ಹಿಂದು ಪುರಾಣ, ಮಹಾಭಾರತದ ಪ್ರಕಾರ, ಬಕಾಸುರನು ಒಬ್ಬ ರಾಕ್ಷಸ. ಭೀಮನು ಇವನನ್ನು ಕೊಂದನು. ಏಕಚಕ್ರ ನಗರದ ಹತ್ತಿರದ ಬೆಟ್ಟದಲ್ಲಿ ವಾಸವಾಗಿದ್ದ ಒಬ್ಬ ರಾಕ್ಷಸ. ವೇತ್ರಕ್ರಿಯಾ ಗೃಹವೆಂಬ ಒಂದು ಸಣ್ಣ ಪಟ್ಟಣದಲ್ಲಿ ರಾಜನು ದುಬ೯ಲನಾದುದರಿಂದ ಈ ರಾಕ್ಷಸನೊಡನೆ ಹೋರಾಡಲಾರದೆ, ಪ್ರತಿದಿನ ಊಟದ ವೇಳೆಗೆ ಸರಿಯಾಗಿ ಒಂದು ಬಂಡಿ ಅನ್ನ, ಆ ಬಂಡಿಗೆ ಒಂದು ಜೊತೆ ಕೋಣಗಳನ್ನು ಹೂಡಿ, ಒಬ್ಬ ಆಳು ಆ ಬಂಡಿಯನ್ನು ಹೊಡೆದುಕೊಂಡು ರಾಕ್ಷಸನ ಸಮೀಪ ಹೋಗಬೇಕಿತ್ತು. ಹೀಗೆ ಹೋದ ವಸ್ತು ಮತ್ತು ಪ್ರಾಣಿಗಳಲ್ಲಿ, ಬಂಡಿ ಮಾತ್ರ ಬರುತ್ತಿತ್ತು. ಒಂದು ದಿನ ಪಾಂಡವರು ಉಳಿದಿದ್ದ ನೆರೆ ಮನೆಯ ಬ್ರಾಹ್ಮಣನು ಆ ರಾಕ್ಷಸನ ಆಹಾರಕ್ಕೆ ಸಿದ್ಧತೆ ನಡೆಸಬೇಕಿತ್ತು. ಕುಂತಿಯು ಆಹಾರ ವಸ್ತುಗಳೊಡನೆ ಭೀಮನನ್ನು ಕಳುಹಿಸಿದಳು. ಅವನು ಆ ರಾಕ್ಷಸನೊಡನೆ ಹೋರಾಡಿ ಅವನನ್ನು ಕೊಂದನು.

ಮಹಾಭಾರತದ ಭಾಗ ಬದಲಾಯಿಸಿ

ಪಾಂಡವರು ಮತ್ತು ಕುಂತಿ ಮಾತೆ ವನವಾಸದಲ್ಲಿದ್ದರು. ವನವಾಸ ಮಾಡುತ್ತಿರುವಾಗ ಅವರು ಒಂದು ಗ್ರಾಮದಲ್ಲಿ ಉಳಿದುಕೊಂಡರು. ಒಬ್ಬ ಬ್ರಾಹ್ಮಣನು ಅವರಿಗೆ ವಾಸಿಸಲು ಮನೆ ಕೊಟ್ಟನು. ಒಂದು ದಿವಸ, ಕುಂತಿ ಮಾತೆ ಅವರ ಮನೆಯಿಂದ ಅಳುತ್ತಿರುವುದು ಕೇಳಿ ಬರುತ್ತದೆ. ಅಲ್ಲಿಗೆ ಹೋಗಿ, ದುಖಃದ ಕಾರಣ(ಮೇಲಿನ ಭಾಗ) ಕೇಳಿ ತಿಳಿಯುತ್ತಾರೆ. ನಂತರ ಅವರು ಭೀಮನನ್ನು ಕಳುಹಿಸುತ್ತಾರೆ. ಭೀಮನು ಅಲ್ಲಿಗೆ ಹೋಗಿ ರಾಕ್ಷಸನನ್ನು ಕೊಂದು ಬರುತ್ತಾನೆ.

ಬಕಾಸುರನ ಸಾವಿನ ಸುದ್ದಿಯು ಗ್ರಾಮಕ್ಕೆ ತಲುಪಿದಾಗ, ಊರಿನ ಜನರೆಲ್ಲರಿಗೂ ಪರಮಾನಂದವಾಗುತ್ತದೆ. ಆ ರಾಕ್ಷಸನನ್ನು ಕೊಂದವನನ್ನು ಜನರು ಹೊಗಳಬೇಕಾಗಿದ್ದು, ಎಲ್ಲರೂ ಬ್ರಾಹ್ಮಣನ ಮನೆಗೆ ಹೋಗುತ್ತಾರೆ. ಈ ವಿಷಯವು ಪಾಂಡವರಿಗೆ ತಿಳಿದ ಕೂಡಲೆ, ಗ್ರಾಮವನ್ನು ಬಿಡಲು ಯೋಚಿಸುತ್ತಾರೆ ಏಕೆಂದರೆ ಜನರು ಸೇರಿದಾಗ ಅವರು ತಮ್ಮನ್ನು ಗುರುತಿಸಿಬಿಟ್ಟರೆಂದು ಹಾಗೆ ಮಾಡುತ್ತಾರೆ.

"https://kn.wikipedia.org/w/index.php?title=ಬಕಾಸುರ&oldid=1002906" ಇಂದ ಪಡೆಯಲ್ಪಟ್ಟಿದೆ