ವರದರಾಜ ಹುಯಿಲಗೋಳರು ೧೯೧೭ ಅಗಸ್ಟ ೧೩ ರಂದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ(ತಾಯಿಯ ತಂದೆಯ ಮನೆಯಲ್ಲಿ) ಜನಿಸಿದರು. ತಂದೆ ರಾಜೇರಾವ ಹುಯಿಲಗೋಳರು ನಾಡಗೀತೆಗಾಗಿ ಖ್ಯಾತಿವೆತ್ತ ನಾರಾಯಣರಾವ ಹುಯಿಲಗೋಳರ ಸೋದರ. ತಾಯಿ ಪ್ರಸಿದ್ಧ ಸಾಹಿತಿ ಹಾಗು ವಿದ್ವಾಂಸ ರಂ.ಶ್ರೀ.ಮುಗಳಿಯವರ ಇವರ ಸೋದರಮಾವನಾದರೆ ಆಲೂರು ವೆಂಕಟರಾಯರು ಮಾವನವರು.

ಶಿಕ್ಷಣ

ಬದಲಾಯಿಸಿ

ವರದರಾಜರು ಪ್ರಾಥಮಿಕ ಶಿಕ್ಷಣವನ್ನು ಅಜ್ಜನ ಮನೆಯಾದ ಮುದ್ದೇಬಿಹಾಳದಲ್ಲಿಯೆ ಮುಗಿಸಿ , ನಂತರ ತಂದೆಯ ಊರಾದ ಗದುಗಿಗೆ ಬಂದು ಅಲ್ಲಿಯ ಮುನಿಸಿಪಲ್ ಹೈಸ್ಕೂಲಿನಲ್ಲಿ ಮೆಟ್ರಿಕ್ ಮುಗಿಸಿದರು. ಬಳಿಕ ಸಾಂಗಲಿವಿಲಿಂಗ್ಡನ್ ಕಾಲೇಜಿನಿಂದ ೧೯೪೩ರಲ್ಲಿ ಬಿ.ಏ. ಪಾಸು ಮಾಡಿ, ಹುಬ್ಬಳ್ಳಿನ್ಯೂ ಇಂಗ್ಲಿಷ್ ಸ್ಕೂಲಿನಲ್ಲಿ, ಎಮ್.ಏ. ಪದವಿ ಪಡೆದ ನಂತರ ಕೆಲ ವರ್ಷ ಹಾವೇರಿಯಲ್ಲಿಯೂ ಶಿಕ್ಷಕರಾಗಿ ಕೆಲಸ ಮಾಡಿದರು. ೧೯೪೭ರಲ್ಲಿ ಧಾರವಾಡದಲ್ಲಿ ಬಾಸೆಲ್ ಮಿಶನ್ ಹಾಯ್ಸ್ಕೂಲಿನಲ್ಲಿ ಶಿಕ್ಷಕರಾದರು. ಬಿ.ಟಿ. ಪದವಿಯನ್ನು ಪಡೆದರು. ಬಾಸೆಲ್ ಮಿಶನ್ ಜೂನಿಯರ ಕಾಲೇಜಿನ ಉಪಪ್ರಾಚಾರ್ಯರಾಗಿ ೩೦ ವರ್ಷಗಳವರೆಗೆ ಸೇವೆ ಸಲ್ಲಿಸಿ, ೧೯೭೬ ರಲ್ಲಿ ನಿವೃತ್ತರಾದರು. ಇವರ ಪತ್ನಿ ಕರ್ನಾಟಕ ಕುಲಪುರೋಹಿತರೆಂದು ಖ್ಯಾತರಾದ ಆಲೂರ ವೆಂಕಟರಾಯರ ಮಗಳು.

ಸಾಹಿತ್ಯ

ಬದಲಾಯಿಸಿ

ವರದರಾಜರು ಸಾಂಗ್ಲಿಯಲ್ಲಿ ವಿಲಿಂಗ್ಡನ್ ಕಾಲೇಜಿನಲ್ಲಿ ಓದುತ್ತಿದ್ದಾಗ, ಕಾಲೇಜಿನ ಸಾಹಿತ್ಯಾಸಕ್ತರು ಸೇರಿ ಸ್ಥಾಪಿಸಿದ ‘ ವರುಣಕುಂಜ’ ದ ಸಾಹಿತ್ಯಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಜೂನಿಯರ್ ಬಿ.ಏ. ದಲ್ಲಿರುವಾಗಲೇ, ಕನ್ನಡ ಸಾಹಿತ್ಯ ಪರಿಷತ್ತಿನವರು ಏರ್ಪಡಿಸಿದ್ದ ಇ.ಭಾಸ್ಕರರಾವ್ ದತ್ತಿ ನಿಬಂಧ ಸ್ಪರ್ಧೆಯಲ್ಲಿ ‘ಕನ್ನಡ ಸಾಹಿತ್ಯದಲ್ಲಿ ಸಣ್ಣ ಕಥೆಗಳ ಸ್ಥಾನ’ ಎಂಬ ಪ್ರಬಂಧಕ್ಕೆ ಪ್ರಥಮ ಬಹುಮಾನ ಪಡೆದರು. ಅಲ್ಲಿಂದ ಅನೇಕ ಕಥೆಗಳನ್ನು, ನಾಟಕಗಳನ್ನು,ಕಾದಂಬರಿಗಳನ್ನು,ಜೀವನ ಚರಿತ್ರೆಗಳನ್ನು, ವಿಮರ್ಶೆಗಳನ್ನು, ಅನುವಾದಗಳನ್ನು ಹಾಗು ಮಕ್ಕಳ ಸಾಹಿತ್ಯವನ್ನು ರಚಿಸಿದ್ದಾರೆ. ಅಲ್ಲದೆ ಅನೇಕ ಕೃತಿಗಳನ್ನು ಸಂಪಾದಿಸಿದ್ದಾರೆ. ಇವರ ಅತ್ಯಂತ ಮಹತ್ವದ ಕೃತಿಗಳೆಂದರೆ ಮೊದಲನೆಯದು ಇವರು ಪಿ.ಎಚ್.ಡಿ ಪದವಿಗಾಗಿ ಬರೆದ ಮಹಾಪ್ರಬಂಧ “ದುರ್ಗಸಿಂಹನ ಪಂಚತಂತ್ರ ಸಮೀಕ್ಷೆ” ; ಎರಡನೆಯದು ಕನ್ನಡಕ್ಕೆ ಕ್ರೈಸ್ತರ ಕಾಣಿಕೆ ಎನ್ನುವ ಸಂಶೋಧನಾ ಗ್ರಂಥ. ೧೯೭೬ರಲ್ಲಿ ಇಂಡಿಯಾ ಗೆಝಟಿಯರದ ಭಾಷಾಂತರ ಮಾಡುವ ಕಾರ್ಯವು ಶ್ರೀ ಹುಯಿಲಗೋಳರಿಗೆ ಒಪ್ಪಿಸಲ್ಪಟ್ಟಿತ್ತು. ಅನೇಕ ಕ್ಷೇತ್ರಗಳಲ್ಲಿ ನುರಿತ ಪಂಡಿತರನ್ನು ಕಲೆ ಹಾಕಿ ಈ ಕಾರ್ಯವನ್ನು ಯಶಸ್ವಿಗೊಳಿಸಿದರು.

ಸಾಹಿತ್ಯ ಕ್ಷೇತ್ರಗಳಲ್ಲಿ ಸುಧಾರಣೆ

ಬದಲಾಯಿಸಿ

ಸಾಹಿತ್ಯರಚನೆಯಲ್ಲದೆ, ಸಾಂಘಿಕ ಚಟುವಟಿಕಗಳಲ್ಲೂ ಹುಯಿಲಗೋಳರದು ಮಹತ್ವದ ಪರಿಶ್ರಮ. ಅಖಿಲ ಕರ್ನಾಟಕ ನಾಲ್ಕನೆಯ ಕತೆಗಾರರ ಹಾಗು ಪ್ರಬಂಧಕಾರರ ಸಮ್ಮೇಳನ, ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನ, ಬೆಳಗಾವಿಯಲ್ಲಿ ಧಾರವಾಡ-ಬೆಳಗಾವಿ ಜಿಲ್ಲಾ ಜಾನಪದ ಸಾಹಿತ್ಯ ಸಮ್ಮೇಳನ, ಮಕ್ಕಳ ಸಾಹುತ್ಯ ಸಮ್ಮೇಳನ, ಆಲೂರು ವೆಂಕಟರಾವ ಶತಮಾನೋತ್ಸವ ಇವುಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಶ್ರೇಯಸ್ಸು ಹುಯಿಲಗೋಳರಿಗಿದೆ. ೧೯೬೫-೬೯ ರಲ್ಲಿ ಧಾರವಾಡಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಯಾಗಿ ಅದರಲ್ಲಿ ಅನೇಕ ಸುಧಾರಣೆಗಳನ್ನು ತಂದಿದ್ದಾರೆ.

ವರದರಾಜ ಹುಯಿಲಗೋಳರ ಸಾಹಿತ್ಯ:

ಕಥಾಸಂಕಲನಗಳು:

  • ಫಲಸಂಚಯ,
  • ಚಂದ್ರ-ತಾರೆ,
  • ಬಾಗಿಲು ತೆರೆದಿತ್ತು,
  • ದಯಾಸಾಗರ,
  • ದೀಪವೊಂದು,
  • ವಸುಭಾಗನ ಪಂಚತಂತ್ರ ಕಥೆಗಳು,
  • ನಿನಗೊಂದು ಮಾತು

ಕಾದಂಬರಿ:

  • ಇತಿಶ್ರೀ,
  • ಕ್ರೂರ ಹಂಬಲ,

ನಾಟಕಗಳು :

  • ಬಾಡಿಗೆಯ ಮನೆ,
  • ಅಮೃತಮತಿ,
  • ದೀಪಾವಳಿ,
  • ಇದ್ದು ಜಯಿಸಬೇಕು,
  • ಕಂದನ ಕಾದುಕೊ

ಮಕ್ಕಳ ಸಾಹಿತ್ಯ:

  • ಸಾಹಸ ಜೀವಿಗಳು,
  • ಜನಪದ ಕತೆಗಳು,
  • ರಾಜೇಂದ್ರ ಪ್ರಸಾದ,
  • ಲೋಕಮಾನ್ಯ ಟಿಳಕ,
  • ಹೋರಾಟದ ವೀರರು,
  • ದೇಶಪಾಂಡೆ ಗಂಗಾಧರರಾವ,
  • ಆಲೂರ ವೆಂಕಟರಾವ,
  • ಹುಯಿಲಗೋಳ ನಾರಾಯಣರಾಯರು,
  • ಆರ್. ಜೆ. ಭಂಡಾರಕರ,
  • ಫರ್ಡಿನೆಂಡ ಕಿಟೆಲ್

ಜೀವನ ಚರಿತ್ರೆ:

  • ತಿರುಳ್ಗನ್ನಡದ ತಿರುಕ,
  • ಸಾಹಿತಿಗಳೊಡನೆ ಸರಸ,
  • ಡಾ. ಶಂ.ಬಾ.ಜೋಶಿ-೯೫

ಅನುವಾದಿತ ಕಾದಂಬರಿ:

  • ಅಂದಿನ ವಸಂತ ತಲೆಕೆಳಗಾಗಿ ನಿಂತ

ವಿಮರ್ಶೆ:

  • ಕನ್ನಡ ಸಾಹಿತ್ಯದಲ್ಲಿ ಲಲಿತ ಪ್ರಬಂಧಗಳು,
  • ಕನ್ನಡಕ್ಕೆ ಕ್ರೈಸ್ತರ ಕಾಣಿಕೆ, ಪಂಚತಂತ್ರ ಕಥೆಗಳು,
  • ಕನ್ನಡಕ್ಕೆ ವಿದೇಶೀಯರ ಸೇವೆ.

ಮಹಾಪ್ರಬಂಧ:

  • ದುರ್ಗಸಿಂಹನ ಪಂಚತಂತ್ರ ಸಮೀಕ್ಷೆ

ಇಂಗ್ಲೀಷಿನಲ್ಲಿ:

  • Panchatantra of Vasubhaga - A critical study