ಪಾಟೀಲ ಪುಟ್ಟಪ್ಪ
ಪಾಟೀಲ ಪುಟ್ಟಪ್ಪ (೧೯೨೧ ಜನವರಿ ೧೪ - ಮಾರ್ಚ್ ೧೬, ೨೦೨೦)[೨][೩] ಭಾರತೀಯ ಬರಹಗಾರ, ಅನುಭವಿ ಪತ್ರಕರ್ತ ಮತ್ತು ಹುಬ್ಬಳ್ಳಿ ಮೂಲದ ಕಾರ್ಯಕರ್ತರಾಗಿದ್ದರು. ಕನ್ನಡ ದಿನಪತ್ರಿಕೆ ವಿಶ್ವವಾಣಿ ಸ್ಥಾಪಕ-ಸಂಪಾದಕರಾಗಿದ್ದರು.ಪುಟ್ಟಪ್ಪ, 1940 ಮತ್ತು 1950 ರ ದಶಕದ ಅಂತ್ಯದಲ್ಲಿ ಕನ್ನಡಿಗರು ಬಹುಸಂಖ್ಯಾತರಾಗಿದ್ದ ಪ್ರದೇಶಗಳನ್ನು ಏಕೀಕರಿಸುವಂತೆ ಒತ್ತಾಯಿಸಿ ಆಂದೋಲನದಲ್ಲಿ ಮುಂಚೂಣಿಯಲ್ಲಿದ್ದರು. ಅವರು ಧಾರವಾಡ ಮೂಲದ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿದ್ದರು. ಅವರು ರಾಜ್ಯಸಭೆಯಲ್ಲಿ ಎರಡು ಅವಧಿಗೆ ರಾಜ್ಯವನ್ನು ಪ್ರತಿನಿಧಿಸಿದರು (1962 ರಿಂದ 1974). ಅವರು ಕನ್ನಡ ಭಾಷಾ ಕಾವಲು ಸಮಿತಿಯ ಮೊದಲ ಅಧ್ಯಕ್ಷರಾಗಿದ್ದರು, ನಂತರ ಇದನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಎಂದು ಮರುನಾಮಕರಣ ಮಾಡಲಾಯಿತು.2003 ರಲ್ಲಿ ಬೆಳಗಾವಿಯಲ್ಲಿ ನಡೆದ 70 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.1949 ರಲ್ಲಿ ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿಯಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ಪಾಟೀಲ್ ಪುಟ್ಟಪ್ಪ | |
---|---|
ಚಿತ್ರ:Patil-Puttappa.jpg | |
ಜನನ | [೧] ಹಲಗೆರಿ, ಭಾರತ | ೧೪ ಜನವರಿ ೧೯೨೧
ಮರಣ | 16 March 2020 ಕಿಮ್ಸ್ ಹುಬ್ಬಳ್ಳಿ | (aged 101)
ವೃತ್ತಿ | ಬರಹಗಾರ ಮತ್ತು ಪತ್ರಕರ್ತ |
ವಿದ್ಯಾಭ್ಯಾಸ | ಲಾಸ್ ಏಂಜಲೀಸ್ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ |
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆ | ಯುಸಿಎಲ್ಎ ಸ್ಕೂಲ್ ಆಫ್ ಜರ್ನಲಿಸಂ |
ಸಾಹಿತ್ಯ ಚಳುವಳಿ | ಕನ್ನಡ ಭಾಷಾ ಚಳುವಳಿ |
ಪ್ರಮುಖ ಪ್ರಶಸ್ತಿ(ಗಳು) | ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿ |
ಬಾಲ್ಯ ಮತ್ತು ಶಿಕ್ಷಣ
ಬದಲಾಯಿಸಿಹಾವೇರಿ ತಾಲೂಕಿನ ಕುರುಬಗೊಂಡದಲ್ಲಿ ಜನಿಸಿದರು. ಓದಿದ್ದು ಕುರುಬಗೊಂಡ,ಬ್ಯಾಡಗಿ, ಹಾವೇರಿ, ಧಾರವಾಡದಲ್ಲಿ.
- ಕರ್ನಾಟಕ ಕಾಲೇಜಿನಲ್ಲಿ ಪದವಿ. ಬೆಳಗಾವಿಯಲ್ಲಿ ಕಾನೂನು ಅಧ್ಯಯನ.
- ಮುಂಬಯಿಯಲ್ಲಿ, ಹುಬ್ಬಳ್ಳಿಯಲ್ಲಿ ಪತ್ರಿಕೆಗಳಲ್ಲಿ ಕೆಲಸ. ೧೯೪೫ರಲ್ಲಿ ವಕೀಲಿ ವೃತ್ತಿಗಾಗಿ ಮುಂಬಯಿಗೆ ತೆರಳಿದ್ದರು.
- ೧೯೪೯ರಲ್ಲಿ ಕೆಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ.
- ಅಮೆರಿಕೆಯಿಂದ ಮರಳಿದ ನಂತರ ನವಯುಗ ಮಾಸಪತ್ರಿಕೆಯ ಸಂಪಾದಕತ್ವ.
- ೧೯೫೪ರಲ್ಲಿ ಪ್ರಪಂಚ ಪತ್ರಿಕೆಯ ಸ್ಥಾಪನೆ.
- ೧೯೬೨ರಿಂದ ೧೯೭೪ರವರೆಗೆ ಎರಡು ಅವಧಿಗೆ ರಾಜ್ಯಸಭಾ ಸದಸ್ಯರಾಗಿದ್ದರು.
- ಕನ್ನಡ ಕಾವಲು ಸಮಿತಿಯ ಅಧ್ಯಕ
ಸಂಪಾದಕರಾಗಿ
ಬದಲಾಯಿಸಿ೧೯೪೭ರಲ್ಲಿ ವಿಶಾಲ ಕರ್ನಾಟಕ, ೧೯೫೨ರಲ್ಲಿ ನವಯುಗ, ೧೯೫೪ರಲ್ಲಿ ಪ್ರಪಂಚ ಸಾಪ್ತಾಹಿಕ, ೧೯೫೬ರಲ್ಲಿ ಸಂಗಮ ಮಾಸಿಕ, ೧೯೫೯ರಲ್ಲಿ ವಿಶ್ವವಾಣಿ ದೈನಿಕ, ೧೯೬೧ರಲ್ಲಿ ಮನೋರಮ ಸಿನಿಮಾ ಪಾಕ್ಷಿಕ, ೧೯೬೪ರಲ್ಲಿ ಸ್ತ್ರೀ ಮಾಸಿಕ ಮುಂತಾದ ಹಲವಾರು ಪತ್ರಿಕೆಗಳ ಸಂಪಾದಕರಾಗಿ ಕೆಲಸ ಮಾಡಿದರು.
ಪುಟ್ಟಪ್ಪನವರ ಕೃತಿಗಳು
ಬದಲಾಯಿಸಿ- ನಮ್ಮ ದೇಶ ನಮ್ಮ ಜನ
- ನನ್ನದು ಈ ಕನ್ನಡ ನಾಡು
- ಕರ್ನಾಟಕದ ಕಥೆ
- ಪಾಪು ಪ್ರಪಂಚ
- ಶಿಲಾಬಾಲಿಕೆ ನುಡಿದಳು ಕಥಾಸಂಕಲನ
- ಗವಾಕ್ಷ ತೆರೆಯಿತು
- ಸಾವಿನ ಮೇಜವಾನಿ
- ಸರ್ ಸಿದ್ದಪ್ಪ ಕಂಬಳಿ, ಹೊಸಮನಿ ಸಿದ್ದಪ್ಪನವರು- ಜೀವನ ಚರಿತ್ರೆ ;
- ನನ್ನೂರು ಈ ನಾಡು,
- ಹೊಸದನ್ನ ಕಟ್ಟೋಣ,
- ಬದುಕುವ ಮಾತು-ಪ್ರಬಂಧ ಸಂಕಲನಗಳು
ಪ್ರಶಸ್ತಿಗಳು
ಬದಲಾಯಿಸಿ- ನಾಡೋಜ ಪ್ರಶಸ್ತಿ - ಕನ್ನಡ ವಿಶ್ವವಿದ್ಯಾಲಯ
- ನೃಪತುಂಗ ಪ್ರಶಸ್ತಿ - 2008, ಸಾಹಿತ್ಯ ಪ್ರಶಸ್ತಿ ಕರ್ನಾಟಕ ಸಾಹಿತ್ಯ ಪರಿಷತ್
- ವುಡೆ ಪ್ರಶಸ್ತಿ - 2010
ನಿಧನ
ಬದಲಾಯಿಸಿಪಾಟೀಲ ಪುಟ್ಟಪ್ಪನವರು ೧೬ಮಾರ್ಚ್ ೨೦೨೦ರ ಸೋಮವಾರದಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ೧೦೧ ವರ್ಷ ವಯಸ್ಸಾಗಿತ್ತು.[೪],[೫]
ಹೊಸಸಂಪರ್ಕಕೊಂಡಿಗಳು
ಬದಲಾಯಿಸಿ- ಪಾಟೀಲ ಪುಟ್ಟಪ್ಪ[ಶಾಶ್ವತವಾಗಿ ಮಡಿದ ಕೊಂಡಿ] - 'ಕಣಜ' ಅಂತರಜಾಲ ಮಾಹಿತಿಕೋಶ💯
ಉಲ್ಲೇಖಗಳು
ಬದಲಾಯಿಸಿ- ↑ http://kanaja.in/?tribe_events=ಪಾಟೀಲ-ಪುಟ್ಟಪ್ಪ[ಶಾಶ್ವತವಾಗಿ ಮಡಿದ ಕೊಂಡಿ]
- ↑ ಜಿ.ಎಸ್.ಸಿದ್ದಲಿಂಗಯ್ಯ, ಎಂ.ಎಚ್.ಕೃಷ್ಣಯ್ಯ (2001). ಸಾಲು ದೀಪಗಳು (2 ed.). ಕರ್ನಾಟಕ ಸಾಹಿತ್ಯ ಅಕಾಡೆಮಿ. p. 565.
- ↑ ಪ್ರಜಾವಾಣಿ ವರದಿ
- ↑ ನಾಡೋಜ ಪಾಟೀಲ ಪುಟ್ಟಪ್ಪ ನಿಧನ, ಪ್ರಜಾವಾಣಿ ವರದಿ
- ↑ ನಾಡೋಜ ಪಾಪು ಇನ್ನು ನೆನಪು ಮಾತ್ರ-ಉದಯವಾಣಿ d; 17 ಮಾರ್ಚ್ 2020