ಪಾಂಡವಪುರ ಮಂಡ್ಯ ಜಿಲ್ಲೆಯ ನೈಋತ್ಯ ಭಾಗದಲ್ಲಿರುವ ಈ ತಾಲ್ಲೂಕು ಏರಿಳಿತಗಳಿಂದ ಕೂಡಿದೆ. ಪೂರ್ವ ಮತ್ತು ಉತ್ತರ ಭಾಗಗಳು ಹಿರೋಡೆ ಮತ್ತು ಮೇಲುಕೋಟೆ ಬೆಟ್ಟಗಳಿಂದ ಕೊಡಿದೆ. ಲೋಕಪಾವನಿ ನದಿ ಉತ್ತರದಿಂದ ದಕ್ಷಿಣಕ್ಕೆ ಹರಿದು ಮುಂದೆ ಕರೀಘಟ್ಟದ ಬಳಿ ಕಾವೇರಿನದಿಯನ್ನು ಸೇರಿಕೊಳ್ಳುತ್ತದೆ. ಈ ತಾಲ್ಲೂಕಿನ ಹೆಚ್ಚು ಭಾಗ ಕಾವೇರಿ ಮತ್ತು ಲೋಕಪಾವನಿ ನದಿಗಳ ಬಯಲನ್ನು ಒಳಗೊಂಡಿದೆ. ಕೆಂಪು ಜೇಡಿಮಣ್ಣು ಹಾಗು ಮರಳು ಮಿಶ್ರಿತ ಭೂಮಿ ಕಾಣಬರುತ್ತದೆ. ಪಾಂಡವಪುರ, ಮೇಲುಕೋಟೆ ಮತ್ತು ಚಿನಕುರಳಿ ಎಂಬ ಮೂರು ಹೋಬಳಿಗಳಿದ್ದು ಸುಮಾರು ೧೭೫ ಗ್ರಾಮಗಳಿವೆ.

ಪಾಂಡವಪುರ
ನಗರ
Country ಭಾರತ
ರಾಜ್ಯಕರ್ನಾಟಕ
ಜಿಲ್ಲೆಮಂಡ್ಯ
Population
 (2001)
 • Total೧೮,೨೩೬
Languages
 • OfficialKannada
ಸಮಯ ವಲಯಯುಟಿಸಿ+5:30 (IST)
ಜಾಲತಾಣwww.pandavapuratown.gov.in

ಪಾಂಡವಪುರಕ್ಕೆ ಪೂರ್ವದಲ್ಲಿ ಹಿರೋಡೆ' ಎಂದು ಹೆಸರಾಗಿತ್ತು. ಐತಿಹ್ಯವಾಗಿ, ಕುಂತಿಬೆಟ್ಟದಲ್ಲಿ ಬಕಾಸುರ ಎಂಬ ರಾಕ್ಷಸನಿದ್ದ. ಅವನಿಗೆ ಚಿಕ್ಕಾಡೆಯಿಂದ ಚಿಕ್ಕ ಎಡೆ ಆಹಾರ, ಹಿರೋಡೆ (ಈಗಿನ ಪಾಂಡವಪ್ರುರ)ಯಿಂದ ಹಿರಿಎಡೆ (ದೊಡ್ಡ ಆಹಾರ) ಹೋಗುತ್ತಿತ್ತು. ಕಡೆಗೆ ಭೀಮ ಬಕಾಸುರನನ್ನು ಕೊಂದ ಕಥೆ ಕೇಳಿಬರುತ್ತದೆ. ಇನ್ನು ಐತಿಹಾಸಿಕವಾಗಿ ಹೈದರ್ ಮತ್ತು ಟಿಪ್ಪು ಸುಲ್ತಾನ್ ರ ಆಡಳಿತ ಕಾಲದಲ್ಲಿ ಫ್ರೆಂಚ್ ಸೈನ್ಯವನ್ನು ಇಲ್ಲಿ ಇರಿಸಿದ್ದರಿಂದ ಫ್ರೆಂಚ್ ರಾಕ್ಸ ಎಂಬ ಹೆಸರಿನಿಂದ ಕರೆಯಲಾಯಿತು. ನಂತರದಲ್ಲಿ ಕ್ರಿ.. ಶ. ೧೯೪೭ರ ಸುಮಾರಿಗೆ ಪಾಂಡವರ ಹಿನ್ನೆಲೆಯಲ್ಲಿ ಪಾಂಡವಪುರ ಎಂದು ಹೆಸರಿಸಲಾಯಿತು.

ಪ್ರಮುಖ ವ್ಯಕ್ತಿಗಳು

ಬದಲಾಯಿಸಿ

ಪಾಂಡವಪುರ ತಾಲ್ಲೂಕಿನ ಪ್ರವಾಸಿ ತಾಣಗಳು.

ಬದಲಾಯಿಸಿ

ಮೇಲುಕೋಟೆ

ಬದಲಾಯಿಸಿ

ಮೇಲುಕೋಟೆ ಪ್ರಸಿದ್ದ ಯಾತ್ರ ಸ್ಥಳ. ದ್ವಾಪರಯುಗದಲ್ಲಿ ಕೃಷ್ಣ ಮತ್ತು ಯಾದವರು ನಾರಾಯಣನನ್ನು ಪೂಜಿಸಿದ್ದರಿಂದ ಮುಂದೆ ಅಂದರೆ ೯೦೦ ವರ್ಷಗಳ ಹಿಂದೆ ಯತಿಗಳಾದ ರಾಮಾನುಜಚಾರ್ಯರು ಇಲ್ಲಿಗೆ ಆಗಮಿಸಿ ದೇವಾಲಯ, ಕಲ್ಯಾಣಿ, ಕೆರೆ ಕಟ್ಟೆಗಳನ್ನೊಳಗೊಂಡಂತೆ ಸಮಸ್ತ ಮೇಲುಕೋಟೆಯನ್ನು ಜೀರ್ಣೋದ್ಧಾರ ಮಾಡಿದ್ದರಿಂದ ಯದು-ಶೈಲ ಎಂದು ಹೆಸರಾಯಿತು. ಇಲ್ಲಿನ ಆರಾಧ್ಯ ದೈವ ಚೆಲುವನಾರಾಯಣ ಮೇಲುಕೋಟೆ ಗ್ರಾಮದಲ್ಲಿದ್ದರೆ, ಯೋಗಾನರಸಿಂಹಸ್ವಾಮಿ ಬೆಟ್ಟದ ಮೇಲಿದೆ. ಪಂಚಕಲ್ಯಾಣಿ, ಧನುಷ್ಕೋಟಿ, ದಳವಾಯಿಕೆರೆ ಮುಂತಾದ ಪ್ರಾಚೀನ ಕೆರೆ, ಕಟ್ಟೆ, ಕಲ್ಯಾಣಿಗಳನ್ನು ಕಾಣಬಹುದಲ್ಲದೆ ವಿಜಯನಗರ ಕಾಲದ ಗೋಪಾಲರಾಯನ ಹೆಬ್ಬಾಗಿಲು ರಾಜ್ಯ ಸರ್ಕಾರದ ಸಂಸ್ಕೃತ ಪಾಠಶಾಲೆ, ಕೇಂದ್ರರಾಜ್ಯ ಸರ್ಕಾರಗಳ ಸಂಸ್ಕೃತ ಅಕಾಡೆಮಿಗಳಲ್ಲಿ ಪ್ರಾಚೀನ ತಾಳೆಗರಿಗಳ ಸಂಗ್ರಹವನ್ನು ಕಾಣಬಹುದು.

 
ಮೇಲುಕೋಟೆ

  ಪಾಂಡವಪುರ ತಾಲ್ಲೂಕಿನ ಮೇಲುಕೋಟೆ ಕ್ಷೇತ್ರದಲ್ಲಿರುವ ಶ್ರೀ ಚಲುವನಾರಾಯಣಸ್ವಾಮಿಗೆ ಪ್ರತಿವರ್ಷ ಮಾರ್ಚಿ ತಿಂಗಳಲ್ಲಿ ಪಡೆಯುವ ಉತ್ಸವವೇ ವೈರಮುಡಿ ರಾಜರ ಕಾಲದಲ್ಲಿ ನೀಡಲಾಗಿರುವ ವಜ್ರಖಚಿತವಾದ ಕಿರೀಟಧಾರಣೆ ಮಾಡಿ ಪುರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಈ ವೈರಮುಡಿ ಉತ್ಸವವನ್ನು ನೋಡಲು ದೇಶ ವಿದೇಶಗಳಿಂದ ಸಹಸ್ರಾರು ಭಕ್ತರು ಆಗಮಿಸುವರು.

ಕೆರೆತೊಣ್ಣೊರು

ಬದಲಾಯಿಸಿ

ಮೇಲುಕೋಟೆ ಬೆಟ್ಟಕ್ಕೆ ಹೊಂದಿಕೊಂಡಂತಿರುವ ಕೆರೆತೊಣ್ಣೊರು ಹೊಯ್ಸಳರ ಕಾಲದಲ್ಲಿ ಬೇಸಿಗೆಯ ತಂಗುದಾಣವಾಗಿತ್ತು. ಈಗ ಇದು ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಂಡಿದೆ. ಇಲ್ಲಿನ ನಂಬಿನಾರಾಯಣ, ಶ್ರೀವೇಣುಗೋಪಾಲ ದೇವಾಲಯಗಳು ಪ್ರಸಿದ್ದವಾಗಿದೆ. ಸಾವಿರ ಜೈನಯತಿಗಳನ್ನು ವಾದದಲ್ಲಿ ರಾಮಾನುಜರು ಸೋಲಿಸಿದ್ದು ಇದೇ ಜಾಗದಲ್ಲಿ ಎಂದು ಪುರಾವೆಗಳು ಹೇಳುತ್ತವೆ. ರಾಮಾನುಜರೇ ನಿರ್ಮಿಸಿದ ತಿರುಮಲಸಾಗರ ಎರಡು ಬೆಟ್ಟಗಳಿಗೆ ಹೊಂದಿಕೊಂಡಂತೆ ಇದೆ. ಕೆರೆತೊಣ್ಣೊರಿನ ಮದಗ ಎಂಬ ಜಲಪಾತದಲ್ಲಿ ಸ್ನಾನಮಾಡಿದರೆ ಚರ್ಮವ್ಯಾಧಿಗಳು ಪರಿಹಾರವಾಗುತ್ತದೆ ಎಂಬ ಪ್ರತೀತಿ ಇದೆ. ಇಲ್ಲಿಗೆ ಸಮೀಪದ ಸುಂಕಾತೊಣ್ಣೂರಿನಲ್ಲಿ

ಕುಂತಿಬೆಟ್ಟದ ಮಲ್ಲಿಕಾರ್ಜುನ ದೇವಸ್ಥಾನ

ಬದಲಾಯಿಸಿ

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನಲ್ಲಿ ಇರುವ ಚಂದದ ಅವಳಿ ಬೆಟ್ಟಗಳ ಶ್ರೇಣಿ. ದೂರವನ್ನು ಅಳೆಯುವುದಾದರೆ ಬೆಂಗಳೂರಿನಿಂದ ಸುಮಾರು 130 ಕಿಮೀ. ಇದೂಂದು ಅದ್ಭುತ ಟೂರಿಸ್ಟ್ ಸ್ಪಾಟ್ ಹಾಗೂ ರಾಕ್ ಕ್ಲೈಂಬಿಕ್‌ಗೆ ಹೇಳಿ ಮಾಡಿಸಿದ ಜಾಗ. ಪಾಂಡವರ ಪುರ ಪಟ್ಟಣದಿಂದ ಸುಮಾರು 14 ಕಿಮೀಯಷ್ಟು ಸಣ್ಣ ಡಾಂಬರ್ ರಸ್ತೆಯಲ್ಲಿ ಸಾಗಿದರೆ ಕುಂತಿ ಬೆಟ್ಟದ ಬುಡ ತಲುಪಬಹುದು. ಸಿಗುವುದು ಆಂಜನೇಯ, ಮಲ್ಲಿಕಾರ್ಜುನ ದೇವಸ್ಥಾನ ಮತ್ತು ಕಲ್ಯಾಣಿ. ಅಲ್ಲಿಂದ ಮುಂದಕ್ಕೆ ಕಾಲ್ನಡಿಗೆಯಲ್ಲಿ ಬೆಟ್ಟ ಏರಬಹುದು. ಬೆಟ್ಟವನ್ನು ಕೆಳಗಿಂದ ನೋಡಿದರೆ ಹತ್ತುವುದು ಕಷ್ಟ ಅಂತ ಅನಿಸುತ್ತದೆ. ಆದರೆ, ಅಷ್ಟೇನೂ ಕಠಿಣವಲ್ಲ. ಕೆಲವೊಂದು ಕಡೆ ರಸ್ತೆಯೂ ಸರಿಯಾಗಿ ಕಾಣದಿರುವ ಸಾಧ್ಯತೆ ಇದೆ. ಆದರೆ ಹಾದಿ ತಪ್ಪುವುದಿಲ್ಲ ಎನ್ನುವು ಭರವಸೆ ಇದ್ದರೆ ಬೆಟ್ಟದ ತುತ್ತ ತುದಿಗೆ ತಲುಪುದು ಕಷ್ಟವೇನಲ್ಲ.

ಬಂಡೆಗಳ ರಹಸ್ಯ ರೂಪ ಸೌಂದರ್ಯ ನೋಡುಗರ ಕಣ್ಣಲ್ಲಿ ಅಡಗಿರುತ್ತದೆ ಅನ್ನುವುದಕ್ಕೆ ಕುಂತಿ ಬೆಟ್ಟಗಳ ಸರಣಿಯಲ್ಲಿರುವ ಕೆಲವು ಕಲ್ಲುಗಳೇ ಉದಾಹರಣೆ. ಯಾಕೆಂದರೆ ಬೆಟ್ಟವನ್ನು ಏರುತ್ತ ಹೋದಂತೆ ಕೆಲವು ಕಲ್ಲುಗಳು ನಿಮಗೆ ಎದುರಾಗುತ್ತವೆ. ಅವುಗಳನ್ನು ಸರಿಯಾಗಿ ನೋಡಿದರೆ ವಿವಿಧ ಪ್ರಾಣಿಗಳ ಮುಖದಂತೆ ಗೋಚರವಾಗುತ್ತವೆ. ಜಿಂಕೆಯ ಮತ್ತು ಮಲಗಿರುವ ತೋಳದ ಮುಖದಂತೆ ತೋರುವ ಕಲ್ಲುಗಳು ಆಶ್ಚರ್ಯ ಹುಟ್ಟಿಸುತ್ತವೆ. ಬೆಟ್ಟದಿಂದ ಕೆಳಕ್ಕೆ ನೋಡುತ್ತಿರುವ ಮೊಸಳೆ ರೂಪದ ಕಲ್ಲೂಂದು ಚಾರಣಿಗರಿಗೆ ಥ್ರಿಲ್ ನೀಡುತ್ತದೆ. ಬೆಟ್ಟದ ತುತ್ತ ತುದಿಯಲ್ಲಿ ಶಿಥಿಲಾವಸ್ಥೆಯಲ್ಲಿ ಇರುವ ದೇವಸ್ಥಾನ ಇದೆ. ಅದೇ ರೀತಿ ಒನಕೆ ರೂಪದ ಕಲ್ಲೂಂದು ಇದ್ದು, ಅದರ ಮೂಲಕ ಪಾಂಡವರ ಅಜ್ಞಾತ ವಾಸದಲ್ಲಿ ಇದ್ದ ಸಮಯದಲ್ಲಿ ಕುಂತಿ ತಮ್ಮ ಮಕ್ಕಳಿಗೆ ಇಲ್ಲಿ ಅಡುಗೆ ಮಾಡಿ ಬಡಿಸುತ್ತಿದ್ದಳು ಎಂದು ಹೇಳಲಾಗುತ್ತಿದೆ. ಅದೇ ರೀತಿ ಇಲ್ಲೊಂದು ಕಡೆ ಕಲ್ಲಿನಲ್ಲಿ ಪಾದದ ಹೆಜ್ಜೆ ಇದೆ. ಭೀಮ ಊರಿದ ಹೆಜ್ಜೆ ಅದು ಎಂದು ನಂಬಲಾಗಿದೆ.

ಪ್ರಕೃತಿಯ ಆಸ್ವಾದ ಪ್ರಕೃತಿಯನ್ನು ಆಸ್ವಾದಿಸಬೇಕು ಎನ್ನುವ ಕಾರಣಕ್ಕೂ ಕುಂತಿಬೆಟ್ಟಕ್ಕೆ ಭೇಟಿ ನೀಡಬಹುದು. ಈ ಅನುಭವ ಬೆಟ್ಟದ ಈ ಹಿಂದೆ ತುದಿ ತಲುಪಿದವರಿಗೆ ಆಗಿರುತ್ತದೆ. ಬೆಟ್ಟದ ತುತ್ತ ತುದಿಯಿಂದ ಕೆಳಕ್ಕೊಂದು ಪಕ್ಷಿ ನೋಟ ಹರಿಸಿದ್ದಾದರೆ, ತೊನ್ನೂರು ಕೆರೆಯ ಹಿನ್ನೆಲೆಯಲ್ಲಿ ಪ್ರಕೃತಿಯ ಸೌಂದರ್ಯವನ್ನು ಸವಿಯಬಹುದು. ಕಬ್ಬು ಮತ್ತು ತೆಂಗಿನ ಬೆಳೆ ಇರುವ ಈ ಪ್ರದೇಶವನ್ನು ಮೇಲಿಂದ ನೋಡಿದರೆ, ಹಸಿರು ಹಸಿರಾಗಿ ಕಾಣುತ್ತದೆ. ಇದು ಪ್ರವಾಸಿಗರಿಗೆ ಅನನ್ಯ ಅನುಭವ ನೀಡುವುದಂತೂ ಗ್ಯಾರಂಟಿ.

ಪೌರಾಣಿಕ ಹಿನ್ನೆಲೆ ಕುಂತಿ ಬೆಟ್ಟಕ್ಕೆ ಪೌರಾಣಿಕ ಹಿನ್ನೆಲೆಯೂ ಇದೆ. ಮಹಾಭಾರತದಲ್ಲಿ ಪಾಂಡವರಿಗೆ ವನವಾಸದ ಅನಿವಾರ್ಯತೆ ಬಂದಾಗ ಕೆಲವು ದಿನಗಳ ಕಾಲ ಇಲ್ಲಿ ಜೀವನ ಮಾಡಿದ್ದರು. ಹೀಗಾಗಿ ಪಕ್ಕದ ಪಟ್ಟಣಕ್ಕೆ ಪಾಂಡವಪುರ ಎನ್ನುವ ಹೆಸರು. ಅದೇ ರೀತಿ ಬಕಾಸುರನೂ ಕುಂತಿಬೆಟ್ಟಗಳೊಂದರಲ್ಲಿ ವಾಸ ಮಾಡಿದ್ದು, ಆತನನ್ನು ಭೀಮ ಸಂಹರಿಸಿದ ಪೌರಾಣಿಕ ಹಿನ್ನೆಲೆಗಳು ಬೆಟ್ಟದ ಪ್ರಸಿದ್ಧಿಯನ್ನು ಇನ್ನಷ್ಟು ಹೆಚ್ಚಿಸಿದೆ.

 
ಕೆರೆತೊಣ್ಣೂರು
 
ಕುಂತಿಬೆಟ್ಟ

ಕರಿಘಟ್

ಬದಲಾಯಿಸಿ

ಈ ಗಿರಿಧಾಮವು ಲೋಕಪಾವನಿ ನದಿಯ ತೀರದಲ್ಲಿದ್ದು ಸಮುದ್ರಮಟ್ಟದಿಂದ ೨೬೯೭ಅಡಿಗಳ ಎತ್ತರದಲ್ಲಿದೆ. ಶ್ರೀರಂಗಪಟ್ಟಣದಿಂದ ೫ ಕಿ. ಮೀ. ದೂರದಲ್ಲಿದ್ದು ದ್ರಾವಿಡ ವಿನ್ಯಾಸದಲ್ಲಿ ಶ್ರೀ ವೆಂಕಟೇಶ್ವರ ದೇವಸ್ಥಾನವಿದೆ. ಈ ದೇವಸ್ಥಾನವು ವಿಜಯನಗರದ ಅರಸರ ಕಾಲದಲ್ಲಿ ಕಟ್ಟಿದ್ದು ೧೭ನೇ ಶತಮಾನದಲ್ಲಿ ಶ್ರೀ ಚಿಕ್ಕದೇವರಾಯ ಒಡೆಯರ್ ಇವರು ವಿಸ್ತಿರಿಸಿರುತ್ತಾರೆ. ೩ನೇ ಮೈಸೂರು ಯುದ್ದವು ೧೭೯೨ರಲ್ಲಿ ಇಲ್ಲಿ ನಡೆಯಿತು. ಈ ಬೆಟ್ಟವು ಚಾರಿತ್ರಿಕ ಐತಿಹಾಸವನ್ನು ಪಡೆದಿದೆ. ಟಿಪ್ಪು ಮತ್ತು ಹೈದರ್‌ನ ಕಾಲದಲ್ಲಿ ಶತ್ರುಗಳನ್ನು ವೀಕ್ಷಿಸಿ ಅವರ ವಿರುದ್ದ ದಾಳಿ ಮಾಡುತ್ತಿದ್ದರು, ದೇವಸ್ಥಾನವು ವಿಸ್ತಾರವಾದ ಪ್ರಾಂಗಣವನ್ನು ಹೊಂದಿದ್ದು ದೇವರ ಧ್ಯಾನ ಹಾಗೂ ಪೂಜೆಗೆ ಸೂಕ್ತವಾದ ಸ್ಥಳವಾಗಿರುತ್ತದೆ.

 
ಕರಿಘಟ್ಟ




ಶಿವಶೈಲ ದೇವಸ್ಥಾನ

ಬದಲಾಯಿಸಿ

ಶಿವಶೈಲ ದೇವಸ್ಥಾನ ಚಿಂದಗಿರಿಕೊಪ್ಪಲು ಮತ್ತು ಪಟ್ಟಸೋಮನಹಳ್ಳಿ ಮಧ್ಯ ಪ್ರದೇಶದಲ್ಲಿರುವ ದೇವಸ್ಥಾನ.ಪಾಂಡವಪುರ ತಾಲೂಕಿನ ಪಟ್ಟಸೋಮನಹಳ್ಳಿ ಗ್ರಾಮದಿಂದ ದಕ್ಷಿಣಕ್ಕೆ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿದೆ.ಇಲ್ಲಿನ ಪ್ರಧಾನ ದೇವರು ಚಂದ್ರಮೌಳೇಶ್ವರ ಮತ್ತು ಕಾಮಾಕ್ಷಿ ದೇವಿಯ ದೇವಸ್ಥಾನ.ಈ ದೇವಸ್ಥಾನ ಪ್ರಶಾಂತತೆ ಮತ್ತು ಸ್ವಚ್ಛತೆಗೆ ಹೆಸರುವಾಸಿಯಾಗಿದೆ.ಲೋಕಪಾವನಿ ನದಿಯ ತೀರದಲ್ಲಿರುವ ದೇವಸ್ಥಾನ ಇದಾಗಿದೆ.ಇಲ್ಲಿ ಭೈರವೇಶ್ವರ ದೇವಸ್ಥಾನ ಮತ್ತು ಅಭಯಾಂಜನೇಯ ದೇವಸ್ಥಾನ ಮತ್ತು ರಾಮಕೃಷ್ಣ ಪರಮಹಂಸರ ಮಂದಿರವಿದೆ ಒಟ್ಟು 5 ದೇವಸ್ಥಾನವಿದೆ..

ಉಲ್ಲೇಖನ

ಬದಲಾಯಿಸಿ