ಮಾತೆ ಮಹಾದೇವಿ: (ಮಾರ್ಚ್ ೧೩, ೧೯೪೬-ಮಾರ್ಚ್ ೧೪, ೨೦೧೯) ಗುರು ಲಿಂಗಾನಂದರವರಿಂದ ಪ್ರಭಾವಿತರಾಗಿ, ಕಿರಿಯ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿ, ಎಂದು ತಮ್ಮ ಭಕ್ತರಿಂದ ಗುರುತಿಸಲ್ಪಡುವ ಮಾತೆ ಮಹಾದೇವಿ, ಉತ್ತಮ ವಾಗ್ಮಿ ಮತ್ತು ಸಾಹಿತಿಗಳಾಗಿದ್ದಾರೆ.

ಕೂಡಲ ಸಂಗಮದಲ್ಲಿ ಹಾಗೂ ಬಸವ ಕಲ್ಯಾಣದಲ್ಲಿ ಶರಣ ಧರ್ಮ ಪ್ರಚಾರಕ್ಕಾಗಿ ಶರಣ ಸಮ್ಮೇಳನವನ್ನು ಪ್ರತಿ ವರ್ಷ ನಡೆಸುತ್ತಿದ್ದಾರೆ.

ಆಧ್ಯಾತ್ಮ ಸಾಗರದ ಅನರ್ಘ್ಯ ರತ್ನ ಪರಮ ಪೂಜ್ಯ ಮಾತೆ ಮಹಾದೇವಿಯವರ (ಬಸವಾತ್ಮಜೆಯವರ ) ಬದುಕಿನ ಒಂದು ನೋಟ.


ಪರಮ ಪೂಜ್ಯ ಮಾತಾಜಿಯವರು ಬಾಲ್ಯದಿಂದಲೂ ಆಧ್ಯಾತ್ಮದ ಕಡೆ ತುಂಬ ಒಲವನ್ನು ಇಟ್ಟುಕೊಂಡಿದ್ದವರು, ಬಾಲ್ಯದಲ್ಲೇ ಸುಮಾರು 50೦ಕ್ಕೂ ಹೆಚ್ಚು ಪುಸ್ತಕಗಳನ್ನ ಓದಿ ಮುಗಿಸಿದ ಮಹಾನ್ ಚೇತನ.  ಅವರ ಪೂರ್ವಾಶ್ರಮದ (ರತ್ನ) ಹೆಸರೇ ಹೇಳುವಂತೆ ಅವರು ಬಸವ ಧರ್ಮಕ್ಕೆ ಸಿಕ್ಕ "ಅನರ್ಘ್ಯ ರತ್ನ"ವೆ ಸರಿ, ಕಿರಿದಾದ ವಯಸ್ಸಿನಲ್ಲಿಯೆ ತಮ್ಮನ್ನು ತಾವು ಧರ್ಮಕ್ಕೆ ಅರ್ಪಿಸಿಕೊಳ್ಳಬೆಕೆಂಬ ಉದ್ದೇಶದಿಂದ ಕಾಯುತಿದ್ದಾಗ ಅವರಿಗೆ ಸಿಕ್ಕಿದ್ದು "ಪರಮ ಪೂಜ್ಯ ಪ್ರವಚನ ಪರುಷ "ಲಿಂಗಾನಂದ ಮಹಾ ಸ್ವಾಮಿಗಳು" ಲಿಂಗಾನಂದ ಮಹಾಸ್ವಾಮಿಗಳ ಪ್ರವಚನದಿಂದ ಪ್ರಭಾವಿತರಾದ ರತ್ನ(ಮಾತಾಜಿಯವರು) ತಮ್ಮನ್ನು ತಾವು ಧರ್ಮಕ್ಕೆ ಅರ್ಪಿಸಿಕೊಳ್ಳುವ ಉದ್ದೇಶದಿಂದ 19 ಆಗಸ್ಟ್ 1965ರಂದು ತನ್ನ ತನವನ್ನು  ಬಿಟ್ಟು ಧರ್ಮ ಪ್ರಚಾರಕ್ಕೆ ಮುಂದಿನ ಜೀವನವನ್ನು ಅರ್ಪಿಸುತ್ತಾರೆ. 21 ಅಗಸ್ಟ 1965ರಂದು ಪೂಜ್ಯ ಲಿಂಗಾನಂದ ಮಹಾಸ್ವಾಮಿಗಳಿಂದ ಇಷ್ಟಲಿಂಗ ದಿಕ್ಷೆಯನ್ನು ಪಡೆದು ಕೊಳ್ಳುತ್ತಾರೆ. ಆದರೆ ಅವರ  ಮನಸ್ಸಿಗೆ ಸಮಾಧಾನವಿರುವುದಿಲ್ಲ. ತಮ್ಮನ್ನು ತಾವು ತ್ಯಾಗ ಜೀವನಕ್ಕೆ ಅರ್ಪಿಸಿಕೊಂಡು ಬಸವಾದಿ ಶರಣರ ತತ್ವಗಳನ್ನು ಜಗತ್ತಿಗೆ ಬಿತ್ತಿ ಬೆಳೆಸುವ ಉದ್ದೇಶದಿಂದ 5-4-1966ರಂದು ರತ್ನ ಅನರ್ಘ್ಯ ರತ್ನವಾಗಿ ಲಿಂಗಾಯತರ ಆಶಾಕಿರಣವಾಗಿ ತಮ್ಮ ಇಚ್ಛೆಯಂತೆ ಜಂಗಮ ದಿಕ್ಷೆ ಪಡೆದುಕೊಳ್ಳುತ್ತಾರೆ. ಅಲ್ಲಿಂದ ನೆರವಾಗಿ ಋಷಿಕೇಶಕ್ಕೆ ಬಂದ ಪರಮ ಪೂಜ್ಯ ಮಾತಾಜಿಯವರು 'ಗಂಗಾ ತರಂಗ' ಪುಸ್ತಕ ರಚನೆ ಮಾಡುತ್ತಾರೆ.


೨೦೦೨ರಲ್ಲಿ ಬಸವ ಕಲ್ಯಾಣದಲ್ಲಿ ಅಲ್ಲಮಪ್ರಭು ಶೂನ್ಯಪೀಠವನ್ನು ಸ್ಥಾಪಿಸಿ 12ನೇ ಶತಮಾನದ ಶೂನ್ಯಪೀಠ ಪರಂಪರೆಯನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ; ಮಾತ್ರವಲ್ಲ ಬಸವ ಕಲ್ಯಾಣದಲ್ಲಿ 108 ಅಡಿ ವಿಶ್ವಗುರು ಬಸವಣ್ಣನವರ ಮೂತಿ೯ಯನ್ನು ಸಹ ಸ್ಥಾಪಿಸಿದ್ದಾರೆ. ೨೦೦೭ರಲ್ಲಿ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಅಳತ್ ಗ್ರಾಮದಲ್ಲಿರುವ ಅಲ್ಲಮ ಗಿರಿಯಲ್ಲಿ ಅಲ್ಲಮಪ್ರಭು ಯೋಗಪೀಠವನ್ನು ಸ್ಥಾಪಿಸಿದ್ದಾರೆ. ೨೦೦೬ರಲ್ಲಿ ರಾಷ್ಟ್ರದ ರಾಜಧಾನಿ ನವ ದೆಹಲಿಯಲ್ಲಿ ಬಸವ ಧರ್ಮ ಪೀಠದ ಶಾಖೆಯನ್ನು ತೆರೆದು ಬಸವ ಮಂಟಪವನ್ನು ಸ್ಥಾಪಿಸಿದ್ಧಾರೆ. 

ಮರಣ

ಮಾತೆ ಮಹಾದೇವಿ ಅವರು ಮಾರ್ಚ್ ೧೪, ೨೦೧೯ರಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಮರಣ ಹೊಂದಿದರು.