ಕೃಷಿ ವಿಶ್ವವಿದ್ಯಾಲಯ, ಧಾರವಾಡ
ಕೃಷಿ ವಿಶ್ವವಿದ್ಯಾಲಯವು ಧಾರವಾಡ ೧೯೮೬ರಲ್ಲಿ ಸ್ಥಾಪನೆಯಾಗಿದೆ.ಕರ್ನಾಟಕದಲ್ಲಿರುವ ಕೃಷಿ ವಿಶ್ವವಿದ್ಯಾಲಯಗಳಲ್ಲೊಂದು. ಉತ್ತರ ಕರ್ನಾಟಕದ ಭಾಗದಲ್ಲಿ ಒಂದು ಕೃಷಿ ವಿಶ್ವವಿದ್ಯಾಲಯವನ್ನು ಪ್ರತ್ಯೇಕವಾಗಿ ಸ್ಥಾಪಿಸುವ ಅಗತ್ಯವನ್ನು ಮನಗಂಡು ರಾಜ್ಯ ಸರ್ಕಾರ 1986ರಲ್ಲಿ ಧಾರವಾಡದಲ್ಲಿ ಕೃಷಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಿತು. ಈ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ಸೇರುತ್ತವೆ.[೧]
ಕೃಷಿ ವಿಶ್ವವಿದ್ಯಾಲಯ, ಧಾರವಾಡ | |
---|---|
ಸ್ಥಾಪನೆ | ಅಕ್ಟೋಬರ್ ೧, ೧೯೮೬ |
ಪ್ರಕಾರ | ಸಾರ್ವಜನಿಕ |
ಕುಲಪತಿಗಳು | ಡಾ. ಡಿ.ಪಿ. ಬಿರಾದರ |
ಆವರಣ | ಗ್ರಾಮಾಂತರ |
ಅಧ್ಯಯನ ಕೇಂದ್ರ
ಬದಲಾಯಿಸಿಈ ವಿಶ್ವವಿದ್ಯಾಲಯ ಸ್ನಾತಕೋತ್ತರ ಪದವಿ ಅಧ್ಯಯನ ಕೇಂದ್ರಗಳನ್ನೂ ಕಾಲೇಜುಗಳನ್ನೂ ಹೊಂದಿದೆ. ಒಟ್ಟು ಏಳು ಶೈಕ್ಷಣಿಕ ಕೇಂದ್ರಗಳಲ್ಲಿರುವ ಒಂಬತ್ತು ಕಾಲೇಜುಗಳಲ್ಲಿ ಸ್ನಾತಕ ಬೋಧನಾ ಚಟುವಟಿಕೆಗಳು ನಡೆಯುತ್ತಿವೆ. ಧಾರವಾಡದಲ್ಲಿ ಕೃಷಿ, ಕೃಷಿ ಮಾರಾಟ ಮತ್ತು ಸಹಕಾರ ಹಾಗೂ ಗ್ರಾಮೀಣ ಗೃಹ ವಿe್ಞÁನ ಪದವಿಗಳಿಗೆ ಶಿಕ್ಷಣ ನೀಡಲಾಗುತ್ತಿದೆ. ರಾಯಚೂರು ಕೇಂದ್ರದಲ್ಲಿ ಕೃಷಿ ಮತ್ತು ಕೃಷಿ ಎಂಜಿನಿಯಂರಿಂಗ್; ಬೀದರ್‍ನಲ್ಲಿ ಪಶುವೈದ್ಯಕೀಯ, ಬಿಜಾಪುರ ಮತ್ತು ಬಿsೀಮರಾಯನ ಗುಡಿಯಲ್ಲಿ ಕೃಷಿ; ಅರಭಾವಿಯಲ್ಲಿ ತೋಟಗಾರಿಕೆ, ಸಿರ್ಸಿಯಲ್ಲಿ ಅರಣ್ಯವಿಜ್ಞಾನ ಪದವಿಗಳಿಗೆ ಶಿಕ್ಷಣ ಸೌಲಭ್ಯವಿದೆ. ಸ್ನಾತಕೋತ್ತರ ಪದವಿ ಕೇಂದ್ರಗಳು ಧಾರವಾಡ, ರಾಯಚೂರು, ಸಿರ್ಸಿ, ಬೀದರ್ ಮತ್ತು ಅರಭಾವಿಗಳಲ್ಲಿವೆ. ಕೃಷಿ ವಿಶ್ವವಿದ್ಯಾಲಯ ಕೃಷಿ, ಪಶುವಿe್ಞÁನಗಳ ಶಿಕ್ಷಣ ನಿಕಾಯಗಳನ್ನು ಹೊಂದಿದೆ. ಅಧ್ಯಯನ ಮಂಡಲಿಗಳು ಮತ್ತು ಶೈಕ್ಷಣಿಕ ಪರಿಷತ್ತುಗಳಿವೆ. ವಿಶ್ವವಿದ್ಯಾಲಯದಲ್ಲಿ ಒಟ್ಟು 2,234 ವಿದ್ಯಾರ್ಥಿಗಳು ವಿವಿಧ ಸ್ನಾತಕ, ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿಗಳಿಗಾಗಿ ಅಭ್ಯಾಸ ಮಾಡುತ್ತಿದ್ದಾರೆ (2003). ವಿಶ್ವವಿದ್ಯಾಲಯ ವಿವಿಧ ಕೃಷಿ ವಲಯಗಳಲ್ಲಿ ಒಟ್ಟು 33 ಸಂಶೋಧನ ಕೇಂದ್ರಗಳನ್ನು ನಡೆಸುತ್ತಿದೆ. ಅವು ಅಂಕೋಲ, ಅಣ್ಣಿಗೇರಿ, ಅರಭಾವಿ, ಬಾಗಲಕೋಟೆ, ಬೈಲಹೊಂಗಲ, ಬೆಳಗಾಂವಿ, ಬೆಳವಟಗಿ, ಬಿsೀಮರಾಯನ ಗುಡಿ, ಬೀದರ್, ಬಿಜಾಪುರ, ಜೆನವಾಡಾ, ದೆವಣಿ, ಎಂ.ಆರ್.ಎಸ್. ಧಾರವಾಡ -5, ಎ.ಆರ್.ಎಸ್. ಧಾರವಾಡ -7, ಗದಗ, ಗಂಗಾವತಿ, ಗುಲ್ಬರ್ಗಾ, ಹಗರಿ, ಹನುಮನಹಟ್ಟಿ, ಕವಡಿಮಟ್ಟಿ, ಕಲ್ಲೋಳಿ, ಮಾಲನೂರ, ಮುಂಡಗೋಡ, ಮುಗದ, ನಿಪ್ಪಾಣಿ, ಪ್ರಭುನಗರ, ರಾಯಚೂರು, ಸಿರ್ಸಿ (ಬತ್ತ), ಸಿರ್ಸಿ (ಮೆಣಸು), ಸಿರಗುಪ್ಪ, ಸಂಕೇಶ್ವರ, ದೇವಿಹೊಸೂರು, ಅಲಮೇಲ್. ಹೊಸದಾಗಿ ಜಾರಿಗೆ ಬಂದ ರಾಷ್ಟ್ರೀಯ ಕೃಷಿ ತಾಂತ್ರಿಕ ಯೋಜನೆಯಡಿ 60 ಸಂಶೋಧನ ಯೋಜನೆಗಳು ಆರಂಭವಾಗಿವೆ. ಇವುಗಳ ಅಂದಾಜು ವಿನಿಯೋಗ 11.63 ಕೋಟಿ ರೂಪಾಯಿ.[೨]
ವಿಶ್ವವಿದ್ಯಾಲಯದ ಸಂಶೋಧನೆ
ಬದಲಾಯಿಸಿವಿಶ್ವವಿದ್ಯಾಲಯದ ಸಂಶೋಧನೆ, ಪ್ರಯೋಗ ಮತ್ತು ಪರಿಶೀಲನೆಯ ಪರಿಣಾಮವಾಗಿ 15 ಸಂಕರಣ ತಳಿಗಳನ್ನೂ 87 ತಳಿಗಳನ್ನು ಅಭಿವೃದ್ಧಿಪಡಿಸಿ ಬಿಡುಗಡೆಗೊಳಿಸಲಾಗಿದೆ. ಇದರಲ್ಲಿ ಜೋಳ, ಬತ್ತ, ಗೋದಿ, ಸೋಯಬೀನ್, ಸೇಂಗ, ಸೂರ್ಯಕಾಂತಿ, ಹಸುರು ಮೆಣಸಿನಕಾಯಿ, ಫ್ರೆಂಚ್ ಬೀನ್ ಮತ್ತು ಕಬ್ಬು ಸೇರಿವೆ. ವಿವಿಧ ಬೆಳೆ ರೋಗಗಳ ನಿಯಂತ್ರಣಕ್ಕೂ ಆದ್ಯತೆ ನೀಡಲಾಗಿದೆ. ವಿಶ್ವವಿದ್ಯಾಲಯವು ವಿಸ್ತರಣ ನಿರ್ದೇಶನಾಲಯವಿದೆ. ಅದರ ಮುಖ್ಯ ಕಾರ್ಯಗಳೆಂದರೆ ತಾಂತ್ರಿಕ ವರ್ಗಾವಣೆ, ಸಿಬ್ಬಂದಿ ತರಬೇತಿ, ಪ್ರಕಟಣೆ, ವಿಸ್ತರಣಾ ಶಿಕ್ಷಣ, ಸಂಶೋಧನ ಕೇಂದ್ರಗಳು ಮತ್ತು ರೈತರ ನಡುವೆ ಸಂಪರ್ಕಸೇವೆ ಏರ್ಪಡಿಸುವುದು. ಇದಕ್ಕಾಗಿ ವಸ್ತುಪ್ರದರ್ಶನ, ಪ್ರಾತ್ಯಕ್ಷಿಕೆ, ಸುದ್ದಿ ಮಾಧ್ಯಮಗಳು ಮತ್ತು ಕೃಷಿ ಮೇಳಗಳನ್ನು ಸಾಧನಗಳಾಗಿ ಬಳಸಿಕೊಳ್ಳಲಾಗಿದೆ. ರೈತ ಮಹಿಳೆಯರಲ್ಲಿ ಕೃಷಿ ಕುರಿತ ಹೊಸ ಅವಿಷ್ಕಾರಗಳ ಬಗ್ಗೆ ಅರಿವುಂಟುಮಾಡಲು ಕಾಳಜಿ ವಹಿಸಲಾಗುತ್ತಿದೆ. ಕೃಷಿ ವಿಶ್ವವಿದ್ಯಾಲಯ ಅತ್ಯುತ್ತಮ ಕಾರ್ಯನಿರ್ವಹಣೆಗಾಗಿ 1995-2000 ಅವದಿsಗೆ ಸರದಾರ್ ಪಟೇಲ್ ಪ್ರಶಸ್ತಿ ಪಡೆದಿದೆ. ಇಲ್ಲಿನ ಹಲವು ವಿe್ಞÁನಿಗಳು ಜವಹರಲಾಲ್ ನೆಹರೂ ಪ್ರಶಸ್ತಿ, ಸರ್.ಸಿವಿ.ರಾಮನ್ ಪ್ರಶಸ್ತಿ ಸೇರಿದಂತೆ ವಿವಿಧ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಈ ವಿಶ್ವವಿದ್ಯಾಲಯದಲ್ಲಿ ಇಲ್ಲಿಯವರೆಗೆ ಜಿ.ವಿ.ಗೌಡ (1986-89), ಆರ್.ಕೆ.ಹೆಗಡೆ (1989-91), ಎನ್.ಎಲ್.ಮೌರ್ಯ (1991), ಪಿ.ವಿ.ರೈ (1991-94), ಎಂ.ಮಹದೇವಪ್ಪ (1994-2000) ಮತ್ತು ಎಸ್.ಎ.ಪಾಟೀಲ (2000ದಿಂದ) ಇವರು ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ. *
ಕೆಂಗಲ್ ಹನುಮಂತಯ್ಯ
ಬದಲಾಯಿಸಿಕೃಷಿ ಕಾಲೇಜಿಗೆ ಒಂದು ಹೊಸ ವಿಸ್ತಾರವಾದ ಕಟ್ಟಡದ ಆವಶ್ಯಕತೆಯನ್ನು ಮನಗಂಡಿದ್ದ ಆಗಿನ ಮೈಸೂರು ರಾಜ್ಯದ ಮುಖ್ಯ ಮಂತ್ರಿಗಳಾಗಿದ್ದ ಕೆಂಗಲ್ ಹನುಮಂತಯ್ಯನವರು ಮೈಸೂರು ಕೃಷಿ ಕಾಲೇಜಿನ ಶಂಖುಸ್ಥಾಪನೆ ನೆರವೇರಿಸಿದ್ದರು (1956). ಅನಂತರ 1959ರಲ್ಲಿ ಬೆಂಗಳೂರು ನಗರದ ಬಳ್ಳಾರಿ ರಸ್ತೆಯಲ್ಲಿರುವ ಹೊಸ ಕಟ್ಟಡಕ್ಕೆ ಕೃಷಿ ಕಾಲೇಜು ವರ್ಗಾವಣೆಗೊಂಡಿತು.ರಾಜ್ಯ ವಿಧಾನಮಂಡಲದಲ್ಲಿ ವಿಶ್ವವಿದ್ಯಾನಿಲಯ ಅದಿsನಿಯಮ (1963ರ ಅದಿsನಿಯಮ 22) ಅಂಗೀಕೃತವಾದ ಅನಂತರ 1964ರಲ್ಲಿ ಕೃಷಿ ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂತು. ವಿಶ್ವವಿದ್ಯಾಲಯದ ಉದ್ಘಾಟನೆಯನ್ನು ಆಗಿನ ರಾಷ್ಟ್ರಪತಿಗಳಾದ ಜಾಕೀರ್ ಹುಸೇನ್ ಅವರು ವಿಧ್ಯುಕ್ತವಾಗಿ ನೆರವೇರಿಸಿದರು (1965 ಅಕ್ಟೋಬರ್ 1). ಕೆ.ಸಿ.ನಾಯಕ್ ಕೃಷಿ ವಿಶ್ವವಿದ್ಯಾಲಯದ ಮೊದಲ ಕುಲಪತಿ (1964-73), ಕೃಷಿ ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ಎಂ.ಪುಟ್ಟರುದ್ರಯ್ಯ ಅವರು ಮೊದಲ ಶಿಕ್ಷಣ ನಿರ್ದೇಶಕರು. ಅನಂತರ ಎಚ್.ಆರ್.ಅರಕೆರೆ (1973-79), ಆರ್.ದ್ವಾರಕೀನಾಥ (1979-81), ಎನ್.ಜಿ.ಪೆರೂರ್ (1981-85), ಎಸ್.ವಿ.ಪಾಟೀಲ್ (1985-88), ಆರ್.ವಿ.ರಾಮಕೃಷ್ಣ (1988), ಕೆ.ಕೃಷ್ಣಮೂರ್ತಿ (1989-92), ಕೆ.ವಿ.ದೇವರಾಜ್ (1992-95), ಜಿ.ಕೆ.ವೀರೇಶ್ (1995-98), ಎಸ್.ಬಿಸಲಯ್ಯ (1998-2001) ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಈಗಿನ ಕುಲಪತಿ ಎ.ಎಂ.ಕೃಷ್ಣಪ್ಪ, (2001).
ಧಾರವಾಡ ಕೃಷಿ ವಿಶ್ವವಿದ್ಯಾಲಯ
ಬದಲಾಯಿಸಿ1986ರಲ್ಲಿ ಈ ವಿಶ್ವವಿದ್ಯಾಲಯವನ್ನು ವಿಭಜಿಸಿ ಧಾರವಾಡದಲ್ಲಿ ಮತ್ತೊಂದು ಕೃಷಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು. ಮೊದಲಿಗೆ ಕೃಷಿ ವಿe್ಞÁನ ಬೋಧನೆಯೊಂದಿಗೆ ಪ್ರಾರಂಭವಾದ ಕೃಷಿ ವಿಶ್ವವಿದ್ಯಾಲಯ ಪ್ರಸ್ತುತ 9 ವಿಷಯಗಳಲ್ಲಿ ಸ್ನಾತಕ ಪದವಿಗಳನ್ನೂ 47 ವಿಷಯಗಳಲ್ಲಿ ಸ್ನಾತಕೋತ್ತರ ಪದವಿಗಳನ್ನೂ 34 ವಿಷಯಗಳಲ್ಲಿ ಪಿಎಚ್.ಡಿ. ಪದವಿಗಳನ್ನೂ ಪ್ರದಾನ ಮಾಡುತ್ತಿದೆ. ಕರ್ನಾಟಕದ ಕೃಷಿ ಕಾಲೇಜುಗಳ ವಿವರ ಹೀಗಿದೆ: ಬೆಂಗಳೂರಿನ ಗಾಂದಿs ಕೃಷಿ ವಿe್ಞÁನ ಕೇಂದ್ರ, ಮಂಡ್ಯ; ಶಿವಮೊಗ್ಗ ಹಾಗೂ ಹಾಸನಗಳಲ್ಲಿ ಕೃಷಿ ಕಾಲೇಜುಗಳು; ಮಂಗಳೂರಿನಲ್ಲಿ ಮೀನುಗಾರಿಕೆ ಕಾಲೇಜು; ಮೂಡಿಗೆರೆಯಲ್ಲಿ ತೋಟಗಾರಿಕೆ ಕಾಲೇಜು, ಪೆÇನ್ನಂಪೇಟೆಯಲ್ಲಿ ಅರಣ್ಯಶಾಸ್ತ್ರ ಕಾಲೇಜು; ಚಿಂತಾಮಣಿಯಲ್ಲಿ ರೇಷ್ಮೆ.ಕೃಷಿ ಕಾಲೇಜು; ಬೆಂಗಳೂರಿನ ಹೆಬ್ಬಾಳ ಆವರಣದಲ್ಲಿ ಪಶುವೈದ್ಯಕೀಯ ಹಾಗೂ ಹೈನು ತಂತ್ರe್ಞÁನ ಕಾಲೇಜು. ಬೆಂಗಳೂರಿನ ಗಾಂದಿs ಕೃಷಿ ವಿe್ಞÁನ ಕೆಂದ್ರದಲ್ಲಿ ಕೃಷಿ ಮಾರುಕಟ್ಟೆ ಮತ್ತು ಸಹಕಾರ ಹಾಗೂ ಕೃಷಿ ಇಂಜಿನಿಯರಿಂಗ್ ಸ್ನಾತಕ ಪದವಿಗಳನ್ನು ಬೋದಿsಸಲಾಗುತ್ತಿದೆ. ಈ ಎಲ್ಲ ಕಾಲೇಜುಗಳಲ್ಲಿ ಸು.2,343 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ವಿಶ್ವವಿದ್ಯಾನಿಲಯದ ಪ್ರಮುಖ ಅಧ್ಯಯನ ವಿಭಾಗಗಳಿವು
ಬದಲಾಯಿಸಿಕೃಷಿ ಜೀವತಂತ್ರe್ಞÁನ, ಕೃಷಿ ಅರ್ಥಶಾಸ್ತ್ರ, ಕೃಷಿ ವಿಸ್ತರಣೆ, ಕೃಷಿ ಸೂಕ್ಷ್ಮ ಜೀವಿವಿe್ಞÁನ, ಬೇಸಾಯವಿe್ಞÁನ, ಆನುವಂಶಿಕತೆ ಹಾಗೂ ಸಸ್ಯಸಂವರ್ಧನೆ, ಬೆಳೆ ಶರೀರಕ್ರಿಯಾಶಾಸ್ತ್ರ, ಸಸ್ಯರೋಗಶಾಸ್ತ್ರ, ಕೃಷಿ ಕೀಟವಿe್ಞÁನ, ಕುಕ್ಕುಟ ವಿe್ಞÁನ, ಪಶುವೈದ್ಯಕೀಯ, ಅಂಗಶಾಸ್ತ್ರ, ಪಶು ಆನುವಂಶಿಕತೆ ಮತ್ತು ಪಶುಸಂವರ್ಧನೆ, ಹೈನುತಂತ್ರe್ಞÁನ, ಮೀನು ಉತ್ಪಾದನೆ ಹಾಗೂ ನಿರ್ವಹಣೆ.ಪ್ರಾದೇಶಿಕ ಭಾಷೆ ಶಿಕ್ಷಣಮಾಧ್ಯಮವಾಗಿರಬೇಕೆಂಬ ಸಂಸತ್ತಿನ ತೀರ್ಮಾನದಂತೆ ಕೃಷಿ ವಿಶ್ವವಿದ್ಯಾಲಯದಲ್ಲಿ 1970ರಲ್ಲಿ ಪ್ರಾರಂಬಿsಸಲಾದ ಕನ್ನಡ ಅಧ್ಯಯನ ವಿಭಾಗ ಕನ್ನಡವನ್ನು ಕೃಷಿ ಶಿಕ್ಷಣ ಮಾಧ್ಯಮಕ್ಕೆ ಅನುವಾಗುವಂತೆ ಮೊದಲ ಹೆಜ್ಜೆಯಾಗಿ ಕೃಷಿವಿe್ಞÁನದ ವಿವಿಧ ವಿಷಯಗಳಲ್ಲಿ ಕನ್ನಡದಲ್ಲಿ ಪಠ್ಯಪುಸ್ತಕಗಳನ್ನು ನಿರ್ಮಿಸುವ ಕಾರ್ಯ ಕೈಗೊಂಡಿದೆ. ಈ ವಿಭಾಗ ಇದುವರೆಗೆ 230ಕ್ಕೂ ಹೆಚ್ಚು ಕನ್ನಡ ಪುಸ್ತಕಗಳನ್ನು ಪ್ರಕಟಿಸಿದೆ.ವಿಶ್ವವಿದ್ಯಾಲಯ ಕರ್ನಾಟಕ ರಾಜ್ಯವನ್ನು ಹವಾಮಾನದ ಆಧಾರದ ಮೇಲೆ ವಿವಿಧ ಕೃಷಿ ಹವಾಮಾನ ವಲಯಗಳೆಂದು ವಿಂಗಡಿಸಿ ಆಯಾ ವಲಯಗಳಲ್ಲಿನ ಬೆಳೆಗಳಿಗನುಸಾರವಾಗಿ ಸಂಶೋಧನೆ ನಡೆಸಲು 23 ಕೃಷಿ ಹಾಗೂ ಪ್ರಾದೇಶಿಕ ಸಂಶೋಧನ ಕೇಂದ್ರಗಳನ್ನು ಸ್ಥಾಪಿಸಿದೆ.
ಕೃಷಿ ವಿಶ್ವವಿದ್ಯಾಲಯ ಸಂಶೋಧನ
ಬದಲಾಯಿಸಿಕೃಷಿ ವಿಶ್ವವಿದ್ಯಾಲಯ ಸಂಶೋಧನ ಪ್ರಕಟಣೆಗಳನ್ನಾಧರಿಸಿ ಅಖಿಲ ಭಾರತ ಶ್ರೇಣೀಕರಣದಲ್ಲಿ ಎಲ್ಲಾ ಕೃಷಿ ಸಂಸ್ಥೆ ಹಾಗೂ ವಿಶ್ವವಿದ್ಯಾನಿಲಯಗಳಲ್ಲಿ 4ನೆಯ ಸ್ಥಾನವನ್ನೂ ಎಲ್ಲ ರಾಜ್ಯ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಮೂರನೆಯ ಸ್ಥಾನವನ್ನೂ ಗಳಿಸಿದೆ. ಮಂಗಳೂರಿನ ಮೀನುಗಾರಿಕೆ ಕಾಲೇಜು ಎಲ್ಲ ಸಂಸ್ಥೆಗಳಲ್ಲೂ 3ನೆಯ ಸ್ಥಾನವನ್ನೂ ಭಾರತದ ಎಲ್ಲ ವಿಶ್ವವಿದ್ಯಾನಿಲಯಗಳಲ್ಲಿ ಮೊದಲನೆಯ ಸ್ಥಾನವನ್ನೂ ಗಳಿಸಿದೆ. ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಜೂನಿಯರ್ ಫೆಲೋಷಿಪ್ ಗಳಿಕೆಯಲ್ಲಿ ಈ ವಿಶ್ವವಿದ್ಯಾಲಯ 4ನೆಯ ಸ್ಥಾನವನ್ನು ಪಡೆದಿದೆ. ಜಲಾನಯನ ನಿರ್ವಹಣೆಯಲ್ಲಿ ಸತತವಾಗಿ ಎರಡು ಬಾರಿ ರಾಷ್ಟ್ರೀಯ ಪ್ರಶಸ್ತಿ ಗಳಿಸಿದೆ. ವಿಶ್ವವಿದ್ಯಾಲಯದ ಎರಡು ವಿಭಾಗಗಳಾದ ಕೀಟವಿe್ಞÁನ ವಿಭಾಗ ಹಾಗೂ ಕೃಷಿ ಸೂಕ್ಷ್ಮ ಜೀವಿವಿe್ಞÁನ ವಿಭಾಗಗಳಿಗೆ ವಿe್ಞÁನ ಮತ್ತು ತಂತ್ರe್ಞÁನ ಇಲಾಖೆ ನೀಡುವ ಸ್ಪರ್ಧಾತ್ಮಕ ಅನÀುದಾನಗಳನ್ನು ಪಡೆದಿರುವ ಮೊತ್ತಮೊದಲ ಹಾಗೂ ಏಕೈಕ ವಿಶ್ವವಿದ್ಯಾಲಯ ಇದಾಗಿದೆ.ಭಾರತದ ಜೀವವೈವಿಧ್ಯದ ನಕ್ಷೆ ರಚಿಸಲು ಭಾರತ ಸರ್ಕಾರದ ಜೀವತಂತ್ರe್ಞÁನ ವಿಭಾಗ ವಿಶ್ವವಿದ್ಯಾಲಯವನ್ನು ಕೇಂದ್ರ ಕಾರ್ಯಸ್ಥಾನವಾಗಿ ಗುರುತಿಸಿದೆ ಹಾಗೂ ಚಿಟ್ಟೆಗಳ ಸಂಗ್ರಹಾವರಣ ಸ್ಥಾಪಿಸಲು ಸಹ ಆಯ್ಕೆ ಮಾಡಿದೆ. ಸಂಶೋಧನೆಗಾಗಿ ಕೃಷಿ ವಿe್ಞÁನಗಳಲ್ಲಿ (ಎರಡು) ಹಾಗೂ ಮೀನುಗಾರಿಕೆ ವಿe್ಞÁನವನ್ನೊಳಗೊಂಡಂತೆ ಪಶುವೈದ್ಯಕೀಯ ಮತ್ತು ಸಂಬಂದಿs ವಿe್ಞÁನಗಳಲ್ಲಿ (ಐದು) ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಈ ವಿಶ್ವಾವಿದ್ಯಾಲಯಗಳಿಸಿದೆ. (ಎನ್.ಎಸ್.ವಿ.)
ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರ
ಬದಲಾಯಿಸಿಈ ಕೇಂದ್ರ ಕರ್ನಾಟಕ ಸರ್ಕಾರದ ವ್ಯವಸಾಯ ಇಲಾಖೆಯ ಅದಿsೀನದಲ್ಲಿ 1957ರಲ್ಲಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ಪ್ರಾರಂಭವಾಯಿತು. ಮೂಡಿಗೆರೆಗೆ ಪಟ್ಟಣಕ್ಕೆ 2ಕಿಮೀ ದೂರದಲ್ಲಿ ಕಡೂರು-ಮಂಗಳೂರು ರಸ್ತೆಯಲ್ಲಿದೆ. ಕುದುರೆಗುಂಡಿ ತಿಮ್ಮಶೆಟ್ಟಿ ಎಂಬ ಕಾಪಿs ಬೆಳೆಗಾರರು ತಮ್ಮ ತೋಟದ ಭೂಮಿಯನ್ನು ಈ ಕೇಂದ್ರಕ್ಕೆ ನೀಡಿದರು. ಮಲೆನಾಡಿನ ಈ ಭಾಗದಲ್ಲಿ ಏಲಕ್ಕಿ ಬೆಳೆ ಅದಿsಕವಾಗಿದ್ದುದರಿಂದ ಆರಂಭದಲ್ಲಿ ಈ ಬೆಳೆಯ ಅಬಿsವೃದ್ಧಿಗಾಗಿ ಈ ಪ್ರಾದೇಶಿಕ ಕೇಂದ್ರವನ್ನು ಸ್ಥಾಪಿಸಲಾಯಿತು. 1965ರಲ್ಲಿ ಇದು ಹೆಬ್ಬಾಳಿನ ಕೃಷಿ ವಿಶ್ವವಿದ್ಯಾಲಯಕ್ಕೆ ಸೇರಿತು. ಏಲಕ್ಕಿ ಬೆಳೆಯುವ ಪ್ರದೇಶ ಕಡಿಮೆಯಾದಂತೆ ಇದರ ಕಾರ್ಯವ್ಯಾಪ್ತಿ ಇತರ ಬೆಳೆಗಳಿಗೂ ವಿಸ್ತರಿಸಿತು.ಏಲಕ್ಕಿ ಬೆಳೆಗೆ ವಿಶೇಷ ಪ್ರಾಶಸ್ತ್ಯ ನೀಡಿ ಸಂಶೋಧನೆ ನಡೆಸಿದ್ದರ ಫಲವಾಗಿ ಅದಿsಕ ಇಳುವರಿ ಕೊಡುವ ಮೂಡಿಗೆರೆ- 1 ಮತ್ತು ಮೂಡಿಗೆರೆ- 2 ಏಲಕ್ಕಿ ತಳಿಗಳನ್ನು ರೂಪಿಸಿ ಬಿಡುಗಡೆಗೊಳಿಸಲಾಗಿದೆ. ಬತ್ತ, ಕರಿಮೆಣಸು, ಶುಂಠಿ, ಅಡಕೆ ಮತ್ತು ಇತರ ತೋಟದ ಬೆಳೆಗಳ ಬಗ್ಗೆಯೂ ಸಂಶೋಧನೆಗಳು ನಡೆಯುತ್ತಿವೆ. ಅದಿsಕ ಇಳುವರಿ ಮತ್ತು ಬೆಂಕಿರೋಗ ನಿರೋಧಕ ಬತ್ತದ ತಳಿಗಳಾದ ಐ.ಇ.ಟಿ. 7191, ಕೆ.ಎಚ್.ಪಿ. 2, ಹೇಮಾವತಿ, ಕೆ.ಎಚ್.ಆರ್.ಎಸ್. 26 ತಳಿಗಳನ್ನು ಸಾಗುವಳಿಗೆ ಬಿಡುಗಡೆ ಮಾಡಲಾಗಿದೆ. ಬತ್ತದ ಬೇಸಗೆ ಹಂಗಾಮಿಗೆ ಸೂಕ್ತವಾದ ರಾಶಿ, ಸಿ.ಟಿ.ಎಚ್.1, ಹಾಗೂ ಸಿ.ಟಿ.ಎಚ್.3 ತಳಿಗಳನ್ನು ರೂಪಿಸಿ ಬಿಡುಗಡೆ ಮಾಡಲಾಗಿದೆ. ಬೋಳಾದ ಗುಡ್ಡಗಾಡು ಪ್ರದೇಶಕ್ಕೆ ಸಪೆÇೀಟ ಮತ್ತು ಸೀಬೆ ಹಣ್ಣು ಸಾಗುವಳಿ ಸೂಕ್ತವೆಂದು ಶಿಫಾರಸು ಮಾಡಲಾಗಿದೆ.
ತೋಟಗಾರಿಕೆ ಬೆಳೆ
ಬದಲಾಯಿಸಿವಿವಿಧ ಬಗೆಯ ತೋಟಗಾರಿಕೆ ಬೆಳೆಗಳನ್ನು ಪ್ರಯೋಗಾರ್ಥವಾಗಿ ಬೆಳೆದು ಅವುಗಳ ಗುಣಸಾಮಥ್ರ್ಯಗಳನ್ನೂ ಸ್ಥಳೀಯ ಪರಿಸರಕ್ಕೆ ಅವುಗಳ ಯಥಾರ್ಥತೆಯನ್ನೂ ಕಂಡುಕೊಳ್ಳಲು ಕೆಂದ್ರ ಶ್ರಮಿಸಿದೆ. ಈ ಬೆಳೆಗಳಿಗೆ ತಗಲುವ ಕೀಟಬಾಧೆಗಳನ್ನು ಪರೀಕ್ಷಿಸಿ ಸೂಕ್ತ ಕ್ರಿಮಿನಾಶಕ ಔಷಧಗಳನ್ನು ಸಲಹೆ ಮಾಡುವ ಕಾರ್ಯಯೋಜನೆ ನಡೆದಿದೆ. ಸದ್ಯದಲ್ಲಿ ಈ ಕೇಂದ್ರದಲ್ಲಿ ಸಂಶೋಧನೆಗಾಗಿ ಬೆಳೆಯಲಾಗುತ್ತಿರುವ ಬೆಳೆ ಮತ್ತು ಅವುಗಳ ವಿಸ್ತೀರ್ಣ (ಹೆಕ್ಟೇರ್‍ಗಳಲ್ಲಿ) ಈ ಮುಂದಿನಂತಿದೆ: ಸಪೆÇೀಟ (20.70), ಸೀಬೆ (1.20), ಗೋಡಂಬಿ ಮತ್ತು ಸಪೆÇೀಟ (2.10), ಕಾಪಿs (4.04), ತೆಂಗು ಮತ್ತು ಕಾಪಿs (0.62)s, ಚೆಕ್ಕೆ (0.20), ವೆನಿಲಾ (0.20), ಅಡಕೆ (0.40), ಬತ್ತ (1.60), ತೆಂಗು ಮತ್ತು ಅಡಕೆ (0.62), ಏಲಕ್ಕಿ (2.06) ಮತ್ತು ಇತರೆ (6.85). ಕೇಂದ್ರದ ಒಟ್ಟು ವಿಸ್ತೀರ್ಣ 178.54 ಹೆಕ್ಟೇರ್.ಗುಡ್ಡಗಾಡು ಮತ್ತು ಮಲೆನಾಡು ಪ್ರದೇಶದಲ್ಲಿ ಬೆಳೆಯುವ ಬೆಳೆಗಳ ತಳಿ ಅಬಿsವೃದ್ಧಿ, ರೋಗ ನಿವಾರಣೆ ವಿಧಾನಗಳ ಆವಿಷ್ಕಾರ, ಕೃಷಿ ಅರಣ್ಯ ಮತ್ತು ಮಣ್ಣುತೇವಾಂಶ ಸಂರಕ್ಷಣೆ ಬಗ್ಗೆ ಅಧ್ಯಯನ ಮಾಡುವುದು ಈ ಕೇಂದ್ರದ ಮುಖ್ಯ ಗುರಿ. ಜೊತೆಗೆ ಈ ಕೇಂದ್ರಕ್ಕೆ ಹೊಂದಿಕೊಂಡಂತೆ ತೋಟಗಾರಿಕೆ ಕಾಲೇಜನ್ನು ಸ್ಥಾಪಿಸಲಾಗಿದೆ (1991). ಇಲ್ಲಿ ಬೋಧನೆ, ಸಂಶೋಧನೆ ಮತ್ತು ವಿಸ್ತರಣೆ ಕಾರ್ಯಗಳು ನಡೆಯುತ್ತಿವೆ. ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಕೃಷಿ ವಸ್ತು ಪ್ರದರ್ಶನ ಸೇರಿದಂತೆ ಕೃಷಿ ಮೇಳ ಏರ್ಪಡುತ್ತದೆ. ರೈತರು ಮತ್ತು ತೋಟಗಾರರ ಸಮಸ್ಯೆಗಳಿಗೆ ಸೂಕ್ತ ಸಲಹೆಗಳನ್ನು ನೀಡುವುದು, ಖುದ್ದಾಗಿ ಕ್ಷೇತ್ರಕ್ಕೆ ಭೇಟಿ ನೀಡಿ ಪರಿಹಾರ ಒದಗಿಸುವುದು ವಿಸ್ತರಣ ಕಾರ್ಯದ ಅಡಿಯಲ್ಲಿ ಬರುತ್ತದೆ. ವೆನಿಲಾ ಸೇರಿದಂತೆ ವಿವಿಧ ಲಾಭದಾಯಕ ಬೆಳೆಗಳ ಮತ್ತು ಸಸ್ಯಗಳ ಸಸಿಗಳನ್ನು ಬೆಳೆಸಿ ರೈತರಿಗೆ ಮತ್ತು ತೋಟಗಾರರಿಗೆ ಒದಗಿಸುವ ಕಾರ್ಯವೂ ವ್ಯಾಪಕವಾಗಿ ನಡೆದಿದೆ.
ಉಲ್ಲೇಖಗಳು
ಬದಲಾಯಿಸಿ- ↑ "ಆರ್ಕೈವ್ ನಕಲು". Archived from the original on 2017-05-18. Retrieved 2017-05-19.
- ↑ "ಆರ್ಕೈವ್ ನಕಲು". Archived from the original on 2020-10-18. Retrieved 2017-05-19.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |