ಲಿ ಬರೆಯಲಾಗಿದೆ. ಇದರಲ್ಲಿ ಅಬ್ದುಲ್‌ಹಮಿದ್‌ ನ ಮಗ ಮಹಮದ್‌ ಖಾನ್‌, ಸದಾಕಾಲ ಜಯಶಾಲಿ ಎಂದು ಅರ್ಥ ಬರುವ ಹಾಗೆ ಬಿಂಬಿಸಲಾಗಿದೆ.

ಪೂರ್ವದ ಇಸ್ಲಾಮಿಕ್‌ ಕಲೆಯ ಮೂರ್ತಿಚಿತ್ರಣವನ್ನು ತಿರಸ್ಕರಿಸಿದ ಕಾರಣ ಜಿಯೊಮೆಟ್ರಿಕಲ್ ವಿನ್ಯಾಸ, ಕ್ಯಾಲಿಗ್ರಫಿ (ಚಿತ್ರಾಕ್ಷರ) ಮತ್ತು ವಾಸ್ತುಶಿಲ್ಪ ಗಳಂತಹ ಕಲೆಗಳಿಗೆ ಹೆಚ್ಚು ಪ್ರಮುಖ್ಯತೆ ನೀಡಲಾಯಿತು. (ಇಲ್ಲಿ ಯೂರೋಪ್‌ ಅನ್ನು ಕೇಂದ್ರವಾಗಿಟ್ಟು ಕೊಂಡು, ಪೂರ್ವಕ್ಕೆ ಇಸ್ಲಾಂ ಕಲೆಯಿದೆ ಎನ್ನಲಾಗಿದೆ. ಇದನ್ನೇ ಭಾರತದ ಮಟ್ಟಿಗೆ ಹೇಳುವುದಾದರೆ ಇಸ್ಲಾಂ ಕಲೆ ಭಾರತಕ್ಕೆ ಪಶ್ಚಿಮಕ್ಕೆ ಇದೆ). ಇನ್ನೂ ಪೂರ್ವಕ್ಕೆ ಹೋದ ಹಾಗೆ, ಕಲಾಪ್ರಕಾರ ಮತ್ತು ಕಲಾರೂಪಗಳ ಮೇಲೆ ಧರ್ಮದ ಪ್ರಭಾವ ಹೆಚ್ಚಾಗಿತ್ತು. ಭಾರತ ಮತ್ತು ಟಿಬೆಟ್ ಚಿತ್ರಬರೆದ ಶಿಲ್ಪಕೃತಿ ಮತ್ತು ನೃತ್ಯಗಳ ಮೇಲೆ ಪ್ರಾಮುಖ್ಯತೆ ಕೊಟ್ಟವು. ಧಾರ್ಮಿಕ ವರ್ಣಚಿತ್ರಗಳು ಶಿಲ್ಪಕೃತಿಗಳಿಂದ ಪ್ರಭಾವಿತವಾಗಿದ್ದವು ಹಾಗು ಪ್ರಕಾಶಮಾನವಾದ ವ್ಯತಿರಿಕ್ತವಾದ ಬಣ್ಣಗಳನ್ನು ಬಳಸಿ ಬಾಹ್ಯರೇಖೆಯ ಚಿತ್ರಣಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗಿತ್ತು. ಚೀನಾದಲ್ಲಿ ಅನೇಕ ಕಲಾಪ್ರಕಾರಗಳು ಪ್ರವರ್ಧಮಾನಕ್ಕೆ ಬಂದವು. ಜೇಡ್ ಕಾರ್ವಿಂಗ್, ಕಂಚಿನ ಶಿಲ್ಪಕೃತಿ(ಬ್ರಾನ್ಸ್‌ವರ್ಕ್), ಪಾಟ್ಟರಿ (ಮಣ್ಣಿನ ಕಲಾಕೃತಿಗಳು)(ಎಂಪರರ್ ಕಿನ್‌ ರ ಟೆರಾಕೋಟಾ ಆರ್ಮಿ, ಒಳಗೊಂಡಂತೆ),ಪದ್ಯ, ಕ್ಯಾಲಿಗ್ರಫಿ, ಸಂಗೀತ, ವರ್ಣಚಿತ್ರಕಲೆ, ನಾಟಕ, ಕಾದಂಬರಿ, ಇತ್ಯಾದಿ. ಚೀನಿಯರ ಶೈಲಿಯು ಕಾಲದಿಂದ ಕಾಲಕ್ಕೆ ಬಹಳ ವ್ಯತಾಸವಾಗುತ್ತದೆ. ಹೀಗಾಗಿ ಈ ಶೈಲಿಗಳನ್ನು ಆ ಕಾಲಘಟ್ಟದಲ್ಲಿ ಆಳ್ವಿಕೆ ನಡೆಸುತ್ತಿದ್ದ ರಾಜವಂಶದ ಹೆಸರಿನೊಂದಿಗೆ ಗುರುತಿಸಲಾಗುತ್ತದೆ. ಹೀಗಾಗಿ ಉದಾಹರಣೆಗೆ, ಟಾಂಗ್ ರಾಜವಂಶದ ವರ್ಣಚಿತ್ರಗಳು ಒಂದೆ ಬಣ್ಣವನ್ನು ಬಳಸಲಾಗಿದ್ದು (ಮೋನೋಕ್ರೊಮಾಟಿಕ್) ಮತ್ತು ವಿರಳವಾಗಿರುತ್ತದೆ (ಸ್ಪಾರ್ಸ್ ಆಗಿದ್ದು)ಲ್ಯಾಂಡ್‌ಸ್ಕೇಪ್‌ಗಳ ಚಿತ್ರಣದ ಮೇಲೆ ಹೆಚ್ಚು ಒತ್ತು ನೀಡುತ್ತದೆ. ಆದರೆ ಮಿಂಗ್‌ ರಾಜವಂಶದ ವರ್ಣಚಿತ್ರಗಳು ಹಲವು ಬಣ್ಣಗಳನ್ನು ಬಳಸಿ, ಅದರ ಸಂಯೋಜನೆ ಮತ್ತು ಜೋಡಣೆಗಳಿಂದಾಗಿ ಕಥೆಗಳನ್ನು ಹೇಳುವ ಕಡೆಗೆ ಅದರ ಗಮನವನ್ನು ಕೊಡುತ್ತದೆ. ಜಪಾನ್ ಕೂಡ ತನ್ನ ಕಲಾಶೈಲಿಗಳಿಗೆ ತನ್ನ ರಾಜವಂಶದ ಹೆಸರುಗಳನ್ನು ಇಡುತ್ತದೆ. ಇದಲ್ಲದೆ, ಕ್ಯಾಲಿಗ್ರಫಿ ಮತ್ತು ವರ್ಣಚಿತ್ರಗಳ ನಡುವೆ ಮಿಶ್ರಣವನ್ನು ಕಾಣಬಹುದು. ಜಪಾನಿನಲ್ಲಿ 17ನೇ ಶತಮಾನದ ನಂತರ ವುಡ್‌ಬ್ಲಾಂಕ್‌ ಪ್ರಿಂಟಿಂಗ್‌ ಪ್ರಮುಖವಾಯಿತು.

 
ಸಾಂಗ್ ಸಾಮ್ರಾಜ್ಯದ ಕಲಾವಿದ ಮಾ ಲಿನ್‌, ರ ವರ್ಣಚಿತ್ರ, c. 1250. 24,8 × 25,2 cm.

ಹದಿನೆಂಟನೇ ಶತಮಾನದ ವೆಸ್ಟರ್ನ್‌ ಏಜ್‌ ಆಫ್‌ ಎನ್‌ಲೈಟ್‌ಮೆಂಟ್‌, ನಲ್ಲಿ ಬ್ರಹ್ಮಾಂಡದ ಬೌದ್ಧಿಕ ಮತ್ತು ತಾರ್ಕಿಕ ಖಚಿತತೆಗಳ ಕ್ರಿಯಾತ್ಮಕ ಚಿತ್ರಣವಿತ್ತು. ಇದಲ್ಲದೆ ಬ್ಲೇಕ್ ರ ನ್ಯೂಟನ್ ಅನ್ನು ಪವಿತ್ರ ಜಿಯೋಮಿಟರ್ ತರಹ ಚಿತ್ರಣ ಅಥವಾ ಡೇವಿಡ್‌ರ ಪ್ರಚಾರ ರೂಪದ ವರ್ಣಚಿತ್ರಕಲೆಗಳಂತಹ ಕಲೆಗಳು ರಾಜತ್ವದ ನಂತರದ ರಾಜಕೀಯ ಕ್ರಾಂತಿಗಳ ಚಿತ್ರಣವನ್ನು ನೀಡುತ್ತದೆ. ಇದು ರೋಮ್ಯಾಂಟಿಕ್‌ ತಿರಸ್ಕಾರಕ್ಕೆ ಕಾರಣವಾಯಿತು. ಅದರ ಬದಲು ಮನುಷ್ಯರ ವ್ಯಯಕ್ತಿಕ ಭಾವನೆಗಳನ್ನು ವ್ಯಕ್ತಪಡಿಸುವ ಚಿತ್ರಗಳನ್ನು ಬಳಸಲಾಯಿತು. ಇದನ್ನು ನಾವು ಗೋಥೆಯ ಕಾದಂಬರಿಗಳಲ್ಲಿ ಕಾಣಬಹುದು. ಹತ್ತೊಂಬತನೆ ಶತಮಾನದ ಕೊನೆಯ ಭಾಗದಲ್ಲಿ ಆನೇಕ ಕಲಾಂದೋಲನಗಳು ನಡೆದವು. ಅವು: ಅಕಾಡೆಮಿಕ್ ಆರ್ಟ್, ಪ್ರತಿಮಾಪಂಥ(ಸಿಂಬಲಿಸಂ), ಇಂಪ್ರೆಷನಿಸಂ (ಚಿತ್ತ ಪ್ರಭಾವ ನಿರೂಪಣೆ),ಫಾವಿಸಂ . ಇಪ್ಪತ್ತನೇ ಶತಮಾನದ ಕಲೆಯ ಇತಿಹಾಸ, ಮಾನದಂಡಗಳ ಹುಡುಕುವ ನಿರಂತರ ಪ್ರಯತ್ನದ ನಿರೂಪಣೆಯಾಗಿದೆ. ಪ್ರತಿ ಮಾನದಂಡವನ್ನು ನಂತರದ ಬಂದ ಹೊಸ ಮಾನದಂಡವು ಅಳಿಸಿ ತನ್ನದೆ ಆದ ಹೊಸ ಮಾನದಂಡವನ್ನು ಹೇರುತ್ತದೆ. ಹೀಗಾಗಿ ಇಂಪ್ರೆಷನಿಸಂ, ಎಕ್ಸ್‌ಪ್ರೆಷನಿಸಂ, ಫಾವಿಸಂ, ಕೂಬಿಸಂ, ದಾದಯಿಸಂ, ಸರಿಅಲಿಸಮ್ಇತ್ಯಾದಿ ಶೈಲಿಗಳ ಪ್ರಮಿತಿಗಳು ಅವಗುಳ ಸೃಷ್ಟಿಯಾದ ಕಾಲದ ನಂತರ ದೀರ್ಘ ಕಾಲದ ನಂತರ ಅಸ್ತಿತ್ವ ಸಾಧಿಸಲು ಹೆಣಗುತ್ತವೆ. ಈ ಕಾಲದಲ್ಲಿ ವ್ಯಾಪಕವಾದ ಜಾಗತಿಕ ಒಡನಾಟಗಳ (ಹೊಂದಾಣಿಕೆಗಳ) ಪರಿಣಾಮದಿಂದಾಗಿ ಅನೇಕ ಸಂಸ್ಕೃತಿಗಳು ತಮ್ಮ ಪ್ರಭಾವವನ್ನು ಪಶ್ಚಿಮದ ಕಲೆಯ ಮೇಲೆ ಬೀರಿದವು. ಇದಕ್ಕೆ ಉದಾಹರಣೆ: ಆಫ್ರಿಕಾದ ಶಿಲ್ಪಾಕೃತಿಗಳು ಪಾಬ್ಲೊ ಪಿಕಾಸೋ ವಿನ ಮೇಲೆ ಪ್ರಭಾವಬೀರಿತು. ಜಪಾನಿನ ಮರದಪಡಿಯಚ್ಚು ಕಲೆ (ವುಡ್‌ಬ್ಲಾಕ್‌ ಪ್ರಿಂಟ್‌) (ಇದು ಪಶ್ಚಿಮದ ನವೋದಯದ ರೇಖನಕಲೆಯಿಂದ ಪ್ರಭಾವವಾಗಿತ್ತು) ಇಂಪ್ರೆಷನಿಸಂ ಪ್ರಕಾರದ ಮೇಲೆ ಭಾರಿ ಪ್ರಭಾವವನ್ನು ಬೀರಿ ನಂತರ ಅದರ ಬೆಳವಣಿಗೆಯ ಮೇಲೆ ಪರಿಣಾಮ ಬೀರಿತು. ನಂತರ ಆಫ್ರಿಕಾದ ಶಿಲ್ಪಕೃತಿಗಳಿಂದ ಪಿಕಾಸೊ ಪ್ರಭಾವಿತನಾದನು; ಸ್ವಲ್ಪ ಮಟ್ಟಿಗೆ ಮಾಟಿಸ್ಸೆ ಕೂಡ ಪ್ರಭಾವಿತನಾದನು. ಇದೇ ರೀತಿಯಲ್ಲಿ, 19ನೆ ಮತ್ತು 20ನೆ ಶತಮಾನದ ಪೂರ್ವದ ಕಲೆಯ ಮೇಲೆ ಪಶ್ಚಿಮವು ಭಾರಿ ಪ್ರಭಾವವನ್ನು ಬೀರಿತು; ಸಮಾಜವಾದ(ಕಮೂನಿಸಂ) ಮತ್ತು ಪೋಸ್ಟ್-ಮಾಡರ್ನಿಸಂ ಗಳಂತಹ ಮೂಲತಃ ಪಶ್ಚಿಮದ ಚಿಂತನೆಗಳು ಕಲಾ ಶೈಲಿಯ ಮೇಲೆ ಪ್ರಬಲವಾದ ಪರಿಣಾಮವನ್ನು ಬೀರಿತು. ಮಾಡರ್ನಿಸಂ, ಸತ್ಯದ ಆದರ್ಶನಿಷ್ಟ ಹುಡುಕಾಟದ ಪರಿಣಾಮದಿಂದಾಗಿ 20ನೇ ಶತಮಾನದ ಕೊನೆಯ ಭಾಗದಲ್ಲಿ ಅದು ಸಿಗುವುದಿಲ್ಲವೆನ್ನುವ ಅರಿವು ಉಂಟಾಯಿತು. ರಿಲೇಟಿವಿಸಂ (ಸಾಪೇಕ್ಷವಾದ) ಅನ್ನು ನಿರಾಕರಿಸಲಾಗದ ಸತ್ಯವೆಂದು ಒಪ್ಪಿಕೊಳ್ಳಬೇಕಾಯಿತು. ಇದು ಕಾಂಟೆಪರರಿ ಆರ್ಟ್ (ಪ್ರಸ್ತುತ ಕಲೆ) ಮತ್ತು ಪೋಸ್ಟ್‌ಮಾಡರ್ನ್‌ ಕ್ರಿಟಿಸಿಸಂ ನ ಕಾಲಘಟ್ಟಕ್ಕೆ ಎಡೆಮಾಡಿಕೊಟ್ಟಿತ್ತು. ಇದರ ಪ್ರಕಾರ ಪ್ರಪಂಚದ ಸಂಸ್ಕೃತಿ ಮತ್ತು ಇತಿಹಾಸ ಎರಡನ್ನು ಬದಲಾಗುವ ರೂಪಗಳ ಹಾಗೆ ನೋಡಲಾಯಿತು. ಇದನ್ನು ಅಸ್ವಾದಿಸಲು ಮತ್ತು ರಚಿಸಲು ವ್ಯಂಗ್ಯದ ಒಳಗಣ್ಣಿರಬೇಕು. ಇಷ್ಟೆ ಅಲ್ಲದೆ, ವಿವಿಧ ಸಂಸ್ಕೃತಿಗಳ ನಡುವಿನ ಅಂತರವು ಕಡಿಮೆಯಾಗಿದೆ. ಇದರಿಂದಾಗಿ ಬಹಳಷ್ಟು ಜನ ಪ್ರಾದೇಶಿಕ ಸಂಸ್ಕೃತಿಗಳ ಬದಲಿಗೆ ಜಾಗತಿಕ ಸಂಸ್ಕೃತಿಯ ರೀತಿಯಲ್ಲಿ ಆಲೋಚಿಸತೊಡಗಿದ್ದಾರೆ.

ಗುಣಲಕ್ಷಣಗಳು

ಬದಲಾಯಿಸಿ

ಕಲೆ ಸಾಮಾನ್ಯವಾಗಿ ತರ್ಕಸಮ್ಮತವಾದ ಗ್ರಹಿಕೆಗಿಂತಲೂ ಒಳಗಣ್ಣಿನ (ಇಂದ್ರಿಯಜನ್ಯ ಜ್ಞಾನಕ್ಕೆ)ಗ್ರಹಿಕೆಗೆ ಮಹತ್ವ ಕೊಡುತ್ತದೆ. ಸಾಮಾನ್ಯವಾಗಿ ಕಲೆಯನ್ನು ಇಂತಹ ಉದ್ದೇಶದಿಂದಲೇ ಸೃಷ್ಟಿಸಲಾಗುತ್ತದೆ. [ಸೂಕ್ತ ಉಲ್ಲೇಖನ ಬೇಕು]ಲಲಿತ ಕಲೆ ಉದ್ದೇಶಪೂರ್ವಕವಾಗಿ ಬೇರೆ ಯಾವ ಗುರಿಯನ್ನು ಸಾಧಿಸುವುದಿಲ್ಲ. [dubious ]ಇಂತಹ ಚಿಂತನೆಗಳ ಪರಿಣಾಮದಿಂದಾಗಿ, ಕಲಾಸೃಷ್ಟಿಗಳು ಗ್ರಹಿಕೆಗೆ ನಿಲುಕದಾಗಿದ್ದು, ಅವುಗಳನ್ನು ವಿಂಗಡಿಸಲು ಕಷ್ಟವಾಗುತ್ತದೆ. ಏಕೆಂದರೆ, ಕಲೆಸೃಷ್ಟಿಯನ್ನು ಒಂದಕ್ಕಿಂತ ಹೆಚ್ಚಿನ ರೀತಿಯಲ್ಲಿ ಆಸ್ವಾದಿಸಬಹುದು. ಈ ಕಾರಣದಿಂದಾಗಿ ಅವುಗಳ ಬಗ್ಗೆ ಅನೇಕ ಅರ್ಥವಿವರಣೆಗಳು ಹೊರಹೊಮ್ಮುತ್ತದೆ. ಗೆರಿಕಾಲ್ಟ್‌ರ ರಾಪ್ಟ್ ಆಫ್ ದಿ ಮೆಡುಸಾ ಎನ್ನುವ ವರ್ಣಚಿತ್ರವನ್ನು ಅಸ್ವಾದಿಸಲು ಈ ವರ್ಣಚಿತ್ರದಲ್ಲಿ ಚಿತ್ರಸಲಾಗಿರುವ ಭಗ್ನವಾಗಿರುವ ಹಡಗಿನ ಬಗ್ಗೆ ವಿಶೇಷ ಜ್ಞಾನದ ಅವಶ್ಯಕತೆ ಇರಬೇಕಾಗಿಲ್ಲ. ಆದರೆ ಈ ಕಲಾಕೃತಿಯು ಗೆರಿಕಾಲ್ಟ್‌ರ ರಾಜಕೀಯ ಉದ್ದೇಶಗಳನ್ನು ತಿಳಿಯಲು ಅವಕಾಶ ಒದಗಿಸುತ್ತದೆ. ಸರ್ವೆಸಾಮಾನ್ಯವಾದ ಘಟನೆಗಳು ಅಥವಾ ವಸ್ತುಗಳನ್ನು ಚಿತ್ರಣ ಮಾಡುವಂತಹ ಕಲೆ ಕೂಡ ಕಾಲಾಂತರದಲ್ಲಿ ಹೆಚ್ಚಿನ ಪರ್ಯಾಯ ಲೋಚನೆಗಳಿಗೆ ಒಳಪಡಬಹುದು. ಸಂಪ್ರದಾಯಿಕವಾಗಿ, ಕಲೆಯ ದೊಡ್ಡ ಸಾಧನೆಯೆಂದರೆ ಒಂದು ಕೌಶಲದಲ್ಲಿ ಉತ್ತಮ ನೈಪುಣ್ಯವನ್ನು ಪಡೆಯುವುದು ಅಥವಾ ಯಾವುದೇ ಒಂದು ಮಾಧ್ಯಮದ ಮೇಲೆ ಹಿಡಿತ ಸಾಧಿಸುವುದು. ಈ ಗುಣಲಕ್ಷಣವು ವಾದವಿವಾದಗಳಿಗೆ ಎಡೆಮಾಡಿ ಕೊಡುತ್ತದೆ. ಏಕೆಂದರೆ ಬಹುತೇಕ ಅಧುನಿಕ ಕಲಾವಿದರು(ಮುಖ್ಯವಾಗಿ ಕಲ್ಪನಾತ್ಮಕ ಕಲಾವಿದರು(ಕನ್ಸೆಪ್‌ಟ್ಯುಅಲ್ ಆರ್ಟಿಸ್ಟ್))ಅವರು ಭಾವಿಸುವಂತಹ ಅನೇಕ ಕೃತಿಗಳನ್ನು ರಚಿಸುವುದಿಲ್ಲ ಇಲ್ಲವೆ ಈ ಕೃತಿಗಳ ಅರ್ಥವನ್ನು ರೂಢಿಯಲ್ಲಿರುವ ಅಥವಾ ಎಲ್ಲರಿಗೂ ಸ್ಷಷ್ಟವಾಗಿ ಗೊತ್ತಾಗುವ ಹಾಗೆ ರಚಿಸುವುದಿಲ್ಲ. ಕಲೆಗೆ ಪರಿವರ್ತಿಸುವ ಗುಣವಿರುತ್ತದೆ: ವಿಶಿಷ್ಟವಾದ ಅಕರ್ಷಣಿಯ ಅಥವಾ ಸೌಂದರ್ಯರಸಾನುಭವ ಕೊಡುವ ರಚನೆ ಅಥವಾ ಆಕೃತಿಗಳನ್ನು ಮೂಲ ಸಂಬಂಧವಿರದ ಪಾಸಿವ್ ಅದ ಆಂಶಗಳೊಂದಿಗೆ ಬೆರಸುತ್ತದೆ.

ರೂಪ/ಪ್ರಕಾರ/ಮಾಧ್ಯಮ ಮತ್ತು ಶೈಲಿಗಳು

ಬದಲಾಯಿಸಿ
 
ಲಿಯಾನಾರ್ಡೋ ಡಾ ವಿನ್ಸಿಯ "ಮೋನಾ ಲೀಸಾ", ವರ್ಣಚಿತ್ರ. ಇದರಲ್ಲಿ ಫುಮಾಟೋ ಶೈಲಿಯನ್ನು ತೋರಿಸಲಾಗಿದೆ.

ಸೃಜನಾತ್ಮಕ ಕಲೆಯನ್ನು ಸಾಮಾನ್ಯವಾಗಿ ಅದರ ಕಲಾತಂತ್ರ(ಟೆಕ್ನೀಕ್), ಮಾಧ್ಯಮಗಳಿಗೆ ಸಂಬಂಧಿಸಿದ ಹಾಗೆ ಅದನ್ನು ನಿರ್ದಿಷ್ಟ ಗುಂಪುಗಳಿಗೆ ವಿಂಗಡಿಸಬಹುದು: ಅಲಂಕಾರಿಕ ಕಲೆ(ಡೆಕರಟಿವ್ ಆರ್ಟ್), ರೂಪ ಶಿಲ್ಪಕಲೆ (ಪ್ಲ್ಯಾಸ್ಟಿಕ್ ಆರ್ಟ್), ಪ್ರದರ್ಶನ ಕಲೆ (ಪರ್ಫಾಮಿಂಗ್ ಆರ್ಟ್) ಅಥವಾ ಸಾಹಿತ್ಯ. ವೈಜ್ಞಾನಿಕ ಕ್ಷೇತ್ರಗಳ ಹಾಗಿರದೆ, ತಂತ್ರಕ್ಕೆ ತಕ್ಕಂತೆ ಶೈಕ್ಷಣಿಕವಾಗಿ (ಅಕಡೆಮಿಕ್‌) ವಿಗಂಡಿಸಲಾಗಿರುವ ಕೆಲವು ವಿಷಯಗಳ ಪೈಕಿ ಕಲೆಯು ಕೂಡ ಒಂದು rchoetzlein. com/quanta/ theory/theory-new-media.htm . ಕಲಾ ಮಾಧ್ಯಮವು ಕಲಾಕೃತಿಯು ರಚಿಸಲ್ಪಡುವ ಪದಾರ್ಥ ಅಥವಾ ವಸ್ತುವಿರಬಹುದು. ಇದಲ್ಲದೆ ಅದು ಕೆಲವೊಮ್ಮೆ ಬಳಸಲಾದ ಕಲಾತಂತ್ರವನ್ನು ಸೂಚಿಸಬಹುದು. ಉದಾಹರಣೆಗೆ ವರ್ಣಚಿತ್ರಕಲೆಯಲ್ಲಿ ಬಳಸಲಾಗುವ ಮಾಧ್ಯಮ: ಬಣ್ಣ(ವರ್ಣ), ರೇಖಾಕೃತಿಯಲ್ಲಿ(ಡ್ರಾಯಿಂಗ್‌) ಬಳಸಲಾಗುವ ಮಾಧ್ಯಮ: ಪೇಪರ್.

ಕಲಾರೂಪ (ಆರ್ಟ್‌ ಫಾರ್ಮ್/ಕಲಾಪ್ರಕಾರ), ಅಂದರೆ, ಒಂದು ಕಲಾತ್ಮಕ ಅಭಿವ್ಯಕ್ತಿ ಪಡೆದುಕೊಳ್ಳುವಂತಹ ಒಂದು ನಿರ್ದಿಷ್ಟ ರೂಪ ಅಥವಾ ಗುಣ. ಬಳಸಲಾಗುವ ಮಾಧ್ಯಮ ಸಾಮಾನ್ಯವಾಗಿ ಪ್ರಕಾರ(ರೂಪ)ದ ಮೇಲೆ ಪ್ರಭಾವಬೀರುತ್ತದೆ. ಉದಾಹರಣೆಗೆ: ಶಿಲ್ಪಕೃತಿಯ ರೂಪ ತ್ರೀಡೈಮೆನ್ಷನಲ್ (ಮೂರು ಆಯಾಮಗಳಿರುವ) ಆಗಿದ್ದು, ಗುರುತ್ವಕ್ಕೆ ಪ್ರತಿಸ್ಪಂದಿಸಬೇಕು(ಅಂದರೆ ಬೀಳಬಾರದು). ಯಾವುದೇ ನಿರ್ದಿಷ್ಟ ಮಾಧ್ಯಮಕ್ಕೆ ಅದರೆದೇ ಆದ ವಿಶಿಷ್ಟ ನಿರ್ಬಂಧ ಮತ್ತು ಮಿತಿಗಳಿರುತ್ತದೆ, ಇದನ್ನು ಸಂಪ್ರದಾಯಬದ್ಧ ಲಕ್ಷಣ(ಫಾರ್ಮಲ್ ಕ್ವಾಲಿಟಿ ) ಎಂದು ಕರೆಯಲಾಗುತ್ತದೆ. ಇನ್ನೊಂದು ಉದಾಹರಣೆ ಕೊಡುವುದಾದರೆ, ವರ್ಣಚಿತ್ರಕಲೆಯ (ಪೇಂಟಿಂಗ್) ಸಂಪ್ರದಾಯಬದ್ದ ಲಕ್ಷಣಗಳೆಂದರೆ ಕಾನ್‌ವಾಸ್ ಟೆಕ್ಸ್‌ಚರ್, ವರ್ಣ/ಬಣ್ಣ(ಕಲರ್), ಮತ್ತು ಬ್ರಷ್‌ ಟೆಕ್ಸ್‌ಚರ್. ವಿಡಿಯೋ ಗೇಮುಗಳ ಸಂಪ್ರದಾಯಬದ್ದ ಲಕ್ಷಣಗಳೆಂದರೆ ನಾನ್-ಲಿನಿಯಾರಿಟಿ, ಇಂಟ್‌ರ್‌ಆಕ್ಟೀವ್‌ ಮತ್ತು ವರ್ಟುಯಲ್ ಪ್ರೆಸೆನ್ಸ್. ಯಾವುದೆ ನಿರ್ದಿಷ್ಟ ಕಲಾಕೃತಿಯ ರೂಪವನ್ನು , ಮಾಧ್ಯಮದ ಸಂಪ್ರದಾಯಬದ್ಧ ಲಕ್ಷಣ ಮತ್ತು ಕಲಾವಿದನ ಉದ್ದೇಶಗಳು ನಿರ್ಧರಿಸುತ್ತದೆ.

ಯಾವುದೆ ಒಂದು ಮಾಧ್ಯಮದ ನಿರ್ದಿಷ್ಟ ಶೈಲಿ(ಬಗೆ)ಮತ್ತು ರೂಢಿ(ಸಂಪ್ರದಾಯ) ಅನ್ನು ಪ್ರಕಾರ(ಷಾನ್ರ್) ಎನ್ನುತ್ತಾರೆ. ಉದಾಹರಣೆಗೆ: ಸಿನೆಮಾಗಳಲ್ಲಿ ಚೆನ್ನಾಗಿ ಗುರುತಿಸಲ್ಪಟ್ಟ ಪ್ರಕಾರಗಳೆಂದರೆ: ವೆಸ್ಟರ್ನ್, ಹಾರರ್, ಮತ್ತು ರೋಮ್ಯಾಂಟಿಕ್ ಕಾಮಿಡಿ. ಸಂಗೀತ ಪ್ರಕಾರಗಳು: ಡೆತ್ ಮೆಟಲ್ ಮತ್ತು ಟ್ರಿಪ್‌ ಹಾಪ್. ವರ್ಣಚಿತ್ರ ಕಲೆಯಲ್ಲಿ (ಪೇಂಟಿಂಗ್) ಪ್ರಕಾರಗಳು: ಸ್ಟಿಲ್ ಲೈಪ್(ಸ್ತಬ್ಧ ಚಿತ್ರ) ಮತ್ತು ಪಾಸ್ಟೋರಲ್ ಲ್ಯಾಂಡ್‌ಸ್ಕೇಪ್‌. ಒಂದು ನಿರ್ದಿಷ್ಟ ಕಲಾಕೃತಿಯು ಒಂದಕ್ಕಿಂತ ಹೆಚ್ಚು ಪ್ರಕಾರಗಳನ್ನು ಸೇರಿಸಿ ರಚಿಸಲ್ಪಟ್ಟಿರಬಹುದು, ಆದರೆ ಪ್ರತಿ ಪ್ರಕಾರಕ್ಕೂ ಅದರದೆ ಆದ ವಿಶಿಷ್ಟವಾಗಿ ಗುರುತಿಸಬಹುದಾದ ಸಂಪ್ರದಾಯ, ಕ್ಲೀಷೆ ಮತ್ತು ಪ್ರಯೋಗಗಳಿರುತ್ತದೆ. (ಗಮನಿಸ ಬೇಕಾದ ಒಂದು ಅಂಶ: ಷಾನ್ರ್(ಪ್ರಕಾರ) ಎನ್ನುವ ಪದಕ್ಕೆ ವರ್ಣಚಿತ್ರಕಲೆಗೆ (ಪೇಂಟಿಂಗ್‌) ಸಂಬಂಧಪಟ್ಟ ಹಾಗೆ ಇನ್ನೊಂದು ಹಳೆಯದಾದ ಅರ್ಥವುಂಟು; ಲೋಕ ಚಿತ್ರಣ(ಷಾನ್ರ್ ಪೇಂಟಿಂಗ್) , ಎನ್ನುವ ಪದವು 17 ಮತ್ತು 19ನೇ ಶತಮಾನದ ನಡುವೆ ಬಳಸಲಾಗುತ್ತಿತ್ತು ಹಾಗು ಇದನ್ನು ಸಾಮಾನ್ಯ ಜನಜೀವನದ ದೃಶ್ಯಗಳನ್ನು ಚಿತ್ರಿಸುವ ಶೈಲಿಯೆಂದು ಪರಿಗಣಿಸಲ್ಪಡುತ್ತದೆ, ಇಂದು ಕೆಲವೊಂದು ಸಂರ್ದಭದಲ್ಲಿ ಇದೇ ಅರ್ಥ ಕೊಡಲು ಬಳಸಲಾಗುತ್ತದೆ.)

 
ಹೊಕುಸಾಯಿ(ಜಪಾನಿನ, 1760-1849) ರಚಿಸಿರುವ "ದಿ ಗ್ರೇಟ್ ವೇವ್ ಆಫ್‌ ಕಾನಗಾವ", ಎನ್ನುವ ವರ್ಣ ಉಬ್ಬಚ್ಚು(ವುಡ್‌ಕಟ್‌ ಪ್ರಿಂಟ್).

ಕಲಾಕೃತಿಯ, ಕಲಾವಿದನ ಅಥವಾ ಪ್ರಕಾರದ ಶೈಲಿಯೆಂದರೆ , ಕಲಾಕೃತಿ ಪಡೆದುಕೊಳ್ಳುವ ವಿಶಿಷ್ಟ ರೂಪ ಮತ್ತು ಪದ್ಧತಿ.

ಯಾವುದೇ ಬ್ರಷಿಯಾದ, ಡ್ರಿಪ್ಡ್, ಅಥವಾ ಪೋರ್ಡ್ ಭಾವನಾತ್ಮಕವಾದ (ಅಮೂರ್ತ) ವರ್ಣಚಿತ್ರವನ್ನು (ಆಬ್ಸ್‌ಟ್ರಾಕ್ಟ್‌ ಪೇಂಟಿಂಗ್) ಆಭಿವ್ಯಕ್ತಿವಾದ (ಎಕ್ಸೆಪ್ರೆಷನಿಸ್ಟಿಕ್) ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಈ ಶೈಲಿಗಳು ಕೆಲವು ನಿರ್ದಿಷ್ಷ ಐತಿಹಾಸಿಕ ಕಾಲ, ಚಿಂತನೆ ಅಥವಾ ಯಾವುದಾದರೂ ನಿರ್ದಿಷ್ಟ ಕಲಾಂದೋಲನದೊಂದಿಗೆ ಗುರುತಿಸಲಾಗುತ್ತದೆ. ಹೀಗಾಗಿ, ಜಾಕ್‌ಸನ್ ಪೊಲಾಕ್ ರನ್ನು ಅಬ್ಸ್‌ಟ್ರಾಕ್ಟ್‌ ಎಕ್ಸೆಪ್ರೆಷನಿಸ್ಟ್ ಎಂದು ಕೆರಯಲಾಗುತ್ತದೆ. ಒಂದು ನಿರ್ದಿಷ್ಟ ಶೈಲಿಗೆ ಅದರೆದೆ ಆದ ಸಾಂಸ್ಕೃತಿಕ ಅರ್ಥಗಳಿರುತ್ತದೆ,ಹೀಗಾಗಿ ಶೈಲಿಗಳನ್ನು ಗುರುತಿಸಬೇಕಾದರೆ ವಿಶೇಷವಾದ ಸಂವೇದನಾಶೀಲತೆಯನ್ನು ಪ್ರದರ್ಶಿಸಬೇಕಾಗುತ್ತದೆ. ರಾಯ್ ಲಿಚೆನ್‌ಸ್ಟೇನ್‌ (1923-1997) ರ ವರ್ಣಚಿತ್ರಗಳಲ್ಲಿ (ಪೇಂಟಿಂಗ್) ವ್ಯಾಪಕವಾಗಿ ಬಿಂದು/ಚುಕ್ಕೆಗಳನ್ನು (ಡಾಟ್)ಬಳಸಲಾಗಿದ್ದರೂ, ಅದು ಬಿಂದು ಚಿತ್ರಣ (ಪಾಯಿಂಟಿಲಿಸ್ಟ್) ಶೈಲಿ ಅಲ್ಲ, ಏಕೆಂದರೆ, ಅದು ಬಿಂದು ಚಿತ್ರಣದ (ಪಾಯಿಂಟಿಲಿಸಂ) ಮೂಲ ತತ್ವಗಳೊಂದಿಗೆ ಸರಿಹೊಂದುವುದಿಲ್ಲ. ಲಿಚೆನ್‌ಸ್ಟೇನ್‌ ಬೆನ್‌-ಡೇ ಬಿಂದುಗಳನ್ನು ಬಳಸಿದ: ಇವುಗಳನ್ನು ಏಕರೂಪವಾಗಿ ಹರಡಿ ಬಣ್ಣದ ಫ್ಲಾಟ್ ಪ್ರದೇಶವನ್ನು ರಚಿಸಲಾಗುತ್ತದೆ. ಈ ರೀತಿಯ ಬಿಂದುಗಳನ್ನು ಹಾಲ್ಫ್‌ಟೋನ್‌ ಪ್ರಿಂಟಿಂಗ್‌ನಲ್ಲಿ ಬಳಸಲಾಗುತ್ತದೆ, ಇದನ್ನು ಮೂಲತಃ ಕಾಮಿಕ್‌ ಸ್ಟ್ರಿಪ್ ಮತ್ತು ವೃತ್ತಪತ್ರಿಕೆಗಳಲ್ಲಿ (ನ್ಯೂಸ್‌ಪೇಪರ್) ಬಣ್ಣವನ್ನು ಮೂಡಿಸಲು ಬಳಸಲಾಗುತ್ತಿತ್ತು. ಈ ಕಾರಣದಿಂದ ಲಿಚೆನ್‌ಸ್ಟೇನ್‌ ಬಿಂದುಗಳ ಶೈಲಿ ಬಳಸಿ ವರ್ಣಚಿತ್ರಗಳ "ಮೇಲು(ಉತ್ತಮ)" ಮತ್ತು ಕಾಮಿಕ್ಸ್‌ನ "ಕೀಳು(ಅಧಮ)" ಎನ್ನುವ ವಿಗಂಡನೆಯನ್ನು ಪ್ರಶ್ನಿಸುತ್ತಾ, ಸಂಸ್ಕೃತಿಯಲ್ಲಿ ಕೂಡ ಶ್ರೇಣಿ/ವರ್ಗ (ಕ್ಲಾಸ್) ವಿಗಂಡನೆಗಳಿರುವ ಬಗ್ಗೆ ಟೀಕಿಸುತ್ತಾನೆ. ಹೀಗಾಗಿ, ಲಿಚೆನ್‌ಸ್ಟೇನ್‌ ಅನ್ನು ಅಮೇರಿಕಾದ ಪಾಪ್ ಆರ್ಟ್ ಆಂದೋಲನದೊಂದಿಗೆ(1960) ಗುರುತಿಸಲಾಗುತ್ತದೆ. ಇಂಪ್ರೆಷಿನಿಸಂನ (1880ರ ದಶಕ) ನಂತರದ ದಿನಗಳಲ್ಲಿ ಪಾಯಿಟಲಿಸಂ ಎನ್ನುವ ತಂತ್ರವನ್ನು, ಜಾರ್ಜ್ಸ್‌‌ ಸೆಯುರಾಟ್‌ ಎನ್ನುವ ಕಲಾವಿದ ವಿಶೇಷವಾಗಿ ಅಭಿವೃದ್ದಿ ಪಡಿಸಿದ. ಇದರಲ್ಲಿ ಚುಕ್ಕೆಗಳನ್ನು ಬಳಸಿ, ಬಣ್ಣ ಮತ್ತು ಅಂತರದ ವೈವಿಧ್ಯತೆಯನ್ನು ಸೃಷ್ಟಿಸಿದ. ಎರಡೂ ಕಲಾವಿದರೂ ಬಿಂದುಗಳನ್ನು ಬಳಸಿದರೂ ಕೂಡ ನಿರ್ದಿಷ್ಟವಾದ ಶೈಲಿ ಮತ್ತು ತಂತ್ರಗಾರಿಕೆಯು, ಈ ಕಲಾವಿದರು ಭಾಗಿಯಾಗಿದ್ದ ಕಲಾಂದೋಲನಕ್ಕೆ ಅನುಗುಣವಾಗಿದೆ. ಇವೆಲ್ಲವೂ ಒಂದು ಕಲಾಕೃತಿಯನ್ನು ವ್ಯಾಖ್ಯಾನ ಮಾಡಿ ಅದನ್ನು ಒಂದು ನಿರ್ದಿಷ್ಟ ಪ್ರಕಾರಕ್ಕೆ ಸೇರಿಸುವ ಪ್ರಯತ್ನ. "ನೀವೊಬ್ಬ ಅನೇಕ ಕಲಾಪ್ರಕಾರಗಳ ಕಲಾಕೃತಿಗಳ ಅರ್ಥ ವಿಶ್ಲೇಷಣೆ ಮಾಡಿ ಅವುಗಳನ್ನು ಹೋಲಿಸುವ ಕೆಲಸ ಮಾಡುವ,ಕಲಾವಿಮರ್ಶಕನೆಂದು ಊಹಿಸಿಕೊಳ್ಳಿ. ಆಗ, ನೀವು ಈ ಕೆಲಸವನ್ನು ಹೇಗೆ ಪೂರೈಸುತ್ತೀರಿ? ಒಂದು ಹಾದಿಯೆಂದರೆ ಪ್ರತಿಯೊಬ್ಬ ಕಲಾವಿದ ಕಲಾಕೃತಿ (ಆಬ್ಜೆಕ್ಟ್), ಇಮೇಜ್ ವಿಡಿಯೋ, ಅಥವಾ ಪ್ರಸಂಗ (ಇವೆಂಟ್)ವನ್ನು ಸೃಷ್ಟಿಸಲು ಬಳಸಿದ ವಸ್ತುಗಳನ್ನು ಕೂಲಂಕುಷವಾಗಿ ಪರೀಕ್ಷಿಸುವುದು. ಒಂದು ಶಿಲ್ಪವನ್ನು ಕಂಚು/ತಾಮ್ರದಲ್ಲಿ (ಬ್ರಾನ್ಸ್) ಕೆತ್ತನೆ ಮಾಡಿದ್ದರೆ, ಖಂಡಿತವಾಗಿ ಅದರ ಅರ್ಥದ(ಪರಿಣಾಮ) ಮೇಲೆ ಪ್ರಭಾವಬೀರುತ್ತದೆ. ಇದೇ ಕಲಾಕೃತಿಯ ಮಿಕ್ಕೆಲ್ಲಾ ಅಂಶಗಳು ಹಾಗೆ ಇದ್ದೂ,ಚಿಣ್ಣ ಅಥವಾ ಪ್ಲಾಸ್ಟಿಕ್ ಅಥವಾ ಚಾಕಲೇಟ್‌ನಲ್ಲಿ ಸೃಷ್ಟಿಸಲ್ಪಟ್ಟಿದ್ದರೆ ಅದರ ಅರ್ಥ(ಪರಿಣಾಮ) ಬೇರೆಯದೆ ಆಗಿರುತ್ತಿತ್ತು. ನಂತರ, ನೀವು ಪ್ರತಿ ಕಲಾಕೃತಿಯ ಆಕಾರ, ವರ್ಣ/ಬಣ್ಣ, ಟೆಕ್ಸ್‌ಚರ್ ಮತ್ತು ಲೈನ್‌ಗಳ ಜೋಡನಣೆಯೆಂದು ಪರೀಕ್ಷಿಸಬಹುದು. ಇವುಗಳನ್ನು, ವೈವಿಧ್ಯಮಯ ಮಾದರಿ ಮತ್ತು ಸಂಯೋಜನಗೆ ಸಂಬಂಧಿಸಿದ ರಚನೆಗಳ ಪ್ರಕಾರವಾಗಿ ವಿಗಂಡಿಸಬಹುದು. ನಿಮ್ಮ ಗ್ರಹಿಕೆಯಲ್ಲಿ (ಆರ್ಥೈಕೆಯಲ್ಲಿ), ನೀವು ಕೊನೆಯಲ್ಲಿ ಸಿದ್ಧವಾದ ಕಲಾಕೃತಿಯ ಒಟ್ಟಾರೆ ಅರ್ಥಕ್ಕೆ(ಪರಿಣಾಮ) ರೂಪದ ಪ್ರಮುಖ ಗುಣಗಳು ಹೇಗೆ ಸಹಾಯಮಾಡುತ್ತದೆ ಎನ್ನುವುದರ ಬಗ್ಗೆ ನೀವು ಅಭಿಪ್ರಾಯ(ಕಾಮೆಂಟ್) ವ್ಯಕ್ತಪಡಿಸಬಹುದು. [ಆದರೆ ಕೊನೆಯಲ್ಲಿ] ಬಹಳಷ್ಟು ಕಲಾಕೃತಿಗಳ ಅರ್ಥ(ಪರಿಣಾಮ)... ಕೇವಲ ಬಳಸಲಾದ ವಸ್ತು, ತಂತ್ರ ಮತ್ತು ರೂಪಗಳ ಬಗ್ಗೆ ವಿಶ್ಲೇಷಣೆ ಮಾಡುವುದರೊಂದಿಗೆ ಮುಕ್ತಾಯವಾಗುವುದಿಲ್ಲ. ಕಲಾಕೃತಿ ಉಂಟುಮಾಡುವ (ಹುಟ್ಟುಹಾಕುವ) ಭಾವನೆ ಮತ್ತು ಯೋಚನೆಗಳ ಕುರಿತಾದ ಚರ್ಚೆಗಳನ್ನು ಕೂಡ ಹಲಾವರು ಅರ್ಥೈಕೆಗಳು/ವಿಶ್ಲೇಷಣೆಗಳು ಒಳಗೊಂಡಿರುತ್ತದೆ. "[೧೨]

ನೈಪುಣ್ಯ ಮತ್ತು ಕೌಶಲ್ಯ

ಬದಲಾಯಿಸಿ
 
ಆಡಮ್.ಮೈಕಲ್ ಎಂಜೆಲ್ಲೋವಿನ ಕಾಪೆಲ್ಲಾ ಸಿಸ್ಟಿನಾದ ಗೋಡೆಯ ಮೇಲಿರುವ ಚಿತ್ರ(ಫ್ರೆಸ್ಕೋ)(1511).

ಕಲೆ ಎನ್ನುವ ಪದವನ್ನು ತರಬೇತಿಯಿಂದ ಪಡೆದ ಸಾಮರ್ಥ್ಯ ಅಥವಾ ಮಾಧ್ಯಮದ ಮೇಲಿನ ಹಿಡಿತ ಸಾಧಿಸಿರುವ ಭಾವನೆ ಎಂದು ಆರ್ಥ ಬರುವ ಹಾಗೆ ಬಳಸಲಾಗುತ್ತದೆ. ಭಾಷೆಯನ್ನು ಸಮರ್ಥವಾಗಿ ಬಳಸಿ ತಕ್ಷಣ ಮತ್ತು ಆಳವಾದ ಅರ್ಥ ಕೊಡುವುದನ್ನು ಕೂಡ ಸರಳವಾಗಿ ಕಲೆಯೆಂದು ಹೇಳಬಹುದು. ಭಾವನೆ,ಯೋಚನೆ,ಮತ್ತು ಗ್ರಹಿಕೆಗಳನ್ನು(ಅಬ್‌ಸರ್ವೇಷನ್‌) ಅಭಿವ್ಯಕ್ತ ಮಾಡುವ ಕ್ರಿಯೆಯನ್ನು ಕಲೆ ಎನ್ನಬಹುದು. ಒಂದು ವಸ್ತುವನ್ನು ಬಳಸುವುದರ ಕಾರಣ ಅದರ ಕುರಿತು ಒಂದು ರೀತಿಯ ಗ್ರಹಿಕೆ ಬೆಳೆಯುತ್ತದೆ, ಇದು ಒಬ್ಬ ಮನುಷ್ಯನ ಚಿಂತನೆಯ ಮೇಲೆ ಪರಿಣಾಮ ಬೀರುತ್ತದೆ. "ಕಲೆ" ಎನ್ನುವ ಗುಣವಾಚಕ(ವಿಶೇಷಣ) ಕುರಿತು ಅದರಲ್ಲೂ ಮುಖ್ಯವಾಗಿ ಅದರ ಉತ್ತುಂಗದ ದೃಷ್ಟಿಯಿಂದ ಆಲೋಚಿಸಿದಾಗ,ಒಬ್ಬ ಸಮಾನ್ಯ ಮನುಷ್ಯ ಕಲಾವಿದನಾಗಲು ಅವನು ವಿಶೇಷವಾದ ಪರಿಣತಿಯನ್ನು ಹೊಂದಿರಬೇಕೆನ್ನುವುದು ಸಮಾನ್ಯವಾದ ಅಭಿಪ್ರಾಯ. ಇದು ತಾಂತ್ರಿಕ ನೈಪುಣ್ಯತೆಯನ್ನು ಪ್ರದರ್ಶನ ಮಾಡುವುದಿರಬಹುದು ಅಥವಾ ಶೇಕ್ಷ್‌ಪಿಯರ್ ನಾಟಕಗಳಲ್ಲಿ ವ್ಯಕ್ತವಾಗುವ ಹೊಸ ಅನುಭವಗಳಿರಬಹುದು, ಅಥವಾ ಇದರೆಡರ ಮಿಶ್ರಣವಾಗಿರಬಹುದು. ಸಂಪ್ರದಾಯಿಕವಾಗಿ ನೈಪುಣ್ಯವನ್ನು ಕಲೆಯಿಂದ ಬೇರ್ಪಡಿಸಲಾಗದ ಗುಣಲಕ್ಷಣವೆಂದು ಪರಿಗಣಿಸಲಾಗುತ್ತಿತ್ತು, ಹೀಗಾಗಿ ಕಲೆ ಸಫಲವಾಗ ಬೇಕಾದರೆ, ನೈಪುಣ್ಯದ ಆಗತ್ಯವಿರಬೇಕಿತ್ತು. ಆದರೆ ಲಿಯನಾರ್ಡೋ ಡಾ ವಿಂಕಿಯ ಪ್ರಕಾರ ಕಲೆ, ಅವನ ಪ್ರಯತ್ನಗಳಿಗಿಂತ ಹೆಚ್ಚು ಕಡಿಮೆಯಲ್ಲದ್ದು, ನೈಪುಣ್ಯದ ಅಭಿವ್ಯಕ್ತಿಯೆಂದು ಅಭಿಪ್ರಾಯಪಡುತ್ತಾನೆ. ಇಂದು ಕ್ಷಣಿಕ ಗುಣಗಳಿಗೆ ಪ್ರಶಂಸೆಗೊಳಗಾಗುವ ರೆಮ್‌ಬ್ರಾಂಡ್ಟ್‌ರ ಕೃತಿಗಳನ್ನು,ಅವನ ಸಮಕಾಲೀನರು(ಹಿಂದೆ) ವಿಶೇಷ ಪರಿಣಾಮಗಳನ್ನು ಬೀರುವ ತಾಂತ್ರಿಕ ಅಂಶಗಳಿಗಾಗಿ ಪ್ರಶಂಶಿಸುತ್ತಿದ್ದರು. ಇಪ್ಪತನೇ ಶತಮಾನದ ಪ್ರಾರಂಭದಲ್ಲಿ ಜಾನ್‌ ಸಿಂಗರ್‌ ಸಾರ್ಜೆಂಟ್ ಚಾಕಚಕ್ಯತೆಯಿಂದ ಮಾಡುತ್ತಿದ್ದ ಪ್ರದರ್ಶನಗಳು ಕೆಲವರ ಪ್ರಶಂಸೆಗೆ ಒಳಗಾದರೆ, ಕೆಲವರು ಇದನ್ನು ಸಂದೇಹದಿಂದ ನೋಡುತ್ತಿದ್ದರು. ಸರಿಸುಮಾರು ಇದೇ ಹೊತ್ತಿಗೆ, ಆ ಕಾಲದ ಸುಪ್ರಸಿದ್ಧ ಕಲಾವಿದ ಪಾಬ್ಲೋ ಪಿಕಾಸೋ, ತನ್ನ ಸಂಪ್ರದಾಯಿಕ ಶೈಕ್ಷಣಿಕ ತರಬೇತಿಯನ್ನು ಪೂರೈಸ ತೊಡಗಿದ್ದ. ಅಧುನಿಕ ಕಲೆಯ ಬಗೆಗಿನ ಸಮಾನ್ಯವಾದ ಪ್ರಸ್ತುತವಾವ ಟೀಕೆ, ಒಂದು ಸೃಜನಾತ್ಮಕ ಕೃತಿಯನ್ನು ಸೃಷ್ಟಿಸುವುದಕ್ಕೆ ಬೇಕಾದ ಕೌಶಲದ ಅಥವಾ ಸಾಮರ್ಥ್ಯದ ಕೊರತೆಯ ಕುರಿತಂತೆಯಿದೆ. ಕಲ್ಪಾನಾತ್ಮಕ ಕಲೆಯಲ್ಲಿ (ಕನ್ಸೆಪ್‌ಟ್ಯುಅಲ್ ಆರ್ಟ್), ಮಾರ್ಸೆಲ್ ಡುಚಾಂಪ್‌ ರ "ಫೌಂಟೇನ್" ಎನ್ನುವುದು ಕಲಾವಿದನೊಬ್ಬ ಫೌಂಡ್ ಆಬ್ಜೆಕ್ಟ್‌ಗಳನ್ನು ("ರೆಡಿ-ಮೇಡ್":ಸಿದ್ಧ)ಬಳಸಿಕೊಂಡು ಸಂಪ್ರದಾಯಿಕವಾಗಿ ಗುರುತಿಸಲ್ಪಟ್ಟ ಕಲಾಕೌಶಲ್ಯಗಳನ್ನು ಬಳಸದೆ ರಚಿಸಿದ ಕಲಾಕೃತಿಗಳಿಗೆ ಮೊದಲ ಉದಾಹರಣೆಗಳಲ್ಲಿ ಒಂದು. ಟ್ರೇಸಿ ಎಮಿನ್‌ಮೈ ಬೆಡ್ ಅಥವಾ ಡೇಮಿಯನ್‌ ಹಿರ್ಸ್ಟ್‌ದಿ ಫಿಸಿಕಲ್‌ ಇಂಪಾಸಿಬಿಲಿಟಿ ಆಫ್‌ ಡೆತ್‌ ಇನ್‌ ದಿ ಮೈಂಡ್‌ ಆಫ್‌ ಸಮ್‌ಒನ್‌ ಲೀವಿಂಗ್‌ ಎಲ್ಲವೂ ಇದೇ ಮಾದರಿಯನ್ನು ಅನುಸರಿಸುತ್ತದೆ ಅಲ್ಲದೆ ಮಾಸ್‌ ಮೀಡಿಯಾವನ್ನು ನಿಯಂತ್ರಿಸುತ್ತದೆ (ಮನಿಪ್ಯುಲೇಟ್ ಮಾಡುತ್ತದೆ). ಎಮಿನ್ ತನ್ನ ಹಾಸಿಗೆಯ ಮೇಲೆ ಮಲಗಿದಳು (ಮತ್ತು ಇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಳು), ಇದರ ಫಲಿತಾಂಶವನ್ನು ಗ್ಯಾಲರಿಯೊಂದರಲ್ಲಿ ಕಲಾಕೃತಿ/ಕಲಾಸೃಷ್ಟಿ ಎಂದು ಪ್ರದರ್ಶನಕ್ಕೆ ಇಟ್ಟಳು. ಹಿರ್ಸ್ಟ್‌ ಕಲಾಕೃತಿಯೊಂದರ ಕಲ್ಪಾನಾತ್ಮಕ ವಿನ್ಯಾಸ ಕೊಟ್ಟ. ಆದರೆ ಇದರ ಬಹುಪಾಲುನ್ನು ನೇಮಕಗೊಂಡ ಕಲಾವಿದರು ಅಂತಿಮಗೊಳಿಸಿದರು. ಹಿರ್ಸ್ಟ್‌ನ ಅಚ್ಚರಿ(ಗಾಭರಿ(ಷಾಕ್‌)) ಮಾಡಬಹುದಾದ ಕಲ್ಪನೆಗಳನ್ನು ಮಾಡುವ ಸಮಾರ್ಥ್ಯವಿರುವ ಕಾರಣ ಅವನು ಜನಪ್ರಿಯನಾಗಿದ್ದಾನೆ. ಕಲ್ಪನಾತ್ಮಕ (ಕನ್ಸೆಪ್‌ಟ್ಯುಯಲ್) ಮತ್ತು ಸಮಕಾಲಿನ ಕಲಾಕೃತಿಗಳ ರಚನೆಯು ಫೌಂಡ್ ಆಬ್ಜೆಕ್ಟ್‌ಗಳನ್ನು ಜೋಡಿಸುವುದೆ ಆಗಿದೆ. ಆದರೆ, ಈಗಲೂ ಬಹಳಷ್ಟು ಅಧುನಿಕ(ಮಾಡರ್ನ್‌) ಮತ್ತು ಸಮಕಾಲಿನ ಕಲಾವಿದರು ಚಿತ್ರಬಿಡಿಸುವ ಮತ್ತು ವರ್ಣಕೌಶಲದಲ್ಲಿ ಶ್ರೇಷ್ಠರಾಗಿದ್ದಾರೆ. ಇದ್ದಲದೆ ಅವರು ಕಲಾಕೃತಿಗಳನ್ನು ಸೃಷ್ಟಿಸುವುದರಲ್ಲಿ ಸಿದ್ದಹಸ್ತರಾಗಿದ್ದಾರೆ (ಉತ್ತಮರಾಗಿದ್ದಾರೆ).

ಮೌಲ್ಯ/ಯೋಗ್ಯತೆ ನಿರ್ಣಯಿಸುವುದು

ಬದಲಾಯಿಸಿ
 
ಆಸ್ಟ್ರೇಲಿಯಾದ ಮೂಲನಿವಾಸಿಗಳ ಪೊಳ್ಳಾದ ಮರದ ಸ್ಮಾರಕ(ಟೂಮ್).ನಾಷನಲ್ ಗ್ಯಾಲರಿ, ಕ್ಯಾನಬೆರಾ, ಆಸ್ಟ್ರೇಲಿಯಾ.

ಮೇಲೆ ತಿಳಿಸಿರುವುದಕ್ಕೆ ಸಂಬಂಧಿಸಿದ ಹಾಗೆ, ಕಲೆ ಎನ್ನುವ ಶಬ್ದವನ್ನು ಕೆಲವೊಂದು ಸಂದರ್ಭದಲ್ಲಿ ಯೋಗ್ಯತೆಯನ್ನು ನಿರ್ಣಯಿಸಲು ಕೂಡ ಬಳಸಲಾಗುತ್ತದೆ. ಹೀಗಾಗಿ, "ಆ ತಿನಿಸು ಒಂದು ಕಲಾಸೃಷ್ಟಿ"(ಅಡುಗೆ ಮಾಡಿದವನು ಕಲಾವಿದ) ಅಥವಾ "ಮೋಸಮಾಡುವ ಕಲೆ" (ಇಲ್ಲಿ ಮೋಸಮಾಡುವವನ ಚಾಕಚಕ್ಯತೆಯನ್ನು ಹೊಗಳಲಾಗುತ್ತದೆ), ಎನ್ನುವ ಪ್ರಯೋಗಳಿವೆ. ಹೆಚ್ಚಿನ ಮೌಲ್ಯ ಮತ್ತು ಅಧಿಕ ಗುಣಮಟ್ಟದ ಪ್ರಮಾಣವನ್ನು ಸೂಚಿಸಲು ಈ ಪದವನ್ನು ಪ್ರಯೋಗಿಸುವುದರಿಂದಾಗಿ, ಈ ಶಬ್ದಕ್ಕೆ ವ್ಯೈಯಕ್ತಿಕತೆಯ ಗುಣವನ್ನು ಕೊಡುತ್ತದೆ. ಮೌಲ್ಯ ನಿರ್ಣಯಿಸಲು ವಿಮರ್ಶಾತ್ಮಕ ಮನೊಭಾವದ ಅಗತ್ಯವಿರುತ್ತದೆ. ಬಹಳ ಪ್ರಾಥಮಿಕ ಹಂತದಲ್ಲಿ,ಯಾವುದೇ ಕೃತಿಯನ್ನು ಕಲೆಯೆಂದು ಪರಿಗಣಿಸಬೇಕಾದರೆ,ಅದು ಅಕರ್ಷಿಸುವ ಅಥಾವ ತಿರಸ್ಕರಿಸುವ ಗುಣವನ್ನು (ಗ್ರಹಿಕೆ) ಹೊಂದಿದೆಯೇ ಎಂದು ಪರೀಕ್ಷಿಸಲಾಗುತ್ತದೆ. ಆದರೆ ಗ್ರಹಿಕೆ ಯಾವಾಗಲೂ ಅನುಭವಗಳ ಆಧಾರದ ಮೇಲೆ ಬೇರೆಬೇರೆ ಆಗಿರುತ್ತದೆ. ಅಷ್ಟೇ ಅಲ್ಲದೆ ಈ ಗ್ರಹಿಕೆ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಯಾವುದು ನಮ್ಮ ಮನಸ್ಸಿಗೆ ಮುದ ನೀಡುವುದಿಲ್ಲವೋ ಅಂತಹುದನ್ನು ಕಲೆಯೆಂದು ಪರಿಗಣಿಸಲಾಗದು ಎಂಬುದು ಸಮಾನ್ಯ ಭಾವನೆ. ಆದರೆ, "ಒಳ್ಳೆಯ/ಉತ್ತಮ" ಕಲೆ ಬಹುತೇಕ ವೀಕ್ಷಕರಿಗೆ (ಶೋತೃಗಳಿಗೆ), ಯಾವಾಗಲೂ ಅಥವಾ ನಿಯತವಾಗಿ "ಸುಂದರ" ಎಂಬ ಭಾವನೆಯನ್ನು ಹುಟ್ಟಿಸುವುದಿಲ್ಲ. ಸರಳವಾಗಿ ಹೇಳಿದರೆ, ಒಬ್ಬ ಕಲಾವಿದನ ಪ್ರಮುಖ ಉದ್ದೇಶ ಕೇವಲ ಸೌಂದರ್ಯಪ್ರಜ್ಞೆಯನ್ನು ಜಾಗೃತಗೊಳಿಸುವುದು ಮಾತ್ರವೇ ಆಗಿರಬೇಕೆಂದೇನೂ ಇಲ್ಲ. ಅಲ್ಲದೆ, ಸಾಮಾನ್ಯವಾಗಿ ಸಮಾಜಿಕ ಪ್ರಜ್ಞೆ,ನೈತಿಕ ಪ್ರಜ್ಞೆ ಅಥವಾ ಚಿಂತನೆಯನ್ನು ಜಾಗೃತಗೊಳಿಸುವ ಉದ್ದೇಶದಿಂದ ಕಲೆ ಕೆಲವೊಮ್ಮೆ ಘೋರ ಚಿತ್ರಣಗಳನ್ನು ಚಿತ್ರಿಸಬಹುದು. ಉದಾಹರಣೆಗೆ, ಫ್ರಾನ್ಸಿಸ್‌ಕೋ ಗೋಯ ರ ಸ್ಪೇನಿನಲ್ಲಿ ನಡೆದ ಗುಂಡಿಟ್ಟು ಸಾಯಿಸುವುದನ್ನು (ಸ್ಪಾನಿಷ್ ಷೂಟಿಂಗ್) ತೋರಿಸುವ 3ನೇ ಮೇ1808 ಎನ್ನುವ ವರ್ಣಚಿತ್ರದಲ್ಲಿ ಹೇಗೆ ಅನೇಕ ನಾಗರೀಕರನ್ನು ನಿರ್ದಾಕ್ಷಿಣ್ಯವಾಗಿ ಫೈರಿಂಗ್ ಸ್ಕ್ವಾಡ್‌ನವರು(ಗುಂಡಿಟ್ಟು ಸಾಯಿಸಲು ನಿಯೋಜಿಸಲಾಗಿರುವ ವಿಶೇಷ ಪಡೆ) ಗುಂಡಿಟ್ಟು ಸಾಯಿಸಿದರು ಎಂದು ಚಿತ್ರದ ಮೂಲಕ ತೋರಿಸಲಾಗಿದೆ. ಇದೇ ಸಮಯ, ಘೋರವಾದ ಚಿತ್ರಣದಲ್ಲಿ ಕೂಡ ನಾವು ಗೋಯರ ಕಲಾನೈಪುಣ್ಯವನ್ನು ಕಾಣಬಹುದಾಗಿದ್ದು, ಹೀಗಾಗಿ ಈ ಚಿತ್ರವು ಸರಿಯಾದ ಸಮಾಜಿಕ ಮತ್ತು ರಾಜಕೀಯ ಕ್ರೋಧವನ್ನು ಕೆರಳಿಸುವಲ್ಲಿ ಸಫಲವಾಗಿದೆ. ಹೀಗಾಗಿ, ಯಾವ ಬಗೆಯ ಸೌಂದರ್ಯ ಪ್ರಜ್ಞೆಯನ್ನು ತೃಪ್ತಿಪಡಿಸಿದರೆ ಅದನ್ನು 'ಕಲೆ' ಎಂದು ಪರಿಗಣಿಸಬಹುದು ಎನ್ನುವ ಚರ್ಚೆ ಮುಂದುವರೆದಿದೆ. ಈಗಾಗಲೇ ಸ್ಥಾಪಿತವಾಗಿರುವ ಸುಂದರವಾಗಿರುವುದು ಶ್ರೇಷ್ಟವೆನ್ನುವ ಆಭಿಪ್ರಾಯದ ವಿರುದ್ಧ ಅಭಿಪ್ರಾಯಗಳನ್ನು ಹುಟ್ಟು ಹಾಕುವ ಮೌಲ್ಯಗಳ ಸೃಷ್ಟಿಸುವ ಕಲೆ, ಸದಭಿರುಚಿಗೆ ಅನುಗುಣವಾಗಿ ಆಕರ್ಷಣಿಯವಾಗಿರುವುದನ್ನು ಸಂಪೂರ್ಣವಾಗಿ ತ್ಯಜಿಸಬೇಕೆಂದೇನೂ ಇಲ್ಲ. ವಾಸ್ತವದಲ್ಲಿ, ಇದಕ್ಕೆ ವಿರುದ್ಧವು ಸಾಮಾನ್ಯವಾಗಿ ನಿಜವಾಗಿರುತ್ತದೆ. ಯಾವುದರ ಬಗ್ಗೆ ಜನಪ್ರಿಯವಾಗಿ ಸುಂದರವಾಗಿ ಆಕರ್ಷಕವಾಗಿದೆ ಎನ್ನುವ ಅಭಿಪ್ರಾಯ ಇರುತ್ತದೆಯೊ, ಅದು ಕಾಲಾನುಕಾಲಕ್ಕೆ ಪುನರ್‌ಪರಿಶೀಲನೆಗೆ ಒಡ್ಡಲ್ಪಟ್ಟು ಸೌಂದರ್ಯಪ್ರಜ್ಞೆಯನ್ನು ಮತ್ತೆಮತ್ತೆ ಉತ್ತೇಜಿಸುತ್ತದೆ. ಇದಲ್ಲದೆ ಇದು ಕಲೆಯನ್ನು ಆಸ್ವಾದಿಸುವುದರ ಬಗ್ಗೆ ಹೊಸ ಮಾನದಂಡಗಳನ್ನು ಕೂಡ ಉಂಟುಮಾಡುತ್ತದೆ. ಅನೇಕ ಕಲಾಶಾಲೆಗಳು ಕಲೆಯ ಗುಣಮಟ್ಟವನ್ನು ವಿಶ್ಲೇಷಿಸುವ ತಮ್ಮದೇ ಆದ ಆನೇಕ ವ್ಯಾಖ್ಯಾನಗಳನ್ನು ಮಂಡಿಸಿವೆ, ಹಾಗೂ ಬಹಳಷ್ಟು ಶಾಲೆಗಳು ಒಂದು ಆಂಶದ ಬಗ್ಗೆ ಸಹಮತವನ್ನು ಹೊಂದಿದ್ದಾರೆ: ಒಮ್ಮೆ ಸೌಂದರರ್ಯಾನುಭವದ ವಿಕಲ್ಪಗಳನ್ನು ಒಪ್ಪಿಕೊಂಡಮೇಲೆ, ಕಲೆಯ ಯೋಗ್ಯತೆ/ಮೌಲ್ಯವನ್ನು ಆ ಕಲಾಸೃಷ್ಟಿಯು ತನ್ನ ಮಾಧ್ಯಮವನ್ನು ಮೀರಿ ಸಾರ್ವತ್ರಿಕವಾದ ಒಮ್ಮತದ ಸಂವೇದನೆಯನ್ನು ಉಕ್ಕಿಸಬಲ್ಲದಾಗಿದ್ದು, ಅಥವಾ ಒಂದು ಕಾಲದ ಗುಣಧರ್ಮವನ್ನು (ಟ್ಸೈಟ್ಗೈಸ್ಟ್‌) ಕರಾರುವಕ್ಕಾಗಿ ಪ್ರತಿಬಿಂಬಿಸುವುದರ ಅಧಾರದ ಮೇಲೆ ನಿರ್ಧರಿಸಲಾಗುವುದು.

ಕಲೆಯ ಉದ್ದೇಶ ಸಾಮಾನ್ಯವಾಗಿ ಆಕರ್ಷಿಸುವುದು ಮತ್ತು ಮನುಷ್ಯರ ಭಾವನೆಗಳಿಗೆ ಸ್ಪಂದಿಸುವುದು (ಕನೆಕ್ಟ್) ಆಗುವುದು. ಕಲೆ ಸೌಂದರ್ಯ ಪ್ರಜ್ಞೆ ಅಥವಾ ನೈತಿಕ ಪ್ರಜ್ಞೆಯನ್ನು ಜಾಗೃತಗೊಳಿಸಬಹುದು. ಅದು ಅಂತಹ ಭಾವಗಳನ್ನು ಸಂವಹನ ಮಾಡಲು ಕೂಡ ಬಳಸಬಹುದು. ಕಲಾವಿದರರು ತಮ್ಮ ಭಾವನೆಗಳನ್ನು ಅಭಿವ್ಯಕ್ತಪಡಿಸುತ್ತಾರೆ ಹೀಗಾಗಿ ವೀಕ್ಷಕರು/ಕೇಳುಗರು/ಶೋತೃಗಳ ಭಾವನೆ ಸ್ವಲ್ಪ ಮಟ್ಟಿಗೆ ಜಾಗೃತವಾಗಬಹುದು, ಆದರೆ ಅವರು ಇದನ್ನು ಉದ್ದೇಶಪೂರ್ವಕವಾಗಿ ಮಾಡುವುದಿಲ್ಲ. ಕಲೆ, ಸಾಮಾನ್ಯವಾಗಿ ಮನುಷ್ಯರ ಸಹಜ ಗುಣವೆಂದು ಪರಿಗಣಿಸಲಾಗುವ ಸ್ಥಿತಿಯನ್ನು ಒಳಹೊಕ್ಕಿ (ಎಕ್ಸ್‌ಪ್ಲೋರ್‌) ನೋಡುತ್ತದೆ. ಪರಿಣಾಮಕಾರಿಯಾದ ಕಲೆಯು ಮನುಷ್ಯರ ಸ್ಥಿತಿಯ ಬಗ್ಗೆ ಹೊಸ ಅರಿವನ್ನು ಒಬ್ಬ ವ್ಯಕ್ತಿಗೆ ಅಥವಾ ಒಂದು ಸಮುದಾಯಕ್ಕೆ ನೀಡುತ್ತದೆ; ಈ ಅರಿವು ಯಾವಾಗಲೂ ಸಕಾರಾತ್ಮಕವಾಗಿ ಇರಬೇಕು ಎಂದೇನು ಇಲ್ಲ; ಅಥವಾ ಈ ಅರಿವಿನಿಂದಾಗಿ ಒಟ್ಟು ಮಾನವರ ಸಾಮರ್ಥ್ಯವು ಹೆಚ್ಚಾಗುತ್ತದೆ ಎನ್ನುವ ಅರ್ಥವೂ ಅಲ್ಲ. ಕಲಾವಿದನಿಗಿರುವ ಕಲಾಕೌಶಲ ಅವರು ಉಂಟುಮಾಡಬಹುದಾದ ಒಟ್ಟು ಪರಿಣಾಮದ ಮೇಲೆ ಪ್ರಭಾವ ಬೀರುತ್ತದೆ ಹಾಗು ಹೊಸ ಅಂತರ್‌ದೃಷ್ಟಿಗಳನ್ನು ತೆರೆಯುತ್ತವೆ. ಇದನ್ನು ತಮಗೆ ಬೇಕಾದ ಹಾಗೆ ನಿಯಂತ್ರಿಸುವ ಸಾಮರ್ಥ್ಯವು ಅವರ ಕೌಶಲ್ಯ ಮತ್ತು ಮನೋಬಲವನ್ನು ತೋರಿಸುತ್ತದೆ.

ಕಲೆಯ ಉದ್ದೇಶ

ಬದಲಾಯಿಸಿ
 
ಒಂದು ನವಾಜೊ ರಗ್ c.1880.

ಇತಿಹಾಸದುದ್ದಕ್ಕೂ ಕಲೆಗೆ ಅನೇಕ ವೈವಿಧ್ಯಮಯವಾದ ಉದ್ಧೇಶಗಳಿವೆ(ಫಂಕ್ಷನ್‌), ಹೀಗಾಗಿ ಕಲೆಯ ಉದ್ದೇಶವನ್ನು ಯಾವುದೇ ಒಂದು ನಿರ್ದಿಷ್ಟ ಉದ್ದೇಶಕ್ಕೆ ಸೀಮಿತಮಾಡುವುದು ಅಥವಾ ಅದನ್ನು ಒಂದೇ ಒಂದು ಭಾವನೆಗೆ ಪರಿಮಾಣಿಸುವುದು (ಕ್ವಾಂಟಿಫೈ ಮಾಡುವುದು) ಕಷ್ಟ. ಇದರ ಅರ್ಥ ಕಲೆಯ ಉದ್ದೇಶ "ಅಸ್ಪಷ್ಟ (ವೇಗ್)" ಎಂದು ಅಲ್ಲ, ಬದಲಾಗಿ ಕಲೆ ಸೃಷ್ಟಿಯಾಗಲು ಅನನ್ಯವಾದ,ವೈವಿಧ್ಯಮಯ ಅನೇಕ ಕಾರಣಗಳಿರುತ್ತದೆ. ಕಲೆಯ ಉದ್ದೇಶಗಳ ಕುರಿತು ಈ ಕೆಳಗೆ ವಿವರಿಸಲಾಗಿದೆ. ಕಲೆಯ ಬೇರೆಬೇರೆ ಉದ್ದೇಶಗಳನ್ನು ಉದ್ದೇಶಪೂರ್ವಕವಲ್ಲದ (ನಾನ್-ಮೊಟಿವೇಟೆಡ್) ಮತ್ತು ಉದ್ದೇಶಪೂರ್ವಕವಾದ (ಮೋಟಿವೇಟೆಡ್‌) (ಲೆವಿ-ಸ್ಟ್ರಾಸ್) ಎನ್ನುವ ಎರಡು ವಿಧವಾಗಿ ವಿಗಂಡಿಸಬಹುದು.

ಕಲೆಯ ಉದ್ದೇಶಪೂರ್ವಕವಲ್ಲದ ಉದ್ದೇಶಗಳು (ನಾನ್-ಮೋಟಿವೇಟೆಡ್ ಫಂಕ್ಷನ್ಸ್‌ ಆಫ್‌ ಆರ್ಟ್)

ಬದಲಾಯಿಸಿ

ಕಲೆಯ ಉದ್ದೇಶಪೂರ್ವಕವಲ್ಲದ ಉದ್ದೇಶಗಳು (ನಾನ್‌-ಮೋಟಿವೇಟೆಡ್‌) ಮನುಷ್ಯತ್ವದ ಅವಿಭಾಜ್ಯ ಅಂಗವಾಗಿರುತ್ತದೆ. ಇದು ಪ್ರತಿ ಮನುಷ್ಯರ ವಿಚಾರಶಕ್ತಿಯನ್ನು ಮೀರಿದ್ದು ಯಾವುದೇ ಹೊರಗೆಗೊಚರವಾಗುವ ಯಾವುದೇ ಉದ್ದೇಶವನ್ನು ಸಕಾರಗೊಳಿಸಬೇಕೆಂದೇನು ಇಲ್ಲ. ಅರಿಸ್ಟಾಟಲ್ "ಅನುಕರಿಸುವುದು(ಪ್ರತಿರೂಪ), ನಮ್ಮ ಗುಣದ ಸಹಜ ಪ್ರವೃತ್ತಿ(ಸ್ವಭಾವ)" ಎಂದು ಹೇಳಿದ್ದಾನೆ.[೧೩] ಈ ದೃಷ್ಟಿಯಿಂದ ನೋಡಿದರೆ, ಕಲೆ, ಸೃಜನಶೀಲತೆಯ ರೀತಿಯಲ್ಲಿಯೆ ಮನುಷ್ಯರು ಸಹಜವಾಗಿ ಮಾಡುವಂತಹದು (ಅಂದರೆ, ಬೇರೆ ಇನ್ನಾವ ಪ್ರಾಣಿಯು ಕಲೆಯನ್ನು ಸೃಷ್ಟಿಸುವುದಿಲ್ಲ), ಹೀಗಾಗಿ ಇದು ಉಪಯುಕ್ತತೆ ಮೀರಿದ್ದು. # ಸಾಮರಸ್ಯ, ಸಮತೆ/ಸ್ಥಿತಪ್ರಜ್ಞತೆ, ಲಯ/ಓಟಕ್ಕಾಗಿ ಮನುಷ್ಯರ ಸಹಜ ಒಲವು ಈ ಹಂತದಲ್ಲಿ ಕಲೆ ಕೇವಲ ಒಂದು ಕಲಾಕೃತಿ ಅಥವಾ ಒಂದು ಚಟುವಟಿಕೆಯಲ್ಲ, ಬದಲಾಗಿ ಸಮತೆ ಮತ್ತು ಸಮಾರಸ್ಯವನ್ನು (ಸೌಂದರ್ಯ) ಅಸ್ವಾದಿಸುವ ಒಂದು ಅಂತರಿಕ ರಸಾನುಭವ. ಹೀಗಾಗಿ ಇದು ಯಾವುದೇ ಉಪಯುಕ್ತತೆಯನ್ನು ಮೀರಿದ, ಮನುಷ್ಯತ್ವದ ಸಹಜ ಗುಣ.

"Imitation, then, is one instinct of our nature. Next, there is the instinct for 'harmony' and rhythm, meters being manifestly sections of rhythm. Persons, therefore, starting with this natural gift developed by degrees their special aptitudes, till their rude improvisations gave birth to Poetry." -Aristotle[೧೪]

(ಅರಿಸ್ಟಾಟಲ್ ಪ್ರಕೃತಿಯನ್ನು ಅನುಕರಿಸುವುದು ಮನುಷ್ಯನ ಸಹಜ ಗುಣ, ಲಯ, ತಾಳಕ್ಕೆ ಮನಷ್ಯ ಸಹಜವಾಗಿ ಸ್ಪಂದಿಸುತ್ತಾನೆ; ಕೆಲ ಮನುಷ್ಯರು ತಮಗಿದ್ದ ಗುಣವನ್ನು ತಮ್ಮ ಅಭಿರುಚಿಯೊಂದಿಗೆ ಬೆರಸಿ, ಬೆಳೆಸಿದಾಗ ಕಾವ್ಯದ ಸೃಷ್ಟಿಯಾಯಿತು ಎಂದು ಆಭಿಪ್ರಾಯ ವ್ಯಕ್ತಪಡಿಸುತ್ತಾನೆ)

  1. ರಹಸ್ಯಪೂರ್ಣ(ಮನುಷ್ಯರ ತರ್ಕಕ್ಕೆ ಮೀರಿದ) ಅನುಭವ ಪಡೆಯುವುದು. ಕಲೆಯು ಒಬ್ಬ ಮನುಷ್ಯನಿಗೆ ಜಗಿತ್ತಿನಲ್ಲಿ ಅವನ ಸ್ಥಾನವೇನು ಎನ್ನುವ ಅರಿವನ್ನು ಉಂಟುಮಾಡಬಹುದು. ಒಬ್ಬ ಸಾಧಾರಣ ಮನುಷ್ಯ ಕಲೆ, ಸಂಗೀತ, ಅಥವಾ ಪದ್ಯವನ್ನು ಅಸ್ವಾದಿಸುವ ರೀತಿಯಲ್ಲಿ, ಈ ಆನುಭವವು ಸಾಮಾನ್ಯವಾಗಿ ಉದ್ದೇಶಪೂರ್ವಕವಾಗಿರುವುದಿಲ್ಲ(ಅನ್-ಮೋಟಿವೇಟ್ ಆಗಿರುತ್ತದೆ).

    "The most beautiful thing we can experience is the mysterious. It is the source of all true art and science." -Albert Einstein [೧೫]

(ಆಲ್ಬರ್ಟ್ ಐನ್‌ಸ್ಟೀನ್‌ ರ ಪ್ರಕಾರ ಎಲ್ಲಾ ಕಲೆ ಮತ್ತು ವಿಜ್ಞಾನಕ್ಕೂ ಮೂಲ ಮನುಷ್ಯರ ತರ್ಕ, ಅದಕ್ಕೂ ಮೀರಿದ ಸಂಗತಿ ರಹಸ್ಯಪೂರ್ಣವಾಗಿದ್ದು, ಇದನ್ನು ಆನುಭವಿಸುವುದು ಬಹಳ ಖುಷಿ ಕೊಡುತ್ತದೆ ಎಂದು ಅಭಿಪ್ರಾಯ ಪಡುತ್ತಾರೆ)

  1. ಕಲ್ಪನೆಗಳ ಅಭಿವ್ಯಕ್ತಿ. ಕಲೆ, ಮನುಷ್ಯರ ಕಲ್ಪನೆಯನ್ನು ಯಾವುದೇ ಭಾಷೆಯ ಮಾತನಾಡುವ ಅಥವಾ ಬರೆಯುವ ಶಿಷ್ಟಾಚಾರದ ವ್ಯಾಕರಣದ ಕಟ್ಟು ಪಾಡುಗಳಿಲ್ಲದ ರೂಪದಲ್ಲಿ ಅಭಿವ್ಯಕ್ತಿಸಲು ಸಹಾಯಮಾಡುತ್ತದೆ. ಆದರೆ, ಒಂದು ನಿರ್ದಿಷ್ಟ ಅರ್ಥ ಕೊಡುವ ಭಾಷೆ/ಪದಗಳ ಹಾಗಿರದೆ, ಕಲೆಯು ರೂಪ,ಸಂಕೇತ(ಸಿಂಬಲ್) ಮತ್ತು ಚಿಂತನೆಗಳ ಮೂಲಕ ಸಂದರ್ಭಕ್ಕೆ ತಕ್ಕ ಹಾಗೆ ವಿಸ್ತಾರವಾಗುವ ಅರ್ಥ ವ್ಯಾಪ್ತಿಯನ್ನು ಒದಗಿಸುತ್ತದೆ.

    "Jupiter's eagle [as an example of art] is not, like logical (aesthetic) attributes of an object, the concept of the sublimity and majesty of creation, but rather something else - something that gives the imagination an incentive to spread its flight over a whole host of kindred representations that provoke more thought than admits of expression in a concept determined by words.They furnish an aesthetic idea, which serves the above rational idea as a substitute for logical presentation, but with the proper function, however, of animating the mind by opening out for it a prospect into a field of kindred representations stretching beyond its ken." -Immanuel Kant[೧೬]

(ಇಮಾನ್ಯುಯಲ್ ಕಾಂಟ್ ಕಲೆಯ ಉದಾಹರಣೆಯಾಗಿ ಜೂಪಿಟರ್ ಈಗಲ್‌ ಎನ್ನುವುದು ಕೇವಲ ತಾರ್ಕಿಕ (ಬಾಹ್ಯ ಸೌಂದರ್ಯ) ದ ಗುಣಲಕ್ಷಣ, ಅಥವಾ ಸೃಷ್ಟಿಯ ವೈವಿಧ್ಯಮಯವಷ್ಟೆ ಅಲ್ಲ, ಬದಲಾಗಿ ಇದು ಅದಕ್ಕೂ ಮೀರಿದ್ದು; ಇದು ನಮ್ಮ ಕಲ್ಪಾನಶಕ್ತಿಯನ್ನು ಜಾಗೃತಗೊಳಿಸುತ್ತದೆ ಎಂದು ಅಭಿಪ್ರಾಯ ಪಡುತ್ತಾನೆ)

  1. ಸರ್ವಾತ್ರಿಕ ಸಂವಹನ. ಕಲೆ, ಒಬ್ಬ ವ್ಯಕ್ತಿ ತನಗೆ ಅನ್ನಿಸಿದ ಭಾವನೆಯನ್ನು ಇಡೀ ಪ್ರಪಂಚಕ್ಕೆ ಹಂಚಿಕೊಳ್ಳುವ ಅವಕಾಶವನ್ನು ಒದಗಿಸುತ್ತದೆ.[according to whom?]

ಅರ್ಥ್‌ ಆರ್ಟಿಸ್ಟ್‌ ಅನೇಕ ಬಾರಿ ಅಭುಕ್ತ ಮೂಲೆಯಲ್ಲಿರುವ ಸ್ಥಳಗಳಲ್ಲಿ ಕಲೆಯನ್ನು ಸೃಷ್ಟಿಸುತ್ತಾರೆ. ಇದನ್ನು ಬೇರಾವ ವ್ಯಕ್ತಿಯೂ ಅನುಭವಿಸುವುದಿಲ್ಲ. ಒಂದು ಬೆಟ್ಟದ ತುದಿಯ ಮೇಲೆ ಕೇರ್‌ನ್ (ಕಲ್ಲಿನ ಗುಪ್ಪೆ) ಅಥವಾ ಕಲ್ಲಿನ ರಾಶಿಯನ್ನು ಬೆಟ್ಟದ ತುದಿಯ ಮೇಲೆ ಹಾಕುವ ಅಭ್ಯಾಸ, ಇದಕ್ಕೊಂದು ಉದಾಹರಣೆ. (ಗಮನಿಸಿ: ಇದು ದೇವರ ಅಥವಾ ಧರ್ಮದ ಯಾವುದೊ ಒಂದು ಗೊತ್ತಾದ(ನಿರ್ದಿಷ್ಟ) ಕಲ್ಪನೆಯನ್ನು ಸೂಚಿಸಬೇಕು ಎಂದೆನೂ ಇಲ್ಲ.) ಈ ರೀತಿಯಲ್ಲಿ ಸೃಷ್ಟಿಸಲಾದ ಕಲೆಯು ಒಬ್ಬ ವ್ಯಕ್ತಿ ಮತ್ತು ಇಡೀ ಪ್ರಪಂಚದ ನಡುವೆ ಸಂವಹನ ಮಾಡಲು ಸಹಾಯಮಾಡುತ್ತದೆ. [ಸೂಕ್ತ ಉಲ್ಲೇಖನ ಬೇಕು]

  1. ಧಾರ್ಮಿಕ ಮತ್ತು ಸಾಂಕೇತಿಕ ಉದ್ದೇಶಗಳು. ಬಹಳ ಸಂಸ್ಕೃತಿಗಳಲ್ಲಿ, ಕಲೆಯನ್ನು ಧಾರ್ಮಿಕ ಆಚರಣೆ, ಕಾರ್ಯಕ್ರಮ ಮತ್ತು ನೃತ್ಯಗಳಲ್ಲಿ ಅಲಂಕಾರಿಕ ವಸ್ತುವಾಗಿ ಅಥವಾ ಸಾಂಕೇತಿಕವಾಗಿ ಬಳಸಲಾಗುತ್ತದೆ. ಇವುಗಳಿಗೆ ಸಾಮಾನ್ಯವಾಗಿ ಯಾವುದೇ ನಿರ್ದಿಷ್ಟ ಉಪಯುಕ್ತವಾದ (ಮೋಟಿವೇಟೆಡ್) ಉದ್ದೇಶಗಳಿರುವುದಿಲ್ಲ. ಆದರೆ, ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಅಭ್ಯಸಿಸುವ ತಜ್ಞರ ಪ್ರಕಾರ ಇವು ಒಂದು ನಿರ್ದಿಷ್ಟ ಸಂಸ್ಕೃತಿಯೊಳಗೆ ಒಂದು ವಿಶಿಷ್ಟ ಅರ್ಥವನ್ನು ಕೊಡುತ್ತದೆ ಎಂದು ಹೇಳುತ್ತಾರೆ. ಈ ಆರ್ಥವನ್ನು ಯಾವುದೊ ಒಬ್ಬ ವ್ಯಕ್ತಿ ಕೊಡುವುದಲ್ಲ, ಬದಲಾಗಿ ಸಾಮಾನ್ಯವಾಗಿ ಇದು ಆನೇಕ ತಲೆಮಾರುಗಳಿಂದ ಹರಿದು ಬಂದಿರುವ ಜ್ಞಾನದ ಸ್ವರೂಪ. ಇದಲ್ಲದೆ ಇದು ವಿಶ್ವಕ್ಕೆ ಸಂಬಂಧಿಸಿದ ಹಾಗೆ ಸಂಸ್ಕೃತಿಯ ಸಂಬಂಧವನ್ನು ತಿಳಿಸುತ್ತದೆ.

    "Most scholars who deal with rock paintings or objects recovered from prehistoric contexts that cannot be explained in utilitarian terms and are thus categorized as decorative, ritual or symbolic, are aware of the trap posed by the term 'art'." -Silva Tomaskova[೧೭]

(ಸಿಲ್ವಿಯ ಟೊಮಸ್ಕೋವ ಪ್ರಕಾರ ಕಲ್ಲಿನ ಮೇಲೆ ಕೆತ್ತಲಾದ ಕಲಾಕೃತಿಗಳ ಅಥವಾ ಇತಿಹಾಸ ಪೂರ್ವದಷ್ಟು ಹಳೆಯದಾದ ಪ್ರಾಚೀನ ವಸ್ತುಗಳನ್ನು ಸಂಗ್ರಹಿಸಿ ಅಧ್ಯಯನ ಮಾಡುವ ವಿದ್ವಾಂಸರು ಈ ಕಲಾಸೃಷ್ಟಿಗಳನ್ನು ಯಾವ ರೀತಿ ಪ್ರಯೋಜನಕ್ಕೆ ಬರುತ್ತಿತ್ತು ಎಂದು ವಿವರಣೆ ನೀಡಲು ಸಾಧ್ಯವಾಗಲಿಲ್ಲ, ಹೀಗಾಗಿ ಇವುಗಳನ್ನು ಅಲಂಕಾರಿಕ, ಸಾಂಕೇತಿಕ, ಧಾರ್ಮಿಕ ಎಂದು ವಿಗಂಡಿಸಿದರು; ಇವರಿಗೆ "ಕಲೆ" ಎಂಬ ಪದದ ಅರ್ಥವ್ಯಾಪ್ತಿಯ ಅರಿವಿದೆ. ಎಂದು ಅಭಿಪ್ರಾಯ ಪಡುತ್ತಾರೆ.)

ಕಲೆಯ ಉದ್ದೇಶಪೂರ್ವಕ ಉದ್ದೇಶಗಳು (ಮೋಟಿವೇಟೆಡ್ ಫಂಕ್ಷನ್ಸ್‌ ಆಫ್‌ ಆರ್ಟ್)

ಬದಲಾಯಿಸಿ

ಕಲಾವಿದ ಬೇಕೆಂದೇ, ಉದ್ದೇಶಪೂರ್ವಕವಾಗಿ ಮಾಡುವ ಕಲಾಸೃಷ್ಟಿಯನ್ನು ಕಲೆಯ ಉದ್ದೇಶಪೂರ್ವಕ ಉದ್ದೇಶಗಳೆಂದು ಪರಿಗಣಿಸಲಾಗುತ್ತದೆ. ಇದು ರಾಜಕೀಯ ಬದಲಾವಣೆ ತರುವುದಾಗಿರಬಹುದು, ಸಮಾಜಿಕ ಸ್ಥಿತಿಯ ಬಗ್ಗೆ ವಿಮರ್ಶೆಯಾಗಿರಬಹುದು, ಒಂದು ನಿರ್ದಿಷ್ಟ ಭಾವನೆಯನ್ನು ಜಗತ್ತಿನ ಜೊತೆ ಹಂಚಿಕೊಳ್ಳುವುದಾಗಿರಬಹುದು, ಬೇರೊಂದು ಜ್ಞಾನದ ಕಲಿಕೆಗೆ ಇರಬಹುದು, ಒಂದು ವಸ್ತುವನ್ನು ಮಾರಾಟಮಾಡುವುದಿರಬಹುದು, ಅಥವಾ ಕೇವಲ ಒಂದು ಸಂವಹನದ ಮಾಧ್ಯಮವಾಗಿ ಕೂಡ ಆಗಿರಬಹುದು.

  1. ಸಂವಹನ. ಕಲೆ, ತೀರಾ ಪ್ರಾಥಮಿಕ ಹಂತದಲ್ಲಿ ಒಂದು ಸಂವಹನದ ಮಾಧ್ಯಮವಾಗಿರುತ್ತದೆ. ಸಂವಹನದ ಇತರ ರೂಪಗಳಿಗೆ ಇರುವ ಹಾಗೆ ಕಲೆಗೂ ಕೂಡ ಇನ್ನೊಬರಿಗೆ ತಿಳಿಸುವ ಇರಾದೆ ಅಥವಾ ಗುರಿ ಹೊಂದಿರುತ್ತದೆ,ಇದು ಉದ್ದೇಶಪೂರ್ವಕ ಪ್ರಯೋಜನ. ವಿಜ್ಞಾನವನ್ನು ಸಚಿತ್ರಗಳ ಮೂಲಕ ವಿವರಿಸುವಂತಹ, ವೃಷ್ಟಾಂತ ಕಲೆ(ಇಲಸ್ಟ್ರಟಿವ್ ಆರ್ಟ್), ಕಲೆಯನ್ನು ಸಂವಹನ ಮಾಧ್ಯಮವಾಗಿಸುವ ಒಂದು ರೂಪ. ಇದೇ ರೀತಿಯಲ್ಲಿ ಭೂಪಟಗಳು ಇನ್ನೊಂದು ಉದಾಹರಣೆ. ಅದರೆ, ಅದರಲ್ಲಿರುವ ವಿಷಯ ವಿಜ್ಞಾನಕ್ಕೆ ಸಂಭಂದಪಟ್ಟಿರಬೇಕೆಂದೇನೂ ಇಲ್ಲ. ಭಾವನೆ, ಚಿಂತನೆ ಮತ್ತು ಕಲ್ಪನೆಗಳನ್ನು ಕೂಡ ಕಲೆಯ ಮೂಲಕ ಸಂವಹನ ಮಾಡಬಹುದು.

    "[Art is a set of] artefacts or images with symbolic meanings as a means of communication." -Steve Mithen[೧೮]

(ಸ್ಟೀವ್ ಮಿಥೆನ್ ಕಲೆಯೆನ್ನುವುದು ಕೃತಿ ಅಥವಾ ಚಿತ್ರಣಗಳ ಸಂವಹನ ಮಾಡುವುದು ಎಂದು ಅಭಿಪ್ರಾಯ ಪಡುತ್ತಾನೆ)

  1. ಮನರಂಜನೆಗಾಗಿ ಕಲೆ . ಕಲೆ, ಒಂದು ಭಾವ ಅಥವಾ ಮನೋಭಾವನೆಯನ್ನು(ಮೂಡ್) ಹೊಮ್ಮಿಸಿ ವೀಕ್ಷಕನಿಗೆ ಮನೋಲ್ಲಾಸ ಮತ್ತು ಆರಾಮವನ್ನು ಉಂಟುಮಾಡಬಹುದು. ವಿಡಿಯೋ ಗೇಮುಗಳು ಮತ್ತು ಚಲನಚಿತ್ರಗಳಂತಹ ಕಲಾ ಉದ್ಯಮಗಳ ಉದ್ಧೇಶವು ಮನರಂಜನೆಯೆಯಾಗಿರುತ್ತದೆ.
  2. ಕಲೆಯಲ್ಲಿ ಹೊಸತನ್ನು ತರುವ ಗುಂಪು(ಅವಾಙಗಾರ್ಡ್). ರಾಜಕೀಯ ಬದಲಾವಣೆಗಾಗಿ ಕಲೆ. ಇಪ್ಪತನೇ ಶತಮಾನದ ಪ್ರಾರಂಭದಲ್ಲಿ ಕಲೆಯ ಅತ್ಯಂತ ಸ್ಪಷ್ಟ ಉದ್ದೇಶವೆಂದರೆ, (ವಿಷ್ಯುಯಲ್ ಇಮೇಜ್) ಬಳಸಿ ರಾಜಕೀಯ ಬದಲಾವಣೆಯನ್ನು ತರುವುದು. ಈ ಗುರಿಯಿದ್ದ ಕಲಾಂದೋಲನಗಳೆಂದರೆ: ದಾದಯಿಸಂ, ಸರಿಅಲಿಸಮ್, ರಷಿಯನ್‌ ಕನ್‌ಸ್ಟ್ರಕ್ಟಿವಿಸಮ್ ಮತ್ತು ಅಬ್ಸ್‌ಟ್ರಾಕ್ಟ್‌ ಎಕ್ಸೆಪ್ರೆಷನಿಸಮ್ ಮತ್ತಿತರ ಕಲಾಪ್ರಕಾರಗಳನ್ನು ಒಟ್ಟಾಗಿ ಅವಾಙಗಾರ್ಡ್‌ ಕಲೆ ಎಂದು ಕರೆಯಲಾಗುತ್ತದೆ.

    "By contrast, the realistic attitude, inspired by positivism, from Saint Thomas Aquinas to Anatole France, clearly seems to me to be hostile to any intellectual or moral advancement. I loathe it, for it is made up of mediocrity, hate, and dull conceit. It is this attitude which today gives birth to these ridiculous books, these insulting plays. It constantly feeds on and derives strength from the newspapers and stultifies both science and art by assiduously flattering the lowest of tastes; clarity bordering on stupidity, a dog's life." -André Breton (Surrealism)[೧೯]

(ಆಂಡ್ರೆ ಬ್ರೆಟನ್ ಎನ್ನುವ ಸರಿಅಲಿಸಮ್ ಪ್ರತಿಪಾದಕ, ವಾಸ್ತವತಾವಾದ ದೃಷ್ಟಿಕೋನ ಸೇಂಟ್ ತಾಮಸ್‌ ಅಕುನಾಸ್, ನಿಂದ ಹಿಡಿದು ಅನಾಟೋಲ್ ಫ್ರಾನ್ಸ್ ಮಂಡಿಸಿರುವ ಪಾಸಿಟಿವಿಸಮ್‌ ತತ್ವದಿಂದ ಪ್ರೇರೇಪಣೆ ಗೊಂಡು ರಚನೆಯಾದ ಕಲೆಯು ಯಾವುದೇ ಬೌದಿಕ ಅಥವಾ ನೈತಿಕ ಬೆಳವಣಿಗೆಗೆ ಅವಕಾಶ ನೀಡುವುದಿಲ್ಲ. ಹೀಗಾಗಿ ಅದನ್ನು ತಾನು ದ್ವೇಷಿಸುವುದಾಗಿ ಹೇಳುತ್ತಾನೆ. ಇದು ಹೆಗೆತನ, ಮತ್ತು ಒಣಪ್ರತಿಷ್ಠೆಯನ್ನು ಹೆಚ್ಚು ಮಾಡುತ್ತದೆ. ಇದು ಅತ್ಯಂತ ಕೀಳು ಆಭಿರುಚಿಗೆ ಪ್ರಾಮುಖ್ಯತೆ ಕೊಟ್ಟು ವಿಜ್ಞಾನ ಮತ್ತು ಕಲೆ ಎರಡನ್ನೂ ನಿರರ್ಥಕಗೊಳಿಸುತ್ತದೆ; ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾನೆ)

  1. ಮಾನಸಿಕ ಮತ್ತು ಗುಣಪಡಿಸುವ ಉದ್ದೇಶಗಳಿಗಾಗಿ ಕಲೆ. ಆರ್ಟ್ ತೆರಪಿಸ್ಟ್, ಸೈಕೋತೆರಪಿಸ್ಟ್ ಮತ್ತು ಕ್ಲಿನಿಕಲ್ ಸೈಕೋಲಜಿಸ್ಟ್‌ ಗಳು ಕಲೆಯನ್ನು ಕಲಾ ಚಿಕಿತ್ಸೆಯ (ಚಿಕಿತ್ಸೆಯ ಒಂದು ವಿಧ) ರೂಪದಲ್ಲಿ ಬಳಸುತ್ತಾರೆ. ಉದಾಹರಣೆಗೆ, ಡೈಯಾಗ್ನಾಸ್ಟಿಕ್‌ ಡ್ರಾಯಿಂಗ್‌ ಸಿರೀಸ್ ಅನ್ನು ಬಳಸಿ ಒಬ್ಬ ಪೇಷಂಟ್‌ನ ವ್ಯಕ್ತಿತ್ವದ ಮತ್ತು ಭಾವನಾತ್ಮಕ ಗುಣಗಳನ್ನು ಪರೀಕ್ಷಿಸಬಹುದು. ಇಂತಹ ಸನ್ನಿವೇಶದಲ್ಲಿ ಯಾವುದೇ ನಿರ್ದಿಷ್ಟ ಗುರಿಯನ್ನು ಸಾಧಿಸುವ ಉದ್ದೇಶವಿರುವುದಿಲ್ಲ, ಬದಲಾಗಿ ಸೃಜನಾತ್ಮಕ ಚಟುವಟಿಕೆಗಳ ಮೂಲಕ ಚಿಕಿತ್ಸೆ ಕ್ರಮವನ್ನು ಉತ್ತಮಪಡಿಸವ ಉದ್ದೇಶವಿರುತ್ತದೆ. ಸೃಷ್ಟಿಸಲಾದ ಕಲಾಕೃತಿಯು ಪೇಷಂಟ್ (ಸಬ್ಜೆಕ್ಟ್) ಅನುಭವಿಸಿದ ಹಿಂಸೆಗಳನ್ನು ಕೂಡ ಪ್ರತಿಬಿಂಬಿಸಬಹುದು. ಇದಲ್ಲದೆ, ಇದು ಮನೋವೈದ್ಯಕೀಯ ಚಿಕಿತ್ಸಾ (ಸೈಕಿಯಾಟ್ರಿಕ್ ತೆರಪಿ)ಪದ್ಧತಿಯಲ್ಲಿ ಅನುಸರಿಸಲಾಗುವ ಸಂಪ್ರದಾಯಿಕ ಕ್ರಮಗಳನ್ನು ಉತ್ತಮಪಡಿಸಲು ಸಹಾಯ ಮಾಡುತ್ತದೆ.
  2. ಕಲೆಯಿಂದ ಸಮಾಜಿಕ ಪ್ರಜ್ಞೆ, ನಾಶ ಮತ್ತು/ಅಥವಾ ಅವ್ಯವಸ್ಥೆ ಉಂಟುಮಾಡುವುದು. ರಾಜಕೀಯ ಬದಲಾವಣೆಗಾಗಿ ಬಳಸಲಾಗುವ ಕಲೆ ಮಾದರಿಯಲ್ಲಿಯೆ, ವಿನಾಶ ಮಾಡುವ(ಬುಡಮೇಲು ಮಾಡುವ) ಅಥವಾ ವಿನಾಶಕಾರಿ ಕಲೆ ಯಾವುದೇ ನಿರ್ದಿಷ್ಟ ಗುರಿಯಿಲ್ಲದೆ ಸಮಾಜದ ಅನೇಕ ವಿಷಯಗಳ ಕುರಿತು ಪ್ರಶ್ನೆ ಮಾಡಬಹುದು. ಈ ಸಂದರ್ಭದಲ್ಲಿ, ಕಲೆಯ ಉದ್ದೇಶ ಕೇವಲ ಸಮಾಜದ ಸ್ಥಿತಿಗತಿಯನ್ನು ಟೀಕಿಸುವುದಕ್ಕೆ ಮಾತ್ರವೇ ಸೀಮಿತವಾಗಿರಬಹದು. ಗ್ರಾಫೀಟೊ ಕಲೆ ಮತ್ತಿತರ ಸ್ಟ್ರೀಟ್ ಕಲೆಗಳು, ಸಾರ್ವಜನಿಕ ಸ್ಥಳಗಳಲ್ಲಿರುವ ಗೋಡೆ, ಕಟ್ಟಡ, ಬಸ್‌,ಟ್ರೈನ್ ಮತ್ತು ಬ್ರಿಡ್ಜ್, ಗಳ ಮೇಲೆ ಸಾಮಾನ್ಯವಾಗಿ ಅನುಮತಿಯಿಲ್ಲದೆ, ಸ್ಪ್ರೇ ಪೇಂಟ್ ಅಥವಾ ಸ್ಟೆನ್ಸಿಲ್ ಬಳಸಿ ರಚಿಸಲಾದ ಚಿತ್ರಗಳು. ಗ್ರಾಫೀಟೊ ಅಂತಹ ಕೆಲವೊಂದು ಕಲಾಪ್ರಕಾರಗಳು ಕಾನೂನನ್ನು ಮುರಿದಾಗ ಅದು ಕಾನೂನುಬಾಹಿರವಾಗುತ್ತದೆ(ಈ ಸಂದರ್ಭದಲ್ಲಿ ವಿನಾಶ ಮಾಡುವ).
  3. ಪ್ರಚಾರ ಅಥವಾ ವ್ಯಾಪಾರಕ್ಕಾಗಿ ಕಲೆ. ಕಲೆಯನ್ನು ಅನೇಕ ಬಾರಿ ಪ್ರಚಾರದ ಮಾಧ್ಯಮವಾಗಿ ಬಳಸಲಾಗುತ್ತದೆ. ಹೀಗಾಗಿ, ಕಲೆಯನ್ನು ಜನಪ್ರಿಯ ಆಲೋಚನೆ ಅಥವಾ ಮನೋಭಾವನೆಗಳ ಮೇಲೆ ಸೂಕ್ಷ್ಮವಾಗಿ ಪ್ರಭಾವಬೀರಬಹುದು. ಇದೇ ರೀತಿಯಲ್ಲಿ, ಒಂದು ವಸ್ತುವನ್ನು ಮಾರಾಟಮಾಡಲು ಕಲೆಯನ್ನು ಬಳಸುವುದು ಕೂಡ ಮನೋಭಾವನೆ ಮತ್ತು ಭಾವದ ಮೇಲೆ ಪ್ರಭಾವ ಬೀರಬಹುದು. ಈ ಎರಡೂ ಸಂದರ್ಭದಲ್ಲಿಯೂ, ಕಲೆಯ ಉದ್ದೇಶ ಒಂದು ನಿರ್ದಿಷ್ಟ ಕಲ್ಪನೆ ಅಥವಾ ವಸ್ತುವಿನ ಕಡೆಗೆ ಒಬ್ಬನ ಭಾವನೆಯನ್ನು ಸೂಕ್ಷವಾಗಿ ಕೆರಳಿಸುವುದಾಗಿರುತ್ತದೆ.[೨೦]

ಮೇಲೆ ವಿವರಿಸಲಾಗಿರುವ ಕಲೆಯ ಉದ್ದೇಶಗಳು ಎಕ್ಸ್‌ಕ್ಲೂಸಿವ್ ಎಂದೇನು ಇಲ್ಲ, ಹಲವಾರು ಉದ್ದೇಶಗಳು ಒಂದರಮೇಲೊಂದು ವ್ಯಾಪಿಸಿಕೊಂಡಿರುತ್ತದೆ (ಒವರ್‌ಲ್ಯಾಪ್ ಆಗಿರುತ್ತದೆ). ಉದಾಹರಣೆಗೆ, ಒಂದು ಚಲನಚಿತ್ರ ಅಥವಾ ವಿಡಿಯೋ ಗೇಮಿನ ಹಾಗೆ ಮನರಂಜನೆಯ ಉದ್ದೇಶವಿರುವ ಕಲೆ ಕೂಡ ಒಂದು ಉತ್ಪನ್ನವನ್ನು ಮಾರಾಟಮಾಡಲು ಪ್ರಯತ್ನಿಸಬಹುದು.

ವಿವಾದಗಳನ್ನು ಸೃಷ್ಟಿಸಿದ ಕಲೆ

ಬದಲಾಯಿಸಿ
 
ಥಿಯೊಡೊರ್ ಗೆರಿಕಾಲ್ಟ್‌ರ, ರಾಫ್ಟ್ ಆಫ್ ದಿ ಮೆಡ್ಯುಸಾ, c.1820

ಥಿಯೊಡೊರ್ ಗೆರಿಕಾಲ್ಟ್ರಾಫ್ಟ್ ಆಫ್ ದಿ ಮೆಡ್ಯುಸಾ (c. 1820), ಎನ್ನುವ ಕಲಾಕೃತಿ ಆಗ ನಡೆಯುತ್ತಿದ್ದ ಸಮಾಜಿಕ ಘಟಾನಾವಳಿಯ ಬಗ್ಗೆ ವಿವರಣೆ ನೀಡುತ್ತದೆ. ಇದು ಆ ಕಾಲಘಟ್ಟಕ್ಕೆ ಹೊಸದಾಗಿತ್ತು. ಎಡೊರ್ಡ್ ಮಾನೆಟ್‌ಲೆ ಡೆಜೂನೆರ್ ಸುರ್ ಎಲ್ ಹೆರ್ಬೆ(Le Déjeuner sur l'Herbe) (1863), ಎನ್ನುವ ವರ್ಣಚಿತ್ರದಲ್ಲಿ ಒಬ್ಬ ಮಹಿಳೆಯು ನಗ್ನಳಾಗಿದ್ದು, ಆಕೆಯ ಪಕ್ಕದಲ್ಲಿ ಹಳೆಯ ಕಾಲದ ಉಡುಗೆಗಳ ಬದಲು ಸಮಕಾಲೀನ (ಅಗಿನ) ಉಡುಗೆಗಳನ್ನು ತೊಟ್ಟ ಗಂಡಸರು ಕುಳಿತಿರುವ ಕಾರಣದಿಂದಾಗಿ ಅದನ್ನು ಆಗಿನ ಕಾಲದಲ್ಲಿ ನಾಚಿಕೆಗೇಡೆಂದು(ವಿವದಾತ್ಮಕ) ಭಾವಿಸಲಾಗಿತ್ತು. ಜಾನ್ ಸಿಂಗರ್ ಸಾರ್ಜೆಂಟ್ಮಾಡ್ಯಮ್ ಪಿಯರಿ ಗಾಟ್ರಿಯು (ಮ್ಯಾಡಮ್ ಎಕ್ಸ್) (1884) ಎನ್ನುವ ವರ್ಣಚಿತ್ರವು ಸಾಕಷ್ಟು ಕೋಲಾಹಲವನ್ನು ಎಬ್ಬಿಸಿತು. ಆ ಚಿತ್ರದ ಹೆಣ್ಣಿನ ಕಿವಿಗೆ ರೆಡ್ಡಿಶ್ ಪಿಂಕ್‌ ಬಣ್ಣವನ್ನು ಬಳಸಲಾಗಿತ್ತು, ಇದನ್ನು ಆಶ್ಲೀಲವೆಂದು ಪರಿಗಣಿಸಿ, ಇದು ಮೇಲುವರ್ಗದ(ಹೈ-ಸೊಸೈಟಿ ಮಾಡಲ್‌ನ) ಘನತೆಯನ್ನು ಕಡಿಮೆಮಾಡುತ್ತದೆ ಎಂದು ಭಾವಿಸಲಾಯಿತು.

ಇಪ್ಪತನೇ ಶತಮಾನದಲ್ಲಿ, ಪಾಬ್ಲೊ ಪಿಕಾಸೋ ವಿನ ಗುಯೆರ್ನಿಕಾ (1937)ಎನ್ನುವ ವರ್ಣಚಿತ್ರದಲ್ಲಿ ಸೆರೆಹಿಡಿಯುವಂತಹ ಕ್ಯೂಬಿಸ್ಟ್ ತಂತ್ರ ಮತ್ತು ಕಣ್ಣಿಗೆ ರಾಚುವಂತಹ ಏಕವರ್ಣ(ಮಾನಕ್ರಮಾಟಿಕ್‌ ಆಯಿಲ್) ಬಳಸಿ ಪುರಾತನವಾದ ಚಿಕ್ಕ ಬಾಸ್ಕ ಪಟ್ಟಣವೊಂದರ ಮೇಲೆ ಸಮಕಾಲೀನದಲ್ಲಿ (ಆಗ)ನಡೆದ ಬಾಂಬ್‌ದಾಳಿಯ ಘೋರ ಪರಿಣಾಮವನ್ನು ತೋರಿಸುತ್ತದೆ. ಲಿಯಾನ್ ಗೊಲುಬ್‌ಇಂಟೆರಗೇಷನ್ III (1981) ಎನ್ನುವ ವರ್ಣಚಿತ್ರದಲ್ಲಿ,ಸೆರೆಯಲ್ಲಿರುವ ಮಹಿಳೆಯೊಬ್ಬಳನ್ನು ಕುರ್ಚಿಗೆ ಕಟ್ಟಲಾಗಿದೆ, ನಗ್ನವಾಗಿರುವ ಈ ಮಹಿಳೆಯ ಲೈಂಗಿಕ ಭಾಗಗಳು ಕಾಣಿಸುವ ರೀತಿಯಲ್ಲಿ ಆಕೆಯ ಕಾಲುಗಳು ಚಾಚಿಕೊಂಡಿದ್ದು ಈಕೆಯನ್ನು,ಸಮಾನ್ಯರ ಬಟ್ಟೆ ಧರಿಸಿರುವ, ಇಬ್ಬರು ಕಾಮಪೀಡಕರು ಸುತ್ತುವರಿದಿದ್ದಾರೆ. ಆಂಡ್ರೆಸ್ ಸೆರಾನೋಪಿಸ್ ಕ್ರಿಸ್ಟ್ (1989) ಎನ್ನುವ ಛಾಯಚಿತ್ರದಲ್ಲಿ (ಪೋಟೋಗ್ರಾಫ್), ಕ್ರೈಸ್ತರಿಗೆ ಪವಿತ್ರವಾದ; ಕ್ರಿಸ್ತನ ಬಲಿದಾನ ಹಾಗೂ ಸಂಕಷ್ಟಗಳನ್ನು ಬಿಂಬಿಸುವ, ಶಿಲುಬೆಗೇರಿಸಿರುವ ಕ್ರಿಸ್ತನ ವಿಗ್ರಹವನ್ನು(ಕ್ರೂಸಿಫಿಕ್ಸ್), ಕಲಾವಿದನ ಮೂತ್ರವಿರುವ ಗ್ಲಾಸ್(ಲೋಟದಲ್ಲಿ) ಒಂದರಲ್ಲಿ ಮುಳುಗಿರುವ ಹಾಗೆ ತೋರಿಸಲಾಗಿದೆ. ಇದರಿಂದ ಉದ್ಭವಿಸಿದ ಗಲಾಟೆಯು(ಕೋಲಹಾಲ) ಯುನೈಟೆಡ್ ಸ್ಟೇಟ್ಸ್‌ ಸೆನೇಟ್‌ನಲ್ಲಿ (ಅಮೇರಿಕಾದ ಶಾಸನ ಸಭೆ) ಕಲೆಯ ಪ್ರೋತ್ಸಾಹಕ್ಕೆ ಸಾರ್ವಜನಿಕ ಹಣವನ್ನು ಕೊಡುವುದು ಎಷ್ಟರ ಮಟ್ಟಿಗೆ ಸರಿ ಎನ್ನುವ ಚರ್ಚೆಗೆ ಗ್ರಾಸವಾಯಿತು.

ಕಲಾ ಸಿದ್ಧಾಂತಗಳು

ಬದಲಾಯಿಸಿ

ಹತ್ತೊಂಬತ್ತನೆಯ ಶತಮಾನದಲ್ಲಿ ಕಲಾವಿದರು ಸತ್ಯ ಮತ್ತು ಸೌಂದರ್ಯ ಪ್ರಜ್ಞೆಯ ಆಲೋಚನೆಗಳ ಕಡೆಗೆ ಹೆಚ್ಚು ಆಸಕ್ತಿ ತೋರಿದರು. ಜಾನ್‌ ರಸ್ಕಿನ್‌ ಎನ್ನುವ ಸೌಂದರ್ಯ ಮೀಮಾಂಸ ತಜ್ಞ, ಕಲೆ ಯತಾರ್ಥ/ವಾಸ್ತವಿಕ ಚಿತ್ರಣ ಮಾಡಬೇಕು ಎನ್ನುವ ತತ್ವವನ್ನು ಮಂಡಿಸಿದ. ಜೆ.ಎಂ.ಡಬ್ಲೂ. ಟರ್ನರ್, ಕಲೆಯ ಪಾತ್ರವು ಒಂದು ಕಲಾಕೃತಿಯು ಕೇವಲ ಸೃಷ್ಟಿಯಲ್ಲಿ ಕಾಣಿಸಬಹುದಾದಂತಹ ಸತ್ಯವನ್ನು ಸಂವಹನ ಮಾಡುವುದು ಎಂದು ವಾಖ್ಯಾನಿಸಿದರು.[೨೧]

ಕಲೆಯನ್ನು ವ್ಯಾಖ್ಯಾನಿಸುವುದು ಮತ್ತು ಯೋಗ್ಯತೆ ನಿರ್ಧರಿಸುವುದು 20ನೇ ಶತಮಾನದಿಂದೀಚೆಗೆ ಬಹಳ ಸಮಸ್ಯೆಯಾಗಿದೆ. ರಿಚರ್ಡ್ ವೊಲೆಹಿಮ್ ಮೂರು ಹಾದಿಗಳನ್ನು (ಅಪ್ರೋಚ್‌) ಗುರುತಿಸುತ್ತಾನೆ: ಯಥಾರ್ಥ ವಾದ (ರಿಯಲಿಸ್ಟ್), ಇದರ ಪ್ರಕಾರ ಸೌಂದರ್ಯಸ್ವಾದನೆಯ ಗುಣ ಯಾವುದೇ ಮನ್ಯುಷ್ಯರ ದೃಷ್ಟಿಗೆ ಹೊರತಾಗಿ ಸ್ವತಂತ್ರವಾಗಿರುತ್ತದೆ (ಅಬ್ಸಲ್ಯೂಟ್ ಆಗಿರುತ್ತದೆ); ವಾಸ್ತವಿಕತಾ ವಾದ (ಆಬ್ಜೆಕ್ಟಿವಿಸ್ಟ್), ಇದರ ಪ್ರಕಾರ ಕೂಡ ಸೌಂದರ್ಯಸ್ವಾದನೆಯ ಗುಣ ಸ್ವತಂತ್ರವಾಗಿದ್ದರೂ (ಅಬ್ಸಲ್ಯೂಟ್ ಆಗಿದ್ದರೂ), ಮನುಷ್ಯರ ಅನುಭವಗಳ ಮೇಲೆ ಅವಲಂಭಿತವಾಗಿರುತ್ತದೆ; ಸಾಪೇಕ್ಷತಾ (ರೆಲಟಿವಿಸ್ಟ್) ದೃಷ್ಟಿಕೋನ, ಇದರ ಪ್ರಕಾರ ಸೌಂದರ್ಯಸ್ವಾದನೆ ಗುಣವು ಸ್ವತಂತ್ರವಲ್ಲ (ಅಬ್ಸಲ್ಯೂಟ್ ಅಲ್ಲ), ಆದರೆ ಇದು ಮನುಷ್ಯರ ಅನುಭವಗಳ ಮೇಲೆ ಅವಲಂಭಿತವಾಗಿದೆ ಹಾಗು ಬೇರೆ ಬೇರೆ ಮನುಷ್ಯರಲ್ಲಿ ಇದು ವ್ಯತಾಸವಾಗುತ್ತದೆ.[೨೨]

ಹತ್ತೊಂಬತ್ತನೆಯ ಶತಮಾನದ ಅಂತ್ಯದಲ್ಲಿ ನವ್ಯತಾ ವಾದವು (ಮಾಡರ್ನಿಸಮ್) ಕಲೆಯ ಉದ್ದೇಶದ ಕಲ್ಪನೆಗಳ ಬಗ್ಗೆ ತೀವ್ರತರವಾದ ವ್ಯತ್ಯಾಸವನ್ನು ತಂದಿತು.[೨೩] ನಂತರ ಇಪ್ಪತನೆಯ ಶತಮಾನದ ಕೊನೆಯಲ್ಲಿ ನವ್ಯೋತ್ತರ (ಪೋಸ್ಟ್‌ಮಾಡರ್ನಿಸಮ್), ವಾದದೊಂದಿಗೆ ಪುನಃ ಈ ಭಾವನೆಗಳು ಬದಲಾದವು. ಕ್ಲೆಮೆಂಟ್ ಗ್ರೀನ್‌ಬರ್ಗ್ 1960ರ "ಮಾಡರ್ನಿಸ್ಟ್ ಪೇಂಟಿಂಗ್" ಎನ್ನುವ ಲೇಖನದಲ್ಲಿ ಅಧುನಿಕ ಕಲೆಯನ್ನು "ದ ಯೂಸ್ ಆಫ್ ಕ್ಯಾರಕ್ಟರಿಸ್ಟಿಕ್ ಮೆಥಡ್ಸ್‌ ಆಫ್‌ ಎ ಡಿಸಿಪ್ಲಿನ್ ಟು ಕ್ರಿಟಿಸೈಸ್ ದಿ ಡಿಸಿಪ್ಲಿನ್ ಇಟ್‌ಸೆಲ್ಪ್‌" (ಒಂದು ಪದ್ಧತಿಯ ವಿಶಿಷ್ಟ ವಿಧಾನಗಳನ್ನು ಬಳಸಿ,ಆ ಪದ್ಧತಿಯನ್ನೇ ವಿಶ್ಲೇಣೆ ಮಾಡುವುದು)ಎಂದು ವ್ಯಾಖ್ಯಾನಿಸುತ್ತಾರೆ.[೨೪] ಗ್ರೀನ್‌ಬರ್ಗ್ ತನ್ನ ವಾದವನ್ನು ಅಬ್ಸ್‌ಟ್ರಾಕ್ಟ್‌ ಎಕ್ಸೆಪ್ರೆಷನಿಸ್ಟ್ ಮೂವ್‌ಮೆಂಟ್ ಎನ್ನುವ ಕಲಾಂದೋಲನಕ್ಕೆ ಅಳವಡಿಸಿದ. ಮೇಲಾಗಿ, ಇದನ್ನು ಫ್ಲ್ಯಾಟ್ (ನಾನ್‌-ಇಲ್ಯೂಷನಿಸ್ಟಿಕ್) ಅಬ್ಸ್‌ಟ್ರಾಕ್ಟ್ ಪೇಂಟಿಂಗ್ ಅನ್ನು ಅರ್ಥಮಾಡಿಕೊಳುವ ಮತ್ತು ಸಮರ್ಥಿಸುವ ಸಲುವಾಗಿ ಬಳಸಿದ.

Realistic, naturalistic art had dissembled the medium, using art to conceal art; modernism used art to call attention to art. The limitations that constitute the medium of painting – the flat surface, the shape of the support, the properties of the pigment — were treated by the Old Masters as negative factors that could be acknowledged only implicitly or indirectly. Under Modernism these same limitations came to be regarded as positive factors, and were acknowledged openly.[೨೪]

ಗ್ರೀನ್‌ಬರ್ಗ್‌ರ ನಂತರ, ಮೈಕಲ್ ಫ್ರೈಡ್, ಟಿ.ಜೆ. ಕ್ಲಾರ್ಕ್, ರೋಸಲಿಂಡ್ ಕ್ರಾಸ್, ಲಿಂಡಾ ನೊಚ್ಲಿನ್, ಮತ್ತು ಗ್ರಿಸೆಲ್ಡಾ ಪೊಲಾಕ್ ರನ್ನು ಒಳಗೊಂಡಂತೆ ಆನೇಕರು ತಮ್ಮ ವಾದವನ್ನು ಮಂಡಿಸಿದ್ದಾರೆ. ಗ್ರೀನ್‌ಬರ್ಗ್‌ರ ಅಧುನಿಕ ಕಲೆಯ ಬಗ್ಗೆಯ ವಾಖ್ಯಾನವು, ಒಂದು ವರ್ಗದ ಕಲಾವಿದರನ್ನು ಮಾತ್ರವೇ ಅರ್ಥೈಸುವ ಸಲುವಾಗಿ ಉದ್ದೇಶಿಸಲಾಗಿದ್ದರು, ಈ ವ್ಯಾಖನವು 20ನೇ ಶತಮಾನದ ಮತ್ತು 21ನೇ ಶತಮಾನದ ಆರಂಭದ ಅನೇಕ ಕಲಾಂದೋಲನಗಳನ್ನು ಅರ್ಥೈಸಲು ಬಹಳ ಸಹಾಯ ಮಾಡುತ್ತದೆ.

ಆಂಡಿ ವಾರ್ಹೊಲ್ ರಂತಹ ಪಾಪ್ ಕಲಾವಿದರು , ಕಲಾಪ್ರಪಂಚವನ್ನು(ಆರ್ಟ್ ವರ್ಲ್ಡ್) ಒಳಗೊಂಡಂತೆ ಜನಪ್ರಿಯ ಸಂಸ್ಕೃತಿಯನ್ನು ಟೀಕಿಸುವ ತಮ್ಮ ಕೆಲಸದ ಮೂಲಕ ಗಮನಸೆಳೆದು, ಪ್ರಭಾವಬೀರಿದರು. ನಂತರ 1980, 1990, ಮತ್ತು 2000 ದಶಕಗಳಲ್ಲಿ ಕಲಾವಿದರು ಸ್ವ-ವಿಮರ್ಶೆಯ ಈ ತಂತ್ರವನ್ನು ಹೈ-ಆರ್ಟ್‌ಗೂ ಮೀರಿ ಫಾಷನ್ ಇಮೇಜ್, ಕಾಮಿಕ್ಸ್, ಬಿಲ್‌ಬೋರ್ಡ್ಸ್ ಮತ್ತು ಪ್ರೋನೊಗ್ರಫಿ ಒಳಗೊಂಡಂತೆ ಸಾಂಸ್ಕೃತಿಕ ವಲಯದ ಎಲ್ಲಾ ಕ್ಷೇತ್ರಗಳಿಗೂ ವಿಸ್ತಿರಿಸಿದರು.

ವರ್ಗೀಕರಿಣ ವಿವಾದಗಳು

ಬದಲಾಯಿಸಿ

ಯಾವುದೇ ಕೃತಿಯೊಂದನ್ನು ಕಲೆಯನ್ನಬಹುದೇ ಇಲ್ಲವೇ ಎನ್ನುವುದರ ಬಗೆಗಿನ ವಾದಗಳನ್ನು ಕಲೆಯ ಬಗೆಗಿನ ವರ್ಗೀಕರಣಕ್ಕೆ ಸಂಬಂಧಿಸಿದ ವಿವಾದಗಳು ಎಂದು ಕರೆಯುತ್ತೇವೆ.

ವರ್ಗೀಕರಣಕ್ಕೆ ಸಂಬಂಧಿಸಿದ ವಿವಾದಗಳು 20ನೇ ಶತಮಾನದಲ್ಲಿ ಕ್ಯೂಬಿಸ್ಟ್ ಮತ್ತು ಇಂಪ್ರೆಷನಿಸ್ಟ್ ವರ್ಣಚಿತ್ರಗಳು, ಡುಚಾಂಪ್‌ರ ಫೌಂಟೇನ್‌ , ಚಲನಚಿತ್ರಗಳು, ಬ್ಯಾಂಕ್‌ನೋಟ್‌ಗಳ ಉತ್ತಮ ಪ್ರತಿಕೃತಿಗಳು,ಕನ್ಸೆಪ್‌ಟ್ಯುಅಲ್ ಆರ್ಟ್ ಮತ್ತು ವಿಡಿಯೋ ಗೇಮುಗಳನ್ನು ಒಳಗೊಂಡಿದೆ.[೨೫]

ಡೇವಿಡ್ ನೋವಿಟ್ಸ್ ಎನ್ನುವ ತತ್ವಜ್ಞಾನಿ ಕಲೆಯನ್ನು ವ್ಯಾಖ್ಯಾನಮಾಡುವುದರಲ್ಲಿ ಒಮ್ಮತ ಮೂಡದಿರುವುದು ಸಮಸ್ಯೆಯಲ್ಲ ಎಂದು ವಾದಿಸುತ್ತಾನೆ. ಆದರೆ, "ದ ಪ್ಯಾಷನಟ್ ಕನ್ಸರ್ನ್ಸ್ ಅಂಡ್ ಇಂಟೆರೆಸ್ಟ್ಸ್‌ ಥಟ್‌ ಹ್ಯೂಮನ್‌ ವೆಸ್ಟ್‌ ಇನ್‌ ತೆರ್ ಸೋಷಿಯಲ್‌ ಲೈಫ್" ಆರ್ "ಸೊ ಮಚ್‌ ಪಾರ್ಟ್‌ ಆಫ್‌ ಆಲ್‌ ಕ್ಲಾಸಿಪಿಕೇಟರಿ ಡಿಸ್ಪೂಟ್ಸ್‌ ಅಬೌಟ್ ಆರ್ಟ್‌" (ನೋವಿಟ್ಸ್, 1996) (ಮನುಷ್ಯರು ತಮ್ಮ ಸಮಾಜಿಕ ಬದುಕಿನಲ್ಲಿ ತೋರಿಸುವ ಆಸಕ್ತಿಗಳಲ್ಲಿ ಯಾವುದು ಕಲೆಯೆಂದು ವರ್ಗೀಕರಿಸಬಹುದು ಎನ್ನುವುದು ಕೂಡ ಒಂದು ಎಂದು ನೋವಿಟ್ಸ್‌ ಆಭಿಪ್ರಾಯ ವ್ಯಕ್ತಪಡಿಸುತ್ತಾರೆ) ನೋವಿಟ್ಸ್‌ ಪ್ರಕಾರ, ವರ್ಗೀಕರಣ ವಿವಾದಗಳು ಸಾಮಾನ್ಯವಾಗಿ ಸಮಾಜಿಕ ಮೌಲ್ಯಗಳ ಕುರಿತ ವಾದಗಳಾಗಿದ್ದು, ಸಮಾಜ ಎತ್ತ ಸಾಗುತ್ತಿದೆ ಅಥವಾ ಸಾಗಬೇಕು ಎನ್ನುವುದರ ಕುರಿತಂತೆ ಎನ್ನುತ್ತಾನೆ. ಉದಾಹರಣೆಗೆ, ಡೈಲಿ ಮೈಲ್ ಎನ್ನುವ ಪತ್ರಿಕೆ ಹಿರ್ಸ್ಟ್‌ ಮತ್ತು ಎಮಿನ್‌ ರ ಕೆಲಸವನ್ನು ಕಟುವಾಗಿ ಟೀಕಿಸಿತು. ಅದರ ವಾದ ಹೀಗೆ ಸಾಗುತ್ತದೆ "ಸುಮಾರು 1000 ವರ್ಷಗಳಿಂದಲೂ ಕಲೆ ನಮ್ಮನ್ನು ನಾಗರೀಕರನ್ನಾಗಿಸಿದ ಶಕ್ತಿಗಳಲ್ಲಿ ಪ್ರಮುಖವಾದದ್ದು. ಆದರೆ, ಇಂದು ಊರಿಟ್ಟ(ಪಿಕಲ್ಡ್) ಕುರಿ ಮತ್ತು ಕೊಳಕಾದ ಹಾಸಿಗೆಗಳು ನಮ್ಮನ್ನು ಎಲ್ಲರಿಗಿಂತ ಅನಾಗರಿಕರನ್ನಾಗಿಸುವುದಾಗಿ ಹೆದರಿಸುತ್ತಿದೆ". ಇಲ್ಲಿ ಇವರು ಕಲೆಯ ಕುರಿತಂತೆ ಹೊಸ ವ್ಯಾಖ್ಯಾನ ಅಥವಾ ವಾದವನ್ನು ಮಂಡಿಸುತ್ತಿಲ್ಲ, ಬದಲಾಗಿ ಹಿರ್ಸ್ಟ್‌ ಮತ್ತು ಎಮಿನ್‌ ರ ಕಲಾಕೃತಿಗಳ ಮೌಲ್ಯವನ್ನು ಪ್ರಶ್ನಿಸುತ್ತಿದ್ದಾರೆ.[೨೬] ಆರ್ಥರ್ ಡಾನ್ಟೊ 1998ರಲ್ಲಿ ಒಂದು ಪ್ರಯೋಗವನ್ನು ಸೂಚಿಸಿದನು. ಇದರಲ್ಲಿ ಒಂದು ವಸ್ತು ಕಲಾಕೃತಿಯೆನ್ನಿಸಿಕೊಳ್ಳಲು ನಾವು ಅದಕ್ಕೆ ಯಾವ ಸಂಸ್ಕೃತಿಯ ಕಲ್ಪನೆಯನ್ನು ಅನ್ವಯಿಸುತ್ತೇವೆಯೋ ಅದರ ಮೇಲೆ ನಿರ್ಧಾರವಾಗುತ್ತದೆಯೇ ಹೊರತು ಅ ವಸ್ತುವಿನ ಬೌದ್ಧಿಕ ಅಥವಾ ಗ್ರಹಿಕೆಯ ಗುಣಗಳಷ್ಟೆ ನಿರ್ಧರಿಸುವುದಿಲ್ಲ.

ಹೀಗಾಗಿ, ಸಾಂಸ್ಕೃತಿಕ ಅರ್ಥವಿಶ್ಲೇಷಣೆಯು (ಕಲಾಸಿದ್ದಾಂತದ ಒಂದು ವಿಧ) ಒಂದು ವಸ್ತುವಿನ ಅಂಶದ ಮೇಲೆ ಮಾಡಲಾಗದು. "[೨೭][೨೮]

ಕಲೆಯ ಬಗ್ಗೆ ಈಗಾಗಲೇ ಸ್ಥಾಪಿತವಾದ ಮಾನದಂಡವನ್ನು (ಪ್ಯಾರಮೀಟರ್) ಮತ್ತು ಮೌಲ್ಯಗಳನ್ನು ಉದ್ದೇಶಪೂರ್ವಕವಾಗಿ ಪ್ರಶ್ಣಿಸುವ ಕಲೆಗೆ ಅಂಟಿ ಆರ್ಟ್ ಎಂದು ಹಣೆಪಟ್ಟಿಯನ್ನು ನೀಡಲಾಗಿದೆ;[೨೯] ಈ ಪದ ದಾದಯಿಸಂ ಜೊತೆ ಸಂಬಂಧಿಸಿದ್ದು, ಮಾರ್ಸೆಲ್ ಡುಚಾಂಪ್‌ ಮೊದಲನೇ ಮಹಾಯುದ್ಧಕ್ಕೂ ಸ್ವಲ್ಪ ಮುಂಚಿನ(ವರ್ಲ್ಡ್ ವಾರ್‌ I)ಫೌಂಡ್‌ ಆಬ್ಜೆಕ್ಟ್‌‌ಗಳನ್ನು ಬಳಸಿ ಕಲೆಯನ್ನು ಸೃಷ್ಟಿಸಿದಾಗ ಉತ್ಪತ್ತಿಯಾಯಿತೆನ್ನಲಾಗಿದೆ.[೨೯][೨೯] ಇದರಲ್ಲಿ ಒಂದು, ಫೌಂಟೇನ್ (1917), ಒಂದು ಸಾಧಾರಣ ಮೂತ್ರ ಮಾಡುವ ಜಾಗ(ಯುರಿನಲ್), ಸಾಕಷ್ಟು ಪ್ರಮಾಣದ ಪ್ರಾಮುಖ್ಯತೆ ಪಡೆದಿದ್ದು, ಕಲೆ ಮೇಲೆ ಪ್ರಭಾವ ಬೀರಿದೆ.[೨೯] ಅಂಟಿ ಆರ್ಟ್ ಎನ್ನುವುದು ಸಿಟ್ಯುಏಷನಿಸ್ಟ್ ಇಂಟರ್‌ನಾಷಿನಲ್‌,[೩೦] ಲೊ-ಫೈ ಮೈಲ್‌ ಆರ್ಟ್ ಮೂವ್‌ಮೆಂಟ್, ಮತ್ತು ಯುವ ಬ್ರಿಟಿಷ್ ಕಲಾವಿದರು ,[೨೯] ಪ್ರಯೋಗಿಸುವ ಕಲಾಪ್ರಕಾರ. ಇಷ್ಟಾಗ್ಯೂ, ಇದನ್ನು ಸ್ಟಕ್ಇಸ್ಟ್‌ಗಳು,[೨೯] ಇದನ್ನು ತಿರಸ್ಕಿರಿಸಿ ತಮ್ಮನ್ನು ತಾವೆ ಅಂಟಿ-ಅಂಟಿ-ಅರ್ಟ್‌ ಎಂದು ಕೆರದುಕೊಳ್ಳುತ್ತಾರೆ.[೩೧][೩೨]

ಕಲೆ, ಶ್ರೇಣಿ ಮತ್ತು ಮೌಲ್ಯ/ಯೋಗ್ಯತೆ

ಬದಲಾಯಿಸಿ
 
ವೈರ್‌ಸೈಹ್: ಲೂಯಿಸ್ ಲೆ ವಾ, ಅರಮೆನೆಯ ಒಳಾಂಗಣವನ್ನು ತೆರೆದ, ಇದು ಕೋರ್‌ ಡಿ'ಹಾನರ್‌(ಕೋರ್ಟ್‌ ಆಫ್‌ ಹಾನರ್‌) ನ ವಿಶಾಲವಾದ ದ್ವಾರವಾಯಿತು. ಇದನ್ನು ನಂತರ ಯೂರೋಪಿನಾದ್ಯಂತ ಅನುಕರಿಸಲಾಯಿತು.

ಕಲೆಯು ಕೆಲವೇಕೆಲವು ಸಮಾಜಿಕ ವರ್ಗಗಳಿಗೆ ಮಾತ್ರ ಸೀಮಿತವಾಗಿದ್ದು, ಬೇರೆ ವರ್ಗದ ಜನರನ್ನು ದೂರವಿಡುತ್ತದೆ ಎಂದು ಭಾವಿಸುತ್ತಾರೆ. ಇಂತಹ ಸನ್ನಿವೇಶದಲ್ಲಿ,ಕಲೆಯನ್ನು ಶ್ರೀಮಂತಿಕೆಯೊಂದಿಗೆ ಸಂಬಂಧಿಸಿದ ಮೇಲ್‌ವರ್ಗದ ಚಟುವಟಿಕೆಯೆಂದು ಭಾವಿಸಲಾಗುತ್ತದೆ. ಕಲಾಕೃತಿಯನ್ನು ತೆಗೆದುಕೊಳ್ಳುವ ಸಾಮರ್ಥ್ಯ, ಮತ್ತು ಕಲೆಯನ್ನು ಮುಂದುವರೆಸಲು ಮತ್ತು ಅಸ್ವಾದಿಸಲು ಸಾಕಷ್ಟು ಬಿಡುವಿನ ಸಮಯ ಬೇಕು. ಉದಾಹರಣೆಗೆ: ವೈರ್‌ಸೈಹ್‌ನ ಅರಮನೆ ಅಥವಾ ಸೇಂಟ್‌ ಪಿಟರ್ಸ್‌ಬರ್ಗ್‌ಹರ್ಮಿಟೇಜ್‌ಗಳಲ್ಲಿ ಯುರೋಪಿನ ಶ್ರೀಮಂತ ರಾಜಮನೆತನಗಳಿಂದ ಸಂಗ್ರಿಹಸಲ್ಟಟ್ಟ ವ್ಯಾಪಕ ಕಲಾಸಂಗ್ರಹವು ಈ ಭಾವನೆಯನ್ನು ಸೃಷ್ಠಿಮಾಡಿದವು. ಕಲೆಯನ್ನು ಸಂಗ್ರಹಮಾಡುವುದು ಶ್ರೀಮಂತರು, ಸರ್ಕಾರ ಮತ್ತು ಸಂಸ್ಥೆಗಳಿಗೆ ಮಾತ್ರವೇ ಸೀಮಿತಗೊಂಡಿದೆ.

ಸೂಕ್ಷ್ಮಕೌಶಲದ ಮತ್ತು ಬೆಲೆಬಾಳುವ ವಸ್ತುಗಳು ಅನೇಕ ಸಂಸ್ಕೃತಿಗಳಲ್ಲಿ ಸಮಾಜಿಕ ಅಂತಸ್ತನ್ನು ನಿರ್ಣಯಿಸುವ ಜನಪ್ರಿಯ ಮಾದರಿಗಳಾಗಿವೆ, ಇಂದಿಗೂ ಕೂಡ ಇವು ಹೀಗೆ ಮಾಡುತ್ತಿದೆ. ಇದರ ವಿರುದ್ಧ ಒಂದು ಸಾಂಸ್ಕೃತಿಕ ಅಂದೋಲನ ನಡೆಯುತ್ತಲೇ ಇದೆ. ಇದನ್ನು ಕಡೇಪಕ್ಷ 1793ದಿಂದೀಚೆಗೆ ಗುರುತಿಸಬಹುದು. ಫ್ರೆಂಚ್ ಕ್ರಾಂತಿಯ ಸಂದರ್ಭದಲ್ಲಿ ಲೋವ್ರೆ, ಎನ್ನುವ ಫ್ರಾನ್ಸ್‌ನ ರಾಜರ ಖಾಸಗಿ ಅರಮೆನೆಯನ್ನು, ಕಲಾ ಸಂಗ್ರಾಹಾಲಯ (ಮ್ಯೂಸಿಯಮ್) ರೂಪದಲ್ಲಿ ಸಾರ್ವಜನಿಕರಿಗೆ ತೆರೆಯಲಾಯಿತು. ಬಹುತೇಕ ಆಧುನಿಕ ಸಾರ್ವಜನಿಕ ಮ್ಯೂಸಿಯಮ್‌ಗಳು ಮತ್ತು ಶಾಲೆಗಳಲ್ಲಿ ಮಕ್ಕಳಿಗಾಗಿ ನಡೆಸುವ ಕಲಾ ಶಿಕ್ಷಣ ಕಾರ್ಯಕ್ರಮಗಳ ಹಿಂದೆ, ಕಲೆ ಎಲ್ಲಾ ವರ್ಗದವರಿಗೂ ಸಿಗವಂತಾಗಬೇಕು ಎನ್ನುವ ಮೂಲಭೂತ ಪ್ರೇರಣೆ ಕೆಲಸಮಾಡುತ್ತಿರುತ್ತದೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿನ ಮ್ಯೂಸಿಯಂಗಳು ಬಹಳ ಶ್ರೀಮಂತರಿಂದ ವಿಶಾಲ ಜನಸಮುದಾಯಕ್ಕೆ ಕೊಟ್ಟ ಉಡುಗೋರೆ ಎಂದು ಭಾವಿಸಲಾಗುತ್ತದೆ.(ನ್ಯೂಯಾರ್ಕ್ ನಗರದಲ್ಲಿರುವ ದಿ ಮೆಟ್ರಪಾಲಿಟನ್ ಮ್ಯೂಸಿಯಮ್ ಆಫ್ ಆರ್ಟ್ ಎನ್ನುವ ಸಂಗ್ರಹಾಲಯವನ್ನು ಸ್ಥಾಪಿಸಿದ್ದು ಜಾನ್ ಟೇಲರ್ ಜಾನ್ಸ್‌ಟನ್ ಎನ್ನುವ ರೈಲ್‌ರೋಡ್ ಅಧಿಕಾರಿ. ಈತನ ವ್ಯಯಕ್ತಿಕ ಕಲಾಸಂಗ್ರಹವು ಮ್ಯೂಸಿಯಮ್‌ಗೆ ಮೂಲಭೂತ ಬುನಾದಿಯನ್ನು ಹಾಕಿತು.) ಆದರೆ ಇಷ್ಟೆಲದ್ದರ ನಡುವೆಯೂ, 21ನೇ ಶತಮಾನದಲ್ಲಿ ಕಲೆಯ ಒಂದು ಪ್ರಮುಖ ಉದ್ದೇಶವೆಂದರೆ ಶ್ರೀಮಂತಿಕೆ ಮತ್ತು ಸಮಾಜಿಕ ಅಂತಸ್ತನ್ನು ಅಳೆಯುವ ಒಂದು ಮಾನದಂಡವಾಗಿದೆ.

 
ಜೋಸೆಫ್‌ ಬೆಯುಸ್ ರ ಪ್ರದರ್ಶನ, 1978: ಎವರಿ ಒನ್‌ ಆನ್ ಆರ್ಟಿಸ್ಟ್‌ - ಅನ್ ದಿ ವೇ ಟು ದಿ ಲಿಬರ್ಟರೇಯಿನ್ ಫಾರ್ಮ್‌ ಆಫ್‌ ದಿ ಸೋಷಿಯಲ್ ಆರ್ಗಾನಿಸಂ.

ಶ್ರೀಮಂತರು ತಮ್ಮ ಅಂತಸ್ತನ್ನು ಪ್ರದರ್ಶಿಸುವ ಉದ್ದೇಶದಿಂದ ಖರೀದಿಸಲಾದ ಕಲಾಕೃತಿಗಳ ಬದಲು ಅವರ ಶ್ರೀಮಂತಿಕೆಯನ್ನು ಪ್ರದರ್ಶಿಸಲಾಗದಂತಹ ಕಲಾಕೃತಿಗಳನ್ನು ರಚಿಸುವಲ್ಲಿ ಕಲಾವಿದರು ಪ್ರಯತ್ನ ನೆಡೆಸಿದ್ದಾರೆ. 1960ರ ದಶಕದ ಕೊನೆಯಲ್ಲಿ ಮತ್ತು 1970ರಲ್ಲಿ ಸೃಷ್ಟಿಸಲಾದ ಕಲೆಯ ಪ್ರಮುಖವಾದ ಮೂಲ ಉದ್ದೇಶವು ಯಾರು ತೆಗೆದುಕೊಳ್ಳಲು ಮತ್ತು ಮಾರಲು ಸಾಧ್ಯವಾಗದಂತಹ ಕಲೆಯನ್ನು ಸೃಷ್ಟಿಸುವುದಾಗಿತ್ತು. "ಕೇವಲ ವಸ್ತುಗಳಷ್ಟೆ ಅಲ್ಲದೆ ಬೇರೆ ಏನಾದರೂ ಕೊಡುವ ಅವಶ್ಯಕತೆಯಿದೆ"[೩೩] ( ನೆಸಸರಿ ಟು ಪ್ರೆಸೆಂಟ್ ಸಮ್‌ಥಿಂಗ್‌ ಮೋರ್‌ ಥಾನ್‌ ಮಿಯರ್ ಆಬ್ಜೆಕ್ಟ್ಸ್) ಎಂದು ಜೋಸೆಫ್‌ ಬೆಯುಸ್ ಎನ್ನುವ ಯುದ್ಧ ನಂತರದ ಜರ್ಮನಿಯ ಪ್ರಮುಖ ಕಲಾವಿದ ಹೇಳುತ್ತಾನೆ. ಈ ಕಾಲಘಟ್ಟದಲ್ಲಿ ಪ್ರದರ್ಶಕ ಕಲೆ (ಪರ್ಪಾಮೆನ್ಸ್ ಆರ್ಟ್), ವಿಡಿಯೋ ಅರ್ಟ್ ಮತ್ತು ಕಾನ್ಸೆಪ್ಟುಯಲ್ ಆರ್ಟ್ ಎನ್ನುವ ಪ್ರಕಾರಗಳು ಏಳಿಗೆಯಾದವು. ಒಂದು ಕಲೆ ಸೃಷ್ಟಿ ಒಂದು ಪ್ರದರ್ಶನದ ರೂಪದಲ್ಲಿದ್ದರೆ ಅಥವಾ ಕೇವಲ ಒಂದು ಸರಳ ಕಲ್ಪನೆ ಮಾತ್ರವೆ ಆಗಿದ್ದರೆ, ಆಗ ಅದನ್ನು ಯಾರು ಮಾರಲು ಮತ್ತು ಖರೀದಿಸಲು ಸಾಧ್ಯವಿರುವುದಿಲ್ಲ ಎನ್ನುವುದು ಈ ಅಭಿಪ್ರಾಯ/ಚಿಂತನೆಯ ಹಿಂದಿರುವ ಉದ್ದೇಶ. "ಡೆಮೊಕ್ರಾಟಿಕ್‌ ಪರ್ಸೆಪ್ಟ್ಸ್‌ ರಿವಾಲ್ವಿಂಗ್ ಅರೌಂಡ್‌ ದ ಇಡಿಯಾ ಥಟ್ ವರ್ಕ್‌ ಆಫ್ ಆರ್ಟ್‌ ಇಸ್‌ ಎ ಕಾಮಡಿಟಿ ಇಂಪೆಲ್ಲಡ್ ದಿ ಎಸ್ತೆಟಿಕ್ ಇನ್ನೊವೆಷನ್‌ ವಿಚ್‌ ಜರ್ಮಿನೆಟೆಡ್‌ ಇನ್ ದ ಮಿಡ್‌-1960s ಅಂಡ್ ವಾಸ್ ರೀಪ್ಡ್‌ ತ್ರೂಔಟ್ ದ 1970s. ಅರ್ಟಿಸ್ಟ್ಸ್‌ ಬ್ರಾಡ್ಲಿ ಇಂಡೆಂಟಿಫೈಡ್ ಅಂಡರ್ ದ ಹೆಡ್ದಿಂಗ್ ಆಫ್‌ ಕಾನ್ಸೆಪ್ಟುಯಲ್ ಆರ್ಟ್‌... ಸಬ್‌ಸ್ಟಿಟ್ಯುಟಿಂಗ್‌ ಪರ್ಪಾಮೆಂನ್ಸ್‌ ಅಂಡ್‌ ಪಬ್ಲಿಷಿಂಗ್‌ ಅಕ್ಟಿವಿಟಿಸ್‌ ಫಾರ್‌ ಎಂಗೇಜ್‌ಮೆಂಟ್‌ ವಿತ್‌ ಬೋತ್‌ ದ ಮಟಿರಿಯಲ್ ಅಂಡ್ ಮಟಿರಿಯಲಿಸ್ಟಿಕ್‌ ಕನ್ಸರ್ನ್ಸ್‌ ಆಫ್ ಪೇಂಟೆಡ್ ಆರ್ ಸ್ಕಲ್ಪಚರಲ್ ಫಾರ್ಮ್.. [ಹಾವ್] ಎಂಡೆವರ್ಡ್ ಟು ಅಂಡರ್‌ಮೈನ್‌ ದ ಅರ್ಟ್‌ ಅಬ್ಜೆಕ್ಟ್‌ ಕ್ವಾ ಆಬ್ಜೆಕ್ಟ್‌." [೩೪]

ಇದಾದ ನಂತರದ ದಶಕಗಳಲ್ಲಿ, ಈ ಚಿಂತನೆಗಳು ಸಾಮಾನ್ಯವಾಗಿ ಸೋಲತೊಡಗಿದೆ. ಏಕೆಂದರೆ, ಕಲಾಮಾರುಕಟ್ಟೆಯನ್ನು ವಿಸ್ತರಿಸಲಾಗಿದೆ: ವಿಡಿಯೋಗಳ ಸೀಮಿತ ಸಂಖ್ಯೆಯ ಡಿವಿಡಿ ಅವೃತ್ತಿಗಳನ್ನು ಮಾರುವುದು,[೩೫] ಪ್ರದರ್ಶನ ಕಲೆಗೆ ವಿಶೇಷ ಅಮಂತ್ರಣ ನೀಡುವುದು, ಮತ್ತು ಕನ್ಸೆಪ್ಟುಯಲ್‌ಗಳಿಂದ ಉಳಿದ ವಸ್ತುಗಳನ್ನು ಮಾರುವುದು. ಬಹುತೇಕ ಸಂದರ್ಭಗಳಲ್ಲಿ, ಒಂದು ಕಲ್ಪನೆ, ಒಂದು ವಿಡಿಯೋ ಅಥವಾ ಮೇಲ್ನೋಟಕ್ಕೆ ಕಸದಂತೆ ಕಾಣುವ ವಸ್ತು ಕೂಡ ಕಲೆಯೆಂದು ಏಕೆ ಪರಿಗಣಿಸಲಾಗುತ್ತದೆ ಎನ್ನುವ ಅರಿವಿರುವ ಕೆಲವು ಕೆಲವು ಗಣ್ಯರಿಂದ (ಏಲೀಟ್‌ಗಳು‌)ಮಾತ್ರವೇ ಈ ಪ್ರದರ್ಶನಗಳನ್ನು ಅರ್ಥ ಮಾಡಿಕೊಳ್ಳಬಹುದು. ಈ ರೀತಿಯಾಗಿ ಅಂತಸ್ತಿನ ಮಾನದಂಡವಾಗಿ ಕಲೆಯನ್ನು ಸ್ವಂತಕ್ಕೆ ಖರೀದಿಸುವ ಬದಲಾಗಿ ಅದನ್ನು ಆರ್ಥ ಮಾಡಿಕೊಳ್ಳುವುದಕ್ಕೆ ಸೀಮಿತವಾಗುತ್ತದೆ. ಹೀಗಾಗಿ, ಕಲಾಸೃಷ್ಟಿ ಕೇವಲ ಮೇಲ್‌-ಅಂತಸ್ತಿನ ಚಟುವಟಿಕೆಯಾಗಿ ಉಳಿಯುತ್ತದೆ. "2000ದ ಆದಿಯಲ್ಲಿ ಡಿವಿಡಿ ರೆಕಾರ್ಡಿಂಗ್‌ ತಂತ್ರಜ್ಞಾನದ ಬಳಕೆ ವ್ಯಾಪಕವಾಯಿತು. ಕಲಾವಿದರು ಮತ್ತು ಗ್ಯಾಲರಿ ಸಿಸ್ಟಂಗಳು ಈ ಕಲಾಸೃಷ್ಟಿಗಳನ್ನು ಮಾರಿ ಲಾಭಗಳಿಸುತ್ತಿದ್ದವು. ಹೀಗಾಗಿ ಇದನ್ನು ನಿಯಂತ್ರಿಸಲು ಕಡಿಮೆ ಸಂಖ್ಯೆಯಲ್ಲಿ ವಿಡೀಯೋ ಮತ್ತು ಕಂಪ್ಯೂಟರ ಆರ್ಟ್‌ವರ್ಕ್‌ ಅನ್ನು ಕೇವಲ ಸಂಗ್ರಹಕಾರರಿಗೆಂದೇ ವಿಶೇಷವಾಗಿ ಬಿಡುಗಡೆ ಮಾಡತೊಡಗಿದರು."[೩೬]

ಇದನ್ನೂ ನೋಡಿ

ಬದಲಾಯಿಸಿ

ಟೆಂಪ್ಲೇಟು:Portal

ಟಿಪ್ಪಣಿಗಳು

ಬದಲಾಯಿಸಿ
  1. ವೊಲೆಹಿಮ್ 1980, op. cit. ಎಸ್ಸೇ VI. pp. 231-39.
  2. Gombrich, Ernst. (2005). "Press statement on The Story of Art". The Gombrich Archive. Archived from the original on 2008-10-06. Retrieved 2008-11-18.
  3. ರಿಚರ್ಡ್ ವೊಲೆಹಿಮ್, ಆರ್ಟ್ ಅಂಡ್‌ ಇಟ್ಸ್ ಆಬ್ಜೆಕ್ಟ್ಸ್ , p.1, 2nd edn, 1980, ಕೇಂಬ್ರಿಡ್ಜ್ ಯುನಿವರ್ಸಿಟಿ ಪ್ರೆಸ್, ISBN 0-521-29706-0
  4. ೪.೦ ೪.೧ ಜೆರೋಲ್ಡ್ ಲೇವಿನ್ಸನ್, ದಿ ಆಕ್ಸ್‌ಫರ್ಡ್ ಹ್ಯಾಂಡ್‌ಬುಕ್‌ ಆಫ್ ಎಸ್ತೆಟಿಕ್ಸ್ , ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್, 2003, p5. ISBN 0-8019-7114-4
  5. ಜೆರೋಲ್ಡ್ ಲೇವಿನ್ಸನ್, ದಿ ಆಕ್ಸ್‌ಫರ್ಡ್ ಹ್ಯಾಂಡ್‌ಬುಕ್‌ ಆಫ್ ಎಸ್ತೆಟಿಕ್ಸ್ , ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್, 2003, p16. ISBN 0-8019-7114-4
  6. ಆರ್.ಜಿ. ಕಾಲಿಂಗ್‌ವುಡ್ ರ ದೃಷ್ಟಿಕೋಣ,ದಿ ಪ್ರಿನ್ಸಿಪಲ್ಸ್ ಆಫ್ ಆರ್ಟ್ ರಲ್ಲಿ ವ್ಯಕ್ತಪಡಿಸಿದ ಹಾಗೆ, is considered in Wollheim, op. cit. 1980 pp 36-43
  7. ಮಾರ್ಟಿನ್ ಹೈಡೆಗೆರ್, ಪೊಯಟ್ರಿ, ಲ್ಯಾಂಗ್ವೇಜ್, ಥಾಟ್ ರಲ್ಲಿರುವ "ದಿ ಆರಿಜನ್ ಆಫ್ ದಿ ವರ್ಕ್ ಆಫ್ ಆರ್ಟ್",(ಹಾರ್ಪರ್ ಪೆರೆನಿಯಲ್, 2001). ಇದನ್ನೂ ನೋಡಿ ಮಾರಿಸ್ ಮೆರಲಿಯು-ಪಾಂಟಿ "ಸೆಸಾನ್ನೆಸ್ ಡೌಟ್" ದಿ ಮೆರಲಿಯು-ಪಾಂಟಿ ಎಸ್ತೆಟಿಕ್ಸ್ ರೀಡರ್, ಗಾಲೆನ್ ಜಾನ್‌ಸನ್ ಮತ್ತು ಮೈಕಲ್‌ ಸ್ಮಿತ್‌ (eds), (ನಾರ್ಥ್‌ವೆಸ್ಟರ್ನ್ ಯುನಿವರ್ಸಿಟಿ ಪ್ರೆಸ್‌, 1994 ) ಮತ್ತು ಜಾನ್‌ ರುಸೋನ್, ಬೇರಿಂಗ್ ವಿಟ್‌ನೆಸ್‌‌ ಟು ಎಪಿಫಾನಿ , ಸ್ಟೇಟ್‌ ಯುನಿವರ್ಸಿಟಿ ಆಫ್ ನ್ಯೂ ಯಾರ್ಕ್‌ ಪ್ರೆಸ್‌, 2009).
  8. ಎಲ್ಕಿನ್ಸ್, ಜೇಮ್ಸ್ "ಆರ್ಟ್ ಹಿಸ್ಟರಿ ಅಂಡ್ ಇಮೇಜ್ಸ್ ಥಟ್ ಆರ್ ನಾಟ್ ಆರ್ಟ್‌", ದಿ ಆರ್ಟ್ ಬ್ಯೂಲಿಟಿನ್ , Vol. 47, No. 4 (ಡಿಸೆಂಬರ್ 1995), ಹಿಂದಿನ ಗ್ರಂಥ ಸೂಚಿಯೊಂದಿಗೆ. "Non-Western images are not well described in terms of art, and neither are medieval paintings that were made in the absence of humanist ideas of artistic value". 553
  9. ಅಡೋರ್ನೊ , ಥೆಯೊಡೊರ್ ಡಬ್ಲೂ., ಎಸ್ತೆಟಿಕ್ ಥಿಯರಿ , (1970 ಜರ್ಮನ್ ಭಾಷೆಯಲ್ಲಿ)
  10. ಡೇವಿಡ್ ನೋವಿಟ್ಸ್, "ದಿ ಬೌಂಡರೀಸ್ ಆಫ್ ಆರ್ಟ್", 1992
  11. ರಾಡ್‌ಫೋರ್ಡ್, ಟಿಮ್. "World's Oldest Jewellery Found in Cave". ಗಾರ್ಡಿಯನ್ ಅನ್‌ಲಿಮಿಟೆಡ್ , ಏಪ್ರಿಲ್ 16, 2004. ಜನವರಿ 18, 2008ರಂದು ಮರುಸಂಪಾದಿಸಲಾಗಿದೆ.
  12. ರಾಬರ್ಟ್‌ಸನ್, ಜಿಯಾನ್ ಮತ್ತು ಕ್ರೇಗ್ ಮಾಕ್‌ ಡೇನಿಯಲ್ : ಥೀಮ್ಸ್ ಆಫ್‌ ಕಾಂಟೆಪರರಿ ಆರ್ಟ್, ವಿಷ್ಯುಯಲ್ ಆರ್ಟ್ ಆಫ್ಟರ್ 1980, page 4. ಆಕ್ಸ್‌ಫರ್ಡ್‌ ಯುನಿವರ್ಸಿಟಿ ಪ್ರೆಸ್‌, 1996.
  13. ಅರಿಸ್ಟಾಟಲ್. ದಿ ಪೋಯೆಟಿಕ್ಸ್, ರಿಪಬ್ಲಿಕ್
  14. ಅರಿಸ್ಟಾಟಲ್. ದಿ ಪೋಯೆಟಿಕ್ಸ್, ರಿಪಬ್ಲಿಕ್. ಗಮನಿಸಿ: ಇಲ್ಲಿ ಸಾಮಾನ್ಯವಾಗಿ ಕಾವ್ಯ ಬಗ್ಗೆ ಹೇಳಲಾಗಿದೆಯಾದರು, ಪ್ರಾಚೀನ ಗ್ರೀಕರು ಸಾಮಾನ್ಯವಾಗಿ ಒಟ್ಟಾರೆ ಕಲೆಯ ಬಗ್ಗೆ ಮಾತನಾಡುತ್ತಾರೆ. http://www.authorama.com/the-poetics-2.html
  15. ಐನ್‌ಸ್ಟೀನ್‌, ಆಲ್ಬರ್ಟ್‌. ದ ವರ್ಲ್ಡ್‌ ಐ ಸಿ ಇಟ್. http://www.aip.org/history/einstein/essay.htm Archived 2008-06-08 ವೇಬ್ಯಾಕ್ ಮೆಷಿನ್ ನಲ್ಲಿ.
  16. ಇಮಾನ್ಯುಯಲ್ ಕಾಂಟ್, ಕ್ರಿಟಿಕ್ ಆಫ್ ಎಸ್ತೆಟಿಕ್ ಜಡ್ಜ್‌ಮೆಂಟ್(1790).
  17. ಸಿಲಿವಿಯಾ ಟೊಮಸ್ಕೋವ, "ಪ್ಲೇಸಸ್ ಆಫ್ ಆರ್ಟ್: ಆರ್ಟ್ ಅಂಡ್ ಆರ್ಕಿಯಾಲಜಿ ಇನ್ ಕಾಂಟೆಕ್ಸ್‌ಟ್": (1997)
  18. ಸ್ಟೀವ್ ಮಿಥೆನ್. ದಿ ಪ್ರಿಹಿಸ್ಟರಿ ಆಫ್ ದಿ ಮೈಂಡ್: ದಿ ಕಾಂಗ್ನಿಟಿವ್ ಒರಿಜನ್ಸ್ ಆಫ್ ಆರ್ಟ್, ರಿಲಿಜನ್ ಅಂಡ್ ಸೈಯನ್ಸ್. 1999
  19. ಅಂಡ್ರೆ ಬ್ರೆಟನ್, ಸರಿಅಲಿಸ್ಟ್ ಮ್ಯಾನಿಫೆಸ್ಟೊ(1924)
  20. ರೋಲಾಂಡ್ ಬಾರ್ತಿಸ್ , ಮೈಥಾಲಜಿಸ್
  21. "go to nature in all singleness of heart, rejecting nothing and selecting nothing, and scorning nothing, believing all things are right and good, and rejoicing always in the truth." ರಸ್ಕಿನ್‌, ಜಾನ್‌ . ಮಾಡರ್ನ್ ಪೇಂಟರ್ಸ್ , Volume I, 1843. ಲಂಡನ್: ಸ್ಮಿತ್, ಎಲ್ಡರ್ ಅಂಡ್ ಕಂ.
  22. ವೊಲೆಹಿಮ್ 1980, ಎಸ್ಸೇ VI. pp. 231-39.
  23. ಗ್ರಿಸೆಲ್ಡಾ ಪೊಲಾಕ್, ಡಿಫೆರೆನ್ಸಿಂಗ್ ದಿ ಕಾನನ್ . ರೊಟ್‌ಲೆಡ್ಜ್, ಲಂಡನ್ & N.Y.,1999. ISBN 0-486-26719-9.
  24. ೨೪.೦ ೨೪.೧ ಮಾಡರ್ನ್ ಆರ್ಟ್ ಅಂಡ್‌ ಮಾಡರ್ನಿಸಂ: ಎ ಕ್ರಿಟಿಕಲ್ ಅಂಥಾಲಜಿ. ed. ಫ್ರಾನ್ಸಿಸ್ ಫ್ರಾಸ್ಕಿನಾ ಮತ್ತು ಚಾರ್ಲ್ಸ್ ಹ್ಯಾರಿಸನ್, 1982.
  25. ಡಿಬೊರಾ ಸಾಲೊಮನ್, "2003: ದ 3rd ಅನ್ಯುಯಲ್ ಇಯರ್ ಇನ್‌ ಐಡಿಯಾಸ್: ವಿಡಿಯೋ ಗೇಮ್‌ ಆರ್ಟ್", ನ್ಯೂ ಯಾರ್ಕ್ ಟೈಮ್ಸ್, ಮಾಗಜೀನ್ ಸೆಕ್ಷನ್, ಡಿಸೆಂಬರ್ 14, 2003
  26. ಪೇಂಟರ್, ಕಾಲಿನ್. "ಕಾಂಟೆಂಪರರಿ ಆರ್ಟ್ ಅಂಡ್ ದ ಹೋಮ್‌". ಬೆರ್ಗ್ ಫಬ್ಲಿಶರ್ಸ್ಸ್, 2002. p. 12. ISBN 1-55138-081-1.
  27. ಡುಟನ್,ಡೆನಿಸ್ ರ Tribal Art Archived 2020-05-17 ವೇಬ್ಯಾಕ್ ಮೆಷಿನ್ ನಲ್ಲಿ. , ಎನ್‌ಸೈಕ್ಲೋಪಿಡಿಯಾ ಆಫ್ ಎಸ್ತೆಟಿಕ್ಸ್, ಮೈಕಲ್ ಕೆಲ್ಲಿ ಸಂಪಾದಕ (ನ್ಯೂ ಯಾರ್ಕ್: ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್, 1998).
  28. ಡಾನ್ಟೊ, ಆರ್ಥರ್ . "ಆರ್ಟಿಫ್ಯಾಕ್ಟ್ ಅಂಡ್ ಆರ್ಟ್‌." ಸುಸಾನ್ ವೊಗೆಲ್ ಸಂಪಾದಿಸಿರುವ ಆರ್ಟ್/ಆರ್ಟಿಫ್ಯಾಕ್ಟ್ ರಲ್ಲಿ. New York, 1988.
  29. ೨೯.೦ ೨೯.೧ ೨೯.೨ ೨೯.೩ ೨೯.೪ ೨೯.೫ "Glossary: Anti-art" Archived 2012-02-03 at the UK Government Web Archive, ಟೇಟ್. ಮರುಸಂಪಾದಿಸಿದ್ದು 23 ಜನವರಿ 2010.
  30. ಸ್ಕನೈಡರ್, ಕಾರೊಲಿನ್. "Asger Jorn", ಆರ್ಟ್‌ಫೋರಂ , 1 ಸೆಪ್ಟೆಂಬರ್ 2001. encyclopedia.com ದಿಂದ 24, ಜನವರಿ 2010ರಂದು ಮರುಸಂಪಾದಿಸಲಾಗಿದೆ.
  31. ಫೆರ್ಗುಸನ್, ಇಯಾನ್. "In bed with Tracey, Sarah ... and Ron", ದಿ ಆಬ್ಸರ್ವರ್ , 20 ಏಪ್ರಿಲ್ 2003. 2 ಮೇ 2009ರಂದು ಮರುಸಂಪಾದಿಸಲಾಗಿದೆ.
  32. "Stuck on the Turner Prize", artnet, 27 ಆಕ್ಟೋಬರ್ 2000. 2 ಮೇ 2009ರಂದು ಮರುಸಂಪಾದಿಸಲಾಗಿದೆ.
  33. Sharp, Willoughby (December 1969). "An Interview with Joseph Beuys". ArtForum. 8 (4): 45. {{cite journal}}: Cite has empty unknown parameter: |coauthors= (help)
  34. ರೋರಿಮರ್, ಅನೆ: ನ್ಯೂ ಆರ್ಟ್ ಇನ್‌ ದ 60s ಅಂಡ್ 70s ರಿಡಿಫೈನಿಂಗ್ ರಿಯಾಲಿಟಿ, page 35. ಥೇಮ್ಸ್ ಅಂಡ್ ಹಡ್ಸನ್, 2001.
  35. Fineman, Mia (2007-03-21). "YouTube for ArtistsThe best places to find video art online". Slate. Retrieved 2007-08-03. {{cite news}}: Cite has empty unknown parameter: |coauthors= (help)
  36. ರಾಬರ್ಟ್, ಜಿಯಾನ್ ಮತ್ತು ಕ್ರೇಗ್ ಮಾಕ್‌ ಡೇನಿಯಲ್ : ಥೀಮ್ಸ್‌ ಆಫ್‌ ಕಂಟೆಪರರಿ ಆರ್ಟ್, ವಿಷ್ಯುಯಲ್ ಆರ್ಟ್ ಆಪ್ಟರ್ 1980, page 16. ಆಕ್ಸ್‌ಫರ್ಡ್‌ ಯುನಿವರ್ಸಿಟಿ ಪ್ರೆಸ್‌, 1996.

ಗ್ರಂಥಸೂಚಿ

ಬದಲಾಯಿಸಿ
  • ಆರ್ಥರ್ ಡಾನ್ಟೊ, ದಿ ಅಬ್ಯುಸ್ ಆಫ್ ಬ್ಯೂಟಿ: ಎಸ್ತೆಟಿಕ್ಸ್ ಅಂಡ್ ದಿ ಕಾನ್ಸೆಪ್ಟ್ ಆಫ್ ಆರ್ಟ್. 2003
  • ಡಾನ ಅರ್ನಾಲ್ಡ್ ಮತ್ತು ಮಾರ್ಗರೇಟ್ ಇವೆರ್ಸನ್ (eds.) ಆರ್ಟ್ ಅಂಡ್ ಥಾಟ್ . ಆಕ್ಸ್‌ಫರ್ಡ್: ಬೇಸಿಲ್ ಬ್ಲ್ಯಾಕ್‌ವೆಲ್, 2003.
  • ಮೈಕಲ್ ಆನ್ ಹೋಲಿ ಮತ್ತು ಕೀತ್ ಮೋಕ್ಸಿ(eds.) ಆರ್ಟ್ ಹಿಸ್ಟರಿ ಅಂಡ್ ವಿಷ್ಯುಯಲ್ ಸ್ಟಡಿಸ್ . ಯೇಲ್ ಯುನಿವರ್ಸಿಟಿ ಪ್ರೆಸ್, 2002.
  • ಜಾನ್ ವೈಟ್‌ಹೆಡ್. ಗ್ರಾಸ್ಪಿಂಗ್‌ ಫಾರ್‌ ದಿ ವಿಂಡ್. 2001
  • ನೋಯಲ್ ಕಾರೊಲ್ , ಥಿಯರಿಸ್ ಆಫ್ ಆರ್ಟ್ ಟುಡೆ. 2000
  • ಎವೆಲಿನ್ ಹಾಚರ್, ed. ಆರ್ಟ್ ಆಸ್ ಕಲ್ಚರ್: ಆನ್ ಇನ್ಟ್ರಡಕ್ಷನ್ ಟು ದಿ ಅಂತ್ರೊಪಾಲಜಿ ಆಫ್ ಆರ್ಟ್. 1999
  • ಕಾಥರೀನ್ ಡಿ ಸೆಗೆರ್(ed.). ಇನ್‌ಸೈಡ್‌ ದಿ ವಿಸಿಬಲ್ . MIT ಪ್ರೆಸ್, 1996.
  • ನೀನಾ, ಫೆಲ್ಶಿನ್, ed. ಬಟ್ ಇಸ್ ಇಟ್ ಆರ್ಟ್? 1995).
  • ಸ್ಟೀಪನ್ ಡೇವಿಸ್, ಡೆಫನಿಷನ್ಸ್ ಆಫ್ ಆರ್ಟ್. 1991
  • ಆಸ್ಕರ್ ವೈಲ್ಡ್, "ಇನ್‌ಟೆನ್ಷನ್ಸ್".
  • ಜಿಯಾನ್ ರಾಬರ್ಟ್‌ಸನ್ ಮತ್ತು ಕ್ರೇಗ್ ಮಾಕ್‌ಡೇನಿಯಲ್, "ಥೀಮ್ಸ್ ಆಫ್‌ ಕಾಂಟೆಂಪರರರಿ ಆರ್ಟ್, ವಿಷ್ಯುಯಲ್ ಆರ್ಟ್ ಆಫ್ಟರ್ 1980." 2005

ಮನಸ್ಸಿನಲ್ಲಿ ನೊರೆಂಟು ಗೊಂದಲಗಳು , ಪರಿಹಾರವಿದ್ದರೂ ಸಹ ಪ್ರಯೋಜನಕ್ಕೆ ಬರುವುದಿಲ್ಲ ,

ಜೀವನದ ತುಂಬಾ ನೂರಾರು ಸಂಬಂದಗಳು ಎಲ್ಲರೂ ಹತ್ತಿರದಲ್ಲಿ ಇದ್ದಂತೆ ಕಂಡರೂ, ನೋವು ಬಂದಾಗ ಇದ್ದರೂ ಇಲ್ಲಂದಂತೆ ಮರೆಯಾಗಿ ಹೋಗುವರು ,

ಹೀಗೆಯೇ ಜೀವನಪೂರ್ತಿ ಮುಗಿದು ಹೋಗಿ ಹಿಂದೆ ತಿರುಗಿ ನೋಡಿದಾಗ ಬರೀ ಒಬ್ಬಂಟಿಯಾಗಿಯೇ ಜೀವನವು ಸಾಗಿಹುದು

ಹೆಚ್ಚಿನ ಓದಿಗಾಗಿ

ಬದಲಾಯಿಸಿ

ಬಾಹ್ಯ ಕೊಂಡಿಗಳು

ಬದಲಾಯಿಸಿ
"https://kn.wikipedia.org/w/index.php?title=ಕಲೆ&oldid=1194670" ಇಂದ ಪಡೆಯಲ್ಪಟ್ಟಿದೆ